ಉಪಚುನಾವಣೆ: 15 ಕ್ಷೇತ್ರದಲ್ಲೂ ಜೆಡಿಎಸ್ ಏಕಾಂಗಿ ಸ್ಪರ್ಧೆ
ಮೈಸೂರು

ಉಪಚುನಾವಣೆ: 15 ಕ್ಷೇತ್ರದಲ್ಲೂ ಜೆಡಿಎಸ್ ಏಕಾಂಗಿ ಸ್ಪರ್ಧೆ

September 22, 2019

ಮೈಸೂರು, ಸೆ.21(ಪಿಎಂ)- ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಉಪಚುನಾ ವಣೆ ಯಲ್ಲಿ ಹುಣಸೂರು ಸೇರಿದಂತೆ 8ರಿಂದ 10 ಕ್ಷೇತ್ರಗಳಲ್ಲಿ ಜೆಡಿಎಸ್ ಗೆಲುವು ಸಾಧಿಸ ಲಿದೆ ಎಂದು ಮಾಜಿ ಮುಖ್ಯಮಂತ್ರಿಗಳೂ ಆದ ಜೆಡಿಎಸ್ ನಾಯಕ ಹೆಚ್.ಡಿ.ಕುಮಾರ ಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.

ಮೈಸೂರಿನ ಸಾರಾ ಸಭಾಂಗಣದಲ್ಲಿ ಜೆಡಿಎಸ್ ಪಕ್ಷದ ವತಿಯಿಂದ ಶನಿವಾರ ಹಮ್ಮಿ ಕೊಂಡಿದ್ದ ಮೈಸೂರು ನಗರ ಹಾಗೂ ಜಿಲ್ಲಾ ಚುನಾಯಿತ ಪ್ರತಿನಿಧಿಗಳು, ಪರಾಜಿತ ಅಭ್ಯರ್ಥಿಗಳು, ಪದಾಧಿಕಾರಿಗಳು ಹಾಗೂ ಮುಖಂಡರ ಚಿಂತನ-ಮಂಥನ ಸಭೆ ಉದ್ಘಾ ಟಿಸಿ ಮಾಧ್ಯಮದವರೊಂದಿಗೆ ಮಾತನಾ ಡಿದ ಅವರು, 15 ಕ್ಷೇತ್ರಗಳಿಗೆ ಪಕ್ಷದ ಅಭ್ಯರ್ಥಿ ಗಳ ಆಯ್ಕೆ ಸಂಬಂಧ ಈಗಾಗಲೇ ಜೆಡಿಎಸ್ ವರಿಷ್ಠರೂ ಆದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಪ್ರಕ್ರಿಯೆ ಆರಂಭಿಸಿದ್ದಾರೆ ಎಂದು ತಿಳಿಸಿದರು.

15 ಕ್ಷೇತ್ರಗಳಿಗೆ ಉಪಚುನಾವಣೆ ಅ.21ಕ್ಕೆ ನಿಗದಿಯಾಗಿದೆ. ಈ ಚುನಾವಣೆ ಆಧಾರ ದಲ್ಲಿ ರಾಜ್ಯದ ಮುಂದಿನ ರಾಜಕಾರಣದಲ್ಲಿ ಅನೇಕ ಬದಲಾವಣೆಗಳು ಆಗಲಿವೆ. ಎಲ್ಲಾ 15 ಕ್ಷೇತ್ರಗಳಲ್ಲೂ ಸ್ವತಂತ್ರವಾಗಿ ಪಕ್ಷದ ಅಭ್ಯರ್ಥಿಗಳನ್ನು ಹಾಕಲು ನಿರ್ಧರಿಸಲಾ ಗಿದೆ. 8ರಿಂದ 10 ಕ್ಷೇತ್ರಗಳಲ್ಲಿ ಪಕ್ಷ ಗೆಲ್ಲುವ ವಿಶ್ವಾಸವಿದ್ದು, ಹುಣಸೂರು ಗೆಲ್ಲಲೇಬೇ ಕೆಂದು ಪಣ ತೊಡಲಾಗಿದೆ. ಈ ಕ್ಷೇತ್ರದ ಚುನಾವಣೆಗಾಗಿ ಹೆಚ್ಚಿನ ಸಮಯ ಮೀಸ ಲಿಡಲಿದ್ದೇನೆ ಎಂದು ತಿಳಿಸಿದರು.

ರೈತರ ಸಾಲ ಮನ್ನಾಕ್ಕಾಗಿ ಮೈತ್ರಿ ಸರ್ಕಾರ ದಲ್ಲಿ ಎಲ್ಲಾ ಸಮಸ್ಯೆಗಳ ನಡುವೆ ಮುಖ್ಯ ಮಂತ್ರಿಯಾಗಿ ಕಾರ್ಯ ನಿರ್ವಹಿಸಿದೆ. ಸಾಲ ಮನ್ನಾ ಯೋಜನೆ ಯಶಸ್ವಿಯಾದರೂ ಅದಕ್ಕೆ ತಕ್ಕ ಪ್ರಚಾರ ಮಾತ್ರ ಸಿಗಲೇ ಇಲ್ಲ. ವಿಧಾನಸಭಾವಾರು ಈ ಯೋಜನೆಯ ಪ್ರಯೋಜನ ಪಡೆದ ಫಲಾನುಭವಿಗಳ ಕೈಪಿಡಿ ಸಿದ್ಧಪಡಿಸಿದ್ದೇನೆ. ಹುಣಸೂರಿನಲ್ಲಿ 11,626 ಕುಟುಂಬಕ್ಕೆ ಈ ಯೋಜನೆ ಪ್ರಯೋಜನ ದೊರೆತಿದೆ. ನೆರೆ ಹಾವಳಿಗೆ ಹುಣಸೂರು ತಾಲೂಕಿನಲ್ಲಿ ಹೆಚ್ಚು ಬೆಳೆ ನಷ್ಟವಾಗಿದೆ. ಮೈತ್ರಿ ಸರ್ಕಾರದಲ್ಲಿ ಕೆಟ್ಟ ವಾತಾವರಣ ವಿದ್ದರೂ ಸಾಲ ಮನ್ನಾ ಯೋಜನೆ ಅನುಷ್ಠಾನ ಕ್ಕಾಗಿ ಸಿಎಂ ಆಗಿರಬೇಕೆಂದು ಎಲ್ಲವನ್ನೂ ಸಹಿಸಿಕೊಂಡಿದ್ದೆ ಎಂದು ತಿಳಿಸಿದರು.

ಮೋದಿ ಪ್ರವಾಸಕ್ಕೆ 2 ಲಕ್ಷ ಕೋಟಿ: ಅಮೆ ರಿಕದಲ್ಲಿ ದೊಡ್ಡ ಸಂಖ್ಯೆಯಲ್ಲಿರುವ ಭಾರತೀ ಯರ ಮತ ಪಡೆಯಲು ಅಲ್ಲಿನ ಅಧ್ಯಕ್ಷ ಟ್ರಂಪ್ ನಮ್ಮ ಪ್ರಧಾನಿ ನರೇಂದ್ರ ಮೋದಿ ಯವರನ್ನು ಅಲ್ಲಿಗೆ ಕರೆಸಿಕೊಂಡಿದ್ದು, ಈ ಪ್ರವಾಸಕ್ಕೆ 2 ಲಕ್ಷ ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಅಲ್ಲದೆ, ರಷ್ಯಾಗೆ ನಮ್ಮ ರಾಷ್ಟ್ರದ 2 ಸಾವಿರ ಕೋಟಿ ರೂ ಕೊಟ್ಟು ಬಂದಿದ್ದಾರೆ. ಕರ್ನಾಟಕದ ಜನ ನೆರೆಯಿಂದ ಬೀದಿಗೆ ಬಿದಿದ್ದರೂ ಇವರಿಗೆ ಚಿಂತೆಯಿಲ್ಲ ಎಂದು ಟೀಕಿಸಿದರು. ಕೇಂದ್ರದ ಮೋದಿ ಸರ್ಕಾರ ನಿನ್ನೆ ಕಾರ್ಪೋರೇಟ್ ಕಂಪನಿ ಗಳಿಗೆ 1 ಲಕ್ಷದ 42 ಸಾವಿರ ಕೋಟಿ ತೆರಿಗೆ ವಿನಾಯಿತಿ ಘೋಷಣೆ ಮಾಡಿದ್ದು, ರೈತ ಸಮುದಾಯ ಇವರ ಕಣ್ಣಿಗೆ ಕಾಣುವುದಿಲ್ಲ. ಈ ರೀತಿ ತೆರಿಗೆ ವಿನಾಯಿತಿ ನೀಡಿ ಸರ್ಕಾ ರದ ಬೊಕ್ಕಸಕ್ಕೆ ಹೊರೆ ಹಾಕಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯ ಬಿಜೆಪಿ ಸರ್ಕಾರ ಯಾವುದೇ ಕಾರ ಣಕ್ಕೂ ಹೆಚ್ಚು ದಿನ ಮುಂದುವರೆಯುವು ದಿಲ್ಲ. ಇದನ್ನು ಕೋಡಿ ಮಠದ ಸ್ವಾಮೀಜಿ ಹೇಳಿಕೆ ಆಧಾರದಲ್ಲಿ ಹೇಳುತ್ತಿಲ್ಲ. ಈಗಾಗಲೇ ಜನರ ಆಕ್ರೋಶದ ಕಟ್ಟೆ ಹೊಡೆದಿದ್ದು, ಜಗ ದೀಶ್ ಶೆಟ್ಟರ್ ಅವರಿಗೆ ಬೆಳಗಾವಿಯಲ್ಲಿ ಜನ ಘೇರಾವ್ ಹಾಕಿದ್ದಾರೆ. ಹಾಗೇ ನೋಡಿ ದರೆ ಬೆಳಗಾವಿ ಬಿಜೆಪಿಯ ಭದ್ರಕೋಟೆ. ಅಲ್ಲೇ ಈ ರೀತಿಯ ವಿರೋಧ ವ್ಯಕ್ತವಾಗಿದೆ ಎಂದ ಅವರು, ದೆಹಲಿ ಮಟ್ಟದ ಒಂದು ವರ್ಗದ ಕಾಂಗ್ರೆಸ್ ನಾಯಕರಿಗೆ ಹೊಂದಾ ಣಿಕೆ ಮೂಲಕ ಚುನಾವಣೆ ಎದುರಿಸುವ ಬಗ್ಗೆ ಆಸಕ್ತಿ ಇದೆ. ಆದರೆ ರಾಜ್ಯ ಕಾಂಗ್ರೆಸ್ ನಾಯಕರಿಗೆ ಆ ಬಗ್ಗೆ ಆಸಕ್ತಿ ಇಲ್ಲ. ಜೊತೆಗೆ ಅದರ ಪರಿಣಾಮ ಏನಾಯಿತು ಎಂದು ಈಗಾಗಲೇ ಅರಿವಾಗಿದೆ. ರಾಜ್ಯದ ಕೆಲ ಕಾಂಗ್ರೆಸ್ ನಾಯಕರಿಗೆ ಬಿಜೆಪಿಗಿಂತ ಜೆಡಿಎಸ್ ಶತೃ ಪಕ್ಷವಾಗಿದ್ದು, ಜೆಡಿಎಸ್ ಮುಗಿಸಬೇಕೆಂಬ ಆಲೋಚನೆ ಅವರಲ್ಲಿದೆ ಎಂದು ಆರೋಪಿಸಿದರು. ಶಾಸಕರಾದ ಸಾ.ರಾ. ಮಹೇಶ್, ಅಶ್ವಿನ್‍ಕುಮಾರ್, ಕೆ.ಮಹ ದೇವ್, ವಿಧಾನ ಪರಿಷತ್ ಸದಸ್ಯ ಕೆ.ಟಿ. ಶ್ರೀಕಂಠೇಗೌಡ, ಜಿಪಂ ಅಧ್ಯಕ್ಷೆ ಪರಿಮಳಾ ಶ್ಯಾಂ, ಸದಸ್ಯ ಬೀರಿಹುಂಡಿ ಬಸವಣ್ಣ, ಜೆಡಿಎಸ್ ನಗರಾಧ್ಯಕ್ಷ ಕೆ.ಟಿ.ಚೆಲುವೇಗೌಡ, ಜಿಲ್ಲಾಧ್ಯಕ್ಷನರ ಸಿಂಹಸ್ವಾಮಿ ಇತರರಿದ್ದರು.

Translate »