ಸಹೋದರ ರೇವಣ್ಣನನ್ನೇ ಡಿಸಿಎಂ ಮಾಡದವರು ನನ್ನ ಸಿಎಂ ಮಾಡುತ್ತಾರಾ…
ಮೈಸೂರು

ಸಹೋದರ ರೇವಣ್ಣನನ್ನೇ ಡಿಸಿಎಂ ಮಾಡದವರು ನನ್ನ ಸಿಎಂ ಮಾಡುತ್ತಾರಾ…

September 22, 2019

ಮೈಸೂರು, ಸೆ.21(ಎಸ್‍ಬಿಡಿ)- ಸಹೋದರ ರೇವಣ್ಣನನ್ನೇ ಡಿಸಿಎಂ ಮಾಡದವರು ನನ್ನನ್ನು ಸಿಎಂ ಮಾಡ್ತಾರಾ? ಎಂದು ಮಾಜಿ ಸಚಿವ ಜಿ.ಟಿ.ದೇವೇಗೌಡರು, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಟಾಂಗ್ ನೀಡಿದ್ದಾರೆ.

ಸಿದ್ದರಾಮಯ್ಯನವರ ಸೋಲಿಸಿದ್ದಕ್ಕೆ ಜಿಟಿಡಿ ಯನ್ನು ಸಿಎಂ ಮಾಡಬೇಕಿತ್ತೇ? ಎಂಬ ಕುಮಾರ ಸ್ವಾಮಿ ಅವರ ಹೇಳಿಕೆಗೆ ಶನಿವಾರ ಮಾಧ್ಯಮ ಗಳಿಗೆ ಪ್ರತಿಕ್ರಿಯಿಸಿದ ಜಿಟಿಡಿ, ಅವರು ಮೈಸೂರು ಬಿಡೋಲ್ಲ. ನೀವು ನನ್ನ ಬಿಡೋಲ್ಲ. ದಿನ ಇದೆ ಆಗಿದೆ ಎಂದು ಛೇಡಿಸಿದರು.

ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವ ರನ್ನು ಸೋಲಿಸಿದರೆ ಸಿಎಂಗೆ ಸಮಾನವಾದ ಖಾತೆ ನೀಡುತ್ತೇನೆ. ನಿಮ್ಮನ್ನು ಮೈಸೂರಿನ ಸಿಎಂ ಮಾಡು ತ್ತೇನೆ ಎಂದು ಕುಮಾರಸ್ವಾಮಿಯವರು ಭರವಸೆ ನೀಡಿದ್ದರು. ಕಳೆದ ಚುನಾವಣಾ ಪ್ರಚಾರದಲ್ಲಿ ಕುಮಾರ ಸ್ವಾಮಿ ಮಾಡಿದ ಭಾಷಣವನ್ನು ಪರಿಶೀಲಿಸಿ ನೋಡಿ. ಆಗ ಅಣ್ಣ ನಿನ್ನ ಹೋಂ ಮಿನಿಸ್ಟರ್ ಮಾಡ್ತಿನಿ ಅಂದ್ರು. ಆಗ ನಾನೇ ಬೇಡ ಅಣ್ಣ ಕಂದಾಯ ಕೊಡಿ ಅಂತ ಕೇಳಿದೆ. ನಾನೇನು ಸಿಎಂ ಮಾಡಿ ಎಂದು ಕೇಳಿಲ್ಲ. ಆದರೆ ಸರ್ಕಾರ ರಚನೆಯಾದ ನಂತರ ನುಡಿದಂತೆ ನಡೆದುಕೊಳ್ಳಲಿಲ್ಲ. ಜೆಡಿಎಸ್-ಬಿಜೆಪಿ 20-20 ಸರ್ಕಾರದಲ್ಲಿ ರೇವಣ್ಣ ಅವರನ್ನು ಉಪಮುಖ್ಯಮಂತ್ರಿ ಮಾಡಿ, ಯಡಿ ಯೂರಪ್ಪನವರನ್ನು ಮುಖ್ಯಮಂತ್ರಿ ಮಾಡಲು ಅವಕಾಶ ವಿತ್ತು. ಹೀಗೆ ಮಾಡಿದ್ದರೆ ದೇವೇಗೌಡರಿಗೂ ಪ್ರೀತಿಯಾಗು ತ್ತಿತ್ತು. ಯಡಿಯೂರಪ್ಪನವರಿಗೂ ಸಮಾಧಾನವಾಗು ತ್ತಿತ್ತು. ಆದರೆ ಕುಮಾರಸ್ವಾಮಿ ಹಾಗೆ ಮಾಡಿದರಾ? ಇಲ್ಲ. ಅಣ್ಣನನ್ನೇ ಉಪಮುಖ್ಯಮಂತ್ರಿಯಾಗಲು ಬಿಡದವರು ನನ್ನನ್ನು ಸಿಎಂ ಮಾಡ್ತಾರಾ? ಎಂದು ಪ್ರಶ್ನಿಸಿದರು.

ಕಳೆದ ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ನೈತಿಕ ಹೊಣೆ ಹೊತ್ತು ಸಿಎಂ ಸ್ಥಾನಕ್ಕೆ ರಾಜೀ ನಾಮೆ ನೀಡಿ, ಕಾಂಗ್ರೆಸ್‍ನವರಿಗೆ ಆ ಸ್ಥಾನ ನೀಡಿ, ರೇವಣ್ಣನವರನ್ನು ಡಿಸಿಎಂ ಮಾಡಬಹುದಿತ್ತು. ಹಾಗೆ ಮಾಡಿದ್ದರೆ ಸರ್ಕಾರ ಉಳಿಯುತಿತ್ತು, ಕಾರ್ಯಕರ್ತ ರಿಗೂ ಒಳ್ಳೆಯದಾಗುತ್ತಿತ್ತು. ಅಧಿಕಾರ ಇದ್ದಾಗ ನೀವು ಹೋಟೆಲ್ ಒಳಗಿದ್ದರೆ, ನಿಮ್ಮ ಪಿಎ ಫೋನ್ ಮಾಡು ವವರೆಗೂ ನಾವು ಹೊರಗಡೆ ಗೇಟ್ ಬಳಿ ಕಾಯ ಬೇಕಿತ್ತು. ನಿಮಗೆ ಈಗ ಕಾರ್ಯಕರ್ತರು ನೆನಪಾಗಿ ದ್ದಾರಾ?. ನನಗೆ ಪರ್ಯಾಯವಾಗಿ ನಾಯಕತ್ವ ಬೆಳೆಸಲು ಸಾ.ರಾ.ಮಹೇಶ್‍ನನ್ನು ಮಂತ್ರಿ ಮಾಡಿ ದ್ದೀರಿ. ಎರಡು ಬಾರಿ ಮುಖ್ಯಮಂತ್ರಿ ಆಗಿದ್ದವರು ಮಾತನಾಡುವ ಮುನ್ನ ಯೋಚನೆ ಮಾಡಬೇಕು. ನಾನು ಬೇಡವೆಂದರೂ ಉನ್ನತ ಶಿಕ್ಷಣ ಖಾತೆ ಯನ್ನೇ ನನಗೆ ಕೊಟ್ಟಿದ್ದೇಕೆ?. ಈಗ ಬಿಜೆಪಿ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಅಶ್ವಥ್ ನಾರಾ ಯಣ್‍ಗೆ ಆ ಖಾತೆ ಕೊಟ್ಟಿದ್ದಾರೆ ಎಂದು ಕೇಳು ತ್ತೀರಿ. ಹೌದು ಅಶ್ವಥ್ ಅವರು ಡಾಕ್ಟರ್ ಓದಿದ್ದಾರೆ ಅದಕ್ಕೆ ಉನ್ನತ ಶಿಕ್ಷಣ ಖಾತೆ ನೀಡಿದ್ದಾರೆ ಎಂದು ಕುಮಾರಸ್ವಾಮಿ ಅವರ ಹೇಳಿಕೆಗೆ ತಿರುಗೇಟು ನೀಡಿದರು. ನನಗೆ(ಜಿಟಿಡಿ) ವಿಶ್ರಾಂತಿ ಬೇಕೆಂದು ವ್ಯಂಗ್ಯವಾಡಿದ್ದೀರಲ್ಲ, ನೀವು ಎರಡು ಬಾರಿ ಅಮೇ ರಿಕಾಕ್ಕೆ ಹೋಗಿದ್ದಾಗ ನನ್ನನ್ನು ಕರೆದು ಕೊಂಡು ಹೋಗಿದ್ದಿರಾ?. ನೀವು ಕರೆದುಕೊಂಡು ಹೋಗಿದ್ದು ತೇಜಸ್ವಿ ಸೂರ್ಯನಂತಹ ಯುವಕ ಸಾ.ರಾ.ಮಹೇಶ್ ರನ್ನ. ಅದಕ್ಕೆ ನಾನು ನನ್ನ ಕ್ಷೇತ್ರದ ಜನರ ಜೊತೆ ವಿಶ್ರಾಂತಿ ಪಡೆಯುತ್ತಿದ್ದೇನೆ ಎಂದು ಹೇಳಿದ ಜಿಟಿಡಿ, ಉಪಚುನಾವಣೆ ಬಗ್ಗೆ ನಮ್ಮ ಕುಟುಂಬಕ್ಕೆ ಚಿಂತೆಯಿಲ್ಲ. ನನ್ನ ಮಗ ಹುಣಸೂರಿನಲ್ಲಿ ಸ್ಪರ್ಧಿ ಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

Translate »