ಸಂಪುಟ ಪುನರ್ರಚನೆ ಇಲ್ಲ, ವಿಸ್ತರಣೆ ಮಾತ್ರ
ಮೈಸೂರು

ಸಂಪುಟ ಪುನರ್ರಚನೆ ಇಲ್ಲ, ವಿಸ್ತರಣೆ ಮಾತ್ರ

May 28, 2019

ಮೈಸೂರು: ಕಾಂಗ್ರೆಸ್‍ನ ಯಾವ ಸಚಿವರನ್ನೂ ಸಂಪುಟದಿಂದ ಕೈಬಿಡುವುದಿಲ್ಲ. ಖಾಲಿಯಿರುವ 3 ಸ್ಥಾನವನ್ನಷ್ಟೇ ತುಂಬಲಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ, ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಮೈಸೂರಿನ ರಾಮಕೃಷ್ಣನಗರದಲ್ಲಿರುವ ತಮ್ಮ ನಿವಾಸದ ಬಳಿ ಸೋಮವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟ ಪುನರ್ರಚನೆ ಮಾಡುವುದಿಲ್ಲ. ಖಾಲಿಯಿರುವ 3 ಸ್ಥಾನ ತುಂಬುವುದಕ್ಕೆ ಕ್ರಮ ಕೈಗೊಳ್ಳಲಾ ಗಿದೆ. ಸಚಿವ ಶಿವಳ್ಳಿ ಅವರ ನಿಧನದಿಂದ ತೆರವಾಗಿರುವ ಸ್ಥಾನ ಹಾಗೂ ಜೆಡಿಎಸ್ ಕೋಟಾದಲ್ಲಿ ಖಾಲಿಯಿರುವ 2 ಸ್ಥಾನವನ್ನು ತುಂಬಲಾಗುತ್ತಿದೆ. ಕಾಂಗ್ರೆಸ್ ಕೋಟಾದಡಿ ಸಚಿವರಾಗಿ ರುವ ಯಾರನ್ನೂ ಸಂಪುಟದಿಂದ ಕೈಬಿಡುವುದಿಲ್ಲ. ಮಾಧ್ಯಮಗಳಲ್ಲಿ
ಪ್ರಸಾರವಾಗುತ್ತಿರುವ ಸುದ್ದಿ ಕಪೋಲಕಲ್ಪಿತ ಎಂದು ಹೇಳಿದರು.

ಸಮ್ಮಿಶ್ರ ಸರ್ಕಾರದ ಮೇಲೆ ದುಷ್ಪರಿಣಾಮ ಬೀರದು: ಲೋಕಸಭಾ ಚುನಾವಣೆ ಫಲಿತಾಂಶ ರಾಜ್ಯ ಸರ್ಕಾ ರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಕೇಂದ್ರದಲ್ಲಿ ಯಾವ ಸರ್ಕಾರ ಇರಬೇಕೆಂದು ಜನರು ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸಿ ದ್ದಾರೆ. ಅದಕ್ಕೂ, ರಾಜ್ಯ ರಾಜಕಾರಣಕ್ಕೂ ಸಂಬಂಧ ವಿಲ್ಲ. ವಿಧಾನಸಭೆ ಹಾಗೂ ಲೋಕಸಭೆಗೆ ವಿಷಯಾ ಧಾರಿತವಾಗಿ ಚುನಾವಣೆ ನಡೆಯುತ್ತದೆ. ಕೇಂದ್ರದಲ್ಲಿ ಬಿಜೆಪಿ ಗೆದ್ದರೆ, ರಾಜ್ಯ ಸರ್ಕಾರದ ಯಾಕೆ ಪರಿಣಾಮ ಬೀರಬೇಕು? ಈ ಹಿಂದೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಾಗ ಅಂದು ಪ್ರದಾನಿಯಾಗಿದ್ದ ನರೇಂದ್ರ ಮೋದಿ ರಾಜೀನಾಮೆ ನೀಡಿದ್ದರೆ ಎಂದು ಪ್ರಶ್ನಿಸಿದ ಅವರು, ಲೋಕಸಭೆಯಲ್ಲಿ ಬಿಜೆಪಿ ಗೆದ್ದಿದೆ ಎಂದು ಎಲ್ಲಾ ಪುರಸಭೆ, ಪಟ್ಟಣಸಭೆ, ಪಾಲಿಕೆಗಳಲ್ಲೂ ಬಿಜೆಪಿ ಗೆದ್ದಿದೆ ಎಂದರ್ಥವಲ್ಲ. ಜನಾದೇಶ ಒಂದೊಂದು ಹಂತದಲ್ಲೂ ವಿಭಿನ್ನವಾಗಿರುತ್ತದೆ ಎಂದರು.

ಹಗಲುಗನಸು: ಜೂನ್ 1ರಂದು ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ಬರುತ್ತದೆ, ನಾನೇ ಮುಖ್ಯಮಂತ್ರಿ ಯಾಗುತ್ತೇನೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿ ಯೂರಪ್ಪ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದ ರಾಮಯ್ಯ, ಯಡಿಯೂರಪ್ಪ ಹಗಲುಗನಸು ಕಾಣುತ್ತಿ ದ್ದಾರೆ. ಮೇಲಿಂದ ಮೇಲೆ ನಾನೇ ಮುಖ್ಯಮಂತ್ರಿ ಯಾಗು ತ್ತೇನೆ ಎಂದು ಹೇಳುತ್ತಲೇ ಇದ್ದಾರೆ. ಒಂದು ವರ್ಷ ದಿಂದಲೂ ಸಮ್ಮಿಶ್ರ ಸರ್ಕಾರ ಪತನವಾಗುತ್ತದೆ ಎಂದು ಅವರು ಭವಿಷ್ಯ ನುಡಿಯುತ್ತಲೇ ಇದ್ದಾರೆ. ಯಾವುದಾ ದರೂ ನಿಜ ಆಗಿದ್ಯಾ?. ಒಂದು ವೇಳೆ ಜೂನ್ 1ರಂದು ಹೊಸ ಸರ್ಕಾರ ಅಸ್ಥಿತ್ವಕ್ಕೆ ಬರದೆ ಇದ್ದರೆ ರಾಜಕೀಯ ದಿಂದ ನಿವೃತ್ತಿ ಹೊಂದುತ್ತಾರಾ? ಎಂದು ಪ್ರಶ್ನಿಸಿದರು.

ದೀರ್ಘವಾಗಿ ಪರಾಮರ್ಶಿಸಬೇಕು: ಮೈಸೂರು ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಸೋಲ ನುಭವಿಸಿದ ಕುರಿತು ಪ್ರತಿಕ್ರಿಯಿಸಿದ ಅವರು, ಮೈಸೂರು -ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಸಿ.ಹೆಚ್.ವಿಜಯಶಂಕರ್ ಯಾವ ಕಾರಣಕ್ಕೆ ಸೋಲನು ಭವಿಸಿದ್ದಾರೆ ಎಂಬುದು ಗೊತ್ತಿಲ್ಲ. ಲೋಕಸಭಾ ಫಲಿತಾಂಶದ ಬಗ್ಗೆ ತಳಮಟ್ಟದ ಕಾರ್ಯಕರ್ತರ ಜೊತೆ ಪರಾಮರ್ಶೆ ನಡೆಸುತ್ತದೆ. ಬ್ಲಾಕ್ ಮಟ್ಟದ ಮುಖಂಡರೊಂದಿಗೆ ಸೋಲಿಗೆ ಕಾರಣವೇನು ಎಂದು ಪರಾಮರ್ಶಿಸುತ್ತೇನೆ ಎಂದರು.
ಜನಾದೇಶವನ್ನು ಗೌರವಿಸಿದ್ದೇವೆ: ಲೋಕಸಭಾ ಚುನಾವಣೆಯಲ್ಲಿ ದೇಶದ ಜನತೆ ಬಿಜೆಪಿಗೆ ಬೆಂಬಲ ನಿಡಿದ್ದಾರೆ. ಈ ಜನಾದೇಶವನ್ನು ಕಾಂಗ್ರೆಸ್ ಗೌರವಿ ಸುತ್ತದೆ. ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ಈಗಾ ಗಲೇ ಜನಾದೇಶದ ಕುರಿತು ಚರ್ಚೆಯಾಗಿದ್ದು, ಮತ ದಾರರ ಆದೇಶವನ್ನು ಸ್ವೀಕರಿಸಿದ್ದೇವೆ. ಆದರೂ ಇವಿಎಂ ಮೇಲೆ ಅನುಮಾನ ಇರುವುದು ನಿಜ. ಈ ಕುರಿತಂತೆ ಪರಿಣಿತರೊಂದಿಗೆ ಚರ್ಚಿಸುತ್ತೇವೆ ಎಂದರು.

ಮಾಜಿ ಸಂಸದ ಆರ್.ದ್ರುವನಾರಾಯಣ್ ಅವರಿ ಗಾಗಿ ವಿಧಾನ ಪರಿಷತ್ ಸದಸ್ಯತ್ವ ತ್ಯಾಗ ಮಾಡುವು ದಾಗಿ ಎಂಎಲ್‍ಸಿ ಆರ್.ಧರ್ಮಸೇನಾ ನೀಡಿರುವ ಹೇಳಿಕೆಗೆ ಸಂಬಂಧಿಸಿದಂತೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ವಿಧಾನ ಪರಿಷತ್ ಸದಸ್ಯ ಆರ್.ಧರ್ಮಸೇನಾ ರಾಜೀನಾಮೆ ನೀಡುವ ಇಂಗಿತದ ಬಗ್ಗೆ ನನಗೆ ಮಾಹಿತಿ ಇಲ್ಲ. ಅವರು ಇದುವ ರೆಗೂ ನನ್ನೊಂದಿಗೆ ಆ ವಿಚಾರ ಪ್ರಸ್ತಾಪಿಸಿಲ್ಲ. ಇದ ರಿಂದ ಆ ಬಗ್ಗೆ ಮಾತನಾಡುವುದಿಲ್ಲ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಾಜಿ ಸಂಸದ ಸಿ.ಹೆಚ್. ವಿಜಯಶಂಕರ್, ಮಾಜಿ ಶಾಸಕ ಎಂ.ಕೆ.ಸೋಮ ಶೇಖರ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು
ಯಾರೂ ಕಾಂಗ್ರೆಸ್ ಬಿಡಲ್ಲಮಾಜಿ ಸಚಿವ ರಮೇಶ್ ಜಾರಕಿಹೊಳಿ ಸೇರಿದಂತೆ ಯಾರೂ ಕಾಂಗ್ರೆಸ್ ಬಿಡುವುದಿಲ್ಲ. ಎಲ್ಲರೂ ನಮ್ಮೊಂದಿಗಿದ್ದಾರೆ. ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರಿಗೆ ಶುಭಕೋರಲು ರಮೇಶ್ ಜಾರಕಿಹೊಳಿಯೊಂದಿಗೆ ಶಾಸಕ ಡಾ.ಸುಧಾಕರ್ ತೆರಳಿದ್ದಾಗ, ಕಾಕತಾಳೀಯವಾಗಿ ಮಾಜಿ ಸಿಎಂ ಬಿ.ಎಸ್.ಯಡಿ ಯೂರಪ್ಪ, ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್, ಮಂಡ್ಯದ ನೂತನ ಸಂಸದೆ ಸುಮಲತಾ ಅಂಬರೀಶ್ ಅವರು ಸಿಕ್ಕಿದ್ದಾರೆ. ಇದಿರಿಂದ ಕಾಂಗ್ರೆಸ್‍ನ ಇಬ್ಬರು ಶಾಸಕರು ಆಪರೇಷನ್ ಕಮಲಕ್ಕೆ ಒಳಗಾಗಿದ್ದಾರೆ ಎನ್ನುವುದು ಸರಿಯಲ್ಲ.

Translate »