ಮುಕ್ತ ವಿವಿ 2011-12, 2012-13ನೇ ಸಾಲಿನ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ
ಮೈಸೂರು

ಮುಕ್ತ ವಿವಿ 2011-12, 2012-13ನೇ ಸಾಲಿನ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ

May 28, 2019

ಮೈಸೂರು: ಯುಜಿಸಿ ಮಾನ್ಯತೆ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯಕ್ಕೆ ಮತ್ತೆ ಮಾನ್ಯತೆ ಸಿಕ್ಕಿರುವ ಹಿನ್ನೆಲೆಯಲ್ಲಿ ಬೇಡಿಕೆ ಹೆಚ್ಚಾಗುತ್ತಿದ್ದು, ವಿವಿಧ ಕೋರ್ಸ್ ಗಳಿಗೆ ಪ್ರವೇಶಾತಿ ಪಡೆಯಲು ವಿದ್ಯಾರ್ಥಿಗಳು ಮುಗಿ ಬೀಳುತ್ತಿದ್ದಾರೆ. ಅತಂತ್ರ ಸ್ಥಿತಿಯಲ್ಲಿದ್ದ 2011-12, 2012-13ನೇ ಸಾಲಿನಲ್ಲಿ ಪ್ರವೇಶಾತಿ ಪಡೆದಿರುವ ಬಿಎ, ಬಿಕಾಂ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸ ಲಾಗಿದೆ ಎಂದು ಮುಕ್ತ ವಿವಿ ಕುಲಪತಿ ಪ್ರೊ.ಡಿ.ಶಿವಲಿಂಗಯ್ಯ ತಿಳಿಸಿದ್ದಾರೆ. ಮೈಸೂರಿನ ಮುಕ್ತ ಗಂಗೋತ್ರಿಯಲ್ಲಿ ಸೋಮ ವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸಕ್ತ ಸಾಲಿನಿಂದ ಪರೀಕ್ಷಾ ನಿಯಮ ಬದಲಾಗಿದೆ. `ಎನ್ ಪ್ಲಸ್ 2’ ಪದ್ಧತಿಯನ್ನು ಜಾರಿಗೆ ತರಲಾಗಿದೆ. ಈ ಹಿಂದೆ ಮೂರು ವರ್ಷದ ಕೋರ್ಸ್‍ಗೆ ವಿದ್ಯಾರ್ಥಿಗಳು ದಾಖ ಲಾದರೆ ಅವರಿಗೆ ಹೆಚ್ಚುವರಿಯಾಗಿ ಮತ್ತೆ ಮೂರು ವರ್ಷ ಕಾಲಾವಕಾಶ ನೀಡಿ, ಆರು ವರ್ಷದಲ್ಲಿ ಕೋರ್ಸ್ ಕಂಪ್ಲೀಟ್ ಮಾಡಿಕೊಳ್ಳಬೇಕಾಗಿತ್ತು.

ಎರಡು ವರ್ಷದ ಕೋರ್ಸ್ ಪಡೆದವರಿಗೆ ನಾಲ್ಕು ವರ್ಷ ಕಾಲಾವಕಾಶ ನೀಡಲಾಗುತ್ತಿತ್ತು. ಆದರೆ ಈ ಸಾಲಿನಿಂದ ನಿಯಮದಲ್ಲಿ ಬದಲಾವಣೆಯಾಗಿದ್ದು, ಕೋರ್ಸ್ ಅವಧಿಯೊಂದಿಗೆ 2 ವರ್ಷ ಮಾತ್ರ ಹೆಚ್ಚುವರಿಯಾಗಿ ಕಾಲಾವಕಾಶ ನೀಡಲಾಗುತ್ತದೆ ಎಂದರು. 2011-12 ಮತ್ತು 2012-13ನೇ ನೇ ಸಾಲಿನಲ್ಲಿ ಅಂತರ್ ಗೃಹ ಬಿಎ, ಬಿಕಾಂ ಕಾರ್ಯಕ್ರಮಗಳಿಗೆ ಪ್ರವೇಶಾತಿ ಪಡೆದು ಪರೀಕ್ಷೆಗಳಲ್ಲಿ ಅನುತ್ತೀರ್ಣರಾಗಿರುವ ಮತ್ತು ಪರೀಕ್ಷೆ ತೆಗೆದುಕೊಳ್ಳಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಈ ವಿಶ್ವವಿದ್ಯಾನಿಲಯದಲ್ಲಿ ಜಾರಿಯಲ್ಲಿದ್ದ ನಿಂiÀiಮಾವಳಿಗಳ ಪ್ರಕಾರ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ. ಅಂತರ್ ಗೃಹ 2011-12ನೇ ಸಾಲಿನ ಬಿಎ, ಬಿಕಾಂ ವಿದ್ಯಾರ್ಥಿಗಳಿಗೆ ಒಂದು ವರ್ಷ ಅವಕಾಶ, 2012-13ನೇ ಸಾಲಿನ ಬಿಎ, ಬಿಕಾಂ ವಿದ್ಯಾರ್ಥಿಗಳಿಗೆ ಎರಡು ವರ್ಷ ಅವಕಾಶ ನೀಡಲಾಗಿದೆ. ಈ ಸಾಲಿನಲ್ಲಿ ದಾಖಲಾತಿ ಪಡೆದಿರುವ ವಿದ್ಯಾರ್ಥಿಗಳು ಮುಕ್ತ ವಿವಿ ವೆಬ್‍ಸೈಟ್‍ನಲ್ಲಿ (www.ksoumysore.karnataka.gov.in) ಮಾಹಿತಿ ಪಡೆದು ಪರೀಕ್ಷೆ ಬಗ್ಗೆ ಮಾಹಿತಿ ಪಡೆದು ಜುಲೈ ತಿಂಗಳಲ್ಲಿ ನಡೆಯುವ ಪರೀಕ್ಷೆಗೆ ಹಾಜರಾಜುವಂತೆ ಸಲಹೆ ನೀಡಿದರು.

ಪ್ರಸ್ತುತ 31 ಅಂತರ್ ಗೃಹ ತಾಂತ್ರಿಕೇತರ ಕಾರ್ಯಕ್ರಮ ಆರಂಭಿಸಲು ಅನುಮೋದನೆ ದೊರಕಿರುತ್ತದೆ. 2018ರ ಜುಲೈ ಆವೃತ್ತಿಯಲ್ಲಿ ಪ್ರವೇಶಾತಿ ಆರಂಭಿಸಲಾಗಿದ್ದು, ಈಗಾಗಲೇ ವಿವಿಧ ಕಾರ್ಯಕ್ರಮಗಳಿಗೆ 12 ಸಾವಿರ ವಿದ್ಯಾರ್ಥಿಗಳು ಪ್ರವೇಶಾತಿ ಪಡೆದಿದ್ದಾರೆ. ನಂತರ, 2019ರ ಜನವರಿ ಆವೃತ್ತಿಯಲ್ಲಿ ಬಿಇಡಿ, ಎಂಬಿಎ ಕಾರ್ಯ ಕ್ರಮಗಳಿಗೆ ವಿದ್ಯಾರ್ಥಿಗಳನ್ನು ಪ್ರವೇಶಾತಿ ಮಾಡಿಕೊಳ್ಳಲಾಗಿದ್ದು, ಯುಜಿಸಿಗೆ ಈ ಕುರಿತು ಸಂಪೂರ್ಣ ಮಾಹಿತಿ ಒದಗಿಸಲಾಗಿದೆ ಎಂದು ಹೇಳಿದರು. ಜುಲೈ ಆವೃತ್ತಿಯಲ್ಲಿ ವಿವಿಯ 31 ಕಾರ್ಯಕ್ರಮಗಳಿಗೆ ಪ್ರವೇಶ ಪಡೆಯಲು ವಿವಿಯ ವೇಳಾಪಟ್ಟಿಯಂತೆ ಆಗಸ್ಟ್ 31 ಕೊನೆ ದಿನವಾಗಿದೆ. ವಿದ್ಯಾರ್ಥಿಗಳು ಪ್ರವೇಶಕ್ಕೆ ಸಂಬಂಧಿಸಿದ ಎಲ್ಲ ವಿವರವನ್ನು ವೆಬ್‍ಸೈಟ್‍ನಲ್ಲಿ ನೋಡಬಹುದು. ಈಗಾಗಲೇ 31720 ವಿದ್ಯಾರ್ಥಿಗಳು ವೆಬ್‍ಸೈಟ್ ವೀಕ್ಷಿಸಿದ್ದಾರೆ. ಅಲ್ಲದೆ 77 ಮಂದಿ ವಿವಿಧ ಕೋರ್ಸ್‍ಗಳಿಗೆ ದಾಖಲಾಗಿದ್ದಾರೆ. 759 ಮಂದಿ ದಾಖಲಾತಿಗೆ ಪೂರಕವಾದ ದಾಖಲೆ ನಮೂದಿಸಿದ್ದಾರೆ ಎಂದರು.

ಪಿಹೆಚ್‍ಡಿ ಮುಂದುವರಿಸಲು ಅನುಮತಿ: ಮಾನ್ಯತೆ ಸಮಸ್ಯೆಯಿಂದಾಗಿ ಸಂಶೋ ಧನಾ ವಿದ್ಯಾರ್ಥಿಗಳಿಗೆ ಪಿಹೆಚ್.ಡಿ ಪದವಿಗೆ ಪ್ರವೇಶಾತಿಗಳನ್ನು ತಡೆಹಿಡಿಯಲಾಗಿತ್ತು. ಈಗ ಯುಜಿಸಿಯು ಮಾನ್ಯತೆ ನವೀಕರಿಸಿರುವ ಕಾರಣ 2008 ಮತ್ತು 2012ರ ಪಿಎಚ್.ಡಿ ನಿಯಮಾವಳಿಗಳ ಪ್ರಕಾರ ನೋಂದಣಿ ಮಾಡಿಕೊಂಡಿದ್ದ 118ಸಂಶೋಧನಾರ್ಥಿಳ ಸಂಶೋಧನಾ ಕಾರ್ಯ ಮುಂದುವರಿಸಲು ತೀರ್ಮಾನ ಮಾಡಿದೆ ಎಂದರು. ಕೋರ್ಸ್ ವರ್ಕ್ ಮಾಡಬೇಕಾಗಿರುವ ವಿದ್ಯಾರ್ಥಿಗಳು-87, ಮೌಖಿಕ ಪರೀಕ್ಷೆಗೆ ಹಾಜರಾಗಬೇಕಿರುವವರು-2, ಪ್ರಬಂಧಗಳ ಮೌಲ್ಯಮಾಪನ ಮಾಡಬೇಕಿರುವ ವಿದ್ಯಾರ್ಥಿಗಳ ಸಂಖ್ಯೆ-14, ಕ್ರೋಢೀಕೃತ ವರದಿ ಅಗತ್ಯವಿರುವ ವಿದ್ಯಾರ್ಥಿಗಳು-10, ಡಾಕ್ಟರಲ್ ಸಮಿತಿ ಮುಂದೆ ಹಾಜರಾಗಬೇಕಿರುವ ವಿದ್ಯಾರ್ಥಿಗಳು-5ಸೇರಿ ಒಟ್ಟು 118 ಮಂದಿಗೆ ಅನುಕೂಲವಾಗಿದೆ ಎಂದರು.

ಕೌಶಲ್ಯಾಭಿವೃದ್ಧಿ ತರಬೇತಿ: ಮುಕ್ತ ವಿವಿಯಲ್ಲಿ ಪ್ರವೇಶಾತಿ ಪಡೆದ ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮಗಳಾದ ಆಡಳಿತ ಕನ್ನಡ, ಇಂಗ್ಲಿಷ್ ಅಂಡ್ ಕಮ್ಯುನಿಕೇಷನ್ ಅಂಡ್ ಸಾಫ್ಟ್ ಸ್ಕಿಲ್ಸ್, ವೆಬ್ ಡಿಸೈನಿಂಗ್,ಡೆಸ್ಕ್ ಟಾಪ್ ಪಬ್ಲಿಷಿಂಗ್, ಮಲ್ಟಿಮೀಡಿಯಾ, ಬೇಸಿಕ್ ಆಫ್ ನೆಟ್ ವರ್ಕಿಂಗ್‍ಗಳನ್ನು ಆಯ್ಕೆ ಮಾಡಿಕೊಂಡಿರುತ್ತಾರೆ ಎಂದರು. ಸ್ನಾತಕ ವಿದ್ಯಾರ್ಥಿಗಳಿಗೆ ಮೂರು ಹಂತಗಳ ಕೌಶಲ್ಯಾಭಿವೃದ್ಧಿ ಶಿಕ್ಷಣ ಕ್ರಮವಿದ್ದು, ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಎರಡು ಹಂತಗಳ ಕೌಶಲ್ಯಾಭಿವೃದ್ಧಿ ಶಿಕ್ಷಣ ಕ್ರಮವಿದೆ. ಎಲ್ಲಾ ವಿದ್ಯಾರ್ಥಿಗಳು ಕೌಶಲ್ಯಾಭಿವೃದ್ಧಿ ತರಬೇತಿಗೆ ಕಡ್ಡಾಯವಾಗಿ ಹಾಜರಾಗಬೇಕಿದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಕುಲಸಚಿವ ಕುಲಸಚಿವ ಡಾ.ಬಿ.ರಮೇಶ್ ಇದ್ದರು.

Translate »