ಕೊಡಗು

ಕಾರು ಡಿಕ್ಕಿ; ಅಪರಿಚಿತ ಪಾದಚಾರಿಗೆ ಗಾಯ

January 5, 2019

ಗೋಣಿಕೊಪ್ಪಲು: ವಾಹನ ಅಪಘಾತದಲ್ಲಿ ಗಂಭೀರ ಗಾಯಗೊಂಡಿರುವ ಅಪರಿಚಿತ ವ್ಯಕ್ತಿಗೆ ಮಡಿಕೇರಿಯಲ್ಲಿರುವ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ವಾರಸುದಾರರು ಇದ್ದಲ್ಲಿ ಪೊನ್ನಂ ಪೇಟೆ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಕೋರ ಲಾಗಿದೆ. ಗಾಯಾಳುವಿಗೆ ಅಂದಾಜು 60 ವರ್ಷ ವಯಸ್ಸಾಗಿದೆ.
ತಲೆಗೆ ಗಂಭೀರ ಪೆಟ್ಟು ಬಿದ್ದು ಪ್ರಜ್ಞಾಹೀನ ಸ್ಥಿತಿಯಲ್ಲಿ ದ್ದಾರೆ. ಇದರಿಂದಾಗಿ ಅವರ ಗುರುತು ಪತ್ತೆ ಹಚ್ಚಲು ಸಾಧ್ಯ ವಾಗುತ್ತಿಲ್ಲ. ಡಿಸೆಂಬರ್ 28 ರಂದು ಪೊನ್ನಂಪೇಟೆ ಕೊಡವ ಸಮಾಜ ಎದುರಿನ ಮುಖ್ಯರಸ್ತೆಯಲ್ಲಿ ರಸ್ತೆ ದಾಟುತಿದ್ದ ಸಂದರ್ಭ ಕಾರ್ತಿಕ್ ಎಂಬುವವರು ಚಾಲಿಸುತ್ತಿದ್ದ ಕಾರು ಡಿಕ್ಕಿಯಾಗಿತ್ತು. ನಂತರ ಸ್ಥಳೀಯರು ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದ್ದರು.

ಮಡಿಕೇರಿಯಲ್ಲಿರುವ ಜಿಲ್ಲಾಸ್ಪತ್ರೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಚಿಕಿತ್ಸೆ ನೀಡ ಲಾಗುತ್ತಿದೆ. ಚಾಲಕ ಕಾರ್ತಿಕ್ ವಿರುದ್ದ ದೂರು ದಾಖಲಾಗಿದೆ. ವಾರಸುದಾರರು ಪೊನ್ನಂ ಪೇಟೆ ಪೊಲೀಸ್ ಠಾಣೆ ಸಂಖ್ಯೆ 08274 249044 ಸಂಪರ್ಕಿಸಬಹುದಾಗಿದೆ ಎಂದು ಪೊನ್ನಂಪೇಟೆ ಪೊಲೀಸ್ ಠಾಣೆ ಪ್ರಕಟಣೆ ತಿಳಿಸಿದೆ.

Translate »