ಮುರ್ನಾಡು: ಮೂರ್ನಾಡಿನ ಪದವಿ ಕಾಲೇಜಿನಲ್ಲಿ ಇತ್ತೀಚೆಗೆ ಸರ್ಟಿಫಿಕೇಟ್ ಕೋರ್ಸ್ ಕಾರ್ಯಕ್ರಮ ನಡೆಯಿತು.
ಸಂಪನ್ಮೂಲ ವ್ಯಕ್ತಿಗಳಾಗಿ ನಿವೃತ ಪೋಲಿಸ್ ಅಧಿಕಾರಿ ಮುಕ್ಕಾಟಿರ ಚೋಟು ಅಪ್ಪಯ್ಯ, ಶ್ರೀಮತಿ ಮಾಲತಿ ದೇವಯ್ಯ ಹಾಗು ಶ್ರೀಮತಿ ಜಾನ್ಸಿರವರು ಉಪನ್ಯಾಸ ತರಬೇತಿಯನ್ನು ನಡೆಸಿಕೊಟ್ಟರು. ಮುಕ್ಕಾಟಿರ ಚೋಟು ಅಪ್ಪಯ್ಯನವರು ತಮ್ಮ ಉಪನ್ಯಾಸದಲ್ಲಿ ವಿದ್ಯಾರ್ಥಿ ಗಳು ದೇಶಸೇವೆಯನ್ನು ಮಾಡಲು ಹಿಂಜರಿಯಬಾರದು, ಸೈನ್ಯಕ್ಕೆ ಸೇರಬೇಕು ಹಾಗೂ ಅಲ್ಲಿ ವಿದ್ಯಾರ್ಥಿಗಳಿಗೆ ಇರುವ ಅವಕಾಶಗಳ ಬಗ್ಗೆ ತಿಳಿಸಿಕೊಟ್ಟರು.
ಪೋಲಿಸ್ ವೃತ್ತಿಯಲ್ಲಿ ಎಂದೂ ಕೂಡ ದೃತಿಗೆಡಬಾರದು, ತರಬೇತಿ ಅವಧಿಯಲ್ಲಿ ಕಠಿಣ ಪರಿಶ್ರಮದಿಂದ ಉತ್ತಮ ವೃತ್ತಿ ಜೀವನ ಸಾಗಿಸಲು ಸಾಧ್ಯವೆಂದು ಹೇಳಿದ ಅವರು, ತನ್ನ ಸುಧೀರ್ಘ 36 ವರ್ಷಗಳ ವೃತ್ತಿ ಜೀವನದ ಅನುಭವಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.
ಸಂವಹನ ಇಂಗ್ಲೀಷ್ ತರಗತಿಯಲ್ಲಿ ಮಾಲತಿ ದೇವಯ್ಯನವರು, ನಾವು ಇನ್ನೊಬ್ಬರೊಂ ದಿಗೆ ಮಾತನಾಡುವಾಗ ಹಾಗೂ ದೂರವಾಣಿಯಲ್ಲಿ ಮಾತನಾಡುವಾಗ ನಮೃತೆಯನ್ನು ಹೇಗೆ ಕಾಯ್ದುಕೊಳ್ಳಬೇಕು ಎಂಬುದನ್ನು ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು. ಶ್ರೀಮತಿ ಜಾನ್ಸಿರವರು ಪ್ರಥಮ ಬಿ.ಕಾಂ ವಿದ್ಯಾರ್ಥಿಗಳಿಗೆ ವಿವಿಧ ರೀತಿಯ ಯೋಗದ ಭಂಗಿಯನ್ನು ಕಲಿಸಿಕೊಟ್ಟರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ರಾದ ಪ್ರೊ. ಪಟ್ಟಡ ಪೂವಣ್ಣ ಹಾಗು ಉಪನ್ಯಾಸಕ ವರ್ಗದವರು ಹಾಜರಿದ್ದರು.