‘ಅಕ್ಕ’ ಬಳಗದಿಂದ ಮಕ್ಕಂದೂರಿನ ಶಾಲಾ ಕಟ್ಟಡ ನಿರ್ಮಾಣದ ಸ್ಥಳ ಪರಿಶೀಲನೆ
ಕೊಡಗು

‘ಅಕ್ಕ’ ಬಳಗದಿಂದ ಮಕ್ಕಂದೂರಿನ ಶಾಲಾ ಕಟ್ಟಡ ನಿರ್ಮಾಣದ ಸ್ಥಳ ಪರಿಶೀಲನೆ

January 5, 2019

ಮಡಿಕೇರಿ: ಅಮೇರಿಕ ಕನ್ನಡ ಕೂಟಗಳ ಆಗರ(ಅಕ್ಕ) ಸಂಸ್ಥೆ ವತಿಯಿಂದ ತಾಲೂಕಿನ ಮಕ್ಕಂದೂರಿನಲ್ಲಿ ನಿರ್ಮಿಸಲಾ ಗುವ ಶಾಲಾ ಕೊಠಡಿ ನಿರ್ಮಾಣದ ಸ್ಥಳ ವನ್ನು ಅಕ್ಕ ಸಂಸ್ಥೆಯ ಗೌರವ ಅಧ್ಯಕ್ಷ ಅಮರ ನಾಥ ಗೌಡ, ಅಧ್ಯಕ್ಷರಾದ ಶಿವಮೂರ್ತಿ ಕಿಲಾರ, ಮಾಜಿ ಅಧ್ಯಕ್ಷರಾದ ವಿಶ್ವಾಮಿತ್ರ ಇತ ರರು ಶನಿವಾರ ಭೇಟಿ ನೀಡಿ ಪರಿಶೀಲಿಸಿದರು.
ಬಳಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾ ಡಿದ ಸಂಸ್ಥೆಯ ಅಧ್ಯಕ್ಷರಾದ ಶಿವಮೂರ್ತಿ ಕಿಲಾರ ಅವರು, ಶಾಲಾ ಕಟ್ಟಡವು ಮೂರು ಕೊಠಡಿಗಳನ್ನು ಹೊಂದಿದ್ದು, ಮೇಲ್ಭಾಗ ದಲ್ಲಿ ಸಭಾಂಗಣ ಹಾಗೆಯೇ ಶೌಚಾಲಯ ಸೇರಿದಂತೆ 50 ಲಕ್ಷ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಿಸಲಾಗುತ್ತದೆ ಎಂದು ತಿಳಿಸಿದರು.

ಶಾಲಾ ಕಟ್ಟಡವನ್ನು ಹೈಟೆಕ್ ಮಾದರಿಯಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ. ಮೂರು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು. ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಉನ್ನತ ಸ್ಥಾನ ಪಡೆಯುವಂತಾಗ ಬೇಕು. ಇದರಿಂದ ರಾಜ್ಯ ಮತ್ತು ದೇಶಕ್ಕೆ ಕೀರ್ತಿ ತರುವಂತಾಗಬೇಕು ಎಂದು ಕಿಲಾರ ಅವರು ನುಡಿದರು. ಅಕ್ಕ ಸಂಸ್ಥೆಯ ಸ್ಥಾಪಕಾಧ್ಯಕ್ಷ ರಾದ ಅಮರಾಥ ಗೌಡ ಮಾತನಾಡಿ, ಅಮೇ ರಿಕದಲ್ಲಿ ಕನ್ನಡಿಗರನ್ನು ಒಟ್ಟುಗೂಡಿಸಿ ಕನ್ನಡ ನಾಡು ನುಡಿಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಅಮೇರಿಕ ಕನ್ನಡ ಕೂಟ ಕೆಲಸ ಮಾಡುತ್ತಿದೆ ಎಂದರು. ಸಂಸ್ಥೆಯು ಶಾಲೆಗಳು, ಮನೆ, ಗ್ರಂಥಾಲಯ ಕಟ್ಟಡ ನಿರ್ಮಾಣಕ್ಕೆ ಹೆಚ್ಚಿನ ಒತ್ತು ನೀಡಲಾ ಗುತ್ತಿದೆ ಎಂದು ಅವರು ತಿಳಿಸಿದರು.

ಅಕ್ಕ ಸಂಸ್ಥೆಯ ಮಾಜಿ ಅಧ್ಯಕ್ಷರಾದ ವಿಶ್ವಾ ಮಿತ್ರ ಮಾತನಾಡಿ, ತವರೂರಿಗೆ ಏನಾದರೂ ಒಳ್ಳೆದನ್ನು ನೀಡಬೇಕು ಎಂಬ ಉದ್ದೇಶ ದಿಂದ ಶಾಲಾ ಕಟ್ಟಡ ನಿರ್ಮಿಸಲಾಗು ತ್ತದೆ. ಅಕ್ಕ ಸಂಸ್ಥೆ ಹೆಮ್ಮರವಾಗಿ ಬೆಳೆದಿದ್ದು, ಕೈಲಾದಷ್ಟು ನಾಡಿಗೆ ಸಹಕಾರ ನೀಡುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲಾಗುತ್ತದೆ ಎಂದು ಅವರು ತಿಳಿಸಿದರು.

ಗುಲ್ಬರ್ಗಾ ವಿಭಾಗದ ಆಹಾರ ಮತ್ತು ನಾಗ ರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇ ಶಕರಾದ ಡಾ.ಕಾ.ರಾಮೇಶ್ವರಪ್ಪ ಮಾತನಾಡಿ, ಕನ್ನಡ, ಕನ್ನಡಿಗರು, ನಾಡು ನುಡಿ ಬಗ್ಗೆ ಎಲ್ಲೆಡೆ ಪಸರಿಸುವ ನಿಟ್ಟಿನಲ್ಲಿ ಅಕ್ಕ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ. ಕವಿಗಳು, ಸಾಹಿತಿಗಳು, ಕಲಾವಿದರು ಕನ್ನಡ ಸಾಹಿತ್ಯ, ಸಂಸ್ಕøತಿ, ಕಲೆ, ಜಾನಪದವನ್ನು ಅನಾವರಣ ಮಾಡುವ ನಿಟ್ಟಿನಲ್ಲಿ ಅಕ್ಕ ಬಳಗ ಕಾರ್ಯ ನಿರ್ವಹಿ ಸುತ್ತಿದೆ ಎಂದು ಅವರು ಹೇಳಿದರು.

ಅಮೇರಿಕದಲ್ಲಿ ಕನ್ನಡ ವಾತಾವರಣ ನಿರ್ಮಾಣ ಮಾಡುವಲ್ಲಿ ಅಕ್ಕ ಬಳಗ ಶ್ರಮಿಸುತ್ತಿದ್ದು, ಅತೀವೃಷ್ಠಿ ಮತ್ತು ಅನಾವೃಷ್ಠಿ ಸಂದರ್ಭ ದಲ್ಲಿ ನೆರವು ನೀಡುವ ದಿಸೆಯಲ್ಲಿ ಅಕ್ಕ ಸಂಸ್ಥೆ ಮುಂದಾಗಿದೆ ಎಂದು ಅವರು ತಿಳಿಸಿದರು.
ಗ್ರಾಪಂ ಸದಸ್ಯರಾದ ಸತೀಶ್, ರಮೇಶ್ ಹಾಗೂ ಶಾಲಾ ಮುಖ್ಯೋಪಾಧ್ಯಾಯರಾದ ಭವಾನಿ ಅವರು ಮಾತನಾಡಿದರು. ಎಸ್‍ಡಿಎಂಸಿ ಅಧ್ಯಕ್ಷ ಹರೀಶ್, ಮಧು, ಪಿಡಿಓ ಇತರರು ಇದ್ದರು.

Translate »