ವಿರಾಜಪೇಟೆ: ವಿರಾಜಪೇಟೆ ತಾಲೂಕು ಬಿಲ್ಲವ ಸೇವಾ ಸಂಘದ ವತಿಯಿಂದ ಹೊಸ ವರ್ಷದ ಪ್ರಯುಕ್ತ ಬಿಟ್ಟಂಗಾಲ ಅಂಬಾಟಿಯಲ್ಲಿರುವ ಬ್ರಹ್ಮ ಶ್ರೀ ನಾರಾಯಣ ಗುರು ಮಂದಿ ರದಲ್ಲಿ ಶ್ರದ್ಧಾ ಭಕ್ತಿಯಿಂದ ಶ್ರೀ ನಾರಾಯಣ ಗುರುವಿಗೆ ವಿಶೇಷ ಪೂಜಾ ಸೇವಾ ಕಾರ್ಯಕ್ರಮಗಳು ನಡೆಯಿತು. ಪೂಜಾ ಕಾರ್ಯಕ್ರಮದಲ್ಲಿ ಬಿಲ್ಲವ ಸೇವಾ ಸಂಘದ ತಾಲೂಕು ಅಧ್ಯಕ್ಷ ಬಿ.ಎಂ.ಗಣೇಶ್, ಗೌರವ ಅಧ್ಯಕ್ಷ ಬಿ.ಆರ್. ರಾಜ, ಉಪಾಧ್ಯಕ್ಷ ಪುರುಷೋತ್ತಮ, ಕಾರ್ಯದರ್ಶಿ ಬಿ.ಎಸ್.ಜನಾರ್ದನ, ಖಜಾಂಚಿ ಬಿ.ಎಂ.ಸತೀಶ್, ಹಿರಿಯರಾದ ಬೋಜಪ್ಪ, ಬಿ.ಕೆ.ರಮೇಶ್, ಸದಸ್ಯರಾದ ಬಿ.ಎಂ.ರಮೇಶ್ ಹಾಗೂ ಇತರ ಸದಸ್ಯರುಗಳು ಹಾಜರಿದ್ದರು….
ಕೊಡವರಿಗೆ ಬುಡಕಟ್ಟು ಸ್ಥಾನಮಾನ: ಜನಾಂಗೀಯ ಸಮೀಕ್ಷೆಗೆ ರಾಜ್ಯ ಸರ್ಕಾರ ಆದೇಶ
January 2, 2019ಬೆಂಗಳೂರು: ಕೊಡಗಿನ ಜನತೆ ಮತ್ತು ಕೊಡವ ನ್ಯಾಷನಲ್ ಕೌನ್ಸಿಲ್‍ನ ಒತ್ತಡಕ್ಕೆ ಮಣಿದು, ಕೊಡವ ಸಮುದಾಯ ಬುಡಕಟ್ಟು ಸ್ಥಾನಮಾನಕ್ಕೆ ಅರ್ಹವಾಗಿದೆಯೇ ಎಂಬುದನ್ನು ತಿಳಿಯಲು ರಾಜ್ಯ ಸರ್ಕಾರ ಜನಾಂಗೀಯ ಸಮೀಕ್ಷೆ ಮತ್ತು ಸಾಮಾಜಿಕ ಆರ್ಥಿಕತೆ ಸರ್ವೆ ಕಾರ್ಯಕ್ಕೆ ಶಿಫಾರಸ್ಸು ಮಾಡಿದೆ. ಕೊಡವ ಸಮುದಾಯ ಗಣನೀಯವಾಗಿ ಇಳಿಕೆಯಾ ಗುತ್ತಿರುವ ಬಗ್ಗೆ ಅನೇಕ ಪತ್ರಿಕೆಗಳಲ್ಲಿ ವರದಿಯಾದ ಹಿನ್ನೆಲೆಯಲ್ಲಿ ಈ ಸರ್ವೆ ಕಾರ್ಯವನ್ನು ಮೂರನೇ ಬಾರಿಗೆ ಕೈಗೆತ್ತಿಕೊಂಡಿದೆ. 2011 ರಲ್ಲಿ ಅಂದಿನ ಯುಪಿಎ ಕೇಂದ್ರ ಸರ್ಕಾರ ಜನಾಂಗೀಯ ಸಮೀಕ್ಷೆ ಮತ್ತು ಸಾಮಾಜಿಕ ಆರ್ಥಿ ಕತೆ…
ಗಿರಿಜನರ ವಿಶಿಷ್ಟ ಸಂಸ್ಕೃತಿ ಎಲ್ಲೆಡೆ ಪಸರಿಸಬೇಕು
January 2, 2019ಕುಶಾಲನಗರ: ಬುಡಕಟ್ಟು ಜನಾಂಗದಲ್ಲಿ ವಿಶಿಷ್ಠವಾದ ಕಲೆ ಮತ್ತು ಸಂಸ್ಕೃತಿ ಅಡಕವಾಗಿದ್ದು, ಇವುಗಳನ್ನು ಪ್ರಪಂಚದಾದ್ಯಂತ ಬಿಂಬಿಸುವ ಕೆಲಸಕ್ಕೆ ಮುಂದಾಗ ಬೇಕು ಎಂದು ನಟ ಚೇತನ್ ಹೇಳಿದ್ದಾರೆ. ಇಲ್ಲಿಯ ಬ್ಯಾಡಗೊಟ್ಟದ ದಿಡ್ಡಳ್ಳಿಯ ಪುನರ್ವಸತಿ ಕೇಂದ್ರದಲ್ಲಿರುವ ನಿರಾಶ್ರಿತ ಕುಟುಂಬದವರೊಂದಿಗೆ 2019ರ ಹೊಸ ವರ್ಷದ ಆಚರಣೆ ಮಾಡಿ ಮಾತನಾಡಿದ ಅವರು, ಇವರಲ್ಲಿರುವ ಕಲೆಯು ಈ ತಲೆ ಮಾರಿಗೆ ನಶಿಸಿ ಹೋಗದೇ ಮುಂದಿನ ತಲೆಮಾರಿಗೂ ಉಳಿಯಲು ಇಂದಿನ ಯುವ ಪೀಳಿಗೆಗೆ ತಂದೆ ತಾಯಂದಿರ ಮಾರ್ಗ ದರ್ಶನ ಅತಿಮುಖ್ಯವಾಗಿದೆ. ಅಲ್ಲದೇ ನಿರಾಶ್ರಿತ ಕೇಂದ್ರದಲ್ಲಿರುವ ಯುವಕ ಯುವ…
ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ ಚೇರಂಬಾಣೆಯಲ್ಲಿ ಪ್ರತಿಭಟನೆ
January 2, 2019ಮಡಿಕೇರಿ, ಜ.1- ಕೊಡಗು ಜಿಲ್ಲೆಯಲ್ಲಿ ಕಸ್ತೂರಿ ರಂಗನ್ ವರದಿ ವಿರೋಧಿಸಿ ಚೇರಂಬಾಣೆಯಲ್ಲಿ ಕಸ್ತೂರಿ ರಂಗನ್ ವರದಿ ವಿರೋಧಿ ಹೋರಾಟ ಸಮಿತಿ ವತಿಯಿಂದ ಬೃಹತ್ ಪ್ರತಿಭಟನಾ ಮೆರ ವಣಿಗೆ ನಡೆಸಲಾಯಿತು. ಮಡಿಕೇರಿ-ಭಾಗಮಂಡಲ ಮುಖ್ಯ ರಸ್ತೆ ಯಲ್ಲಿ ಮೆರವಣಿಗೆ ತೆರಳಿದ ಪ್ರತಿಭಟ ನಾಕಾರರು ಕಸ್ತೂರಿ ರಂಗನ್ ವರದಿ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು. ಜಿಲ್ಲೆಯ ಜನರ ವಿರೋಧವನ್ನು ಕಡೆಗ ಣಿಸಿ ವರದಿ ಜಾರಿಗೆ ಪ್ರಯತ್ನಿಸಿದ್ದಲ್ಲಿ ಮುಂದಿನ ದಿನಗಳಲ್ಲಿ ಮತ್ತಷ್ಟು ಉಗ್ರ ಹೋರಾಟ ನಡೆಸುವುದಾಗಿ ಬೆಳೆಗಾರರು ಮತ್ತು ಕೃಷಿಕರು ಎಚ್ಚರಿಕೆ ನೀಡಿದರು….
ಪೊನ್ನಂಪೇಟೆ ತಾಲೂಕಿಗಾಗಿ ಹೋರಾಟ: ಜ.7ರಂದು ಸಭೆ
January 2, 2019ಪೊನ್ನಂಪೇಟೆ: ಪೊನ್ನಂಪೇಟೆ ಯನ್ನು ತಾಲೂಕು ಕೇಂದ್ರವನ್ನಾಗಿ ಘೋಷಿ ಸುವಂತೆ ಸರ್ಕಾರದ ಮೇಲೆ ಒತ್ತಡ ತರುವ ಇಚ್ಚೆಯಿಂದ ಪೊನ್ನಂಪೇಟೆ ತಾಲೂಕು ಹೋರಾಟ ಸಮಿತಿ ಹಾಗೂ ನಾಗರಿಕ ವೇದಿಕೆ ನೇತೃತ್ವದಲ್ಲಿ ಜ.7ರಂದು ಸಭೆ ಕರೆಯಲಾಗಿದೆ. ಅಂದು ಬೆಳಗ್ಗೆ 11.30 ಗಂಟೆಗೆ ಪೊನ್ನಂ ಪೇಟೆ ಕೊಡವ ಸಮಾಜ ರಿಕ್ರಿಯೇಷನ್ ಕ್ಲಬ್ ಸಭಾಂಗಣದಲ್ಲಿ ಸಮಿತಿಯ ಗೌರ ವಾಧ್ಯಕ್ಷರೂ ಆದ ಶಾಸಕ ಕೆ.ಜಿ.ಬೋಪಯ್ಯ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದ್ದು, ಸಾರ್ವ ಜನಿಕರು ಪಾಲ್ಗೊಂಡು ಸಲಹೆ ಸೂಚನೆ ನೀಡುವಂತೆ ನಾಗರಿಕ ವೇದಿಕೆ ಹಾಗೂ ತಾಲೂಕು ಹೋರಾಟ ಸಮಿತಿ…
ಮಲೆತಿರಿಕೆ ಬೆಟ್ಟದಲ್ಲಿ ಅಯ್ಯಪ್ಪ ಉತ್ಸವ
January 2, 2019ವಿರಾಜಪೇಟೆ: ವಿರಾಜಪೇಟೆ ಮಲೆತಿರಿಕೆ ಬೆಟ್ಟದಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ವರ್ಷಂಪ್ರತಿಯಂತೆ ಡಿ.30 ರಿಂದ ಜನವರಿ 1ರ ತನಕ ಶ್ರಿ ಅಯ್ಯಪ್ಪ ಸ್ವಾಮಿ ಉತ್ಸವವು ಮೂರು ದಿನಗಳ ಕಾಲ ಹಾಗೂ ವಿಜೃಂಭಣೆಯಿಂದ ಜರುಗಿತು. ಜನವರಿ 1 ರಂದು ಮುಂಜಾನೆ 5.30 ಗಂಟೆಗೆ ಗಣಪತಿ ಹೋಮ ನಡೆದು ನಂತರ 9 ಗಂಟೆಯಿಂದ ತುಲಾಭಾರ, 10 ಗಂಟೆಗೆ ಅಯ್ಯಪ್ಪ ಸ್ವಾಮಿ ವ್ರತಾ ಧಾರಿಗಳಿಂದ ಲಕ್ಷಾರ್ಚನೆ, 12.45ಕ್ಕೆ ಮಹಾಪೂಜಾ ಸೇವೆ, ಪ್ರಸಾದ ವಿನಿಯೋಗದ ಬಳಿಕ ಅನ್ನಸಂತರ್ಪಣೆ ನಡೆಯಿತು. ರಾತ್ರಿ 7 ಗಂಟೆಗೆ…
ಮನ್ವಂತರದ ಸಂಭ್ರಮಕ್ಕೆ ಹರಿದುಬಂದ ಜನಸಾಗರ
January 1, 2019ಮಡಿಕೇರಿ: ಹೊಸ ವರ್ಷವನ್ನು ಸಂಭ್ರಮಿಸಲು ಕೊಡಗು ಜಿಲ್ಲೆಗೆ ಅತ್ಯಧಿಕ ಸಂಖ್ಯೆಯಲ್ಲಿ ಪ್ರವಾಸಿಗರ ಆಗಮನ ವಾಗಿದೆ. ಜಿಲ್ಲೆಯ ಪ್ರವಾಸಿತಾಣಗಳಲ್ಲಿ ಕಾಲಿಡಲು ಸ್ಥಳವಿಲ್ಲದ ರೀತಿಯಲ್ಲಿ ಪ್ರವಾಸಿ ಗರು ತುಂಬಿಕೊಂಡಿದ್ದರು. ಜಿಲ್ಲೆಯಲ್ಲಿ ಪ್ರಕೃತಿ ವಿಕೋಪ ಸಂಭವಿಸಿದ ಬಳಿಕ ಮಡಿ ಕೇರಿ ದಸರಾ ಉತ್ಸವ, ಶ್ರೀ ತಲಕಾವೇರಿ ತೀರ್ಥೋದ್ಭವವನ್ನು ಹೊರತುಪಡಿಸಿದರೆ ಡಿ.3ನೇ ವಾರದಿಂದ ಜಿಲ್ಲೆಯಲ್ಲಿ ಪ್ರವಾಸಿಗರು ಕಂಡು ಬಂದರು. ಕುಶಾಲನಗರದ ದುಬಾರೆ, ಗೋಲ್ಢನ್ ಟೆಂಪಲ್, ಕಾವೇರಿ ನಿಸರ್ಗಧಾಮ, ಮಡಿಕೇರಿಯ ಮಾಂದಲ್ ಪಟ್ಟಿ, ಅಬ್ಬಿಫಾಲ್ಸ್ ಮತ್ತು ನೈಸರ್ಗಿಕ ಸೌಂದರ್ಯದ ರಾಜಾಸೀಟ್‍ನಲ್ಲಿ ವರ್ಷಾಂತ್ಯದ ಕೊನೆಯ ದಿನದ…
ಮಡಿಕೇರಿಯಲ್ಲಿ ಯುವಕನ ಆತ್ಮಹತ್ಯೆ
January 1, 2019ಪೊಲೀಸರ ಕಿರುಕುಳ ಆರೋಪ; ಶವಾಗಾರದ ಮುಂದೆ ಪ್ರತಿಭಟನೆ ಮಡಿಕೇರಿ, ಡಿ.31- ಯುವಕನೋರ್ವ ನೇಣು ಹಾಕಿಕೊಂಡು ಆತ್ಮಹತೈ ಮಾಡಿ ಕೊಂಡ ಘಟನೆ ಪಟ್ಟಣದ ಮಂಗಳಾ ದೇವಿ ನಗರದಲ್ಲಿ ನಡೆದಿದೆ. ಅಲ್ಲಿನ ನಿವಾಸಿ ಬೆಂಗಳೂರಿನ ಖಾಸಗಿ ಸಂಸ್ಥೆಯ ಉದ್ಯೋಗಿಯಾಗಿದ್ದ ಜಯ ಕುಮಾರ್(24) ಎಂಬಾತನೇ ಸಾವಿಗೆ ಶರಣಾದ ಯುವಕ. ಯುವಕನ ಸಾವಿಗೆ ಪಿರಿಯಾಪಟ್ಟಣ ಪೊಲೀಸರು ನೀಡಿದ ಕಿರುಕುಳವೇ ಕಾರಣವೆಂದು ಆರೋಪಿಸಿದ ಯುವಕನ ಸಂಬಂಧಿಕರು ಮತ್ತು ದಲಿತ ಸಂಘಟನೆಗಳ ಪ್ರಮುಖರು, ಜಿಲ್ಲಾಸ್ಪತ್ರೆಯ ಶವಾಗಾರದ ಮುಂಭಾಗ ಕೆಲಕಾಲ ಪ್ರತಿ ಭಟನೆ ನಡೆಸಿದರು. ಕಿರುಕುಳ ನೀಡಿದ…
ವೀರಾಜಪೇಟೆಯಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿದ ಸ್ವಾಮಿ ಮಧುರೈವೀರನ್ ಆಲಯ ಪ್ರತಿಷ್ಠಾಪನೆ
January 1, 2019ವೀರಾಜಪೇಟೆ, ಡಿ.31- ವೀರಾಜಪೇಟೆ ತೆಲುಗರ ಬೀದಿಯಲ್ಲಿ ನೂತನವಾಗಿ ನಿರ್ಮಾಣಗೊಂಡ ಮಧುರೈವೀರನ್ ಸ್ವಾಮಿಯ ಆಲಯದ ಸಮರ್ಪಣಾ ಪ್ರತಿಷ್ಠಾಪನಾ ಮಹೋತ್ಸವವು ಶ್ರದ್ಧಾ ಭಕ್ತಿ ಹಾಗೂ ವಿಜೃಂಭಣೆಯಿಂದ ನಡೆಯಿತು. ಡಿ.24ರಂದು ಪ್ರಾರಂಭಗೊಂಡ ವಿನಾಯಗರ್ ಅನುಷ್ಠಾನಂ, ಕೊಡಿ ಏಟ್ರುವಿಳಾ, ಮಹಾಪೂಜಾ ಸೇವೆ, ಡಿ.25 ರಂದು ಪಂದಲ್ ನೆಡುಂ ವಿಳಾ, 26 ರಂದು ಪುಲಿಯಾಟ್ಟಂ ದೈವ ಆರಾಧನೈ ಉರುಮಿ ಮೇಳಂ, 27 ರಂದು ಕುಮ್ಮಿ ಪಾಟ್ಟು ವಿಳಾ, 28 ರಂದು ರಾತ್ರಿ 8 ಗಂಟೆಗೆ ಸಿಡಿಮದ್ದು ಪ್ರದರ್ಶನದ ಬಳಿಕ ಪೂಜಾ ಸೇವೆ, ಡಿ.29 ಸ್ವಾಮಿ…
ಅಪರಾಧ ತಡೆ ಮಾಸಾಚರಣೆ ಜಾಗೃತಿ ಜಾಥಾ
January 1, 2019ಸೋಮವಾರಪೇಟೆ, ಡಿ.31- ಪೊಲೀಸ್ ಠಾಣೆಯ ವತಿಯಿಂದ ಅಪರಾಧ ತಡೆ ಮಾಸಾಚರಣೆ ಅಂಗವಾಗಿ ಪಟ್ಟಣದಲ್ಲಿ ವಿವಿಧ ಶಾಲೆಯ ವಿದ್ಯಾರ್ಥಿಗಳು ಜಾಗೃತಿ ಜಾಥಾ ನಡೆಸಿದರು. ವೃತ್ತ ನಿರೀಕ್ಷಕ ನಂಜುಂಡೇಗೌಡ, ಠಾಣಾಧಿಕಾರಿ ಶಿವಶಂಕರ್, ಎಎಸ್‍ಐ ಪುಟ್ಟಪ್ಪ ನೇತೃತ್ವದಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಯಲ್ಲಿ ತೆರಳಿದ ವಿದ್ಯಾರ್ಥಿಗಳು ಅಪರಾಧ ತಡೆಯಲು ಸುರಕ್ಷಾ ಸಲಹೆಗಳ ಕರಪತ್ರಗಳನ್ನು ಹಂಚಿದರು. ಕಳ್ಳರಿಂದ ಬೆಲೆಬಾಳುವ ವಸ್ತುಗಳನ್ನು ಕಾಪಾಡಿಕೊಳ್ಳಲು ಮನೆಯ ಬಾಗಿಲು ಹಾಗೂ ಕಿಟಕಿಗಳನ್ನು ಭದ್ರಪಡಿಸಿಟ್ಟುಕೊಳ್ಳಬೇಕು. ರಾತ್ರಿ ಹೊರಹೋಗುವಾಗ ಮನೆಯೊಳಗಿನ ದೀಪಗಳು ಆರಿಸಬೇಡಿ. ಮನೆ ಕೆಲಸಗಾರರನ್ನು ನೇಮಿಸಿಕೊಳ್ಳುವಾಗ ಪೂರ್ಣವಿಳಾಸ ಮತ್ತು…










