ಮಂಡ್ಯ

ಅಸಮರ್ಪಕ ಮತದಾರರ ಪಟ್ಟಿ ಪರಿಷ್ಕರಣೆ ಖಂಡಿಸಿ: ಪ್ರತಿಭಟನೆ
ಮಂಡ್ಯ

ಅಸಮರ್ಪಕ ಮತದಾರರ ಪಟ್ಟಿ ಪರಿಷ್ಕರಣೆ ಖಂಡಿಸಿ: ಪ್ರತಿಭಟನೆ

June 2, 2018

ಮದ್ದೂರು:  ಪಟ್ಟಣದ ಪುರ ಸಭಾಧಿಕಾರಿಗಳು ಸ್ಥಳೀಯ ಸಂಸ್ಥೆ ಚುನಾವಣೆ ಮತಪಟ್ಟಿ ಪರಿಷ್ಕರಣೆಯನ್ನು ಸಮರ್ಪಕವಾಗಿ ಮಾಡಿಲ್ಲ ಎಂದು ಆರೋಪಿಸಿ ಭ್ರಷ್ಟಾಚಾರ ನಿರ್ಮೂಲನಾ ಸಂಘಟನೆ ಮತ್ತು ಜಯ ಕರ್ನಾಟಕ ಸಂಘಟನೆ ಕಾರ್ಯ ಕರ್ತರು ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ತಾಲೂಕು ಕಚೇರಿ ಎದುರು ಜಮಾ ಯಿಸಿದ ಕಾರ್ಯಕರ್ತರು ಪುರಸಭಾಧಿ ಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಭ್ರಷ್ಟಾಚಾರ ನಿರ್ಮೂಲನಾ ಸಂಘಟನೆ ಸಂಚಾಲಕಿ ಪ್ರಿಯಾಂಕ ಅಪ್ಪು ಪಿ.ಗೌಡ ಮಾತನಾಡಿ, ಸ್ಥಳೀಯ ಸಂಸ್ಥೆಗಳ ಚುನಾ ವಣೆ ನಡೆಯುವ ಹಿನ್ನೆಲೆಯಲ್ಲಿ…

ನಂದಿನಿ ಹಾಲನ್ನೇ ಬಳಸಿ ರೈತರಿಗೆ ನೆರವಾಗಿ
ಮಂಡ್ಯ

ನಂದಿನಿ ಹಾಲನ್ನೇ ಬಳಸಿ ರೈತರಿಗೆ ನೆರವಾಗಿ

June 2, 2018

ಮಂಡ್ಯ: ನಂದಿನಿ ಹಾಲನ್ನೇ ಬಳಸುವ ಮೂಲಕ ರೈತರಿಗೆ ನೆರವಾಗ ಬೇಕೆಂದು ಮನ್‍ಮುಲ್ ನಿರ್ದೇಶಕ ಎಸ್.ಪಿ.ಮಹೇಶ್ ತಿಳಿಸಿದರು. ವಿಶ್ವ ಹಾಲು ದಿನಾಚರಣೆ ಅಂಗವಾಗಿ ಮನ್‍ಮುಲ್ ವತಿಯಿಂದ ಜಿಲ್ಲಾಸ್ಪತ್ರೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ರೋಗಿಗಳಿಗೆ ಹಾಲು ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಶ್ವ ಹಾಲು ದಿನಾಚರಣೆ ಅಂಗ ವಾಗಿ ಜಿಲ್ಲಾ ಆಸ್ಪತ್ರೆ ರೋಗಿಗಳಿಗೆ ಹಾಲು ವಿತರಿಸಲಾಗುತ್ತಿದೆ. ಹಾಲು ಅತ್ಯಂತ ಪೌಷ್ಟಿಕಾಂಶವುಳ್ಳ ಸಮತೋಲನ ಆಹಾರ. ಪ್ರತಿಯೊಬ್ಬರೂ ನಂದಿನಿ ಹಾಲನ್ನು ಉಪಯೋಗಿಸುವಂತೆ ಕರೆ ನೀಡಿದರು. ನಂದಿನಿ ಉತ್ಪನ್ನಗಳನ್ನು ಉಪಯೋಗಿ ಸುವುದರಿಂದ ನಮ್ಮ ರೈತರಿಗೆ, ಹಾಲು ಉತ್ಪಾದಕರಿಗೆ…

ಅಘಲಯ ಪ್ರೌಢಶಾಲೆ ಮುಖ್ಯ ಶಿಕ್ಷಕರಿಗೆ ಬೀಳ್ಕೊಡುಗೆ
ಮಂಡ್ಯ

ಅಘಲಯ ಪ್ರೌಢಶಾಲೆ ಮುಖ್ಯ ಶಿಕ್ಷಕರಿಗೆ ಬೀಳ್ಕೊಡುಗೆ

June 2, 2018

ಅಘಲಯ:  ತಾಲೂಕಿನ ಅಘಲಯ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಎ.ರಂಗನಾಥ್ ಅವರನ್ನು ಶಾಲಾಭಿವೃದ್ಧಿ ಸಮಿತಿ ಮತ್ತು ಶಿಕ್ಷಕರ ವೃಂದ ಸನ್ಮಾನಿಸಿ, ಗೌರವಿಸುವ ಮೂಲಕ ಹೃದಯ ಸ್ಪರ್ಶಿ ಬೀಳ್ಕೊಡುಗೆ ನೀಡಲಾಯಿತು.ಈ ಸಂದರ್ಭ ಎಸ್‍ಡಿಎಂಸಿ ಅಧ್ಯಕ್ಷ ಹೊನ್ನೇಗೌಡ, ಶಿಕ್ಷಕರಾದ ಎಂ.ಪಿ.ಸೋಮ ನಾಥ್, ಶಂಕರ್, ಜಗದೀಶ್, ಉಮೇಶ್, ಜಯಲಕ್ಷ್ಮೀ, ನಿವೃತ್ತ ಶಿಕ್ಷಕ ನಂಜಪ್ಪ ಮತ್ತಿತರರು ಉಪಸ್ಥಿತರಿದ್ದು ಅಭಿನಂದನೆ ಸಲ್ಲಿಸಿದರು. ಅಭಿನಂದನೆ ಸ್ವೀಕರಿಸಿ ಮಾತನಾಡಿದ ಮುಖ್ಯ ಶಿಕ್ಷಕ ಎ.ರಂಗನಾಥ್, ಸರ್ಕಾರಿ ಸೇವೆ ಎಂಬುದು ದೇವರು ಕೊಟ್ಟ ವರ. ಸರ್ಕಾರಿ…

ವೇತನಕ್ಕಾಗಿ ಅರಣ್ಯ ಇಲಾಖಾ ದಿನಗೂಲಿಗಳ ಮುಷ್ಕರ ಆರಂಭ
ಮಂಡ್ಯ

ವೇತನಕ್ಕಾಗಿ ಅರಣ್ಯ ಇಲಾಖಾ ದಿನಗೂಲಿಗಳ ಮುಷ್ಕರ ಆರಂಭ

June 2, 2018

ಮಂಡ್ಯ:  ಸೇವೆ ಖಾಯಂ ಮ್ಮಾತಿ ಸೇರಿದಂತೆ ವೇತನಕ್ಕಾಗಿ ಆಗ್ರಹಿಸಿ ಮಂಡ್ಯ ಅರಣ್ಯ ಇಲಾಖೆ ದಿನಗೂಲಿ ನೌಕರರು ಇಂದಿನಿಂದ ಅನಿರ್ದಿಷ್ಟಾವಧಿ ಪ್ರತಿಭಟನಾ ಧರಣ ಆರಂಭಿಸಿದ್ದಾರೆ.ಮಂಡ್ಯ ಅರಣ್ಯ ಇಲಾಖೆ ಎದುರೇ ದಿನಗೂಲಿ ನೌಕರರ ಸಂಘದ ನೇತೃತ್ವದಲ್ಲಿ ದಿನಗೂಲಿ ನೌಕರರು ಪ್ರತಿಭಟನಾ ಧರಣ ಆರಂಭಿಸಿದ್ದಾರೆ. ಇಂದು ಬೆಳಿಗ್ಗೆ ಧರಣ ಆರಂಭಿಸಿದ ಪ್ರತಿಭಟನಾಕಾರರು ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಉಪ ಸಮಿತಿ ವರದಿ ಜಾರಿಗೊಳಿಸುವುದರ ಮೂಲಕ ದಿನಗೂಲಿ ನೌಕರರನ್ನು ಖಾಯಂಗೊಳಿ ಸಬೇಕು, ಅಧಿಕಾರಿಗಳ ಶೋಷಣೆ, ಆಡಳಿತ ಯಂತ್ರ…

ರಾಸುಗಳಿಗೆ ಕಾಲುಬಾಯಿ ಜ್ವರದ ಲಸಿಕೆ ಹಾಕಿಸಿ
ಮಂಡ್ಯ

ರಾಸುಗಳಿಗೆ ಕಾಲುಬಾಯಿ ಜ್ವರದ ಲಸಿಕೆ ಹಾಕಿಸಿ

June 2, 2018

ಚಿನಕುರುಳಿ:  ಪಶು ಸಂಗೋಪನಾ ಇಲಾಖೆ ವತಿಯಿಂದ ಹಾಕುವ ಕಾಲುಬಾಯಿ ಜ್ವರದ ಲಸಿಕೆಯನ್ನು ರಾಸುಗಳಿಗೆ ಕಡ್ಡಾಯವಾಗಿ ಹಾಕಿಸುವಂತೆ ಜಿಪಂ ಸದಸ್ಯ ಸಿ.ಅಶೋಕ್ ಮನವಿ ಮಾಡಿದರು. ಚಿನಕುರಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಎದುರು ಆಯೋಜಿ ಸಿದ್ದ 14ನೇ ಸುತ್ತಿನ ಕಾಲುಬಾಯಿ ಜ್ವರದ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ರಾಸು ಗಳಿಗೆ ಲಸಿಕೆ ಹಾಕುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ತಾಲೂಕಿ ನಾದ್ಯಂತ 35 ಸಾವಿರ ಹಸುಗಳು, 8,500 ಎಮ್ಮೆಗಳು ಹಾಗೂ 650 ಹಂದಿಗಳಿಗೆ ಲಸಿಕೆ ಹಾಕುವ ಗುರಿ…

ತಪ್ಪಿತಸ್ಥರ ವಿರುದ್ಧ ಕ್ರಮದ ಭರವಸೆ ನೀಡಿದ ಅರಣ್ಯಾಧಿಕಾರಿ
ಮಂಡ್ಯ

ತಪ್ಪಿತಸ್ಥರ ವಿರುದ್ಧ ಕ್ರಮದ ಭರವಸೆ ನೀಡಿದ ಅರಣ್ಯಾಧಿಕಾರಿ

June 2, 2018

ಮೇಲುಕೋಟೆ:  ಶತಮಾನದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಜಮೀನಿನಲ್ಲಿ ಬೆಳೆದಿದ್ದ ನೀಲಗಿರಿ ಮರಗಳನ್ನು ಅಕ್ರಮವಾಗಿ ಕಡಿದು ಸಾಗಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲಾಖೆಯ ಕಾನೂನಿ ನಂತೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಮೇಲುಕೋಟೆ ಉಪವಲಯ ಅರಣ್ಯಾಧಿಕಾರಿ ಜೀತ್ ಭರವಸೆ ನೀಡಿದರು. ಯದುಶೈಲಾ ಪ್ರೌಢಶಾಲೆಯ ಆಡಳಿತ ಮಂಡಳಿ ಕಾರ್ಯದರ್ಶಿ ಕೆ.ಬಿ.ನರಸಿಂಹೇಗೌಡ ಅವರು ಸರ್ಕಾರಿ ಶಾಲಾ ಜಮೀನಿಗೆ ಅತಿಕ್ರಮ ಪ್ರವೇಶ ಮಾಡಿ ನೀಲಗಿರಿ ಮರಗಳನ್ನು ಅಕ್ರಮವಾಗಿ ಕಡಿದು ಸಾಗಾಟ ಮಾಡಿದ್ದಾರೆ ಎಂದು ಮುಖ್ಯ ಶಿಕ್ಷಕ ಜವರೇಗೌಡ ನೀಡಿದ ದೂರಿನ ಸಂಬಂಧ ಪಾಂಡವಪುರ…

ವಿಷ ಸೇವಿಸಿ ಚಿಕಿತ್ಸೆಗೆ ದಾಖಲಾಗಿದ್ದ ಮೆಡಿಕಲ್ ವಿದ್ಯಾರ್ಥಿನಿ ಸಾವು
ಮಂಡ್ಯ

ವಿಷ ಸೇವಿಸಿ ಚಿಕಿತ್ಸೆಗೆ ದಾಖಲಾಗಿದ್ದ ಮೆಡಿಕಲ್ ವಿದ್ಯಾರ್ಥಿನಿ ಸಾವು

June 1, 2018

ಮಂಡ್ಯ:  ವಿಷಸೇವಿಸಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ ಯುವ ತಿಯ ಮೃತದೇಹ ಪಡೆಯುವ ವಿಷಯ ದಲ್ಲಿ ಆಸ್ಪತ್ರೆ ಸಿಬ್ಬಂದಿ, ಪೊಲೀಸರು ಮತ್ತು ಗ್ರಾಮಸ್ಥರ ನಡುವೆ ತಳ್ಳಾಟ, ನೂಕಾಟ, ಮಾತಿನ ಚಕಮಕಿ ನಡೆದಿರುವ ಘಟನೆ ನಗರದ ಹೊರ ವಲಯದ ಸಾಂಜೋ ಆಸ್ಪತ್ರೆಯಲ್ಲಿಂದು ನಡೆದಿದೆ. ಮದ್ದೂರು ತಾಲೂಕಿನ ಲಕ್ಷ್ಮೇಗೌಡನ ದೊಡ್ಡಿಯ ಮಂಚೇಗೌಡರ ಪುತ್ರಿ ಭವ್ಯಾ (19) ಎಂಬ ಯುವತಿಯ ಶವ ಪಡೆ ಯುವ ವಿಚಾರದಲ್ಲೇ ಈ ಘಟನೆ ನಡೆದಿದೆ. ಮಂಡ್ಯದ ಮಿಮ್ಸ್‍ನಲ್ಲಿ ಪ್ಯಾರ ಮೆಡಿಕಲ್ ನಲ್ಲಿ ವ್ಯಾಸಂಗ ಮಾಡುತ್ತಿದ್ದ ಲಕ್ಷ್ಮೇಗೌಡ ನದೊಡ್ಡಿ…

ಬೆಳೆ ನಷ್ಟ ಪರಿಹಾರ ನೀಡಿ: ಡಿಸಿ ಸೂಚನೆ
ಮಂಡ್ಯ

ಬೆಳೆ ನಷ್ಟ ಪರಿಹಾರ ನೀಡಿ: ಡಿಸಿ ಸೂಚನೆ

June 1, 2018

ಮಂಡ್ಯ:  ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ಬೆಳೆ ನಷ್ಟ ಪರಿಹಾರಕ್ಕೆ ಅರ್ಜಿ ಸಲ್ಲಿಸಿರುವ ರೈತರಿಗೆ ಶೀಘ್ರವಾಗಿ ವಿಮಾ ಹಣ ನೀಡಲು ವಿಮಾ ಸಂಸ್ಥೆ ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿ ಎನ್.ಮಂಜುಶ್ರೀ ತಿಳಿಸಿದರು. ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಬೆಳೆ ವಿಮಾ ಯೋಜನೆ ಉಸ್ತುವಾರಿ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯ ಬೆಳೆ ವಿಮಾ ಸಂಸ್ಥೆಯಾಗಿ ಕಾರ್ಯ ನಿರ್ವಹಿಸುತ್ತಿರುವ…

ಸಾಲಮನ್ನಾಕ್ಕೆ ಆಗ್ರಹಿಸಿ ಮಿನಿ ವಿಧಾನಸೌಧಕ್ಕೆ ಮುತ್ತಿಗೆ
ಮಂಡ್ಯ

ಸಾಲಮನ್ನಾಕ್ಕೆ ಆಗ್ರಹಿಸಿ ಮಿನಿ ವಿಧಾನಸೌಧಕ್ಕೆ ಮುತ್ತಿಗೆ

June 1, 2018

ಕೆ.ಆರ್.ಪೇಟೆ:  ಸ್ತ್ರೀಶಕ್ತಿ ಸಂಘ ಗಳ ಸಾಲಮನ್ನಾ ಮಾಡಬೇಕೆಂದು ಆಗ್ರಹಿಸಿ ಪಟ್ಟಣದ ಸ್ತ್ರೀಶಕ್ತಿ ಮಹಿಳಾ ಸ್ವ ಸಹಾಯ ಸಂಘಗಳ ಸದಸ್ಯರು ಪಟ್ಟಣದ ಮಿನಿ ವಿಧಾನ ಸೌಧಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ವಿಶ್ವಭಾರತಿ ಮಹಿಳಾ ಸಂಘದ ಅಧ್ಯಕ್ಷೆ ವನಜಾಕ್ಷಿ ಮಾತನಾಡಿ, ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಚುನಾ ವಣೆಗೂ ಮುನ್ನಾ ಪ್ರಚಾರದ ವೇಳೆ ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ತಾವು ಮುಖ್ಯಮಂತ್ರಿ ಯಾದ 24 ಗಂಟೆಯೊಳಗೆ ರಾಜ್ಯದ ಎಲ್ಲಾ ಸ್ತ್ರೀಶಕ್ತಿ ಸಂಘಗಳ ಸಾಲ ಮನ್ನಾ ಮಾಡು ವುದಾಗಿ ತಿಳಿಸಿದ್ದರು. ಹೀಗಾಗಿ ಅವರ…

ತಂಬಾಕು ತ್ಯಜಿಸಿ ಆರೋಗ್ಯಯುತ ಜೀವನ ನಡೆಸಿ
ಮಂಡ್ಯ

ತಂಬಾಕು ತ್ಯಜಿಸಿ ಆರೋಗ್ಯಯುತ ಜೀವನ ನಡೆಸಿ

June 1, 2018

ಮದ್ದೂರು: ತಂಬಾಕು ಸೇವನೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದರಿಂದ, ತಂಬಾಕು ತ್ಯಜಿಸಿ ಆರೋಗ್ಯ ಯುತ ಜೀವನ ನಡೆಸುವಂತೆ ಹಿರಿಯ ಸಿವಿಲ್ ನ್ಯಾ.ಆರ್.ಪಿ.ಗೌಡ ಸಲಹೆ ನೀಡಿದರು. ಪಟ್ಟಣದ ವಕೀಲರ ಭವನದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ವಿಶ್ವ ತಂಬಾಕು ವಿರೋಧಿ ದಿನಾಚರಣೆ ಅಂಗವಾಗಿ ನಡೆದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ತಂಬಾಕು ಸೇವಿಸುವ ವ್ಯಕ್ತಿ ತಾನು ಆರೋಗ್ಯ ಹಾಳು ಮಾಡಿಕೊಳ್ಳುವ ಜೊತೆಗೆ ತನ್ನ ಜೊತೆ…

1 102 103 104 105 106 108
Translate »