ಮಂಡ್ಯ

ತಾಲೂಕು ಕಚೇರಿ ಎದುರು ರೈತರ ಪ್ರತಿಭಟನೆ
ಮಂಡ್ಯ

ತಾಲೂಕು ಕಚೇರಿ ಎದುರು ರೈತರ ಪ್ರತಿಭಟನೆ

May 30, 2018

ಮದ್ದೂರು: ಪಟ್ಟಣದ ತಾಲೂಕು ಕಚೇರಿಯಲ್ಲಿ ರೈತರ ಹಾಗೂ ಜನಸಾಮಾನ್ಯರ ಕೆಲಸಗಳು ಸಮ ರ್ಪಕವಾಗಿ ಆಗುತ್ತಿಲ್ಲವೆಂದು ಆರೋಪಿಸಿ ರೈತರು ಮಂಗಳವಾರ ಪ್ರತಿಭಟನೆ ನಡೆಸಿದರು.ತಾಲೂಕು ಕಚೇರಿ ಎದುರು ಜಮಾ ಯಿಸಿದ ರೈತರು, ಇಲ್ಲಿನ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ರೈತ ಮುಖಂಡ ಪುಟ್ಟಸ್ವಾಮಿ ಮಾತ ನಾಡಿ, ತಾಲೂಕು ಕಚೇರಿಯಲ್ಲಿ ಖಾತೆ ಬದಲಾವಣೆ, ಆರ್‍ಟಿಸಿ, ಪಡಿತರ ಚೀಟಿ ವಿತರಣೆ, ಒತ್ತುವರಿ ತೆರವು ಸೇರಿದಂತೆ ಇನ್ನಿತರ ಕೆಲಸಗಳು ತ್ವರಿತವಾಗಿ ನಡೆ ಯುತ್ತಿಲ್ಲ. ಇದರಿಂದ ನಿತ್ಯ ರೈತರು ಹಾಗೂ ಸಾರ್ವಜನಿಕರು ತಮ್ಮ…

ಸುಹೇಲ್‍ಗೆ ಗ್ರ್ಯಾಂಡ್ ಅವಾರ್ಡ್ ಪ್ರಶಸ್ತಿ
ಮಂಡ್ಯ

ಸುಹೇಲ್‍ಗೆ ಗ್ರ್ಯಾಂಡ್ ಅವಾರ್ಡ್ ಪ್ರಶಸ್ತಿ

May 30, 2018

ಮಂಡ್ಯ: ಅಮೆರಿಕಾದಲ್ಲಿ ಇತ್ತೀಚೆಗೆ ನಡೆದ ಅಂತಾರಾಷ್ಟ್ರೀಯ ವಿಜ್ಞಾನ ಸ್ಪರ್ಧೆಯಲ್ಲಿ ಶ್ರೀರಂಗಪಟ್ಟಣದ ಸಿ.ಎಸ್.ಮೊಹಮ್ಮದ್ ಸುಹೇಲ್ ತಂಡಕ್ಕೆ ಎರಡನೇ ಗ್ರ್ಯಾಂಡ್ ಅವಾರ್ಡ್ ಪ್ರಶಸ್ತಿ ದೊರಕಿದೆ ಎಂದು ಸುಹೇಲ್ ತಂದೆ ಅನಾರ್ಕಲಿ ಸಲೀಂ ತಿಳಿಸಿದರು. ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಅಮೆರಿಕಾದ ಪಿಟ್ಸ್‍ಬರ್ಗ್‍ನಲ್ಲಿ ಮೇ 13 ರಿಂದ 18ರವರೆಗೆ ನಡೆದ ಅಂತಾರಾಷ್ಟ್ರೀಯ ವಿಜ್ಞಾನ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಮಂಗಳೂರಿನ ಸೆಂಟ್ ಅಲೋಷಿಯಸ್ ಕಾಲೇಜಿನ ವಿದ್ಯಾರ್ಥಿ ಶ್ರೀರಂಗಪಟ್ಟಣದ ಸಿ.ಎಸ್‍ಮೊಹಮ್ಮದ್ ಸುಹೇಲ್ ಮತ್ತು ಪುತ್ತೂರಿನ ವಿವೇಕಾ ನಂದ ಕಾಲೇಜಿನ ಸ್ವಸ್ತಿಕ್ ಪದ್ಮ…

ಮದುವೆಯಾಗಲು ವಿದ್ಯಾರ್ಥಿನಿ ಅಪಹರಣ
ಮಂಡ್ಯ

ಮದುವೆಯಾಗಲು ವಿದ್ಯಾರ್ಥಿನಿ ಅಪಹರಣ

May 30, 2018

ಮೇಲುಕೋಟೆ:  ವಿವಾಹ ವಾಗುವಂತೆ ಪೀಡಿಸುತ್ತಿದ್ದ ಯುವಕ ಮತ್ತು ಆತನ ಸ್ನೇಹಿತರಿಂದ ಅಪಹರಣ ಕ್ಕೊಳಗಾಗಿದ್ದ ವಿದ್ಯಾರ್ಥಿನಿಯೋರ್ವಳು ತನ್ನ ಜಾಣ್ಮೆಯಿಂದ ತಪ್ಪಿಸಿಕೊಂಡು ಬಂದು ಪೋಷಕರ ಸಹಾಯದಿಂದ ಮೇಲುಕೋಟೆ ಪೊಲೀಸ್ ಠಾಣೆಗೆ ದೂರು ನೀಡಿರುವ ಘಟನೆ ಮಂಗಳ ವಾರ ನಡೆದಿದೆ. ಸಿಂಗ್ರೀಗೌಡನಕೊಪ್ಪಲು ಗ್ರಾಮದ ನಿವಾಸಿ, ಮೈಸೂರಿನ ಮಹಾರಾಣ ಕಾಲೇಜಿನ ಅಂತಿಮ ಬಿಎಸ್ಸಿ ವಿದ್ಯಾರ್ಥಿನಿ ಅಪಹರಣ ಕಾರರಿಂದ ತಪ್ಪಿಸಿಕೊಂಡು ಬಂದ ಯುವತಿ. ಈಕೆಯನ್ನು ಬಹು ದಿನಗಳಿಂದ ವಿವಾಹವಾಗುವಂತೆ ಪೀಡಿಸುತ್ತಿದ್ದ ನರಹಳ್ಳಿ ಗ್ರಾಮದ ಯುವಕ ಕುಮಾರ್ ಅಲಿಯಾಸ್ ಕುಡುಕ ಮತ್ತು ಆತನ ಮೂವರು ಸ್ನೇಹಿತರು…

ನಟ, ಮಾಜಿ ಸಚಿವ ಅಂಬರೀಶ್ ಹುಟ್ಟುಹಬ್ಬ ಆಚರಣೆ
ಮಂಡ್ಯ

ನಟ, ಮಾಜಿ ಸಚಿವ ಅಂಬರೀಶ್ ಹುಟ್ಟುಹಬ್ಬ ಆಚರಣೆ

May 30, 2018

ಮಂಡ್ಯ: ಮಂಡ್ಯದಲ್ಲಿ ರೆಬೆಲ್‍ಸ್ಟಾರ್ ಅಂಬರೀಶ್ ಹುಟ್ಟುಹಬ್ಬ ವನ್ನು ಸಂಭ್ರಮದಿಂದ ಆಚರಿಸುತ್ತಿರುವ ಅಭಿಮಾನಿಗಳು ಅಂಬರೀಶ್ ಮತ್ತೆ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಳ್ಳ ಬೇಕೆಂದು ಮನವಿ ಮಾಡಿದರು. ನಗರದ ಗಾಂಧಿ ಪಾರ್ಕ್‍ನಲ್ಲಿ, ಅಂಬ ರೀಶ್ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ಬೇಲೂರು ಸೋಮಶೇಖರ್ ನೇತೃತ್ವದಲ್ಲಿ ಅಂಬಿ ಹುಟ್ಟುಹಬ್ಬವನ್ನು ಆಚರಿಸಲಾಯಿತು. ಅಭಿಮಾನಿಗಳು ಅಂಬಿ ಕಟೌಟ್‍ಗೆ ಅರಿಶಿಣ, ಕುಂಕುಮ, ಹಾಲಿನ ಅಭಿಷೇಕ ಮಾಡಿದರು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಿ, ಸಿಹಿ ಹಂಚಿ ಸಂಭ್ರಮಿಸಿದರು. ಹುಟ್ಟು ಹಬ್ಬದ ಸಂಭ್ರಮದ ನಡುವೆಯೇ ಅಂಬಿ ರಾಜಕೀಯ ನಿವೃತ್ತಿ ಬಗ್ಗೆ ಅಭಿಮಾನಿಗಳು…

ಕೆ.ಆರ್.ಪೇಟೆ, ಮದ್ದೂರಲ್ಲಿ ಗ್ರಾಪಂ ನೌಕರರಿಂದ ತಾಪಂಗೆ ಮುತ್ತಿಗೆ
ಮಂಡ್ಯ

ಕೆ.ಆರ್.ಪೇಟೆ, ಮದ್ದೂರಲ್ಲಿ ಗ್ರಾಪಂ ನೌಕರರಿಂದ ತಾಪಂಗೆ ಮುತ್ತಿಗೆ

May 29, 2018

ಮಂಡ್ಯ:  ಗ್ರಾಪಂ ನೌಕರರ ವೇತನವನ್ನು ಇ- ಪಾವತಿ ಮೂಲಕ ಅನು ಷ್ಠಾನಗೊಳಿಸುವಂತೆ ಒತ್ತಾಯಿಸಿ ಹಾಗೂ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಗ್ರಾಪಂ ನೌಕರರು ಮದ್ದೂರು ಮತ್ತು ಕೆ.ಆರ್.ಪೇಟೆಗಳಲ್ಲಿ ತಾಪಂಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಕೆ.ಆರ್.ಪೇಟೆ: ಗ್ರಾಪಂ ನೌಕರರ ವೇತನ ವನ್ನು ಇ- ಪಾವತಿ ಮೂಲಕ ಅನುಷ್ಠಾನ ಗೊಳಿಸುವಂತೆ ಒತ್ತಾಯಿಸಿ ಗ್ರಾಪಂ ನೌಕರರು ತಾಪಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿ ಭಟನೆ ನಡೆಸಿದರು. ತಾಲೂಕು ಅಧ್ಯಕ್ಷ ಮೋದೂರು ನಾಗ ರಾಜು ಮಾತನಾಡಿ, ಸರ್ಕಾರ ಗ್ರಾಪಂ ನೌಕರರಿಗೆ ಮಾಸಿಕ…

ಜಿಲ್ಲಾದ್ಯಂತ ಕರ್ನಾಟಕ ಬಂದ್ ಸಂಪೂರ್ಣ ವಿಫಲ
ಮಂಡ್ಯ

ಜಿಲ್ಲಾದ್ಯಂತ ಕರ್ನಾಟಕ ಬಂದ್ ಸಂಪೂರ್ಣ ವಿಫಲ

May 29, 2018

ಮಂಡ್ಯ: ರೈತರ ಸಾಲ ಮನ್ನಾಕ್ಕೆ ಆಗ್ರಹಿಸಿ ಬಿಜೆಪಿ ಕರೆ ನೀಡಿದ್ದ ಕರ್ನಾಟಕ ಬಂದ್ ಮಂಡ್ಯ ಜಿಲ್ಲಾದ್ಯಂತ ಸಂಪೂರ್ಣ ವಿಫಲವಾಗಿದೆ. ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿ ಸಿದ ಹೆಚ್.ಡಿ.ಕುಮಾರಸ್ವಾಮಿ ಅವರು ರೈತರ ಸಾಲ ಮನ್ನಾ ಬಗ್ಗೆ ದ್ವಂದ್ವ ಹೇಳಿಕೆ ನೀಡುತ್ತಿರುವ ಹಿನ್ನೆಲೆಯಲ್ಲಿ ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ಬಂದ್‍ಗೆ ಕರೆ ನೀಡಿದ್ದರು. ಹೀಗಾಗಿ ಸೋಮ ವಾರ ನಡೆದ ರಾಜ್ಯ ಬಂದ್‍ಗೆ ಯಾವುದೇ ಸಂಘಟನೆ ಬೆಂಬಲ ಸೂಚಿಸದ ಹಿನ್ನೆಲೆ ಯಲ್ಲಿ ಬಂದ್‍ಗೆ ನೀರಸ ಪ್ರತಿಕ್ರಿಯೆ ವ್ಯಕ್ತ ವಾಗಿದೆ. ಮಂಡ್ಯ, ಮದ್ದೂರು, ಮಳವಳ್ಳಿ,…

ಮಂಡ್ಯ

ಸಮ್ಮಿಶ್ರ ಸರ್ಕಾರ 5 ವರ್ಷ ಪೂರೈಸಲಿದೆ: ಎಚ್.ವಿಶ್ವನಾಥ್ ಭವಿಷ್ಯ

May 29, 2018

ಕೆ.ಆರ್.ಪೇಟೆ: ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಯಶಸ್ವಿಯಾಗಿ ಐದು ವರ್ಷ ಪೂರೈಸಲಿದೆ ಎಂದು ಹುಣಸೂರು ಶಾಸಕ ಹೆಚ್. ವಿಶ್ವನಾಥ್ ಭವಿಷ್ಯ ನುಡಿದರು. ತಾಲೂಕಿನ ಭೂವರಹನಾಥಸ್ವಾಮಿ ದೇವ ಸ್ಥಾನಕ್ಕೆ ದಂಪತಿ ಸಮೇತ ಆಗಮಿಸಿ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಕುಮಾರ ಸ್ವಾಮಿ ಅವರು ಪ್ರಣಾಳಿಕೆಯಲ್ಲಿ ಘೋಷಿಸಿರು ವಂತೆ ರೈತರ ಸಂಪೂರ್ಣ ಸಾಲ ಮನ್ನಾ ಮಾಡಲಿದ್ದಾರೆ. ಸಮ್ಮಿಶ್ರ ಸರ್ಕಾರವಾಗಿ ರುವುದರಿಂದ ಸಾಲ ಮನ್ನಾಕ್ಕೆ ಸಮಯ ತೆಗೆದುಕೊಳ್ಳಲಿದೆ. ವಿರೋಧ ಪಕ್ಷದ ನಾಯಕ ಮಾಜಿ ಸಿಎಂ ಯಡಿಯೂರಪ್ಪ ಹೋರಾಟ ಗಾರರು. ಅವರ…

ಕರ್ನಾಟಕ ನವನಿರ್ಮಾಣ ಸೇನೆ ಪ್ರತಿಭಟನೆ
ಮಂಡ್ಯ

ಕರ್ನಾಟಕ ನವನಿರ್ಮಾಣ ಸೇನೆ ಪ್ರತಿಭಟನೆ

May 29, 2018

ಮಂಡ್ಯ: ಕೇರಳ ಸರ್ಕಾರ ಕಾಸರಗೋಡಿನಲ್ಲಿ ವಿನಾಕಾರಣ ಮಲೆ ಯಾಳಂ ಭಾಷಾ ಮಸೂದೆ ಜಾರಿಗೆ ತಂದು ಕನ್ನಡ ಶಾಲೆಯ ಮಕ್ಕಳು ಬಲವಂತವಾಗಿ ಮಲೆಯಾಳಂ ಕಲಿಯಲು ಒತ್ತಾಯಿಸು ತ್ತಿರುವ ಕ್ರಮ ಖಂಡಿಸಿ ಕರ್ನಾಟಕ ನವ ನಿರ್ಮಾಣ ಸೇನೆ ಕಾರ್ಯಕರ್ತರು ನಗರದ ಲ್ಲಿಂದು ಪ್ರತಿಭಟನೆ ನಡೆಸಿದರು. ಇಂದು ಬೆಳಿಗ್ಗೆ ನಗರದ ಸರ್.ಎಂ.ವಿಶ್ವೇ ಶ್ವರಯ್ಯ ಪ್ರತಿಮೆ ಬಳಿ ಸಮಾವೇಶಗೊಂಡ ಪ್ರತಿಭಟನಾಕಾರರು, ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ಜಿಲ್ಲಾಧ್ಯಕ್ಷ ನವೀನ್‍ಗೌಡ ಮಾತನಾಡಿ, ಕಾಸರಗೋಡು ಕನ್ನಡಿಗರು ನಿತ್ಯ ನರಕ ಅನುಭವಿಸುತ್ತಿದ್ದಾರೆ. ಕಳೆದ 75 ವರ್ಷ…

ಯೋಗಾನರಸಿಂಹಸ್ವಾಮಿಗೆ ಸೌರಮಾನ ಜಯಂತ್ಯುತ್ಸವ
ಮಂಡ್ಯ

ಯೋಗಾನರಸಿಂಹಸ್ವಾಮಿಗೆ ಸೌರಮಾನ ಜಯಂತ್ಯುತ್ಸವ

May 29, 2018

ಮೇಲುಕೋಟೆ: ಪ್ರಖ್ಯಾತ ನಾರಸಿಂಹನ ಕ್ಷೇತ್ರವಾದ ಮೇಲುಕೋಟೆಯ ಬೆಟ್ಟದ ಯೋಗಾನರಸಿಂಹಸ್ವಾಮಿ ದೇವಾ ಲಯದಲ್ಲಿ ಸೋಮವಾರ ಸೌರಮಾನ ನರಸಿಂಹ ಜಯಂತ್ಯುತ್ಸವ ಸಡಗರ ಸಂಭ್ರಮದಿಂದ ನಡೆಯಿತು. ಬೆಳಿಗ್ಗೆ 10 ಗಂಟೆಗೆ ಮಹಾಭಿಷೇಕ ದೊಂದಿಗೆ ಆರಂಭವಾದ ನರಸಿಂಹಸ್ವಾಮಿ ಜಯಂತಿ ಕಾರ್ಯಕ್ರಮ ಸಂಜೆ 6 ಗಂಟೆಗೆ ಮುಕ್ತಾಯವಾಯಿತು. 12 ಮಂದಿ ಶ್ರೀವೈಷ್ಣವ ಆಳ್ವಾರ್‍ಗಳಲ್ಲಿ ಪ್ರಮುಖರಾದ ನಮ್ಮಾಳ್ವಾರ್ ತಿರುನಕ್ಷತ್ರ ಮಹೋತ್ಸವ ಸಹ ಇದೇ ದಿನ ಇದ್ದ ಕಾರಣ ಆಳ್ವಾರರಿಗೆ ಬೆಳಿಗ್ಗೆ ವಾಹನೋ ತ್ಸವ, ಅಭಿಷೇಕ, ನಡೆದು ದಿವ್ಯ ಪ್ರಬಂಧ ಪಾರಾಯಣ ನಂತರ ನರಸಿಂಹಸ್ವಾಮಿ ಬೆಟ್ಟದಲ್ಲಿ ವಿಶೇಷ…

ಸಿಎಂರಿಂದಲೇ ಮೇಲುಕೋಟೆ ಕಾಂಗ್ರೆಸ್ ಮುಕ್ತ ಜೆಡಿಎಸ್ ಅಭ್ಯರ್ಥಿ, ಸಂಸದ ಸಿ.ಎಸ್.ಪುಟ್ಟರಾಜು ಲೇವಡಿ
ಮಂಡ್ಯ

ಸಿಎಂರಿಂದಲೇ ಮೇಲುಕೋಟೆ ಕಾಂಗ್ರೆಸ್ ಮುಕ್ತ ಜೆಡಿಎಸ್ ಅಭ್ಯರ್ಥಿ, ಸಂಸದ ಸಿ.ಎಸ್.ಪುಟ್ಟರಾಜು ಲೇವಡಿ

May 3, 2018

ಪಾಂಡವಪುರ: ಸಿಎಂ ಸಿದ್ದರಾಮಯ್ಯ ಮೇಲುಕೋಟೆ ಕ್ಷೇತ್ರವನ್ನು ಕಾಂಗ್ರೆಸ್ ಮುಕ್ತ ಮಾಡಲು ತೀರ್ಮಾನಿಸಿ ದ್ದಾರೆ ಎಂದು ಜೆಡಿಎಸ್ ಅಭ್ಯರ್ಥಿ, ಸಂಸದ ಸಿ.ಎಸ್.ಪುಟ್ಟರಾಜು ಲೇವಡಿ ಮಾಡಿದರು. ಪಟ್ಟಣದ ಟಿಎಪಿಸಿಎಂಎಸ್ ಸಭಾಂಗಣ ದಲ್ಲಿ ರೈತಸಂಘ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಜೆಡಿಎಸ್ ಸೇರ್ಪಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಈ ಚುನಾವಣೆ ಯಲ್ಲಿ ಮೇಲುಕೋಟೆ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಹಾಕದೇ ಇಲ್ಲಿನ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡ ರನ್ನು ತಬ್ಬಲಿ ಮಾಡಿದ್ದಾರೆ. ಆದರೆ ನಾನು ಅವರನ್ನು ತಬ್ಬಲಿ ಮಾಡಲು ಬಿಡುವು ದಿಲ್ಲ….

1 104 105 106 107 108
Translate »