ಮಂಡ್ಯ

ಪರಭಾಷಿಕರಿಗೂ ಕನ್ನಡ ಕಲಿಕೆಯ ವಾತಾವರಣ ಸೃಷ್ಟಿಸಿ
ಮಂಡ್ಯ

ಪರಭಾಷಿಕರಿಗೂ ಕನ್ನಡ ಕಲಿಕೆಯ ವಾತಾವರಣ ಸೃಷ್ಟಿಸಿ

November 29, 2018

ಕೆ.ಆರ್.ಪೇಟೆ: ಕರ್ನಾಟಕ ರಾಜ್ಯಕ್ಕೆ ಬರುವ ಪರಭಾಷಿಕರಿಗೆ ಕನ್ನಡ ಕಲಿಯದೇ ಇದ್ದರೆ, ಇಲ್ಲಿ ಉಳಿಗಾಲವಿಲ್ಲ ಎಂಬ ವಾತಾವರಣವನ್ನು ಸೃಷ್ಟಿಸಬೇಕಾದ ಅಗತ್ಯವಿದೆ. ಇಲ್ಲದಿದ್ದರೆ ರಾಜಧಾನಿ ಬೆಂಗಳೂರು ಕನ್ನಡಿಗರ ಕೈ ತಪ್ಪುವ ಅಪಾಯವಿದೆ ಎಂದು ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಹೇಳಿದರು. ಪಟ್ಟಣದ ಸಾಹುಕಾರ್ ಚನ್ನೇಗೌಡ ಕಾಂಪ್ಲೆಕ್ಸ್ ಆವರಣದಲ್ಲಿ ತಾಲೂಕು ಕುವೆಂಪು ಕನ್ನಡ ಗೆಳೆಯರ ಬಳಗ ಸೇವಾ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಹಾಗೂ ಟ್ರಸ್ಟ್ ಉದ್ಘಾಟನೆಯ ಅಂಗವಾಗಿ ಬಡವರಿಗೆ ಉಚಿತ ಗ್ಯಾಸ್ ವಿತರಣೆ ಮಾಡಿ ಅವರು ಮಾತನಾಡಿದರು. ರಾಜಧಾನಿ ಬೆಂಗಳೂರಿನಲ್ಲಿ…

ಅನುಮಾನಾಸ್ಪದವಾಗಿ ಯುವತಿ ಸಾವು
ಮಂಡ್ಯ

ಅನುಮಾನಾಸ್ಪದವಾಗಿ ಯುವತಿ ಸಾವು

November 29, 2018

ಮಂಡ್ಯ: ಪ್ರೀತಿಸಿ ಮದುವೆ ಯಾಗಿದ್ದ ಯುವತಿ ನೇಣು ಬಿಗಿದು ಕೊಂಡು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಹೆಬ್ಬಕವಾಡಿ ಗ್ರಾಮದಲ್ಲಿ ನಡೆದಿದೆ. ಸುಕನ್ಯಾ(19) ಮೃತ ಯುವತಿ. ಹೆಬ್ಬಕವಾಡಿ ಗ್ರಾಮದವರೇ ಆದ ಸುಕನ್ಯಾ ಪದವಿ ವ್ಯಾಸಂಗ ಮಾಡುತ್ತಿದ್ದಾಗ ಸುಜೇಂದ್ರ ಪರಿಚಯವಾಗಿದ್ದು, ಇಬ್ಬರು ಪರಸ್ಪರ ಎರಡು ವರ್ಷದಿಂದ ಪ್ರೀತಿಸುತ್ತಿ ದ್ದರು. ಆದರೆ, ಇಬ್ಬರ ಮನೆಯಲ್ಲೂ ಮದುವೆಗೆ ವಿರೋಧವಿತ್ತು. ಪೋಷಕರ ವಿರೋಧದ ನಡುವೆಯೂ ಮೂರು ತಿಂಗಳ ಹಿಂದೆ ಸುಕನ್ಯಾ ಮತ್ತು ಸುಜೇಂದ್ರ ಕುಣಿಗಲ್‍ನ ದೇವಸ್ಥಾನವೊಂದರಲ್ಲಿ ಮದುವೆಯಾಗಿ ದ್ದರು. ಮದುವೆಯ ನಂತರ ಸುಕನ್ಯಾ ಹೆಬ್ಬಕವಾಡಿಯಲ್ಲಿಯೇ…

ವಿದ್ಯುತ್ ಶಾರ್ಟ್ ಸರ್ಕಿಟ್‍ನಿಂದ ಕಬ್ಬು ಬೆಳೆ ನಾಶ
ಮಂಡ್ಯ

ವಿದ್ಯುತ್ ಶಾರ್ಟ್ ಸರ್ಕಿಟ್‍ನಿಂದ ಕಬ್ಬು ಬೆಳೆ ನಾಶ

November 29, 2018

ಮಂಡ್ಯ: ವಿದ್ಯುತ್ ಶಾರ್ಟ್ ಸಕ್ರ್ಯೂಟ್‍ನಿಂದ 8 ಎಕರೆ ಪ್ರದೇಶದಲ್ಲಿ ಬೆಳೆಯಲಾಗಿದ್ದ ಕಬ್ಬು ಬೆಳೆ ಸುಟ್ಟು ಹೋಗಿ ಲಕ್ಷಾಂತರ ರೂ. ನಷ್ಟವಾಗಿ ರುವ ಘಟನೆ ತಾಲೂಕಿನ ಬಿಳಿದೇಗಲು ಗ್ರಾಮದಲ್ಲಿ ನಡೆದಿದೆ. ಗ್ರಾಮದ ಸುಶೀಲಮ್ಮ ಎಂಬುವರ ಒಂದು ಎಕರೆ, ಬಿ.ಸಿ.ರಾಜು ಅವರಿಗೆ ಸೇರಿದ ಒಂದು ಎಕರೆ, ಹನುಮಂತು ಅವರ 30ಗುಂಟೆ, ಶಿವಲಿಂಗ ಅವರ 30ಗುಂಟೆ, ಚೋಟಪ್ಪ ಅವರಿಗೆ ಸೇರಿದ 20 ಗುಂಟೆ, ರಮೇಶ ಅವರಿಗೆ ಸೇರಿದ ಒಂದು ಎಕರೆ ಸೇರಿದಂತೆ ಒಟ್ಟು ಎಂಟು ಎಕರೆಯಲ್ಲಿ ಬೆಳೆಯಲಾದ ಕಬ್ಬು ಸಂಪೂರ್ಣ ಸುಟ್ಟುಹೋಗಿದೆ….

ಅಂಬಿ ಅಭಿಮಾನಿಯ 70,000 ರೂ. ಪಿಕ್‍ಪಾಕೆಟ್
ಮಂಡ್ಯ

ಅಂಬಿ ಅಭಿಮಾನಿಯ 70,000 ರೂ. ಪಿಕ್‍ಪಾಕೆಟ್

November 29, 2018

ಶ್ರೀರಂಗಪಟ್ಟಣ:  ಪಟ್ಟಣದಲ್ಲಿ ಹರಿಯುವ ಕಾವೇರಿ ನದಿಯ ಪಶ್ಚಿಮ ವಾಹಿನಿಯಲ್ಲಿ ದಿವಂಗತ ನಟ ಅಂಬರೀಶ್ ಅವರ ಅಸ್ಥಿ ವಿಸ ರ್ಜನೆ ನೋಡಲು ಬಂದಿದ್ದ ಅಭಿಮಾನಿಯಿಂದ 70 ಸಾವಿರ ರೂ. ಹಣವನ್ನು ಖದೀಮರು ಬುಧವಾರ ಅಪಹರಿಸಿದ್ದಾರೆ. ಮೈಸೂರು ಜಿಲ್ಲೆಯ ಸಿದ್ದರಾಮನಹುಂಡಿಯಿಂದ ಮಹೇಂದ್ರ ಎಂಬುವವರು ಪಶ್ಚಿಮ ವಾಹಿನಿಗೆ ಬಂದಿದ್ದರು. ಮೊದಲೇ ಚಿಲ್ಲರೆ ವ್ಯಾಪಾರಿಯಾಗಿದ್ದ ಅವರ ಜೇಬಿನಲ್ಲಿ ಸುಮಾರು 70 ಸಾವಿರ ರೂ. ಹಣವಿತ್ತು. ಇದರ ಸುಳಿವು ಅರಿತ ಚಾಲಾಕಿ ಕಳ್ಳರು ಅಷ್ಟೂ ಹಣವನ್ನು ಮಹೇಂದ್ರ ಅವರ ಜೇಬಿನಿಂದ ಎಗರಿಸಿದ್ದಾರೆ. ಹಣ ಕಳೆದುಕೊಂಡ…

ಅನಧಿಕೃತವಾಗಿ ಸಂಚರಿಸುತ್ತಿದ್ದ ಸಚಿವ ಜಮೀರ್ ಒಡೆತನದ ನ್ಯಾಷನಲ್ ಟ್ರಾವೆಲ್ಸ್ ಬಸ್ ಪೊಲೀಸರ ವಶಕ್ಕೆ
ಮಂಡ್ಯ, ಮೈಸೂರು

ಅನಧಿಕೃತವಾಗಿ ಸಂಚರಿಸುತ್ತಿದ್ದ ಸಚಿವ ಜಮೀರ್ ಒಡೆತನದ ನ್ಯಾಷನಲ್ ಟ್ರಾವೆಲ್ಸ್ ಬಸ್ ಪೊಲೀಸರ ವಶಕ್ಕೆ

November 28, 2018

ಕೆ.ಆರ್.ಪೇಟೆ: ಪರವಾನಗಿ ಇಲ್ಲದೆ ಅನಧಿಕೃತವಾಗಿ ಕೆ.ಆರ್.ಪೇಟೆಯಿಂದ ಬೆಂಗಳೂರಿಗೆ ಸಂಚರಿಸುತ್ತಿದ್ದ ಸಚಿವ ಜಮೀರ್ ಅಹಮದ್ ಅವರಿಗೆ ಸೇರಿದ ನ್ಯಾಷನಲ್ ಟ್ರಾವೆಲ್ಸ್ ಸಂಸ್ಥೆಯ ಬಸ್ಸನ್ನು ಸಾರ್ವಜನಿಕರೇ ತಡೆದು ಕೆ.ಆರ್.ಪೇಟೆ ಪಟ್ಟಣ ಪೊಲೀಸರಿಗೆ ಮಂಗಳವಾರ ಒಪ್ಪಿಸಿದ್ದಾರೆ. ರಾಜ್ಯದ ಪ್ರಭಾವಿ ಸಚಿವರಾಗಿರುವ ಜಮೀರ್ ಅಹಮದ್ ಒಡೆತನದ ನ್ಯಾಷ ನಲ್ ಟ್ರಾವೆಲ್ಸ್ ಸಂಸ್ಥೆಯ ಆರಕ್ಕೂ ಹೆಚ್ಚು ಬಸ್ಸುಗಳು ಪ್ರತಿನಿತ್ಯ ಪಟ್ಟಣದಿಂದ ನಾಗಮಂಗಲ ಮಾರ್ಗವಾಗಿ ಬೆಂಗಳೂರಿಗೆ ಪ್ರಯಾಣಿಕರನ್ನು ಕರೆದೊಯ್ಯುತ್ತಿವೆ. ಇತ್ತೀಚೆಗೆ ಪಾಂಡವಪುರ ತಾಲೂಕಿನ ಕನಗನಮರಡಿ ಬಳಿ ರಾಜಕುಮಾರ ಖಾಸಗಿ ಬಸ್ಸು ನಾಲೆಗೆ ಉರುಳಿ ಬಿದ್ದು 30…

ರೋಗಗಳಿಂದ ನರಳುತ್ತಿರುವ ಚಿಕ್ಕೋನಹಳ್ಳಿ ಸುತ್ತಮುತ್ತಲ ಗ್ರಾಮಸ್ಥರು
ಮಂಡ್ಯ, ಮೈಸೂರು

ರೋಗಗಳಿಂದ ನರಳುತ್ತಿರುವ ಚಿಕ್ಕೋನಹಳ್ಳಿ ಸುತ್ತಮುತ್ತಲ ಗ್ರಾಮಸ್ಥರು

November 28, 2018

ಮಂಡ್ಯ: ಮದ್ದೂರು ತಾಲೂಕಿನ ಕೊಪ್ಪದ ಎನ್‍ಎಸ್‍ಎಲ್ ಸಕ್ಕರೆ ಕಾರ್ಖಾನೆಯಲ್ಲಿ ಸ್ಪೆಂಟ್‍ವಾಷ್ ಮೇಜರ್ ಟ್ಯಾಂಕ್ ವಾರದ ಹಿಂದೆ ಸ್ಫೋಟಗೊಂಡು ವಾರವೇ ಕಳೆದಿದ್ದು, ಕಾರ್ಖಾನೆ ಸುತ್ತಲಿನ ಚಿಕ್ಕೋನಹಳ್ಳಿ, ತಗ್ಗಹಳ್ಳಿ, ಅಣ್ಣೆದೊಡ್ಡಿ, ಕೀಳಘಟ್ಟ, ಯು.ಸಿ.ದೊಡ್ಡಿ, ಗೊಲ್ಲರದೊಡ್ಡಿ ಸೇರಿದಂತೆ 17 ಗ್ರಾಮಗಳ ಜನರು ವಿವಿಧ ರೋಗಗಳಿಂದ ನರಳುತ್ತಿದ್ದಾರೆ. ಚಿಕ್ಕೋನಹಳ್ಳಿ ಗ್ರಾಮವೊಂದರಲ್ಲೇ 500ಕ್ಕೂ ಹೆಚ್ಚು ಜನರಿಗೆ ಸೊಂಟ ನೋವು, ಕೆಮ್ಮು, ನೆಗಡಿ, ತುರಿಕೆ, ಗಂಟಲು ಕೆರೆತ, ಚರ್ಮ ರೋಗಗಳು, ಶ್ವಾಸಕೋಶದ ಸಮಸ್ಯೆ ಬಾಧಿಸುತ್ತಿದೆ. ಟ್ಯಾಂಕ್ ಸ್ಫೋಟದಿಂದ 82 ಲಕ್ಷ ಲೀಟರ್‍ಗೂ ಅಧಿಕ ರಾಸಾಯನಿಕ ದ್ರಾವಣ…

ಮಂಡ್ಯದಲ್ಲಿ ಅಂಬರೀಶ್‍ಗೆ ಅಪಾರ ಅಶ್ರುತರ್ಪಣ
ಮಂಡ್ಯ, ಮೈಸೂರು

ಮಂಡ್ಯದಲ್ಲಿ ಅಂಬರೀಶ್‍ಗೆ ಅಪಾರ ಅಶ್ರುತರ್ಪಣ

November 26, 2018

ಮಂಡ್ಯ: ಭಾನುವಾರ ಮುಸ್ಸಂಜೆ ನಗರದೆಲ್ಲೆಡೆ ದುಃಖದ ಕಾರ್ಮೋಡ ಕವಿದಿತ್ತು. ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದೊಳಕ್ಕೆ ಸೂರ್ಯನ ಕಿರಣಗಳು ಸಹ `ಮಂಡ್ಯದ ಗಂಡಿನ’ ಅಂತಿಮ ದರ್ಶನ ಪಡೆಯಲು ಪರದಾಡುವಷ್ಟು ಅಭಿಮಾನಿಗಳ ಸಾಗರವೇ ತುಂಬಿತ್ತು. ಅಭಿಮಾನಿಗಳ ಕಂಬನಿ ಹರಿದಿತ್ತು, ವೇದಿಕೆಗೆ ಹತ್ತಿದಾಗಲೆಲ್ಲಾ ಸಿಳ್ಳೆ, ಕೇಕೆ ಹಾಕುತ್ತಾ ಅಂಬರೀಶ್ ಅಣ್ಣಾಂಗೇ… ಎಂದು ಗದ್ದಲ ವೆಬ್ಬಿಸುವ ಅಭಿಮಾನಿಗಳನ್ನು `ಲೇ ಸುಮ್ಮನಿ ರಲ್ಲೋ, ಸುಮ್ನೆ ನಿಂತ್ಕೊಳ್ರೋ ಅಂತೆಲ್ಲಾ ಸದಾ ಕೆಂಡಕಾರುತ್ತಿದ್ದ ಕಣ್ಣುಗಳು ಸೋತು ಎವೆಯಿಕ್ಕದೆ ಮುಚ್ಚಿದ್ದವು, ಮೈಸೂರು ಪೇಟ ಧರಿಸಿ ಮಲಗಿದ್ದ ಅಂಬರೀಶ್ ಯಾವ ಕ್ಷಣದಲ್ಲಾದರೂ ಎದ್ದು…

ಹುಟ್ಟೂರಲ್ಲಿ ಅಂಬಿ ಅಂತ್ಯಕ್ರಿಯೆಗೆ ಗ್ರಾಮಸ್ಥರ ಆಗ್ರಹ
ಮಂಡ್ಯ, ಮೈಸೂರು

ಹುಟ್ಟೂರಲ್ಲಿ ಅಂಬಿ ಅಂತ್ಯಕ್ರಿಯೆಗೆ ಗ್ರಾಮಸ್ಥರ ಆಗ್ರಹ

November 26, 2018

ಭಾರತೀನಗರ: ಚಿತ್ರನಟ ಅಂಬರೀಶ್ ಅಂತ್ಯಕ್ರಿಯೆಯನ್ನು ಅವರ ಹುಟ್ಟೂರು ದೊಡ್ಡರಸಿನ ಕೆರೆಯಲ್ಲೇ ನಡೆಸಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ದೊಡ್ಡ ರಸಿನಕೆರೆ ಗೇಟ್ ಬಳಿ ಮದ್ದೂರು-ಮಳವಳ್ಳಿ ಮುಖ್ಯರಸ್ತೆಯಲ್ಲಿ ವಾಹನ ತಡೆದು ಪ್ರತಿಭಟನೆ ನಡೆಸಿದರು. ಅಂಬರೀಶ್ ಪರ ಘೋಷಣೆ ಕೂಗಿದ ದೊಡ್ಡರಸಿನಕೆರೆ ಗ್ರಾಮಸ್ಥರು, ಅಂಬರೀಶ್ ಅಂತ್ಯಕ್ರಿಯೆಯನ್ನು ಬೆಂಗಳೂರಿನಲ್ಲಿ ನಡೆಸದೇ ಅವರ ಹುಟ್ಟೂರಿ ನಲ್ಲಿಯೇ ನೆರವೇರಿಸಬೇಕೆಂದು ಸರ್ಕಾರವನ್ನು ಆಗ್ರಹಿಸಿದರು. ಗ್ರಾಮದ ಮುಖಂಡರಾದ ಜಯರಾಮು ಮಾತನಾಡಿ, ದೊಡ್ಡರಸಿನ ಕೆರೆ ಅಂಬರೀಶ್ ಅವರ ಹುಟ್ಟೂರು. ಅವರು ಹಾಗೂ ನಮ್ಮ ನಡುವೆ ಅಪಾರ ಪ್ರೀತಿಯಿತ್ತು. ಅವರು ಆಗಾಗ…

‘ಮಂಡ್ಯದ ಗಂಡು’ ಅಂಬಿಗೆ ಭಾವಪೂರ್ಣ ಶ್ರದ್ಧಾಂಜಲಿ
ಮಂಡ್ಯ

‘ಮಂಡ್ಯದ ಗಂಡು’ ಅಂಬಿಗೆ ಭಾವಪೂರ್ಣ ಶ್ರದ್ಧಾಂಜಲಿ

November 26, 2018

ಮಂಡ್ಯ : ಮಂಡ್ಯದ ಗಂಡು, ಚಿತ್ರ ನಟ, ರೆಬೆಲ್‍ಸ್ಟಾರ್ ಹಾಗೂ ಮಾಜಿ ಸಚಿವ ಅಂಬರೀಶ್ ನಿಧನಕ್ಕೆ ಅವರ ಅಭಿಮಾನಿಗಳು ಹಾಗೂ ವಿವಿಧ ಸಂಘ ಸಂಸ್ಥೆಗಳು ಜಿಲ್ಲಾದ್ಯಂತ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಮಂಡ್ಯ, ಮದ್ದೂರು, ಮಳವಳ್ಳಿ, ನಾಗಮಂಗಲ, ಕೆ.ಆರ್.ಪೇಟೆ, ಶ್ರೀರಂಗಪಟ್ಟಣ, ಪಾಂಡವ ಪುರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಅಂಬರೀಶ್ ನಿಧನಕ್ಕೆ ಜಿಲ್ಲೆಯ ಜನರು ಹಾಗೂ ಅಂಬಿ ಅಭಿಮಾನಿಗಳು ಅಂಬರೀಶ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಶ್ರದ್ಧಾಂ ಜಲಿ ಸಲ್ಲಿಸಿರುವ ಬಗ್ಗೆ ವರದಿಯಾಗಿದೆ. ಕೆ.ಆರ್.ಪೇಟೆ: ರೆಬೆಲ್‍ಸ್ಟಾರ್ ಅಂಬರೀಶ್ ನಿಧನಕ್ಕೆ ಪಟ್ಟಣ ಹಾಗೂ…

ಕನಗನಮರಡಿ ಗ್ರಾಮದಲ್ಲಿ ಖಾಸಗಿ ಬಸ್ ದುರಂತ ಪ್ರಕರಣ ವದೇಸಮುದ್ರದಲ್ಲಿ ಸಾಮೂಹಿಕ ಅಂತ್ಯಕ್ರಿಯೆ
ಮಂಡ್ಯ

ಕನಗನಮರಡಿ ಗ್ರಾಮದಲ್ಲಿ ಖಾಸಗಿ ಬಸ್ ದುರಂತ ಪ್ರಕರಣ ವದೇಸಮುದ್ರದಲ್ಲಿ ಸಾಮೂಹಿಕ ಅಂತ್ಯಕ್ರಿಯೆ

November 26, 2018

ಚಿಕ್ಕಯ್ಯನಕೊಪ್ಪಲಿನಲ್ಲಿ ಮೂವರು, ಬೇರೆಡೆ 19 ಮಂದಿಯ ಪ್ರತ್ಯೇಕ ಅಂತ್ಯಕ್ರಿಯೆ ಪಾಂಡವಪುರ: ತಾಲೂಕಿನ ಕನಗನಮರಡಿ ಗ್ರಾಮದ ಸಮೀಪ ಶನಿ ವಾರ ನಡೆದ ಬಸ್ ದುರಂತದಲ್ಲಿ ಮೃತ ಪಟ್ಟ ಒಂದೇ ಗ್ರಾಮದ 8 ಮಂದಿಯ ಸಾಮೂಹಿಕ ಅಂತ್ಯಕ್ರಿಯೆಯನ್ನು ಭಾನು ವಾರ ನಡೆಸಲಾಯಿತು. ದುರಂತದಲ್ಲಿ ಸಾವನ್ನಪ್ಪಿದ್ದ ವದೇ ಸಮುದ್ರ ಗ್ರಾಮದ ನಿವಾಸಿಗಳಾದ ಚಿಕ್ಕಯ್ಯ (60), ಕರಿಯಪ್ಪ(65), ಪ್ರಶಾಂತ್(15), ರವಿಕುಮಾರ್(12), ಕಮಲಮ್ಮ(55) ರತ್ನಮ್ಮ (60) ಶಶಿಕಲಾ(45), ಪವಿತ್ರ(11) ಅವರು ಗಳ ಮೃತದೇಹವನ್ನು ಗ್ರಾಮದ ಹೊರ ವಲಯದ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಸ ಲಾಯಿತು. ಇದಕ್ಕೂ…

1 59 60 61 62 63 108
Translate »