ಮಂಡ್ಯ

ಅಂಬರೀಶ್ ನಿಧನ: ಮಂಡ್ಯ ಬಂದ್
ಮಂಡ್ಯ

ಅಂಬರೀಶ್ ನಿಧನ: ಮಂಡ್ಯ ಬಂದ್

November 26, 2018

ಮಂಡ್ಯ: ಅಂಬರೀಶ್ ಸಾವಿನ ಸುದ್ದಿ ಮಾಧ್ಯಮ ಗಳಲ್ಲಿ ಬಿತ್ತರವಾಗುತ್ತಿದ್ದಂತೆಯೇ ಶೋಕಸಾಗರದಲ್ಲಿ ಮುಳುಗಿದ ಮಂಡ್ಯ ಜನತೆ ಮೂಕಸ್ತಬ್ದರಾದರು. ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಅಂಬರೀಶ್ ಪಾರ್ಥಿವ ಶರೀರವನ್ನು ವೀಕ್ಷಿಸಲು ಲಕ್ಷಾಂತರ ಸಂಖ್ಯೆಯಲ್ಲಿ ಮಂಡ್ಯದ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದ ಕಡೆ ತೆರಳಿದರು. ಪರಿಣಾಮ ಮಂಡ್ಯದಲ್ಲಿ ಅಘೋಷಿತ ಬಂದ್ ಆಗಿತ್ತು. ಪ್ರತಿಭಟನೆ: ಬೆಂಗಳೂರಿನಲ್ಲೇ ಅಂತ್ಯಸಂಸ್ಕಾರ ಮಾಡುವು ದಾಗಿ ಸರ್ಕಾರ ಕೈಗೊಂಡ ನಿರ್ಧಾರದ ವಿರುದ್ಧ ಭಾನುವಾರ ಬೆಳಿಗ್ಗೆ ಸಿಡಿದೆದ್ದ ವಿವಿಧ ಸಂಘಟನೆಗಳ ಮುಖಂಡರು ಹಾಗೂ ಅಂಬರೀಶ್ ಅಭಿಮಾನಿಗಳು ಮೈಸೂರು-ಬೆಂಗ ಳೂರು ಹೆದ್ದಾರಿಗಿಳಿದು ಪ್ರತಿಭಟಿಸಿ ಮಂಡ್ಯಕ್ಕೆ ಪಾರ್ಥಿವ…

ನಾವಿಬ್ಬರೂ ಒಂದೇ ಊರು: ಡಿಸಿಟಿ
ಮಂಡ್ಯ

ನಾವಿಬ್ಬರೂ ಒಂದೇ ಊರು: ಡಿಸಿಟಿ

November 26, 2018

ಅಂಬರೀಶ್ ಅವರದು ಸಾಯುವ ವಯಸ್ಸಲ್ಲ ಭಾರತೀನಗರ: ಅಂಬರೀಶ್ ಅವರದು ಚಿತ್ರರಂಗ ಹಾಗೂ ರಾಜಕೀಯ ರಂಗದಲ್ಲಿ ವೈವಿಧ್ಯಮಯ ವ್ಯಕ್ತಿತ್ವ. ಅವರ ಅನಿರೀಕ್ಷಿತ ಅಗಲಿಕೆ ನನಗೆ ಆಘಾತ ತಂದಿದೆ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂಬರೀಶ್ ಅವರ ಮಾತು ಕಠಿಣವಾದರೂ, ಹೃದಯ ಮಾತ್ರ ಮೃದು. ಕೆಳವರ್ಗದ ಜನರ ಬಗೆಗೆ ಇದ್ದ ಅವರ ಪ್ರೀತಿ ಅಪಾರ. ಅಂತಹ ಉದಾತ್ತ ಗುಣದ ವ್ಯಕ್ತಿ ಕಳೆದುಕೊಂಡು ಜಿಲ್ಲೆ ಬಡವಾಗಿದೆ ಎಂದರು. ಅಂಬರೀಶ್ ಅವರದು ಸಾಯುವ ವಯಸ್ಸಲ್ಲ. ಇನ್ನೂ ಹತ್ತಾರು…

ಕೆಆರ್‌ಎಸ್‌ನಲ್ಲಿ ಡಿಸ್ನಿಲ್ಯಾಂಡ್ ಶತಃಸಿದ್ಧ: ಸಿಎಂ ಕುಮಾರಸ್ವಾಮಿ
ಮಂಡ್ಯ, ಮೈಸೂರು

ಕೆಆರ್‌ಎಸ್‌ನಲ್ಲಿ ಡಿಸ್ನಿಲ್ಯಾಂಡ್ ಶತಃಸಿದ್ಧ: ಸಿಎಂ ಕುಮಾರಸ್ವಾಮಿ

November 24, 2018

ಮಂಡ್ಯ: ಕೆಆರ್‌ಎಸ್‌ನಲ್ಲಿ ಡಿಸ್ನಿಲ್ಯಾಂಡ್ ನಿರ್ಮಾಣ ಯೋಜನೆ ಕೈ ಬಿಡುವ ಪ್ರಶ್ನೆಯೇ ಇಲ್ಲ. ಕಾವೇರಿ ಮಾತೆ ಪ್ರತಿಮೆ ನಿರ್ಮಾಣ ಮಾತ್ರವಲ್ಲ, ವಿಶ್ವಮಟ್ಟದ ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು. ತಾಲೂಕಿನ ದುದ್ದ ಗ್ರಾಮದಲ್ಲಿಂದು ಸಣ್ಣ ನೀರಾವರಿ ಇಲಾಖೆ, ಲೋಕೋಪಯೋಗಿ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ 718 ಕೋಟಿ ರೂ. ವೆಚ್ಚದಲ್ಲಿ 54 ಕೆರೆಗಳಿಗೆ ನೀರು ತುಂಬಿಸುವ ಯೋಜನೆ, 47 ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕು ಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ಕೆಆರ್‌ಎಸ್‌ನಲ್ಲಿ ಉದ್ದೇಶಿತ ಡಿಸ್ನಿಲ್ಯಾಂಡ್…

ನಾಳೆಯಿಂದ 3 ದಿನ ತೊಣ್ಣೂರು ಕೆರೆ ಉತ್ಸವ
ಮಂಡ್ಯ

ನಾಳೆಯಿಂದ 3 ದಿನ ತೊಣ್ಣೂರು ಕೆರೆ ಉತ್ಸವ

November 22, 2018

ಮಂಡ್ಯ:  ಐತಿಹಾಸಿಕ ತಾಣ ಪಾಂಡವಪುರ ತಾಲೂಕಿನ ತೊಣ್ಣೂರು ಕೆರೆಯ ಬಳಿ ನ.23ರಿಂದ 25 ರವರೆಗೆ ಒಟ್ಟು 3 ದಿನಗಳವರೆಗೆ `ತೊಣ್ಣೂರು ಕೆರೆ ಉತ್ಸವ’ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಣ್ಣ ನೀರಾ ವರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ತಿಳಿಸಿದರು. ಕೆರೆತೊಣ್ಣೂರು ಗ್ರಾಮದ ಕೆರೆಯ ಬಳಿ ನಡೆದ ತೊಣ್ಣೂರು ಕೆರೆ ಉತ್ಸವ ಕಾರ್ಯ ಕ್ರಮದ ಪೂರ್ವಭಾವಿ ಸಿದ್ಧತಾ ಪರಿಶೀಲಿಸಿ, ಸಭೆ ನಡೆಸಿ ಬಳಿಕ ಅವರು ಮಾತನಾಡಿದರು. `ತೊಣ್ಣೂರು ಕೆರೆ ಈ ಭಾಗದ ರೈತರ ಜೀವನಾಡಿಯಾಗಿದೆ. ಪ್ರತಿ…

ಮಳವಳ್ಳಿಯಲ್ಲಿ ಬಾಗಿಲು ಮೀಟಿ ಮನೆಗಳವು
ಮಂಡ್ಯ

ಮಳವಳ್ಳಿಯಲ್ಲಿ ಬಾಗಿಲು ಮೀಟಿ ಮನೆಗಳವು

November 22, 2018

ಮಳವಳ್ಳಿ: ಮನೆಯ ಮುಂಬಾ ಗಿಲು ಮೀಟಿ ಒಳನುಗ್ಗಿದ ಕಳ್ಳರು 2 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಸೇರಿ, 4 ಸಾವಿರ ನಗದು ದೋಚಿರುವ ಘಟನೆ ಪಟ್ಟಣದಲ್ಲಿ ಮಂಗಳವಾರ ರಾತ್ರಿ ನಡೆಡಿದೆ. ಪಟ್ಟಣದ ಎನ್‍ಇಎಸ್ ಬಡಾವಣೆಯ ಶೆಟ್ಟಹಳ್ಳಿ ರಸ್ತೆಯಲ್ಲಿರುವ ಗ್ರಾಮಲೆಕ್ಕಾ ಧಿಕಾರಿ ಮಹೇಶ್ ಅವರ ಮನೆಯ ಮುಂಬಾಗಿಲನ್ನು ಹಾರೆಯಿಂದ ಮೀಟಿ ಒಳನುಗ್ಗಿದ ಕಳ್ಳರು ಸರ-ಉಂಗುರ, ಬೆಳ್ಳಿ ಆಭರಣ ಸೇರಿದಂತೆ ಹಲವು ಬೆಲೆ ಬಾಳುವ ವಸ್ತುಗಳು ಹಾಗೂ 4 ಸಾವಿರ ನಗದನ್ನು ದೋಚಿದ್ದಾರೆ. ಮಹೇಶ್ ಕರ್ತವ್ಯ ನಿಮಿತ್ತ ಕೆ.ಎಂ.ದೊಡ್ಡಿಗೆ ತೆರಳಿ…

ಸಿಲಿಂಡರ್ ಸ್ಫೋಟ; ಮಹಿಳೆ ಸಾವು
ಮಂಡ್ಯ

ಸಿಲಿಂಡರ್ ಸ್ಫೋಟ; ಮಹಿಳೆ ಸಾವು

November 22, 2018

ಕೆ.ಆರ್.ಪೇಟೆ: ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಗೃಹಿಣಿ ಮೃತಪಟ್ಟಿರುವ ಘಟನೆ ಪಟ್ಟಣದ ಕ್ರಿಶ್ಚಿಯನ್ ಕಾಲೋನಿಯಲ್ಲಿ ನಡೆದಿದೆ. ಆಂಥೋನಿಯಮ್ಮ(50) ಮೃತಪಟ್ಟ ಗೃಹಿಣಿ. ಇವರು ತಮ್ಮ ಮನೆಯಲ್ಲಿ ಮಂಗಳವಾರ ರಾತ್ರಿ ಅಡುಗೆ ಮಾಡುತ್ತಿ ದ್ದಾಗ ಆಕಸ್ಮಿಕವಾಗಿ ಅಡುಗೆ ಗ್ಯಾಸ್ ಸಿಲಿಂಡರ್ ಸ್ಫೋಟ ಗೊಂಡಿದೆ. ಪರಿಣಾಮ ಆಂಥೋನಿಯಮ್ಮ ಗಂಭೀರವಾಗಿ ಗಾಯಗೊಂಡರು. ಕೂಡಲೇ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಿಗ್ಗೆ ಕೊನೆಯು ಸಿರೆಳೆದಿದ್ದಾರೆ. ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಿಳೆ ಸರ ಅಪಹರಣ
ಮಂಡ್ಯ

ಮಹಿಳೆ ಸರ ಅಪಹರಣ

November 22, 2018

ಮಂಡ್ಯ: ನಗರದಲ್ಲಿ ಹಾಡಹಗಲೇ ಸರಗಳ್ಳರು ತಮ್ಮ ಕೈಚಳಕ ತೋರಿದ್ದು, ನಾಲೆಯಲ್ಲಿ ಬಟ್ಟೆ ತೊಳೆ ಯುತ್ತಿದ್ದ ಮಹಿಳೆಯ ಸರ ಕಿತ್ತು ಪರಾರಿ ಯಾಗಿದ್ದಾರೆ. ಮಂಡ್ಯ ತಾಲೂಕಿನ ಚೆನ್ನಗಿರಿದೊಡ್ಡಿ ಗ್ರಾಮದ ಸಾಕಮ್ಮ ಸರ ಕಳೆದುಕೊಂಡವರು. ಇವರ ಬಳಿ ವಿಳಾಸ ಕೇಳುವ ನೆಪದಲ್ಲಿ ಬೈಕ್‍ನಲ್ಲಿ ಬಂದ ಅಪರಿಚಿತ ವ್ಯಕ್ತಿಗಳು ಕತ್ತಿನಲ್ಲಿದ್ದ 20 ಗ್ರಾಂ. ಚಿನ್ನದ ಸರ ಕಿತ್ತು ಪರಾರಿಯಾಗಿ ದ್ದಾರೆ. ಮಂಡ್ಯ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸರಗಳ್ಳನಿ ಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಆಕ್ರೋಶಭರಿತ ಮಂಡ್ಯ ರೈತನ ಡಂಗುರ
ಮಂಡ್ಯ

ಆಕ್ರೋಶಭರಿತ ಮಂಡ್ಯ ರೈತನ ಡಂಗುರ

November 20, 2018

ಮಂಡ್ಯ: ಜಿಲ್ಲೆಯ ರೈತನೊಬ್ಬ ಡಂಗುರ ಸಾರುವ ರೀತಿಯಲ್ಲಿ ಮುಖ್ಯ ಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ವೀಡಿಯೋ ವೈರಲ್ ಆಗಿದೆ. ಇಂದು ಬೆಳಿಗ್ಗೆ ಸಾಲ ಮನ್ನಾ, ಬೆಳೆಗಳಿಗೆ ಬೆಂಬಲ ಬೆಲೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬೆಂಗಳೂರಿನಲ್ಲಿ ಹಮ್ಮಿಕೊಂಡಿರುವ ರೈತರ ಪ್ರತಿಭಟನೆಗೆ ಜಿಲ್ಲೆಯಿಂದ ಸಾವಿರಾರು ರೈತರು ರೈಲಲ್ಲಿ ಬೆಂಗಳೂರಿಗೆ ತೆರಳಿದರು. ಇದಕ್ಕೂ ಮುನ್ನ ರೈತರೊಬ್ಬರು ಡಂಗುರ ಸಾರುವ ಮೂಲಕ ಸಿಎಂ ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದ್ದಾರೆ. `ಕೇಳ್ರಪ್ಪೋ ಕೇಳಿ, ಕರ್ನಾಟಕದ ಮಹಾಜನರೇ ಕೇಳಿ,…

ಸಿಎಂ ಕುಮಾರಸ್ವಾಮಿ ಹತ್ರ ಹಣ ಪ್ರಿಂಟ್ ಮಾಡೋ ಮೆಷಿನ್ ಇದ್ಯಾ?
ಮಂಡ್ಯ

ಸಿಎಂ ಕುಮಾರಸ್ವಾಮಿ ಹತ್ರ ಹಣ ಪ್ರಿಂಟ್ ಮಾಡೋ ಮೆಷಿನ್ ಇದ್ಯಾ?

November 19, 2018

ಮಂಡ್ಯ:  ಮುಖ್ಯಮಂತ್ರಿ ಕುಮಾರಣ್ಣನ ಹತ್ರ ಏನು ಹಣ ಪ್ರಿಂಟ್ ಮಾಡೋ ಮೆಷಿನ್ ಇದ್ಯಾ. ಎಲ್ಲದಕ್ಕೂ ಕುಮಾರಸ್ವಾಮಿಯನ್ನೇ ಹಿಡಿದುಕೊಂಡರೆ ಏನು ಪ್ರಯೋಜನ ಎಂದು ಸಚಿವ ಹೆಚ್.ಡಿ.ರೇವಣ್ಣ ಪ್ರಶ್ನಿಸಿದರು. ನಗರದಲ್ಲಿಂದು ಖಾಸಗಿ ಕಾರ್ಯ ಕ್ರಮವೊಂದರಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಕಬ್ಬು ಹೋರಾಟ ಗಾರರ ಪ್ರತಿಭಟನೆ ವಿಚಾರವಾಗಿ ಪ್ರಸ್ತಾ ಪಿಸಿ, ಕೇಂದ್ರ ಸರ್ಕಾರ ಮಧ್ಯೆ ಪ್ರವೇಶಿಸಿ ಕಬ್ಬು ಬೆಳೆಗಾರರನ್ನು ರಕ್ಷಣೆ ಮಾಡ ಬೇಕು ಎಂದರು. ಪ್ರತಿಭಟನೆ ಮಾಡುವ ರೈತರು ಶಾಂತಿಯುತವಾಗಿ ಕುಳಿತು ಪ್ರತಿ ಭಟನೆ ನಡೆಸಬೇಕು. ಆದರೆ…

ಮಂಡ್ಯ ಲೋಕಸಭಾ ಉಪ ಚುನಾವಣೆ ಫಲಿತಾಂಶ: ಮೈತ್ರಿ ಅಭ್ಯರ್ಥಿ ಎಲ್.ಆರ್.ಶಿವರಾಮೇಗೌಡ ಜಯಭೇರಿ
ಮಂಡ್ಯ

ಮಂಡ್ಯ ಲೋಕಸಭಾ ಉಪ ಚುನಾವಣೆ ಫಲಿತಾಂಶ: ಮೈತ್ರಿ ಅಭ್ಯರ್ಥಿ ಎಲ್.ಆರ್.ಶಿವರಾಮೇಗೌಡ ಜಯಭೇರಿ

November 8, 2018

ಮಂಡ್ಯ: ಲೋಕಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಎಲ್.ಆರ್.ಶಿವರಾಮೇಗೌಡ ಭರ್ಜರಿ ಗೆಲುವು ಸಾಧಿಸಿದ್ದಾರೆ. ಪ್ರತಿಸ್ಪರ್ಧಿ ಬಿಜೆಪಿಯ ಅಭ್ಯರ್ಥಿ ಡಾ.ಸಿದ್ದರಾಮಯ್ಯ ಅವರನ್ನು ಸುಮಾರು 3 ಲಕ್ಷಕ್ಕೂ ಅಧಿಕ ಮತಗಳ ಅಂತರದಲ್ಲಿ ಪರಾಭವಗೊಳಿಸಿದ್ದಾರೆ. ರಾಜ್ಯ ರಾಜಕಾರಣದಲ್ಲಿ ಪ್ರತಿಷ್ಠೆಯ ಕಣವಾಗಿ ಪರಿಣಮಿಸಿ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಎಲ್.ಆರ್.ಶಿವರಾಮೇಗೌಡ ಗೆಲುವಿನ ನಗೆ ಬೀರುವ ಮೂಲಕ ಸಕ್ಕರೆನಾಡು ಜೆಡಿಎಸ್‍ನ ಭದ್ರಕೋಟೆ ಎಂಬುದನ್ನು ಮತ್ತೊಮ್ಮೆ ಸಾಬೀತಾಯಿತು. ಆದರೂ, ಚುನಾವಣೆಯಲ್ಲಿ ಬಿಜೆಪಿ 2ಲಕ್ಷಕ್ಕೂ ಹೆಚ್ಚು ಮತ ಗಳಿಸಿ ಮೊದಲ ಬಾರಿಗೆ ಇಷ್ಟೊಂದು ಮತಪಡೆದ…

1 60 61 62 63 64 108
Translate »