ಮೈಸೂರು

ಮೈಸೂರು ಮೃಗಾಲಯದ `ಸಬ್ ವೇ’ ಶೀಘ್ರದಲ್ಲೇ ಉದ್ಘಾಟನೆ
ಮೈಸೂರು

ಮೈಸೂರು ಮೃಗಾಲಯದ `ಸಬ್ ವೇ’ ಶೀಘ್ರದಲ್ಲೇ ಉದ್ಘಾಟನೆ

February 12, 2022

ಮೈಸೂರು,ಫೆ.೧೧(ಎಂಟಿವೈ)- ಮೈಸೂರು ಮೃಗಾಲಯದ ಸುತ್ತಮುತ್ತ ಟ್ರಾಫಿಕ್ ಜಾಮ್ ತಪ್ಪಿಸುವ ನಿಟ್ಟಿನಲ್ಲಿ ನಿರ್ಮಿಸ ಲಾದ `ಸಬ್ ವೇ’ ಕಾಮಗಾರಿ ಪೂರ್ಣಗೊಂಡಿದ್ದು, ಖಾಸಗಿ ಸಂಸ್ಥೆಗಳ ಜಾಹೀರಾತುಗಳ ಮೂಲಕ ಇದರಲ್ಲೂ ಆದಾಯ ಕಂಡುಕೊಳ್ಳಲು ಮೃಗಾಲಯ ಪ್ರಾಧಿಕಾರ ಚಿಂತನೆ ನಡೆಸಿದೆ. ಮೈಸೂರು ಮೃಗಾಲಯ ಅಪಾರ ಸಂಖ್ಯೆಯಲ್ಲಿ ಪ್ರವಾಸಿ ಗರನ್ನು ಸೆಳೆಯುತ್ತಿದೆ. ಮೈಸೂರು ನಗರದಿಂದ ಚಾಮುಂಡಿ ಬೆಟ್ಟ, ತಿ.ನರಸೀಪುರ, ಕೊಳ್ಳೇಗಾಲ, ಚಾಮರಾಜನಗರ ಸೇರಿದಂತೆ ವಿವಿಧೆಡೆ ತೆರಳುವ ವಾಹನಗಳು ಮೃಗಾಲಯದ ಮುಂದೆಯೇ ಸಂಚರಿಸುವ ಹಿನ್ನೆಲೆಯಲ್ಲಿ ಇಲ್ಲಿ ಸದಾ ವಾಹನ ಹಾಗೂ ಪ್ರವಾಸಿಗರ ದಟ್ಟಣೆಯಿಂದ ಸಂಚಾರ ವ್ಯವಸ್ಥೆಗೆ…

ಮೈಸೂರು ಮಹಾನಗರಪಾಲಿಕೆಯಿಂದ  141.11 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹ
ಮೈಸೂರು

ಮೈಸೂರು ಮಹಾನಗರಪಾಲಿಕೆಯಿಂದ 141.11 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹ

February 9, 2022

ಮೈಸೂರು, ಫೆ.8(ಆರ್‍ಕೆ)-ಕೋವಿಡ್ ಸಾಂಕ್ರಾಮಿಕದ ನಡುವೆಯೂ 2021-22ನೇ ಸಾಲಿನಲ್ಲಿ ಮೈಸೂರು ಮಹಾನಗರಪಾಲಿಕೆಯು 141.11 ಕೋಟಿ ರೂ.ಗಳ ದಾಖಲೆಯ ಆಸ್ತಿ ತೆರಿಗೆ ಸಂಗ್ರಹಿಸಿದೆ. ಕುಡಿಯುವ ನೀರು ಸರಬರಾಜು, ಸ್ವಚ್ಛತೆ, ಒಳ ಚರಂಡಿ, ಬೀದಿ ದೀಪ, ರಸ್ತೆ, ಪಾರ್ಕ್, ಶಿಕ್ಷಣ, ಆರೋಗ್ಯ ಸೇವೆಯಂತಹ ಮೂಲ ಸೌಕರ್ಯ ಒದಗಿಸುವ ಜವಾ ಬ್ದಾರಿ ನಿರ್ವಹಿಸಲು ಮೈಸೂರು ಮಹಾನಗರಪಾಲಿಕೆಗೆ ಆಸ್ತಿ ತೆರಿಗೆ, ನೀರಿನ ಶುಲ್ಕ, ಉದ್ದಿಮೆಗಳ ರಹದಾರಿ ಶುಲ್ಕ, ಕಟ್ಟಡಗಳ ಬಾಡಿಗೆ ಹಾಗೂ ಜಾಹೀರಾತುಗಳಿಂದ ಬರುವ ಆದಾಯಗಳೇ ಪ್ರಮುಖ ಸಂಪನ್ಮೂಲಗಳಾಗಿವೆ. ಆ ಪೈಕಿ ಆಸ್ತಿ ತೆರಿಗೆಯಿಂದ…

ರಾಜ್ಯದಲ್ಲಿ ಶೈಕ್ಷಣಿಕ ಅರಾಜಕತೆ ಸೃಷ್ಟಿಸಿದ್ದೇ  ರಾಜ್ಯ ಬಿಜೆಪಿ ಸರ್ಕಾರದ ಸಾಧನೆ: ಆರೋಪ
ಮೈಸೂರು

ರಾಜ್ಯದಲ್ಲಿ ಶೈಕ್ಷಣಿಕ ಅರಾಜಕತೆ ಸೃಷ್ಟಿಸಿದ್ದೇ ರಾಜ್ಯ ಬಿಜೆಪಿ ಸರ್ಕಾರದ ಸಾಧನೆ: ಆರೋಪ

February 9, 2022

ಮೈಸೂರು, ಫೆ.8(ಆರ್‍ಕೆಬಿ)- ರಾಜ್ಯಾದ್ಯಂತ ಹಿಜಾಬ್ ವಿವಾದ ಭುಗಿಲೆದ್ದಿದೆ. ಶತಮಾನದ ಎನ್‍ಟಿಎಂ ಶಾಲೆಯ ಕಟ್ಟಡವನ್ನು ಜನರ ವಿರೋಧದ ನಡುವೆಯೂ ನೆಲಸಮ ಗೊಳಿಸಲಾಗಿದೆ. ಸೇವಾ ಭದ್ರತೆ ಕೇಳಿದ ಅತಿಥಿ ಉಪನ್ಯಾಸ ಕರ ಕೆಲಸದ ಅವಧಿಯನ್ನು 15 ಗಂಟೆಗಳಿಗೆ ಏರಿಸಲಾಗಿದೆ. ಇವೆಲ್ಲದರ ಮೂಲಕ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಶೈಕ್ಷ ಣಿಕ ಅರಾಜಕತೆಯನ್ನು ಸೃಷ್ಟಿ ಮಾಡಿದೆ ಎಂದು ಕರ್ನಾ ಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ರಾಜ್ಯಾಧ್ಯಕ್ಷ ಕೆ.ಎಸ್.ಶಿವರಾಮು ಆರೋಪಿಸಿದರು. ಮೈಸೂರು ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶತಮಾನದ…

ಯುವ ಮನಸ್ಸುಗಳ ಘಾಸಿಗೊಳಿಸುತ್ತಿರುವ  ವಸ್ತ್ರ ರಾಜಕಾರಣ: ಶ್ವೇತಾ ಮಡಪ್ಪಾಡಿ ಬೇಸರ
ಮೈಸೂರು

ಯುವ ಮನಸ್ಸುಗಳ ಘಾಸಿಗೊಳಿಸುತ್ತಿರುವ ವಸ್ತ್ರ ರಾಜಕಾರಣ: ಶ್ವೇತಾ ಮಡಪ್ಪಾಡಿ ಬೇಸರ

February 9, 2022

ಮೈಸೂರು, ಫೆ.8(ಆರ್‍ಕೆಬಿ)- ವಿದ್ಯಾಸಂಸ್ಥೆಗಳಲ್ಲಿ ಸೌಹಾ ರ್ದತೆ ಹಾಗೂ ಸಮಾನತೆಗೆ ದಾರಿಯಾಗಬೇಕಿದ್ದ ಸಮವಸ್ತ್ರ ಇಂದು ಭವಿಷ್ಯದ ಸುಂದರ ಕನಸುಗಳನ್ನು ಹೊತ್ತ ಯುವ ಮನಸುಗಳನ್ನು `ವಸ್ತ್ರ ರಾಜಕಾರಣ’ ವಾಗಿ ಘಾಸಿಗೊಳಿಸುತ್ತಿದೆ ಎಂದು ಲೇಖಕಿ ಡಾ.ಶ್ವೇತಾ ಮಡಪ್ಪಾಡಿ ಬೇಸರ ವ್ಯಕ್ತಪಡಿಸಿದ್ದಾರೆ. ಮೈಸೂರು ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಾದ ಪ್ರತಿವಾದಗಳ ಮುಖಾಂತರ ಬುರ್ಖಾ, ಕೇಸರಿ ಶಾಲು, ನೀಲಿ ಶಾಲುಗಳೊಂದಿಗೆ ನಾವು ಹೊಸ ತಲೆಮಾರುಗಳನ್ನು ಸಾಮೂಹಿಕವಾಗಿ ಮತೀಯ ಚಿಂತನೆಗಳತ್ತ ದೂಡುತ್ತಿದ್ದೇವೆ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಅಭಿಪ್ರಾಯಪಟ್ಟರು. ಸಹಪಾಠಿಗಳಲ್ಲಿ ನಾವೆಲ್ಲಾ…

ಅಪಘಾತದಲ್ಲಿ ಗಾಯಗೊಂಡಿದ್ದ ನೋಟು ಮುದ್ರಣ ಘಟಕದ  ಅಸಿಸ್ಟೆಂಟ್ ಮ್ಯಾನೇಜರ್ ಪತ್ನಿ ಸಾವು
ಮೈಸೂರು

ಅಪಘಾತದಲ್ಲಿ ಗಾಯಗೊಂಡಿದ್ದ ನೋಟು ಮುದ್ರಣ ಘಟಕದ ಅಸಿಸ್ಟೆಂಟ್ ಮ್ಯಾನೇಜರ್ ಪತ್ನಿ ಸಾವು

February 9, 2022

ಮೈಸೂರು, ಫೆ. 8(ಆರ್‍ಕೆ)- ಕಾರೊಂದು ಸ್ಕೂಟರ್‍ಗೆ ಡಿಕ್ಕಿ ಹೊಡೆದು ಪರಾರಿ ಯಾದ ಪ್ರಕರಣದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಮಹಿಳೆ ಚಿಕಿತ್ಸೆ ಫಲಕಾರಿ ಯಾಗದೇ ಎರಡು ತಿಂಗಳ ನಂತರ ಸಾವನ್ನಪ್ಪಿದ್ದಾರೆ. ಮೈಸೂರಿನ ಹೂಟಗಳ್ಳಿ ಕೆಹೆಚ್‍ಬಿ ಕಾಲೋನಿ ನಿವಾಸಿಯಾದ ಭಾರತೀಯ ರಿಸರ್ವ್ ಬ್ಯಾಂಕ್ ನೋಟು ಮುದ್ರಣ ನಿಗಮ ನಿಯಮಿತ (ಬಿಆರ್‍ಬಿಎನ್ ಎಂಎನ್)ದ ಸಹಾಯಕ ವ್ಯವಸ್ಥಾಪಕ ಮಂಜುನಾಥ ರಾಜ್ ಅವರ ಪತ್ನಿ ಶ್ರೀಮತಿ ಶ್ರೀದೇವಿ (41) ಸಾವನ್ನಪ್ಪಿದವರು. ಹೂಟಗಳ್ಳಿಯಿಂದ ಪುತ್ರಿ ಗಗನರೊಂದಿಗೆ ಶ್ರೀಮತಿ ಶ್ರೀದೇವಿ ಅವರು ಮೈಸೂರು ನಗರಕ್ಕೆ ಸ್ಕೂಟರ್‍ನಲ್ಲಿ ಬರುತ್ತಿದ್ದಾಗ ಹಿಂದಿನಿಂದ…

ಮತದಾರರ ಸ್ವಾಭಿಮಾನ ಅಭಿಯಾನ ಕಾರ್ಯಕ್ರಮ
ಮೈಸೂರು

ಮತದಾರರ ಸ್ವಾಭಿಮಾನ ಅಭಿಯಾನ ಕಾರ್ಯಕ್ರಮ

February 9, 2022

ಮೈಸೂರು, ಫೆ. 8- ನಗರದ ಶೇಷಾದ್ರಿ ಅಯ್ಯರ್ ರಸ್ತೆಯಲ್ಲಿರುವ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆ ಆವರಣದಲ್ಲಿ ಮತದಾರರ ಸ್ವಾಭಿಮಾನ ಅಭಿಯಾನ, ಕರ್ನಾಟಕ ವತಿ ಯಿಂದ ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜು ಮತ್ತು ವಿದ್ಯಾವರ್ಧಕ ಕಾನೂನು ಕಾಲೇಜುಗಳ ಸಹಯೋಗದೊಂದಿಗೆ “ಜನತಂತ್ರ ರಕ್ಷಣೆ – ಮತದಾರರ ಹೊಣೆ” ಮತದಾರ ಜಾಗೃತಾ ಕಾರ್ಯ ಕ್ರಮವನ್ನು ಆಯೋಜಿಸಲಾಗಿತ್ತು. ಓಟು ಮಾರಾಟದ ಸರಕಲ್ಲ; ಜನ ತಂತ್ರದ ನಮ್ಮ ಹಕ್ಕು. ಓಟನ್ನು ಮಾರಿ ಕೊಳ್ಳುವುದು ಬೇಡ, ಭ್ರಷ್ಟಾಚಾರ ಮುಕ್ತ ಸರ್ವೋದಯ ಸಮಾಜ ರೂಪಿಸಲು ಸ್ವಾತಂತ್ರ್ಯದ ನಮ್ಮ ಹಕ್ಕನ್ನು…

ಮೈಸೂರು ವಿಮಾನ ನಿಲ್ದಾಣದಲ್ಲಿ ನಡೆದಿದೆ  ಭಾರೀ ಅಭಿವೃದ್ಧಿ ಕಾಮಗಾರಿ
ಮೈಸೂರು

ಮೈಸೂರು ವಿಮಾನ ನಿಲ್ದಾಣದಲ್ಲಿ ನಡೆದಿದೆ ಭಾರೀ ಅಭಿವೃದ್ಧಿ ಕಾಮಗಾರಿ

February 9, 2022

ಮೈಸೂರು, ಫೆ.8 (ಆರ್‍ಕೆ)- ಹೆಚ್ಚಿನ ಸಂಖ್ಯೆಯ ವಿಮಾನಗಳ ಹಾರಾಟಕ್ಕೆ ಅನುವು ಮಾಡಿಕೊಡಲು ರನ್‍ವೇ ವಿಸ್ತ ರಿಸುವ ಪ್ರಸ್ತಾವನೆ ಹಿನ್ನೆಲೆಯಲ್ಲಿ ಪ್ರಸಕ್ತ ಕಾರ್ಯನಿರ್ವಹಿಸುತ್ತಿರುವ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದ ಅಭಿ ವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ರನ್‍ವೇ ವಿಸ್ತರಿಸಿ ಏಕಕಾಲದಲ್ಲಿ ದೇಶದ ವಿವಿಧ ಭಾಗಗಳಿಗೆ ವಿಮಾನಗಳ ಹಾರಾಟಕ್ಕೆ ಅನುಕೂಲ ಕಲ್ಪಿಸುವ ಬೃಹತ್ ಯೋಜನೆಗೆ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರವು ಮುಂದಾಗಿ ರುವ ಹಿನ್ನೆಲೆಯಲ್ಲಿ ಪ್ರಸ್ತುತ ಇರುವ ವಿಮಾನ ನಿಲ್ದಾಣವನ್ನು ಉನ್ನತೀಕರಣ ಗೊಳಿಸಲು ಪ್ರಕ್ರಿಯೆ ಆರಂಭಗೊಂಡಿದೆ. ಪ್ರಸ್ತುತ ಮೂರು ವಿಮಾನಗಳು…

ದಸರಾ ವೇಳೆ ಮಾತ್ರ ಬೆಳಗುವ ದೀಪಗಳು!
ಮೈಸೂರು

ದಸರಾ ವೇಳೆ ಮಾತ್ರ ಬೆಳಗುವ ದೀಪಗಳು!

February 9, 2022

ಮೈಸೂರು, ಫೆ.8(ಜಿಎ)- ಮೈಸೂರು ಅರಮನೆಯ ಸುತ್ತಲೂ ಇರುವ ಪಾರಂಪರಿಕ ಅಲಂಕಾರಿಕ ದೀಪಗಳು ಕೇವಲ ದಸರಾ ಮಹೋತ್ಸವದಲ್ಲಿ ಜಗಮಗಿಸುತ್ತದೆ. ಆದರೆ ಉಳಿದ ದಿನಗಳಲ್ಲಿ ಧೂಳು ಹಿಡಿಯುತ್ತವೆ. ಮೈಸೂರು ಎಂದರೆ ಪ್ರವಾಸಿಗರ ತಾಣ. ಅಂತಹ ಮೈಸೂ ರಿಗೆ ಬರುವ ಪ್ರವಾಸಿಗರು ಬೆಳಗ್ಗಿನಿಂದ ಚಾಮುಂಡಿಬೆಟ್ಟ, ಮೃಗಾಲಯ, ಕಾರಂಜಿ ಕೆರೆ ಸೇರಿದಂತೆ ಅನೇಕ ಪ್ರವಾಸಿ ತಾಣಗಳನ್ನು ನೋಡಿ ನಂತರ ಸಂಜೆ ಅರಮನೆ ನೋಡಲು ಆಗಮಿಸುತ್ತಾರೆ. ಅದರಲ್ಲಿಯೂ ಪ್ರಮುಖವಾಗಿ ಅರಮನೆ ದೀಪ, ಸುತ್ತಲಿನ ಪಾರಂಪರಿಕ ಅಲಂಕಾರಿಕ ದೀಪಗಳನ್ನು ನೋಡಿ ಸವಿಯುತ್ತಾರೆ. ಅಂತಹ ಅರಮನೆಯ ಸುತ್ತಲೂ…

ವಾಹನ ತಪಾಸಣೆ ವೇಳೆ ಯುವಕರಿಂದ ಭಾರೀ ಹೈಡ್ರಾಮಾ
ಮೈಸೂರು

ವಾಹನ ತಪಾಸಣೆ ವೇಳೆ ಯುವಕರಿಂದ ಭಾರೀ ಹೈಡ್ರಾಮಾ

February 9, 2022

ಮೈಸೂರು, ಫೆ.8(ಜಿಎ)- ಮೈಸೂರಿನ ಆಯುರ್ವೇದ ಆಸ್ಪತ್ರೆ ವೃತ್ತದಲ್ಲಿ ಮಂಗಳವಾರ ಸಂಚಾರ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಹೈಡ್ರಾಮ ನಡೆದಿದ್ದು, ಮೂವರ ವಿರುದ್ಧ ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ, ಹಲ್ಲೆಗೂ ಮುಂದಾ ಗಿದ್ದಾರೆ ಎಂದು ನರಸಿಂಹರಾಜ ಸಂಚಾರಿ ಪೊಲೀಸರ ದೂರಿನ ನ್ವಯ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ವಿಶ್ವೇಶ್ವರ ನಗರದ ನಿವಾಸಿಗಳಾದ ಆಕಾಶ್, ವಿಕಾಸ್ ಮತ್ತು ಅವಿನಾಶ್ ಎಂಬ ಮೂವರು ಯುವಕರÀ ವಿರುದ್ಧ ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು…

ಯೋಗಪಟುಗಳಿಂದ ಸೂರ್ಯ ನಮಸ್ಕಾರ
ಮೈಸೂರು

ಯೋಗಪಟುಗಳಿಂದ ಸೂರ್ಯ ನಮಸ್ಕಾರ

February 9, 2022

ಮೈಸೂರು,ಫೆ.8(ಎಂಟಿವೈ)- ಮೈಸೂರು ಅರಮನೆ ಆವರಣದಲ್ಲಿ ಮಂಗಳವಾರ ಬೆಳಗ್ಗೆ ರಥಸಪ್ತಮಿ ಹಿನ್ನೆಲೆಯಲ್ಲಿ 400ಕ್ಕೂ ಹೆಚ್ಚು ಮಂದಿ ಯೋಗಪಟುಗಳು 108 ಸಾಮೂಹಿಕ ಸೂರ್ಯ ನಮಸ್ಕಾರ ನಡೆಸಿ ಗಮನ ಸೆಳೆದರು. ಮೈಸೂರು ಯೋಗ ಫೆಡರೇಷನ್ ಟ್ರಸ್ಟ್, ಅರಮನೆ ಮಂಡಳಿ, ಜಿಎಸ್‍ಎಸ್ ಯೋಗ ಸಂಸ್ಥೆ, ಎಸ್‍ಪಿವೈಎಸ್‍ಎಸ್, ಪತಂಜಲಿ ಯೋಗ ಸಂಸ್ಥೆಯ ಸಹಯೋಗ ದಲ್ಲಿ ನಡೆದ ರಥಸಪ್ತಮಿ ಹಾಗೂ ಸಂಕಲ್ಪ ದಿವಸ ಕಾರ್ಯಕ್ರಮದಲ್ಲಿ ವಿವಿಧ ವಯೋ ಮಾನದ ಯೋಗಪಟುಗಳು ಪಾಲ್ಗೊಂಡು ಸಾಮೂಹಿಕ ಸೂರ್ಯ ನಮಸ್ಕಾರದಲ್ಲಿ ಪಾಲ್ಗೊಂಡರು. ಅರಮನೆ ಮುಂಭಾಗದ ವೇದಿಕೆ ಮೇಲಿದ್ದ ಯೋಗ ಶಿಕ್ಷಕರು…

1 104 105 106 107 108 1,611
Translate »