ಮೈಸೂರು

ತನಿಖೆ ಕುರಿತು ಸರ್ಕಾರಿ ಅಭಿಯೋಜಕರಿಂದ ಪೊಲೀಸರಿಗೆ ತರಬೇತಿ
ಮೈಸೂರು

ತನಿಖೆ ಕುರಿತು ಸರ್ಕಾರಿ ಅಭಿಯೋಜಕರಿಂದ ಪೊಲೀಸರಿಗೆ ತರಬೇತಿ

December 28, 2018

ಮೈಸೂರು: ಅಪರಾಧ ವೆಸಗಿದವರಿಗೆ ಶಿಕ್ಷೆಯಾಗಬೇಕಿದ್ದರೆ ತನಿಖೆ ಸಮಂಜಸವಾಗಿರಬೇಕೆಂದು ಹಿರಿಯ ಸರ್ಕಾರಿ ಅಭಿಯೋಜಕ ಆನಂದ ಕುಮಾರ್, ಪೊಲೀಸರಿಗೆ ಸಲಹೆ ನೀಡಿದ್ದಾರೆ. ಅಪರಾಧ ತಡೆ ಮಾಸಾಚರಣೆ ಅಂಗವಾಗಿ ಮೈಸೂರಿನ ಜೆಎಲ್‍ಬಿ ರಸ್ತೆಯಲ್ಲಿರುವ ಕೃಷ್ಣ ರಾಜ ಉಪ ವಿಭಾಗದ ಎಸಿಪಿ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ತನಿಖೆ ಕುರಿತ ತರಬೇತಿ ಕಾರ್ಯಾಗಾರದಲ್ಲಿ ಪಾಲ್ಗೊಂಡು ಉಪನ್ಯಾಸ ನೀಡಿದ ಅವರು, ಅಪರಾಧಿ ಗಳಿಗೆ ಶಿಕ್ಷೆಯಾಗುವುದು ತನಿಖಾಧಿಕಾರಿ ಗಳ ತನಿಖೆ ಕಾರ್ಯವನ್ನು ಅವಲಂಬಿಸಿದೆ. ಯಾವುದೇ ಅಪರಾಧ ಕೃತ್ಯ ನಡೆದಾಗ ಪೊಲೀಸರು ತಕ್ಷಣ ಸ್ಥಳಕ್ಕೆ ತೆರಳಿ ಖುದ್ದಾಗಿ ಮಹಜರು…

ಸಂಗೀತ, ನೃತ್ಯದಂತಹ ಚಟುವಟಿಕೆಯಿಂದ ನೆಮ್ಮದಿ, ಆರೋಗ್ಯ ಕಾಯ್ದುಕೊಳ್ಳಲು ಸಾಧ್ಯ
ಮೈಸೂರು

ಸಂಗೀತ, ನೃತ್ಯದಂತಹ ಚಟುವಟಿಕೆಯಿಂದ ನೆಮ್ಮದಿ, ಆರೋಗ್ಯ ಕಾಯ್ದುಕೊಳ್ಳಲು ಸಾಧ್ಯ

December 28, 2018

ವಿಶ್ರಾಂತ ಕುಲಪತಿ ಪ್ರೊ.ರಂಗಪ್ಪ ಅಭಿಮತ ಮೈಸೂರು: ಮನುಷ್ಯ ನೆಮ್ಮದಿ, ಆರೋಗ್ಯದಿಂದ ಇರಬೇಕಾದರೆ ಸಂಗೀತ, ನೃತ್ಯದಂತಹ ಚಟುವಟಿಕೆಗಳಿಂದ ಮಾತ್ರ ಸಾಧ್ಯ ಎಂದು ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಅಭಿಪ್ರಾಯಪಟ್ಟರು. ನಾದಬ್ರಹ್ಮ ಸಂಗೀತ ಸಭಾದಲ್ಲಿ ಭಾರ ತೀಯ ನೃತ್ಯ ಕಲಾ ಪರಿಷತ್ ಆಯೋಜಿ ಸಿದ್ದ ನಾಟ್ಯಾಚಾರ್ಯ ಎಂ.ವಿಷ್ಣುದಾಸ್ ಸಂಸ್ಮರಣಾ 27ನೇ ನೃತ್ಯೋತ್ಸವ-2018ರ ಸಮಾರೋಪದಲ್ಲಿ ಮಾತನಾಡಿದ ಅವರು, ಮನುಷ್ಯ ಸಂಗೀತ, ನೃತ್ಯದಂತಹ ಚಟು ವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಆಗ ಮನಸ್ಸಿಗೆ ನೆಮ್ಮದಿ, ಆರೋಗ್ಯದಿಂದ ಇರಲು ಸಾಧ್ಯ. ಇದನ್ನು ನನ್ನ ವೈಜ್ಞಾನಿಕ ಸಂಶೋ…

ಕಾಂಗ್ರೆಸ್‍ನಲ್ಲೀಗ ಖಾತೆ ಕ್ಯಾತೆ
ಮೈಸೂರು

ಕಾಂಗ್ರೆಸ್‍ನಲ್ಲೀಗ ಖಾತೆ ಕ್ಯಾತೆ

December 27, 2018

ಬೆಂಗಳೂರು: ಮುಖ್ಯಮಂತ್ರಿ ಕುಮಾರಸ್ವಾಮಿ ಸಂಪುಟಕ್ಕೆ ಹೊಸದಾಗಿ ಸೇರ್ಪಡೆ ಗೊಂಡಿರುವ ಎಂಟು ಮಂತ್ರಿಗಳಿಗೆ ಖಾತೆ ಹಂಚಿಕೆ ಮಾಡಲು ಇಂದು ಸೇರಿದ್ದ ರಾಜ್ಯ ಕಾಂಗ್ರೆಸ್ ನಾಯಕರ ಸಭೆ ವಿಫಲಗೊಂಡಿದೆ. ಅಷ್ಟೇ ಅಲ್ಲ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ನಡುವೆ ಕಾವೇರಿದ ಮಾತಿನ ಚಕಮಕಿ ನಡೆದಿದೆ. ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಸೇರಿದಂತೆ ಕೆಲವು ಹಿರಿಯ ಸಚಿವರು ತಮ್ಮ ಬಳಿ ಇರುವ ಹೆಚ್ಚುವರಿ ಖಾತೆಗಳನ್ನು ಬಿಟ್ಟು ಕೊಡದಿ ರಲು ಪಟ್ಟು ಹಿಡಿದಿರುವುದೇ ಇದಕ್ಕೆ ಕಾರಣ….

ಚೆನ್ನೈ-ಬೆಂಗಳೂರು ಸೂಪರ್ ಫಾಸ್ಟ್ ರೈಲು ಮೈಸೂರಿಗೆ, ಇತರೆ ಮೂರು ರೈಲು ಅಶೋಕಪುರಂ ಸ್ಟೇಷನ್‍ಗೆ ವಿಸ್ತರಣೆ
ಮೈಸೂರು

ಚೆನ್ನೈ-ಬೆಂಗಳೂರು ಸೂಪರ್ ಫಾಸ್ಟ್ ರೈಲು ಮೈಸೂರಿಗೆ, ಇತರೆ ಮೂರು ರೈಲು ಅಶೋಕಪುರಂ ಸ್ಟೇಷನ್‍ಗೆ ವಿಸ್ತರಣೆ

December 27, 2018

ಮೈಸೂರು: ಚೆನ್ನೈ-ಬೆಂಗಳೂರು ಸೂಪರ್ ಫಾಸ್ಟ್ ರೈಲು ಮೈಸೂರಿಗೂ ಹಾಗೂ ಮೈಸೂರು-ಬೆಂಗಳೂರು ನಡುವೆ ಈಗಾಗಲೇ ಸಂಚರಿಸುತ್ತಿರುವ ರೈಲುಗಳ ಪೈಕಿ 3 ರೈಲುಗಳ ಸೇವೆಯನ್ನು ಮೈಸೂರಿನ ಅಶೋಕಪುರಂವರೆಗೆ ವಿಸ್ತರಿಸುವ ಭರವಸೆಯನ್ನು ಕೇಂದ್ರದ ರೈಲ್ವೆ ಸಚಿವ ಪಿಯೂಷ್ ಗೋಯಲ್ ನೀಡಿದ್ದಾರೆ. ಇಂದು ಮೈಸೂರಿಗೆ ಆಗಮಿಸಿದ್ದ ಸಚಿವರಿಗೆ ಸಂಸದ ಪ್ರತಾಪ್ ಸಿಂಹ ಅವರು ಮನವಿ ಸಲ್ಲಿಸಿ, ಸಾಂಸ್ಕೃತಿಕ ನಗರಿ ಮೈಸೂರು ಪ್ರವಾಸೋದ್ಯಮ ಅಭಿವೃದ್ಧಿ ದೃಷ್ಟಿಯಿಂದ ಪ್ರವಾಸಿಗರಿಗೆ ಅನುಕೂಲವಾಗುವಂತೆ ಹಾಲಿ ಚೆನ್ನೈ-ಬೆಂಗಳೂರು ಸೂಪರ್ ಫಾಸ್ಟ್ ಎಕ್ಸ್‍ಪ್ರೆಸ್ ಅನ್ನು ಮೈಸೂರಿಗೆ ವಿಸ್ತರಿಸುವಂತೆ ಕೋರಿದರು. ಅಲ್ಲದೆ ಈಗಾಗಲೇ…

ಸಿಎಂ ಕುಮಾರಸ್ವಾಮಿ-ಕೇಂದ್ರ ಸಚಿವ ನಿತಿನ್ ಗಡ್ಕರಿ ಭೇಟಿ
ಮೈಸೂರು

ಸಿಎಂ ಕುಮಾರಸ್ವಾಮಿ-ಕೇಂದ್ರ ಸಚಿವ ನಿತಿನ್ ಗಡ್ಕರಿ ಭೇಟಿ

December 27, 2018

ನವದೆಹಲಿ: ಸಿಎಂ ಕುಮಾರಸ್ವಾಮಿ ಇಂದು ನವದೆಹಲಿಯಲ್ಲಿ ಕೇಂದ್ರ ಭೂ ಹೆದ್ದಾರಿ ಮತ್ತು ಜಲ ಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿದ್ದಾರೆ. ಉಭಯ ನಾಯಕರು ರಾಜ್ಯದ ವಿವಿಧ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ ಹಾಗೂ ಮೇಕೆದಾಟು ಯೋಜನೆ ಸಂಬಂಧ ಚರ್ಚೆ ನಡೆಸಿದ್ದಾರೆ. ಮೇಕೆದಾಟು ಯೋಜನೆಗೆ ತಮಿಳುನಾಡು ಮತ್ತೆ ಕ್ಯಾತೆ ತೆಗೆದಿರುವ ಹಿನ್ನೆಲೆಯಲ್ಲಿ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದು ಚರ್ಚಿ ನಡೆಸಲು ಕೇಂದ್ರ ಸಚಿವ ಗಡ್ಕರಿ ಸಮ್ಮತಿಸಿದ್ದಾರೆ. ಮೇಕೆದಾಟು ಯೋಜನೆ ಯಿಂದಾಗಿ ಎರಡೂ ರಾಜ್ಯಗಳಿಗೆ ಲಾಭವಾಗಲಿದೆ, ಅದರಲ್ಲಿಯೂ ತಮಿಳುನಾಡಿಗೆ…

ಹಿಂಗಾರು, ಮುಂಗಾರು ವೈಫಲ್ಯ: ರಾಜ್ಯದ 156 ತಾಲೂಕಿನಲ್ಲಿ ಬರ
ಮೈಸೂರು

ಹಿಂಗಾರು, ಮುಂಗಾರು ವೈಫಲ್ಯ: ರಾಜ್ಯದ 156 ತಾಲೂಕಿನಲ್ಲಿ ಬರ

December 27, 2018

ಬೆಂಗಳೂರು: ಮುಂಗಾರು, ಹಿಂಗಾರು ಮಳೆ ವೈಫಲ್ಯ ದಿಂದ 20 ಸಾವಿರ ಕೋಟಿ ರೂ.ಗೂ ಹೆಚ್ಚು ಬೆಳೆ ನಷ್ಟವಾಗಿದ್ದು, ಮತ್ತೆ ಐವತ್ತಾರು ತಾಲೂಕುಗಳನ್ನು ಹೊಸದಾಗಿ ಬರ ಪೀಡಿತ ಎಂದು ರಾಜ್ಯ ಸರ್ಕಾರ ಇಂದಿಲ್ಲಿ ಘೋಷಣೆ ಮಾಡಿದೆ. ಈ ಹಿಂದೆ ಮುಂಗಾರು ವೈಫಲ್ಯದಿಂದ ಹಳೇ ಮೈಸೂರು ಮಧ್ಯ ಕರ್ನಾಟಕ ಭಾಗದ ನೂರು ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಣೆ ಮಾಡಲಾಗಿತ್ತು. ಇದೀಗ ಉತ್ತರ ಕರ್ನಾಟಕ ಭಾಗದಲ್ಲಿ ಹಿಂಗಾರು ಮಳೆ ಸಂಪೂರ್ಣ ವಾಗಿ ಕೈಕೊಟ್ಟಿರುವು ದರಿಂದ ರಾಜ್ಯದಲ್ಲಿ ಒಟ್ಟಾರೆ 20 ತಾಲೂಕು…

ಠೇವಣಿ ವಾಪಸ್‍ಗಾಗಿ ಅರ್ಜಿ ಸಲ್ಲಿಸಲು ಮೈಸೂರು  ಎಸಿ ಕಚೇರಿಗೆ ಮುಗಿಬಿದ್ದ ಗ್ರೀನ್ ಬಡ್ಸ್ ಹೂಡಿಕೆದಾರರು
ಮೈಸೂರು

ಠೇವಣಿ ವಾಪಸ್‍ಗಾಗಿ ಅರ್ಜಿ ಸಲ್ಲಿಸಲು ಮೈಸೂರು ಎಸಿ ಕಚೇರಿಗೆ ಮುಗಿಬಿದ್ದ ಗ್ರೀನ್ ಬಡ್ಸ್ ಹೂಡಿಕೆದಾರರು

December 27, 2018

ಮೈಸೂರು: ಮೈಸೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿನ ಉಪ ವಿಭಾಗಾಧಿಕಾರಿ ಕಚೇರಿ ಬುಧವಾರ ಅಕ್ಷರಶಃ ಜನಜಾತ್ರೆಯಂತಾಗಿತ್ತು. ಗ್ರೀನ್ ಬಡ್ಸ್ ಸಂಸ್ಥೆಯ ಅಧಿಕ ಬಡ್ಡಿ ಆಮಿಷಕ್ಕೆ ಒಳಗಾಗಿ ಕಷ್ಟಾರ್ಜಿತ ಹಣವನ್ನೆಲ್ಲಾ ಠೇವಣಿ ಇರಿಸಿ ಕಳೆದುಕೊಂಡಿರುವ ರಾಜ್ಯದ ವಿವಿಧೆಡೆಯ ಸಾವಿರಾರು ಹೂಡಿಕೆದಾರರು ತಮ್ಮ ಹಣ ವಾಪಸ್ ಕೊಡಿಸುವಂತೆ ಮನವಿ ಸಲ್ಲಿಸಲು ಉಪ ವಿಭಾಗಾಧಿಕಾರಿ ಹೆಚ್.ಎನ್. ಶಿವೇಗೌಡರ ಕಚೇರಿಗೆ ಮುಗಿಬಿದ್ದಿದ್ದರು. ಕಳೆದೊಂದು ತಿಂಗಳಿಂದ ಹೂಡಿಕೆ ವಾಪಸ್ ಕೋರಿ ಮನವಿ ಸಲ್ಲಿಸುವ ಪ್ರಕ್ರಿಯೆ ನಡೆಯುತ್ತಿದ್ದು, ಈವರೆಗೆ 1.18 ಲಕ್ಷ ಠೇವಣಿ ಬಾಂಡ್‍ಗಳು ಸಲ್ಲಿಕೆಯಾಗಿವೆ. ಬುಧವಾರ ಒಂದೇ…

ಐದೇ ದಿನದಲ್ಲಿ ಹಂದಿ ಜ್ವರಕ್ಕೆ ಮೈಸೂರಲ್ಲಿ ಇಬ್ಬರು ಸೇರಿ ರಾಜ್ಯದಲ್ಲಿ 12 ಮಂದಿ ಸಾವು
ಮೈಸೂರು

ಐದೇ ದಿನದಲ್ಲಿ ಹಂದಿ ಜ್ವರಕ್ಕೆ ಮೈಸೂರಲ್ಲಿ ಇಬ್ಬರು ಸೇರಿ ರಾಜ್ಯದಲ್ಲಿ 12 ಮಂದಿ ಸಾವು

December 27, 2018

ಬೆಂಗಳೂರು: ರಾಜ್ಯದಲ್ಲಿ ಹಂದಿಜ್ವರ (ಎಚ್1ಎನ್1) ಮಹಾಮಾರಿ ದಿನ ಕಳೆದಂತೆ ತೀವ್ರಗೊಳ್ಳುತ್ತಿದ್ದು, ಮಾರಣಾಂತಿಕ ಕಾಯಿಲೆಗೆ ಕಳೆದ ಐದು ದಿನದಲ್ಲಿ ಮೈಸೂರಲ್ಲಿ ಇಬ್ಬರು ಸೇರಿ 12 ಮಂದಿ ಬಲಿಯಾಗಿರುವುದಾಗಿ ವರದಿಯಾಗಿದೆ. ಈ ಮೂಲಕ ಪ್ರಸಕ್ತ ವರ್ಷ ಹಂದಿ ಜ್ವರ ಸೋಂಕಿಗೆ ಪ್ರಾಣ ಕಳೆದುಕೊಂಡವರ ಸಂಖ್ಯೆ 44ಕ್ಕೆ ಏರಿಕೆಯಾಗಿದೆ. ಆರೋಗ್ಯ ಇಲಾಖೆಯ ಹಂದಿ ಜ್ವರ ಸಾವಿನ ಪ್ರಕರಣಗಳ ಅಂಕಿ ಅಂಶಗಳ ಪ್ರಕಾರ ಡಿ.20ರಿಂದ ಈಚೆಗೆ 12 ಸಾವು ಸಂಭವಿಸಿದೆ. ಕೊಪ್ಪಳ ಜಿಲ್ಲೆಯಲ್ಲಿ 3, ಬಿಬಿಎಂಪಿ 1, ಬೆಂಗ ಳೂರು ನಗರ 1,…

ಮೈಸೂರಿಗೆ ಕೇಂದ್ರ ರೈಲ್ವೆ ಸಚಿವ  ಪಿಯೂಷ್ ಗೋಯಲ್ ಭೇಟಿ
ಮೈಸೂರು

ಮೈಸೂರಿಗೆ ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಭೇಟಿ

December 27, 2018

ಮೈಸೂರು: ಕೇಂದ್ರದ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರು ಬುಧವಾರ ಮೈಸೂರಿಗೆ ಭೇಟಿ ನೀಡಿದ್ದರು.ವಿಶೇಷ ವಿಮಾನದಲ್ಲಿ ಇಂದು ಮಧ್ಯಾಹ್ನ ಆಗಮಿಸಿದ್ದ ಸಚಿವರನ್ನು ಸಂಸದ ಪ್ರತಾಪ್ ಸಿಂಹ ಹಾಗೂ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅವರು ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಪುಷ್ಪಗುಚ್ಛ ನೀಡುವ ಮೂಲಕ ಬರಮಾಡಿಕೊಂಡರು. ಶಾಸಕ ಎಸ್.ಎ. ರಾಮದಾಸ್, ಬಿಜೆಪಿ ರಾಜ್ಯ ಕಾರ್ಯ ದರ್ಶಿ ಎಂ.ರಾಜೇಂದ್ರ, ಡಿವಿಷನಲ್ ರೈಲ್ವೆ ಮ್ಯಾನೇಜರ್ ಅಪರ್ಣ ಗರ್ಗ್, ಮುಡಾ ಕಮೀಷ್ನರ್ ಪಿ.ಎಸ್.ಕಾಂತರಾಜು ಹಾಗೂ ಇತರರು ಈ ಸಂದರ್ಭ ಹಾಜರಿದ್ದು, ಸಚಿವ ರನ್ನು ಬರಮಾಡಿಕೊಂಡರು….

ಮೈಸೂರು ಕೇಕ್ ಉತ್ಸವ-2018ಕ್ಕೆ ಚಾಲನೆ
ಮೈಸೂರು

ಮೈಸೂರು ಕೇಕ್ ಉತ್ಸವ-2018ಕ್ಕೆ ಚಾಲನೆ

December 27, 2018

ಮೈಸೂರು: ಮಾಗಿ ಉತ್ಸವದ ಅಂಗವಾಗಿ ಕುವೆಂಪುನಗರದ ಜಯಮ್ಮ ಗೋವಿಂದೇಗೌಡ ಕಲ್ಯಾಣ ಮಂಟಪದಲ್ಲಿ ಇಂದಿನಿಂದ 3 ದಿನಗಳ ಕಾಲ ಆಯೋಜಿಸಿರುವ `ಮೈಸೂರು ಕೇಕ್ ಉತ್ಸವ- 2018’ಕ್ಕೆ ಬುಧವಾರ ಚಾಲನೆ ನೀಡಲಾಯಿತು. ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆ, ಕೃಷಿ, ಅರಣ್ಯ ಇಲಾಖೆ ಮತ್ತು ಶ್ರೀ ಚಾಮರಾಜೇಂದ್ರ ಮೃಗಾಲಯ ಸಹಯೋಗದಲ್ಲಿ ಆಯೋಜಿಸಿರುವ ಕೇಕ್ ಉತ್ಸವಕ್ಕೆ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್, ಮಕ್ಕಳಿಗೆ ಕೇಕ್ ತಿನ್ನಿ ಸುವ ಮೂಲಕ ಚಾಲನೆ ನೀಡಿದರು. ಯಾವೆಲ್ಲಾ ಕೇಕ್‍ಗಳಿವೆ: ಕೇಕ್…

1 1,211 1,212 1,213 1,214 1,215 1,611
Translate »