ತನಿಖೆ ಕುರಿತು ಸರ್ಕಾರಿ ಅಭಿಯೋಜಕರಿಂದ ಪೊಲೀಸರಿಗೆ ತರಬೇತಿ
ಮೈಸೂರು

ತನಿಖೆ ಕುರಿತು ಸರ್ಕಾರಿ ಅಭಿಯೋಜಕರಿಂದ ಪೊಲೀಸರಿಗೆ ತರಬೇತಿ

December 28, 2018

ಮೈಸೂರು: ಅಪರಾಧ ವೆಸಗಿದವರಿಗೆ ಶಿಕ್ಷೆಯಾಗಬೇಕಿದ್ದರೆ ತನಿಖೆ ಸಮಂಜಸವಾಗಿರಬೇಕೆಂದು ಹಿರಿಯ ಸರ್ಕಾರಿ ಅಭಿಯೋಜಕ ಆನಂದ ಕುಮಾರ್, ಪೊಲೀಸರಿಗೆ ಸಲಹೆ ನೀಡಿದ್ದಾರೆ.

ಅಪರಾಧ ತಡೆ ಮಾಸಾಚರಣೆ ಅಂಗವಾಗಿ ಮೈಸೂರಿನ ಜೆಎಲ್‍ಬಿ ರಸ್ತೆಯಲ್ಲಿರುವ ಕೃಷ್ಣ ರಾಜ ಉಪ ವಿಭಾಗದ ಎಸಿಪಿ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ತನಿಖೆ ಕುರಿತ ತರಬೇತಿ ಕಾರ್ಯಾಗಾರದಲ್ಲಿ ಪಾಲ್ಗೊಂಡು ಉಪನ್ಯಾಸ ನೀಡಿದ ಅವರು, ಅಪರಾಧಿ ಗಳಿಗೆ ಶಿಕ್ಷೆಯಾಗುವುದು ತನಿಖಾಧಿಕಾರಿ ಗಳ ತನಿಖೆ ಕಾರ್ಯವನ್ನು ಅವಲಂಬಿಸಿದೆ. ಯಾವುದೇ ಅಪರಾಧ ಕೃತ್ಯ ನಡೆದಾಗ ಪೊಲೀಸರು ತಕ್ಷಣ ಸ್ಥಳಕ್ಕೆ ತೆರಳಿ ಖುದ್ದಾಗಿ ಮಹಜರು ನಡೆಸಬೇಕು. ಆ ಕ್ಷಣದಲ್ಲಿ ಲಭ್ಯವಾದ ಸಾಕ್ಷ್ಯವನ್ನು ಸಂಗ್ರ ಹಿಸುವುದು ಅತೀ ಮುಖ್ಯ ಎಂದು ಅವರು ನುಡಿದರು.

ತಾವು ವಶಪಡಿಸಿಕೊಳ್ಳುವ ಆಯುಧ, ವಸ್ತು ಗಳನ್ನು ಸರಿಯಾಗಿ ಸಂರಕ್ಷಿಸಿ ವಿಚಾರಣೆ ವೇಳೆ ನ್ಯಾಯಾಧೀಶರ ಮುಂದೆ ಸಲ್ಲಿಸ ಬೇಕು. ಆರೋಪಿಗಳ ಬಂಧನ, ನ್ಯಾಯಾ ಧೀಶರ ಮುಂದೆ ಹಾಜರುಪಡಿಸುವಾಗ ನಿಯಮವನ್ನು ತಪ್ಪದೇ ಪಾಲಿಸಬೇಕು ಎಂದ ಆನಂದಕುಮಾರ್, ತನಿಖೆಯಲ್ಲಿ ಮತ್ತು ದೋಷಾರೋಪಣಾ ಪಟ್ಟಿಯಲ್ಲಿ ಲೋಪವೆಸಗಿದಲ್ಲಿ ಆರೋಪಿ ಶಿಕ್ಷೆಯಿಂದ ನುಣುಚಿಕೊಳ್ಳುವ ಸಾಧ್ಯತೆ ಇದೆ ಎಂದರು.

ಕಾಲ ಕಾಲಕ್ಕೆ ಬದಲಾಗುವ ಕಾನೂನು ಗಳನ್ನು ತಿಳಿದುಕೊಂಡು ಉತ್ತಮ ರೀತಿ ಯಲ್ಲಿ ತನಿಖೆ ನಡೆಸಿದರೆ ಮಾತ್ರ ಆರೋಪಿ ಗಳ ಶಿಕ್ಷೆ ಪ್ರಮಾಣ ಹೆಚ್ಚಿಸಲು ಸಾಧ್ಯ. ಸಿಡಿಆರ್ ತನಿಖೆ, ಸಾಕ್ಷಿದಾರರನ್ನು ಪ್ರಕ ರಣದ ವಿಚಾರಣೆ ಪೂರ್ಣಗೊಳ್ಳುವವ ರೆಗೆ ಬದಲಾಗದಂತೆ ನೋಡಿಕೊಂಡರೆ ಮಾತ್ರ ನಿಜವಾದ ಆರೋಪಿಗೆ ಶಿಕ್ಷೆಯಾ ಗಲು ಸಾಧ್ಯ. ಆ ನಿಟ್ಟಿನಲ್ಲಿ ತನಿಖಾಧಿಕಾರಿ ಗಳು ಹಾಗೂ ಸಿಬ್ಬಂದಿ ತಯಾರಿ ನಡೆಸು ವುದು ಅಗತ್ಯ ಎಂದು ಆನಂದಕುಮಾರ್ ತಿಳಿಸಿದರು. ಕೆ.ಆರ್.ಉಪ ವಿಭಾಗದ ಎಸಿಪಿ ಧರ್ಮಪ್ಪ, ಉಪ ವಿಭಾಗದ ಇನ್ಸ್ ಪೆಕ್ಟರ್‍ಗಳು, ಠಾಣಾ ಬರಹಗಾರರು ಹಾಗೂ ಕ್ರೈಂ ಸಿಬ್ಬಂದಿಗಳು ತರಬೇತಿ ಕಾರ್ಯಕ್ರಮದಲ್ಲಿ ಹಾಜರಿದ್ದರು.

Translate »