ಸಂಗೀತ, ನೃತ್ಯದಂತಹ ಚಟುವಟಿಕೆಯಿಂದ ನೆಮ್ಮದಿ, ಆರೋಗ್ಯ ಕಾಯ್ದುಕೊಳ್ಳಲು ಸಾಧ್ಯ
ಮೈಸೂರು

ಸಂಗೀತ, ನೃತ್ಯದಂತಹ ಚಟುವಟಿಕೆಯಿಂದ ನೆಮ್ಮದಿ, ಆರೋಗ್ಯ ಕಾಯ್ದುಕೊಳ್ಳಲು ಸಾಧ್ಯ

December 28, 2018

ವಿಶ್ರಾಂತ ಕುಲಪತಿ ಪ್ರೊ.ರಂಗಪ್ಪ ಅಭಿಮತ
ಮೈಸೂರು: ಮನುಷ್ಯ ನೆಮ್ಮದಿ, ಆರೋಗ್ಯದಿಂದ ಇರಬೇಕಾದರೆ ಸಂಗೀತ, ನೃತ್ಯದಂತಹ ಚಟುವಟಿಕೆಗಳಿಂದ ಮಾತ್ರ ಸಾಧ್ಯ ಎಂದು ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಅಭಿಪ್ರಾಯಪಟ್ಟರು.

ನಾದಬ್ರಹ್ಮ ಸಂಗೀತ ಸಭಾದಲ್ಲಿ ಭಾರ ತೀಯ ನೃತ್ಯ ಕಲಾ ಪರಿಷತ್ ಆಯೋಜಿ ಸಿದ್ದ ನಾಟ್ಯಾಚಾರ್ಯ ಎಂ.ವಿಷ್ಣುದಾಸ್ ಸಂಸ್ಮರಣಾ 27ನೇ ನೃತ್ಯೋತ್ಸವ-2018ರ ಸಮಾರೋಪದಲ್ಲಿ ಮಾತನಾಡಿದ ಅವರು, ಮನುಷ್ಯ ಸಂಗೀತ, ನೃತ್ಯದಂತಹ ಚಟು ವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಆಗ ಮನಸ್ಸಿಗೆ ನೆಮ್ಮದಿ, ಆರೋಗ್ಯದಿಂದ ಇರಲು ಸಾಧ್ಯ. ಇದನ್ನು ನನ್ನ ವೈಜ್ಞಾನಿಕ ಸಂಶೋ ಧನೆಯಲ್ಲಿ ಹೇಳಲಾಗಿದೆ ಎಂದರು.

ವಿದ್ವಾಂಸರ ಆರೋಗ್ಯವನ್ನು ಕ್ರೀಡಾ ಪಟುಗಳ ಆರೋಗ್ಯಕ್ಕೆ ಹೋಲಿಸಿದರೆ ಬೇರೆ ಬೇರೆಯೇ ಇರುತ್ತದೆ. ಅಂದರೆ, 70ವರ್ಷದ ತಾಯಂದಿರು 1 ಗಂಟೆ ಸಂಗೀತವನ್ನು ಆಲಿಸಿದರೆ 10 ಗಂಟೆ ಲವಲವಿಕೆಯಿಂದ ಕೆಲಸ ಮಾಡುತ್ತಾರೆ. ಆದರೆ, ಇಂದಿನ ಪೀಳಿಗೆ ಒತ್ತಡದ ಜೀವನ ನಡೆಸುತ್ತಿರುವುದರಿಂದ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಹಾಗಾಗಿ 45 ವರ್ಷಕ್ಕೆ ಷುಗರ್, 50 ವರ್ಷಕ್ಕೆ ಬಿ.ಪಿ, ಷುಗರ್ ಎರಡೂ ಇರುತ್ತದೆ. ಆದ್ದರಿಂದ ಸಂಗೀತ, ನೃತ್ಯದಂತಹ ಚಟುವಟಿಕೆಗಳಲ್ಲಿ ತೊಡಗಿಸಿ ಕೊಳ್ಳಬೇಕು. ಇಲ್ಲವಾದಲ್ಲಿ ಮನುಷ್ಯನ ಜೀವನ ಹಸನಾಗಲು ಸಾಧ್ಯವಿಲ್ಲ ಎಂದು ಹೇಳಿದರು.

ನಾನು ಸಂಶೋಧನಾ ಲ್ಯಾಬ್‍ನಲ್ಲಿ ಹೆಚ್ಚು ಕಾಲ ಕಳೆಯುತ್ತಿದ್ದೆ. ಅಲ್ಲಿಗೆ ಹೋದಾಗ ಮನಸ್ಸಿಗೆ ಸಂತೋಷವಾಗುತ್ತಿತ್ತು. ಈಗಲೂ ಅಷ್ಟೆ ರಾಜಕೀಯ ವಿಷಯ ಬಂದಾಗ ಒತ್ತಡದ ಲ್ಲಿರುತ್ತೇನೆ. ಈ ವೇಳೆ ಲ್ಯಾಬ್‍ಗೆ ಹೋದಾಗ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಎಂದ ಅವರು, ನನ್ನಿಂದ ಏನಾದರೂ ಶೈಕ್ಷಣಿಕ, ರಾಜಕೀಯ ವಾಗಿ ಸಹಾಯ ಬೇಕಿದ್ದರೆ ಸಹಾಯ ಮಾಡು ವುದಾಗಿ ಭರವಸೆ ನೀಡಿದರು.

ಮೈಸೂರು ವಿದ್ಯೆ, ಕಲೆ, ಸಂಗೀತಕ್ಕೆ ಹೆಸರು ವಾಸಿಯಾಗಿದ್ದು, ವಿದ್ವಾಂಸರು, ಪಾಂಡಿತ್ಯ ಪಡೆದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹಾಗಾಗಿ ದೇಶ-ವಿದೇಶಗಳಲ್ಲೂ ಮೈಸೂರನ್ನು ನೆನಪಿಸಿಕೊಳ್ಳುತ್ತಾರೆ. ಈ ಪರಂಪರೆಯನ್ನು ಉಳಿಸಿ, ಬೆಳೆಸಿಕೊಂಡು ಹೋಗಬೇಕು. ಜತೆಗೆ ಪಾಂಡಿತ್ಯ ಪಡೆದ ವರು, ದೇಶಕ್ಕಾಗಿ ಕೊಡುಗೆ ನೀಡಿದ ಮಹ ನೀಯರನ್ನು ಸ್ಮರಿಸ ಬೇಕು. ಆದರೆ, ಇಂದಿನ ಪೀಳಿಗೆ ಮರೆಯು ತ್ತಿರುವುದು ಬೇಸರದ ಸಂಗತಿ. ಈ ವೇಳೆ ನಾಟ್ಯಾಚಾರ್ಯ ವಿಷ್ಣುದಾಸ್ ಅವರನ್ನು ಸ್ಮರಿಸುತ್ತಿರುವುದು ಸಂತಸ ತಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಮೈಸೂರು ವಿವಿ ಲಲಿತಾಕಲಾ ಕಾಲೇಜು ನೃತ್ಯ ವಿಭಾಗದ ಸಹ ಪ್ರಾಧ್ಯಾಪಕ ಡಾ.ಕೆ.ಕುಮಾರ ಅವರನ್ನು ಸನ್ಮಾನಿಸಲಾಯಿತು. ಕಲಾವಿದ ಬಿ.ಎಂ.ರಾಮ ಚಂದ್ರ, ಭಾರತೀಯ ನೃತ್ಯ ಕಲಾ ಪರಿಷತ್ ಅಧ್ಯಕ್ಷೆ ಎ.ಚಂದ್ರಮತಿ, ಕಾರ್ಯದರ್ಶಿ ಡಾ.ಕುಮುದಿನಿ ಅಚ್ಚಿ ಉಪಸ್ಥಿತರಿದ್ದರು.
ನಂತರ ನರ್ತನ ಶಾಲಾ ವಿದ್ಯಾರ್ಥಿಗಳು ಭರತನಾಟ್ಯ, ಉಮಾಮಹೇಶ್ವರ ನೃತ್ಯಕಲಾ ಕ್ಷೇತ್ರದ ವಿದ್ಯಾರ್ಥಿಗಳು ಹನು ಮಾನ್ ಚಾಲೀಸಾ ನೃತ್ಯ ರೂಪಕ ಪ್ರಸ್ತುತಪಡಿಸಿದರು.

Translate »