ಮೈಸೂರು

ಮೈಸೂರಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶ
ಮೈಸೂರು

ಮೈಸೂರಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶ

December 27, 2018

ಮೈಸೂರು: ಮಾಜಿ ಸಚಿವ ತನ್ವೀರ್ ಸೇಠ್ ಅವರಿಗೆ ಸಚಿವ ಸ್ಥಾನ ನೀಡದಿರುವ ಕಾಂಗ್ರೆಸ್ ಹೈಕಮಾಂಡ್ ಧೋರಣೆಯನ್ನು ಖಂಡಿಸಿ, ತನ್ವೀರ್‍ಸೇಠ್ ಅಭಿಮಾನಿ ಬಳಗದ ಸದಸ್ಯರು ಹಾಗೂ ಎನ್.ಆರ್. ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ಬನ್ನಿಮಂಟಪದ ಹೈವೇ ವೃತ್ತದ ಬಳಿ ಬುಧವಾರ ಸಂಜೆ ರಸ್ತೆ ತಡೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯ ನೇತೃತ್ವವನ್ನು ಅಜೀಜ್ ಸೇಠ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಖಾದರ್ ಶಾಹಿದ್ ವಹಿಸಿದ್ದರು. ಕಾಂಗ್ರೆಸ್ ರಾಜ್ಯ ನಾಯಕರ ವಿರುದ್ಧ ವಿವಿಧ ಘೋಷಣೆಗಳನ್ನು ಕೂಗಿ, ತನ್ವೀರ್ ಸೇಠ್ ಅವರಿಗೆ ಈ…

ಮುಸ್ಲಿಂರ ಬಗ್ಗೆ ದ್ವಂದ್ವ ನಿಲುವು ತಾಳುವುದರಿಂದಲೇ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿಲ್ಲ
ಮೈಸೂರು

ಮುಸ್ಲಿಂರ ಬಗ್ಗೆ ದ್ವಂದ್ವ ನಿಲುವು ತಾಳುವುದರಿಂದಲೇ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿಲ್ಲ

December 27, 2018

ಮೈಸೂರು: ಉತ್ತರ ಪ್ರದೇಶ ದಲ್ಲಿ ಬಾಬ್ರಿ ಮಸೀದಿ ನೆಲಸಮ ವೇಳೆ ಕೇಂದ್ರದಲ್ಲಿ ನರಸಿಂಹರಾವ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿ ಕಾರದಲ್ಲಿತ್ತು. ಆದರೂ, ಅಂದು ಬಾಬ್ರಿ ಮಸೀದಿ ಕೆಡವು ದನ್ನು ತಡೆಗಟ್ಟಲು ಸಾಧ್ಯವಾಗಲಿಲ್ಲ ಎಂದು ಅಖಿಲ ಭಾರತ ಮಿಲ್ಲಿ ಕೌನ್ಸಿಲ್ ಮೈಸೂರು ಘಟಕದ ಅಧ್ಯಕ್ಷ ಮೌಲನಾ ಜûಖಾ ಉಲಾ ಬೇಸರ ವ್ಯಕ್ತಪಡಿಸಿದರು. ಮಾಜಿ ಸಚಿವ ತನ್ವೀರ್‍ಸೇಠ್ ಅವರಿಗೆ ಮಂತ್ರಿ ಸ್ಥಾನ ತಪ್ಪಿರುವ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸಿದ ನಂತರ ನಗರ ಖಾಸಗಿ ಹೋಟೆಲ್‍ನಲ್ಲಿ ಸಭೆ ನಡೆಸಿದರು. 1992 ರಲ್ಲಿ ಬಾಬ್ರಿ…

ಸುಳವಾಡಿ ವಿಷ ಪ್ರಸಾದ ಪ್ರಕರಣ ಸಂತ್ರಸ್ತರ ಬಗ್ಗೆ ಸಂದೇಶ್ ಕಳಕಳಿ
ಮೈಸೂರು

ಸುಳವಾಡಿ ವಿಷ ಪ್ರಸಾದ ಪ್ರಕರಣ ಸಂತ್ರಸ್ತರ ಬಗ್ಗೆ ಸಂದೇಶ್ ಕಳಕಳಿ

December 27, 2018

ಮೈಸೂರು: ಸುಳವಾಡಿ ವಿಷ ಪ್ರಸಾದ ಪ್ರಕರಣದ ಸಂತ್ರಸ್ತರ ವಿಷಯದಲ್ಲಿ ಘಟನೆ ನಡೆದ ದಿನದಿಂದಲೂ ನಿರಂತರ ಸಂಪರ್ಕದಲ್ಲಿರುವು ದಾಗಿ ವಿಧಾನ ಪರಿಷತ್ ಸದಸ್ಯ ಸಂದೇಶ್ ನಾಗರಾಜ್ ಸ್ಪಷ್ಟಪಡಿಸಿ ದ್ದಾರೆ. ದುರಂತ ನಡೆದ ದಿನ ಬೆಳಗಾವಿ ಚಳಿಗಾಲದ ಅಧಿವೇಶನ ದಲ್ಲಿ ಪಾಲ್ಗೊಂಡಿದ್ದು, ವಿಷಯ ತಿಳಿದ ಕೂಡಲೇ ಅಸುನೀಗಿದವರ ಕುಟುಂಬಗಳಿಗೆ ಸರ್ಕಾರ ತಕ್ಷಣ ಸೂಕ್ತ ಪರಿಹಾರ ಘೋಷಿಸ ಬೇಕು. ಅಸ್ವಸ್ಥರಿಗೆ ಅಗತ್ಯವಿರುವ ಎಲ್ಲಾ ಗುಣಮಟ್ಟದ ಚಿಕಿತ್ಸೆ ಯನ್ನು ಸರ್ಕಾರದ ವತಿಯಿಂದಲೇ ಕಲ್ಪಿಸಬೇಕೆಂದು ಆಗ್ರಹ ಪಡಿಸಿದ್ದಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಘಟನೆಗೆ ಕಾರಣಕರ್ತರಾದವರನ್ನು…

ಗಾಂಜಾ ಸೇವನೆ ಶಂಕೆ: ಮೂವರು ವಶಕ್ಕೆ
ಮೈಸೂರು

ಗಾಂಜಾ ಸೇವನೆ ಶಂಕೆ: ಮೂವರು ವಶಕ್ಕೆ

December 27, 2018

ಮೈಸೂರು: ಚಾಮುಂಡಿಬೆಟ್ಟದ ಪಾದದ ಬಳಿ ಗಾಂಜಾ ಸೇವಿಸುತ್ತಿದ್ದ ಶಂಕೆ ಮೇರೆಗೆ ಮೂವರನ್ನು ಕೆ.ಆರ್.ಠಾಣೆ ಪೆÇಲೀಸರು ವಶಕ್ಕೆ ಪಡೆದಿದ್ದಾರೆ. ನಗರದ ರಘು, ಉಮೇಶ್ ಮತ್ತು ವಿಜಿ ಎಂಬುವರು. ಮಂಗಳವಾರ ಸಂಜೆ 6 ಗಂಟೆ ಸಮಯದಲ್ಲಿ ಚಾಮುಂಡಿಬೆಟ್ಟದ ಪಾದದ ಬಳಿ ಇರುವ ದೃತಿ ಶೀಲಾನಂದ ಆಶ್ರಮದ ಬಳಿ ಗಾಂಜಾ ಸೇವಿಸುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ತಕ್ಷಣ ಸ್ಥಳಕ್ಕೆ ದಾವಿಸಿದ ಪೆÇಲೀಸರು ಮೂವರನ್ನು ವಶಕ್ಕೆ ಪಡೆದರು. ಪರಿಶೀಲಿಸಿದಾಗ ಮೂವರು ಗಾಂಜಾ ಸೇವನೆ ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಈ ಸಂಬಂಧ ಕೆ.ಆರ್.ಪೆÇಲೀಸ್ ಠಾಣೆಯಲ್ಲಿ…

ಬೈಕ್‍ಗೆ ಅಡ್ಡ ಬಂದ ನಾಯಿ: ಬಿದ್ದು ಗಾಯಗೊಂಡಿದ್ದ ಸವಾರ ಸಾವು
ಮೈಸೂರು

ಬೈಕ್‍ಗೆ ಅಡ್ಡ ಬಂದ ನಾಯಿ: ಬಿದ್ದು ಗಾಯಗೊಂಡಿದ್ದ ಸವಾರ ಸಾವು

December 27, 2018

ಮೈಸೂರು: ದಿಢೀರ್ ಅಡ್ಡ ಬಂದ ನಾಯಿಗೆ ಡಿಕ್ಕಿ ಹೊಡೆದಿದದ್ದರಿಂದ ಬೈಕ್ ಕೆಳಗೆ ಬಿದ್ದು ಸವಾರ ಮೃತ ಪಟ್ಟು, ಹಿಂಬದಿ ಸವಾರ ಗಾಯಗೊಂಡಿರುವ ಘಟನೆ ಮೈಸೂ ರಿನ ವಿಜಯನಗರದಲ್ಲಿ ನಡೆದಿದೆ. ಕೊಳ್ಳೆಗಾಲ ಮೂಲದ ಗಿರೀಶ್ (28) ಮೃತಪಟ್ಟವರು. ನಗರದ ಖಾಸಗಿ ಹೋಟೆಲ್‍ನಲ್ಲಿ ಕೆಲಸ ಮಾಡುತ್ತಿದ್ದರು. ಡಿ.21ರ ತಡರಾತ್ರಿ ಸ್ನೇಹಿತ ಸಿದ್ದರಾಜು ಎಂಬು ವರನ್ನು ಬೈಕ್‍ನ ಹಿಂಬದಿ ಕೂರಿಸಿಕೊಂಡು ರಿಂಗ್ ರಸ್ತೆಯಲ್ಲಿ ಹಿನಕಲ್ ಕಡೆಯಿಂದ ಬೋಗಾದಿ ಕಡೆಗೆ ಹೋಗುತಿದ್ದಾಗ ವಿಜಯ ನಗರ ಬಸ್ ಡಿಪೆÇೀ ಎದುರು ನಾಯಿ ಅಡ್ಡ ಬಂದಿದೆ….

ಸುಳವಾಡಿ ದುರಂತ: ಆರೋಪಿಗಳ ಆಸ್ತಿ ಮುಟ್ಟುಗೋಲು ಹಾಕಿ  ಮೃತರ ಕುಟುಂಬಗಳಿಗೆ ವಿತರಿಸಿ
ಮೈಸೂರು

ಸುಳವಾಡಿ ದುರಂತ: ಆರೋಪಿಗಳ ಆಸ್ತಿ ಮುಟ್ಟುಗೋಲು ಹಾಕಿ ಮೃತರ ಕುಟುಂಬಗಳಿಗೆ ವಿತರಿಸಿ

December 27, 2018

ಮೈಸೂರು: ಚಾಮರಾಜನಗರ ಜಿಲ್ಲೆಯ ಸುಳವಾಡಿ ಗ್ರಾಮದ ಕಿಚ್‍ಗುತ್ ಮಾರಮ್ಮ ದೇವಸ್ಥಾನದ ವಿಷ ಪ್ರಾಶನ ಪ್ರಕರಣದಲ್ಲಿ 17 ಮಂದಿ ಅಮಾಯಕ ರನ್ನು ಬಲಿ ತೆಗೆದುಕೊಂಡ ಪ್ರಕರಣ ಇದೊಂದು ರೀತಿ ಆಂತರಿಕ ಭಯೋತ್ಪಾದನೆ ಯಂತಿದೆ ಎಂದು ಭ್ರಷ್ಟಾಚಾರ ನಿರ್ಮೂಲನಾ ಸಮಿತಿ ಅಭಿಪ್ರಾಯಪಟ್ಟಿದೆ. ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಜೇಶ ಗಡಿ, ಬುಧ ವಾರ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿ, ಗಡಿಯಲ್ಲಿ ನಡೆಯುವ ಉಗ್ರ ವಾದ, ಭಯೋತ್ಪಾದನೆಗಿಂತ ಆಂತರಿಕ ಭಯೋತ್ಪಾದನೆ ಯಿಂದಲೇ ಹೆಚ್ಚಿನ ಸಾವು ನೋವುಗಳು ದೇಶದಲ್ಲಿ ಸಂಭವಿಸುತ್ತಿವೆ….

ಸಿ.ಅಶ್ವತ್ಥ್ 79ನೇ ಜನ್ಮದಿನ; ಡಿ.29ರಂದು  `ಕನ್ನಡವೇ ಸತ್ಯ’ ಪ್ರಶಸ್ತಿ ಪ್ರದಾನ
ಮೈಸೂರು

ಸಿ.ಅಶ್ವತ್ಥ್ 79ನೇ ಜನ್ಮದಿನ; ಡಿ.29ರಂದು `ಕನ್ನಡವೇ ಸತ್ಯ’ ಪ್ರಶಸ್ತಿ ಪ್ರದಾನ

December 27, 2018

ಮೈಸೂರು: ಖ್ಯಾತ ಗಾಯಕ ಸಿ.ಅಶ್ವತ್ಥ್ ಅವರ 79ನೇ ಜನ್ಮದಿನದ ಪ್ರಯುಕ್ತ ಡಿ.29ರಂದು ಸಂಜೆ 5 ಗಂಟೆಗೆ ಮೈಸೂರಿನ ಪುರಭವನ ಆವರಣದಲ್ಲಿ ಭಾವರೂಪಕ ಪ್ರತಿಷ್ಠಾನದ ವತಿಯಿಂದ `ಕನ್ನಡವೇ ಸತ್ಯ’ ಹಾಗೂ `ಗಾನ ಗಾರುಡಿ ಸಿ.ಅಶ್ವತ್ಥ್’ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸ ಲಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಕೌಡ್ಲೆ ರವೀಂದ್ರನಾಥ್ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ,…

ಕೃಷಿ ಸಾಲ ಮನ್ನಾಕ್ಕೆ ಆಧಾರ್ ಲಿಂಕ್ ಸಿಕ್ಕಿಬಿದ್ದ ಶ್ರೀಮಂತರು
ಮೈಸೂರು

ಕೃಷಿ ಸಾಲ ಮನ್ನಾಕ್ಕೆ ಆಧಾರ್ ಲಿಂಕ್ ಸಿಕ್ಕಿಬಿದ್ದ ಶ್ರೀಮಂತರು

December 26, 2018

ಬೆಂಗಳೂರು: ಕೃಷಿ ಸಾಲ ಮನ್ನಾ ಸೌಲಭ್ಯ ಪಡೆಯಲು ನೀಡಿದ ಆಧಾರ್ ಸಂಖ್ಯೆಯಿಂದ ಉಳ್ಳವರು ಸಿಕ್ಕಿಬಿದ್ದು ಸರ್ಕಾರಕ್ಕೆ 2,500 ಕೋಟಿ ರೂ. ಉಳಿತಾಯವಾಗಿದೆ. ಆಧಾರ್ ಸಂಖ್ಯೆಯನ್ನು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ಮಾಹಿತಿಗಳೊಂದಿಗೆ ಹೋಲಿಕೆ ಮಾಡಿದಾಗ ಶ್ರೀಮಂತರು, ಆದಾಯ ತೆರಿಗೆ ಪಾವತಿದಾರರು, ಕೈಗಾರಿ ಕೋದ್ಯಮಿಗಳು, ಸರ್ಕಾರಿ ಅಧಿಕಾರಿಗಳು ಸಾಲ ಮನ್ನಾ ಸೌಲಭ್ಯ ಪಡೆಯಲು ಪ್ರಯತ್ನಿಸಿ ಇಕ್ಕಟ್ಟಿಗೆ ಸಿಲುಕಿದ್ದಾರೆ. ರಾಜ್ಯ ಸಹಕಾರಿ ಮತ್ತು ಪತ್ತಿನ ಬ್ಯಾಂಕ್‍ಗಳಲ್ಲಿ ಲಕ್ಷಾಂತರ ಮಂದಿ ಉಳ್ಳವರು ಕೃಷಿ ಸಾಲ ಪಡೆದಿರುವುದು ಬಹಿರಂಗ ಗೊಂಡಿದೆ. ಹಿಂದೆಲ್ಲಾ 25,000…

ಧೈರ್ಯಗೆಡಬೇಡಿ, ಸರ್ಕಾರ ನಿಮ್ಮೊಂದಿಗಿದೆ
ಮೈಸೂರು

ಧೈರ್ಯಗೆಡಬೇಡಿ, ಸರ್ಕಾರ ನಿಮ್ಮೊಂದಿಗಿದೆ

December 26, 2018

ಚಾಮರಾಜನಗರ:  ಸರ್ಕಾರ ನಿಮ್ಮೊಂದಿಗಿದೆ. ಯಾರೂ ಧೈರ್ಯ ಗೆಡಬೇಡಿ. ನಿಮ್ಮ ನೆರವಿಗೆ ಸರ್ಕಾರ ಬದ್ಧ ವಾಗಿದೆ ಎಂದು ಸುಳವಾಡಿ ವಿಷ ಪ್ರಸಾದ ಸಂತ್ರಸ್ತರಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಇಂದು ಸಾಂತ್ವನ ಹೇಳಿದರು. ಜಿಲ್ಲೆಯ ಹನೂರು ತಾಲೂಕಿನ ಸುಳ ವಾಡಿ ಕಿಚ್‍ಗುತ್ ಮಾರಮ್ಮ ದೇವಸ್ಥಾನ ದಲ್ಲಿ ವಿಷ ಪ್ರಸಾದ ಸೇವನೆಯಿಂದ ಅಸು ನೀಗಿದ ಹಾಗೂ ಅಸ್ವಸ್ಥರ ಕುಟುಂಬ ಸದಸ್ಯ ರನ್ನು ಇಂದು ಸಂಜೆ ಬಿದರಹಳ್ಳಿಯಲ್ಲಿ ಭೇಟಿ ಮಾಡಿದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಸರ್ಕಾರದ ಸಕಲ ಸೌಲಭ್ಯಗಳನ್ನು ಒದಗಿಸುವ ಭರವಸೆ ನೀಡಿ ಅವರಿಗೆ…

ನಮ್ಮ ದೇಶದ ಕಾನೂನು ಸರಿಯಿಲ್ಲ… ಕೊಲೆ ಮಾಡಿದವರು ಬೇಲ್ ತಗೊಂಡು ಬೇಗ ಆಚೆ ಬರ್ತಾರೆ…
ಮೈಸೂರು

ನಮ್ಮ ದೇಶದ ಕಾನೂನು ಸರಿಯಿಲ್ಲ… ಕೊಲೆ ಮಾಡಿದವರು ಬೇಲ್ ತಗೊಂಡು ಬೇಗ ಆಚೆ ಬರ್ತಾರೆ…

December 26, 2018

ಮದ್ದೂರು: ನಮ್ಮ ದೇಶದಲ್ಲಿ ಕಾನೂನು ವ್ಯವಸ್ಥೆ ಸರಿಯಿಲ್ಲ. ಯಾಕಂದ್ರೆ ಕೊಲೆ ಮಾಡಿ ದವರು ಬೇಲ್ ತೆಗೆದುಕೊಂಡು ಆಚೆ ಬರ್ತಾರೆ. ಬಂದ ಬಳಿಕ ಮತ್ತೆ ಕೊಲೆ ಯಂತಹ ಕೃತ್ಯವೆಸಗುತ್ತಾರೆ. ಹಂತಕರಿಗೆ ಕಾನೂನಿನ ಭಯವೇ ಇಲ್ಲ. ಈ ರೀತಿಯ ವ್ಯವಸ್ಥೆ ನಮ್ಮ ಕಾನೂನಿನಲ್ಲಿದೆ. ಯಾಕೆಂದರೆ ಇದೊಂದೇ ಪ್ರಕರಣದಲ್ಲಲ್ಲ. ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಬಹುತೇಕ ಪ್ರಕರಣಗಳಲ್ಲಿ ಇಂಥ ದುಷ್ಕøತ್ಯಗಳು ನಡೆದಿರುವುದನ್ನು ನೋಡಿದ್ದೇನೆ. ನಾನೊಬ್ಬ ಸಾಮಾನ್ಯ ಪ್ರಜೆಯಾಗಿ ಅತ್ಯಂತ ನೋವಿನಿಂದ ಈ ಮಾತು ಹೇಳುತ್ತಿದ್ದೇನೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು. ಸೋಮವಾರ…

1 1,213 1,214 1,215 1,216 1,217 1,611
Translate »