ಮೈಸೂರು

ಕ್ರೈಸ್ತ ಬಾಂಧವರಿಂದ ಭಕ್ತಿ ಭಾವ, ಸಂಭ್ರಮದ ಕ್ರಿಸ್‍ಮಸ್ ಪ್ರಾರ್ಥನೆ
ಮೈಸೂರು

ಕ್ರೈಸ್ತ ಬಾಂಧವರಿಂದ ಭಕ್ತಿ ಭಾವ, ಸಂಭ್ರಮದ ಕ್ರಿಸ್‍ಮಸ್ ಪ್ರಾರ್ಥನೆ

December 25, 2018

ಮೈಸೂರು: ಸೇಂಟ್ ಫಿಲೋಮಿನಾ ಚರ್ಚ್ ಸೇರಿದಂತೆ ಮೈಸೂರಿನ ವಿವಿಧ ಚರ್ಚ್‍ಗಳಲ್ಲಿ ಸೋಮವಾರ ರಾತ್ರಿಯಿಂದಲೇ ಕ್ರೈಸ್ತ ಬಾಂಧವರ ಪವಿತ್ರ ಹಬ್ಬ ಕ್ರಿಸ್‍ಮಸ್ ಸಂಭ್ರಮ, ಸಡಗರ ಮುಗಿಲು ಮುಟ್ಟಿತ್ತು. ಸೇಂಟ್ ಫಿಲೋ ಮಿನಾ ಚರ್ಚ್‍ನಲ್ಲಿ ಇಂದು ರಾತ್ರಿ 11 ರಿಂದ 12ರ ಸಮಯದಲ್ಲಿ ಕ್ರೈಸ್ತಬಾಂಧವರು ಬಾಲಯೇಸುವಿಗೆ ವಿಶೇಷ ಪೂಜೆ ಸಲ್ಲಿಸಿ, ಭಕ್ತಿಯ ಪರಕಾಷ್ಠೆ ಮೆರೆದರು. ರಾತ್ರಿಯಿಂದಲೇ ವಿವಿಧ ಬಡಾವಣೆಗಳಿಂದ ತಂಡೋಪತಂಡವಾಗಿ ಆಗಮಿಸುತ್ತಿದ್ದ ಕ್ರೈಸ್ತ ಬಾಂಧವರು ಕರೋಲ್ ಗೀತೆಗಳನ್ನು ಹಾಡುತ್ತ, ಯೇಸುವಿನ ಗುಣಗಾನ ಮಾಡಿದರು. ಇದರಿಂದಾಗಿ ಸೇಂಟ್ ಫಿಲೋಮಿನಾ ಚರ್ಚ್ ಆವರಣದಲ್ಲಿ…

ಮೈಸೂರಿನ ಲಲಿತಮಹಲ್ ಹೆಲಿಪ್ಯಾಡ್  ಸುತ್ತಮುತ್ತ ಹಾಕಿದ್ದ ಬೇಲಿ ತೆರವು
ಮೈಸೂರು

ಮೈಸೂರಿನ ಲಲಿತಮಹಲ್ ಹೆಲಿಪ್ಯಾಡ್ ಸುತ್ತಮುತ್ತ ಹಾಕಿದ್ದ ಬೇಲಿ ತೆರವು

December 25, 2018

ಮೈಸೂರು: ಮೈಸೂರಿನ ಲಲಿತಮಹಲ್ ಹೆಲಿಪ್ಯಾಡ್ ಮೈದಾನದಲ್ಲಿ ದಿಢೀರ್ ಹಾಕಿದ್ದ ಬೇಲಿಯನ್ನು ಸೋಮವಾರ ಜಿಲ್ಲಾಡಳಿತ ಕಾರ್ಯಾಚರಣೆ ನಡೆಸಿ ತೆರವುಗೊಳಿಸಿದ್ದು, ಕಾರ್ಯಾಚರಣೆಗೆ ಅಡ್ಡಿಪಡಿಸಿದ ವ್ಯಕ್ತಿಯೊಬ್ಬರನ್ನು ಆಲನಹಳ್ಳಿ ಠಾಣೆಯ ಪೊಲೀಸರು ಬಂಧಿಸಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಾರೆ. ಹೆಲಿಪ್ಯಾಡ್‍ಗೆ ಹೊಂದಿಕೊಂಡಂತೆ 7 ಎಕರೆ ಭೂಮಿಗೆ ಬೇಲಿ ಹಾಕುವ ಕಾರ್ಯವನ್ನು ಕಳೆದ 4 ದಿನಗಳಿಂದ ಮೈಸೂರಿನ ನಿವಾಸಿ ಕೆ.ಮನು ಎಂಬುವರು ನಡೆಸುತ್ತಿದ್ದರು. ಮೀನಾಕ್ಷಿ ಎಂಬುವವರಿಂದ ಜಿಪಿಎ ಹೋಲ್ಡರ್ ಆದ ನಮಗೆ ಈ ಭೂಮಿ ಸೇರಿದೆ ಎಂದು ಫಲಕ ಹಾಕಿದ್ದರು. ಈ ಹಿನ್ನೆಲೆಯಲ್ಲಿ ಕಳೆದ 2…

ನವಾಜ್ ಷರೀಫ್‍ಗೆ ಏಳು ವರ್ಷ ಜೈಲು
ಮೈಸೂರು

ನವಾಜ್ ಷರೀಫ್‍ಗೆ ಏಳು ವರ್ಷ ಜೈಲು

December 25, 2018

ಇಸ್ಲಾಮಾಬಾದ್: ಅಲ್-ಅಝಿಝಿಯಾ ಭ್ರಷ್ಟಾ ಚಾರ ಪ್ರಕರಣಕ್ಕೆ ಸಂಬಂ ಧಿಸಿದಂತೆ ಪಾಕಿಸ್ತಾನದ ಪದಚ್ಯುತ ಪ್ರಧಾನಿ ನವಾಜ್ ಷರೀಫ್ ಅವ ರಿಗೆ ಭ್ರಷ್ಟಾಚಾರ ನಿಗ್ರಹ ಕೋರ್ಟ್ ಸೋಮವಾರ 7 ವರ್ಷ ಶಿಕ್ಷೆ ವಿಧಿಸಿದೆ. ನವಾಜ್ ಷರೀಫ್ ವಿರುದ್ಧದ 2 ಭ್ರಷ್ಟಾಚಾರ ಪ್ರಕರಣಗಳ ವಿಚಾರಣೆ ನಡೆ ಸಿದ ಅಕೌಂಟಬೆಲಿಟಿ ಕೋರ್ಟ್ ನ್ಯಾಯಾ ಧೀಶ ಮಹಮದ್ ಅರ್ಷದ್ ಮಲ್ಲಿಕ್, ಒಂದು ಪ್ರಕರಣದಲ್ಲಿ 68 ವರ್ಷದ ನವಾಜ್ ಷರೀಫ್ ಅವರನ್ನು ಖುಲಾಸೆಗೊಳಿಸಿದ್ದಾರೆ. ಕಳೆದ ವಾರ ನವಾಜ್ ಷರೀಫ್ ವಿರುದ್ಧ ಫ್ಲಾಗ್‍ಶಿಪ್ ಇನ್ವೆಸ್ಟ್‍ಮೆಂಟ್ ಮತ್ತು ಅಲ್-ಅಝಿಝಿಯಾ…

ಹಿನಕಲ್ ಫ್ಲೈ ಓವರ್‍ನಲ್ಲಿ ವಾಹನಗಳ ಸುಗಮ ಸಂಚಾರ
ಮೈಸೂರು

ಹಿನಕಲ್ ಫ್ಲೈ ಓವರ್‍ನಲ್ಲಿ ವಾಹನಗಳ ಸುಗಮ ಸಂಚಾರ

December 25, 2018

ಮೈಸೂರು: ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡರಿಂದ ನಿನ್ನೆ ಲೋಕಾರ್ಪಣೆ ಗೊಂಡ ಹಿನಕಲ್ ಫ್ಲೈ ಓವರ್‍ನಲ್ಲಿ ವಾಹನಗಳ ಸಂಚಾರ ಆರಂಭಗೊಂಡಿದ್ದು, ಯಾವುದೇ ಅಡಚಣೆ ಇಲ್ಲದಂತೆ ವಾಹನಗಳ ಸಂಚಾರ ಸುಗಮವಾಗಿದೆ. ಹುಣಸೂರು, ಪಿರಿಯಾಪಟ್ಟಣ, ಕೊಡಗು, ಹಾಸನ, ಮಂಗಳೂರು ಇನ್ನಿತರ ಕಡೆ ಗಳಿಗೆ ತೆರಳುವ ವಾಹನಗಳು ಫ್ಲೈ ಓವರ್ ನಲ್ಲಿ ಅಬಾಧಿತವಾಗಿ ಸಂಚರಿಸುತ್ತಿದೆ. ಹಿನಕಲ್ ಜಂಕ್ಷನ್‍ನ ಫ್ಲೈ ಓವರ್‍ನ ಎರಡೂ ಬದಿ ಯಲ್ಲಿರುವ ಸರ್ವಿಸ್ ರಸ್ತೆಯಲ್ಲೂ ವಾಹನ ದಟ್ಟಣೆ ಕೊಂಚ ಕಡಿಮೆಯಾಗಿದೆ. ಆದರೆ ಫ್ಲೈ ಓವರ್‍ನ ಕೆಳಗಡೆ ವಾಹನ…

ಬ್ಲಾಕ್‍ಮೇಲ್ ತಂತ್ರಗಳಿಗೆ ಮಣಿಯಲ್ಲ
ಮೈಸೂರು

ಬ್ಲಾಕ್‍ಮೇಲ್ ತಂತ್ರಗಳಿಗೆ ಮಣಿಯಲ್ಲ

December 25, 2018

ಬೆಂಗಳೂರು: ಸಚಿವ ಸ್ಥಾನ ದಕ್ಕದವರು ಮತ್ತು ಕಳೆದುಕೊಂಡವರು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದರೆ ಅಂತಹ ವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿ ರುವ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಗುಂಡೂರಾವ್, ಬ್ಲಾಕ್ ಮೇಲ್ ತಂತ್ರಗಳಿಗೆ ಪಕ್ಷ ಮಣಿಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸಂಪುಟಕ್ಕೆ ಕಾಂಗ್ರೆಸ್‍ನಿಂದ ಯಾರನ್ನು ತೆಗೆದುಕೊಳ್ಳಬೇಕು ಮತ್ತು ಕೈಬಿಡಬೇಕು ಎಂಬ ನಿರ್ಧಾರ ವರಿಷ್ಠರದ್ದಾಗಿದೆ. ಕಾಂಗ್ರೆಸ್‍ನಲ್ಲಿ ಹೈಕಮಾಂಡೇ ಫೈನಲ್, ಅವರು ತೆಗೆದುಕೊಳ್ಳುವ ನಿರ್ಧಾರವನ್ನು ಯಾರೂ ಪ್ರಶ್ನಿಸುವಂತಿಲ್ಲ, ಒಂದು ವೇಳೆ…

ರಾಜೀನಾಮೆ ಮಾತಿಗೆ ಈಗಲೂ ಬದ್ಧ  4 ದಿನ ಕಾದು ನೋಡಿ: ರಮೇಶ್ ಜಾರಕಿಹೊಳಿ
ಮೈಸೂರು

ರಾಜೀನಾಮೆ ಮಾತಿಗೆ ಈಗಲೂ ಬದ್ಧ 4 ದಿನ ಕಾದು ನೋಡಿ: ರಮೇಶ್ ಜಾರಕಿಹೊಳಿ

December 25, 2018

ಬೆಂಗಳೂರು:  ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಮಾತಿಗೆ ನಾನು ಈಗಲೂ ಬದ್ಧ. ಆದರೆ ನನಗೆ ನಾಲ್ಕು ದಿನ ಸಮಯ ಕೊಡಿ. ನಾಲ್ಕು ದಿನದಲ್ಲಿ ನನ್ನ ನಿರ್ಧಾರ ಪ್ರಕಟಿಸುತ್ತೇನೆ ಎಂದು ಸಚಿವ ಸ್ಥಾನ ಕಳೆದುಕೊಂಡ ಹಿರಿಯ ಕಾಂಗ್ರೆಸ್ ನಾಯಕ ರಮೇಶ್ ಜಾರಕಿಹೊಳಿ ಸೋಮವಾರ ಹೇಳಿದ್ದಾರೆ. ಇಂದು ನಗರದಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದ ಮಾಜಿ ಸಚಿವ, ಕಳೆದ ಒಂದು ವಾರದಲ್ಲಿ ಮಾಧ್ಯಮಗಳು ಹೀರೋನ ವಿಲನ್ ಮಾಡಿವೆ. ವಿಲನ್‍ನ ಹೀರೋ ಮಾಡಿವೆ. ವಿಲನ್ ಯಾರು? ಹೀರೋ ಯಾರು? ಅನ್ನೋದನ್ನು ಮುಂದೆ ಹೇಳುತ್ತೇನೆ…

ವಿದ್ಯಾವಂತ ಮಕ್ಕಳ ಹೊಂದಿರುವ ಪೋಷಕರೇ ನಿಜವಾದ ಶ್ರೀಮಂತರು
ಮೈಸೂರು

ವಿದ್ಯಾವಂತ ಮಕ್ಕಳ ಹೊಂದಿರುವ ಪೋಷಕರೇ ನಿಜವಾದ ಶ್ರೀಮಂತರು

December 25, 2018

ಮೈಸೂರು:  ಮೈಸೂರಿನ ಭಾರತೀಯ ವಿದ್ಯಾ ಭವನ(ಬಿವಿಬಿ)ದ 16ನೇ ವಾರ್ಷಿಕೋತ್ಸವ ಸಮಾರಂಭ, ಸಾಂಸ್ಕೃತಿಕ ಸಂಭ್ರಮದೊಂದಿಗೆ ಸಾತ್ವಿಕ ಸಂದೇಶ ಸಾರುವ ಮೂಲಕ ಅರ್ಥ ಪೂರ್ಣವಾಗಿ ನೆರವೇರಿತು. ಮಾನಸಗಂಗೋತ್ರಿ ಬಯಲು ರಂಗ ಮಂದಿರದಲ್ಲಿ ಸೋಮವಾರ `ತತ್ವಾದಾರ’ ಶೀರ್ಷಿಕೆಯಡಿ ಆಯೋಜಿಸಲಾಗಿದ್ದ ಬಿವಿಬಿ ವಾರ್ಷಿಕೋತ್ಸವಕ್ಕೆ ಉನ್ನತ ಶಿಕ್ಷಣ ಸಚಿ ವರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಹಣ, ಆಸ್ತಿ ಉಳ್ಳವರು ಶ್ರೀಮಂತರಲ್ಲ. ವಿದ್ಯಾ ವಂತ ಮಕ್ಕಳನ್ನು ಹೊಂದಿರುವ ಪೋಷ ಕರೇ ನಿಜವಾದ ಶ್ರೀಮಂತರು. ವಿದ್ಯಾವಂತ ಮಕ್ಕಳೇ…

ಮೊದಲ ದಿನವೇ ಸಮಸ್ಯೆ  ಹೇಳಿಕೊಳ್ಳಲು ಮುಗಿ ಬಿದ್ದ ಜನರು
ಮೈಸೂರು

ಮೊದಲ ದಿನವೇ ಸಮಸ್ಯೆ ಹೇಳಿಕೊಳ್ಳಲು ಮುಗಿ ಬಿದ್ದ ಜನರು

December 25, 2018

ಮೈಸೂರು: ಮೈಸೂರಿನ ಜಲದರ್ಶಿನಿ ಅತಿಥಿಗೃಹ ಆವರಣದಲ್ಲಿ ನಿರ್ಮಾಣವಾಗಿರುವ ನೂತನ ಕಟ್ಟಡದಲ್ಲಿ ಉನ್ನತ ಶಿಕ್ಷಣ ಸಚಿವರೂ ಆದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡರ ಕಚೇರಿ ಆರಂಭವಾಗಿದ್ದು, ಸೋಮವಾರ ಮೊದಲ ದಿನವೇ ಸಚಿವರನ್ನು ಕಂಡು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಜನರು ಮುಗಿಬಿದ್ದರು. ಸಾಕಷ್ಟು ದೂರು, ಸಮಸ್ಯೆಗಳು ಸಚಿವರಿಗೆ ಸಲ್ಲಿಕೆಯಾದವು. ಇದಕ್ಕೆ ಸ್ಪಂದಿಸಿದ ಸಚಿವರು ಹಲವು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಸಂಬಂಧಿಸಿದ ಅಧಿಕಾರಿಗಳಿಗೆ ದೂರವಾಣಿ ಮೂಲಕ ಸಂಪರ್ಕಿಸಿ ತಕ್ಷಣ ದೂರುದಾರರ ಸಮ ಸ್ಯೆಗೆ ಸ್ಪಂದಿಸಿ ಕೆಲಸ ಮಾಡಿಕೊಡುವಂತೆ ಸೂಚಿಸಿದರು. ಈ ಸಂದರ್ಭದಲ್ಲಿ…

ಸಚಿವ ಸ್ಥಾನ ಸಿಕ್ತು, ಆದರೆ ಖಾತೆಗಳೇ ಸಿಕ್ಕಿಲ್ಲ
ಮೈಸೂರು

ಸಚಿವ ಸ್ಥಾನ ಸಿಕ್ತು, ಆದರೆ ಖಾತೆಗಳೇ ಸಿಕ್ಕಿಲ್ಲ

December 25, 2018

ಬೆಂಗಳೂರು: ಪುಟ ಪುನರ್ ರಚನೆಯಲ್ಲಿ ಸಚಿವರಾಗಿ 3 ದಿನವಾದರೂ ತಮಗೆ ಯಾವ ಖಾತೆ ಎಂಬುದು ಇನ್ನೂ ಸ್ಪಷ್ಟವಾಗದೆ ಪ್ರಮುಖ ಖಾತೆಗಳಿಗಾಗಿ ನೂತನ ಸಚಿವರು ತಮ್ಮ ನಾಯಕರ ಮನೆ ಬಾಗಿಲು ಸುತ್ತುತ್ತಿದ್ದಾರೆ. ಖಾತೆ ಹಂಚಿಕೆ ಗೊಂದಲ ಮುಂದುವರೆದಿದ್ದು ಇದನ್ನು ಬಗೆಹರಿ ಸಲು ರಾಜ್ಯ ಉಸ್ತುವಾರಿ ಹೊಣೆ ಹೊತ್ತ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ನಗರಕ್ಕೆ ಧಾವಿಸಿದ್ದಾರೆ. ತಮಗೂ ಇದಕ್ಕೂ ಸಂಬಂಧ ಇಲ್ಲವೆಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಿಜಯಪುರ, ಕೊಪ್ಪಳ ಜಿಲ್ಲೆಗಳಲ್ಲಿ ಎರಡು ದಿನಗಳ ಪ್ರವಾಸ ಕೈಗೊಂಡಿದ್ದಾರೆ. ಮತ್ತೊಂದೆಡೆ…

ಫೆಡರಲ್ ಫ್ರಂಟ್ ರಚನೆ ಮಾತುಕತೆ  ಮುಂದುವರೆಯಲಿದೆ: ಮಮತಾ ಭೇಟಿ ಬಳಿಕ ಕೆಸಿಆರ್
ಮೈಸೂರು

ಫೆಡರಲ್ ಫ್ರಂಟ್ ರಚನೆ ಮಾತುಕತೆ ಮುಂದುವರೆಯಲಿದೆ: ಮಮತಾ ಭೇಟಿ ಬಳಿಕ ಕೆಸಿಆರ್

December 25, 2018

ಕೋಲ್ಕತಾ: ಟಿಆರ್‍ಎಸ್ ಮುಖ್ಯಸ್ಥ ಹಾಗೂ ತೆಲಂಗಾಣದ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಸೋಮವಾರ ಕೋಲ್ಕತಾದಲ್ಲಿ ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿ ಮಾಡಿದ್ದಾರೆ. ಮಮತಾ ಭೇಟಿಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೆಸಿಆರ್, ಫೆಡರಲ್ ಫ್ರಂಟ್ ರಚಿಸುವ ಮಾತುಕತೆ ಮುಂದುವರೆಯಲಿದೆ ಮತ್ತು ಈ ಕುರಿತು ಶೀಘ್ರದಲ್ಲೇ ಒಂದು ಸ್ಪಷ್ಟ ನಿರ್ಧಾರಕ್ಕೆ ಬರಲಾಗುವುದು ಎಂದು ಹೇಳಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್ ಹೊರತಾದ ಮೈತ್ರಿಕೂಟ ರಚನೆಯ ನನ್ನ ಪ್ರಯತ್ನ ಮುಂದುವರೆಯಲಿದೆ ಎಂದು ತೆಲಂಗಾಣ ಸಿಎಂ ತಿಳಿಸಿದ್ದಾರೆ. ಇದು ದೇಶಾದ್ಯಂತ ಎಲ್ಲ ಶಕ್ತಿಗಳನ್ನು…

1 1,215 1,216 1,217 1,218 1,219 1,611
Translate »