ಮೈಸೂರು

ಮೈಸೂರು-ಬೆಂಗಳೂರು ನಡುವೆ  ಮೆಮು ರೈಲು ಸಂಚಾರ ಆರಂಭ
ಮೈಸೂರು

ಮೈಸೂರು-ಬೆಂಗಳೂರು ನಡುವೆ ಮೆಮು ರೈಲು ಸಂಚಾರ ಆರಂಭ

December 24, 2018

ಮೈಸೂರು: ಮೈಸೂರು-ಬೆಂಗ ಳೂರು ನಡುವೆ ವಾರದಲ್ಲಿ ನಾಲ್ಕು ದಿನ ಸಂಚರಿಸ ಲಿರುವ ವಿದ್ಯುತ್ ಚಾಲಿತ ಹೊಸ ಮೆಮು ರೈಲಿಗೆ ಸಂಸದ ಪ್ರತಾಪ ಸಿಂಹ ಭಾನುವಾರ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ಮೈಸೂರು ಕೇಂದ್ರ ರೈಲ್ವೆ ನಿಲ್ದಾಣದ ಆವರಣದಲ್ಲಿ ಇಂದು ಬೆಳಿಗ್ಗೆ ನಡೆದ ಕಾರ್ಯಕ್ರಮದಲ್ಲಿ ಮೈಸೂರು-ಬೆಂಗ ಳೂರಿನ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ನಡುವೆ ಸಂಚರಿಸಲಿರುವ ಹೊಸ ರೈಲಿಗೆ ಚಾಲನೆ ನೀಡಲಾಯಿತು. ಇಂದು ಮೊದಲ ಪ್ರಯಾಣ ಬೆಳೆಸಿದ ಮೆಮು ರೈಲಿನಲ್ಲಿ 300ಕ್ಕೂ ಹೆಚ್ಚು ಪ್ರಯಾಣಿಕರು ಬೆಂಗಳೂರಿಗೆ…

ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಬಂಡಾಯ ಕಹಳೆ
ಮೈಸೂರು

ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಬಂಡಾಯ ಕಹಳೆ

December 24, 2018

ಬೆಂಗಳೂರು: ರಾಜ್ಯ ಸಂಪುಟ ಪುನರ್ ರಚನೆಯ ನಂತರ ಕಾಂಗ್ರೆಸ್‍ನಲ್ಲಿ ಅಸಮಾಧಾನ ಭುಗಿಲೆದ್ದಿದ್ದು, ಹಿರಿಯ ಕಾಂಗ್ರೆಸ್ ಮುಖಂಡ ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಬಂಡಾಯದ ಕಹಳೆ ಊದಿದ್ದಾರೆ. ಖಾಸಗಿ ಸುದ್ದಿವಾಹಿನಿಗೆ ವಿಶೇಷ ಸಂದರ್ಶನ ನೀಡಿದ ಅವರು, ಕಾಂಗ್ರೆಸ್ ಪಕ್ಷಕ್ಕೆ ನಾನು ಬೇಡವಾಗಿದ್ದೀನಿ ಅನ್ನಿಸುತ್ತಿದೆ. ಇಬ್ಬರು ಮುಖಂಡರು ನನಗೆ ಮಂತ್ರಿ ಸ್ಥಾನ ತಪ್ಪಿಸಿದ್ದಾರೆ. ಸಂಪುಟ ಪುನರ್ ರಚನೆಯಲ್ಲಿ ಅನ್ಯಾಯವಾಗಿದೆ ಎಂದಿದ್ದಾರೆ. ಕೆಲವರು ಲಾಬಿ ಮಾಡಿ ತಮಗೆ ಬೇಕಾದವರಿಗೆ ಮಂತ್ರಿ ಸ್ಥಾನ ಕೊಟ್ಟಿದ್ದಾರೆ. ಕೆಲವರು ಜಗಳವಾಡಿ ಮಂತ್ರಿ ಸ್ಥಾನ ಪಡೆದುಕೊಂಡಿದ್ದಾರೆ. ಪಕ್ಷದಲ್ಲಿ…

ಸರ್ಕಾರ ಇರುವುದು ಯಾರನ್ನೋ ಮಂತ್ರಿ ಮಾಡುವುದಕ್ಕಲ್ಲ… ರಾಮಲಿಂಗಾ ರೆಡ್ಡಿಗೆ ದಿನೇಶ್ ಗುಂಡೂರಾವ್ ಟಾಂಗ್
ಮೈಸೂರು

ಸರ್ಕಾರ ಇರುವುದು ಯಾರನ್ನೋ ಮಂತ್ರಿ ಮಾಡುವುದಕ್ಕಲ್ಲ… ರಾಮಲಿಂಗಾ ರೆಡ್ಡಿಗೆ ದಿನೇಶ್ ಗುಂಡೂರಾವ್ ಟಾಂಗ್

December 24, 2018

ಜಮಖಂಡಿ: ಸರ್ಕಾರ ಇರುವುದು ಪಕ್ಷದ ಕಾರ್ಯ ಕ್ರಮಗಳನ್ನು ಅನುಷ್ಠಾನ ತರುವುದಕ್ಕೇ ಹೊರತು, ಯಾರನ್ನೋ ಮಂತ್ರಿ ಮಾಡುವುದಕ್ಕಲ್ಲ ಎಂದು ಹೇಳುವ ಮೂಲಕ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಅವರಿಗೆ ಟಾಂಗ್ ನೀಡಿದ್ದಾರೆ. ಜಮಖಂಡಿಯಲ್ಲಿ ಸುದ್ದಿಗಾರರ ಜೊತೆ ಮಾತ ನಾಡಿದ ಅವರು, ನಮಗೆ ಪಕ್ಷ ಮುಖ್ಯವೇ ಹೊರತು, ವ್ಯಕ್ತಿ ಮುಖ್ಯವಲ್ಲ. ನಮ್ಮ ಸರ್ಕಾರ ಇರುವುದು ಯಾರನ್ನೋ ಮಂತ್ರಿ ಮಾಡುವುದಕ್ಕಲ್ಲ. ನಾನೂ ಸಹ ಸಚಿವ ಸ್ಥಾನವನ್ನು ಬಿಟ್ಟುಕೊಟ್ಟಿದ್ದೇನೆ ಎಂದು ಹೇಳಿದರು. ಪಕ್ಷದ ಪರವಾಗಿರುವವರಿಗೆ ಗೌರವ ಹೆಚ್ಚುತ್ತದೆ….

ರಮೇಶ್ ಜಾರಕಿಹೊಳಿ ರಾಜೀನಾಮೆ ಚಿಂತನೆ
ಮೈಸೂರು

ರಮೇಶ್ ಜಾರಕಿಹೊಳಿ ರಾಜೀನಾಮೆ ಚಿಂತನೆ

December 24, 2018

ಬೆಳಗಾವಿ: ಸಚಿವರಾಗಿದ್ದಾಗಲೂ ಪಕ್ಷ ಹಾಗೂ ಸರ್ಕಾರದ ಜೊತೆಗೆ ಅಂತರ ಕಾಯ್ದುಕೊಂಡಿದ್ದ ರಮೇಶ್ ಜಾರಕಿ ಹೊಳಿ ಇದೀಗ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಚಿಂತನೆಯಲ್ಲಿದ್ದಾರೆ ಎನ್ನಲಾಗಿದೆ. ಆಪ್ತರ ಬಳಿ ಈ ಸಂಬಂಧ ಚರ್ಚಿಸಿರುವ ರಮೇಶ್ ಜಾರಕಿಹೊಳಿ ಶೀಘ್ರವೇ ರಾಜೀನಾಮೆ ನಿರ್ಧಾರ ಪ್ರಕಟಿಸುವುದಾಗಿಯೂ ಹೇಳಿಕೊಂಡಿದ್ದಾರೆ. ತಮ್ಮ ಜೊತೆಗೆ ಇನ್ನೂ ಹಲವು ಶಾಸಕರು ರಾಜೀನಾಮೆ ನೀಡಲಿದ್ದಾರೆ ಎಂದು ಬಾಂಬ್ ಸಿಡಿಸಿರುವ ರಮೇಶ್, ರಾಜೀನಾಮೆ ಸಲ್ಲಿಸಲಿರುವವರ ಸಂಖ್ಯೆಯನ್ನು ಗೌಪ್ಯವಾಗಿ ಇಟ್ಟಿದ್ದಾರೆ. ರಮೇಶ್ ಮತ್ತು ಆಪ್ತರ ಮಾತುಕತೆಯ ಆಡಿಯೋ ಇದೀಗ ವೈರಲ್ ಆಗಿದ್ದು, ಸಮ್ಮಿಶ್ರ…

ಹಳೆ ಬಸ್ ತಂಗುದಾಣಗಳಿಗೆ ಹೊಸ ರೂಪ
ಮೈಸೂರು

ಹಳೆ ಬಸ್ ತಂಗುದಾಣಗಳಿಗೆ ಹೊಸ ರೂಪ

December 24, 2018

ಮೈಸೂರು: ನಗರ ಪಾಲಿಕೆಯು ಹಳೇ ಬಸ್ ತಂಗುದಾಣ ಗಳಿಗೆ ಬಣ್ಣ ಬಳಿದು ಹೊಸ ರೂಪ ನೀಡುವುದರ ಜತೆಗೆ, ಸ್ವಚ್ಛತೆ ಕಾಪಾಡಿ, ನೀರನ್ನು ಮಿತವಾಗಿ ಬಳಸಿ, ಗಿಡಮರಗಳನ್ನು ಬೆಳೆಸಿ ಪರಿಸರ ಸಂರಕ್ಷಿಸಿ… ಮತ್ತಿತರ ಬರಹಗಳನ್ನು ಗೋಡೆಗಳ ಮೇಲೆ ಬರೆದು ಸಾರ್ವಜನಿಕರಲ್ಲಿ ಅರಿವು ಮೂಡಿಸುತ್ತಿದೆ. ಮಾನಸ ಗಂಗೋತ್ರಿ ಚದುರಂಗ ರಸ್ತೆಯ ಎಸ್‍ಜೆಸಿಇ ಕ್ಯಾಂಪಸ್‍ನ ಜೆಎಸ್‍ಎಸ್ ಪಾಲಿಟೆಕ್ನಿಕ್ ಕಾಲೇಜು ಮುಂಭಾಗದಲ್ಲಿ, ಹಿಂದಿನ ಶಾಸಕ ಹೆಚ್.ಎಸ್.ಶಂಕರೇ ಗೌಡರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ನಿರ್ಮಿಸಿದ್ದ ಬಸ್ ತಂಗುದಾಣದಲ್ಲಿ ನಗರಪಾಲಿಕೆಯು ಸ್ವಚ್ಛತೆ, ಪರಿಸರ ಕಾಳಜಿ ಕುರಿತು…

ಮೈಸೂರಿನಲ್ಲಿ `ಭಾನುವಾರದ ಬಿಡುವಿನ ಸಂತೆ  ಆಹಾರ ಮೇಳ’ದಲ್ಲಿ ಅವರೆಕಾಯಿ ಘಮಲು
ಮೈಸೂರು

ಮೈಸೂರಿನಲ್ಲಿ `ಭಾನುವಾರದ ಬಿಡುವಿನ ಸಂತೆ ಆಹಾರ ಮೇಳ’ದಲ್ಲಿ ಅವರೆಕಾಯಿ ಘಮಲು

December 24, 2018

ಮೈಸೂರು:  ಮೈಸೂರಿನಲ್ಲಿ ಭಾನುವಾರ ಮಹಿಳೆಯರ ಸಂಭ್ರಮ. ಮೈಸೂರು ಲೇಡೀಸ್ ಅಸೋಸಿಯೇಷನ್ ಆಶ್ರಯದಲ್ಲಿ ವಿಜಯನಗರದ ಮೊದಲನೇ ಹಂತದಲ್ಲಿ ಸಪ್ತಪದಿ ಕಲ್ಯಾಣ ಮಂಟಪ ದಲ್ಲಿ ನಡೆದ `ಭಾನುವಾರದ ಬಿಡುವಿನ ಸಂತೆ’ ಹಾಗೂ `ಆಹಾರ ಮೇಳ’ದಲ್ಲಿ ನಂದಿನಿ ಉತ್ಪನ್ನಗಳನ್ನು ಬಳಸಿ ಸಿದ್ಧಪಡಿಸಿದ ಅವರೆ ಕಾಳಿನ ನಾನಾ ರೀತಿಯ ತಿನಿಸುಗಳು ಜನರ ನಾಲಿಗೆ ತಣಿಸಿದವು. ಜನರು ರುಚಿ ಮತ್ತು ಗರಿ ಗರಿಯಾದ ತಿಂಡಿಗಳನ್ನು ಸವಿದರು. ಆಹಾರ ಮೇಳಕ್ಕೆ ಕಾಲಿಡುತ್ತಿದ್ದಂತೆ 40ಕ್ಕೂ ಹೆಚ್ಚು ಮಳಿಗೆಗಳು ಆಕರ್ಷಿಸಿದವು. ಒಂದೆಡೆ ನಂದಿನಿ ತುಪ್ಪ ಬಳಸಿ ಮಾಡಿದ್ದ ಹಾಗೂ…

ಡಿ.26, 27 ಸರ್ಕಾರಿ ನೌಕರರ ಕ್ರೀಡಾಕೂಟ
ಮೈಸೂರು

ಡಿ.26, 27 ಸರ್ಕಾರಿ ನೌಕರರ ಕ್ರೀಡಾಕೂಟ

December 24, 2018

ಮೈಸೂರು: ಮೈಸೂರಿನ ಚಾಮುಂಡಿವಿಹಾರ ಕ್ರೀಡಾಂಗಣದಲ್ಲಿ ಡಿ.26 ಮತ್ತು 27ರಂದು ನಗರದ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟ ಆಯೋಜಿಸಲಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಕೆ.ಸುರೇಶ್ ತಿಳಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಇಲಾಖೆ ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘದ ಸಂಯುಕ್ತಾಶ್ರಯದಲ್ಲಿ ಈ ಕ್ರೀಡಾಕೂಟ ನಡೆಯಲಿದ್ದು, ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ…

ಇನ್ವಿಟೇಷನ್ ಕಪ್ ಹಾಕಿ: ಕೊಡಗು ಚಾಂಪಿಯನ್
ಮೈಸೂರು

ಇನ್ವಿಟೇಷನ್ ಕಪ್ ಹಾಕಿ: ಕೊಡಗು ಚಾಂಪಿಯನ್

December 24, 2018

ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದ ಹಾಕಿ ಮೈದಾನದಲ್ಲಿ ಗುರುವಾರ ಆರಂಭಗೊಂಡು 4 ದಿನಗಳ ಕಾಲ ನಡೆದ ರಾಜ್ಯಮಟ್ಟದ ಇನ್ವಿಟೇಷನ್ ಕಪ್ ಹಾಕಿ ಪಂದ್ಯಾವಳಿಯಲ್ಲಿ ಉತ್ತಮ ಆಟ ಪ್ರದರ್ಶಿಸಿದ ಕೂರ್ಗ್ ತಂಡ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ಹಾಕಿ ಮೈಸೂರು ಸಂಸ್ಥೆ ಆಯೋಜಿಸಿದ್ದ ಹಾಕಿ ಪಂದ್ಯಾವಳಿಯ ಫೈನಲ್‍ನಲ್ಲಿ ಮೈಸೂರು ತಂಡದ ವಿರುದ್ಧ ಕೂರ್ಗ್ ತಂಡ(1-0) ಗೋಲಿನಿಂದ ಗೆಲುವು ಸಾಧಿಸಿ, ಪ್ರಥಮ ಸ್ಥಾನ ಪಡೆಯಿತು. ಮೈಸೂರು ತಂಡ ರನ್ನರ್ ಅಪ್‍ಗೆ ತೃಪ್ತಿಪಟ್ಟುಕೊಂಡಿತು. ಎರಡೂ ತಂಡಗಳು ಆರಂಭದಿಂದಲೂ ಆಕ್ರಮಣಕಾರಿ ಆಟ ಪ್ರದರ್ಶಿಸಿದವು. ಆದರೆ, ಕೂರ್ಗ್ ತಂಡದ…

ಮಾಗಿ ಉತ್ಸವದಲ್ಲಿ 2 ದಿನ ‘ಪಕ್ಷಿ ಹಬ್ಬ’: ನೋಂದಣಿಗೆ ಡಿ.26 ಕೊನೆ ದಿನ
ಮೈಸೂರು

ಮಾಗಿ ಉತ್ಸವದಲ್ಲಿ 2 ದಿನ ‘ಪಕ್ಷಿ ಹಬ್ಬ’: ನೋಂದಣಿಗೆ ಡಿ.26 ಕೊನೆ ದಿನ

December 24, 2018

ಮೈಸೂರು: ಮೈಸೂರಿನ ಮಾಗಿ ಉತ್ಸವದ ಸಂದರ್ಭದಲ್ಲಿ ಇದೇ ಮೊದಲ ಬಾರಿಗೆ ಮೈಸೂರು ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆ ವನ್ಯಜೀವಿ ವಿಭಾಗದ ಸಹಯೋಗದಲ್ಲಿ ಡಿಸೆಂಬರ್ 28 ಮತ್ತು 29 ರಂದು ಎರಡು ದಿನಗಳ ಪಕ್ಷಿ ಹಬ್ಬ ಆಯೋಜಿಸಲಾಗಿದೆ. ಪಕ್ಷಿಗಳ ಬಗ್ಗೆ ವಿಶೇಷ ಆಸಕ್ತಿ ಹೊಂದಿರುವ ಮೈಸೂರು ಜಿಲ್ಲಾಧಿ ಕಾರಿಗಳಾದ ಅಭಿರಾಮ್ ಜಿ.ಶಂಕರ್ ಅವರು, ಪಕ್ಷಿ ಹಬ್ಬವನ್ನು ವಿಶಿಷ್ಟವಾಗಿ ಆಚರಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಈ ಹಬ್ಬದಲ್ಲಿ ಕಾರಂಜಿ ಕೆರೆ, ಕುಕ್ಕರಹಳ್ಳಿ ಕೆರೆ, ಗಿರಿಬೆಟ್ಟದ ಕೆರೆ, ವರಕೋಡು ಕೆರೆ, ಲಿಂಗಾಂಬುದಿ ಕೆರೆ,…

ಭೂ ಕಬಳಿಕೆಗೆ ಸಿಎಂ ಕುಮಾರಸ್ವಾಮಿಯಿಂದ ತಡೆ
ಮೈಸೂರು

ಭೂ ಕಬಳಿಕೆಗೆ ಸಿಎಂ ಕುಮಾರಸ್ವಾಮಿಯಿಂದ ತಡೆ

December 24, 2018

ಮೈಸೂರು: ಜೆಡಿಎಸ್ -ಬಿಜೆಪಿ ಸಮಿಶ್ರ ಸರ್ಕಾರದ ಅವಧಿಯಲ್ಲಿ ಡಾ.ಎ.ಟಿ.ರಾಮಸ್ವಾಮಿ ಅಧ್ಯಕ್ಷತೆಯ ಜಂಟಿ ಸದನ ಸಮಿತಿ ನೀಡಿದ್ದ ಅಕ್ರಮ ಭೂ ಒತ್ತು ವರಿ ವರದಿಯ ಸಾಕಷ್ಟು ಪ್ರಕರಣಗಳಿಗೆ ಸಂಬಂಧಿಸಿದಂತೆ ಮತ್ತೆ ಸ್ವಂತದ್ದೆಂದು ನಕಲಿ ದಾಖಲೆ ಸೃಷ್ಟಿ ಮಾಡಿಕೊಂಡಿದ್ದು, ಇದಕ್ಕೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಡೆ ಹಾಕಿದ್ದಾರೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ತಿಳಿಸಿದರು. ಮೈಸೂರಿನ ಬಂದಂತಮ್ಮ ಕಾಳಮ್ಮ ಸಮುದಾಯ ಭವನದಲ್ಲಿ ಎ.ಟಿ.ರಾಮ ಸ್ವಾಮಿಯವರ ಅಭಿಮಾನಿಗಳ ಬಳಗದ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಅರಕಲಗೂಡು ಕ್ಷೇತ್ರದ ಶಾಸಕ ಡಾ.ಎ.ಟಿ.ರಾಮಸ್ವಾಮಿ ಅವರನ್ನು ಸನ್ಮಾನಿಸಿ ಅವರು…

1 1,217 1,218 1,219 1,220 1,221 1,611
Translate »