ಮೈಸೂರು

ಲಲಿತಮಹಲ್ ಬಳಿ ಆಸ್ತಿಗೆ ಬೇಲಿ ನಿರ್ಮಾಣ
ಮೈಸೂರು

ಲಲಿತಮಹಲ್ ಬಳಿ ಆಸ್ತಿಗೆ ಬೇಲಿ ನಿರ್ಮಾಣ

December 22, 2018

ಮೈಸೂರು:  ಮೈಸೂರಿನ ಹೆಲಿಪ್ಯಾಡ್ ಸಮೀಪ ಬೇಲಿ ಹಾಕುವ ಕಾಮಗಾರಿ ಮುಂದುವರಿದಿದೆ. ಕಳೆದ ನಾಲ್ಕೈದು ದಿನಗಳಿಂದ ಖಾಸಗಿ ವ್ಯಕ್ತಿ ಕಾಮಗಾರಿ ನಡೆಸುತ್ತಿದ್ದು, ಕಂಬಗಳನ್ನು ಅಳವಡಿಸುವ ಕಾರ್ಯ ಪೂರ್ಣ ಗೊಂಡಿದೆ. ಇನ್ನೆರಡು ದಿನಗಳಲ್ಲಿ ಚೈನ್ ರಿಂಗ್ ಮೆಷ್ ಅಳವಡಿಸುತಿರುವುದಾಗಿ ತಿಳಿದು ಬಂದಿದೆ. ನಂತರದಲ್ಲಿ ಸಾರ್ವಜನಿಕರ ಪ್ರವೇಶದ ಜೊತೆಗೆ ಸರ್ಕಾರಿ ಹಾಗೂ ಸರ್ಕಾರೇತರ ಸಂಸ್ಥೆಗಳ ವತಿಯಿಂದ ನಡೆಸಲಾಗುತ್ತಿದ್ದ ಕಾರ್ಯಕ್ರಮಗಳಿಗೆ ಅವಕಾಶವಿರುವುದಿಲ್ಲ. ಹೆಲಿಪ್ಯಾಡ್‍ನ ಒಂದು ಭಾಗವನ್ನೊಳ ಗೊಂಡಂತೆ ಪಕ್ಕದಲ್ಲಿರುವ ಸುಮಾರು 7 ಎಕರೆ ಭೂಮಿ ತಮ್ಮದೆಂದು ಹೇಳುತ್ತಿರುವ ಎಸ್.ಮೀನಾಕ್ಷಿ ಅವರು, ಫೆನ್ಸಿಂಗ್ ಅಳವಡಿ…

ಕ್ರಿಸ್‍ಮಸ್, ಹೊಸ ವರ್ಷಾಚರಣೆಗೆ `ನಂದಿನಿ ಸಿಹಿ ಉತ್ಸವ’ ಆರಂಭ
ಮೈಸೂರು

ಕ್ರಿಸ್‍ಮಸ್, ಹೊಸ ವರ್ಷಾಚರಣೆಗೆ `ನಂದಿನಿ ಸಿಹಿ ಉತ್ಸವ’ ಆರಂಭ

December 22, 2018

ಮೈಸೂರು:  ಕ್ರಿಸ್‍ಮಸ್ ಹಾಗೂ ಹೊಸ ವರ್ಷದ ಸಂದರ್ಭದಲ್ಲಿ ಕರ್ನಾಟಕ ಹಾಲು ಮಹಾಮಂಡಳಿ ವತಿಯಿಂದ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ ಡಿ.21ರಿಂದ ಜ.9ರವರೆಗೆ 20 ದಿನಗಳ ನಂದಿನಿ ಸಿಹಿ ಉತ್ಸವ ಏರ್ಪಡಿಸಿದ್ದು, ಈ ಅವಧಿಯಲ್ಲಿ ನಂದಿನಿಯ ಎಲ್ಲಾ ಸಿಹಿ ಉತ್ಪನ್ನಗಳಿಗೆ ಶೇ.10ರಷ್ಟು ವಿಶೇಷ ರಿಯಾಯಿತಿ ನೀಡಲಾಗಿದೆ. ನಂದಿನಿಯ ಸಿಹಿ ಉತ್ಪನ್ನಗಳಾದ ಮೈಸೂರು ಪಾಕ್, ಪೇಡಾ, ಬಾದಾಮಿ ಬರ್ಫಿ, ಲಾಡು, ಜಾಮೂನ್, ರಸಗುಲ್ಲಾ, ಬೆಳಗಾವಿ ಕುಂದ ಬಾದಾಮಿ ಪೌಡರ್ ಸೇರಿದಂತೆ 60ಕ್ಕೂ ಹೆಚ್ಚು ಸಿಹಿ ಉತ್ಪನ್ನಗಳನ್ನು ಶೇ.10 ರಿಯಾಯಿತಿ ದರದಲ್ಲಿ…

ಇಂದು ‘ಕೌಟಿಲ್ಯ ಸಡಗರ’, ‘ಅಜ್ಜನೊಂದಿಗೆ  ಹೆಜ್ಜೆ-ಅಜ್ಜಿಯೊಂದಿಗೆ ಗೆಜ್ಜೆ’ ಕಾರ್ಯಕ್ರಮ
ಮೈಸೂರು

ಇಂದು ‘ಕೌಟಿಲ್ಯ ಸಡಗರ’, ‘ಅಜ್ಜನೊಂದಿಗೆ ಹೆಜ್ಜೆ-ಅಜ್ಜಿಯೊಂದಿಗೆ ಗೆಜ್ಜೆ’ ಕಾರ್ಯಕ್ರಮ

December 22, 2018

ಮೈಸೂರು: ಮೈಸೂರಿನ ಕೌಟಿಲ್ಯ ವಿದ್ಯಾಲಯದ ಶಾಲಾ ವಾರ್ಷಿಕೋತ್ಸವ ಸಂಭ್ರಮಾಚರಣೆಯನ್ನು ಡಿ.22ರಂದು ಮೈಸೂರಿನ ವಿನೋಬಾ ರಸ್ತೆಯಲ್ಲಿರುವ ಕಲಾಮಂದಿರದಲ್ಲಿ ಆಯೋಜಿಸಲಾಗಿದೆ. ವಾರ್ಷಿಕೋತ್ಸವದ ಅಂಗವಾಗಿ ಅಂದು ಮಧ್ಯಾಹ್ನ 3 ಗಂಟೆಗೆ ‘ಅಜ್ಜನೊಂದಿಗೆ ಹೆಜ್ಜೆ-ಅಜ್ಜಿಯೊಂದಿಗೆ ಗೆಜ್ಜೆ’ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಹಿರಿಯರ ಮತ್ತು ಕಿರಿಯರ ನಡುವಿನ ಬಾಂಧವ್ಯವನ್ನು ಗಟ್ಟಿಗೊಳಿ ಸುವ ಈ ವಿಶಿಷ್ಟ ಕಾರ್ಯಕ್ರಮದಲ್ಲಿ ಮೈಸೂರಿನ ಕರ್ನಾಟಕ ಪೊಲೀಸ್ ಅಕಾಡೆಮಿಯ ನಿರ್ದೇಶಕ ಐಜಿಪಿ ವಿಪುಲ್ ಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಮೈಸೂರು ಗ್ರಾಹಕರ ಪರಿಷತ್ತಿನ ಅಧ್ಯಕ್ಷ ಭಾಮಿ ವಿ.ಶೆಣೈ ಗೌರವ ಅತಿಥಿಯಾಗಿ ಪಾಲ್ಗೊಳ್ಳಲಿದ್ದು, ಕೌಟಿಲ್ಯ…

ಸುಳವಾಡಿ ಪ್ರಸಾದ ದುರಂತ ಮೈಸೂರಿನ ತ್ರಿಪುರ ಭೈರವಿ ಮಠದ  ಶ್ರೀ ಆಂಜನೇಯ ದೇವಸ್ಥಾನಕ್ಕೆ ಸಿಸಿ ಕ್ಯಾಮರಾ
ಮೈಸೂರು

ಸುಳವಾಡಿ ಪ್ರಸಾದ ದುರಂತ ಮೈಸೂರಿನ ತ್ರಿಪುರ ಭೈರವಿ ಮಠದ  ಶ್ರೀ ಆಂಜನೇಯ ದೇವಸ್ಥಾನಕ್ಕೆ ಸಿಸಿ ಕ್ಯಾಮರಾ

December 22, 2018

ಮೈಸೂರು:  ಸುಳವಾಡಿಯ ಕಿಚ್‍ಗುತ್ ಮಾರಮ್ಮ ದೇವಸ್ಥಾನದಲ್ಲಿ ಪ್ರಸಾದಕ್ಕೆ ವಿಷ ಪ್ರಾಶನ ಮಾಡಿ 16 ಮಂದಿ ಸಾವಿ ಗೀಡಾದ ಪ್ರಕರಣದಿಂದ ಎಚ್ಚೆತ್ತ ಮೈಸೂರಿನ ದೇವ ರಾಜ ಮೊಹಲ್ಲಾದಲ್ಲಿರುವ ತ್ರಿಪುರ ಭೈರವಿ ಮಠದ ಶ್ರೀ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಗುರುವಾರ ಸಿಸಿ ಕ್ಯಾಮರಾಗಳನ್ನು ಅಳವಡಿಸ ಲಾಯಿತು. ಹನುಮ ಜಯಂತಿ ಅಂಗವಾಗಿ ಇಂದು ಅನ್ನದಾನ ಏರ್ಪಡಿಸಿದ್ದ ರಿಂದ ಮಠದ ಆಡಳಿತ ಮಂಡಳಿಯು ಗುರುವಾರವೇ ಪ್ರಸಾದ ತಯಾರಿಸುವ ಅಡುಗೆ ಕೋಣೆಗೆ 3 ಕ್ಯಾಮರಾ ಸೇರಿದಂತೆ ದೇವಸ್ಥಾನದ ಆಯಕಟ್ಟಿನ ಸ್ಥಳಗಳಿಗೆ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಿ ಮುಂಜಾಗ್ರತಾ…

ನಾಳೆ ಮೈಸೂರಲ್ಲಿ ‘ಸ್ಫೂರ್ತಿ ಉತ್ಸವ’
ಮೈಸೂರು

ನಾಳೆ ಮೈಸೂರಲ್ಲಿ ‘ಸ್ಫೂರ್ತಿ ಉತ್ಸವ’

December 22, 2018

ಮೈಸೂರು : ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ಃಂI)ದ ಅಂಗ ಸಂಸ್ಥೆಯಾದ ‘ಸ್ಫೂರ್ತಿ’ ಮಹಿಳಾ ಘಟಕವು ಭಾನುವಾರ (ಡಿ.23) ಮೈಸೂರಿನ ಕುವೆಂಪುನಗರದಲ್ಲಿರುವ ಜಯಮ್ಮ ಗೋವಿಂದೇಗೌಡ ಕಲ್ಯಾಣ ಮಂಟಪದಲ್ಲಿ ‘ಸ್ಫೂರ್ತಿ ಉತ್ಸವ’ವನ್ನು ಆಯೋಜಿಸಿದೆ. ಅಂದು ಬೆಳಿಗ್ಗೆ 9 ಗಂಟೆಗೆ ಮೇಯರ್ ಪುಷ್ಪಲತಾ ಜಗನ್ನಾಥ ಅವರು ಉತ್ಸವವನ್ನು ಉದ್ಘಾಟಿಸಲಿದ್ದು, ವಸ್ತು ಪ್ರದರ್ಶನಕ್ಕೆ ಚಾಲನೆ ನೀಡುವರು ಎಂದು ಸ್ಫೂರ್ತಿ ಮಹಿಳಾ ಘಟಕದ ಅಧ್ಯಕ್ಷೆ ಶ್ವೇತಾ ತಿಳಿಸಿದ್ದಾರೆ. ಸಂಜೆ 4 ಗಂಟೆಗೆ ನಡೆಯಲಿರುವ ‘ಸಾವಯವ ಕೃಷಿ’ ಕುರಿತ ಅರಿವು ಕಾರ್ಯಕ್ರಮ ದಲ್ಲಿ ಮೈಸೂರು…

ಬಿಸಿಎಂ ಹಾಸ್ಟೆಲ್‍ಗೆ ನುಗ್ಗಿದ ಖದೀಮ
ಮೈಸೂರು

ಬಿಸಿಎಂ ಹಾಸ್ಟೆಲ್‍ಗೆ ನುಗ್ಗಿದ ಖದೀಮ

December 22, 2018

ಮೈಸೂರು: ಕೆ.ಆರ್.ಆಸ್ಪತ್ರೆ ಆವರಣದ ನರ್ಸಿಂಗ್ ಹಾಸ್ಟೆಲ್‍ಗೆ ನುಗ್ಗಿದ ವಿಕೃತ ವ್ಯಕ್ತಿ ಸಿಕ್ಕಿಬಿದ್ದ ಪ್ರಕರಣ ಇನ್ನೂ ಮಾಸದಿರುವ ಬೆನ್ನಲ್ಲೇ ಮೈಸೂರಿನ ಕುವೆಂಪುನಗರದ ಬಿಸಿಎಂ ಮಹಿಳಾ ಹಾಸ್ಟೆಲ್‍ಗೆ ಖದೀಮನೋರ್ವ ನುಸುಳಿ ಆತಂಕ ಹುಟ್ಟಿಸಿರುವ ಘಟನೆ ಡಿಸೆಂಬರ್ 17 ರಂದು ನಡೆದಿದೆ.ಆದಿಚುಂಚನಗಿರಿ ರಸ್ತೆಯಲ್ಲಿರುವ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಇಲಾಖೆಯ ಮಹಿಳಾ ವಿದ್ಯಾರ್ಥಿನಿಲಯಕ್ಕೆ ಅಂದು ಮುಂಜಾನೆ 2.30 ಗಂಟೆ ವೇಳೆಗೆ ನುಸುಳಿದ ಖದೀಮ, ವಿದ್ಯಾರ್ಥಿನಿಯರ ಮೊಬೈಲ್ ಕಳವಿಗೆ ಯತ್ನಿಸಿದ. ಒಂದು ಕೊಠಡಿಯಿಂದ ಮತ್ತೊಂದು ಕೊಠಡಿಗೆ ತೆರಳುತ್ತಿದ್ದ ಆತನನ್ನು ಕಿಟಕಿ ಗಾಜಿನಿಂದ ಕಂಡ…

ಕಾಯಕ ಯೋಜನೆಗೆ ಚಾಲನೆ; ಬಡವರ ಬಂಧು  ಯೋಜನೆ ಫಲಾನುಭವಿಗಳಿಗೆ ಚೆಕ್ ವಿತರಣೆ
ಮೈಸೂರು

ಕಾಯಕ ಯೋಜನೆಗೆ ಚಾಲನೆ; ಬಡವರ ಬಂಧು ಯೋಜನೆ ಫಲಾನುಭವಿಗಳಿಗೆ ಚೆಕ್ ವಿತರಣೆ

December 21, 2018

ಬೆಳಗಾವಿ: ಬಡ್ಡಿರಹಿತ ಸಾಲ ಸೌಲಭ್ಯ ಒದಗಿಸುವ ಬಡವರ ಬಂಧು ಯೋಜನೆಯ ಲಾಭ ವನ್ನು ರಾಜ್ಯದಲ್ಲಿರುವ ಒಟ್ಟು 4.5 ಲಕ್ಷ ಬೀದಿ ಬದಿ ವ್ಯಾಪಾರಿಗಳ ಕುಟುಂಬಗಳಿಗೂ ತಲುಪಿಸಲಾಗುವುದು. ಅದೇ ರೀತಿ ಕಾಯಕ ಯೋಜನೆಯಡಿ ಮಹಿಳಾ ಸಂಘಗಳು ತಯಾರಿಸುವ ಉತ್ಪನ್ನಗಳನ್ನು ಸರ್ಕಾರದ ವತಿಯಿಂದಲೇ ಖರೀದಿಸುವ ಬಗ್ಗೆ ಚಿಂತನೆ ನಡೆಸ ಲಾಗುತ್ತಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು. ಸಹಕಾರ ಇಲಾಖೆಯ ವತಿಯಿಂದ ಧರ್ಮನಾಥ ಭವನದಲ್ಲಿ ಗುರುವಾರ (ಡಿ.20) ಏರ್ಪಡಿಸಿದ್ದ ‘ಕಾಯಕ’ ಯೋಜನೆಯ ಉದ್ಘಾಟನೆ ಮತ್ತು ‘ಬಡವರ ಬಂಧು’ ಯೋಜನೆಯ ಫಲಾನುಭವಿಗಳಿಗೆ…

ಮೈಸೂರಿನಲ್ಲಿ ಭಕ್ತಿ ಭಾವದ ‘ಹನುಮ’ ನಾಮ ಸ್ಮರಣೆ
ಮೈಸೂರು

ಮೈಸೂರಿನಲ್ಲಿ ಭಕ್ತಿ ಭಾವದ ‘ಹನುಮ’ ನಾಮ ಸ್ಮರಣೆ

December 21, 2018

ಮೈಸೂರು:  ಹನುಮ ಜಯಂತಿ ಅಂಗವಾಗಿ ಗುರುವಾರ ಮೈಸೂರಿನಲ್ಲಿ ಹನುಮ ನಾಮಸ್ಮರಣೆ ನಡೆಯಿತು. ಹನುಮ ದೇವಾಲಯಗಳಲ್ಲಿ ಹೋಮ, ಹವನ, ಅಭಿಷೇಕ, ವಿಶೇಷ ಅಲಂಕಾರ, ಪೂಜೆ, ಅನ್ನ ಸಂತರ್ಪಣೆ ನಡೆದವು. ಭಕ್ತರು ಭಕ್ತಿಯಿಂದ ಹನುಮನ ದರ್ಶನ ಪಡೆದು ಜೈಕಾರ ಹಾಕಿದರು. ಅರಮನೆ ಕೋಟೆ ಆಂಜನೇಯಸ್ವಾಮಿ ದೇವಾಲಯ, ಗಂಗೋತ್ರಿ ಬಡಾವಣೆ ಆಂಜ ನೇಯಸ್ವಾಮಿ ದೇವಸ್ಥಾನ, ಗಣಪತಿ ಸಚ್ಚಿದಾ ನಂದ ಆಶ್ರಮದ ಕಾರ್ಯಸಿದ್ಧಿ ಆಂಜನೇಯ ಸ್ವಾಮಿ ದೇವಸ್ಥಾನ, ಜೆಎಸ್‍ಎಸ್ ಆಸ್ಪತ್ರೆ ಬಳಿ ಪಾತಾಳಾಂಜನೇಯಸ್ವಾಮಿ ದೇವಸ್ಥಾನ, ಇರ್ವಿನ್ ರಸ್ತೆ ಪಂಚಮುಖಿ ಆಂಜನೇಯ ಸ್ವಾಮಿ ದೇವಾಲಯ,…

ಸಂತ್ರಸ್ತರ ಆರೋಗ್ಯ ವಿಚಾರಿಸಿದ  ಚಾ.ನಗರ ಡಿಸಿ ಬಿ.ಬಿ.ಕಾವೇರಿ
ಮೈಸೂರು

ಸಂತ್ರಸ್ತರ ಆರೋಗ್ಯ ವಿಚಾರಿಸಿದ ಚಾ.ನಗರ ಡಿಸಿ ಬಿ.ಬಿ.ಕಾವೇರಿ

December 21, 2018

ಮೈಸೂರು: `ಚೆನ್ನಾಗಿ ಓದಿ ಡಾಕ್ಟರ್ ಆಗಿ. ಈಗ ತಿಳಿಯಿತಾ ಡಾಕ್ಟರ್ ಆಗುವುದು ಎಷ್ಟು ಮಹತ್ವದ್ದು ಎಂದು’ ಚಾಮರಾಜನಗರ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರು ಗುರುವಾರ ಮೈಸೂರಿನ ರಾಮಕೃಷ್ಣನಗರದ ಸುಯೋಗ್ ಆಸ್ಪತ್ರೆಗೆ ಭೇಟಿ ನೀಡಿ, ಆಸ್ಪತ್ರೆಯಿಂದ ಬಿಡುಗಡೆಯಾದ ಮಕ್ಕಳ ಆರೋಗ್ಯ ವಿಚಾರಿಸಿ, ಪ್ರೀತಿಯಿಂದ ತಿಳಿವಳಿಕೆ ಹೇಳಿದ ಪರಿಯಿದು. ಆಸ್ಪತ್ರೆಯಲ್ಲಿದ್ದ ಎಲ್ಲಾ 9 ಮಕ್ಕಳು ಹಾಗೂ ಐವರು ವಯಸ್ಕರ ಭೇಟಿ ಮಾಡಿ, ಅವರಿಗೆ ನೀಡುತ್ತಿರುವ ಚಿಕಿತ್ಸಾ ವಿವರ ಹಾಗೂ ಆರೋಗ್ಯದ ಸ್ಥಿತಿ ಕುರಿತು ಮಾಹಿತಿ ಪಡೆದರು.ಇದೇ ವೇಳೆ ಆಸ್ಪತ್ರೆಯಿಂದ ಬಿಡುಗಡೆ ಯಾಗುವ…

ತಿಂದಿದ್ದು ಎರಡೇ ತುತ್ತು, ತಲೆ ಸುತ್ತಲಾರಂಭಿಸಿತು!
ಮೈಸೂರು

ತಿಂದಿದ್ದು ಎರಡೇ ತುತ್ತು, ತಲೆ ಸುತ್ತಲಾರಂಭಿಸಿತು!

December 21, 2018

ಮೈಸೂರು: ನಾವು ಸುಳವಾಡಿ ಮಾರಮ್ಮ ದೇವಾಲಯಕ್ಕೆ ಹೋಗಿದ್ದೋ. ಬಂದವರನೆಲ್ಲಾ ಸಾಲಾಗಿ ನಿಲ್ಲಿಸಿ, ಪಂಚಾಮೃತ ಹಾಗೂ ಟೊಮೆಟೊ ಬಾತ್ ನೀಡಲಾಯಿತು. ಪಚ್ಚೆ ಕರ್ಪೂರದ ವಾಸನೆ ಬರುತ್ತಿತ್ತು. ತಿನ್ನಲಾಗಲಿಲ್ಲ. ಎರಡೇ ತುತ್ತು ತಿಂದು ಬೀಸಾಡಿ ಬಿಟ್ಟೋ. ಸ್ವಲ್ಪ ಹೊತ್ತಿನ ನಂತರ ತಲೆ ತಿರುಗ ತೊಡಗಿತು. ವಾಂತಿ-ಭೇದಿ ಆರಂಭವಾಗಿ ಹೊಟ್ಟೆನೋವು ಆರಂಭವಾಯಿತು. ವಿಷ ಪ್ರಸಾದ ಸೇವಿಸಿ ಸಾವಿನ ದವಡೆಯಿಂದ ಪಾರಾಗಿ ಬಂದ ಮಕ್ಕಳ ನೋವಿನ ನುಡಿ ಇದು. ಮೈಸೂರಿನ ರಾಮ ಕೃಷ್ಣನಗರದಲ್ಲಿ ರುವ ಸುಯೋಗ್ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ…

1 1,221 1,222 1,223 1,224 1,225 1,611
Translate »