ಮೈಸೂರು: ಮೈಸೂರಿನ ಕುಂಬಾರಕೊಪ್ಪಲು ಶಾಪಗ್ರಸ್ಥ ಬಡಾವಣೆಯಾಗಿದ್ದು, ಯಾವುದೇ ಅಭಿವೃದ್ಧಿ ಕಾರ್ಯಗಳಾಗುತ್ತಿಲ್ಲ ಎಂದು ಇಲ್ಲಿನ ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ. ಕಸ ವಿಂಗಡಣೆ, ಘನ ತ್ಯಾಜ್ಯ ನಿರ್ವ ಹಣೆಯಲ್ಲಿ ರಾಜ್ಯಕ್ಕೆ ಮಾದರಿಯಾಗಿದ್ದ ಕುಂಬಾರಕೊಪ್ಪಲು ಅವ್ಯವಸ್ಥೆಯ ಗೂಡಾ ಗಿದ್ದು, ಅತ್ತ ಗ್ರಾಮವಾಗಿ ಉಳಿಯಲಾಗದೆ, ಇತ್ತ ಇತರೆ ಬಡಾವಣೆಗಳಂತೆ ಅಭಿವೃದ್ಧಿ ಕಾಣಲಾಗದೆ ಅತಂತ್ರ ಸ್ಥಿತಿಯಲ್ಲಿ ಬಳಲು ತ್ತಿದೆ. ಸುತ್ತಲೂ ಇರುವ ವ್ಯವಸ್ಥಿತ ಬಡಾ ವಣೆಗಳ ನಡುವೆ ಅನಾಥವಾಗಿ ಮರುಗು ತ್ತಿದೆ. ರಸ್ತೆ, ಚರಂಡಿ, ಬೀದಿ ದೀಪದಂತಹ ಮೂಲ ಸೌಲಭ್ಯಗಳಿಂದಲೂ ವಂಚಿತ ವಾಗಿದೆ. ಕಾಡಿನಲ್ಲಿರುವ…
ಕುರುಬಾರಹಳ್ಳಿ ಸರ್ವೇ ನಂ.4ರ ಆಸ್ತಿ ಮಾಲೀಕರಿಂದ ಪ್ರತಿಭಟನೆಯ ಎಚ್ಚರಿಕೆ
December 12, 2018ಮೈಸೂರು: ಮುಡಾ ಬಡಾವಣೆಗಳಾದ ಸಿದ್ದಾರ್ಥ ಬಡಾವಣೆ, ಕೆ.ಸಿ.ನಗರ, ಜೆ.ಸಿ.ನಗರ ಸಮಸ್ಯೆ ನಿವಾರಿಸುವುದಕ್ಕೆ ಮುಂದಾಗಿರುವಂತೆ ಕುರುಬಾರಹಳ್ಳಿ ಸರ್ವೇ ನಂ. 4ರ ಇನ್ನಿತರೆ ಭೂಮಿ ಸಮಸ್ಯೆ ಬಗೆಹರಿಸದಿದ್ದರೆ ಮೈಸೂರು-ಬೆಂಗಳೂರು ಮುಖ್ಯ ರಸ್ತೆಯ ಜಂಕ್ಷನ್‍ನಲ್ಲಿ ರಸ್ತೆ ತಡೆ ನಡೆಸಲು ಚಾಮುಂಡಿಬೆಟ್ಟ ತಪ್ಪಲಿನ ಭೂ ಮಾಲೀಕರ ಸಂಘದ ಸದಸ್ಯರು ನಿರ್ಧರಿಸಿದ್ದಾರೆ. ಜಿಲ್ಲಾಡಳಿತ, ಕುರುಬಾರಹಳ್ಳಿ ಸರ್ವೇ ನಂ.4, ಆಲನಹಳ್ಳಿ ಸರ್ವೇ ನಂ.41 ಹಾಗೂ ಚೌಡಹಳ್ಳಿ ಸರ್ವೇ ನಂ.39ರ ವ್ಯಾಪ್ತಿಯ ಪ್ರದೇಶವನ್ನು ಬಿ-ಖರಾಬು ಎಂದು ಘೋಷಿಸಿ, ದಾಖಲೆಗಳ ವಿಲೇವಾರಿಯನ್ನು ಸ್ಥಗಿತಗೊಳಿಸಿರುವ ಹಿನ್ನೆಲೆಯಲ್ಲಿ ಮಂಗಳವಾರ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ…
ರಾಷ್ಟ್ರ ಮಟ್ಟದಲ್ಲಿ ಭರವಸೆ ಮೂಡಿಸಿರುವ ಮೈಸೂರು ಕುಸ್ತಿ ಪಟು ರಾಕೇಶ್ ಚಕ್ರವರ್ತಿ
December 12, 2018ಮೈಸೂರು: ಕಳೆದ ತಿಂಗಳಷ್ಟೇ ಹರಿಯಾಣದ ಬಿವಾನಿಯಲ್ಲಿ ನಡೆದ ಆಲ್ ಇಂಡಿಯಾ ವಿಶ್ವವಿದ್ಯಾನಿಲಯ ಕುಸ್ತಿ ಪಂದ್ಯಾ ವಳಿಯಲ್ಲಿ ಕಂಚಿನ ಪದಕ ಗಳಿಸಿದ್ದ ಮೈಸೂರಿನ ಯುವ ಪ್ರತಿಭೆ, 2019ರ ಜನವರಿಯಲ್ಲಿ ದೆಹಲಿಯಲ್ಲಿ ನಡೆಯುವ ಕೆಲೊ ಇಂಡಿಯಾ ಕುಸ್ತಿ ಪಂದ್ಯಾ ವಳಿಯಲ್ಲಿ ರಾಜ್ಯವನ್ನು ಪ್ರತಿನಿಧಿ ಸುತ್ತಿದ್ದು, ಇದಕ್ಕಾಗಿ ದೇಹ ಕಸರತ್ತಿನಲ್ಲಿ ತೊಡಗಿದ್ದಾರೆ. ಈಗಾಗಲೇ ರಾಜ್ಯ, ರಾಷ್ಟ್ರ ಮಟ್ಟದ ಕುಸ್ತಿಯಲ್ಲಿ ಭಾಗವಹಿಸಿ ಚಿನ್ನ, ಬೆಳ್ಳಿ, ಕಂಚು ಪದಕ ಗಳಿಸುವ ಮೂಲಕ ಮೈಸೂರಿನ ಕೀರ್ತಿ ಪತಾಕೆಯನ್ನು ರಾಷ್ಟ್ರ ಮಟ್ಟದಲ್ಲಿ ಹಾರಿಸಿರುವ ಬಸುದೇವ ಸೋಮಾನಿ ಕಾಲೇಜಿನಲ್ಲಿ…
ಕಾರುಗಳ ಡಿಕ್ಕಿ: ಓರ್ವ ವ್ಯಕ್ತಿ ಸಾವು
December 12, 2018ಮೈಸೂರು: ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ, ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಮೈಸೂರು-ತಿ.ನರಸೀಪುರ ಮುಖ್ಯ ರಸ್ತೆಯಲ್ಲಿ ಸೋಮವಾರ ನಡೆದಿದೆ. ತಿ.ನರಸೀಪುರ ತಾಲೂಕು, ಸೋಸಲೆ ವ್ಯಾಸರಾಜಪುರದ ನಿವಾಸಿ ಸಿದ್ದಪ್ಪಾಜಿಚಾರಿ(52) ಅಪಘಾತದಲ್ಲಿ ಮೃತಪಟ್ಟವರು. ಮತ್ತೊಂದು ಕಾರಿನಲ್ಲಿದ್ದ ಯಳಂದೂರು ನಿವಾಸಿ ಶ್ರೀನಿವಾಸ್ ಹಾಗೂ ಅವರ ತಂದೆ ಗಾಯಗೊಂಡಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಿದ್ದಪ್ಪಾಜಿಚಾರಿ ಅವರು ಸೋಮವಾರ ಮಧ್ಯಾಹ್ನ ತಮ್ಮ ಮಹೀಂದ್ರ ಎಕ್ಸ್‍ಯೂವಿ 500 ಕಾರಿನಲ್ಲಿ ಮೈಸೂರಿನಿಂದ ತಿ.ನರಸೀಪುರಕ್ಕೆ ಹೋಗುತ್ತಿದ್ದಾಗ, ಗುರುಕಾರಪುರದ ಬಳಿ ಎದುರಿನಿಂದ ಬಂದ ಶ್ರೀನಿವಾಸ್ ಅವರ ಟಾಟಾ ಟಿಯಾಗೋ…
ಬೆಣಗಾಲು ಪಿಡಿಓ ವರ್ಗಾವಣೆಗೆ ಆಗ್ರಹಿಸಿ ಧರಣಿ ಆರಂಭ
December 12, 2018ಬೈಲಕುಪ್ಪೆ: ಪಿಡಿಓ ಮಂಜುನಾಥ್ ಸರ್ವಾಧಿಕಾರಿ ಧೋರಣೆ ಖಂಡಿಸಿ, ಬೆಣಗಾಲು ಗ್ರಾಮಸ್ಥರು ಕೂಡಲೇ ವರ್ಗಾವಣೆ ಮಾಡುವಂತೆ ಆಗ್ರಹಿಸಿ ಅಧ್ಯಕ್ಷ ಸುಂದರೇಗೌಡ ನೇತೃತ್ವದಲ್ಲಿ ಗ್ರಾಪಂ ಕಚೇರಿಗೆ ಬೀಗ ಜಡಿದು ಅಹೋ ರಾತ್ರಿ ಧರಣಿ ಆರಂಭಿಸಿದರು. ಪಿರಿಯಾಪಟ್ಟಣ ತಾಲೂಕಿನ ಬೆಣ ಗಾಲು ಗ್ರಾಪಂ ಆವರಣದಲ್ಲಿ ಜಮಾ ಯಿಸಿ ಧರಣಿ ಆರಂಭಿಸಿದ ಗ್ರಾಮಸ್ಥರು, ಪಿಡಿಓ ಸೇರಿಂದಂತೆ ಸಂಬಂಧಪಟ್ಟ ಹಿರಿಯ ಅಧಿಕಾರಿಗಳ ವಿರುದ್ಧಿ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಗ್ರಾಪಂ ಅಧ್ಯಕ್ಷ ಸುಂದರೇಗೌಡ ಮಾತನಾಡಿ, ಪಿಡಿಓ ಮಂಜುನಾಥ್ 9 ವರ್ಷಗಳಿಂದ ಇದೇ ಗ್ರಾಪಂನಲ್ಲಿ ಕಾರ್ಯ…
ವಿಶ್ವ ಅಯೋಡಿನ್ ಸಪ್ತಾಹ ಜಾಥಾಗೆ ಚಾಲನೆ
December 12, 2018ಸರಗೂರು: ವಿಶ್ವ ಅಯೋಡಿನ್ ಸಪ್ತಾಹ ಇದರ ಅಂಗವಾಗಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರ ದಲ್ಲಿ ರಾಷ್ಟ್ರೀಯ ಅಯೋಡಿನ್ ಕೊರೆತೆ ನಿಯಂತ್ರಣಾ ದಿನ ಹಾಗೂ ಪ್ರಧಾನ ಮಂತ್ರಿ ಮಾತೃತ್ವ ಸುರಕ್ಷಾ ಅಭಿಯಾನ ಕಾರ್ಯಕ್ರಮ ಜರುಗಿತು. ಇದರ ಅಂಗವಾಗಿ ಏರ್ಪಡಿಸಿದ್ದ ಅರಿವು ಜಾಥಾಗೆ ಹೆಚ್.ಡಿ.ಕೋಟೆ ಆರೋಗ್ಯಾಧಿ ಕಾರಿ ರವಿಕುಮಾರ್, ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಹನುಮನಾಯಕ ಚಾಲನೆ ನೀಡಿದರು. ಬಳಿಕ ಮಾತನಾಡಿದ ಆರೋಗ್ಯಾಧಿಕಾರಿ ರವಿಕುಮಾರ್, ಉತ್ತಮ ಆರೋಗ್ಯಕ್ಕೆ ಅಯೋಡಿನ್ ಅಂಶ ಅಗತ್ಯವಾಗಿದ್ದು, ಅಯೋಡಿನ್ ಉಪ್ಪಿನಲ್ಲಿ ಹೆಚ್ಚು ಖನಿಜಾಂಶ ಇರುವುದರಿಂದ ಪ್ರತಿದಿನ…
ಜಯಪುರದಲ್ಲಿ ಜನ ಸಂಪರ್ಕ ಸಭೆ
December 12, 2018ಮೈಸೂರು: ಮೈಸೂರು ತಾಲೂಕಿನ ಜಯಪುರ ಹೋಬಳಿಯಲ್ಲಿ ಕಂದಾಯ ಅದಾಲತ್ ಮತ್ತು ಜನ ಸಂಪರ್ಕ ಸಭೆ ನಡೆಯಿತು. ಮೈಸೂರು ತಾಪಂ ಅಧ್ಯಕ್ಷೆ ಕಾಳಮ್ಮ ಕೆಂಪರಾಮಯ್ಯ, ಎ.ಸಿ.ಶಿವೇಗೌಡ, ತಹ ಶೀಲ್ದಾರ್ ರಮೇಶ್ ಬಾಬು, ಜಯಪುರ ಗ್ರಾಪಂ ಅಧ್ಯಕ್ಷ ದಾರಿಪುರ ಬವಸಣ್ಣ ಸಭೆ ಯನ್ನು ಉದ್ಘಾಟಿಸಿದರು. ಹೋಳಿಯ ಗ್ರಾಮಸ್ಥರು ಸಭೆಯಲ್ಲಿ ಭಾಗವಹಿಸಿ ತಮ್ಮ ಕುಂದು-ಕೊರತೆ ಗಳನ್ನು ಹೇಳಿಕೊಂಡರು. ಕೆಂಚಲಗೂಡಿ ನಲ್ಲಿ ವೈನ್ಸ್ ತೆರವುಗೊಳಿಸಲು ಗ್ರಾಮಸ್ಥರು ಆಗ್ರಹಿಸಿದರು. ಮದ್ದೂರು ಗ್ರಾಮಸ್ಥರಿಂದ ಶಾಲಾ ಶಿಕ್ಷಕರು ಕರ್ತವ್ಯಕ್ಕೆ ಹಾಜರಾಗು ತ್ತಿಲ್ಲ ಎಂಬ ದೂರು ಕೇಳಿ ಬಂತು….
ಹಸಿದ ಜನತೆ, ರೈತರ ಕಡೆಗಣನೆ ಬಿಜೆಪಿ ಸೋಲಿಗೆ ಕಾರಣ
December 12, 2018ಕೆ.ಆರ್.ನಗರ: ಪ್ರಧಾನಿ ನರೇಂದ್ರ ಮೋದಿ ಅವರು ಹಸಿದ ಜನರು ಹಾಗೂ ಮತ್ತು ರೈತರನ್ನು ಕಡೆಗಣಿಸಿದ್ದೇ ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಕಾರಣ ಎಂದು ಸ್ವರಾಜ್ ಇಂಡಿಯಾ ಪಕ್ಷದ ತಾಲೂಕ ಅಧ್ಯಕ್ಷ ಗರಡುಗಂಭಸ್ವಾಮಿ ಆರೋಪಿಸಿದರು. ಪಟ್ಟಣದಲ್ಲಿ ಪತ್ರಿಕಾ ಹೇಳಿಕೆ ನೀಡಿದ ಅವರು, ಪ್ರಧಾನಿ ನರೇಂದ್ರ ಮೋದಿ ದೇಶ ಸುತ್ತುವುದರಲ್ಲೇ ಕಾಲ ಕಳೆಯುತ್ತಿದ್ದು, ಅಧಿಕಾರಕ್ಕೆ ಬರುವ ಮುನ್ನ ಘೋಷಿಸಿದ ಉದ್ಯೋಗ ಸೃಷ್ಟಿ, ಬಡವರ ಖಾತೆಗೆ ಹಣ ವರ್ಗಾವಣೆ, ರೈತರ ಸಮಸ್ಯೆ ನಿವಾರಣೆ ಮಾಡುವಂತಹ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದ್ದಾರೆ….
ಕಾಮಗಾರಿ ಸ್ಥಗಿತಗೊಳಿಸಲು ಕಾಲೇಜು ವಿದ್ಯಾರ್ಥಿಗಳ ಪ್ರತಿಭಟನೆ
December 12, 2018ಹುಣಸೂರು: ನಗರದ ದೇವರಾಜ ಅರಸು ಕ್ರೀಡಾಂಗಣದ ಮುಂದೆ ಸ್ವಚ್ಛ ಭಾರತ್ ಮಿಷನ್‍ಯಡಿ ನಗರಸಭೆ ಯಿಂದ ನಿರ್ಮಿಸುತ್ತಿರುವ ಸಾರ್ವಜನಿಕ ಹೈಟೆಕ್ ಶೌಚಾಲಯ ಕಾಮಗಾರಿ ಸ್ಥಗಿತಗೊಳಿಸುವಂತೆ ಬಾಲಕರ ಸರ್ಕಾರಿ ಕಿರಿಯ ಕಾಲೇಜು ವಿದ್ಯಾರ್ಥಿಗಳಿಂದು ಪ್ರತಿಭಟಿಸಿದರು. ಕಾಮಗಾರಿ ಸ್ಥಳದಲ್ಲಿ ಜಮಾಯಿಸಿದ ವಿದ್ಯಾರ್ಥಿಗಳು ನಗರದ ಕ್ರೀಡಾಂಗಣ ಮತ್ತು ಕಾಲೇಜು ಮುಂಭಾಗದಲ್ಲೇ ಶೌಚಾಲಯ ನಿರ್ಮಿಸುತ್ತಿರುವುದು ಸರಿಯಲ್ಲ. ಕೂಡಲೇ ಇದನ್ನು ಬೇರೆಡೆ ಸ್ಥಳಾಂತರಿಸಿ ಎಂದು ಒತ್ತಾಯಿಸಿದರು. ಕಾಲೇಜಿನ ಪ್ರಾಂಶುಪಾಲ ನಾಗರಾಜು ಅರಸು ಮಾತನಾಡಿ, ಕ್ರೀಡಾಂಗಣ ಮತ್ತು ಕಾಲೇಜಿನ ಮುಂಭಾಗದಲ್ಲೇ ಸಾರ್ವ ಜನಿಕ ಶೌಚಾಲಯ ಕಟ್ಟುತ್ತಿರುವುದು ಅವಲಕ್ಷಣವಾಗಿದೆ….
ಪ್ರತ್ಯೇಕ ಲಿಂಗಾಯತ ಧರ್ಮ ಪ್ರಸ್ತಾವನೆ ಕೇಂದ್ರದಿಂದ ತಿರಸ್ಕೃತ
December 11, 2018ಬೆಂಗಳೂರು: ಪ್ರತ್ಯೇಕ ಲಿಂಗಾಯಿತ ಧರ್ಮ ಪ್ರಸ್ತಾವನೆ ಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ. ಸಿದ್ದರಾಮಯ್ಯ ನೇತೃತ್ವದ ಹಿಂದಿನ ಕಾಂಗ್ರೆಸ್ ಸರ್ಕಾರ ಲಿಂಗಾಯಿತ (ವೀರಶೈವ) ಸಮಾಜಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆ ನೀಡಿ, ಅವರಿಗೆ ಅಲ್ಪಸಂಖ್ಯಾತರೆಂದು ಪರಿಗಣಿಸುವಂತೆ ಕೇಂದ್ರಕ್ಕೆ ಶಿಫಾರಸ್ಸು ಮಾಡಿತ್ತು. ಅಂದಿನ ರಾಜ್ಯ ಸರ್ಕಾರದ ಮಹತ್ವದ ತೀರ್ಮಾನವನ್ನು ಕೇಂದ್ರದ ಅಲ್ಪಸಂಖ್ಯಾತ ಹಾಗೂ ಹಜ್ ಮತ್ತು ವಕ್ಫ್ ಮಂತ್ರಾಲಯ ತಿರಸ್ಕರಿಸಿ 13ನೇ ನವೆಂಬರ್ 2018 ರಂದೇ ರಾಜ್ಯಕ್ಕೆ ಸಂದೇಶ ರವಾನೆ ಮಾಡಿದೆ. ತಮ್ಮ ಪತ್ರದಲ್ಲಿ ಕೇಂದ್ರ ಗೃಹ ಇಲಾಖೆ ಹಾಗೂ ಅಲ್ಪಸಂಖ್ಯಾತರ…