ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿದ್ದರೂ  ಕುಂಬಾರಕೊಪ್ಪಲು ಸ್ಥಿತಿ ಶೋಚನೀಯ
ಮೈಸೂರು

ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿದ್ದರೂ ಕುಂಬಾರಕೊಪ್ಪಲು ಸ್ಥಿತಿ ಶೋಚನೀಯ

December 12, 2018

ಮೈಸೂರು: ಮೈಸೂರಿನ ಕುಂಬಾರಕೊಪ್ಪಲು ಶಾಪಗ್ರಸ್ಥ ಬಡಾವಣೆಯಾಗಿದ್ದು, ಯಾವುದೇ ಅಭಿವೃದ್ಧಿ ಕಾರ್ಯಗಳಾಗುತ್ತಿಲ್ಲ ಎಂದು ಇಲ್ಲಿನ ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ.

ಕಸ ವಿಂಗಡಣೆ, ಘನ ತ್ಯಾಜ್ಯ ನಿರ್ವ ಹಣೆಯಲ್ಲಿ ರಾಜ್ಯಕ್ಕೆ ಮಾದರಿಯಾಗಿದ್ದ ಕುಂಬಾರಕೊಪ್ಪಲು ಅವ್ಯವಸ್ಥೆಯ ಗೂಡಾ ಗಿದ್ದು, ಅತ್ತ ಗ್ರಾಮವಾಗಿ ಉಳಿಯಲಾಗದೆ, ಇತ್ತ ಇತರೆ ಬಡಾವಣೆಗಳಂತೆ ಅಭಿವೃದ್ಧಿ ಕಾಣಲಾಗದೆ ಅತಂತ್ರ ಸ್ಥಿತಿಯಲ್ಲಿ ಬಳಲು ತ್ತಿದೆ. ಸುತ್ತಲೂ ಇರುವ ವ್ಯವಸ್ಥಿತ ಬಡಾ ವಣೆಗಳ ನಡುವೆ ಅನಾಥವಾಗಿ ಮರುಗು ತ್ತಿದೆ. ರಸ್ತೆ, ಚರಂಡಿ, ಬೀದಿ ದೀಪದಂತಹ ಮೂಲ ಸೌಲಭ್ಯಗಳಿಂದಲೂ ವಂಚಿತ ವಾಗಿದೆ. ಕಾಡಿನಲ್ಲಿರುವ ಹಾಡಿಗಳಲ್ಲೂ ರಸ್ತೆ, ವಿದ್ಯುತ್ ಇನ್ನಿತರ ಸೌಕರ್ಯಗಳಿ ರುವ ಸಂದರ್ಭದಲ್ಲಿ ಮೈಸೂರಿನಲ್ಲಿರುವ ಕುಗ್ರಾಮ ಎಂಬ ಅಪಖ್ಯಾತಿಗೆ ಕುಂಬಾರ ಕೊಪ್ಪಲು ಗುರಿಯಾಗಿದೆ.

ಕುಂಬಾರಕೊಪ್ಪಲು ರಸ್ತೆಗಳೆಲ್ಲಾ ದುರ್ಗಮ ಹಾದಿಗಿಂತ ದುಸ್ಥಿತಿಯಲ್ಲಿವೆ. ಆಧಿಶಕ್ತಿ ಬನ್ನಿ ಮರದಮ್ಮ ದೇವಾಲಯದಿಂದ ಹೆಬ್ಬಾಳು ಸೂರ್ಯಬೇಕರಿ ವೃತ್ತ ಸಂಪರ್ಕಿಸುವ ಕುಂಬಾರಕೊಪ್ಪಲು ಮುಖ್ಯರಸ್ತೆ ಸಂಪೂರ್ಣ ಹಾಳಾಗಿದೆ. ಅತ್ಯಂತ ಕಿರಿದಾಗಿರುವ ಈ ರಸ್ತೆಯನ್ನು ಸದ್ಯ ವಿಸ್ತರಿಸುವುದು ಕಷ್ಟ ಸಾಧ್ಯ. ಆದರೆ ಇರುವ ರಸ್ತೆಯನ್ನಾದರೂ ಸರಿಪಡಿಸಿಲ್ಲ. ರಸ್ತೆಯುದ್ದಕ್ಕೂ ಗುಂಡಿಗಳಿದ್ದು, ಅಲ್ಲಲ್ಲಿ ಅಪಾಯಕಾರಿ ಹೊಂಡಗಳೂ ನಿರ್ಮಾಣವಾಗಿವೆ.

ಅವೈಜ್ಞಾನಿಕ ಒಳ ಚರಂಡಿ ಕಾಮಗಾರಿಯಿಂದ ಮತ್ತಷ್ಟು ಸಮಸ್ಯೆಗಳು ಸೃಷ್ಟಿಯಾಗಿವೆ. ರಸ್ತೆ ಮಧ್ಯೆಯೇ ಇರುವ ಮ್ಯಾನ್‍ಹೋಲ್‍ಗಳು ರಸ್ತೆಗಿಂತ ಮುಕ್ಕಾಲು ಅಡಿ ಎತ್ತರವಾಗಿರುವುದರಿಂದ ವಾಹನ ಸಂಚಾರಕ್ಕೆ ಕಂಟಕ ಪ್ರಾಯವಾಗಿವೆ. ದ್ವಿಚಕ್ರ ವಾಹನ ಸವಾರರು ಕೊಂಚ ಎಚ್ಚರ ತಪ್ಪಿದರೂ ಅಪಘಾತ ಕಟ್ಟಿಟ್ಟ ಬುತ್ತಿ. ಕಾರು, ಆಟೋಗಳನ್ನೂ ತುಂಬಾ ಎಚ್ಚರಿಕೆಯಿಂದ ಚಾಲಿಸಬೇಕು. ಇಲ್ಲವಾದಲ್ಲಿ ವಾಹನ ಗಳಿಗೆ ಹಾನಿಯಾಗುವುದು ಖಚಿತ.

ಬಿಎಂಶ್ರೀ ನಗರ, ಬೃಂದಾವನ ಬಡಾ ವಣೆ ಸೇರಿದಂತೆ ಕೆಆರ್‍ಎಸ್ ಮುಖ್ಯರಸ್ತೆ ಕಡೆಯಿಂದ ಹೆಬ್ಬಾಳು ಸೂರ್ಯಬೇಕರಿ, ಅಭಿಷೇಕ್ ವೃತ್ತಕ್ಕೆ ಹೋಗುವವರು ಹತ್ತಿರ ಮಾರ್ಗವೆಂದು ಕುಂಬಾರಕೊಪ್ಪಲು ಮುಖ್ಯ ರಸ್ತೆ ಮೂಲಕ ಸಂಚರಿಸುತ್ತಾರೆ. ಹಾಗಾಗಿ ದಿನನಿತ್ಯ ಈ ರಸ್ತೆಯಲ್ಲಿ ಸಾವಿರಾರು ವಾಹನಗಳು ಓಡಾಡುತ್ತವೆ. ಇಲ್ಲಿ ಪಾದಚಾರಿ ಗಳಿಗೆ ಅವಕಾಶವೇ ಇಲ್ಲದಂತಾಗಿದೆ. ನಿರಂತರ ವಾಹನ ಸಂಚಾರದಿಂದ ರಸ್ತೆಯ ಇಕ್ಕೆಲಗಳಲ್ಲಿರುವ ಮನೆಗಳಿಗೆ ಧೂಳು ಆವರಿಸುತ್ತಿದೆ. ಪ್ರತಿನಿತ್ಯ ಮನೆ ಯೊಳಗಿ ರುವ ವಸ್ತುಗಳಿಗೆ ಅಂಟುವ ಕಸ ತೆಗೆಯು ವುದು ಗೃಹಿಣಿಯರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಮಳೆ ನೀರು ಚರಂಡಿ ಮುಚ್ಚಿ ಹೋಗಿದೆ. ಒಳ ಚರಂಡಿ ವ್ಯವಸ್ಥೆಯೂ ಹಾಳಾಗಿ ಹೋಗಿದೆ. ಅಲ್ಲಲ್ಲಿ ಕಲ್ಲು-ಮಣ್ಣು, ತ್ಯಾಜ್ಯಗಳ ರಾಶಿ ಬಿದ್ದಿದೆ. ಆಗಾಗ್ಗೆ ನೀರಿನ ಪೈಪ್ ಒಡೆದು ರಸ್ತೆಯೆಲ್ಲಾ ರಾಡಿಯಾಗು ತ್ತದೆ. ಇದರಿಂದ ಹೈರಾಣಾಗಿರುವ ನಿವಾಸಿ ಗಳು, ಇಷ್ಟೊಂದು ಸಮಸ್ಯೆಗಳ ಆಗರದಲ್ಲಿ ಜೀವನ ನಡೆಸುವುದಾದರೂ ಹೇಗೆಂದು? ಆತಂಕ್ಕೀಡಾಗಿದ್ದಾರೆ.

ಬಡಾವಣೆಯಲ್ಲಿರುವ ಮಹದೇಶ್ವರ ದೇವಾಲಯಕ್ಕೆ ನಿತ್ಯ ನೂರಾರು ಭಕ್ತರು ಬರುತ್ತಾರೆ. ದೀಪಾವಳಿ ಸಂದರ್ಭದಲ್ಲಿ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ನೆರವೇರುತ್ತದೆ. ಆದರೆ ದೇವಾಲಯದ ಆಸುಪಾಸಿನ ರಸ್ತೆಗಳೂ ಹಾಳಾಗಿ ಹೋಗಿವೆ. ಅನೇಕ ಕಾರಣಗಳಿಗೆ ಹೆಜ್ಜೆ ಹೆಜ್ಜೆಗೂ ರಸ್ತೆ ಅಗೆದು ಮಣ್ಣು ಮುಚ್ಚಿದ್ದಾರೆ. ವಾಹನಗಳ ಸಂಚಾರದಿಂದ ಅಲ್ಲೆಲ್ಲಾ ಗುಂಡಿ ಬಿದ್ದಿವೆ. ಕುಂಬಾರಕೊಪ್ಪಲಿನ ಅಡ್ಡರಸ್ತೆಗಳ ಸ್ಥಿತಿ ಯಂತೂ ಅತ್ಯಂತ ಶೋಚನೀಯ ವಾಗಿದೆ. ಬಡಾವಣೆಯ ಯಾವ ರಸ್ತೆಯೂ ಸರಿಯಾಗಿಲ್ಲ. ಬೀದಿ ದೀಪಗಳೂ ಸಮ ರ್ಪಕವಾಗಿಲ್ಲ. ರಾತ್ರಿ ವೇಳೆ ಓಡಾಡುವು ದಕ್ಕೆ ತಿಣುಕಾಡಬೇಕಾದ ದುಸ್ಥಿತಿ ಇದೆ. ಮಕ್ಕಳು, ವಯೋವೃದ್ಧರು ಎಲ್ಲಾದರೂ ಹೋಗಿ ಬರಬೇಕೆಂದರೆ ಜೊತೆಯಲ್ಲಿ ಯಾರಾದರೂ ಇರಲೇಬೇಕು. ಇಲ್ಲವಾದರೆ ಯಾವುದಾದರೂ ರಸ್ತೆ ಗುಂಡಿ ಅಥವಾ ಡುಬ್ಬವಾಗಿರುವ ಮ್ಯಾನ್‍ಹೋಲ್‍ನಿಂದ ಕಾಲು ಮುರಿದುಕೊಳ್ಳಬೇಕಾಗುತ್ತದೆ.

ಮೋರಿ ಸೇತುವೆ ದುಸ್ಥಿತಿ: ಗ್ರಾಮದೇವತೆ ಆಧಿಶಕ್ತಿ ಬನ್ನಿಮರದಮ್ಮ ದೇವಾಲಯದ ಹಿಂಭಾಗದಲ್ಲಿ ಹಾದುಹೋಗಿರುವ ಮೋರಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆಯೂ ದುಸ್ಥಿತಿಯಲ್ಲಿದೆ. ಕೆಆರ್ ಎಸ್ ಮುಖ್ಯರಸ್ತೆಯಿಂದ ಕುಂಬಾರ ಕೊಪ್ಪಲಿಗೆ ಈ ಸೇತುವೆ ಮಾರ್ಗದಲ್ಲೇ ಬರಬೇಕು. ಆದರೆ ಸೇತುವೆಯ ತಡೆ ಗೋಡೆ ಮುರಿದು ಬೀಳುವ ಹಂತ ದಲ್ಲಿದೆ. ಮೋರಿಯನ್ನು ಸಮರ್ಪಕವಾಗಿ ಶುಚಿಗೊಳಿಸಿಲ್ಲ. ಸಂಚಾರ ಮಾರ್ಗ ದಲ್ಲಿರುವ ಸೇತುವೆ, ಶಿಥಿಲಾವಸ್ಥೆಗೆ ತಲುಪಿ ದ್ದರೂ ಗಂಭೀರವಾಗಿ ಪರಿಗಣಿಸಿಲ್ಲ. ಹೊಸ ಸೇತುವೆ ನಿರ್ಮಾಣವಾಗುತ್ತದೆ ಎಂಬ ಬಹಳ ವರ್ಷಗಳ ಭರವಸೆ ಇನ್ನೂ ಈಡೇರಿಲ್ಲ.

ದೇವಾಲಯದ ಮುಂಭಾಗದಲ್ಲಿ ರುವ ಉದ್ಯಾನ ಪಾಳು ಬಿದ್ದಿದೆ. ಇಲ್ಲಿ ಮಕ್ಕಳು ಆಟವಾಡಲು ಅಳವಡಿಸಿದ್ದ ಕಬ್ಬಿಣದ ಪರಿಕರಗಳು ಮುರಿದು ಬಿದ್ದಿವೆ. ತುಕ್ಕು ಹಿಡಿದು ಹಾಳಾಗಿವೆ. ವಾಕಿಂಗ್ ಪಾಥ್ ಹದಗೆಟ್ಟಿದೆ. ಉದ್ಯಾನದ ಸುತ್ತಲಿನ ಗ್ರಿಲ್‍ಗಳು ಅಲ್ಲಲ್ಲಿ ಮುರಿದಿವೆ. ರಾಸು ಗಳನ್ನು ಕಟ್ಟಲು ಗ್ರಿಲ್‍ಗಳೇ ಗೂಟವಾ ಗಿವೆ. ಸ್ವಚ್ಛತೆ ಮರೆಯಾಗಿದೆ. ದೇವಾ ಯಕ್ಕೆ ಬರುವ ಭಕ್ತರು ಒಂದೆರಡು ನಿಮಿಷ ಉದ್ಯಾನದಲ್ಲಿ ಕುಳಿತುಕೊಳ್ಳೋಣ ಎಂದು ಬಂದು, ಇಲ್ಲಿನ ದುಸ್ಥಿತಿ ಕಂಡು ವಾಪಸ್ಸಾಗುತ್ತಾರೆ. ಒಟ್ಟಾರೆ ಕುಂಬಾರ ಕೊಪ್ಪಲು ಹೊದ್ದಿರುವ ಸಮಸ್ಯೆಗಳೆಲ್ಲಾ ಯಾವಾಗ ಪರಿಹಾರವಾಗುತ್ತವೋ? ಎಂಬ ದೊಡ್ಡ ಪ್ರಶ್ನೆ ನಿವಾಸಿಗಳಲ್ಲಿ ಗಟ್ಟಿಯಾಗಿ ತಳವೂರಿದೆ.

Translate »