ಮೈಸೂರು, ಡಿ.೨೮(ಎಂಟಿವೈ)- ಜರ್ಮನಿಯಿಂದ ತಂದಿರುವ ಒಂದು ಜೋಡಿ ಗಂಡು ಗೊರಿಲ್ಲಾಗಳಿಗಾಗಿ ಇನ್ಫೋಸಿಸ್ ಫೌಂಡೇಷನ್ ವತಿಯಿಂದ ನಿರ್ಮಿಸಿರುವ ಮನೆಯನ್ನು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ವರ್ಚುವಲ್ ಮೂಲಕ ಉದ್ಘಾಟಿಸಿದರು. ಮಂಗಳವಾರ ಬೆಳಗ್ಗೆ ನಡೆದ ಕಾರ್ಯಕ್ರಮದಲ್ಲಿ ಬೆಂಗಳೂರಿನಿAದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವರ್ಚುವಲ್ ಮೂಲಕ ಗೊರಿಲ್ಲಾ ಮನೆ ಉದ್ಘಾಟಿಸಿದ ಬಳಿಕ ಮಾತನಾಡಿ, ಕೊರೊನಾ ಸಂಕಷ್ಟದ ಸಮಯದಲ್ಲಿ ಎಲ್ಲಾ ಮೃಗಾಲಯಗಳಿಗೂ ಪ್ರವಾಸಿಗರ ಕೊರತೆಯಿಂದಾಗಿ ಸಮಸ್ಯೆ ಉಂಟಾಗಿತ್ತು. ಇಂತಹ ಸಂದರ್ಭದಲ್ಲಿ ಇನ್ಫೋಸಿಸ್ ಫೌಂಡೇಷನ್ ಸಿಎಸ್‌ಆರ್ ಫಂಡ್‌ನಲ್ಲಿ ೨.೭೦ ಕೋಟಿ ರೂ. ವೆಚ್ಚದಲ್ಲಿ ಗೊರಿಲ್ಲಾ…
‘ನೈಟ್ ಕಫ್ರ್ಯೂ’ಗೆ ಮೈಸೂರು ಜಿಲ್ಲಾ ಪೊಲೀಸರು ಸಜ್ಜು
December 28, 2021ಮೈಸೂರು, ಡಿ. 27(ಆರ್‍ಕೆ)- ನಾಳೆ (ಡಿ. 28)ಯಿಂದ 2022ರ ಜನವರಿ 7ರವರೆಗೆ ಪ್ರತೀದಿನ ರಾತ್ರಿ 10ರಿಂದ ಮುಂಜಾನೆ 5 ಗಂಟೆವರೆಗೆ ರಾತ್ರಿ ಕಫ್ರ್ಯೂ ಆದೇಶವನ್ನು ಪರಿಣಾಮ ಕಾರಿಯಾಗಿ ಜಾರಿಗೊಳಿಸಲು ಮೈಸೂರು ನಗರ ಮತ್ತು ಜಿಲ್ಲಾ ಪೊಲೀಸರು ಸರ್ವ ರೀತಿಯಲ್ಲಿ ಸಜ್ಜುಗೊಂಡಿದ್ದಾರೆ. ಭಾನುವಾರವಷ್ಟೇ ರಾಜ್ಯ ಸರ್ಕಾ ರವು, ಹೊಸ ವರ್ಷಾಚರಣೆಯನ್ನು ಗಮನದಲ್ಲಿರಿಸಿಕೊಂಡು ಸಂಭವ ನೀಯ ಒಮಿಕ್ರಾನ್ ಸೋಂಕು ಹರಡ ದಂತೆ ತಡೆಯಲು 10 ದಿನಗಳ ನೈಟ್ ಕಫ್ರ್ಯೂವನ್ನು ಜಾರಿಗೊಳಿಸಲು ಕೆಲ ನಿರ್ಬಂಧದೊಂದಿಗೆ ಆದೇಶ ಹೊರಡಿ ಸುತ್ತಿದ್ದಂತೆಯೇ ಅಧಿಕಾರಿಗಳೊಂದಿಗೆ ಸಭೆ…
ಡಾ.ಎ.ವಿ.ನರಸಿಂಹಮೂರ್ತಿಯವರಿಗೆ ಎಂ.ವೆಂಕಟಕೃಷ್ಣಯ್ಯ(ತಾತಯ್ಯ) ಪ್ರಶಸ್ತಿ ಪ್ರದಾನ
December 27, 2021ಮೈಸೂರು,ಡಿ.26(ಎಸ್‍ಪಿಎನ್)- ಭಾರ ತೀಯ ವಿದ್ಯಾಭವನದ ಮೈಸೂರಿನ ಮಾಜಿ ಅಧ್ಯಕ್ಷರು ಹಾಗೂ ಇತಿಹಾಸ ತಜ್ಞರಾದ ಡಾ.ಎ.ವಿ.ನರಸಿಂಹಮೂರ್ತಿ ಅವರಿಗೆ ಈ ಸಾಲಿನ ವೃದ್ಧ ಪಿತಾಮಹ ದಯಾಸಾಗರ ಎಂ.ವೆಂಕಟಕೃಷ್ಣಯ್ಯ(ತಾತಯ್ಯ) ಪ್ರಶಸ್ತಿ ಯನ್ನು ಭಾನುವಾರ ಪ್ರದಾನ ಮಾಡಲಾಯಿತು. ಮೈಸೂರು ನಾರಾಯಣಶಾಸ್ತ್ರಿ ರಸ್ತೆಯಲ್ಲಿ ರುವ ಅನಾಥಾಲಯ ಆವರಣದಲ್ಲಿ 177ನೇ ಎಂ.ವೆಂಕಟಕೃಷ್ಣಯ್ಯ (ತಾತಯ್ಯ)ನವರ ಜಯಂತ್ಯುತ್ಸವ ಸಮಿತಿ ಹಾಗೂ ಅನಾ ಥಾಲಯ ಸಹಯೋಗದೊಂದಿಗೆ ನಡೆದ ಸಮಾರಂಭದಲ್ಲಿ ಎಂ.ವೆಂಕಟಕೃಷ್ಣಯ್ಯ ಪ್ರಶಸ್ತಿಯನ್ನು ಯುವ ಬ್ರಿಗೇಡ್ ಸಂಸ್ಥಾಪಕ ಅಧ್ಯಕ್ಷ ಚಕ್ರವರ್ತಿ ಸೂಲಿಬೆಲೆ, ಉದ್ಯಮಿ ಆರ್.ಗುರು ಹಾಗೂ ಅನಾಥಾಲಯ ಅಧ್ಯಕ್ಷ ಸಿ.ವಿ.ಗೋಪಿನಾಥ್ ಅವರು…
ರೈತರ ಆದಾಯ ವೃದ್ಧಿಗಾಗಿ ಪ್ರತ್ಯೇಕ ನಿರ್ದೇಶನಾಲಯ ಸ್ಥಾಪನೆ
December 27, 2021ಮೈಸೂರು,ಡಿ.26(ಎಸ್‍ಬಿಡಿ)-ರೈತರ ಆದಾಯ ವೃದ್ಧಿಗೆ ಪೂರಕವಾಗಿ ಪ್ರತ್ಯೇಕ ನಿರ್ದೇಶನಾಲಯ ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ. ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ವತಿಯಿಂದ ಮೈಸೂರಿನ ಕಲಾಮಂದಿರದಲ್ಲಿ ಭಾನುವಾರ ಏರ್ಪಡಿಸಿದ್ದ ವಿಶ್ವ ರೈತ ದಿನಾಚರಣೆಯ ರಾಜ್ಯ ಮಟ್ಟದ ಸಮಾವೇಶ ಹಾಗೂ ಕುರುಬೂರು ಶಾಂತಕುಮಾರ್ ಅವರ 4 ದಶಕಗಳ ಹೋರಾ ಟಕ್ಕೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ಈ ಮಹತ್ವದ ಘೋಷಣೆ ಮಾಡಿದರು. ಎಲ್ಲಾ ರಾಜಕೀಯ ಪಕ್ಷಗಳೂ ರೈತರಿಗೆ ಸೇರಿದ್ದು, ಅವರೇ ಎಲ್ಲಾ ಪಕ್ಷಗಳ…
ಕಾರ್ ಶೋರೂಂನ ಸರ್ವೀಸ್ ಸ್ಟೇಷನ್‍ಗೆ ಬೆಂಕಿ
December 27, 2021ಸಾರ್ವಜನಿಕರು ಇಂದು ಬೆಳಗ್ಗೆ 8.30ಕ್ಕೆ ಕರೆ ಮಾಡಿ, ಕಾರ್ ಶೋ ರೂಮ್‍ನಲ್ಲಿ ಬೆಂಕಿ ಬಿದ್ದಿರುವ ಬಗ್ಗೆ ಮಾಹಿತಿ ನೀಡಿದರು. ಕೂಡಲೇ ನಾಲ್ಕು ಅಗ್ನಿಶಾಮಕ ವಾಹನ ಗಳನ್ನು ಕಳುಹಿಸಿ ತುರ್ತು ಕಾರ್ಯಾಚರಣೆ ನಡೆಸಿ ಬೆಂಕಿ ಸರ್ವಿಸ್ ಸ್ಟೇಷನ್‍ನಿಂದ ಮೇಲಿನ ಮಹಡಿಗೆ ವ್ಯಾಪಿಸುವುದನ್ನು ತಡೆಗಟ್ಟಲಾಯಿತು. ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸುಮಾರು 30ಕ್ಕೂ ಹೆಚ್ಚು ಮಂದಿ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಶಾರ್ಟ್ ಸಕ್ರ್ಯೂಟ್‍ನಿಂದ ಬೆಂಕಿ ಬಿದ್ದಿದೆ ಎಂದು ಸರ್ವಿಸ್ ಸ್ಟೇಷನ್ ಸಿಬ್ಬಂದಿ ತಿಳಿಸಿದ್ದಾರೆ. -ನಾಗರಾಜ ಅರಸ್,…
`ಚರಿತ್ರೆ’ ಗತಿಸಿದ ಘಟನೆಯಷ್ಟೇ ಅಲ್ಲ, ಮರುಹುಟ್ಟು ಪಡೆಯುವ ಬೀಜವೂ ಹೌದು
December 27, 2021ಮೈಸೂರು,ಡಿ.26(ಪಿಎಂ)-ಚರಿತ್ರೆ ಎಂಬುದು ಕೇವಲ ಗತಿಸಿದ ಘಟನೆ ಮಾತ್ರವಲ್ಲ. ಜೊತೆಗೆ ಅದು ಮತ್ತೆ ಮತ್ತೆ ಮರುಹುಟ್ಟು ಪಡೆಯುವ ಬೀಜವೂ ಹೌದು ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಬಿ.ವಿ.ವಸಂತ ಕುಮಾರ್ ಅಭಿಪ್ರಾಯಪಟ್ಟರು. ಮೈಸೂರಿನ ವಿಜಯನಗರದ ಜಿಲ್ಲಾ ಕನ್ನಡ ಸಾಹಿತ್ಯ ಭವನ ದಲ್ಲಿ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಸಂವಹನ ಪ್ರಕಾಶನದ ಜಂಟಿ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂ ಡಿದ್ದ ಸಮಾರಂಭದಲ್ಲಿ ಹಿರಿಯ ವಿದ್ವಾಂಸ ಪ್ರೊ.ಮಲೆಯೂರು ಗುರುಸ್ವಾಮಿ ಅವರ `ಬಂಗಾರದೊಡ್ಡಿ (ಚಾರಿತ್ರಿಕ ಕಾದಂ ಬರಿ)’ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು….
ಬಡತನ ರೇಖೆಗಿಂತ ಕೆಳಗಿರುವ ಶೇ.72ರಷ್ಟು ರೈತರು
December 27, 2021ಮೈಸೂರು, ಡಿ.26(ಆರ್‍ಕೆಬಿ)- ಕೃಷಿ ಬೆಲೆ ಆಯೋಗದ ಅಧ್ಯಯನ ಪ್ರಕಾರ ರಾಜ್ಯದ ಶೇ.72ರಷ್ಟು ರೈತರು ಬಡತನ ರೇಖೆಗಿಂತ ಕೆಳಗಿದ್ದಾರೆ ಎಂದು ಕೃಷಿ ಆರ್ಥಿಕ ತಜ್ಞ ಹಾಗೂ ರಾಜ್ಯ ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಡಾ.ಪ್ರಕಾಶ್ ಕಮ್ಮರಡಿ ಇಂದಿಲ್ಲಿ ತಿಳಿಸಿದರು. ಮೈಸೂರಿನ ಕಲಾಮಂದಿರದಲ್ಲಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘ ಆಯೋ ಜಿಸಿದ್ದ ವಿಶ್ವ ರೈತ ದಿನಾಚರಣೆಯ ರಾಜ್ಯ ಮಟ್ಟದ ಸಮಾವೇಶದಲ್ಲಿ ಕೃಷಿ ಹಾಗೂ ರೈತ ಸಮಸ್ಯೆಗಳ ಕುರಿತ ವಿಚಾರ ಮಂಡನೆ ಮತ್ತು ಸಂವಾದದಲ್ಲಿ…
ಯುವಜನತೆಗೆ ಅಕ್ಕ ಮಹಾದೇವಿ ಮಾದರಿ
December 27, 2021ಮೈಸೂರು, ಡಿ.26(ಎಸ್‍ಪಿಎನ್)-ಅಕ್ಕಮಹಾದೇವಿಯವರು 12ನೇ ಶತ ಮಾನದ ವಚನ ಚಳವಳಿಯಲ್ಲಿ ಪ್ರಮುಖ ರಾಗಿದ್ದವರು ಎಂದು ಲೇಖಕ ಟಿ.ಎಲ್. ತ್ರಿಪುರಾಂತಕ ಅಭಿಪ್ರಾಯಪಟ್ಟರು. ಮೈಸೂರು ಜೆ.ಪಿ.ನಗರದ ಅಕ್ಕಮಹಾ ದೇವಿ ಪ್ರತಿಮಾ ಮಂದಿರದಲ್ಲಿ ಜೆ.ಪಿ.ನಗರ ಶರಣ ವೇದಿಕೆ ವತಿಯಿಂದ ಆಯೋ ಜಿಸಿದ್ದ ವೀರವಿರಾಗಿಣಿ ಅಕ್ಕ ಮಹಾದೇವಿ ಕುರಿತ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. 21ನೇ ಶತಮಾನದಲ್ಲೂ ಸ್ತ್ರೀಯರ ಶೋಷಣೆ ಬೇರೆ ಸ್ವರೂಪದಲ್ಲಿದೆ. 12ನೇ ಶತಮಾನದಲ್ಲಿ ಮಹಿಳೆಯರಿಗೆ ಯಾವುದೇ ಸ್ಥಾನಮಾನವಿಲ್ಲದ ಕಾಲಘಟ್ಟದಲ್ಲಿ ಹಲವು ಸಂಕಷ್ಟವನ್ನು ಎದುರಿಸಿ, ಅಕ್ಕ ಮಹಾದೇವಿ ವಚನ ಚಳವಳಿಯಲ್ಲಿ ಪ್ರಮುಖರಾಗಿದ್ದು,…
ಕಡಿದ ಎರಡು ಮರಗಳಿಗೂ `ಅಂತ್ಯಸಂಸ್ಕಾರ’ದ ವಿಧಿ ವಿಧಾನ
December 27, 2021ಮೈಸೂರು, ಡಿ.26(ಆರ್‍ಕೆಬಿ)- ರಾತ್ರೋರಾತ್ರಿ ಮರಗಳನ್ನು ಕಡಿದು ಹಾಕಿರುವುದಕ್ಕೆ ಅಸಮಾಧಾನ ವ್ಯಕ್ತ ಪಡಿಸಿರುವ ಪರಿಸರ ಹೋರಾಟಗಾರರು, ಪ್ರಕೃತಿ ಪ್ರೇಮಿಗಳು, ಯಾದವಗಿರಿ ನಿವಾಸಿ ಗಳು ಭಾನುವಾರ ಮೈಸೂರು ಗ್ರ್ರಾಹಕರ ಪರಿಷತ್ (ಎಂಜಿಪಿ) ನೇತೃತ್ವದಲ್ಲಿ ತರಾಸು ವೃತ್ತ (ಆಕಾಶವಾಣಿ ವೃತ್ತ)ದ ಬಳಿಯಿ ರುವ ವಿವೇಕಾನಂದ ರಸ್ತೆಯಲ್ಲಿ ಆಸ್ಪತ್ರೆ ಎದುರಿನ ಎರಡು ಮರಗಳಿಗೆ ವಿಧಿ ವಿಧಾನ ಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸುವ ಮೂಲಕ ಸಾರ್ವಜನಿಕರ ಗಮನ ಸೆಳೆದರು. ಆಸ್ಪತ್ರೆ ಎದುರು ರೋಗಿಗಳಿಗೆ ಹಾಗೂ ನಾಗರಿಕರಿಗೆ ನೆರಳಿನ ಆಶ್ರಯ ನೀಡಿ, ಕಳೆದ 40 ವರ್ಷಗಳಿಂದ ಸುತ್ತಮುತ್ತಲಿನ…
ಜ.೩ರಿಂದ ೧೫-೧೮ ವರ್ಷದ ಮಕ್ಕಳಿಗೆ ಲಸಿಕೆ
December 26, 2021ಪ್ರಧಾನಮಂತ್ರಿ ನರೇಂದ್ರ ಮೋದಿ ಮಹತ್ವದ ಘೋಷಣೆ ಫ್ರಂಟ್‌ಲೈನ್ ವಾರಿಯರ್ಸ್, ೬೦ ವರ್ಷ ಮೇಲ್ಪಟ್ಟವರಿಗೂ ಬೂಸ್ಟರ್ ಡೋಸ್ ಶಾಲಾ ಕಾಲೇಜುಗಳಲ್ಲೇ ಮಕ್ಕಳಿಗೆ ವ್ಯಾಕ್ಸಿನೇಷನ್ ಒಮಿಕ್ರಾನ್ ಬಗ್ಗೆ ಭಯ ಬೇಡ; ಆದರೆ ಮುಂಜಾಗ್ರತೆವಹಿಸಿ ಮೂಗಿನ ಮೂಲಕವೂ ಲಸಿಕೆ, ಡಿಎನ್‌ಎ ಲಸಿಕಾಕರಣವೂ ಶೀಘ್ರದಲ್ಲೇ ಆರಂಭ ನವದೆಹಲಿ: ಜನವರಿ ೩ರಿಂದ ೧೫-೧೮ ವರ್ಷದ ಮಕ್ಕಳಿಗೆ ಲಸಿಕೆ ನೀಡಲಾಗುವುದು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಘೋಷಣೆ ಮಾಡಿದ್ದಾರೆ. ದೇಶದಲ್ಲಿ ಕೊರೊನಾ ರೂಪಾಂತರಿ ಒಮಿಕ್ರಾನ್ ಸೋಂಕು ಅಟ್ಟಹಾಸ ಮೆರೆಯುತ್ತಿರುವ ಹಿನ್ನೆಲೆಯಲ್ಲಿ ಇಂದು ದೇಶವನ್ನುದ್ದೇಶಿಸಿ ಪ್ರಧಾನಿ…










