ಮೈಸೂರು

ಅರಮನೆಯಲ್ಲಿ ಜಗ ಜಟ್ಟಿಗಳ ಕಾಳಗ
ಮೈಸೂರು, ಮೈಸೂರು ದಸರಾ

ಅರಮನೆಯಲ್ಲಿ ಜಗ ಜಟ್ಟಿಗಳ ಕಾಳಗ

October 23, 2018

ಮೈಸೂರು: ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಅರಮನೆಯ ಆವರಣದಲ್ಲಿರುವ ಸವಾರಿ ತೊಟ್ಟಿಯಲ್ಲಿ ಸೋಮವಾರ ನಡೆದ ಮೈನವಿರೇಳಿಸುವ ಜೆಟ್ಟಿಗಳ ಕಾಳಗ ಆರಂಭವಾದ ಒಂದೂವರೆ ನಿಮಿಷದಲ್ಲಿಯೇ ಚಾಮರಾಜನಗರದ ಜೆಟ್ಟಿಯ ತಲೆ, ಕೆನ್ನೆಯಿಂದ ರಕ್ತ ಚಿಮ್ಮುವ ಮೂಲಕ ಅಂತ್ಯಗೊಂಡಿತು. ಸಂಪ್ರದಾಯದಂತೆ ಜಂಬೂಸವಾರಿಯ ದಿನ ಜೆಟ್ಟಿ ಕಾಳಗ ನಡೆಯಬೇಕಾಗಿತ್ತು. ಆದರೆ ಮಹಾರಾಣಿ ಪ್ರಮೋದಾ ದೇವಿ ಒಡೆಯರ್ ಅವರ ತಾಯಿ ಪುಟ್ಟ ರತ್ನಮ್ಮಣ್ಣಿ ಹಾಗೂ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಸಹೋದರಿ ವಿಶಾಲಾಕ್ಷಿದೇವಿ ನಿಧನದಿಂದಾಗಿ ಮುಂದೂಡಲ್ಪಟ್ಟಿದ್ದ ಜೆಟ್ಟಿ ಕಾಳಗವನ್ನು ಅರಮನೆಯ ಪುರೋಹಿ ತರ ಸಲಹೆ ಮೇರೆಗೆ…

ನ.1ರಿಂದ ಕನ್ನಡ ಆಡಳಿತ ಭಾಷೆ
ಮೈಸೂರು

ನ.1ರಿಂದ ಕನ್ನಡ ಆಡಳಿತ ಭಾಷೆ

October 23, 2018

ಬೆಂಗಳೂರು: ಕನ್ನಡದ ನುಡಿ ಹಬ್ಬ ರಾಜ್ಯೋತ್ಸವ ಮತ್ತೆ ಬರುತ್ತಿದೆ. ಈ ಸಂದರ್ಭದಲ್ಲೇ ರಾಜ್ಯದಲ್ಲಿನ ಜಾ.ದಳ -ಕಾಂಗ್ರೆಸ್ ಮೈತ್ರಿ ಸರ್ಕಾರವೂ ‘ಆಡಳಿತದಲ್ಲಿ ಕನ್ನಡ’ ಕಡ್ಡಾಯ ಜಾರಿಗೆ ಟೊಂಕ ಕಟ್ಟಿದೆ. ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಈ ನಿಟ್ಟಿನಲ್ಲಿ ಬದ್ಧತೆ ಪ್ರದರ್ಶಿಸಲು ಸಜ್ಜಾಗಿದ್ದಾರೆ. ನ.1ರಿಂದ `ಸರ್ಕಾರಿ ಕಚೇರಿಗಳಲ್ಲಿ, ಆಡಳಿತ ವ್ಯವಸ್ಥೆಯಲ್ಲಿ ಕನ್ನಡ ಬಳಕೆ ಕಡ್ಡಾಯ’ ಕಟ್ಟು ನಿಟ್ಟಾಗಿ ಜಾರಿಗೆ ಕಂಕಣ ತೊಟ್ಟಿದ್ದಾರೆ. ಇನ್ನು ಮುಂದೆ (ನ.1ರಿಂದ) ತಮ್ಮ ಮೇಜಿಗೆ ಬರುವ ಆಡಳಿತಾತ್ಮಕ ಕಡತಗಳೆಲ್ಲವೂ ಕಡ್ಡಾಯವಾಗಿ ಕನ್ನಡದಲ್ಲಿಯೇ ಇರಬೇಕು ಎಂಬ ಸೂಚನೆಯನ್ನೂ ಅಧಿಕಾರಿಗಳಿಗೆ…

ಪ್ರಧಾನಿ ಅಭ್ಯರ್ಥಿಯಾಗಿ ರಾಹುಲ್ ಗಾಂಧಿ ಬಿಂಬಿಸಲ್ಲ: ಚಿದಂಬರಂ
ಮೈಸೂರು

ಪ್ರಧಾನಿ ಅಭ್ಯರ್ಥಿಯಾಗಿ ರಾಹುಲ್ ಗಾಂಧಿ ಬಿಂಬಿಸಲ್ಲ: ಚಿದಂಬರಂ

October 23, 2018

ಚೆನ್ನೈ:  2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ಪಕ್ಷದ ಪ್ರಧಾನ ಮಂತ್ರಿ ಅಭ್ಯರ್ಥಿಯಾಗಿ ಬಿಂಬಿಸುವುದಿಲ್ಲ ಎಂದು ಮಾಜಿ ಹಣಕಾಸು ಸಚಿವ ಹಾಗೂ ಕಾಂಗ್ರೆಸ್‍ನ ಹಿರಿಯ ನಾಯಕರೂ ಆಗಿರುವ ಪಿ.ಚಿದಂಬರಂ ಹೇಳಿದ್ದಾರೆ. ರಾಹುಲ್ ಗಾಂಧಿ ಸೇರಿದಂತೆ ಬೇರೆ ಯಾರನ್ನೂ ಕೂಡ ಪ್ರಧಾನ ಮಂತ್ರಿ ಅಭ್ಯರ್ಥಿ ಎಂದು ಪಕ್ಷದಿಂದ ಬಿಂಬಿಸುವುದಿಲ್ಲ ಎಂದು ಚಿದಂಬರಂ ಹೇಳಿದ್ದಾರೆ. ಮುಂದಿನ ವರ್ಷ ಏಪ್ರಿಲ್‍ನಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಸ್ಥಳೀಯ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಲು ಕಾಂಗ್ರೆಸ್ ಪ್ರಯತ್ನಿಸು ತ್ತಿದೆ. ಇದಕ್ಕೆ…

ಇಂದು ಚಾಮುಂಡೇಶ್ವರಿ ಮಹಾ ರಥೋತ್ಸವ
ಮೈಸೂರು

ಇಂದು ಚಾಮುಂಡೇಶ್ವರಿ ಮಹಾ ರಥೋತ್ಸವ

October 23, 2018

ಮೈಸೂರು: ನಾಳೆ(ಅ.23) ಮೈಸೂರಿನ ಚಾಮುಂಡಿಬೆಟ್ಟದಲ್ಲಿ ನಾಡಿನ ಅಧಿದೇವತೆ ತಾಯಿ ಚಾಮುಂಡೇ ಶ್ವರಿ ದೇವಿಯ ಮಹಾರಥೋತ್ಸವ (ರಥಾರೋಹಣ) ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಅಶ್ವಯುಜ ಶುಕ್ಲ ಚತುರ್ದಶಿ ಉತ್ತರ ಭಾದ್ರ ನಕ್ಷತ್ರ ಮಂಗಳವಾರ ಬೆಳಿಗ್ಗೆ 8.10ರಿಂದ 8.40 ಗಂಟೆ ಯೊಳಗೆ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ಚಾಮುಂಡೇಶ್ವರಿಯ ರಥಾರೋಹಣ ನಡೆಯಲಿದೆ. ಸಂಜೆ ಸಿಂಹವಾಹನೋತ್ಸವ, ಹಂಸವಾಹನೋತ್ಸವ ಹಾಗೂ ಮಂಟಪೋತ್ಸವ ನಡೆಯಲಿದೆ ಎಂದು ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಪ್ರಕಟಣೆಯಲ್ಲಿ ತಿಳಿಸ ಲಾಗಿದೆ. ಅಕ್ಟೋಬರ್ 24ರಂದು ಅಶ್ವಯುಜ ಪೂರ್ಣಿಮಾ ರೇವತಿ ನಕ್ಷತ್ರ ಅಶ್ವಾರೋಹಣ, ಅಕ್ಟೋಬರ್…

ಅಯ್ಯಪ್ಪಸ್ವಾಮಿ ದರ್ಶನಕ್ಕೆ ತೆರೆ: ಮಹಿಳೆಯರಿಗೆ ಕೊನೆಗೂ ದರ್ಶನ ಭಾಗ್ಯವಿಲ್ಲ
ಮೈಸೂರು

ಅಯ್ಯಪ್ಪಸ್ವಾಮಿ ದರ್ಶನಕ್ಕೆ ತೆರೆ: ಮಹಿಳೆಯರಿಗೆ ಕೊನೆಗೂ ದರ್ಶನ ಭಾಗ್ಯವಿಲ್ಲ

October 23, 2018

ಪಂಪಾ: ಕೇರಳದ ಪ್ರಸಿದ್ಧ ಪುಣ್ಯಕ್ಷೇತ್ರ ಶಬರಿ ಮಲೆ ಅಯ್ಯಪ್ಪ ದೇಗುಲದೊಳಕ್ಕೆ ಯಾವುದೇ ವಯೋಮಾನದ ಮಹಿಳೆಯರು ಪ್ರವೇಶಿಸಬಹುದು ಎಂದು ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಿದ ಬಳಿಕ ದೇಗುಲದ ಬಾಗಿಲು ತೆರೆದು 5 ದಿನಗಳಾದರೂ, ಈವರೆಗೂ 10-50 ವರ್ಷದೊಳಗಿನ ಒಬ್ಬ ಮಹಿಳೆಗೂ ದರ್ಶನ ಸಿಕ್ಕಿಲ್ಲ. ಭಾನುವಾರ ದೇವರ ದರ್ಶನಕ್ಕೆ 6 ಮಹಿಳೆಯರು ಯತ್ನಿಸಿದರೂ ತಡೆ ಒಡ್ಡಲಾಯಿತು. ಈ ನಡುವೆ ಮಾಸಿಕ ಪೂಜೆ ನಿಮಿತ್ತ ತೆರೆಯಲಾಗಿದ್ದ ದೇಗುಲ ಇಂದು ಸಂಜೆ ಬಂದ್ ಆಯಿತು. ಕಳೆದ ಐದು ದಿನಗಳಿಂದ ನಡೆದ ಹೈಡ್ರಾಮಾ, ಪ್ರತಿಭಟನೆಗೂ…

ಮೈಸೂರು ರೈಲು ನಿಲ್ದಾಣದ ಸಬ್‍ವೇ ಗೋಡೆಗಳಲ್ಲಿ ರಾಜ್ಯದ ಕಲೆ, ಸ್ಮಾರಕಗಳ ಚಿತ್ರಣ ಅನಾವರಣ
ಮೈಸೂರು

ಮೈಸೂರು ರೈಲು ನಿಲ್ದಾಣದ ಸಬ್‍ವೇ ಗೋಡೆಗಳಲ್ಲಿ ರಾಜ್ಯದ ಕಲೆ, ಸ್ಮಾರಕಗಳ ಚಿತ್ರಣ ಅನಾವರಣ

October 23, 2018

ಮೈಸೂರು: ಮೈಸೂರಿನ ರೈಲು ನಿಲ್ದಾಣದ ಸಬ್‍ವೇ ಗೋಡೆ ಗಳ ಮೇಲೆ ರಾಜ್ಯದ ಕಲೆ, ಸಂಸ್ಕೃತಿ ಹಾಗೂ ಸ್ಮಾರಕಗಳನ್ನು ಬಿಂಬಿಸುವ ಸುಂದರ ಚಿತ್ರಗಳನ್ನು ರಚಿಸಲಾಗಿದೆ. ಪ್ಲಾಟ್‍ಫಾರಂ ನಂಬರ್ 1ರಿಂದ 6 ರವರೆಗೆ ಸಂಪರ್ಕ ಕಲ್ಪಿಸಲು ನಿರ್ಮಿಸಿ ರುವ ರೈಲು ನಿಲ್ದಾಣದ ಸಬ್‍ವೇಯ ಎರಡು ಬದಿಯ ಗೋಡೆಗಳ ಮೇಲೆ ಬೇಲೂರು, ಹಳೇಬೀಡು, ಐಹೊಳೆ, ಬಾದಾಮಿ, ಪಟ್ಟದಕಲ್ಲುಗಳಲ್ಲಿನ ಐತಿಹಾಸಿಕ ಸ್ಮಾರಕಗಳ ಚಿತ್ರವನ್ನು ಕಲಾ ವಿದರು ತಮ್ಮ ಕುಂಚದಲ್ಲಿ ಚಿತ್ರಿಸಿದ್ದಾರೆ. ಹೊಯ್ಸಳರು ಮತ್ತು ಚಾಲುಕ್ಯರ ಆಳ್ವಿಕೆ ನೆನಪಿಸುವ ಚಿತ್ರಗಳು ಗೋಡೆ ಮೇಲೆ ಮೂಡಿರುವುದರಿಂದ…

ಪಾಸ್‍ಪೋರ್ಟ್ ಪಡೆಯುವುದು ಇನ್ನು ಸುಲಭ
ಮೈಸೂರು

ಪಾಸ್‍ಪೋರ್ಟ್ ಪಡೆಯುವುದು ಇನ್ನು ಸುಲಭ

October 23, 2018

ಬೆಂಗಳೂರು: ಪಾಸ್ ಪೋರ್ಟ್ ಪಡೆಯಲು ಇನ್ನು ಮುಂದೆ ಸುದೀರ್ಘ ದಿನಗಳ ಕಾಲ ಕಾಯಬೇಕಿಲ್ಲ. ಪಾಸ್ ಪೋರ್ಟ್ ಸೇವೆಯನ್ನು ಸುಲಭಗೊಳಿಸುವ ಸಲುವಾಗಿ ಸ್ಥಳೀಯ ಪಾಸ್ ಪೋರ್ಟ್ ಕಚೇರಿ ಆ್ಯಪ್ ಅಭಿವೃದ್ಧಿ ಪಡಿಸಿದ್ದು, ಇದರಿಂದ ಸೇವೆಗಳು ಅತ್ಯಂತ ಸುಲಭಗೊಂಡಿವೆ. ಪಾಸ್ ಪೋರ್ಟ್ ಪಡೆಯುವ ಪ್ರಕ್ರಿಯೆ ವೇಳೆ ಆಯಾ ಪ್ರದೇಶದ ಪೊಲೀಸ್ ಠಾಣೆಯಿಂದ ಪೊಲೀಸ್ ಪೇದೆಯೊಬ್ಬರು ಮನೆಗೆ ಬಂದು ಪರಿಶೀಲನೆ ನಡೆಸುವುದು ಸಾಮಾನ್ಯ. ಇದಕ್ಕೆ ಕನಿಷ್ಠ ಎಂದರೂ 20-35 ದಿನಗಳ ಕಾಲ ಬೇಕಾಗುತ್ತಿತ್ತು. ಆದರೆ, ಆ್ಯಪ್ ಸೇವೆಯಿಂದಾಗಿ ಪೊಲೀಸ್ ಪರಿಶೀಲನೆ 5-9…

ಬೇಟೆಗೆ ತೆರಳಿದ್ದ ವ್ಯಕ್ತಿ ಗುಂಡಿಗೆ ಬಲಿ
ಮೈಸೂರು

ಬೇಟೆಗೆ ತೆರಳಿದ್ದ ವ್ಯಕ್ತಿ ಗುಂಡಿಗೆ ಬಲಿ

October 23, 2018

ಮಡಿಕೇರಿ:  ಬೇಟೆಗಾಗಿ ತೆರಳಿದ್ದ ಇಬ್ಬರಲ್ಲಿ ಗುಂಡೇಟು ಬಿದ್ದು ಓರ್ವ ಸಾವಿಗೀಡಾಗಿದ್ದು, ಮತ್ತೊಬ್ಬ ಪರಾರಿಯಾಗಿರುವ ಬಗ್ಗೆ ಮಡಿಕೇರಿ ಬಳಿಯ ಮಕ್ಕಂದೂರು ಸಮೀಪದ ಎಮ್ಮತ್ತಾಳು ಗ್ರಾಮದಿಂದ ವರದಿಯಾಗಿದೆ. ಎಮ್ಮತ್ತಾಳು ಗ್ರಾಮದ ಅಯ್ಯಕುಟ್ಟೀರ ದೇವಯ್ಯ ಎಂಬುವರ ಪುತ್ರ ರಂಜಿತ್(32) ಗುಂಡೇಟಿಗೆ ಬಲಿಯಾದವರಾಗಿದ್ದು, ಸಹ ಬೇಟೆಗಾರ ದಕ್ಷಿಣ ಕೊಡಗಿನ ಶ್ರೀಮಂಗಲ ವೆಸ್ಟ್ ನೆಮ್ಮಾಲೆ ನಿವಾಸಿ ಕಾಳಮಾಡ ದಿನೇಶ್ ತಲೆಮರೆಸಿಕೊಂಡಿದ್ದಾರೆ. ವಿವರ: ರಂಜಿತ್ ಮತ್ತು ದಿನೇಶ್ ಸಂಬಂಧಿಕರಾಗಿದ್ದು, ದಸರಾ ಹಬ್ಬದ ಹಿನ್ನೆಲೆಯಲ್ಲಿ ವೆಸ್ಟ್ ನೆಮ್ಮಾಲೆಯ ದಿನೇಶ್, ಎಮ್ಮತ್ತಾಳು ವಿನ ರಂಜಿತ್ ಮನೆಗೆ ಬಂದಿದ್ದರು ಎನ್ನಲಾಗಿದೆ….

6 ದಿನದಲ್ಲಿ ಕೆಆರ್‌ಎಸ್‌ಗೆ 2 ಲಕ್ಷ ಪ್ರವಾಸಿಗರ ಭೇಟಿ
ಮೈಸೂರು

6 ದಿನದಲ್ಲಿ ಕೆಆರ್‌ಎಸ್‌ಗೆ 2 ಲಕ್ಷ ಪ್ರವಾಸಿಗರ ಭೇಟಿ

October 23, 2018

ಮೈಸೂರು:  3ಡಿ ಮ್ಯಾಪಿಂಗ್ ಮೂಲಕ ವಿದ್ಯುದ್ದೀಪಾಲಂಕಾರ ಮಾಡಿರುವುದರಿಂದ ಆಕರ್ಷಕವಾಗಿ ಕಂಗೊಳಿಸುತ್ತಿರುವ ಕೃಷ್ಣರಾಜಸಾಗರ (ಕೆಆರ್‌ಎಸ್‌) ಬೃಂದಾವನಕ್ಕೆ ಪ್ರವಾಸಿಗರ ದಂಡೇ ಹರಿದುಬರುತ್ತಿದೆ. ಕಳೆದ 6 ದಿನಗಳಲ್ಲಿ 2 ಲಕ್ಷ ಮಂದಿ ಕೆಆರ್‌ಎಸ್‌ಗೆ ಭೇಟಿ ನೀಡಿದ್ದಾರೆ ಎಂದು ಕಾವೇರಿ ನೀರಾವರಿ ನಿಗಮ (ಅಓಓ)ದ ಅಧಿಕಾರಿಗಳು ತಿಳಿಸಿದ್ದಾರೆ. ಅಕ್ಟೋಬರ್ 10 ರಿಂದ 19ರವರೆಗೆ ಮೈಸೂರಲ್ಲಿ ದಸರಾ ಮಹೋತ್ಸವ ಕಾರ್ಯಕ್ರಮಗಳು ಇದ್ಧ ಕಾರಣ ಕೆಆರ್‌ಎಸ್‌ ಜಲಾಶಯಕ್ಕೆ ಭೇಟಿ ನೀಡಿದ ಪ್ರವಾಸಿಗರ ಸಂಖ್ಯೆಯಲ್ಲೂ ಹೆಚ್ಚಳ ಕಂಡು ಬಂದಿದೆ ಎಂದು ತಿಳಿಸಿದ್ದಾರೆ. ವಿದ್ಯುದೀಪಾಲಂಕಾರ, 3 ಡಿ ಮ್ಯಾಪಿಂಗ್…

ಮಹಿಳೆ, ಮಕ್ಕಳ ಜ್ವಲಂತ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಲಿದೆ ಈ ಪುಟ್ಟ ಮಳಿಗೆ
ಮೈಸೂರು

ಮಹಿಳೆ, ಮಕ್ಕಳ ಜ್ವಲಂತ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಲಿದೆ ಈ ಪುಟ್ಟ ಮಳಿಗೆ

October 23, 2018

ಮೈಸೂರು:  ‘ಅವಕಾಶ ಕೊಟ್ಟರೆ ಆಕಾಶ ಮುಟ್ಟೇವು, ನಮ್ಮ ನಿರ್ಧಾರಗಳಿಗೆ ಮನ್ನಣೆ ನೀಡಿ’, ‘ನನ್ನದು ಬೇಡುವ ಕೈಯಲ್ಲ… ಬರೆಯುವ ಕೈ’, ‘ನಾನು ತೊಟ್ಟಿಗಲ್ಲ-ತೊಟ್ಟಿಲಿಗೆ’, ಹೀಗೆ ಪ್ರತಿ ಪಾದಿಸುವ ಮಹಿಳೆ ಮತ್ತು ಮಕ್ಕಳ ಹಕ್ಕುಗಳ ಹಾಗೂ ಯೋಜನೆಗಳ ಬಗ್ಗೆ ಸವಿಸ್ತಾರವಾಗಿ ಮಾಹಿತಿಯನ್ನು ನೀಡುವ ಮಳಿಗೆ ದಸರಾ ವಸ್ತು ಪ್ರದರ್ಶನ ಆವರಣದಲ್ಲಿ ತಲೆಯೆತ್ತುತ್ತಿದೆ. ಮೈಸೂರು ದಸರಾ ಮಹೋತ್ಸವದ ಆಕರ್ಷಣೆಯಾದ ದಸರಾ ವಸ್ತು ಪ್ರದರ್ಶನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕರ್ನಾಟಕ ರಾಜ್ಯ ಸಮಗ್ರ ಮಕ್ಕಳ ರಕ್ಷಣಾ ಸೊಸೈಟಿ, ಜಿಲ್ಲಾ ಮಕ್ಕಳ…

1 1,316 1,317 1,318 1,319 1,320 1,611
Translate »