ಮೈಸೂರು

ನಗರಾಭಿವೃದ್ಧಿ ಸಚಿವರಿಂದ ನ.12ರಂದು ಅದಾಲತ್
ಮೈಸೂರು

ನಗರಾಭಿವೃದ್ಧಿ ಸಚಿವರಿಂದ ನ.12ರಂದು ಅದಾಲತ್

October 16, 2018

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ) ಕಚೇರಿಯಲ್ಲಿ ಸಾರ್ವಜನಿಕ ರಿಂದ ಅಹವಾಲು ಅರ್ಜಿ ಸ್ವೀಕಾರ ಪ್ರಕ್ರಿಯೆ ಇಂದಿನಿಂದ ಆರಂಭವಾಯಿತು. ನವೆಂಬರ್ 12ರಂದು ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಅವರು ಮುಡಾ ಕಚೇರಿ ಸಭಾಂಗಣದಲ್ಲಿ ಕಚೇರಿ ಸೇವೆಗಳ ಸಂಬಂಧ ಸಾರ್ವಜನಿಕರ ಅಹ ವಾಲು ಹಾಗೂ ಕುಂದುಕೊರತೆಗಳನ್ನು ಆಲಿಸಲು ಮುಡಾ ಅದಾಲತ್ ನಡೆಸುವ ಕಾರ್ಯಕ್ರಮ ನಿಗದಿಯಾಗಿದೆ. ಈ ಹಿನ್ನೆಲೆಯಲ್ಲಿ ಪ್ರಾಧಿಕಾರವು ಕಚೇರಿಯ ಸ್ಪಂದನ ಕೌಂಟರ್‍ನಲ್ಲಿ ನಿಗದಿತ ಅರ್ಜಿ ನಮೂನೆಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುವ ಕಾರ್ಯವನ್ನು ಆರಂಭಿಸಿದೆ. ರಜಾ ದಿನಗಳನ್ನು ಹೊರತುಪಡಿಸಿ ಉಳಿದ ದಿನಗಳಲ್ಲಿ…

ಕೆ.ಆರ್.ನಗರ ತಾಲೂಕು ಬಿಜೆಪಿ ಅಧ್ಯಕ್ಷರಾಗಿ ಹೊಸಹಳ್ಳಿ ವೆಂಕಟೇಶ್ ಪದಗ್ರಹಣ
ಮೈಸೂರು

ಕೆ.ಆರ್.ನಗರ ತಾಲೂಕು ಬಿಜೆಪಿ ಅಧ್ಯಕ್ಷರಾಗಿ ಹೊಸಹಳ್ಳಿ ವೆಂಕಟೇಶ್ ಪದಗ್ರಹಣ

October 16, 2018

ಕೆ.ಆರ್.ನಗರ: ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ನಾಯಕರು ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚನೆ ಮಾಡಿಕೊಂಡು ಅಧಿಕಾರಕ್ಕಾಗಿ ತಿಕ್ಕಾಟದಲ್ಲಿ ತೊಡಗಿ ಅಭಿವೃದ್ಧಿ ಕೆಲಸ ಮಾಡುತ್ತಿಲ್ಲ ಎಂದು ಮೈಸೂರು ಜಿಲ್ಲಾ ಗ್ರಾಮಾಂತರ ಬಿಜೆಪಿ ಅಧ್ಯಕ್ಷರೂ ಆದ ಮಾಜಿ ಸಚಿವ ಶಿವಣ್ಣ ಹೇಳಿದರು. ಪಟ್ಟಣದ ಅಕ್ಷತ ಹಾಲ್‍ನಲ್ಲಿ ಆಯೋಜಿಸಿದ್ದ ಬಿಜೆಪಿ ತಾಲೂಕು ಅಧ್ಯಕ್ಷರಾಗಿ ಆಯ್ಕೆಯಾದ ಹೊಸಹಳ್ಳಿ ವೆಂಕಟೇಶ್ ಪದಗ್ರಹಣ ಮತ್ತು ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ನ.3ರಂದು ನಡೆಯುವ ಉಪ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡಿರುವ ವರಿಷ್ಠರ ವಿರುದ್ಧ ಕಾರ್ಯಕರ್ತರು ಈಗಾಗಲೇ ಟಿಕೆಟ್…

ದೊಡ್ಡೇಗೌಡನ ಕೊಪ್ಪಲಲ್ಲಿ ನ್ಯಾಯಬೆಲೆ ಅಂಗಡಿ ತೆರೆಯಲು ಆಗ್ರಹಿಸಿ ಗ್ರಾಮಸ್ಥರ ಪ್ರತಿಭಟನೆ
ಮೈಸೂರು

ದೊಡ್ಡೇಗೌಡನ ಕೊಪ್ಪಲಲ್ಲಿ ನ್ಯಾಯಬೆಲೆ ಅಂಗಡಿ ತೆರೆಯಲು ಆಗ್ರಹಿಸಿ ಗ್ರಾಮಸ್ಥರ ಪ್ರತಿಭಟನೆ

October 16, 2018

ಬೆಟ್ಟದಪುರ:  ಪಿರಿಯಾಪಟ್ಟಣ ತಾಲೂಕಿನ ದೊಡ್ಡೇಗೌಡನ ಕೊಪ್ಪಲು, ನಾಗನಹಳ್ಳಿ ಹಾಗೂ ನಾಗನ ಹಳ್ಳಿ ಪಾಳ್ಯ ಗ್ರಾಮದ 244 ಬಿಪಿಎಲ್ ಕುಟುಂಬಗಳಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ವತಿಯಿಂದ ಪೂರೈಕೆಯಾಗುವ ಪಡಿತರ ದೊರೆಯದ ಕಾರಣ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಈ ಗ್ರಾಮಗಳ ಬಿಪಿಎಲ್ ಕುಟುಂಬ ಗಳು ಸಮೀಪದ ಬೆಟ್ಟದತುಂಗ ಗ್ರಾಮದ ನ್ಯಾಯಬೆಲೆ ಅಂಗಡಿಯ ವ್ಯಾಪ್ತಿಗೆ ಒಳಪಟ್ಟಿದ್ದು, 4 ಕಿಲೋಮಿಟರ್ ಸಂಚರಿಸಿ ಪಡಿತರ ಪಡೆಯಬೇಕಾಗಿದೆ. ಆದರೆ ಅಷ್ಟು ದೂರ ಕ್ರಮಿಸಿ ಪಡಿತರ ಪಡೆದು ಹೊತ್ತು ತರಲು ಹರಸಾಹಸ ಪಡಬೇಕಾದ ಕಾರಣ…

ಬಳ್ಳಾರಿಯಲ್ಲಿ ಉಗ್ರಪ್ಪ ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿ
ಮೈಸೂರು

ಬಳ್ಳಾರಿಯಲ್ಲಿ ಉಗ್ರಪ್ಪ ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿ

October 16, 2018

ಬೆಂಗಳೂರು: ಪ್ರತಿಷ್ಟಿತ ಬಳ್ಳಾರಿ ಲೋಕ ಸಭಾ ಕ್ಷೇತ್ರದ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಯಾಗಿ ವಿಧಾನ ಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ ಅವರನ್ನು ಘೋಷಿಸ ಲಾಗಿದ್ದು, ಅವರು ನಾಳೆ(ಅ.16) ಬಳ್ಳಾರಿ ಯಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ. ಬಿಜೆಪಿಯ ಶ್ರೀರಾಮುಲು ಅವರು ವಿಧಾನಸಭೆಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ಈ ಕ್ಷೇತ್ರದ ಲೋಕಸಭಾ ಸದಸ್ಯ ಸ್ಥಾನಕ್ಕೆ ಅವರು ರಾಜೀನಾಮೆ ನೀಡಿದ್ದರು. ಈಗ ಅವರ ಸಹೋದರಿ ಮಾಜಿ ಸಂಸದೆ ಶಾಂತಾ ಅವರು ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಈ ಕ್ಷೇತ್ರವನ್ನು ಕಾಂಗ್ರೆಸ್‍ಗೆ ಜೆಡಿಎಸ್ ಬಿಟ್ಟುಕೊಟ್ಟಿದ್ದು, ಕಾಂಗ್ರೆಸ್ ತನ್ನ ಅಭ್ಯರ್ಥಿಯಾಗಿ…

ಮಹೇಶ್ ರಾಜೀನಾಮೆ ಅಂಗೀಕಾರ
ಮೈಸೂರು

ಮಹೇಶ್ ರಾಜೀನಾಮೆ ಅಂಗೀಕಾರ

October 16, 2018

ಬೆಂಗಳೂರು:  ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸ್ಥಾನಕ್ಕೆ ಬಿಎಸ್‍ಪಿಯ ಎನ್. ಮಹೇಶ್ ನೀಡಿದ್ದ ರಾಜೀನಾಮೆ ಅಂಗೀಕಾರಗೊಂಡಿದೆ. ಇವರ ರಾಜೀ ನಾಮೆಯಿಂದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಸಂಪುಟದ ಗಾತ್ರ 26ಕ್ಕೆ ಇಳಿದಿದೆ. ಇದರಿಂದ ಜೆಡಿಎಸ್‍ಗೆ ಇನ್ನೂ ಇಬ್ಬರನ್ನು ಮಂತ್ರಿಮಂಡಲಕ್ಕೆ ತೆಗೆದುಕೊಳ್ಳುವ ಅವಕಾಶ ಇದೆ. ಎನ್. ಮಹೇಶ್ ಅವರನ್ನು ಸಚಿವರಾಗಿ ಮುಂದು ವರಿಸಲು ಅವರ ಪಕ್ಷದ ಅಧಿನಾಯಕಿ ಮಾಯಾವತಿ ಸುತಾರಾಂ ಒಪ್ಪಿಲ್ಲ. ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ದೇವೇ ಗೌಡ ಅವರು, ಮಾಯಾವತಿ ಅವರ ಮನವೊಲಿಸುವ ಪ್ರಯತ್ನ ವಿಫಲ ವಾದ…

ಎಪಿಎಂಸಿ ನೂತನ ಅಧ್ಯಕ್ಷರಾಗಿ ಲಕ್ಷ್ಮಮ್ಮ, ಉಪಾಧ್ಯಕ್ಷರಾಗಿ ಹೆಚ್.ಪಿ. ಕೆಂಡಗಣ್ಣಪ್ಪ ಅವಿರೋಧ ಆಯ್ಕೆ
ಮೈಸೂರು

ಎಪಿಎಂಸಿ ನೂತನ ಅಧ್ಯಕ್ಷರಾಗಿ ಲಕ್ಷ್ಮಮ್ಮ, ಉಪಾಧ್ಯಕ್ಷರಾಗಿ ಹೆಚ್.ಪಿ. ಕೆಂಡಗಣ್ಣಪ್ಪ ಅವಿರೋಧ ಆಯ್ಕೆ

October 16, 2018

ನಂಜನಗೂಡು: ನಂಜನಗೂಡು ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ನೂತನ ಅಧ್ಯಕ್ಷರಾಗಿ ವರುಣಾ ಕ್ಷೇತ್ರದ ಲಕ್ಷ್ಮಮ್ಮ, ಉಪಾಧ್ಯಕ್ಷರಾಗಿ ನಂಜನಗೂಡು ಕ್ಷೇತ್ರದ ಹೆಚ್.ಪಿ.ಕೆಂಡಗಣ್ಣಪ್ಪ ಅವಿರೋಧ ವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾ ವಣೆ ಅಧಿಕಾರಿ ತಹಸೀದ್ದಾರ್ ದಯಾನಂದ್ ತಿಳಿಸಿದ್ದಾರೆ. 20 ತಿಂಗಳ ಹಿಂದೆ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಹುಲ್ಲಹಳ್ಳಿ ಎಲ್. ಮಾದಪ್ಪ, ಉಪಾಧ್ಯಕ್ಷರಾಗಿ ಹದಿನಾರು ಸಿದ್ದರಾಜು ಅವಿರೋಧವಾಗಿ ಆಯ್ಕೆ ಯಾಗಿದ್ದರು. ಇಂದು ಎಪಿಎಂಸಿಯಲ್ಲಿ ನಡೆದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆ ಯಲ್ಲಿ ಕಾಂಗ್ರೆಸ್ ವರಿಷ್ಠರ ನಿರ್ದೇಶನದಂತೆ ಅಧ್ಯಕ್ಷ, ಉಪಾಧ್ಯಕ್ಷರ…

ಕೋಟೆ ಶ್ರೀ ವರದರಾಜಸ್ವಾಮಿ ದೇವಾಲಯ ನಿರ್ಲಕ್ಷಿಸಿರುವ ಆಡಳಿತ ವ್ಯವಸ್ಥೆ
ಮೈಸೂರು

ಕೋಟೆ ಶ್ರೀ ವರದರಾಜಸ್ವಾಮಿ ದೇವಾಲಯ ನಿರ್ಲಕ್ಷಿಸಿರುವ ಆಡಳಿತ ವ್ಯವಸ್ಥೆ

October 16, 2018

ಹೆಚ್.ಡಿ.ಕೋಟೆ:  ಪುರಾತನ ಪುಣ್ಯ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ಹೆಗ್ಗಡದೇವನಕೋಟೆ ಪಟ್ಟಣ ಶ್ರೀ ವರದ ರಾಜಸ್ವಾಮಿ ದೇವಾಲಯ ನಿರ್ಲಕ್ಷ್ಯಕ್ಕೆ ಒಳಗಾಗಿದ್ದು, ದೇವಾಲಯಗಳನ್ನು ಸಂರಕ್ಷಿಸಿ ಅಭಿವೃದ್ಧಿಪಡಿಸಬೇಕಾದ ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆಗಳು ಈ ದೇವಾಲಯದತ್ತ ಕಿಂಚಿತ್ತು ಗಮನಹರಿಸುತ್ತಿಲ್ಲ. ಶತಮಾನಗಳ ಇತಿಹಾಸವಿರುವ ಈ ದೇವಾಲಯಕ್ಕೆ ರಾಜಗೋಪುರ ನಿರ್ಮಾಣ ಮಾಡಿ ಅಭಿವೃದ್ಧಿ ಪಡಿಸಬೇಕೆಂಬ ಭಕ್ತರ ಕೂಗಿಗೆ ಮನ್ನಣೆ ಇಲ್ಲದಂತಾಗಿದೆ. ದೇವ ಸ್ಥಾನದ ಸಂಪೂರ್ಣ ಜವಾಬ್ದಾರಿಯನ್ನು ಹೊರಬೇಕಾದ ಮುಜರಾಯಿ ಇಲಾಖೆ ಈ ದೇವಾಲಯದಲ್ಲಿ ಹೆಚ್ಚಿನ ಆದಾಯ ವಿಲ್ಲ ಎಂಬ ಕಾರಣಕ್ಕೆ ನಿರ್ಲಕ್ಷಿಸುತ್ತಿದೆ ಎಂಬ ಮಾತು…

ಬಲಿಗೆ ಕಾದಿರುವ ಮ್ಯಾನ್‍ಹೋಲ್
ಮೈಸೂರು

ಬಲಿಗೆ ಕಾದಿರುವ ಮ್ಯಾನ್‍ಹೋಲ್

October 16, 2018

ಮೈಸೂರು:  ಮೈಸೂರಿನ ನಜರ್‌ಬಾದ್‌ನಲ್ಲಿರುವ ಚಾಮುಂಡಿ ವಿಹಾರ ಕ್ರೀಡಾಂಗಣದ ಮುಂಭಾಗದ ರಸ್ತೆಯಲ್ಲಿ ಒಳಚರಂಡಿಯ ಮ್ಯಾನ್‍ಹೋಲ್ ವೊಂದು ಕುಸಿದಿದ್ದು ಅಮಾಯಕರ ಬಲಿಗಾಗಿ ಕಾಯುತ್ತಿದೆ. ಭಾನುವಾರ ಸಂಜೆಯೇ ಮ್ಯಾನ್‍ಹೋಲ್ ಕುಸಿದಿದ್ದರೂ ಇದುವರೆಗೂ ಪಾಲಿಕೆಯ ಸಿಬ್ಬಂದಿಗಳು ಯಾವುದೇ ಕ್ರಮ ಕೈಗೊಳ್ಳದೆ ಇರುವುದು ವಾಹನ ಸವಾರರಿಗೆ ಕಂಟಕವಾಗಿ ಪರಿಣಮಿಸಿದೆ. ನಜರ್‍ಬಾದ್ ವೃತ್ತದಿಂದ ಪೊಲೀಸ್ ವರಿಷ್ಠಾಧಿ ಕಾರಿಗಳ ಕಚೇರಿಯ ಮೂಲಕ ಹಾದು ಹೋಗುವ ಹೈದರಾಲಿ ರಸ್ತೆಯಲ್ಲಿ ಚಾಮುಂಡಿ ವಿಹಾರ ಕ್ರೀಡಾಂ ಗಣದ ಮುಂದೆಯೇ ಮ್ಯಾನ್‍ಹೋಲ್ ಕುಸಿದಿದೆ. ಆ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಮಾತ್ರ ವಲ್ಲದೆ…

ಯಶಸ್ವಿ ದಸರಾ ಸಾಂಸ್ಕೃತಿಕ ಮೆರವಣಿಗೆ
ಮೈಸೂರು, ಮೈಸೂರು ದಸರಾ

ಯಶಸ್ವಿ ದಸರಾ ಸಾಂಸ್ಕೃತಿಕ ಮೆರವಣಿಗೆ

October 15, 2018

ಮೈಸೂರು: ಮೈಸೂರು ಸಾಂಸ್ಕೃತಿಕ ಸಿರಿವಂತಿಕೆಯ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಇದೇ ಮೊದಲ ಬಾರಿಗೆ ಹಮ್ಮಿಕೊಂಡಿದ್ದ ದಸರಾ ಸಾಂಸ್ಕೃತಿಕ ಮೆರವಣಿಗೆ, ಅರ್ಥಾತ್ `ಮಿನಿ ಜಂಬೂ ಸವಾರಿ’ ಭಾನುವಾರ ಅತ್ಯಂತ ಸಂಭ್ರಮದಿಂದ ನೆರವೇರಿತು. ಕಲಾ ತಂಡಗಳಿಗೆ ಉತ್ತೇಜನ ನೀಡುವುದು ಹಾಗೂ ಮಹತ್ವದ ವಿಜಯದಶಮಿ ಮೆರವಣಿಗೆ ಯಶಸ್ಸಿಗೆ ಪೂರಕವಾಗಿ ಆಯೋಜಿಸಿದ್ದ ಈ ಮಿನಿ ಜಂಬೂಸವಾರಿ ಅದ್ಧೂರಿಯಾಗಿಯೇ ನೆರವೇರಿತು. ಆ ಮೂಲಕ ಮೈಸೂರಿಗರು, ಪ್ರವಾಸಿಗರು ವಿಜಯದಶಮಿಯ ವೈಭವದ ಒಂದು ನೋಟವನ್ನು ಮುಂಗಡವಾಗಿಯೇ ಕಣ್ತುಂಬಿಕೊಂಡರು. 750 ಕೆಜಿ ತೂಕದ ಚಿನ್ನದ ಅಂಬಾರಿಯನ್ನು ಅರ್ಜುನ…

ಮಳೆ ಲೆಕ್ಕಿಸದೇ ಬಾಲಿವುಡ್ ಗಾಯಕ ಅರ್ಮಾನ್ ಮಲ್ಲಿಕ್ ಗಾನ ಮಾಧುರ್ಯದಲ್ಲಿ ಮಿಂದೆದ್ದ ಯುವ ಸಮೂಹ
ಮೈಸೂರು, ಮೈಸೂರು ದಸರಾ

ಮಳೆ ಲೆಕ್ಕಿಸದೇ ಬಾಲಿವುಡ್ ಗಾಯಕ ಅರ್ಮಾನ್ ಮಲ್ಲಿಕ್ ಗಾನ ಮಾಧುರ್ಯದಲ್ಲಿ ಮಿಂದೆದ್ದ ಯುವ ಸಮೂಹ

October 15, 2018

ಮೈಸೂರು: ಯುವ ದಸರಾ ವೇದಿಕೆಯಲ್ಲಿ `ಒಂದು ಮಳೆ ಬಿಲ್ಲು, ಒಂದು ಮಳೆ ಮೋಡ, ಹೇಗೋ ಜೊತೆ ಯಾಗಿ…’ ಎಂದು ಖ್ಯಾತ ಗಾಯಕ ಅರ್ಮಾನ್ ಮಲ್ಲಿಕ್ ಹಾಡುತ್ತಿದ್ದರೆ, ನೆರೆದಿದ್ದ ಯುವ ಸಮೂಹ ಮಳೆಯನ್ನೂ ಲೆಕ್ಕಿಸದೆ ಸಂಭ್ರಮಿಸಿದರು. ಮೈಸೂರು ಮಹಾರಾಜ ಕಾಲೇಜು ಮೈದಾನದಲ್ಲಿ ಯುವ ದಸರಾದ 3ನೇ ದಿನ ವಾದ ಭಾನುವಾರ ಸುಮಧುರ ಕಂಠದ ಅರ್ಮಾನ್ ಮಲ್ಲಿಕ್, ಒಂದರ ಹಿಂದೆ ಒಂದ ರಂತೆ ಜನಪ್ರಿಯ ಹಾಡುಗಳನ್ನು ಹರಿಬಿಟ್ಟು, ನೆರೆದಿದ್ದವರ ಮೆಚ್ಚುಗೆ ಗಳಿಸಿದರು. `ಬಾಗಿ’ ಚಿತ್ರದ `ಸಬ್‍ತೆರಾ…’, `ಎಂ.ಎಸ್.ಧೋನಿ ದಿ ಅನ್‍ಟೋಲ್ಡ್…

1 1,326 1,327 1,328 1,329 1,330 1,611
Translate »