ಹುಣಸೂರು: ತಾಲೂಕಿನ ಅರಸು ಕಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಂಗಳೂರು ಮಾಳ ಗ್ರಾಮದ ಡೋಂಗ್ರಿ ಗೆರಾಸಿಯಾ ಜಾತಿಯ ನಿರ್ಗತಿಕ 28 ಅಲೆಮಾರಿ ಕುಟುಂಬಗಳಿಗೆ ಮನೆಗಳನ್ನು ಕಟ್ಟಿಕೊಡಲು ಕ್ರಮ ಕೈಗೊಳ್ಳ ಲಾಗುವುದು ಎಂದು ಹುಣಸೂರು ತಾಲೂಕು ಪಂಚಾಯಿತಿ ಕಾರ್ಯ ನಿರ್ವ ಹಣಾಧಿಕಾರಿ ಕೃಷ್ಣಕುಮಾರ್ ತಿಳಿಸಿದರು. ಇತ್ತೀಚೆಗೆ ಮಂಗಳೂರು ಮಾಳ ಗ್ರಾಮಕ್ಕೆ ಭೇಟಿ ನೀಡಿ ನಿರ್ಗತಿಕ ಅಲೆ ಮಾರಿ ಕುಟುಂಬಗಳ ಸ್ಥಿತಿಗತಿಗಳ ಬಗ್ಗೆ ಹುಣಸೂರು ತಾಲೂಕು ದಸಂಸ ಆಯೋ ಜಿಸಿದ್ದ ಸಭೆಯಲ್ಲಿ ಭಾಗವಹಿಸಿ ಮಾತ ನಾಡಿದ ಅವರು, ಹುಟ್ಟು ಸಾವುಗಳಿಗೆ…
ವನ್ಯಜೀವಿಗಳು-ಮನುಷ್ಯರ ನಡುವೆ ಸಂಘರ್ಷ: ನಾಗರಹೊಳೆ ಉದ್ಯಾನ ವ್ಯಾಪ್ತಿ ಕಾಡಂಚಲ್ಲಿ ಜಾಗೃತಿ ಜಾಥಾ
October 9, 2018ಹೆಚ್.ಡಿ.ಕೋಟೆ: ಕಾಡು ಪ್ರಾಣಿ ಗಳು ಮತ್ತು ಮನುಷ್ಯನ ನಡುವಿನ ಸಂಘರ್ಷ ವನ್ನು ತಪ್ಪಿಸುವ ನಿಟ್ಟನಲ್ಲಿ ಇಂಡಿಯನ್ ವೈಲ್ಡ್‍ಲೈಫ್ ಎಕ್ಸಪ್ಲೋರರ್ಸ್ ಸೇವಾ ಸಂಸ್ಥೆ ವತಿಯಿಂದ ತಾಲೂಕಿನ ನಾಗರಹೊಳೆ ಉದ್ಯಾನವನ ವ್ಯಾಪ್ತಿಯ ಕಾಡಂಚಿನ ಗ್ರಾಮ ಗಳಲ್ಲಿ ನಡಿಗೆ ಜಾಗೃತಿ ಜಾಥಾ ನಡೆಸಿ ಗ್ರಾಮ ಗಳ ಜನರಲ್ಲಿ ಜಾಗೃತಿ ಮೂಡಿಸಲಾಯಿತು. ಅಂತರಸಂತೆ ವನ್ಯಜೀವಿ ವಲಯದ ಆರ್.ಎಫ್.ಓ ವಿನಯ್ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ, ಮಾತನಾಡಿದ ಅವರು, ಕಳೆದ ಮಾ.3ರಂದು ಕಾಡಿಗೆ ಬೆಂಕಿ ಬಿದ್ದಿದ್ದ ಸ್ಥಳ ಪರಿಶೀಲನೆಗೆ ತೆರಳಿದ್ದ ವೇಳೆ ಕಾಡಾನೆ ದಾಳಿಗೆ…
ಅಲ್ಪನಾಯಕನಹಳ್ಳಿಯಲ್ಲಿ ಶಾಸಕ ಕೆ.ಮಹದೇವ್‍ಗೆ ಸನ್ಮಾನ
October 9, 2018ಬೆಟ್ಟದಪುರ: ಅಲ್ಪನಾಯಕನ ಹಳ್ಳಿ ಗ್ರಾಮದಲ್ಲಿ 2008ರ ವಿಧಾನಸಭೆ ಚುನಾವಣೆಯಲ್ಲಿ ನನಗೆ ಕೇವಲ 50, 2013ರಲ್ಲಿ ಅದಕ್ಕಿಂತ ಹೆಚ್ಚು ಮತಗಳು ಹಾಗೂ 2018ರ ಚುನಾವಣೆಯಲ್ಲಿ ಅತೀ ಹೆಚ್ಚು ಮತಗಳನ್ನು ನೀಡಿ ಗೆಲುವಿಗೆ ಕಾರಣ ಭೂತರಾಗಿದ್ದೀರಿ ಎಂದು ಶಾಸಕ ಕೆ. ಮಹದೇವ್ ಹೇಳಿದರು. ಪಿರಿಯಾಪಟ್ಟಣ ತಾಲೂಕು ಅಲ್ಪ ನಾಯಕನಹಳ್ಳಿ ಗ್ರಾಮಸ್ಥರು ತಮ್ಮ ಗ್ರಾಮ ದಲ್ಲಿ ಏರ್ಪಡಿಸಿದ್ದ ಶಾಸಕರ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಈ ಗ್ರಾಮದಲ್ಲಿ ನಾನು ಹೆಚ್ಚು ಅಭಿವೃದ್ದಿ ಕೆಲಸ ಮಾಡಿ ಅಗೌರವ ಬರದಂತೆ ನೋಡಿ ಕೊಳ್ಳುತ್ತೇನೆ, ಬಸವೇಶ್ವರ…
ನಂಜನಗೂಡಿನ ಪೊಲೀಸ್ ಭವನದಲ್ಲಿ ನಿರ್ಗಮಿತ ಸಿಪಿಐ ಶಿವಮೂರ್ತಿ, ಸಬ್ ಇನ್ಸ್‍ಪೆಕ್ಟರ್ ಸಿ.ಯು.ಸವಿ ಅವರಿಗೆ ಬೀಳ್ಕೊಡುಗೆ
October 9, 2018ನಂಜನಗೂಡು: ಸರ್ಕಾರದಲ್ಲಿ ರುವ ಎಲ್ಲಾ ಇಲಾಖೆಗಳಿಗಿಂತ ಪೊಲೀಸ್ ಇಲಾಖೆ ಬಗ್ಗೆ ಸಾರ್ವಜನಿಕರ ನಿರೀಕ್ಷೆ ಅತೀ ಹೆಚ್ಚಿನ ಮಟ್ಟದಲ್ಲಿದ್ದು ಅವರ ನಿರೀಕ್ಷೆಗೆ ಸ್ಪಂದಿಸಿ ಪೊಲೀಸರಾದ ನಾವು ಕರ್ತವ್ಯ ನಿರ್ವಹಿಸಿದಾಗ ಸಾರ್ವಜನಿಕರು ಪೊಲೀಸ್ ಇಲಾಖೆಯ ಬಗ್ಗೆ ಗೌರವ ಮತ್ತು ಗುರುತಿ ಸುವ ಕೆಲಸ ಮಾಡುತ್ತಾರೆ. ಸರ್ಕಾರಿ ಸೇವೆ ಯಲ್ಲಿರುವ ನಾವು ಎಲ್ಲೇ ಇರಲಿ, ಮಾಡುವ ಕೆಲಸ ಸಮಾಜಮುಖಿಯಾಗಿರಬೇಕು ಎಂದು ಇಲ್ಲಿನ ನೂತನ ಡಿವೈಎಸ್‍ಪಿ. ಸಿ.ಮಲ್ಲಿಕ್ ಪೊಲೀಸರಿಗೆ ಕಿವಿಮಾತು ಹೇಳಿದ್ದಾರೆ. ಇಲ್ಲಿನ ಗ್ರಾಮಾಂತರ ಪೊಲೀಸ್ ಠಾಣೆ ಸಭಾಂಗಣದಲ್ಲಿ ನಡೆದ ನಿರ್ಗಮಿತ ಸಿಪಿಐ…
ಮೈಸೂರು ದಸರೆಗೂ ತಟ್ಟಿದ ನೀತಿ ಸಂಹಿತೆ ಬಿಸಿ
October 8, 2018ಮೈಸೂರು: ಮಂಡ್ಯ ಲೋಕಸಭೆ ಉಪ ಚುನಾವಣೆ ನೀತಿ ಸಂಹಿತೆಯು ಮೈಸೂರು ದಸರಾ ಮಹೋತ್ಸವದಲ್ಲಿ ಜನಪ್ರತಿನಿಧಿಗಳು ಪಾಲ್ಗೊಳ್ಳಲು ಅಡ್ಡಿಯಾಗಿ ಪರಿಣಮಿಸಿದೆ. ಮಂಡ್ಯ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಮೈಸೂರು ಜಿಲ್ಲೆಯ ಕೆಆರ್ ನಗರವೂ ಬರಲಿದೆ. ಹೀಗಾಗಿ ಇಡೀ ಮೈಸೂರು ಜಿಲ್ಲೆಗೂ ನೀತಿ ಸಂಹಿತೆ ಅನ್ವಯವಾಗಲಿದೆ. ಈ ಹಿನ್ನೆಲೆಯಲ್ಲಿ ಮೈಸೂರು ದಸರಾ ಮಹೋತ್ಸವದಲ್ಲಿ ಜನಪ್ರತಿನಿಧಿಗಳು ಭಾಗಿಯಾಗುವುದು ಸದ್ಯಕ್ಕೆ ಅನುಮಾನವಾಗಿದೆ. ಮೈಸೂರು ಜಿಲ್ಲೆಗೆ ಸಂಬಂಧಿಸಿದಂತೆ ಚುನಾವಣಾ ನೀತಿ ಸಂಹಿತೆಯಲ್ಲಿ ವಿನಾಯಿತಿ ನೀಡುವಂತೆ ಕೋರಿ ಜಿಲ್ಲಾಡ ಳಿತ ಭಾರತ ಚುನಾವಣಾ ಆಯೋಗಕ್ಕೆ ಪತ್ರ ಬರೆಯಲು…
ಮೈನವಿರೇಳಿಸಿದ ದಸರಾ `ಗ್ರಾವೆಲ್ ಫೆಸ್ಟ್’
October 8, 2018ಮೈಸೂರು: ಅಪಾರ ಸಂಖ್ಯೆಯ ವೀಕ್ಷಕರ ಮುಗಿಲು ಮುಟ್ಟಿದ ಕೇಕೆಯ ನಡುವೆ ದಸರಾ ಮಹೋ ತ್ಸವದ ಹಿನ್ನೆಲೆಯಲ್ಲಿ ಭಾನುವಾರ ಆಯೋಜಿಸಲಾಗಿದ್ದ `ಗ್ರಾವೆಲ್ ಫೆಸ್ಟ್’ನಲ್ಲಿ ವಿವಿಧ ಬಗೆಯ ರೇಸ್ ಕಾರುಗಳು ಧೂಳೆಬ್ಬಿಸಿ ಅಬ್ಬರಿಸಿ ಗಮನ ಸೆಳೆದವು. ಮೈಸೂರು ಜಿಲ್ಲಾ ಡಳಿತ, ಪ್ರವಾಸೋದ್ಯಮ ಇಲಾಖೆ ಹಾಗೂ ಅಸ್ಕಾಮ್ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಭಾನುವಾರ ಮೈಸೂರಿನ ಲಲಿತಮಹಲ್ ಹೆಲಿಪ್ಯಾಡ್ ಬಳಿ ಆಯೋಜಿಸಿದ್ದ `ದಸರಾ ಗ್ರಾವೆಲ್ ಫೆಸ್ಟ್’ನಲ್ಲಿ ವಿವಿಧ ರಾಜ್ಯಗಳೂ ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ 178 ರೇಸ್ ಕಾರುಗಳು ಧೂಳೆಬ್ಬಿಸಿ, ನೋಡುಗರ ಎದೆ…
ದಸರೆಗೆ ಪ್ರವಾಸೋದ್ಯಮ ಇಲಾಖೆಯಿಂದ 8 ಕೋಟಿ ವೆಚ್ಚ
October 8, 2018ಮೈಸೂರು: ಈ ಬಾರಿಯ ದಸರಾ ಮಹೋತ್ಸವದಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಸಲುವಾಗಿ ದಸರಾ ಸಂಬಂಧಿತ ಕಾರ್ಯಕ್ರಮಗಳು ಹಾಗೂ ಪ್ರಚಾರಕ್ಕಾಗಿ ಪ್ರವಾಸೋದ್ಯಮ ಇಲಾಖೆ 8 ಕೋಟಿ ರೂ. ವೆಚ್ಚ ಮಾಡುತ್ತಿದೆ ಎಂದು ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ಬಿ.ರಾಮು ತಿಳಿಸಿದರು. ಮೈಸೂರಿನ ಜೆಎಲ್‍ಬಿ ರಸ್ತೆಯಲ್ಲಿರುವ ಹೋಟೆಲ್ ಮಯೂರ ಹೊಯ್ಸಳ ಸಭಾಂಗಣದಲ್ಲಿ ಭಾನುವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ದಸರಾ ಮಹೋ ತ್ಸವವನ್ನು ಪ್ರವಾಸೋದ್ಯಮ ಕೇಂದ್ರೀತವಾಗಿ ಆಚರಿಸಲು ಮುಖ್ಯಮಂತ್ರಿಗಳು ಹಾಗೂ ಪ್ರವಾಸೋದ್ಯಮ ಸಚಿವರ ನಿರ್ದೇಶನದಂತೆ 8 ಕೋಟಿ ರೂ. (805.39 ಲಕ್ಷಗಳು)…
ಖಾಯಂ ಪೌರ ಕಾರ್ಮಿಕರಿಂದ ಸ್ವಚ್ಛತೆ ಆರಂಭ
October 8, 2018ಮೈಸೂರು: ಮೈಸೂರು ಮಹಾನಗರಪಾಲಿಕೆಯಲ್ಲಿ ಪೌರ ಕಾರ್ಮಿಕರ ಗುತ್ತಿಗೆ ಪದ್ಧತಿಯನ್ನು ರದ್ದುಗೊಳಿಸಬೇಕೆಂಬ ಪ್ರಮುಖ ಬೇಡಿಕೆಯೊಂದಿಗೆ ಇನ್ನಿತರ ಸೌಲಭ್ಯಕ್ಕಾಗಿ ಪಾಲಿಕೆಯ ಪೌರ ಕಾರ್ಮಿಕರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ ಐದನೇ ದಿನವಾದ ಭಾನುವಾರವೂ ಮುಂದುವರೆಯಿತು. ಮೈಸೂರು ಮಹಾನಗರ ಪಾಲಿಕೆಯ ಮುಖ್ಯ ದ್ವಾರದ ಬಳಿ ಪಾಲಿಕೆ ಪೌರ ಕಾರ್ಮಿಕರು ಮುಷ್ಕರ ನಡೆಸುತ್ತಿದ್ದು, ಮಂಗಳವಾರ (ಅ.9) ವಿಧಾನಸೌಧದಲ್ಲಿ ಸಭೆ ನಡೆಸಿ ಬೇಡಿಕೆ ಈಡೇರಿಸುವ ಸಂಬಂಧ ಸೂಕ್ತ ಕ್ರಮ ಕೈಗೊಳ್ಳುವ ಭರವಸೆಯನ್ನು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದಿನಿಂದ ಪಾಲಿಕೆ ಖಾಯಂ…
ಸಂಪುಟ ವಿಸ್ತರಣೆ ಮತ್ತೇ ಮುಂದೂಡಿಕೆ
October 8, 2018ಬೆಂಗಳೂರು: `ಬೀಸೋ ದೊಣ್ಣೆ ತಪ್ಪಿಸಿಕೊಂಡರೆ ನೂರು ವರ್ಷ ಆಯಸ್ಸು’ ಎಂಬ ಗಾದೆ ಮಾತಿದೆ. ಹಾಗೇ ಸಂಪುಟ ವಿಸ್ತರಣೆ ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಸರ್ಕಾರಕ್ಕೆ ಭಾರೀ ತಲೆ ನೋವಾಗಿ ಪರಿಣಮಿಸಿದ್ದು, ಲೋಕಸಭೆ ಹಾಗೂ ವಿಧಾನಸಭೆ ಉಪ ಚುನಾವಣೆ ನೆಪದಲ್ಲಿ ಸಂಪುಟ ವಿಸ್ತರಣೆ ದಿನಾಂಕವನ್ನು ಮುಂದೂಡುವ ಮೂಲಕ ಕಾಂಗ್ರೆಸ್ ನಾಯಕರು ಬೀಸೋ ದೊಣ್ಣೆ ತಪ್ಪಿಸಿಕೊಂಡಿದ್ದಾರೆ. ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂ ತೆಯೇ ಸಂಪುಟದಲ್ಲಿ ಸ್ಥಾನ ದೊರೆಯದೇ ಇರುವ ಹಿರಿಯ ಶಾಸಕರು ಬಂಡಾಯ ಮೈತ್ರಿ ಸರ್ಕಾರಕ್ಕೆ ತೀವ್ರ ತಲೆ ನೋವಾಗಿ ಪರಿಣಮಿಸಿತ್ತು….
ದಸರಾ ಅಂಗವಾಗಿ ‘ಓಪನ್ ಬಸ್’ ಸೇವೆಗೆ ಚಾಲನೆ
October 8, 2018ಮೈಸೂರು: ಈ ಬಾರಿಯ ದಸರಾ ಮಹೋತ್ಸವದಲ್ಲಿ ತೆರೆದ ಬಸ್‍ನಲ್ಲಿ ಸಂಚರಿಸಿ ಮೈಸೂರು ನಗರದ ಅಂದ-ಚೆಂದವನ್ನು ಕಣ್ತುಂಬಿ ಕೊಳ್ಳಬಹುದು. ಜೊತೆಗೆ 10 ಐಷಾರಾಮಿ ಬಸ್‍ಗಳು ನಗರದ ನಾನಾ ಪ್ರೇಕ್ಷಣೀಯ ಸ್ಥಳಗಳಿಗೆ ಪ್ರಯಾಣ ಬೆಳೆಸಲಿದ್ದು, ಇದರಿಂದ ಪ್ರವಾಸಿಗರು ಹಾಗೂ ಸ್ಥಳೀಯರು ತಮ್ಮ ವಾಹನಗಳ ಪಾರ್ಕಿಂಗ್ ಕಿರಿಕಿರಿ ಇಲ್ಲದೆ ಮೈಸೂರಿನ ರಸ್ತೆಗಳಲ್ಲಿ ಸುತ್ತಾಡುವ ಜೊತೆಗೆ ರಮಣೀಯ ತಾಣಗಳಲ್ಲಿ ವಿಹರಿಸಬಹುದಾಗಿದೆ. ದಸರಾ ಮಹೋತ್ಸವದ ಅಂಗವಾಗಿ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಕೆಎಸ್‍ಟಿಡಿಸಿ), ಪ್ರವಾಸೋದ್ಯಮ ಇಲಾಖೆ ವತಿ ಯಿಂದ ಬಿಎಂಟಿಸಿ ಹಾಗೂ ಕೆಎಸ್‍ಆರ್‍ಟಿಸಿ…