ಅಲ್ಪನಾಯಕನಹಳ್ಳಿಯಲ್ಲಿ ಶಾಸಕ ಕೆ.ಮಹದೇವ್‍ಗೆ ಸನ್ಮಾನ
ಮೈಸೂರು

ಅಲ್ಪನಾಯಕನಹಳ್ಳಿಯಲ್ಲಿ ಶಾಸಕ ಕೆ.ಮಹದೇವ್‍ಗೆ ಸನ್ಮಾನ

October 9, 2018

ಬೆಟ್ಟದಪುರ: ಅಲ್ಪನಾಯಕನ ಹಳ್ಳಿ ಗ್ರಾಮದಲ್ಲಿ 2008ರ ವಿಧಾನಸಭೆ ಚುನಾವಣೆಯಲ್ಲಿ ನನಗೆ ಕೇವಲ 50, 2013ರಲ್ಲಿ ಅದಕ್ಕಿಂತ ಹೆಚ್ಚು ಮತಗಳು ಹಾಗೂ 2018ರ ಚುನಾವಣೆಯಲ್ಲಿ ಅತೀ ಹೆಚ್ಚು ಮತಗಳನ್ನು ನೀಡಿ ಗೆಲುವಿಗೆ ಕಾರಣ ಭೂತರಾಗಿದ್ದೀರಿ ಎಂದು ಶಾಸಕ ಕೆ. ಮಹದೇವ್ ಹೇಳಿದರು.

ಪಿರಿಯಾಪಟ್ಟಣ ತಾಲೂಕು ಅಲ್ಪ ನಾಯಕನಹಳ್ಳಿ ಗ್ರಾಮಸ್ಥರು ತಮ್ಮ ಗ್ರಾಮ ದಲ್ಲಿ ಏರ್ಪಡಿಸಿದ್ದ ಶಾಸಕರ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಈ ಗ್ರಾಮದಲ್ಲಿ ನಾನು ಹೆಚ್ಚು ಅಭಿವೃದ್ದಿ ಕೆಲಸ ಮಾಡಿ ಅಗೌರವ ಬರದಂತೆ ನೋಡಿ ಕೊಳ್ಳುತ್ತೇನೆ, ಬಸವೇಶ್ವರ ದೇವಸ್ಥಾನ ಕಾಂಪೌಂಡ್, ದೊಡ್ಡಮ್ಮ ತಾಯಿ ದೇವ ಸ್ಥಾನ, ಕನಕ ಸಮುದಾಯ ಭವನ ಹಾಗೂ ರಸ್ತೆ ಅಭಿವೃದ್ದಿಗೆ ಹೆಚ್ಚು ಅನುದಾನ ನೀಡಿ ಗ್ರಾಮದ ಅಭಿವೃದ್ದಿಗೆ ನಿಮ್ಮ ಮನೆಯ ಮಗನಂತೆ ಪ್ರಾಮಾಣಿಕವಾಗಿ ದುಡಿಯುತ್ತೇನೆ ಎಂದರು. ಕನಕ ಸಮುದಾಯ ಭವನಕ್ಕೆ 10 ಲಕ್ಷ ರೂ.ಗಳ ಅನುದಾನ ನೀಡಿ, ಅಂಬೇಡ್ಕರ್ ಭವನ ನಿರ್ಮಾಣದ ಕೆಲಸಕ್ಕೂ ನೆರವು ನೀಡುತ್ತೇನೆ, ಕುಡಿಯುವ ನೀರು ಹಾಗೂ ತಾಲೂಕಿನ 350 ಹಳ್ಳಿಗಳಿಗೂ ಪ್ರವಾಸ ಮಾಡಿ ಸರಿಯಾದ ಕ್ರಮದಲ್ಲಿ ಅನುದಾನ ಹಂಚಿಕೆಯಾಗುವಂತೆ ಗಮನ ಹರಿಸುತ್ತೇನೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ತಾ.ಪಂ ಸದಸ್ಯ ರಾದ ಆರ್.ಎಸ್.ಮಹದೇವ್, ಈರಯ್ಯ, ಮಾಜಿ ಸದಸ್ಯ ಅತ್ತರ್ ಮತಿನ್, ಅಲ್ಪ ನಾಯಕನಹಳ್ಳಿ ಧರಣೇಶ್ ಸೇರಿದಂತೆ ಹಲವರು ಮಾತನಾಡಿದರು. ಈ ಸಂದರ್ಭ ದಲ್ಲಿ ಜಿ.ಪಂ ಸದಸ್ಯೆ ರುದ್ರಮ್ಮ ನಾಗಯ್ಯ, ತಾಪಂ ಸದಸ್ಯ ಮಲ್ಲಿಕಾರ್ಜುನ, ಚಿಕ್ಕನೇರಳೆ ಗ್ರಾ.ಪಂ ಅಧ್ಯಕ್ಷ ಲೋಕೇಶ್, ಬೆಣಗಾಲು ಗ್ರಾ.ಪಂ ಅಧ್ಯಕ್ಷ ಸುಂದ್ರೇಗೌಡ, ಹಲಗನ ಹಳ್ಳಿ ಸದಸ್ಯ ಸುರಗಳ್ಳಿ ವಿದ್ಯಾಶಂಕರ್, ಮಾಜಿ ಸದಸ್ಯರುಗಳಾದ ಮಾದೇವ್, ಎಚ್.ಎಂ.ಮೈಲಾರಪ್ಪ, ಮುಖಂಡರು ಗಳಾದ ಕುಮಾರ್, ಮಹದೇವ್, ವಸಂತ ಸೇರಿದಂತೆ ಹಲವರು ಹಾಜರಿದ್ದರು.

Translate »