ಮೈಸೂರು

ಮಾನಸಿಕ ಅಸ್ವಸ್ಥ ಸಾವು
ಮೈಸೂರು

ಮಾನಸಿಕ ಅಸ್ವಸ್ಥ ಸಾವು

October 4, 2018

ಮೈಸೂರು:  ಕುಸಿದು ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದ ಮಾನಸಿಕ ಅಸ್ವಸ್ಥನೋರ್ವ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಮೃತಪಟ್ಟಿದ್ದಾರೆ. ಜಯಪುರ ಪೊಲೀಸ್ ಠಾಣೆ ಎದುರು ದೇವಸ್ಥಾನವಿದ್ದು, ಮಾನಸಿಕ ಅಸ್ವಸ್ಥನೋರ್ವ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾನೆ. ಇದನ್ನು ಕಂಡ ಜಯಪುರ ಠಾಣೆ ಪೊಲೀಸ್ ಸಬ್‍ಇನ್‍ಸ್ಪೆಕ್ಟರ್ ಕೃಷ್ಣಮೂರ್ತಿರವರು ಕೂಡಲೇ ಪೆÇಲೀಸ್ ವಾಹನದಲ್ಲಿ ಕರೆದುಕೊಂಡು ಬಂದು ಕೆ.ಆರ್.ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿಗೆ ನಾಳೆ ನ್ಯಾಕ್ ತಂಡ ಭೇಟಿ
ಮೈಸೂರು

ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿಗೆ ನಾಳೆ ನ್ಯಾಕ್ ತಂಡ ಭೇಟಿ

October 4, 2018

ಮೈಸೂರು:  ಮೈಸೂರಿನ ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿಗೆ ಅ.5 ಮತ್ತು 6ರಂದು ನ್ಯಾಕ್ (National Accreditation and Assessment Council)ನ ಪೀರ್ ತಂಡ ಭೇಟಿ ನೀಡುತ್ತಿದ್ದು, ಶೈಕ್ಷಣಿಕ ಮತ್ತು ಮೂಲ ಸೌಕರ್ಯಗಳ ಗುಣಮಟ್ಟ ವನ್ನು ಮೌಲೀಕರಿಸಲಿದೆ ಎಂದು ಕಾಲೇಜಿನ ಪ್ರಾಚಾರ್ಯ ಡಾ.ಎಸ್.ಮರೀಗೌಡ ತಿಳಿಸಿದರು. ಲಕ್ನೋ ಲೋಹಿಯಾ ಅವಾದ್ ವಿವಿ ಕುಲಪತಿ ಪ್ರೊ.ಎ.ಕೆ.ಮಿತ್ತಲ್, ಒಡಿಸ್ಸಾ ಭುವನೇಶ್ವರದ ಉತ್ಕಲ್ ವಿವಿ ಸ್ನಾತಕೋತ್ತರ ವಾಣಿಜ್ಯ ಶಾಸ್ತ್ರ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಡಾ.ಕ್ಷಿತಿ ಭೂಷಣ್‍ದಾಸ್, ಹಿಮಾಚಲ ಪ್ರದೇಶದ ಶಿಮ್ಲಾ ಗೋವಿಂದವಲ್ಲಭ್ ಪಂತ್ ಸ್ಮಾರಕ…

ಅಕ್ರಮ ಗ್ಯಾಸ್ ರೀಫಿಲ್ಲಿಂಗ್: ಇಬ್ಬರ ಬಂಧನ
ಮೈಸೂರು

ಅಕ್ರಮ ಗ್ಯಾಸ್ ರೀಫಿಲ್ಲಿಂಗ್: ಇಬ್ಬರ ಬಂಧನ

October 4, 2018

ಮೈಸೂರು: ಅಕ್ರಮವಾಗಿ ಗ್ಯಾಸ್ ರೀಫಿಲ್ಲಿಂಗ್ ಮಾಡುತ್ತಿದ್ದ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿ, 15 ಗ್ಯಾಸ್ ಸಿಲಿಂಡರ್‍ಗಳನ್ನು ವಶಪಡಿಸಿ ಕೊಂಡಿದ್ದಾರೆ. ಅಜೀಜ್‍ಸೇಠ್‍ನಗರದ ನಿವಾಸಿ ತೌಹಿದ್ ಪಾಷ ಬಿನ್ ಸೈಯದ್ ಇಬ್ರಾಹಿಂ(19) ಹಾಗೂ ಮಂಡಿಮೊಹಲ್ಲಾ ನಿವಾಸಿ ಮೊಹಮದ್ ಫಾಜೀಲ್ ಬಿನ್ ಫೈಯಾಜ್ ಅಹಮದ್(28) ಬಂಧಿತರು. ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ ಅಜೀಜ್‍ಸೇಠ್‍ನಗರದ ಬೀಡಿ ಕಾಲೋನಿಯ ಫಾರೂಖಿಯ ಪಿಯು ಕಾಲೇಜ್ ಬಳಿ ಯಿರುವ ಮಳಿಗೆಯಲ್ಲಿ ಅಕ್ರಮವಾಗಿ ಗ್ಯಾಸ್ ರೀಫಿಲ್ಲಿಂಗ್ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು, ಆಹಾರ ಇಲಾಖೆಯ…

ಅಡ್ಡಾದಿಡ್ಡಿ ಚಲಿಸಿದ ಲಾರಿ: ಮಂಡ್ಯದಲ್ಲಿ ಭೀಕರ ಸರಣಿ ಅಪಘಾತ ಸ್ಥಳದಲ್ಲೇ ನಾಲ್ವರ ಸಾವು
ಮೈಸೂರು

ಅಡ್ಡಾದಿಡ್ಡಿ ಚಲಿಸಿದ ಲಾರಿ: ಮಂಡ್ಯದಲ್ಲಿ ಭೀಕರ ಸರಣಿ ಅಪಘಾತ ಸ್ಥಳದಲ್ಲೇ ನಾಲ್ವರ ಸಾವು

October 3, 2018

ಮಂಡ್ಯ: ಲಾರಿಯೊಂದು ಅಡ್ಡಾದಿಡ್ಡಿ ಚಲಿಸಿ ನಡೆದ ಸರಣಿ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಮೃತ ಪಟ್ಟು, ಹತ್ತಕ್ಕೂ ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡಿರುವ ಘಟನೆ ಮಂಡ್ಯದ ಗುತ್ತಲು ರಸ್ತೆಯಲ್ಲಿ ಮಂಗಳವಾರ ಸಂಜೆ ಸಂಭವಿಸಿದೆ. ಗಾಯಗೊಂಡವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದ್ದು, ಅವರನ್ನು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ರವಾನಿಸಲಾಗಿದೆ. ಅಪಘಾತದಲ್ಲಿ ಶಶಾಂಕ್, ಆತನ ತಾಯಿ ಗಿರಿಜಮ್ಮ, ರಾಹುಲ್ ಮತ್ತು ರಫಿಉಲ್ಲಾ ಎಂಬುವರು ಸಾವನ್ನಪ್ಪಿದ್ದು, ನಟರಾಜು ಮತ್ತು ವೆಂಕಟೇಶ್ ಎಂಬುವರನ್ನು ಬೆಂಗಳೂರಿನ ನಿಮ್ಹಾನ್ಸ್‍ಗೆ ರವಾನಿಸಲಾಗಿದೆ. ವಿವರ: ಇಂದು ಸಂಜೆ 7…

ವಿಧಾನಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ
ಮೈಸೂರು

ವಿಧಾನಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ

October 3, 2018

ಬೆಂಗಳೂರು: ರಾಮನಗರ ಹಾಗೂ ಜಮಖಂಡಿ ವಿಧಾನಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಸರ್ಕಾರದಲ್ಲಿ ಪಾಲುದಾರ ಪಕ್ಷವಾದ ಜೆಡಿಎಸ್ ಮತ್ತು ಕಾಂಗ್ರೆಸ್ ಸೀಟು ಹಂಚಕೆ ಮಾಡಿಕೊಂಡು ಕಣಕ್ಕಿಳಿಯಲು ನಿರ್ಧರಿಸಿವೆ. ಉಪ ಚುನಾವಣೆ ಹಾಗೂ ಸಚಿವ ಸಂಪುಟ ವಿಸ್ತರಣೆ ಕುರಿತಂತೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಇಂದು ಖಾಸಗಿ ಹೊಟೇಲ್‍ವೊಂದರಲ್ಲಿ ಉಪಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್ ಒಟ್ಟಿಗೆ ಸುದೀರ್ಘ ಸಮಾಲೋಚನೆ ನಡೆಸಿದರು. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಗುಂಡೂರಾವ್ ಈ ಕುರಿತು ದೆಹಲಿ ವರಿಷ್ಠರೊಟ್ಟಿಗೆ ಚರ್ಚೆ…

ಮೈಸೂರಲ್ಲಿ ಜಿಲ್ಲಾಡಳಿತದಿಂದ ಗಾಂಧಿ ಜಯಂತಿ ಆಚರಣೆ
ಮೈಸೂರು

ಮೈಸೂರಲ್ಲಿ ಜಿಲ್ಲಾಡಳಿತದಿಂದ ಗಾಂಧಿ ಜಯಂತಿ ಆಚರಣೆ

October 3, 2018

ಮೈಸೂರು: ವಿಶ್ವ ವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಸಂದರ್ಭದಲ್ಲಿ ದೇಶ ವಿದೇಶಗಳಿಂದ ಲಕ್ಷಾಂತರ ಜನರು ಮೈಸೂರಿಗೆ ಬರುವ ಹಿನ್ನೆಲೆಯಲ್ಲಿ ಮೈಸೂರು ನಗರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಅಗತ್ಯವಿದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಇಂದಿಲ್ಲಿ ಹೇಳಿದರು. ಮಹಾತ್ಮ ಗಾಂಧಿಯವರ 150ನೇ ಜಯಂತಿ ಅಂಗವಾಗಿ ಮೈಸೂರಿನ ಶ್ರೀರಂಗಾಚಾರ್ಲು ಪುರಭವನದಲ್ಲಿ ಮೈಸೂರು ಜಿಲ್ಲಾಡಳಿತ ಮತ್ತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಅಯೋಜಿಸಿದ್ದ ಪ್ರಾರ್ಥನಾ ಸಭೆಯಲ್ಲಿ ಮೊದಲಿಗೆ ಗಾಂಧಿ ಚೌಕದಲ್ಲಿ ಮಹಾತ್ಮ ಗಾಂಧಿಯವರ…

ಲೋಕಸಭೆ ಚುನಾವಣೆಗೆ ಬಿಜೆಪಿ ಪೂರ್ವ ತಯಾರಿ ತಿಂಗಳಾಂತ್ಯಕ್ಕೆ ರಾಜ್ಯಕ್ಕೆ ಅಮಿತ್ ಶಾ
ಮೈಸೂರು

ಲೋಕಸಭೆ ಚುನಾವಣೆಗೆ ಬಿಜೆಪಿ ಪೂರ್ವ ತಯಾರಿ ತಿಂಗಳಾಂತ್ಯಕ್ಕೆ ರಾಜ್ಯಕ್ಕೆ ಅಮಿತ್ ಶಾ

October 3, 2018

ಬೆಂಗಳೂರು: ಲೋಕಸಭೆ ಚುನಾವಣೆ ಪೂರ್ವ ಸಿದ್ಧತೆ ಕುರಿತಂತೆ ಸ್ಥಳೀಯ ನಾಯಕರ ಜತೆ ಚರ್ಚಿಸಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ತಿಂಗಳಾಂತ್ಯಕ್ಕೆ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಮೊದಲ ವಾರದಲ್ಲೇ ರಾಜ್ಯಕ್ಕೆ ಭೇಟಿ ನೀಡುವ ಕಾರ್ಯಕ್ರಮ ನಿಗದಿಯಾಗಿತ್ತಾದರೂ ಬೇರೆ ಬೇರೆ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುವ ಕಾರಣ ತಿಂಗಳಾಂತ್ಯಕ್ಕೆ ರಾಜ್ಯಕ್ಕೆ ಭೇಟಿ ನೀಡಿ ಚುನಾವಣೆಯಲ್ಲಿ ಕೈಗೊಳ್ಳಬೇಕಾದ ಕಾರ್ಯತಂತ್ರದ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಅಮಿತ್ ಶಾ ಆಗಮಿಸುವ ಸಂದರ್ಭದಲ್ಲಿ ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಸಚಿವರು, ಸಂಸದರು, ರಾಜ್ಯಸಭೆ ಸದಸ್ಯರು, ಶಾಸಕರು, ವಿಧಾನಪರಿಷತ್ ಸದಸ್ಯರು,…

ಹೈವೇ ವೃತ್ತದಲ್ಲಿ ಎಲಿಫೆಂಟ್ ಕಾರಂಜಿ ಪುನರ್ ನಿರ್ಮಾಣ
ಮೈಸೂರು

ಹೈವೇ ವೃತ್ತದಲ್ಲಿ ಎಲಿಫೆಂಟ್ ಕಾರಂಜಿ ಪುನರ್ ನಿರ್ಮಾಣ

October 3, 2018

ಮೈಸೂರು:  ಎಲಿಫೆಂಟ್ ಕಾರಂಜಿ ಪುನರ್ ನಿರ್ಮಾಣದಿಂದ ಮೈಸೂರಿನ ಹೈವೇ ವೃತ್ತ ಮತ್ತೆ ಅಂದಗಟ್ಟಿದೆ. ಕಿಡಿಗೇಡಿಗಳಿಂದ ನೆಲಕ್ಕುರುಳಿದ್ದ ವಿಶಿಷ್ಟ ಕಾರಂಜಿ, ಪುನಃ ತಲೆ ಎತ್ತಿದ್ದು, ನೋಡುಗರ ಕಣ್ಮನ ಸೆಳೆಯುತ್ತಿದೆ. ನೆಲ್ಸನ್ ಮಂಡೇಲಾ ರಸ್ತೆ ಹಾಗೂ ಸಯ್ಯಾಜಿ ರಾವ್ ರಸ್ತೆ ಕೂಡುವ ಸ್ಥಳದಲ್ಲಿರುವ ಮೌಲನಾ ಅಬ್ದುಲ್ ಕಲಾಂ ಆಜಾದ್ ವೃತ್ತ, ಹೈವೇ ವೃತ್ತವೆಂದೇ ಹೆಸರುವಾಸಿ ಯಾಗಿದೆ. ಕಳಾಹೀನವಾಗಿದ್ದ ವೃತ್ತದಲ್ಲಿ ಬ್ರಿಗೇಡ್ ಗ್ರೂಪ್ ವತಿಯಿಂದ ಸುಂದರವಾದ ಎಲಿಫೆಂಟ್ ಕಾರಂಜಿಯನ್ನು ನಿರ್ಮಿಸಿ, ಒಟ್ಟು 25 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿ ಗೊಳಿಸಲಾಗಿತ್ತು. 2016ರಲ್ಲಿ…

ತಿರುಪತಿಯಲ್ಲಿ ಹೆಚ್1ಎನ್1: ಯಾತ್ರಾರ್ಥಿ ಬಲಿ
ಮೈಸೂರು

ತಿರುಪತಿಯಲ್ಲಿ ಹೆಚ್1ಎನ್1: ಯಾತ್ರಾರ್ಥಿ ಬಲಿ

October 3, 2018

ತಿರುಪತಿ: ಭಕ್ತಾದಿಗಳಿಂದ ಕಿಕ್ಕಿರಿದಿರುವ ತಿರುಪತಿಯಲ್ಲಿ ಹಂದಿ ಜ್ವರದ (ಎಚ್1ಎನ್1) ಮೂರು ಪ್ರಕರಣಗಳು ವರದಿಯಾಗಿದ್ದು, ರೋಗದಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ಮೃತ ಪಟ್ಟಿದ್ದಾರೆ. ಇದರಿಂದ ಯಾತ್ರಿಗಳ ಆತಂಕ ಮತ್ತಷ್ಟು ಹೆಚ್ಚಾಗಿದೆ. ಸೋಮವಾರ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಟೆಲಿಕಾನ್ಫರೆನ್ಸ್ ನಡೆಸಿ ಪರಿಸ್ಥಿತಿ ಅವ ಲೋಕಿಸಿರುವ ಚಿತ್ತೂರು ಜಿಲ್ಲಾಧಿಕಾರಿ ಪಿ.ಎಸ್.ಪ್ರದ್ಯುಮ್ನ ಅವರು, ”ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದ್ದು, ಜನರು ಆತಂಕ ಪಡುವ ಅಗತ್ಯವಿಲ್ಲ,” ಎಂದು ಹೇಳಿದ್ದಾರೆ. ತಿರುಪತಿಯ ವೆಂಕಟೇಶ್ವರ ವೈದ್ಯಕೀಯ ವಿಜ್ಞಾನ ಸಂಸ್ಥೆ ಮತ್ತು ಶ್ರೀರಾಮ ನಾರಾಯಣ ಆಸ್ಪತ್ರೆಗಳಲ್ಲಿ ಹಂದಿಜ್ವರ ಲಕ್ಷಣಗಳಿರುವ ರೋಗಿಗಳಿಗೆ ಚಿಕಿತ್ಸೆ…

ಅರಮನೆ ಆವರಣ ಸ್ವಚ್ಛತೆ ಮೂಲಕ ಗಾಂಧಿ, ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಣೆ
ಮೈಸೂರು

ಅರಮನೆ ಆವರಣ ಸ್ವಚ್ಛತೆ ಮೂಲಕ ಗಾಂಧಿ, ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಣೆ

October 3, 2018

ಮೈಸೂರು:  ಮಹಾತ್ಮ ಗಾಂಧಿ ಜಯಂತಿ ಅಂಗವಾಗಿ ಮಾಜಿ ಸಚಿವರೂ ಆದ ಕೆ.ಆರ್.ಶಾಸಕ ಎಸ್.ಎ.ರಾಮದಾಸ್ ನೇತೃತ್ವದಲ್ಲಿ ಮಂಗಳವಾರ ಮೈಸೂರು ಅರಮನೆ ಆವರಣದಲ್ಲಿ ಸ್ವಚ್ಛತಾ ಶ್ರಮದಾನ ನಡೆಸಲಾಯಿತು. ಗಾಂಧಿ ಹಾಗೂ ಲಾಲ್ ಬಹದ್ದೂರ್‍ಶಾಸ್ತ್ರಿ ಜಯಂತಿ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್‍ನ ಸಂಸ್ಥಾಪನಾ ದಿನವಾದ ಇಂದು ಕೆಆರ್ ಕ್ಷೇತ್ರದಲ್ಲಿ ಸ್ವಚ್ಛತಾ ಕಾರ್ಯ ನಡೆಸಿ, ಬಳಿಕ ದಸರಾ ಗಜಪಡೆಯ ಮಾವುತರು, ಕಾವಾಡಿಗಳು ಹಾಗೂ ಅವರ ಮಕ್ಕಳು ಹಾಗೂ ಬಿಜೆಪಿ ಕಾರ್ಯಕರ್ತರು ಹಾಗೂ ಕೆಆರ್ ಕ್ಷೇತ್ರದ ಬಿಜೆಪಿ ಪಾಲಿಕೆ ಸದಸ್ಯರೊಂದಿಗೆ ಎಸ್.ಎ.ರಾಮದಾಸ್ ಸ್ವಚ್ಛತಾ…

1 1,349 1,350 1,351 1,352 1,353 1,611
Translate »