ಮೈಸೂರು

ಯುವ ಪೀಳಿಗೆಗೆ ಗಾಂಧೀಜಿ ಬಗ್ಗೆ ಮನವರಿಕೆ ಮಾಡಿಕೊಡದಿದ್ದರೆ ದೇಶಕ್ಕೆ ಭವಿಷ್ಯವಿಲ್ಲ: ಮಾಜಿ ಸ್ಪೀಕರ್ ಕೆ.ಆರ್.ಪೇಟೆ ಕೃಷ್ಣ ಎಚ್ಚರಿಕೆ
ಮೈಸೂರು

ಯುವ ಪೀಳಿಗೆಗೆ ಗಾಂಧೀಜಿ ಬಗ್ಗೆ ಮನವರಿಕೆ ಮಾಡಿಕೊಡದಿದ್ದರೆ ದೇಶಕ್ಕೆ ಭವಿಷ್ಯವಿಲ್ಲ: ಮಾಜಿ ಸ್ಪೀಕರ್ ಕೆ.ಆರ್.ಪೇಟೆ ಕೃಷ್ಣ ಎಚ್ಚರಿಕೆ

October 3, 2018

ಮೈಸೂರು: ಯುವ ಪೀಳಿಗೆಗೆ ಮಹಾತ್ಮ ಗಾಂಧಿ ಅವರ ಬಗ್ಗೆ ಮನವರಿಕೆ ಮಾಡಿಕೊಡದಿದ್ದರೆ ಈ ದೇಶಕ್ಕೆ ಭವಿಷ್ಯವಿಲ್ಲ ಎಂದು ಮಾಜಿ ಸ್ಪೀಕರ್ ಕೆ.ಆರ್.ಪೇಟೆ ಕೃಷ್ಣ ಅವರು ಇಂದಿಲ್ಲಿ ಎಚ್ಚರಿಕೆ ನೀಡಿದರು. ದೇಸಿರಂಗ ಸಾಂಸ್ಕøತಿಕ ಸಂಸ್ಥೆಯು ಮೈಸೂರಿನ ಕಲಾಮಂದಿರದ ಮನೆಯಂಗಳದಲ್ಲಿ ಏರ್ಪಡಿಸಿದ್ದ ‘ಗಾಂಧಿ ಮತ್ತು ಪ್ರಗತಿಪರ ಚಿಂತನೆ’ ಕುರಿತ ವಿಚಾರ ಸಂಕಿರಣ ಮತ್ತು ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟು ಬ್ರಿಟೀಷರ ಗುಲಾಮಗಿರಿಯಿಂದ ಮುಕ್ತಿಗೊಳಿಸಿದ ಮಹಾತ್ಮನನ್ನು ಮರೆತಿರುವುದು ವಿಷಾದನೀಯ ಎಂದ ಅವರು, ಯುವ ಪೀಳಿಗೆಗೆ…

ಜೆಡಿಎಸ್ ಕಚೇರಿಯಲ್ಲಿ ಗಾಂಧಿ ಜಯಂತಿ
ಮೈಸೂರು

ಜೆಡಿಎಸ್ ಕಚೇರಿಯಲ್ಲಿ ಗಾಂಧಿ ಜಯಂತಿ

October 3, 2018

ಮೈಸೂರು: ಮಹಾತ್ಮ ಗಾಂಧೀಯವರ 150ನೇ ಜನ್ಮ ದಿನಾಚರಣೆಯನ್ನು ಮೈಸೂರಿನ ಶೇಷಾದ್ರಿ ಅಯ್ಯರ್ ರಸ್ತೆಯಲ್ಲಿರುವ ಜೆಡಿಎಸ್ ಕಚೇರಿಯಲ್ಲಿ ಮಂಗಳವಾರ ಆಚರಿಸಲಾಯಿತು. ಗಾಂಧೀಯವರ ಭಾವಚಿತ್ರಕ್ಕೆ ಪುಷ್ಪ ನಮನದೊಂದಿಗೆ ನುಡಿ ನಮನ ಸಲ್ಲಿಸಲಾಯಿತು. ಇದೇ ವೇಳೆ ಮಾತನಾಡಿದ ಪಾಲಿಕೆ ಸದಸ್ಯ ಹಾಗೂ ಪಕ್ಷದ ಮುಖಂಡ ಎಸ್‍ಬಿಎಂ ಮಂಜು, ಗಾಂಧೀಯವರು ತಮ್ಮ ಅಹಿಂಸಾ ಮಾರ್ಗದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು. ಇಂದು ಅವರ 150ನೇ ಜನ್ಮದಿನವನ್ನು ಇಡೀ ದೇಶದಾದ್ಯಂತ ಸಂಭ್ರಮದಿಂದ ಆಚರಿಸುತ್ತಿದೆ ಎಂದು ತಿಳಿಸಿದರು. ಬಳಿಕ ಮಾತನಾಡಿದ ಜೆಡಿಎಸ್ ನಗರಾಧ್ಯಕ್ಷ ಕೆ.ಟಿ.ಚೆಲುವೇಗೌಡ, ಗಾಂಧೀಯವರು…

ಕೆ.ಆರ್.ಆಸ್ಪತ್ರೆಯಲ್ಲಿ ಮೂವರು  ಮಹಿಳಾ ಪೌರಕಾರ್ಮಿಕರಿಗೆ ಸನ್ಮಾನ
ಮೈಸೂರು

ಕೆ.ಆರ್.ಆಸ್ಪತ್ರೆಯಲ್ಲಿ ಮೂವರು  ಮಹಿಳಾ ಪೌರಕಾರ್ಮಿಕರಿಗೆ ಸನ್ಮಾನ

October 3, 2018

ಮೈಸೂರು: ಮಹಾತ್ಮ ಗಾಂಧೀಜಿ ಜನ್ಮದಿನದ ಅಂಗವಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಮೂವರು ಮಹಿಳಾ ಪೌರಕಾರ್ಮಿಕರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ, ಕೆ.ಆರ್.ಚಲುವಾಂಬ, ಪಿಕೆಟಿಬಿ ಆಸ್ಪತ್ರೆ, ಲಯನ್ಸ್ ಸಂಸ್ಥೆಗಳ ವಿವಿಧ ಘಟಕಗಳು ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಂಯುಕ್ತಾಶ್ರಯದಲ್ಲಿ ಕೆ.ಆರ್.ಆಸ್ಪತ್ರೆಯಲ್ಲಿ ಗಾಂಧಿ ಜಯಂತಿಯನ್ನು ಆಚರಿಸಲಾಯಿತು. ಇದೇ ವೇಳೆ ಆಸ್ಪತ್ರೆಯಲ್ಲಿ ಅನಾಥ ರೋಗಿಗಳನ್ನು ಆರೈಕೆ ಮಾಡುತ್ತಾ ಬಂದಿರುವ ಪೌರಕಾರ್ಮಿಕರಾದ ಪುಟ್ಟಮ್ಮ, ರತ್ನಮ್ಮ ಹಾಗೂ ಮಂಗಳಮ್ಮ ಅವರನ್ನು ಅಭಿನಂದಿಸಲಾಯಿತು. ಆಸ್ಪತ್ರೆ ಆವರಣ ಸ್ವಚ್ಛಗೊಳಿಸಿದ ವಿವಿಧ ಸಂಘಟನೆಗಳು,…

ಸ್ವಚ್ಛ ಭಾರತದ ಕನಸು ಪ್ರಧಾನಿ ಮೋದಿಯವರಿಂದ ಸಾಧ್ಯ
ಮೈಸೂರು

ಸ್ವಚ್ಛ ಭಾರತದ ಕನಸು ಪ್ರಧಾನಿ ಮೋದಿಯವರಿಂದ ಸಾಧ್ಯ

October 3, 2018

ತಿ.ನರಸೀಪುರ:  ಅಹಿಂಸಾ ವಾದಿ ಮಹಾತ್ಮ ಗಾಂಧೀಜಿ ಯವರ ಸ್ವಚ್ಛ ಭಾರತದ ಕನಸನ್ನು ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರು ಕಾರ್ಯ ರೂಪಕ್ಕೆ ತರುತ್ತಿದ್ದು, ದೇಶವಲ್ಲದೆ ವಿಶ್ವದೆಲ್ಲೆಡೆ ಮೋದಿಯವರಿಗೆ ಅಭೂತಪೂರ್ವ ಪ್ರಶಂಸೆ ವ್ಯಕ್ತವಾಗಿದೆ ವಿಧಾನ ಪರಿಷತ್ ಮಾಜಿ ಸದಸ್ಯ ಸಿ.ರಮೇಶ್ ಹೇಳಿದರು. ಪಟ್ಟಣದ ವೀರಶೈವ ವಿದ್ಯಾರ್ಥಿ ನಿಲಯ ದಲ್ಲಿ ಮಂಗಳವಾರ ಬಿಜೆಪಿ ಪಕ್ಷದಿಂದ ಹಮ್ಮಿಕೊಂಡಿದ್ದ ಮಹಾತ್ಮ ಗಾಂದಿಜೀ ಜಯಂತಿ ಕಾರ್ಯಕ್ರಮದಲ್ಲಿ ಪುರಸಭೆಯ ನೂತನ ಸದಸ್ಯರು ಹಾಗೂ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ನೂತನ ನಿರ್ದೇಶಕರನ್ನು ಸನ್ಮಾನಿಸಿ…

ಕಳೆದ ಮಾರ್ಚ್ 3ರ ಸಂಪುಟ ಸಭೆಯಲ್ಲಿ ಸಿದ್ದಾರ್ಥನಗರ, ಕೆಸಿ, ಜೆಸಿ ನಗರ ‘ಬಿ’  ಖರಾಬಿನಿಂದ ಕೈಬಿಡುವ ನಿರ್ಧಾರವಾದರೂ ಕಾರ್ಯಾನುಷ್ಠಾನಗೊಳಿಸದ ಅಧಿಕಾರಿ ವರ್ಗ
ಮೈಸೂರು

ಕಳೆದ ಮಾರ್ಚ್ 3ರ ಸಂಪುಟ ಸಭೆಯಲ್ಲಿ ಸಿದ್ದಾರ್ಥನಗರ, ಕೆಸಿ, ಜೆಸಿ ನಗರ ‘ಬಿ’ ಖರಾಬಿನಿಂದ ಕೈಬಿಡುವ ನಿರ್ಧಾರವಾದರೂ ಕಾರ್ಯಾನುಷ್ಠಾನಗೊಳಿಸದ ಅಧಿಕಾರಿ ವರ್ಗ

October 2, 2018

ಮೈಸೂರು:  ‘ದೇವರು ಕೊಟ್ಟರೂ ಪೂಜಾರಿ ಕೊಡಲೊಲ್ಲ’ ಎಂಬ ಗಾದೆ ಮಾತಿನಂತಿದೆ ನಮ್ಮ ಆಡಳಿತ ವ್ಯವಸ್ಥೆ. ಏಳು ತಿಂಗಳ ಹಿಂದೆ ಸಚಿವ ಸಂಪುಟ ಸಭೆಯಲ್ಲಿ ಕುರುಬಾರ ಹಳ್ಳಿ ಸರ್ವೆ ನಂ. 4ರ ಸಿದ್ದಾರ್ಥನಗರ, ಕೆ.ಸಿ. ನಗರ ಹಾಗೂ ಜೆ.ಸಿ. ನಗರ ಬಡಾವಣೆಗಳ ‘ಬಿ’ ಖರಾಬಿನಿಂದ ಕೈಬಿಡುವ ಸಂಬಂಧ ತೆಗೆದುಕೊಂಡಂತಹ ನಿರ್ಣಯ ಇನ್ನೂ ಕಾರ್ಯಾನುಷ್ಠಾನಗೊಳ್ಳದೇ ಇರುವುದು ನಮ್ಮ ಜನಪ್ರತಿ ನಿಧಿಗಳ ಜನಪರ ಚಿಂತನೆ, ಅಧಿಕಾರಿ ವರ್ಗದ ದಕ್ಷತೆ ಹಾಗೂ ಸಮಯ ಪಾಲನೆಯನ್ನು ಮತ್ತೊಮ್ಮೆ ಪ್ರಶ್ನಿಸುವಂತೆ ಮಾಡಿದೆ. ಈ ವರ್ಷದ ಮಾರ್ಚ್…

ದಸರಾ ಯುವ ಸಂಭ್ರಮದಲ್ಲಿ ಪರಿಸರ ಸಂರಕ್ಷಣೆ, ದೇಶಪ್ರೇಮದ ಹೊಳೆ
ಮೈಸೂರು

ದಸರಾ ಯುವ ಸಂಭ್ರಮದಲ್ಲಿ ಪರಿಸರ ಸಂರಕ್ಷಣೆ, ದೇಶಪ್ರೇಮದ ಹೊಳೆ

October 2, 2018

ಮೈಸೂರು: ಇಳಿ ಸಂಜೆಯ ಮಬ್ಬಿನಲಿ ಬಣ್ಣ-ಬಣ್ಣದ ದೀಪಗಳಿಂದ ಕಂಗೊಳಿಸುತ್ತಿದ್ದ ವೇದಿಕೆಯಲ್ಲಿ ವಿವಿಧ ವೇಷಭೂಷಣ ತೊಟ್ಟ ವಿದ್ಯಾರ್ಥಿಗಳು ಹಸಿರೆ ಉಸಿರು, ಗಿಡ ನಕ್ಕರೆ ಜಗ ನಗುತ್ತದೆ, ಗಿಡ ಅಳಿದರೆ ಜಗ ಅಳಿಯುತ್ತದೆ, ಮರ ಬೆಳೆಸಿ-ಬರ ಅಳಿಸಿ-ತಾಪ ಇಳಿಸಿ, ರೈತರೇ ಆತ್ಮಹತ್ಯೆ ಬೇಡ. ಆತ್ಮಸ್ಥೈರ್ಯ ಬೇಕು ಎಂಬಿತ್ಯಾದಿ ಸಂದೇಶಗಳನ್ನು ನೃತ್ಯದ ಮೂಲಕ ಅನಾವರಣಗೊಳಿಸಿದರು. ಮೈಸೂರು ಮಾನಸಗಂಗೋತ್ರಿ ಬಯಲು ರಂಗ ಮಂದಿರದಲ್ಲಿ ನಡೆಯುತ್ತಿರುವ ದಸರಾ ‘ಯುವ ಸಂಭ್ರಮ’ದ 2ನೇ ದಿನವಾದ ಸೋಮವಾರ ಮರಗಳ ಚಿತ್ರಣವುಳ್ಳ ಬ್ಯಾನರ್ ಹಿಡಿದು ವೇದಿಕೆಗೆ ಆಗಮಿಸಿದ ಹುಣಸೂರು…

ಬಡವರಿಗೆ ಮನೆ ಕಟ್ಟಿಸಲು ಭೂಮಿ ಗುರುತಿಸಿ
ಮೈಸೂರು

ಬಡವರಿಗೆ ಮನೆ ಕಟ್ಟಿಸಲು ಭೂಮಿ ಗುರುತಿಸಿ

October 2, 2018

ಮೈಸೂರು:  ಬಡವರಿಗೆ ಮನೆ ಕಟ್ಟಿಸಿಕೊಡಲು ಅಗತ್ಯ ವಾದ ಭೂಮಿ ಗುರುತಿಸಲು ಸಮಿತಿ ರಚಿಸುವಂತೆ ಉನ್ನತ ಶಿಕ್ಷಣ ಸಚಿವರೂ ಆದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಅವರು, ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು. ಮೈಸೂರು ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಸೋಮವಾರ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಜಿಲ್ಲೆಯಲ್ಲಿ ನಿವೇಶನ ಹಾಗೂ ಮನೆಯಿಲ್ಲದವರ ಅಂಕಿಅಂಶ ಪಡೆದ ಅವರು, ತಹಶೀಲ್ದಾರ್‍ಗಳು ಹಾಗೂ ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ(ಇಓ)ಗಳು ಜಂಟಿಯಾಗಿ ಪರಿ ಶೀಲನೆ ನಡೆಸಿ, ಭೂಮಿ ಗುರುತಿಸದಿದ್ದರೆ, ಬಡವರಿಗೆ ಮನೆ ನೀಡುವುದು ಹೇಗೆ? ಎಂದು ಪ್ರಶ್ನಿಸಿದರಲ್ಲದೆ,…

ಅ. 10 ಇಲ್ಲವೇ 12 ರಂದು  ಮಂತ್ರಿಮಂಡಲ ವಿಸ್ತರಣೆ
ಮೈಸೂರು

ಅ. 10 ಇಲ್ಲವೇ 12 ರಂದು  ಮಂತ್ರಿಮಂಡಲ ವಿಸ್ತರಣೆ

October 2, 2018

ಬೆಂಗಳೂರು: ಮಂತ್ರಿ ಮಂಡಲವನ್ನು ಅಕ್ಟೋಬರ್ 10 ಇಲ್ಲವೆ 12 ರಂದು ವಿಸ್ತರಿಸುವುದಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಇಂದಿಲ್ಲಿ ಪ್ರಕಟಿಸಿದ್ದಾರೆ. ಸಂಪುಟದಲ್ಲಿ ಖಾಲಿ ಇರುವ ಏಳು ಸ್ಥಾನಗಳನ್ನು ಭರ್ತಿ ಮಾಡಿ ಕೆಲ ಸಚಿವರ ಖಾತೆಗಳನ್ನು ಮರು ವಿಂಗಡಣೆ ಮಾಡು ವುದಾಗಿ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮೈತ್ರಿ ಸರ್ಕಾರಕ್ಕಿದ್ದ ಎಲ್ಲ ಗೊಂದಲಗಳು ನಿವಾರಣೆಯಾಗಿವೆ. ತಮ್ಮ ಸರ್ಕಾರ ಪತನಗೊಳಿಸಲು ಬಿಜೆಪಿ ವಿಫಲವಾಗಿ ಇದೀಗ ಕೈ ಚೆಲ್ಲಿ ಕುಳಿತಿದೆ. ಆಡಳಿತದ ಹಿತದೃಷ್ಟಿಯಿಂದ ಮಂತ್ರಿ ಮಂಡಲ ವಿಸ್ತರಿಸಿ, ಹೊಸಬರಿಗೆ ಅವಕಾಶ ಕೊಡಲಾಗುವುದು. ಸರ್ಕಾರದ ಪಾಲು…

ಆಕರ್ಷಣೆ ಕೇಂದ್ರ ಬಿಂದುವಾಗಲಿದೆ ದಸರಾ ಫಲಪುಷ್ಪ ಪ್ರದರ್ಶನ
ಮೈಸೂರು

ಆಕರ್ಷಣೆ ಕೇಂದ್ರ ಬಿಂದುವಾಗಲಿದೆ ದಸರಾ ಫಲಪುಷ್ಪ ಪ್ರದರ್ಶನ

October 2, 2018

ಮೈಸೂರು: ದಸರಾ ಹಿನ್ನೆಲೆಯಲ್ಲಿ ಮೈಸೂರಿನ ಕುಪ್ಪಣ್ಣ ಪಾರ್ಕ್‍ನಲ್ಲಿ ಅ.10ರಿಂದ 21ರವರೆಗೆ ನಡೆಯಲಿರುವ ದಸರಾ ಫಲಪುಷ್ಪ ಪ್ರದರ್ಶನ ಬಗೆ ಬಗೆಯ ಹೂವಿನ ಗಿಡಗಳು ಕಣ್ಮನ ಸೆಳೆಯುವುದರೊಂದಿಗೆ ಹೂವಿನಿಂದಲೇ ತಯಾರಿಸಿರುವ ಅಶೋಕ ಸ್ತಂಭ, ಪೆಂಗ್ವಿನ್, ಫಿರಂಗಿ, ಅಮರ್ ಜವಾನ್ ಸ್ತಂಭ ಸೇರಿದಂತೆ ವಿವಿಧ ಆಕೃತಿಗಳು ಮುದ ನೀಡಲಿವೆ. ನವರಾತ್ರಿಯ ಆರಂಭಕ್ಕೆ ಕೇವಲ 10 ದಿನಗಳು ಬಾಕಿ ಉಳಿದಿದ್ದು, ಎಲ್ಲೆಡೆ ಸಿದ್ಧತಾ ಕಾರ್ಯಗಳು ಭರದಿಂದ ಸಾಗುತ್ತಿದೆ. ಈ ನಡುವೆ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೀಯ ಕೇಂದ್ರ ಬಿಂದುವಾದ ಫಲಪುಷ್ಪ ಪ್ರದರ್ಶನಕ್ಕಾಗಿ ಕುಪ್ಪಣ್ಣ…

ಕೃಷಿ ಅಧಿಕಾರಿಗಳ ವಿರುದ್ಧ ಸಚಿವ ಜಿಟಿಡಿ ಗರಂ
ಮೈಸೂರು

ಕೃಷಿ ಅಧಿಕಾರಿಗಳ ವಿರುದ್ಧ ಸಚಿವ ಜಿಟಿಡಿ ಗರಂ

October 2, 2018

ಮೈಸೂರು: ರೈತರ ಆತ್ಮಹತ್ಯೆ ಪ್ರಕರಣ ಕುರಿತಂತೆ ಕೆಡಿಪಿ ಸಭೆಗೆ ಲಿಖಿತ ತಪ್ಪು ಮಾಹಿತಿ ಒದಗಿಸಿದ್ದ ಕೃಷಿ ಇಲಾಖೆ ಅಧಿಕಾರಿಗಳ ವಿರುದ್ಧ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡರು ಕಿಡಿಕಾರಿದ ಪ್ರಸಂಗ ಇಂದು ನಡೆಯಿತು. ಮೈಸೂರಿನ ಜಿಲ್ಲಾ ಪಂಚಾಯ್ತಿ ಕಚೇರಿ ಸಭಾಂಗಣದಲ್ಲಿ ನಡೆದ ಕೆಡಿಪಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಸಚಿವರಿಗೆ ಮೈಸೂರು ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಕೇವಲ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಕೃಷಿ ಇಲಾಖೆ, ಲಿಖಿತ ಮಾಹಿತಿ ನೀಡಿದ್ದರಿಂದ ಅದರ ಬಗ್ಗೆ ವಿವರಿಸುವಂತೆ…

1 1,351 1,352 1,353 1,354 1,355 1,611
Translate »