ಮೈಸೂರು

ಇಂದಿನ ಬಹುತೇಕ ರಾಜಕಾರಣಿಗಳಿಗೆ ಗಾಂಧೀಜಿ ನೆನಪೇ ಇಲ್ಲ
ಮೈಸೂರು

ಇಂದಿನ ಬಹುತೇಕ ರಾಜಕಾರಣಿಗಳಿಗೆ ಗಾಂಧೀಜಿ ನೆನಪೇ ಇಲ್ಲ

October 3, 2018

ಮೈಸೂರು:  ಮೈಸೂರು ಜಿಲ್ಲೆ ಮತ್ತು ನಗರ ಸ್ವಾತಂತ್ರ್ಯ ಹೋರಾಟಗಾರರ ಸಂಘದ ಮಂಗಳವಾರ ಮಹಾತ್ಮ ಗಾಂಧೀಯವರ 150ನೇ ಜಯಂತಿ ಆಚರಿಸಲಾಯಿತು. ಮೈಸೂರಿನ ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕ ಭವನದ ಆವರಣದಲ್ಲಿ ಹಮ್ಮಿಕೊಂಡಿದ್ದ ಜಯಂತಿ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಡಾ.ಎಂ.ಜಿ.ಕೃಷ್ಣಮೂರ್ತಿ ರಾಷ್ಟ್ರದ ಧ್ವಜಾರೋಹಣ ನೆರವೇರಿಸಿ ಗಾಂಧಿ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿದರು. ಬಳಿಕ ಮಾತನಾಡಿದ ಅವರು, ಇಂದಿನ ರಾಜಕಾರಣಿಗಳಲ್ಲಿ ಬಹುತೇಕರಿಗೆ ಗಾಂಧೀಜಿ ನೆನಪೇ ಇಲ್ಲವಾಗಿದೆ. ಸ್ವಾತಂತ್ರೋತ್ತರ ಭಾರತದಲ್ಲಿ ಹುಟ್ಟಿದ ಇವರಿಗೆ ಗಾಂಧಿಯವರ ಸ್ವಾತಂತ್ರ್ಯ ಚಳುವಳಿ ಹಾಗೂ ಅವರ ತತ್ವಗಳ ಮಹತ್ವದ ಬಗ್ಗೆ ಅರಿವಿಲ್ಲ….

ರಾಹು-ಕೇತುಗಳ್ಯಾರೆಂದು ಸಿದ್ದರಾಮಯ್ಯ ಅವರನ್ನೇ ಕೇಳಿ ಮಾಧ್ಯಮಕ್ಕೆ ಜಿಟಿಡಿ ಪ್ರತಿಕ್ರಿಯೆ
ಮೈಸೂರು

ರಾಹು-ಕೇತುಗಳ್ಯಾರೆಂದು ಸಿದ್ದರಾಮಯ್ಯ ಅವರನ್ನೇ ಕೇಳಿ ಮಾಧ್ಯಮಕ್ಕೆ ಜಿಟಿಡಿ ಪ್ರತಿಕ್ರಿಯೆ

October 3, 2018

ಮೈಸೂರು:  ರಾಹು-ಕೇತು, ಶನಿಗಳೆಲ್ಲಾ ಸೇರಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನನ್ನನ್ನು ಸೋಲಿಸಿದವು ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಹೆಚ್ಚು ಪ್ರತಿಕ್ರಿಯಿಸಲು ನಿರಾಕರಿಸಿದ ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ರಾಹು-ಕೇತುಗಳು ಯಾರೆಂಬುದನ್ನು ಅವರನ್ನೇ ಕೇಳಿ ಎಂದಿದ್ದಾರೆ. ಮೈಸೂರು ಅರಮನೆ ಆವರಣದಲ್ಲಿ ಮಂಗಳವಾರ ಸಿದ್ಧಾರ್ಥನಗರ ಸವಿತಾ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ ಕೇಶಾಲಂಕಾರ ಸೇವಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಹು-ಕೇತುಗಳು ಯಾರೆಂಬುದನ್ನು ಸಿದ್ದರಾಮಯ್ಯ ಅವರನ್ನೇ ಕೇಳಿ ಎಂದರು. ಮೈತ್ರ ಸರ್ಕಾರದ ಸಚಿವ ಸಂಪುಟ ವಿಸ್ತರಣೆ…

ಮೈಸೂರು ವಿವಿ ನೌಕರರ ವೇದಿಕೆಯಿಂದ ಗಾಂಧಿ ಪುತ್ಥಳಿಗೆ ಮಾಲಾರ್ಪಣೆ
ಮೈಸೂರು

ಮೈಸೂರು ವಿವಿ ನೌಕರರ ವೇದಿಕೆಯಿಂದ ಗಾಂಧಿ ಪುತ್ಥಳಿಗೆ ಮಾಲಾರ್ಪಣೆ

October 3, 2018

ಮೈಸೂರು: ಮೈಸೂರು ವಿಶ್ವವಿದ್ಯಾನಿಲಯ ನೌಕರರ ವೇದಿಕೆ ವತಿಯಿಂದ ಮಂಗಳವಾರ ಮೈಸೂರು ನ್ಯಾಯಾಲಯದ ಮುಂಭಾಗದ ಮಹಾತ್ಮ ಗಾಂಧಿ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ 150ನೇ ಗಾಂಧಿ ಜಯಂತಿ ಆಚರಿಸಲಾಯಿತು. ಮಹಾರಾಜ ಕಾಲೇಜು ಪ್ರಾಂಶುಪಾಲರಾದ ಪ್ರೊ.ಸಿ.ಪಿ.ಸುನಿತಾ ಗಾಂಧಿ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಾಚ್ಯವಿದ್ಯಾ ಸಂಶೋಧಾಲಯದ ನಿರ್ದೇಶಕ ಪ್ರೊ.ಎಸ್.ಶಿವರಾಜಪ್ಪ, ಮಹಾತ್ಮ ಗಾಂಧಿಯವರ ಚಿಂತನೆಗಳು ದೇಶದ ಅಭಿವೃದ್ಧಿ, ಶಾಂತಿ ಸೌಹಾರ್ಧತೆ, ಧರ್ಮಗಳನ್ನು ಬೆಸೆಯುವಂತದ್ದಾಗಿತ್ತು. ಹೀಗಾಗಿ ಅವರು 19ನೇ ಶತಮಾನದ ಶಾಂತಿ ಧೂತ ಎನಿಸಿದರು. ಗ್ರಾಮದಿಂದ ದೇಶದ ಉದ್ಧಾರವಾಗುವ ಹಿನ್ನೆಲೆಯಲ್ಲಿ…

ಕೆಸಿ ಬಡಾವಣೆಯಲ್ಲಿ ಕಾವೇರಿ ನೀರು ಪೂರೈಕೆಗೆ ಶಾಸಕ ರಾಮದಾಸ್ ಚಾಲನೆ
ಮೈಸೂರು

ಕೆಸಿ ಬಡಾವಣೆಯಲ್ಲಿ ಕಾವೇರಿ ನೀರು ಪೂರೈಕೆಗೆ ಶಾಸಕ ರಾಮದಾಸ್ ಚಾಲನೆ

October 3, 2018

ಮೈಸೂರು:  ಕುಡಿಯಲು ಕಾವೇರಿ ನೀರು ಪೂರೈಸಬೇಕೆಂಬ ಮೈಸೂರಿನ ಕೆಸಿ ಬಡಾವಣೆಯ ನಿವಾಸಿಗಳ ಬಹುದಿನ ಬೇಡಿಕೆ ಈಡೇರಿದ್ದು, ಕಾವೇರಿ ನೀರು ಸರಬರಾಜಿಗೆ ಮಾಜಿ ಸಚಿವರೂ ಆದ ಶಾಸಕ ಎಸ್.ಎ.ರಾಮದಾಸ್ ಮಂಗಳವಾರ ಚಾಲನೆ ನೀಡಿದರು. ಇಂದು ಬೆಳಿಗ್ಗೆ ಬಡಾವಣೆಯಲ್ಲಿ ನೀರು ಪೂರೈಕೆಯ ಪೈಪ್‍ಲೈನ್ ಆನ್ ಮಾಡುವ ಮೂಲಕ ಕಾವೇರಿ ನೀರು ಸರಬಾರಾಜು ವ್ಯವಸ್ಥೆಗೆ ಅವರು ಚಾಲನೆ ನೀಡಿದರು. ಜೊತೆಗೆ ಪ್ರತಿ ದಿನ 2 ಗಂಟೆಗಳ ಕಾಲ ಕಾವೇರಿ ನೀರು ನೀಡಲು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚನೆ ನೀಡಿದರು. ಇದೇ ವೇಳೆ ಬಡಾವಣೆಯಲ್ಲಿರುವ…

ಸುಚಿತ್ರ ಗ್ಯಾಲರಿಯಲ್ಲಿ ಗಾಂಧೀಜಿ ಹೋರಾಟಗಳ ಚಿತ್ರಕಲಾ ಪ್ರದರ್ಶನ
ಮೈಸೂರು

ಸುಚಿತ್ರ ಗ್ಯಾಲರಿಯಲ್ಲಿ ಗಾಂಧೀಜಿ ಹೋರಾಟಗಳ ಚಿತ್ರಕಲಾ ಪ್ರದರ್ಶನ

October 3, 2018

ಮೈಸೂರು: ಮೈಸೂರಿನ ಕಲಾಮಂದಿರದ ಸುಚಿತ್ರ ಆರ್ಟ್ ಗ್ಯಾಲರಿಯಲ್ಲಿ ಕಲಾವಿದ ಯು.ಜಿ.ಮೋಹನ್ ಕುಮಾರ್ ಆರಾಧ್ಯ ಅವರು ರಚಿಸಿರುವ ಮಹಾತ್ಮ ಗಾಂಧೀಜಿ ಅವರ ಸ್ವಾತಂತ್ರ್ಯ ಸಂಗ್ರಾಮಗಳನ್ನು ಬಿಂಭಿಸುವ ಚಿತ್ರಕಲಾ ಪ್ರದರ್ಶನ ಇಂದು ನಡೆಯಿತು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕನ್ನಡ ಸಾಹಿತ್ಯ ಕಲಾಕೂಟದ ಆಶ್ರಯದಲ್ಲಿ ಗಾಂಧಿ ಜಯಂತಿ ಅಂಗವಾಗಿ ಏರ್ಪಡಿಸಿದ್ದ ‘ಗಾಂಧೀಜಿ-ಸ್ವಾತಂತ್ರ್ಯ ಹೋರಾಟಗಳು’ ಕುರಿತಾದ ಚಿತ್ರ ಪ್ರದರ್ಶನವನ್ನು ಮೈಸೂರು ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಪಕದ ಪ್ರೊ.ಜಿ.ಟಿ.ರಾಮಚಂದ್ರಪ್ಪ ಅವರು ಉದ್ಘಾಟಿಸಿದರು. ಚಿತ್ರ ಪ್ರದರ್ಶನ ವೀಕ್ಷಿಸಿದ ನಂತರ ಮಾತನಾಡಿದ ಅವರು, ಸ್ವಾತಂತ್ರ್ಯ…

ದುನಿಯಾ ವಿಜಯ್‍ಗೆ ಕೀರ್ತಿ ಗೌಡ  5ನೇ ಪತ್ನಿ: ಮೊದಲ ಪತ್ನಿ ನಾಗರತ್ನ
ಮೈಸೂರು

ದುನಿಯಾ ವಿಜಯ್‍ಗೆ ಕೀರ್ತಿ ಗೌಡ  5ನೇ ಪತ್ನಿ: ಮೊದಲ ಪತ್ನಿ ನಾಗರತ್ನ

October 3, 2018

ಬೆಂಗಳೂರು: ನಟ ದುನಿಯಾ ವಿಜಯ್ ಬಾಳಿನಲ್ಲಿ ಮತ್ತೆ ಬಿರುಗಾಳಿ ಎದ್ದಿದೆ. ವಿಜಿಗೆ ಕೀರ್ತಿ ಗೌಡ ಎರಡನೇ ಪತ್ನಿ ಅಲ್ಲ. ಐದನೇ ಪತ್ನಿ ಎಂದು ಅವರ ಮೊದಲ ಪತ್ನಿ ನಾಗರತ್ನ ಅವರು ಮಂಗಳವಾರ ಗಂಭೀರ ಆರೋಪ ಮಾಡಿದ್ದಾರೆ. ನಿನ್ನೆ ರಾತ್ರಿ ಪತ್ರಿಕಾಗೋಷ್ಠಿ ನಡೆಸಿ, ನಾಗರತ್ನ ವಿರುದ್ಧ ದುನಿಯಾ ವಿಜಯ್ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಇಂದು ಪತ್ರಿಕಾಗೋಷ್ಠಿ ನಡೆಸಿದ ನಾಗರತ್ನ ಅವರು, ಚಿನ್ನದ ಮೊಟ್ಟೆ ಇಡೋ ಕೋಳಿ ನೋಡ್ಕೊಂಡು ನಾನು ಬಂದಿಲ್ಲ. ಅದನ್ನು ನೋಡಿ ಬಂದವರು ಇನ್ನೊಬ್ಬರು. ನನಗೆ…

ನಂಜನಗೂಡು ಜೈಲಲ್ಲಿ ಗಾಂಧಿ ಜಯಂತಿ
ಮೈಸೂರು

ನಂಜನಗೂಡು ಜೈಲಲ್ಲಿ ಗಾಂಧಿ ಜಯಂತಿ

October 3, 2018

ಅಹಿಂಸಾ ಮಾರ್ಗದಲ್ಲಿ ಸ್ವಾತಂತ್ರ ಹೋರಾಟದ ಸ್ವರೂಪವನ್ನು ಬದಲಿಸಿದವರು ಮಹಾತ್ಮ ಗಾಂಧೀ: ಬಿಜೆಪಿ ಮುಖಂಡ ಎನ್.ವಿ.ಪ್ರಣೀಶ್ ನಂಜನಗೂಡು:  ಅಹಿಂಸಾ ಮಾರ್ಗದ ಮೂಲಕ ಸ್ವಾತಂತ್ರ ಹೋರಾಟದ ಸ್ವರೂಪವನ್ನು ಬದಲಿಸಿದ ಮಹಾತ್ಮ ಗಾಂಧೀಜಿಯವರು, ಆ ಮೂಲಕ ಜನಸಾಮನ್ಯರು ಸಹ ಸ್ವಾತಂತ್ರ ಚಳುವಳಿಯಲ್ಲಿ ಭಾಗವಹಿಸುವಂತೆ ಮಾಡಿದರು ಎಂದು ಎಂದು ಹಿರಿಯ ಬಿಜೆಪಿ ಮುಖಂಡ ಹಾಗೂ ಪಕ್ಷದ ವಿಭಾಗೀಯ ಸಹ ಪ್ರಭಾರಿಗಳಾದ ಎನ್.ವಿ ಪಣೀಶ್, ತಿಳಿಸಿದ್ದಾರೆ. ರಾಷ್ಟ್ರಪೀತ ಮಹಾತ್ಮ ಗಾಂದಿಜೀಯವರ 150ನೇ ಜಯಂತಿಯ ವರ್ಷದ ಸವಿನೆನಪಿಗಾಗಿ ಭಾರತೀಯ ಜನತಾ ಪಾರ್ಟಿ ನಂಜನಗೂಡು ವಿಧಾನ ಸಭಾ…

ಹಿರಿಯ ಪೌರ ಕಾರ್ಮಿಕ ಮಹಿಳೆಯರ ಸನ್ಮಾನಿಸಿ ಗಾಂಧಿ ಜಯಂತಿ ಆಚರಣೆ
ಮೈಸೂರು

ಹಿರಿಯ ಪೌರ ಕಾರ್ಮಿಕ ಮಹಿಳೆಯರ ಸನ್ಮಾನಿಸಿ ಗಾಂಧಿ ಜಯಂತಿ ಆಚರಣೆ

October 3, 2018

ಮೈಸೂರು: ಕಳೆದ ಮೂರು ದಶಕಗಳಿಂದ ಮೈಸೂರಿನ ಸ್ವಚ್ಛತೆಯಲ್ಲಿ ತೊಡಗಿಸಿಕೊಂಡಿದ್ದ ಐವರು ಹಿರಿಯ ಪೌರ ಕಾರ್ಮಿಕ ಮಹಿಳೆಯರಿಗೆ ಮೈಸೂರಿನ ಆರೋಹಣಂ ಫೌಂಡೇಷನ್ ವತಿಯಿಂದ ಗಾಂಧಿ ಜಯಂತಿ ಅಂಗವಾಗಿ ಸನ್ಮಾನಿಸಲಾಯಿತು. ಹಿರಿಯ ಪೌರ ಕಾರ್ಮಿಕ ಮಹಿಳೆಯರಾದ ನಂಜಮ್ಮ, ರಾಜಮ್ಮ, ಕಮಲಾ, ಕದ್ರಿ, ಜಯಮ್ಮ ಸನ್ಮಾನಿಸಲ್ಪವರು. ಮೈಸೂರು ಜಿಲ್ಲಾ ಅಗ್ನಿ ಶಾಮಕ ಅಧಿಕಾರಿ ಭರತ್‍ಕುಮಾರ್ ಅವರು ಎಲ್ಲರಿಗೂ ಶಾಲು ಹೊದಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಆರೋಹಣಂ ಫೌಂಡೇಷನ್‍ನ ಅಧ್ಯಕ್ಷೆ ಸುನೀತಾ ಮುನೀಶ್, ಉಪಾಧ್ಯಕ್ಷ ದರ್ಶನ್, ಕಾರ್ಯದರ್ಶಿ ಮಲ್ಲೇಶ್, ಶಂಸುದ್ದೀನ್, ಮುನೀಶ್‍ಕುಮಾರ್ ಸುವರ್ಣ,…

14.05 ಲಕ್ಷ ರೂ. ಲಾಭದಲ್ಲಿ ಅಹಲ್ಯ ಮಹಿಳಾ ಸಹಕಾರ ಸಂಘ
ಮೈಸೂರು

14.05 ಲಕ್ಷ ರೂ. ಲಾಭದಲ್ಲಿ ಅಹಲ್ಯ ಮಹಿಳಾ ಸಹಕಾರ ಸಂಘ

October 3, 2018

ಕೆ.ಆರ್.ನಗರ:  ಪಟ್ಟಣದ ಅಹಲ್ಯ ಮಹಿಳಾ ಸಹಕಾರ ಸಂಘವು 14.05 ಲಕ್ಷ ರೂ.ಗಳ ಲಾಭ ದಲ್ಲಿದೆ ಎಂದು ಬ್ಯಾಂಕಿನ ಅಧ್ಯಕ್ಷೆ ಶಾಂತಮ್ಮ ವಿಶ್ವನಾಥ್ ಹೇಳಿದರು. ಪಟ್ಟಣದ ಆರ್.ಆರ್. ಕನ್ವೆನ್ಷನ್ ಹಾಲ್ ನಲ್ಲಿ ನಡೆದ ಬ್ಯಾಂಕಿನ ವಾರ್ಷಿಕ ಮಹಾ ಸಭೆಯಲ್ಲಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಬ್ಯಾಂಕ್ ಸ್ವಂತ ಕಟ್ಟಡ ನಿರ್ಮಾಣದ ಗುರಿ ಹೊಂದಿದೆ ಎಂದರು. ಸಾಲಗಾರರು ಸಕಾಲದಲ್ಲಿ ಸಾಲ ಮರುಪಾವತಿ ಮಾಡಿ ಬ್ಯಾಂಕಿನ ಅಭಿವೃದ್ಧಿಗೆ ಸಹಕರಿಸುವಂತೆ ಮನವಿ ಮಾಡಿದರು. ಮುಂದಿನ ದಿನಗಳಲ್ಲಿ ಷೇರು ದಾರರ ಸಂಖ್ಯೆಯನ್ನು ಹೆಚ್ಚಿಸಲು ಎಲ್ಲ…

ಗಾಂಧಿ ನಾಡಲ್ಲಿ ಹುಟ್ಟಿರುವುದೇ ನಮಗೆ ಹೆಮ್ಮೆ
ಮೈಸೂರು

ಗಾಂಧಿ ನಾಡಲ್ಲಿ ಹುಟ್ಟಿರುವುದೇ ನಮಗೆ ಹೆಮ್ಮೆ

October 3, 2018

ಗಾಂಧಿ ಭವನದಲ್ಲಿ ಗಾಂಧಿ ಜಯಂತಿಯಲ್ಲಿ ಗಾಂಧೀವಾದಿ ಟಿ.ವೆಂಕಟಾಚಲಯ್ಯ ಅಭಿಮತ ಮೈಸೂರು: ಮಹಾತ್ಮ ಗಾಂಧಿ ಹುಟ್ಟಿದ ಭಾರತದಲ್ಲಿ ಹುಟ್ಟಿದ್ದೇವೆಂಬುದೇ ನಮಗೆ ಹೆಮ್ಮೆಯ ವಿಚಾರ ಎಂದು ಸ್ವಾತಂತ್ರ್ಯ ಹೋರಾಟಗಾರ, ಗಾಂಧೀವಾದಿ ಟಿ.ವೆಂಕಟಾಚಲಯ್ಯ ಸಂತಸದಿಂದ ಹೇಳಿದರು. ಮೈಸೂರು ವಿವಿ ಗಾಂಧಿ ಅಧ್ಯಯನ ಕೇಂದ್ರ, ಜ್ಞಾನದೀಪ ಶಿಕ್ಷಣ ಸಂಸ್ಥೆಗಳು 150ನೇ ಗಾಂಧಿ ಜಯಂತಿ ಪ್ರಯುಕ್ತ ಮಂಗವಾರ ಏರ್ಪಡಿಸಿದ್ದ ವಿಶ್ವ ಅಹಿಂಸಾ ದಿನಾಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಇಂದು ಗಾಂಧಿ ಜಯಂತಿ ಜೊತೆಗೆ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಹಾಗೂ ವಿಶ್ವ ಅಹಿಂಸಾ…

1 1,350 1,351 1,352 1,353 1,354 1,611
Translate »