ಮೈಸೂರು

ನಾಳೆ ಡಿ.ದೇವರಾಜ ಅರಸು ಜನ್ಮ ದಿನಾಚರಣೆ ವಿಚಾರ ಸಂಕಿರಣ
ಮೈಸೂರು

ನಾಳೆ ಡಿ.ದೇವರಾಜ ಅರಸು ಜನ್ಮ ದಿನಾಚರಣೆ ವಿಚಾರ ಸಂಕಿರಣ

October 5, 2018

ಮೈಸೂರು: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ವತಿ ಯಿಂದ ಅ.6ರಂದು ಬೆಳಿಗ್ಗೆ 11 ಗಂಟೆಗೆ ಮೈಸೂರಿನ ಜೆಎಲ್‍ಬಿ ರಸ್ತೆ ರೋಟರಿ ಸಭಾಂಗಣದಲ್ಲಿ ಡಿ.ದೇವರಾಜ ಅರಸು ಜನ್ಮ ದಿನಾಚರಣೆ ಹಿನ್ನೆಲೆಯಲ್ಲಿ ದಲಿತ, ಹಿಂದುಳಿದ, ಅಲ್ಪಸಂಖ್ಯಾ ತರ ಒಗ್ಗಟ್ಟಿನ ಹೋರಾಟ ಕುರಿತು ವಿಚಾರ ಸಂಕಿರಣ ಏರ್ಪ ಡಿಸಲಾಗಿದೆ ಎಂದು ದಸಂಸ ಮುಖಂಡ ರಾಜಣ್ಣ ಇಟ್ನಾ ತಿಳಿಸಿದರು. ಪ್ರಜಾಪ್ರಭುತ್ವ ರಕ್ಷಣೆ, ಪೂರ್ಣ ಪ್ರಮಾಣದ ಸಾಮಾಜಿಕ ನ್ಯಾಯ ಸ್ಥಾಪನೆ, ಭಿನ್ನ ಪಂಥ, ಧರ್ಮ, ಸಂಸ್ಕøತಿ ಯನ್ನು ಹೊಂದಿರುವವರು ಸಾಮರಸ್ಯದಿಂದ ಬದುಕಬೇಕು ಎಂಬ…

ಲೋಕಸಭಾ ಚುನಾವಣೆಗೆ ಅಭ್ಯರ್ಥಿ ಹುಡುಕಾಟದಲ್ಲಿ ಎಂಇಪಿ
ಮೈಸೂರು

ಲೋಕಸಭಾ ಚುನಾವಣೆಗೆ ಅಭ್ಯರ್ಥಿ ಹುಡುಕಾಟದಲ್ಲಿ ಎಂಇಪಿ

October 5, 2018

ಮೈಸೂರು:  ಮುಂದಿನ ಲೋಕಸಭಾ ಚುನಾವಣೆಯಲ್ಲಿ ಆಲ್ ಇಂಡಿಯಾ ಮಹಿಳಾ ಎಂಪವರ್‍ಮೆಂಟ್ ಪಾರ್ಟಿಯು (ಎಐಎಂಇಪಿ) ರಾಜ್ಯದ ಎಲ್ಲಾ ಸಂಸತ್ ಕ್ಷೇತ್ರಗಳಲ್ಲೂ ಸ್ಪರ್ಧಿಸಲಿದ್ದು, ಈ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಹುಡುಕಾಟದಲ್ಲಿ ನಿರತವಾಗಿದೆ ಎಂದು ಪಕ್ಷದ ಮೈಸೂರು ಜಿಲ್ಲಾಧ್ಯಕ್ಷ ಷರೀಫ್ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಂಧ್ರಪ್ರದೇಶ ಮೂಲದ ಡಾ.ನೌಹೀರಾ ಶೇಕ್ ಎಂಬ ಮಹಿಳೆ ಸ್ಥಾಪಿಸಿದ ಪಕ್ಷ ಕಳೆದ ವಿಧಾನಸಭಾ ಚುನಾವಣೆಯಲ್ಲಿಯೂ ಸ್ಪರ್ಧಿ ಸಿತ್ತು. ಮಹಿಳಾ ಸಬಲೀಕರಣಕ್ಕೆ ಒತ್ತು ನೀಡುವುದರೊಂದಿಗೆ ತನ್ನದೇ ಗುರಿ, ಧ್ಯೇಯ ಹೊಂದಿರುವ ಪಕ್ಷದ…

ಅ.7, ಶ್ರೀ ವಿದ್ಯಾ-ನಾದವಿದ್ಯಾ: ವಿಶೇಷ ಸಂಗೀತ ರೂಪಕ
ಮೈಸೂರು

ಅ.7, ಶ್ರೀ ವಿದ್ಯಾ-ನಾದವಿದ್ಯಾ: ವಿಶೇಷ ಸಂಗೀತ ರೂಪಕ

October 5, 2018

ಮೈಸೂರು: ಭಾರತ ಸರ್ಕಾರದ ಸಂಸ್ಕøತಿ ಸಚಿವಾಲಯದ ವತಿಯಿಂದ ಅ.7ರಂದು ಸಂಜೆ 6 ಗಂಟೆಗೆ ಸಂಗೀತ ವಿದ್ವಾನ್ ಡಾ. ಆರ್. ನಂದಕುಮಾರ್ ಮತ್ತು ಅವರು ಶಿಷ್ಯ ವೃಂದದವರಿಂದ ನಗರದ ಜೆಎಲ್‍ಬಿ ರಸ್ತೆಯಲ್ಲಿರುವ ಶ್ರೀ ವಾಸುದೇವಾ ಚಾರ್ಯ ಭವನದಲ್ಲಿ ಶ್ರೀವಿದ್ಯಾ-ನಾದವಿದ್ಯಾ: ವಿಶೇಷ ಸಂಗೀತ ರೂಪಕ ಕಾರ್ಯ ಕ್ರಮ ಏರ್ಪಡಿಸಲಾಗಿದೆ. ಪಕ್ಕವಾದ್ಯದಲ್ಲಿ ವಿದ್ವಾನ್ ಪ್ರೊ. ಜಿ.ಎಸ್. ರಾಮಾನುಜಂ, ವಿದ್ವಾನ್ ವಿ.ಎಸ್. ರಮೇಶ್ ಮತ್ತು ವಿದ್ವಾನ್ ವಿಶ್ವಜಿತ್ ಸಹಕಾರ ನೀಡಲಿದ್ದಾರೆ. ಅಂತಾರಾಷ್ಟ್ರೀಯ ಖ್ಯಾತಿಯ ಸಂಗೀತ ವಿದ್ವಾನ್, ಪದ್ಮಶ್ರೀ ಪ್ರಶಸ್ತಿ ಪುರಸ್ಕøತರಾದ ಡಾ.ಆರ್.ಸತ್ಯನಾರಾಯಣ ಸಾನ್ನಿಧ್ಯ…

ಹುಲಿ ಚರ್ಮ ಮಾರಾಟ ಯತ್ನ: ಓರ್ವನ ಬಂಧನ
ಮೈಸೂರು

ಹುಲಿ ಚರ್ಮ ಮಾರಾಟ ಯತ್ನ: ಓರ್ವನ ಬಂಧನ

October 5, 2018

ಮೈಸೂರು:  ಹುಲಿ ಚರ್ಮವನ್ನು ಮಾರಾಟ ಮಾಡಲು ಯತ್ನಿಸು ತ್ತಿದ್ದ ವ್ಯಕ್ತಿಯೋರ್ವನನ್ನು ಅರಣ್ಯ ಸಂಚಾರ ದಳದ ಪೊಲೀಸರು ಬಂಧಿಸಿದ್ದಾರೆ. ಪಿರಿಯಾಪಟ್ಟಣ ತಾಲ್ಲೂಕು ಚೌತಿ ಗ್ರಾಮದ ಗೋವಿಂದೇಗೌಡ ಬಂಧಿತ ನಾಗಿದ್ದು, ಈತ ಮೈಸೂರು ಸಮೀಪದ ಇಲ ವಾಲದ ಬಳಿ ಗುರುವಾರ ಹುಲಿ ಚರ್ಮ ಮಾರಾಟ ಮಾಡಲು ಯತ್ನಿಸುತ್ತಿದ್ದ ಎನ್ನ ಲಾಗಿದೆ. ಎಂ.ಟಿ.ಪೂವಯ್ಯ ಅರಣ್ಯ ಸಂಚಾರ ದಳ, ಕಾರ್ಯಾಚರಣೆ ನಡೆಸಿ, ಇಲವಾಲ ಸಮೀಪದ ನಿರ್ಜನ ಪ್ರದೇಶದಲ್ಲಿ ಆರೋಪಿ ಯನ್ನು ಬಂಧಿಸಿದೆ. ಅಲ್ಲದೆ ಮಾರಾಟ ಮಾಡ ಲೆತ್ನಿಸಿದ ಹುಲಿ ಚರ್ಮವನ್ನೂ ವಶಪಡಿಸಿ ಕೊಂಡು,…

ಅ.10ರಂದು `ಗಜ ಗೌರವ-ಬಲರಾಮನ ಕಥೆ’ ಪುಸ್ತಕ ಬಿಡುಗಡೆ
ಮೈಸೂರು

ಅ.10ರಂದು `ಗಜ ಗೌರವ-ಬಲರಾಮನ ಕಥೆ’ ಪುಸ್ತಕ ಬಿಡುಗಡೆ

October 5, 2018

ಮೈಸೂರು:  ಮೈಸೂರು ದಸರಾ ಜಂಬೂ ಸವಾರಿಯನ್ನು 13 ಬಾರಿ ಯಶಸ್ವಿಯಾಗಿ ನಡೆಸಿದ ಆನೆ ಬಲ ರಾಮನನ್ನು ಆಧರಿಸಿ ಅಮೆರಿಕಾದಲ್ಲಿ ವಾಸವಾಗಿರುವ ಅನಿವಾಸಿ ಭಾರತೀಯ ಇಂಜಿನಿಯರ್ ಭಾಸ್ಕರ್ ಬರೆದಿರುವ `ಗಜಗೌರವ -ಬಲರಾಮನ ಕಥೆ’ ಪುಸ್ತಕ ಅ.10ರಂದು ಸಂಜೆ 7 ಗಂಟೆಗೆ ಮೈಸೂರು ಅರಮನೆ ವೇದಿಕೆಯಲ್ಲಿ ಬಿಡುಗಡೆ ಮಾಡಲಾಗುತ್ತಿದೆ ಎಂದು ಕೂಚಿಪುಡಿ ಗುರು ಡಾ.ವೀಣಾ ಮೂರ್ತಿ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೇ ಸಂದರ್ಭದಲ್ಲಿ ಈ ಕಥೆಯನ್ನಾಧರಿಸಿ ನೃತ್ಯ ರೂಪಕವೂ ನಡೆಯಲಿದೆ….

ವೃದ್ಧೆ ನಾಪತ್ತೆ
ಮೈಸೂರು

ವೃದ್ಧೆ ನಾಪತ್ತೆ

October 5, 2018

ಮೈಸೂರು: ಕುಂಬಾರಕೊಪ್ಪಲು ನಿವಾಸಿ ಲಕ್ಷ್ಮಮ್ಮ ಎಂಬುವರು ನಾಪತ್ತೆಯಾದ ಬಗ್ಗೆ ಲಷ್ಕರ್ ಪೊಲೀಸ್ ಠಾಣೆ ಯಲ್ಲಿ ದೂರು ದಾಖಲಾಗಿದೆ. ಈ ಬಗ್ಗೆ ಸೆ.25ರಂದು ಠಾಣೆಗೆ ನೀಡಿರುವ ದೂರಿನಲ್ಲಿ ಲಕ್ಷ್ಮಮ್ಮ(80) ಫೆ.27ರಂದು ಕುಂಬಾರ ಕೊಪ್ಪಲಿನಿಂದ ಲಷ್ಕರ್ ಮೊಹಲ್ಲಾದ ಕುಂಬಾರಗೇರಿಗೆ ಬಂದ ವರು, ಮನೆಗೆ ವಾಪಸ್ ಹೋಗಿಲ್ಲ ಎಂದ ಮೊಮ್ಮಗ ಕಿರಣ್ ಲಷ್ಕರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಯಾರಿಗಾ ದರೂ ಮಾಹಿತಿ ಇದ್ದಲ್ಲಿ, ಲಷ್ಕರ್ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 2418107, 2418307 ಅಥವಾ 94480802232 ಸಂಪರ್ಕಿಸಬೇಕೆಂದು ಪೊಲೀಸ್ ಪ್ರಕಟಣೆ…

ಹೆದ್ದಾರಿ ಅಗಲೀಕರಣ ವೇಳೆ ಮನೆ ಧ್ವಂಸ ಪ್ರಕರಣ
ಮೈಸೂರು

ಹೆದ್ದಾರಿ ಅಗಲೀಕರಣ ವೇಳೆ ಮನೆ ಧ್ವಂಸ ಪ್ರಕರಣ

October 5, 2018

2 ತಿಂಗಳೊಳಗೆ ಮನೆ ನಿರ್ಮಾಣಕ್ಕೆ ಮಾನವ ಹಕ್ಕು ಆಯೋಗ ಆದೇಶ ಕೊಳ್ಳೇಗಾಲ:  ಕೊಳ್ಳೇಗಾಲ ಪಟ್ಟಣದ ನಡುವೆ ಹಾದು ಹೋಗುವ ಹೆದ್ದಾರಿ ಅಗಲೀಕರಣದ ವೇಳೆ ಮನೆ ಕಳೆದುಕೊಂಡ ಹೊಸ ಅಣಗಳ್ಳಿ ನಿವಾಸಿ ಮರಿಸಿದ್ದಯ್ಯ ಎಂಬುವರಿಗೆ 2 ತಿಂಗಳೊಳಗಾಗಿ ಮನೆ ನಿರ್ಮಿಸಿಕೊಡುವಂತೆ ರಾಷ್ಟ್ರೀಯ ಮಾನವ ಹಕ್ಕು ಆಯೋಗ ಮಹತ್ವದ ಆದೇಶ ನೀಡಿದೆ. ಪಟ್ಟಣದಲ್ಲಿ 36 ಕೋಟಿ ರೂ. ಅಂದಾಜಿನಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾದೀಕಾರ ನಡೆಸಿದ ರಸ್ತೆ ಅಗಲೀಕರಣ ಹಾಗೂ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿ ವೇಳೆ ಯಾವುದೇ ನೋಟಿಸ್ ನೀಡದೆ,…

ಮಡಿಕೇರಿ ದಸರಾಕ್ಕೆ ಅನುದಾನ ನೀಡದಿದ್ದಲ್ಲಿ ಸ್ವತಂತ್ರ ನಿರ್ವಹಣೆ
ಮೈಸೂರು

ಮಡಿಕೇರಿ ದಸರಾಕ್ಕೆ ಅನುದಾನ ನೀಡದಿದ್ದಲ್ಲಿ ಸ್ವತಂತ್ರ ನಿರ್ವಹಣೆ

October 5, 2018

ದಶಮಂಟಪ ಸಮಿತಿ ಅಧ್ಯಕ್ಷ ರವಿಕುಮಾರ್ ಎಚ್ಚರಿಕೆ ಮಡಿಕೇರಿ:  ಐತಿಹಾಸಿಕ ಮಡಿಕೇರಿ ದಸರಾದ ಪ್ರಮುಖ ಆಕರ್ಷಣೆ ಯಾಗಿರುವ ದಶ ಮಂಟಪಗಳಿಗೆ ಸರ ಕಾರದಿಂದ ಅನುದಾನ ಒದಗಿಸುವಲ್ಲಿ ದಸರಾ ಸಮಿತಿ ವಿಫಲವಾದಲ್ಲಿ ದಶ ಮಂಟಪ ಸಮಿತಿ ಮುಂದಿನ ದಿನಗಳಲ್ಲಿ ದಸರಾ ಸಮಿತಿಯಿಂದ ಹೊರಬಂದು ಸ್ವತಂತ್ರವಾಗಿ ಕಾರ್ಯ ನಿರ್ವಹಿಸಲಿದೆ ಎಂದು ದಶಮಂಟಪ ಸಮಿತಿ ಅಧ್ಯಕ್ಷ ರವಿಕುಮಾರ್ ಎಚ್ಚರಿಕೆ ನೀಡಿದ್ದಾರೆ. ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರವಿಕುಮಾರ್, ಮುಂಗಾರು ಮಳೆಯ ಆರ್ಭಟದಿಂದ ಪ್ರಾಕೃತಿಕ ವಿಕೋಪ ಸಂಭವಿಸಿದ್ದರೂ ಮುಂಬರುವ ದಿನಗಳಲ್ಲಿ ಹೆಚ್ಚಿನ ಅನಾಹುತಗಳು ಉಂಟಾಗದಂತೆ ಮತ್ತು…

ದಸರಾ ಉದ್ಘಾಟನೆಗೆ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಶ್ರೀಮತಿ ಸುಧಾಮೂರ್ತಿಯವರಿಗೆ ಅಧಿಕೃತ ಆಹ್ವಾನ
ಮೈಸೂರು

ದಸರಾ ಉದ್ಘಾಟನೆಗೆ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಶ್ರೀಮತಿ ಸುಧಾಮೂರ್ತಿಯವರಿಗೆ ಅಧಿಕೃತ ಆಹ್ವಾನ

October 4, 2018

ರಾಜ್ಯಪಾಲರು, ಮುಖ್ಯಮಂತ್ರಿ, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ, ಉಪಮುಖ್ಯಮಂತ್ರಿ ಡಾ.ಪರಮೇಶ್ವರ್‍ಗೂ ಆಮಂತ್ರಣ ಬೆಂಗಳೂರು: ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆಗೆ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಶ್ರೀಮತಿ ಸುಧಾಮೂರ್ತಿ ಅವರಿಗೆ ಸರ್ಕಾರ ಆಹ್ವಾನ ನೀಡಿದೆ. ಮೈಸೂರು ಜಿಲ್ಲಾ ಉಸ್ತುವಾರಿ ಹೊಣೆ ಹೊತ್ತ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅವರ ನೇತೃತ್ವದಲ್ಲಿ ಇಂದು ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಸುಧಾಮೂರ್ತಿ ಅವರನ್ನು ಭೇಟಿ ಮಾಡಿ ವಿಧ್ಯುಕ್ತವಾಗಿ ಆಹ್ವಾನ ನೀಡಿದರು. ನಗರದ ಇನ್ಫೋಸಿಸ್ ಫೌಂಡೇಶನ್ ಕಚೇರಿಗೆ ಆಗಮಿಸಿದ ನಿಯೋಗ, ಸುಧಾ ಮೂರ್ತಿಯವರಿಗೆ ದಸರಾ ಹಬ್ಬ ಉದ್ಘಾಟಕರಾಗಿ…

ಖಾಯಂಮಾತಿಗೆ ಆಗ್ರಹಿಸಿ ಮೈಸೂರು ಪಾಲಿಕೆ ಪೌರ ಕಾರ್ಮಿಕರ ಅನಿರ್ದಿಷ್ಟಾವಧಿ ಮುಷ್ಕರ ಆರಂಭ
ಮೈಸೂರು

ಖಾಯಂಮಾತಿಗೆ ಆಗ್ರಹಿಸಿ ಮೈಸೂರು ಪಾಲಿಕೆ ಪೌರ ಕಾರ್ಮಿಕರ ಅನಿರ್ದಿಷ್ಟಾವಧಿ ಮುಷ್ಕರ ಆರಂಭ

October 4, 2018

ಮೈಸೂರು: ಸೇವಾ ಖಾಯಂಮಾತಿ ಹಾಗೂ ಇತರ ಸೌಲಭ್ಯಗಳಿಗೆ ಆಗ್ರಹಿಸಿ ಮೈಸೂರು ಮಹಾನಗರ ಪಾಲಿಕೆಯ ಸುಮಾರು 2000 ಪೌರಕಾರ್ಮಿಕರು ಸ್ವಚ್ಛತಾ ಕೆಲಸ ಸ್ಥಗಿತಗೊಳಿಸಿ ಇಂದಿನಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ. ತಮ್ಮ ಬೇಡಿಕೆಯನ್ನು ಈಡೇರಿಸಿ ಸರ್ಕಾರ ಲಿಖಿತ ಆದೇಶ ಹೊರಡಿ ಸುವವರೆಗೂ ತಾವು ಮುಷ್ಕರ ಸ್ಥಗಿತಗೊಳಿಸುವುದಿಲ್ಲ ಎಂದು ಪಟ್ಟು ಹಿಡಿದಿರುವ ಪೌರಕಾರ್ಮಿಕರು ಸಯ್ಯಾಜಿರಾವ್ ರಸ್ತೆಯಲ್ಲಿರುವ ಪಾಲಿಕೆ ಪ್ರಧಾನ ಕಚೇರಿ ಎದುರು ಫುಟ್‍ಪಾತ್‍ನಲ್ಲಿ ಪೆಂಡಾಲ್ ಹಾಕಿಕೊಂಡು ಧರಣಿ ನಡೆಸುತ್ತಿದ್ದಾರೆ. ಕರ್ನಾಟಕ ರಾಜ್ಯ ನಗರ ಪಾಲಿಕೆ, ನಗರಸಭೆ-ಪುರಸಭೆಗಳ ಪೌರಕಾರ್ಮಿಕರ ಮಹಾಸಂಘದ ರಾಜ್ಯಾಧ್ಯಕ್ಷರಾದ ಕರ್ನಾಟಕ…

1 1,347 1,348 1,349 1,350 1,351 1,611
Translate »