ಮಲೆ ಮಹದೇಶ್ವರಬೆಟ್ಟ: ವನ್ಯಜೀವಿ ಗಳ ಸಂರಕ್ಷಣೆ ದೃಷ್ಟಿಯಿಂದ ಶೀಘ್ರದಲ್ಲಿ ಮಲೆ ಮಹದೇಶ್ವರ ಬೆಟ್ಟಕ್ಕೆ ರಾತ್ರಿ ವೇಳೆ ವಾಹನ ಸಂಚಾರ ನಿರ್ಬಂಧಿಸಲು ಅರಣ್ಯ ಇಲಾಖೆ ನಿರ್ಧರಿಸಿದ್ದು, ಸರ್ಕಾರದ ಅನುಮತಿ ಪಡೆದು ಬಂಡಿಪುರ ಅರಣ್ಯದಲ್ಲಿ ಜಾರಿಗೊಳಿಸಿರುವಂತೆ ರಾತ್ರಿ 9 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ಎಲ್ಲಾ ವಾಹನಗಳ ಸಂಚಾರಕ್ಕೆ ಬ್ರೇಕ್ ಹಾಕಲಾಗುತ್ತಿದೆ. ಮಲೆ ಮಹದೇಶ್ವರಬೆಟ್ಟ ಅರಣ್ಯ ಪ್ರದೇಶದಲ್ಲಿ ಹುಲಿ, ಚಿರತೆ, ಆನೆ ಸೇರಿದಂತೆ ವಿವಿಧ ವನ್ಯಜೀವಿಗಳಿದ್ದು, ಅರಣ್ಯ ಇಲಾಖೆ ಮಹದೇಶ್ವರ ಬೆಟ್ಟದ ಅರಣ್ಯ ಪ್ರದೇಶವನ್ನು ವನ್ಯಧಾಮವೆಂದು ಈಗಾಗಲೇ ಘೋಷಿಸಿ, ವನ್ಯಸಂಪತ್ತಿನ…
ಚಾಮುಂಡಿಬೆಟ್ಟಕ್ಕೆ ಅಂದು ರಾತ್ರಿ 8ಕ್ಕೆ ಬಸ್ ಸಂಚಾರ ಸ್ಥಗಿತ
August 1, 2018ಮೈಸೂರು: ಮೂರನೇ ಆಷಾಢ ಶುಕ್ರವಾರ ಆಗಸ್ಟ್ 3ರಂದು ರಾತ್ರಿ 8ಗಂಟೆಗೆ ಮೈಸೂರಿನ ಲಲಿತಮಹಲ್ ಹೆಲಿ ಪ್ಯಾಡ್‍ನಿಂದ ಚಾಮುಂಡಿ ಬೆಟ್ಟಕ್ಕೆ ಸಂಚಾರ ಸ್ಥಗಿತ ಗೊಳ್ಳಲಿದೆ ಎಂದು ಶ್ರೀ ಚಾಮುಂಡೇಶ್ವರಿ ದೇವ ಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಪ್ರಸಾದ್ ತಿಳಿಸಿದ್ದಾರೆ. 3ನೇ ಆಷಾಢ ಶುಕ್ರವಾರ ಚಾಮುಂಡೇಶ್ವರಿ ಅಮ್ಮನವರ ಜನ್ಮೋತ್ಸವ ನಡೆಯುವುದರಿಂದ ವಿಶೇಷ ಪೂಜೆ ನಡೆಯುವ ಕಾರಣ, ಆಗಸ್ಟ್ 3ರಂದು ಬೆಳಿಗ್ಗೆ 8ರಿಂದ ರಾತ್ರಿ 10ಗಂಟೆವರೆಗೆ ದರ್ಶನದ ವ್ಯವಸ್ಥೆ ಇರುತ್ತದೆ. ಭಕ್ತಾದಿಗಳ ಅನುಕೂಲಕ್ಕಾಗಿ ಲಲಿತಮಹಲ್ ಹೆಲಿಪ್ಯಾಡ್‍ನಿಂದ ಚಾಮುಂಡಿ ಬೆಟ್ಟಕ್ಕೆ ಬೆಳಿಗ್ಗೆ 6.30ರಿಂದ…
ವಾಲ್ಮೀಕಿ ರಸ್ತೆಯಿಂದ ಹೂಗುಚ್ಛ ಮಾರುವವರ ಎತ್ತಂಗಡಿ
August 1, 2018ಮೈಸೂರು: ಕಳೆದ 15 ವರ್ಷಗಳಿಂದ ಮೈಸೂರಿನ ವಾಲ್ಮೀಕಿ ರಸ್ತೆಯ ಫುಟ್‍ಪಾತ್ ಮೇಲೆ ಹೂ ಗುಚ್ಛ ತಯಾರಿಸಿ ಮಾರುತ್ತಿದ್ದವರನ್ನು ಮೈಸೂರು ನಗರಪಾಲಿಕೆ ಅಧಿಕಾರಿಗಳು ತೆರವುಗೊಳಿಸಿದ್ದಾರೆ. ಪಡುವಾರಹಳ್ಳಿ ಬಳಿ ವಾಲ್ಮೀಕಿ ರಸ್ತೆಯಲ್ಲಿ ನಿರ್ಮಿಸಿರುವ ಮಹಾರಾಣಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು ಮತ್ತು ಹಾಸ್ಟೆಲ್ ಕಟ್ಟಡಗಳು ಕಾರ್ಯಾರಂಭಗೊಂಡಿರುವುದ ರಿಂದ ವಿದ್ಯಾರ್ಥಿನಿಯರು ಓಡಾಡಲು ಅಡ್ಡಿ ಯಾಗುತ್ತದೆ ಎಂಬ ಕಾರಣಕ್ಕಾಗಿ ವಾಲ್ಮೀಕಿ ರಸ್ತೆಯ ಫುಟ್‍ಪಾತ್‍ನಲ್ಲಿದ್ದ ಹೂಗುಚ್ಛ ಮಾರುವವರನ್ನು ನಗರ ಪಾಲಿಕೆ ಆರೋಗ್ಯ ಘಟಕದ ಅಧಿಕಾರಿಗಳು ಸೋಮವಾರ ತೆರವುಗೊಳಿಸಿದ್ದು, ಮುಂದೆ ಆ ಭಾಗದಲ್ಲಿ ವ್ಯಾಪಾರ ಮಾಡದಂತೆ…
ವೇಶ್ಯಾವಾಟಿಕೆ ವಿರುದ್ಧ ಮೈಸೂರಲ್ಲಿ ಮುಂದುವರೆದ ಪೊಲೀಸರ ಕಾರ್ಯಾಚರಣೆ
August 1, 2018ಸಿಸಿಬಿ ಪೊಲೀಸರಿಂದ ಹೆಬ್ಬಾಳ್‍ನಲ್ಲಿ ದಾಳಿ: ಯುವತಿ ರಕ್ಷಣೆ, ಓರ್ವ ಪಿಂಪ್ ಸೆರೆ, ಪರಾರಿಯಾಗಿರುವ ಸಹಚರನಿಗೆ ಶೋಧ ಮೈಸೂರು: ವೇಶ್ಯಾವಾಟಿಕೆ ದಂಧೆ ವಿರುದ್ಧ ಎಡಮುರಿ ಕಟ್ಟಿರುವ ಪೊಲೀಸರು, ಕಾರ್ಯಾಚರಣೆ ಮುಂದುವರಿಸಿದ್ದು, ಮೈಸೂರಿನ ಹೆಬ್ಬಾಳಿನಲ್ಲಿ ಮನೆಯೊಂದರಲ್ಲಿ ಯುವತಿ ರಕ್ಷಿಸಿ, ಪಿಂಪ್ ಓರ್ವನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಿಸಿಬಿ ಎಸಿಪಿ ಬಿ.ಆರ್.ಲಿಂಗಪ್ಪ ನೇತೃತ್ವದಲ್ಲಿ ಇಂದು ಮಧ್ಯಾಹ್ನ ದಾಳಿ ನಡೆಸಿದ ಇನ್ಸ್‍ಪೆಕ್ಟರ್ ರಾಜಶೇಖರ್ ಹಾಗೂ ಸಿಬ್ಬಂದಿ, ಹೆಬ್ಬಾಳು ಮುಖ್ಯರಸ್ತೆಯ ಮನೆಯೊಂದನ್ನು ಬಾಡಿಗೆಗೆ ಪಡೆದು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದುದ್ದನ್ನು ಭೇದಿಸಿದ್ದಾರೆ. ವೇಶ್ಯಾವಾಟಿಕೆ ನಡೆಸುತ್ತಿದ್ದ ವ್ಯಕ್ತಿ ತಲೆಮರೆಸಿಕೊಂಡಿದ್ದು,…
ಅಪ್ರಾಪ್ತೆಗೆ ಲೈಂಗಿಕ ಕಿರುಕುಳ: ವೃದ್ಧನಿಗೆ ಮೈಸೂರು ಪೋಕ್ಸೋ ಕೋರ್ಟ್‍ನಿಂದ 2 ವರ್ಷ ಜೈಲು ಶಿಕ್ಷೆ
August 1, 2018ಮೈಸೂರು: ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ್ದ ವೃದ್ಧನೋರ್ವನಿಗೆ ಮೈಸೂರಿನ ಪೋಕ್ಸೋ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಬಿ.ಎಸ್.ಜಯಶ್ರೀ ಅವರು 2 ವರ್ಷ ಜೈಲು ಶಿಕ್ಷೆ ವಿಧಿಸಿದ್ದಾರೆ. ಮೈಸೂರಿನ ಕುವೆಂಪುನಗರ ನಿವಾಸಿ ರಾಮಪ್ರಸಾದ್(58)ಗೆ ಶಿಕ್ಷೆ ವಿಧಿಸಲಾಗಿದ್ದು, ಕೆಲ ವರ್ಷಗಳ ಹಿಂದೆ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ್ದ. ಬಾಲಕಿಯ ತಾಯಿ ನೀಡಿದ್ದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿದ್ದ ಅಶೋಕಪುರಂ ಠಾಣೆ ಪೊಲೀಸರು, ತನಿಖೆ ನಡೆಸಿ ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಪೋಕ್ಸೋ ವಿಶೇಷ ನ್ಯಾಯಾ ಲಯದ…
ಬ್ಯೂಟಿ ಪಾರ್ಲರ್ ಹೆಸರಲ್ಲಿ ವೇಶ್ಯಾವಾಟಿಕೆ: ಆರೋಪಿ ಹೇಮಾವತಿ ವಿಚಾರಣೆ
August 1, 2018ಮೈಸೂರು: ಬ್ಯೂಟಿ ಪಾರ್ಲರ್ ಹೆಸರಿನಲ್ಲಿ ವೇಶ್ಯಾ ವಾಟಿಕೆ ನಡೆಸಿ, ಸಿಕ್ಕಿಬಿದ್ದಿರುವ ಆರೋಪಿ ಹೇಮಾವತಿ ಅಲಿಯಾಸ್ ಸಂಜನಾಳ ವಿಚಾರಣೆ ಮುಂದುವರಿದಿದೆ. ಮೈಸೂರಿನ ವಿಜಯನಗರ ಹಾಗೂ ಹೂಟಗಳ್ಳಿಯಲ್ಲಿ ಬ್ಯೂಟಿ ಪಾರ್ಲರ್ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿರುವ ಬಗ್ಗೆ ಖಚಿತ ಮಾಹಿತಿ ದೊರೆತ ಹಿನ್ನೆಲೆ ಯಲ್ಲಿ ಒಡನಾಡಿ ಸೇವಾ ಸಂಸ್ಥೆ ಸಹ ಯೋಗದಲ್ಲಿ ಪೊಲೀಸರು 2 ತಂಡ ಗಳಲ್ಲಿ ಏಕ ಕಾಲದಲ್ಲಿ ಜು.28ರಂದು ದಾಳಿ ನಡೆಸಿದ್ದರು. ಕಾರ್ಯಾಚರಣೆಯಲ್ಲಿ ಪಾರ್ಲರ್‍ಗಳ ಒಡತಿ ಹೇಮಾವತಿ ಸೇರಿದಂತೆ ಮೂವರನ್ನು ಬಂಧಿಸಿ, 6 ಮಹಿಳೆಯರನ್ನು ರಕ್ಷಿಸಲಾಗಿತ್ತು. ಸ್ವೈಪಿಂಗ್ ಮಿಷನ್,…
ಕೆ.ಆರ್.ಆಸ್ಪತ್ರೆ ನರ್ಸಿಂಗ್ ಹಾಸ್ಟೆಲ್ ಸಮಸ್ಯೆ ತಕ್ಷಣ ಬಗೆಹರಿಸಿ ಇಲ್ಲ ಸದನದಲ್ಲಿ ಪ್ರಸ್ತಾಪಿಸುತ್ತೇನೆ
August 1, 2018ಮೈಸೂರು: ಕೆ.ಆರ್. ಆಸ್ಪತ್ರೆಯ ನರ್ಸಿಂಗ್ ಹಾಸ್ಟೆಲ್ ವಿದ್ಯಾರ್ಥಿಗಳ ಸಮಸ್ಯೆಯನ್ನು ಕೂಡಲೇ ಬಗೆಹರಿಸಲು ಸಂಬಂಧ ಪಟ್ಟ ಅಧಿಕಾರಿಗಳು ಗಮನಹರಿಸಬೇಕು. ಇಲ್ಲವಾ ದಲ್ಲಿ ಮುಂಬರುವ ಅಧಿವೇಶನದಲ್ಲಿ ಈ ಬಗ್ಗೆ ಸದನದಲ್ಲಿ ಧ್ವನಿ ಎತ್ತಿ, ತಪ್ಪಿತಸ್ಥರ ವಿರುದ್ದ ಕ್ರಮಕೈಗೊಳ್ಳುವಂತೆ ಒತ್ತಾಯಿಸುವು ದಾಗಿ ಅತ್ಯಾಚಾರ ಪ್ರಕರಣಗಳ ತಡೆ ತಜ್ಞರ ಸಮಿತಿ ಮಾಜಿ ಅಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ ಆಕ್ರೋಶ ವ್ಯಕ್ತಪಡಿಸಿದರು. ಕೆ.ಆರ್.ಆಸ್ಪತ್ರೆ ಆವರಣದಲ್ಲಿರುವ ನರ್ಸಿಂಗ್ ಹಾಸ್ಟೆಲ್‍ಗೆ ಮಂಗಳವಾರ ಭೇಟಿ ನೀಡಿ, ಅಡುಗೆ ಕೊಠಡಿ, ರೂಮ್‍ಗಳಿಗೆ ತೆರಳಿ ಅಲ್ಲಿನ ವ್ಯವಸ್ಥೆ, ನಿರ್ವಹಣೆ ಹಾಗೂ…
ಬಿಗ್‍ಬಾಸ್ ಖ್ಯಾತಿಯ ನಿವೇದಿತಾ ಗೌಡ ಕಿಕಿ ಡ್ಯಾನ್ಸ್
August 1, 2018ಮೈಸೂರು: ಅಪಾಯಕಾರಿ ಕಿಕಿ ಡಾನ್ಸ್ ಮಾಡುವ ಮೂಲಕ ಬಿಗ್‍ಬಾಸ್ ಬೆಡಗಿ ನಿವೇದಿತಾಗೌಡ ನೆಟ್ಟಿಗರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಈಗಾಗಲೇ ಬಲು ಅಪಾಯಕಾರಿ ಕಿಕಿ ಜಾಲೆಂಜ್ ವಿರುದ್ಧ ಮುಂಬೈ ಪೊಲೀಸರು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದಾರೆ. ಅಲ್ಲದೆ, ಈ ಡ್ಯಾನ್ಸ್ ಮಾಡದಂತೆ ಜಾಗೃತಿಯನ್ನೂ ಮೂಡಿಸುತ್ತಿದ್ದಾರೆ. ಆದರೂ ಸೋಷಿಯಲ್ ಮೀಡಿಯಾ ದಲ್ಲಿ ‘ಕಿಕಿ ಡಾನ್ಸ್’ ಟ್ರೆಂಡ್ ಯುವ ಸಮೂಹದಲ್ಲಿ ಸಂಚಲನ ಸೃಷ್ಟಿಸುತ್ತಿದೆ. ಸೆಲಿಬ್ರಿಟಿಗಳು ಈ ಸವಾಲು ಸ್ವೀಕರಿಸುತ್ತಿದ್ದು, ಮೊನ್ನೆಯಷ್ಟೆ ಬಾಲಿವುಡ್ ನಟಿ ಅದಾಶರ್ಮಾ ಕಿಕ್ ಡಾನ್ಸ್ ಮಾಡಿ, ಸಾರ್ವ ಜನಿಕರ ಕೆಂಗಣ್ಣಿಗೆ…
ಸಂಸದ ಧ್ರುವನಾರಾಯಣ್ ಅಭಿಮಾನಿಗಳಿಂದ ಬೃಹತ್ ರಕ್ತದಾನ, ಉದ್ಯೋಗ ಮೇಳ
August 1, 2018ನಂಜನಗೂಡು: ಜನಪರ ಸಮಾಜಮುಖಿ ಕಾರ್ಯಕ್ರಮಗಳಿಂದ ಇಂದಿನ ಯುವ ರಾಜಕಾರಣಿಗಳಿಗೆ ಸಂಸದ ಆರ್.ಧ್ರುವನಾರಾಯಣ್‍ರವರು ಸ್ಫೂರ್ತಿಯಾಗಿದ್ದಾರೆ ಎಂದು ವರುಣಾ ಕ್ಷೇತ್ರದ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿದರು. ಸಂಸದ ಆರ್.ಧ್ರುವನಾರಾಯಣ್‍ರವರ 58ನೇ ಹುಟ್ಟುಹಬ್ಬದ ಅಂಗವಾಗಿ ಅಭಿಮಾನಿ ಬಳಗದಿಂದ ಇಲ್ಲಿನ ಯಾತ್ರಿ ಭವನದಲ್ಲಿ ಏರ್ಪಡಿಸಿದ್ದ ರಕ್ತದಾನ, ಮತ್ತು ಉದ್ಯೋಗ ಮೇಳ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಸಜ್ಜನ ರಾಜಕಾರಣಿಯಾಗಿರುವ, ಹೋರಾಟದಿಂದ ಮೇಲೆ ಬಂದಿರುವ ಸಂಸದರೆಂದರೆ ಆರ್. ಧ್ರುವನಾರಾಯಣ್ ಎಂದ ಅವರು, ಜಾತಿ, ಹಣದ ಮೋಹಕ್ಕೆ ಒಳಗಾಗದೇ ಜನಪ್ರಿಯ ಸೇವೆಗಾಗಿ ಜನರು ಸಂಸದ…
ವರುಣಾ ಕ್ಷೇತ್ರದ ವೀರಶೈವ ಲಿಂಗಾಯಿತ ಮುಖಂಡರಿಂದ ಮಾಜಿ ಸಿಎಂ ಸಿದ್ದರಾಮಯ್ಯರಿಗೆ ಸನ್ಮಾನ
August 1, 2018ಬೆಂಗಳೂರು: ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳು ಹಾಗೂ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಸಮನ್ವಯ ಸಮಿತಿಯ ಅಧ್ಯಕ್ಷರು ಆಗಿರುವ ಸಿದ್ದರಾಮಯ್ಯನವರು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ನೇಮಕಗೊಂಡಿರುವುದಕ್ಕೆ ವರುಣಾ ಕ್ಷೇತ್ರದ ವೀರಶೈವ ಲಿಂಗಾಯತ ಮುಖಂಡರು ಬೆಂಗಳೂರಿನ ಅವರ ನಿವಾಸ ಕಾವೇರಿಯಲ್ಲಿ ಭೇಟಿ ಮಾಡಿ, ಅಭಿನಂದನೆ ಸಲ್ಲಿಸಿದರು. ಇದೇ ವೇಳೆ ತಗಡೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಹುಳಿಮಾವು ಗ್ರಾಮದ ಪರ ಶಿವಮೂರ್ತಿ, ಹಳ್ಳಿಕೆರೆ ಹುಂಡಿ ಗ್ರಾಮದ ಶಿವಕುಮಾರ್, ಕಾರ್ಯ ಗ್ರಾಮದ ನಾಗರಾಜು, ದಾಸನೂರು ಗ್ರಾಮದ ವೀರಭದ್ರಸ್ವಾಮಿ, ನಾಗೇಶ, ಹದಿನಾರು ಗ್ರಾಮದ ಡಿ.ಕೆ.ಶಿವಕುಮಾರ್,…