ಮೈಸೂರು,ಅ.23(ಆರ್‍ಕೆ)-ಸರಣಿ ಅಪಘಾತ ದಲ್ಲಿ ಚಾಲಕರು ಹಾಗೂ ಪ್ರಯಾಣಿಕರು ಅಪಾಯ ದಿಂದ ಪಾರಾದರೂ ವಾಹನಗಳು ಜಖಂ ಗೊಂಡ ಘಟನೆ ಮೈಸೂರಿನ ಬನ್ನಿಮಂಟಪದ ಕೆಎಸ್‍ಆರ್‍ಟಿಸಿ ಬಸ್ ಡಿಪೋ ಎದುರು ನೆಲ್ಸನ್ ಮಂಡೇಲ ರಸ್ತೆಯಲ್ಲಿ ಶನಿವಾರ ಬೆಳಗ್ಗೆ ನಡೆದಿದೆ. ಮಿಲೇನಿಯಂ ಸರ್ಕಲ್‍ನಿಂದ ಹೈವೇ ಸರ್ಕಲ್ ಕಡೆಗೆ ಬರುತ್ತಿದ್ದ ಆಡಿ (ಎಪಿ 10-ಎಎಕ್ಸ್ 0030) ಕಾರು, ಎದುರಿನಿಂದ ಬರುತ್ತಿದ್ದ ಲಾರಿ (ಕೆಎ 16-ಸಿ 6755)ಗೆ ಕೆಎಸ್‍ಆರ್‍ಟಿಸಿ ನಗರ ಬಸ್ ಡಿಪೋ ಎದುರು ಬೆಳಗ್ಗೆ 10.30 ಗಂಟೆ ಯಲ್ಲಿ ಡಿಕ್ಕಿ ಹೊಡೆದು, ವಿರುದ್ಧ ದಿಕ್ಕಿಗೆ…
ಮೈಸೂರು ಬೆಳಗಲಿವೆ ಎಲ್‍ಇಡಿ ಬೀದಿದೀಪಗಳು
October 24, 2021ಮೈಸೂರು, ಅ. 23(ಆರ್‍ಕೆ)- ಪಾರಂಪರಿಕ ನಗರಿ ಮೈಸೂರಲ್ಲಿ ಇನ್ನು ಮುಂದೆ ಬೆಳಗಲಿವೆ ಎಲ್‍ಇಡಿ (ಐighಣ ಇmiಣಣiಟಿg ಆioಜe) ಬೀದಿದೀಪಗಳು. ಬೀದಿದೀಪಗಳ ಪ್ರಖರತೆ ಸಾಮಥ್ರ್ಯ ಹೆಚ್ಚಿಸುವುದರ ಜೊತೆಗೆ ವಿದ್ಯುತ್ ಉಳಿತಾಯ ಮಾಡುವ ಎಲ್‍ಇಡಿ ಯೋಜನೆಯನ್ನು ಮೈಸೂರಲ್ಲಿ ಅನುಷ್ಠಾನಗೊಳಿಸಬೇಕೆಂಬ ಹಲವು ವರ್ಷಗಳ ಮಹತ್ವಾಕಾಂಕ್ಷೆಯ ಪ್ರಸ್ತಾವನೆಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದ್ದು, ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯ ಯೋಜನೆಯನ್ನು ಮೈಸೂರು ಮಹಾನಗರ ಪಾಲಿಕೆಯು ದೆಹಲಿ ಮೂಲದ ಇ-ಸ್ಮಾರ್ಟ್ ಸಂಸ್ಥೆಗೆ ಒಪ್ಪಿಸಿದೆ. ಮೈಸೂರು ನಗರದಾದ್ಯಂತ ಎಲ್ಲಾ ರಸ್ತೆ, ಉದ್ಯಾನವನ, ರುದ್ರ ಭೂಮಿ ಸೇರಿದಂತೆ…
ಶತಕೋಟಿ ಡೋಸ್ ಲಸಿಕೆ ಬರೀ ಸಂಖ್ಯೆಯಲ್ಲ ದೇಶದ ಸಾಮರ್ಥ್ಯ ಸಂಕೇತ ಪ್ರಧಾನಿ ಮೋದಿ ಹೆಮ್ಮೆ
October 23, 2021ನವದೆಹಲಿ, ಅ.೨೨ -೨೦೨೧ಕ್ಕೆ ಭಾರತ ಶತಕೋಟಿ ಕೊರೊನಾ ಲಸಿಕೆ ಪೂರೈಕೆ ಗುರಿ ಯನ್ನು ಸಾಧಿಸಿದೆ. ಇದು ಪ್ರತಿಯೊಬ್ಬ ಭಾರತೀಯನ ಸಾಧನೆ. ೧೦೦ ಕೋಟಿ ಲಸಿಕೆ ಪ್ರಮಾಣ ಕೇವಲ ಸಂಖ್ಯೆಯಲ್ಲ, ರಾಷ್ಟçವಾಗಿ ನಮ್ಮ ಸಾಮರ್ಥ್ಯ ವನ್ನು ಜಗತ್ತಿಗೆ ತೋರಿಸುತ್ತದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಬಣ ್ಣಸಿದ್ದಾರೆ. ದೇಶದ ನಾಗರಿಕರಿಗೆ ಶತಕೋಟಿ ಕೋವಿಡ್ ಲಸಿಕೆ ಪೂರೈಸಿದ ಸಂತೋಷ ವನ್ನು ಇಂದಿನ ದೇಶವಾಸಿಗಳನ್ನುದ್ದೇಶಿಸಿ ಮಾಡಿದ ಭಾಷಣ ದಲ್ಲಿ ಹಂಚಿಕೊAಡ ಪ್ರಧಾನಿ ಮೋದಿ, ಇದು ದೇಶದ, ನಾಗರಿಕರ ಸಾಧನೆ. ದೇಶದ…
ವಿಜಯನಗರ 3ನೇ ಹಂತ ಬಡಾವಣೆ ಈಗ ಪೂರ್ಣ ಮೈಸೂರು ಪಾಲಿಕೆ ವ್ಯಾಪ್ತಿಗೆ
October 23, 2021ಇಲ್ಲಿನ ಆಸ್ತಿ ಖಾತೆ ನೋಂದಣ , ವರ್ಗಾವಣೆ, ನಕ್ಷೆ ಅನುಮೋದನೆ, ಸಿಆರ್, ಉದ್ದಿಮೆ ರಹದಾರಿ ಎಲ್ಲವೂ ಪಾಲಿಕೆಯಿಂದಲೇ ನಿರ್ವಹಣೆ: ಆಯುಕ್ತರ ಆದೇಶ ಮೈಸೂರು, ಅ. ೨೨-ಇತ್ತೀಚೆಗೆ ಶಾಸಕ ಜಿ.ಟಿ.ದೇವೇಗೌಡ ನೇತೃ ತ್ವದಲ್ಲಿ ನಡೆದ ಸಭೆಯ ಫಲಶೃತಿ ಯಾಗಿ ಮೈಸೂರಿನ ವಿಜಯನಗರ ೩ನೇ ಹಂತ ಬಡಾವಣೆಯ ಎಲ್ಲಾ ಆಸ್ತಿಗಳಿಗೆ ಖಾತಾ ನೋಂದಣ , ಖಾತಾ ವರ್ಗಾವಣೆ, ಕಟ್ಟಡ ನಕ್ಷೆ ಅನುಮೋದನೆ ಮತ್ತು ಕಟ್ಟಡ ಪೂರ್ಣಗೊಂಡ ಪ್ರಮಾಣ ಪತ್ರ ಹಾಗೂ ಉದ್ದಿಮೆ ರಹ ದಾರಿಯನ್ನು ಮೈಸೂರು ನಗರ ಪಾಲಿಕೆಯಿಂದ ನೀಡುವಂತೆ…
ಮೈಸೂರಲ್ಲಿ ಜೋಡಿ ಕೊಲೆ
October 23, 2021ಗುರುವಾರ ರಾತ್ರಿ ತಂದೆ, ಅವರ ಜೊತೆ ಇದ್ದ ಮಹಿಳೆ ಹತ್ಯೆಗೈದ ಮಗ ಮಹಿಳೆ ಕುಟುಂಬಕ್ಕೆ ಹಣಕಾಸು ನೆರವಿನ ಹಿನ್ನೆಲೆಯಲ್ಲಿ ಮತ್ಸರ ಮೈಸೂರು ಹೊರ ವಲಯದ ರಮಾಬಾಯಿನಗರದಲ್ಲಿ ನಡೆದ ಕಗ್ಗೊಲೆ ಮೈಸೂರು, ಅ.೨೨(ಆರ್‌ಕೆ)-ಯುವಕನೋರ್ವ ತನ್ನ ತಂದೆ ಹಾಗೂ ಅವರ ಜೊತೆಗಿದ್ದ ಮಹಿಳೆಯನ್ನು ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಗೈದು, ಮಹಿಳೆಯ ಪುತ್ರನ ಮೇಲೂ ಹಲ್ಲೆ ನಡೆಸಿದ ಘಟನೆ ಮೈಸೂರು ಹೊರ ವಲಯದ ರಮಾಬಾಯಿನಗರದ ಬಳಿಯ ಶ್ರೀನಗರ ಬಡಾವಣೆಯಲ್ಲಿ ಗುರುವಾರ ರಾತ್ರಿ ನಡೆದಿದೆ. ಕೆ.ಜಿ.ಕೊಪ್ಪಲು ನಿವಾಸಿ ಶಿವಪ್ರಕಾಶ್ (೫೪), ಅವರ…
ಪಾಂಡವಪುರ ರೈಲು ನಿಲ್ದಾಣದ ಬಳಿ ಚಲಿಸುವ ರೈಲು ಮುಂದೆ ಹಾರಿ ಮೈಸೂರು ಬಟ್ಟೆ ವ್ಯಾಪಾರಿ ಆತ್ಮಹತ್ಯೆ
October 23, 2021ಮೈಸೂರು, ಅ. ೨೨(ಆರ್‌ಕೆ)- ಚಲಿಸುತ್ತಿದ್ದ ರೈಲಿನ ಮುಂದೆ ಹಾರಿ ಮೈಸೂರಿನ ಬಟ್ಟೆ ವ್ಯಾಪಾರಿ ಆತ್ಮಹತ್ಯೆ ಮಾಡಿಕೊಂಡಿ ರುವ ಘಟನೆ ಗುರುವಾರ ಸಂಜೆ ಪಾಂಡವಪುರ ರೈಲು ನಿಲ್ದಾಣದ ಸಮೀಪ ಸಂಭವಿಸಿದೆ. ಮೈಸೂರಿನ ಸುಣ್ಣದಕೇರಿಯ ನಾಲಾಬೀದಿ ನಿವಾಸಿ ಲೇಟ್ ಟಿ.ಶ್ರೀನಿವಾಸ ಅವರ ಮಗ ಎಸ್.ಮಾಣ ಕ್ಯಂ (೫೨), ರೈಲಿನ ಮುಂದೆ ಹಾರಿ, ಆತ್ಮಹತ್ಯೆ ಮಾಡಿ ಕೊಂಡವರಾಗಿದ್ದಾರೆ. ಮೈಸೂರಿನ ಲಷ್ಕರ್ ಮೊಹಲ್ಲಾ ಕುಂಬಾರಗೇರಿಯ ಉಮಾ ಟಾಕೀಸ್ ರಸ್ತೆಯಲ್ಲಿ ಎಸ್. ಮಾಣ ಕ್ಯಂ ಸೀರೆ ವ್ಯಾಪಾರದ ಅಂಗಡಿ ಹೊಂದಿದ್ದು, ಅವರ ಮೃತದೇಹ ಪಾಂಡವಪುರ…
ನಮ್ಮ ಗೆಳೆತನದಲ್ಲಿ `ನೋ ಪಾಲಿಟಿಕ್ಸ್’; ಎಲ್ಲವೂ ಮುಕ್ತ… ಮುಕ್ತ…!
October 23, 2021ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ, ಶಾಸಕರಾದ ಜಿಟಿಡಿ ಪುತ್ರ ಹರೀಶ್‌ಗೌಡ, ಮಹದೇವ್ ಪುತ್ರ ಪ್ರಸನ್ನ, ಪುಟ್ಟರಾಜು ಪುತ್ರ ಶಿವರಾಜ್ ಸಮಾಗಮ ಸಂಭ್ರಮ ರಾಜಕೀಯವಾಗಿ ಆರಂಭವಾಗಿದೆ ಹೊಸ ವಿಶ್ಲೇಷಣೆ ಮೈಸೂರು,ಅ.೨೨(ಎಂಟಿವೈ)- ನಮ್ಮ ಹಿರಿಯರ ರಾಜಕೀಯ ಮುನಿಸು, ಭಿನ್ನಾಭಿಪ್ರಾಯ ನಮಗೆ ಸಂಬAಧಿಸಿದ್ದಲ್ಲ. ಅದಕ್ಕೂ ನಮಗೂ ಸಂಬAಧವಿಲ್ಲ. ನಮ್ಮದೇನಿದ್ದರೂ ಮುಕ್ತ… ಮುಕ್ತ… ಮುಕ್ತ… ನಮಗ್ಯಾವ ಅಡ್ಡಿ ಆತಂಕಗಳಿಲ್ಲ. ನಾವು ಒಳ್ಳೆಯ ಸ್ನೇಹಿತರು, ಚೆನ್ನಾಗಿದ್ದೇವೆ. ಈಗ, ಮುಂದೆಯೂ…!! ರಾಜಕೀಯ ಬಿನ್ನಾಭಿಪ್ರಾಯದಿಂದ ಅಂತರ ಕಾಯ್ದುಕೊಂಡಿರುವ ಜೆಡಿಎಸ್ ನಾಯಕರ ಪುತ್ರರು…
೧೦ ದಿನಗಳ ಗಾಂಧಿ ಶಿಲ್ಪ ಬಜಾರ್ ಕರಕುಶಲ ಮೇಳ ಆರಂಭ
October 23, 2021ಬೆಳಗ್ಗೆ ೧೦.೩೦ರಿಂದ ರಾತ್ರಿ ೯ ಗಂಟೆಯವರೆಗೆ ಉಚಿತ ಪ್ರವೇಶ ಮೈಸೂರು, ಅ.೨೨(ವೈಡಿಎಸ್)- ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿರುವ ಜೆಎಸ್‌ಎಸ್ ಅರ್ಬನ್ ಹಾತ್‌ನಲ್ಲಿ ಇಂದಿನಿAದ ೧೦ ದಿನಗಳ ಕಾಲ `ಗಾಂಧಿ ಶಿಲ್ಪ ಬಜಾರ್’ ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಆಯೋಜಿಸಲಾಗಿದೆ. ಜೆಎಸ್‌ಎಸ್ ಅರ್ಬನ್ ಹಾತ್, ಭಾರತ ಸರ್ಕಾರದ ಜವಳಿ ಮಂತ್ರಾಲಯದ ಸಹಯೋಗದಲ್ಲಿ ಅ.೨೨ರಿಂದ ೩೧ರವರೆಗೆ ಮೇಳವನ್ನು ಆಯೋಜಿಸಿದ್ದು, ದೇಶದ ವಿವಿಧ ಭಾಗಗಳ ಪ್ರಸಿದ್ಧ ಹಾಗೂ ಕ್ರಿಯಾಶೀಲ ರಾಗಿರುವ ೧೦೦ಕ್ಕೂ ಹೆಚ್ಚು ಕುಶಲಕರ್ಮಿ ಗಳು ಭಾಗವಹಿಸಿ ತಮ್ಮ ಉತ್ಕೃಷ್ಟ…
ದೇಶದ ಜನತೆಗೆ ‘ಒನ್ ಮ್ಯಾನ್ ಒನ್ ವೋಟ್’ ಡಾ. ಅಂಬೇಡ್ಕರ್ ಕೊಡುಗೆ
October 23, 2021ಮೈಸೂರು, ಅ.೨೨(ಎಸ್‌ಪಿಎನ್)- ನಮ್ಮ ದೇಶಕ್ಕೆ ಸ್ವಾತಂತ್ರö್ಯ ಬಂದ ನಂತರ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಎಲ್ಲರಿಗೂ `ಒನ್ ಮ್ಯಾನ್ ಒನ್ ವೋಟ್’ ಹಕ್ಕನ್ನು ಕಲ್ಪಿಸಿಕೊಟ್ಟ ಕೀರ್ತಿ ನಮ್ಮ ಸಂವಿಧಾನಕ್ಕೆ ಸಲ್ಲುತ್ತದೆ ಎಂದು ಮೈಸೂರು ವಿವಿ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆಯ ಪ್ರಾಧ್ಯಾಪಕ ಪ್ರೊ.ಸೋಮಶೇಖರ್ ಅಭಿಪ್ರಾಯಪಟ್ಟರು. ಮೈಸೂರು ಸಿಎಫ್‌ಟಿಆರ್‌ಐನ ಚೆಲುವಾಂಬ ಸಭಾಂಗಣದಲ್ಲಿ ಸಿಎಸ್‌ಐಆರ್- ಸಿಎಫ್‌ಟಿಆರ್‌ಐನ ಎಸ್ಸಿ-ಎಸ್ಟಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ಸಹಯೋಗದೊಂದಿಗೆ ಡಾ. ಬಿ.ಆರ್. ಅಂಬೇಡ್ಕರ್ ಅವರ ೧೩೦ನೇ ಜಯಂತೋತ್ಸವ ಅಂಗವಾಗಿ ಏರ್ಪಡಿಸಲಾಗಿದ್ದ `ಡಾ.ಬಿ,ಆರ್.ಅಂಬೇಡ್ಕರ್ ಮತ್ತು ಭಾರತದ ಸಂವಿಧಾನ’…
ಪ್ರತಿಭಾವಂತ ವಿದ್ಯಾರ್ಥಿಗಳಿಗೆ `ರೋಟರಿ ಯಶಸ್ವಿ ಪ್ರತಿಭಾ ಪುರಸ್ಕಾರ’
October 23, 2021ಮೈಸೂರು, ಅ.೨೨(ವೈಡಿಎಸ್)- ಜೆಎಲ್‌ಬಿ ರಸ್ತೆಯ ರೋಟರಿ ಸಭಾಂಗಣ ದಲ್ಲಿ ಶುಕ್ರವಾರ ರೋಟರಿ ಮೈಸೂರು ಉತ್ತರ ವತಿಯಿಂದ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ `ರೋಟರಿ ಯಶಸ್ವಿ ಪ್ರತಿಭಾ ಪುರಸ್ಕಾರ’ ವಿತರಿಸಲಾಯಿತು. ಎಸ್‌ಎಸ್‌ಎಲ್‌ಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಲಕ್ಷಿö್ಮÃಕಾಂತ್, ರಾಜೇಶ್, ಶ್ರೀಶಾ, ಸಚಿನ್, ದೀಪಿಕಾ, ಉಲ್ಲಾಸ್, ಅನನ್ಯ, ಸಿಂಚನ, ವಿನಯ್, ನಂದಿನಿ, ಹರ್ಷಿತ್, ಕಿಶೋರ್, ತೇಜಸ್ ಹಾಗೂ ದ್ವೀತೀಯ ಪಿಯುಸಿಯ ಚೈತ್ರ‍್ರಾ, ರೋಹನ್, ಸೌಮ್ಯ, ಭಾರದ್ವಾಜ್, ಪವನ್ ಅವರಿಗೆ ರೋಟರಿ ಯಶಸ್ವಿ ಪ್ರತಿಭಾ…










