ಮೈಸೂರು, ಸೆ.೩(ಆರ್‌ಕೆ)- ಮಹಿಳೆಯರ ಚಿನ್ನದ ಸರ ಕದಿಯುತ್ತಿದ್ದ ಇಬ್ಬರು ಹಾಗೂ ಕಳವು ಮಾಲನ್ನು ಸ್ವೀಕರಿಸಿದವನನ್ನೂ ಮೈಸೂರಿನ ನರಸಿಂಹರಾಜ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೈಸೂರಿನ ಕೆ.ಆರ್.ಮೊಹಲ್ಲಾದ ಹುಲ್ಲಿನ ಬೀದಿ, ೩ನೇ ಕ್ರಾಸ್ ನಿವಾಸಿ ಅಫ್ರೋಜ್‌ಖಾನ್ ಮಗ ಸಲ್ಮಾನ್ ಖಾನ್ ಅಲಿಯಾಸ್ ಸಲ್ಲು(೨೮), ಶಾಂತಿನಗರದ ನಜೀರ್ ಬಾಷ ಮಗ ತಾಜುದ್ದೀನ್ ಅಲಿಯಾಸ್ ಮಹಮದ್ ತಾಜುದ್ದೀನ್(೨೧) ಹಾಗೂ ಕದ್ದ ಆಭರಣಗಳನ್ನು ಗಿರಿವಿ ಇರಿಸಿಕೊಳ್ಳುತ್ತಿದ್ದ ಮೈಸೂರಿನ ಅಶೋಕ ರಸ್ತೆಯ ಮರಿಯಂ ಜುವೆಲ್ಸ್ ಮಾಲೀಕ ಮಹಮದ್ ಪರ್ವೀಜ್ (೪೧) ಬಂಧಿತರು. ಅವರಿಂದ ೧೯,೪೦,೦೦೦ ರೂ….
ಉಗ್ರತ್ವಕ್ಕೆ ಶರಣರ ತತ್ವಗಳಲ್ಲಿ ಪರಿಹಾರವಿದೆ
September 3, 2021ಮೈಸೂರು, ಸೆ.2(ಎಂಟಿವೈ)- ತ್ರಿವಿಧ ದಾಸೋಹಕ್ಕೆ ಹೆಸರಾಗಿದ್ದ ಸಿದ್ದಗಂಗಾ ಮಠ ಅಭಿನವ ಅನುಭವ ಮಂಟಪ ದಂತಿ ದ್ದರೆ, ಮಾತೃಹೃದಯಿಯಂತಿದ್ದ ಡಾ.ಶಿವ ಕುಮಾರ ಸ್ವಾಮೀಜಿ ಅಭಿನವ ಬಸವಣ್ಣ ನಂತೆ ಬದುಕಿದರು ಎಂದು ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿ. ಸೋಮಶೇಖರ್ ಅಭಿಪ್ರಾಯಪಟ್ಟಿದ್ದಾರೆ. ಮೈಸೂರಿನ ಹೊಸಮಠದಲ್ಲಿ ಪ್ರಾಚ್ಯ ವಿದ್ಯಾ ಸಂಶೋಧನಾಲಯ ನಿವೃತ್ತ ನಿರ್ದೇಶಕ ಡಾ.ಎಸ್.ಶಿವರಾಜಪ್ಪ ರಚಿಸಿರುವ ‘ಮಾದೇ ಶ್ವರರ ಸಾಹಿತ್ಯಿಕ ನೆಲೆಗಳ ಹುಡುಕಾಟ’ ಮತ್ತು ‘ನಡೆದಾಡಿದ ದೇವರು’ ಕೃತಿಯನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಡಾ.ಎಸ್.ಶಿವರಾಜಪ್ಪ ಅವರು 15 ಮತ್ತು…
ಅಡುಗೆ ಅನಿಲ ಸಿಲಿಂಡರ್ ಬೆಲೆ ಹೆಚ್ಚಳ ಖಂಡಿಸಿ ಪ್ರತಿಭಟನೆ
September 3, 2021ಮೈಸೂರು,ಸೆ.2(ಪಿಎಂ)-ಪದೇ ಪದೆ ಅಡುಗೆ ಅನಿಲದ ಸಿಲಿಂಡರ್ ಬೆಲೆ ಏರಿಕೆ ಮಾಡುತ್ತಿರುವುದನ್ನು ಖಂಡಿಸಿ ದೇವರಾಜ ಅರಸು ಪ್ರತಿಮೆ ಪ್ರತಿಷ್ಠಾಪನ ಸಮಿತಿಯ ವತಿಯಿಂದ ಸಿಲಿಂಡರ್‍ಗೆ ಎಳ್ಳು-ನೀರು ಬಿಡುವ ಮೂಲಕ ಗುರುವಾರ ವಿನೂತನವಾಗಿ ಪ್ರತಿಭಟನೆ ನಡೆಸಲಾಯಿತು. ಮೈಸೂರಿನ ನ್ಯಾಯಾಲಯದ ಎದುರಿನ ಗಾಂಧಿ ಪುತ್ತಳಿ ಬಳಿ ಜಮಾಯಿಸಿದ ಪ್ರತಿಭಟನಾಕಾರರು, ಸಿಲಿಂಡರ್ ಒಂದಕ್ಕೆ ಎಳ್ಳು-ನೀರು ಬಿಟ್ಟು ಬೆಲೆ ಹೆಚ್ಚಳದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸಮಿತಿ ಅಧ್ಯಕ್ಷ ಜಾಕೀರ್ ಹುಸೇನ್ ಮಾತನಾಡಿ, ಸದ್ಯದ ಗ್ಯಾಸ್ ಸಿಲಿಂಡರ್ ಬೆಲೆಗೆ ಹೋಲಿಸಿದರೆ, ವಿದ್ಯುತ್ ದರವೇ ಕಡಿಮೆ ಇದೆ. ಜ.1ರಿಂದ…
ಮುಡಾದಿಂದ ಶೀಘ್ರ 288 ಸಿಎ ನಿವೇಶನ ಹಂಚಿಕೆ
September 3, 2021ಮೈಸೂರು, ಸೆ.2(ಆರ್‍ಕೆ)-ಮೈಸೂರಿನ ವಿವಿಧ ಬಡಾವಣೆಗಳಲ್ಲಿ ಲಭ್ಯವಿರುವ 288 ನಾಗರಿಕ ಸೌಲಭ್ಯ (ಸಿಎ)ನಿವೇಶನಗಳನ್ನು ಹಂಚಿಕೆ ಮಾಡಲು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ವು ಶೀಘ್ರ ಅರ್ಜಿ ಆಹ್ವಾನಿಸಲಿದೆ. ಹಂಚಿಕೆಗೆ ಸಿದ್ಧವಾಗಿರುವ ನಿವೇ ಶನಗಳ ಅಂತಿಮ ಪಟ್ಟಿ ತಯಾ ರಿಸಿರುವ ಪ್ರಾಧಿಕಾರದ ನಗರ ಯೋಜನಾ ಶಾಖೆಯು ಅಧಿ ಸೂಚನೆಗಾಗಿ ಕಡತವನ್ನು ಆಯು ಕ್ತರ ಕಚೇರಿಗೆ ರವಾನಿಸಿದೆ. ಶ್ರೀರಾಂಪುರ, ಉದ್ಬೂರು, ವಾಜ ಮಂಗಲ, ವಸಂತನಗರ, ವಿಜಯನಗರ 2ನೇ ಹಂತ, 3 ಮತ್ತು 4ನೇ ಹಂತ, ಯಾಂದಳ್ಳಿ, ಯರಗನಹಳ್ಳಿ, ಆಲನಹಳ್ಳಿ, ಅನಗಳ್ಳಿ, ಅಯ್ಯಾಜಯ್ಯನ ಹುಂಡಿ, ಬಸವನಹಳ್ಳಿ,…
ಡಾ. ಸಿದ್ದಲಿಂಗಯ್ಯನವರ ಪ್ರತಿಷ್ಠಾನ, ಪೀಠ ಸ್ಥಾಪಿಸಿ ಚಿಂತನೆ ಕಾರ್ಯಗತಗೊಳಿಸಬೇಕು
September 3, 2021ಮೈಸೂರು,ಸೆ.2(ಪಿಎಂ)-ದಲಿತ ಕ್ರಾಂತಿ ಕಾರಿ ಕವಿ ಡಾ.ಸಿದ್ದಲಿಂಗಯ್ಯ ಅವರನ್ನು ಕೇವಲ ಪ್ರತಿಮೆಗೆ ಸೀಮಿತಗೊಳಿಸದೇ ಅವರ ಹೆಸರಿನಲ್ಲಿ ಪ್ರತಿಷ್ಠಾನ, ಪೀಠ ಸ್ಥಾಪಿಸಿ, ಅವರ ಚಿಂತನೆಗಳನ್ನು ಕಾರ್ಯರೂಪಕ್ಕೆ ತರಬೇಕಿದೆ ಎಂದು ಸಂಸದ ವಿ.ಶ್ರೀನಿ ವಾಸ ಪ್ರಸಾದ್ ಸಲಹೆ ನೀಡಿದರು. ಮೈಸೂರು ವಿವಿ ಡಾ.ಬಿ.ಆರ್.ಅಂಬೇ ಡ್ಕರ್ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರದಿಂದ ಮಾನಸಗಂಗೋತ್ರಿಯ ಕೇಂದ್ರದ `ವಿಶ್ವಜ್ಞಾನಿ’ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ `ಹೋರಾ ಟದ ಸಾಗರಕ್ಕೆ ಸಾವಿಲ್ಲದ ನದಿ ; ಡಾ. ಸಿದ್ದಲಿಂಗಯ್ಯ’ ವಿಚಾರಗೋಷ್ಠಿ ಉದ್ಘಾ ಟಿಸಿ ಅವರು ಮಾತನಾಡಿದರು. ಡಾ.ಸಿದ್ದಲಿಂಗಯ್ಯ ನನಗಿಂತ ಚಿಕ್ಕವ…
ಎಸ್‍ಸಿ, ಎಸ್‍ಟಿ ಉದ್ಯಮಿಗಳಿಗೆ ಎರಡು ಕೋಟಿ ರೂ.ವರೆಗೆ ಬಡ್ಡಿರಹಿತ ಸಾಲ ಒದಗಿಸಿ
September 3, 2021ಮೈಸೂರು,ಸೆ.2(ಪಿಎಂ)-ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉದ್ಯಮಿಗಳಿಗೆ 2 ಕೋಟಿ ರೂ.ವರೆಗೆ ಬಡ್ಡಿರಹಿತ ಸಾಲ ಸೌಲಭ್ಯ ಸೇರಿದಂತೆ ವಿವಿಧ ಸೌಕರ್ಯಗಳನ್ನು ಸರ್ಕಾರ ಕಲ್ಪಿಸಿಕೊಡ ಬೇಕೆಂದು ಕರ್ನಾಟಕ ರಾಜ್ಯ ದಲಿತ ಉದ್ಯಮಿಗಳ ಸಂಘದ ಅಧ್ಯಕ್ಷರೂ ಆದ ರಾಜ್ಯಸಭಾ ಸದಸ್ಯ ಡಾ.ಎಲ್.ಹನುಮಂತಯ್ಯ ಒತ್ತಾಯಿಸಿದರು. ಮೈಸೂರಿನ ಜೆಎಲ್‍ಬಿ ರಸ್ತೆಯ ಇಂಜಿನಿಯರ್ ಗಳ ಸಂಸ್ಥೆ ಸಭಾಂಗಣದಲ್ಲಿ ಮೈಸೂರು ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉದ್ಯಮಿಗಳು ಸಂಘದ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ವಿಭಾಗ ಮಟ್ಟದ ಕುಂದು-ಕೊರತೆ ಸಭೆ ಉದ್ಘಾಟಿಸಿ ಅವರು ಮಾತನಾಡಿದರು….
ನೆನೆಗುದಿಗೆ ಬಿದ್ದಿರುವ ಪ್ರಮುಖ ರಸ್ತೆ ಕಾಮಗಾರಿ: ಹರೀಶ್‍ಗೌಡ ನೇತೃತ್ವದಲ್ಲಿ ಕಾಂಗ್ರೆಸ್ ಪ್ರತಿಭಟನೆ
September 3, 2021ಮೈಸೂರು, ಸೆ.2- ಕಳೆದ ಸುಮಾರು ಒಂದೂವರೆ ವರ್ಷದಿಂದ ಕುಂಟುತ್ತಾ ಸಾಗುತ್ತಿರುವ ರಸ್ತೆ ಅಭಿವೃದ್ಧಿ ಕಾಮ ಗಾರಿಯನ್ನು ಶೀಘ್ರವೇ ಪೂರ್ಣಗೊಳಿಸ ಬೇಕು ಎಂದು ಆಗ್ರಹಿಸಿ ಮೈಸೂರಿನ ವಿಜಯ ನಗರ ಮೊದಲನೇ ಹಂತದಲ್ಲಿರುವ ಉಪ ನೋಂದಾಣಾಧಿಕಾರಿಗಳ ಕಚೇರಿ ಮುಂದೆ ಕಾಂಗ್ರೆಸ್ ಕಾರ್ಯಕರ್ತರು ಗುರುವಾರ ಬೆಳಗ್ಗೆ ಪ್ರತಿಭಟನೆ ನಡೆಸಿದರು. ರಸ್ತೆ ಅಭಿವೃದ್ಧಿಪಡಿಸುವ ಸಲುವಾಗಿ ವಿಜಯನಗರ ವಾಟರ್ ಟ್ಯಾಂಕ್‍ನಿಂದ ಶಾಸಕ ಜಿ.ಟಿ.ದೇವೇಗೌಡ ಅವರ ಮನೆ ವರೆಗೆ ರಸ್ತೆಯನ್ನು ಸಂಪೂರ್ಣ ಅಗೆದು ಬಿಟ್ಟಿದ್ದು, ಕಳೆದ ಒಂದೂವರೆ ವರ್ಷ ದಿಂದ ಕಾಮಗಾರಿ ಪೂರ್ಣಗೊಳಿಸದೇ ಇರುವ ಕಾರಣ…
ಇಂದಿನಿಂದ 5 ದಿನ `ಬುಡಕಟ್ಟು ಸಾಹಿತ್ಯ, ಸಂಸ್ಕøತಿ ಶಿಬಿರ’
September 2, 2021ಮೈಸೂರು, ಸೆ.1(ಆರ್‍ಕೆಬಿ)- ಕರ್ನಾಟಕ ಸಾಹಿತ್ಯ ಅಕಾಡೆಮಿ, ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ಸಹಯೋಗದಲ್ಲಿ ‘ಗಿರಿಜನ ಉಪ ಯೋಜನೆ ಯಡಿ ಸೆ.2ರಿಂದ 6ರವರೆಗೆ `ಬುಡಕಟ್ಟು ಸಾಹಿತ್ಯ ಮತ್ತು ಸಂಸ್ಕೃತಿ’ ಶಿಬಿರ’ ಆಯೋಜಿಸಲಾಗಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಬಿ.ವಿ.ವಸಂತಕುಮಾರ್ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧ ವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಐದು ದಿನಗಳ ಶಿಬಿರ ಎಚ್.ಡಿ.ಕೋಟೆ ತಾಲೂಕಿನ ಹೊಸಹಳ್ಳಿಯ ವಿವೇಕ ಗಿರಿಜನ ಶೈಕ್ಷಣಿಕ ಕೇಂದ್ರದಲ್ಲಿ ನಡೆಯಲಿದೆ. ಗುರುವಾರ (ಆ.2) ಬೆಳಗ್ಗೆ 10.30ಕ್ಕೆ…
ದರೋಡೆ, ಅತ್ಯಾಚಾರ ಖಂಡಿಸಿ ಪ್ರತಿಭಟನೆ
September 2, 2021ಮೈಸೂರು,ಸೆ.1(ಪಿಎಂ)- ಇತ್ತೀಚೆಗೆ ನಡೆದ ದರೋಡೆ ಪ್ರಕರಣದಲ್ಲಿ ದುಷ್ಕರ್ಮಿಗಳ ಗುಂಡಿಗೆ ಬಲಿಯಾದ ಅಮಾಯಕನ ಕುಟುಂಬಕ್ಕೆ ಮತ್ತು ಸಾಮೂಹಿಕ ಅತ್ಯಾಚಾರದ ಸಂತ್ರಸ್ತೆಗೆ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿ ಕರ್ನಾಟಕ ಜನಪರ ವೇದಿಕೆ ವತಿಯಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು. ಮೈಸೂರು ಡಿಸಿ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾಕಾರರು, ಸಾಮೂಹಿಕ ಅತ್ಯಾಚಾರ ನಡೆಸಿದ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿ ದರು. ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆಗೆ ಸೂಕ್ತ ಸರ್ಕಾರಿ ಉದ್ಯೋಗ ನೀಡಬೇಕು. ಜೊತೆಗೆ ದರೋಡೆಕೋರರ ಗುಂಡಿಗೆ ಬಲಿಯಾದ ಅಮಾಯಕನ ಕುಟುಂಬಕ್ಕೆ ಸೂಕ್ತ…
ಅರ್ಚಕ, ಪುರೋಹಿತ, ಅಡುಗೆ ಕೆಲಸದವರು `ಇ-ಶ್ರಮ್’ ಮೂಲಕ ನೋಂದಣಿ ಮಾಡಿಕೊಳ್ಳಲು ಮನವಿ
September 2, 2021ಮೈಸೂರು, ಸೆ.1(ಆರ್‍ಕೆಬಿ)- ಕೇಂದ್ರ ಸರ್ಕಾರ ಅರ್ಚಕ, ಪುರೋ ಹಿತರು ಹಾಗೂ ಅಡುಗೆ ಕೆಲಸದವರನ್ನು ಅಸಂಘ ಟಿತ ಕಾರ್ಮಿಕರ ವಲಯಕ್ಕೆ ಸೇರ್ಪಡಿಸುವ ಆದೇಶ ಹೊರಡಿಸಿದೆ. ಹಾಗಾಗಿ ಕೇಂದ್ರ ಸರ್ಕಾರದ ಇ-ಶ್ರಮ್ ವೆಬ್‍ಸೈಟ್ ಅಥವಾ ಗ್ರಾಹಕ ಸೇವಾ ಕೇಂದ್ರಗಳ ಮೂಲಕ ನೋಂದಣಿ ಮಾಡಿಕೊಳ್ಳುವಂತೆ ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್ ಮನವಿ ಮಾಡಿದ್ದಾರೆ. ಮೈಸೂರು ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಆರ್ಚಕ, ಪುರೋಹಿತರು, ಅಡುಗೆ ಕೆಲಸದವ ರನ್ನು ಅಸಂಘಟಿತ ಕಾರ್ಮಿಕರ ವಲಯಕ್ಕೆ ಸೇರ್ಪಡೆ ಮಾಡುವಂತೆ ಹೋರಾಟ…










