ಮೈಸೂರು

ಕಸ ವಿಲೇವಾರಿ ಶೆಡ್ ನಿರ್ಮಾಣಕ್ಕೆ ಭೂಮಿಪೂಜೆ
ಮೈಸೂರು

ಕಸ ವಿಲೇವಾರಿ ಶೆಡ್ ನಿರ್ಮಾಣಕ್ಕೆ ಭೂಮಿಪೂಜೆ

July 21, 2021

ತಿ.ನರಸೀಪುರ, ಜು.20(ಎಸ್‍ಕೆ)-ಕೊರೊನಾ ವೇಳೆ ಪುರಸಭೆಗೆ ಯಾವುದೇ ಅನುದಾನ ಬಾರದ ಹಿನ್ನೆಲೆಯಲ್ಲಿ ಅಭಿ ವೃದ್ಧಿ ಕಾಮಗಾರಿಗಳು ಕುಂಠಿತಗೊಂಡಿದ್ದು, ಮಾಜಿ ಸಿಎಂ ಸಿದ್ದರಾಮಯ್ಯನವರು ಈ ಹಿಂದೆ ನೀಡಿದ್ದ ಆನುದಾನದಲ್ಲೇ ಕಾಮ ಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದು ಪುರಸಭಾಧ್ಯಕ್ಷ ಎನ್.ಸೋಮು ಹೇಳಿದರು. ಪುರಸಭೆ ವ್ಯಾಪ್ತಿಯ ಆಲಗೂಡು ಗ್ರಾಮದ 14ನೇ ವಾರ್ಡ್‍ನ ಯುಜಿಡಿ ಪ್ಲಾಂಟ್ ಬಳಿ 15ನೇ ಹಣಕಾಸು ಯೋಜನೆಯಡಿ 11.40 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ವಾಗುತ್ತಿರುವ ಕಸ ವಿಲೇವಾರಿ ಶೆಡ್ ನಿರ್ಮಾಣ ಕಾಮಗಾರಿಗೆ ಪುರಸಭಾ ಸದಸ್ಯ ಆರ್.ಅರ್ಜುನ್ ಅವರೊಂದಿಗೆ ಭೂಮಿ…

ಜು.31ರೊಳಗೆ ಬೆಳೆ ವಿಮೆಗೆ ಮುಸುಕಿನ ಜೋಳ, ರಾಗಿ,  ತೊಗರಿ, ಹತ್ತಿ, ಅರಿಶಿಣ ಬೆಳೆಗಾರರು ನೋಂದಾಯಿಸಿಕೊಳ್ಳಿ
ಮೈಸೂರು

ಜು.31ರೊಳಗೆ ಬೆಳೆ ವಿಮೆಗೆ ಮುಸುಕಿನ ಜೋಳ, ರಾಗಿ, ತೊಗರಿ, ಹತ್ತಿ, ಅರಿಶಿಣ ಬೆಳೆಗಾರರು ನೋಂದಾಯಿಸಿಕೊಳ್ಳಿ

July 20, 2021

ಮೈಸೂರು,ಜು.19(ಆರ್‍ಕೆಬಿ)-ಈ ಸಾಲಿನ ಮುಂಗಾರು ಹಂಗಾಮಿಗೆ ಸೂಚಿಸಲಾಗಿ ರುವ ರಾಗಿ (ನೀರಾವರಿ) ಹಾಗೂ ಮಳೆಯಾಶ್ರಿತ ಮುಸುಕಿನ ಜೋಳ, ರಾಗಿ, ತೊಗರಿ, ಹತ್ತಿ, ಅರಿಶಿಣ ಬೆಳೆ ಗಳಿಗೆ ಬೆಳೆ ವಿಮಾ ಅವಧಿ ಜು.31ರವರೆಗೂ ಇದ್ದು, ರೈತರು ನಿಗದಿತ ದಿನಾಂಕದೊಳಗೆ ವಿಮಾ ಕಂತಿನ ಮೊತ್ತವನ್ನು ಪಾವತಿಸಿ, ಬೆಳೆ ವಿಮೆ ಯೋಜನೆ ಪ್ರಯೋಜನ ಪಡೆದುಕೊಳ್ಳುವಂತೆ ಮೈಸೂರಿನ ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಎಂ.ಮಹಾಂತೇಶಪ್ಪ ತಿಳಿಸಿದ್ದಾರೆ. ಕೃಷಿ ಇಲಾಖೆಗೆ ಸಂಬಂಧಿಸಿದಂತೆ ರೈತರಿಗಾಗಿ ಸೋಮ ವಾರ ಆಯೋಜಿಸಿದ್ದ ನೇರ ಫೋನ್ ಇನ್ ಕಾರ್ಯಕ್ರಮದ ಬಳಿಕ `ಮೈಸೂರು…

ದಕ್ಷ ಪಿಯು ಕಾಲೇಜು, ಗೆಟ್ಸ್ ಅಕಾಡೆಮಿ  ವತಿಯಿಂದ ಕೋವಿಡ್ ಲಸಿಕೆ ಅಭಿಯಾನ
ಮೈಸೂರು

ದಕ್ಷ ಪಿಯು ಕಾಲೇಜು, ಗೆಟ್ಸ್ ಅಕಾಡೆಮಿ ವತಿಯಿಂದ ಕೋವಿಡ್ ಲಸಿಕೆ ಅಭಿಯಾನ

July 20, 2021

ಮೈಸೂರು,ಜು.19(ಪಿಎಂ)- ಹುಣ ಸೂರು ರಸ್ತೆಯ ಹೂಟಗಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ದಕ್ಷ ಪಿಯು ಕಾಲೇಜು ಮತ್ತು ಗೆಟ್ಸ್ ಅಕಾಡೆಮಿಯಲ್ಲಿ ಇತ್ತೀಚೆಗೆ ವಿದ್ಯಾರ್ಥಿಗಳು, ಬೋಧಕರು, ಸಿಬ್ಬಂದಿಗೆ ಕೋವಿಡ್ ಲಸಿಕೆ ನೀಡಲಾಯಿತು. ಕೋವಿಡ್ ಹಿನ್ನೆಲೆಯಲ್ಲಿ ವಿದ್ಯಾರ್ಥಿ ಗಳು, ಬೋಧಕರು ಮತ್ತು ಸಿಬ್ಬಂದಿಯ ಸುರಕ್ಷತೆಗೆ ಅಗತ್ಯವಿರುವ ಕ್ರಮಗಳನ್ನು ಕೈಗೊಂಡಿದ್ದು, ಅದರ ಮುಂದುವರೆದ ಭಾಗವಾಗಿ ಲಸಿಕೆ ಸಹ ನೀಡಲಾಯಿತು. ಒಟ್ಟು 31 ಬೋಧಕರ ಪೈಕಿ 24 ಮಂದಿಗೆ ಕೋವಿಶೀಲ್ಡ್ ಮತ್ತು 7 ಮಂದಿ ಕೋವ್ಯಾ ಕ್ಸಿನ್, 27 ಬೋಧಕೇತರ ಸಿಬ್ಬಂದಿ ಪೈಕಿ 21 ಮಂದಿಗೆ…

ಮೈಸೂರಲ್ಲಿ ಮುಂದುವರೆದ ಫುಟ್‍ಪಾತ್ ಅತಿಕ್ರಮಣ ತೆರವು ಕಾರ್ಯಾಚರಣೆ
ಮೈಸೂರು

ಮೈಸೂರಲ್ಲಿ ಮುಂದುವರೆದ ಫುಟ್‍ಪಾತ್ ಅತಿಕ್ರಮಣ ತೆರವು ಕಾರ್ಯಾಚರಣೆ

July 20, 2021

ಮೈಸೂರು, ಜು.19(ಎಸ್‍ಬಿಡಿ)- ಮೈಸೂರಿನ ಫುಟ್‍ಪಾತ್ ಅತಿಕ್ರಮಣ ತೆರವು ಕಾರ್ಯಾಚರಣೆ ಮುಂದು ವರೆದಿದ್ದು, ಸೋಮವಾರ ಹಿರಿಯ ಪೊಲೀಸ್ ಅಧಿಕಾರಿಗಳೇ ರಸ್ತೆಗಿಳಿದು ವ್ಯಾಪಾರಿಗಳಿಗೆ ತಿಳಿಹೇಳಿದರು. ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಗೀತಾಪ್ರಸನ್ನ, ಸಂಚಾರ ವಿಭಾಗದ ಎಸಿಪಿ ಎಸ್.ವಿ.ಗಂಗಾಧರಸ್ವಾಮಿ, ಹಲವು ಠಾಣೆಯ ಇನ್‍ಸ್ಪೆಕ್ಟರ್, ಸಬ್‍ಇನ್‍ಸ್ಪೆಕ್ಟರ್ ಗಳು ಹಾಗೂ ಸಿಬ್ಬಂದಿಯೊಂದಿಗೆ ಸೋಮವಾರ ಸಂಜೆ ಮಂಡಿಮೊಹಲ್ಲಾದ ಸಾಡೇ ರಸ್ತೆ, ಕಬೀರ್ ರಸ್ತೆ ಹಾಗೂ ಕೆ.ಟಿ.ಸ್ಟ್ರೀಟ್ ರಸ್ತೆಗಳಲ್ಲಿ ಕಾರ್ಯಾಚರಣೆ ನಡೆಸಿದರು. ಮಾರಾಟದ ವಸ್ತುಗಳನ್ನು ಫುಟ್‍ಪಾತ್‍ನಲ್ಲಿ ಇಟ್ಟಿದ್ದ ಮಳಿಗೆದಾರರಿಗೆ ಎಚ್ಚರಿಕೆ ನೀಡಿ, ಆ ಕ್ಷಣದಲ್ಲೇ ತೆರವು…

ಬೆಸಸಂಖ್ಯೆ ಸೆಮಿಸ್ಟರ್ ಪರೀಕ್ಷೆ ಕೈಬಿಟ್ಟು ಯುಜಿಸಿ ಮಾರ್ಗಸೂಚಿಯಂತೆ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ
ಮೈಸೂರು

ಬೆಸಸಂಖ್ಯೆ ಸೆಮಿಸ್ಟರ್ ಪರೀಕ್ಷೆ ಕೈಬಿಟ್ಟು ಯುಜಿಸಿ ಮಾರ್ಗಸೂಚಿಯಂತೆ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ

July 20, 2021

ಮೈಸೂರು, ಜು.19(ಪಿಎಂ)- ಪದವಿ, ಇಂಜಿನಿಯರಿಂಗ್, ಡಿಪ್ಲೊಮಾ ಮತ್ತು ಸ್ನಾತಕೋತ್ತರ ಪದವಿ ಸಂಬಂಧ ಒಂದೇ ತಿಂಗಳ ಅವಧಿಯಲ್ಲಿ ಎರಡು ಸಮಿಸ್ಟರ್ ಪರೀಕ್ಷೆಗಳನ್ನು (ಬೆಸಸಂಖ್ಯೆ ಸೆಮಿಸ್ಟರ್ ಪರೀಕ್ಷೆ) ನಡೆಸುವ ನಿರ್ಧಾರವನ್ನು ಸರ್ಕಾರ ಕೈಬಿಡಬೇಕೆಂದು ಆಗ್ರಹಿಸಿ ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈ ಸೇಷನ್ (ಎಐಡಿಎಸ್‍ಓ) ನೇತೃತ್ವದಲ್ಲಿ ವಿವಿಧ ಕಾಲೇಜು ವಿದ್ಯಾರ್ಥಿಗಳು ಸೋಮವಾರ ಪ್ರತಿಭಟನೆ ನಡೆಸಿದರು. ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾಕಾರರು, ಅಂತಿಮ ಸೆಮಿಸ್ಟರ್ ಪರೀಕ್ಷೆ ಮಾತ್ರ ಕಡ್ಡಾಯವಾಗಿ ನಡೆಸಬೇಕು. ಮಧ್ಯಂತರ ಮತ್ತು ವಾರ್ಷಿಕ ಸೆಮಿಸ್ಟರ್ ಪರೀಕ್ಷೆಗಳನ್ನು ಕೈಬಿಟ್ಟು,…

ಬಿಪಿಎಲ್ ಪಡಿತರ ಚೀಟಿ ಯಾವಾಗ ಕೊಡ್ತಿರಾ?
ಮೈಸೂರು

ಬಿಪಿಎಲ್ ಪಡಿತರ ಚೀಟಿ ಯಾವಾಗ ಕೊಡ್ತಿರಾ?

July 20, 2021

ಮೈಸೂರು, ಜು.19(ಪಿಎಂ)- ಅರ್ಜಿ ಸಲ್ಲಿಸಿ ಮೂರ್ನಾಲ್ಕು ತಿಂಗಳು ಕಳೆದರೂ ಬಿಪಿಎಲ್ (ಬಡತನ ರೇಖೆಗಿಂತ ಕೆಳಗೆ) ಪಡಿತರ ಚೀಟಿ ಲಭ್ಯವಾಗಿಲ್ಲದ ಬಗ್ಗೆಯೇ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಫೋನ್ ಇನ್ ಕಾರ್ಯಕ್ರಮದಲ್ಲಿ ಹೆಚ್ಚು ಕರೆಗಳು ಬಂದವು. ಈ ಸಂಬಂಧ ಕೋವಿಡ್ ಲಾಕ್‍ಡೌನ್ ಹಿನ್ನೆಲೆಯಲ್ಲಿ ಸರ್ಕಾರದ ನಿರ್ದೇಶನದ ಹಿನ್ನೆಲೆಯಲ್ಲಿ ಪಡಿತರ ಚೀಟಿ ವಿತರಣಾ ಪ್ರಕ್ರಿಯೆ ತಾತ್ಕಾಲಿಕ ಸ್ಥಗಿತಗೊಂಡಿದೆ ಎಂಬ ಮಾಹಿತಿಯನ್ನು ಇಲಾಖೆ ಅಧಿಕಾರಿಗಳು ನೀಡಿದರು. ಇಲಾಖೆಗೆ ಸಂಬಂಧಿಸಿದಂತೆ ಮೈಸೂರು ಜಿಲ್ಲೆಯ ಸಾರ್ವಜನಿಕರ ಕುಂದು-ಕೊರತೆ ಪರಿಹಾರಕ್ಕಾಗಿ ಕಳೆದ…

ಕನ್ನಡದಲ್ಲಿ ಬ್ಯಾಂಕಿಂಗ್ ಪರೀಕ್ಷೆಗೆ ಆಗ್ರಹಿಸಿ ಪ್ರತಿಭಟನೆ
ಮೈಸೂರು

ಕನ್ನಡದಲ್ಲಿ ಬ್ಯಾಂಕಿಂಗ್ ಪರೀಕ್ಷೆಗೆ ಆಗ್ರಹಿಸಿ ಪ್ರತಿಭಟನೆ

July 20, 2021

ಮೈಸೂರು,ಜು.19(ಪಿಎಂ)- ಬ್ಯಾಂಕಿಂಗ್ ಸಿಬ್ಬಂದಿ ನೇಮಕಾತಿ ಸಂಸ್ಥೆ ನಡೆಸುವ ಬ್ಯಾಂಕಿಂಗ್ ಪರೀಕ್ಷೆಯನ್ನು ಕನ್ನಡದಲ್ಲಿ ಬರೆಯಲು ಅವಕಾಶ ನೀಡಬೇಕೆಂದು ಆಗ್ರಹಿಸಿ ಮೈಸೂರು ಜಿಲ್ಲಾ ಕನ್ನಡ ಚಳು ವಳಿಗಾರರ ಸಂಘದ ವತಿಯಿಂದ ಸೋಮ ವಾರ ಪ್ರತಿಭಟನೆ ನಡೆಸಲಾಯಿತು. ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಹಿರಿಯ ಸಾಹಿತಿ ಗಳಾದ ಡಾ.ಸಿಪಿಕೆ (ಸಿ.ಪಿ.ಕೃಷ್ಣಕುಮಾರ್), ಪ್ರೊ.ಕೆ.ಎಸ್.ಭಗವಾನ್ ಸಹ ಪಾಲ್ಗೊಂಡು, ತಮ್ಮ ಬೆಂಬಲ ವ್ಯಕ್ತಪಡಿಸಿದರು. ಆರ್‍ಬಿಐ ಬ್ಯಾಂಕಿಂಗ್ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಪ್ರಾದೇಶಿಕ ಭಾಷೆಗಳಲ್ಲಿ ಬರೆಯಲು ಅವಕಾಶ ಕಲ್ಪಿಸಿದೆ. ಆದರೆ ರಾಜ್ಯದಲ್ಲಿ ಇದನ್ನು ಜಾರಿಗೊಳಿಸದೇ ಕೇಂದ್ರ…

ಮೈಸೂರಲ್ಲಿ ಸುಗಮವಾಗಿ ನಡೆದ SSಐಅ ಪರೀಕ್ಷೆ: 37,339 ವಿದ್ಯಾರ್ಥಿಗಳು ಹಾಜರಿ
ಮೈಸೂರು

ಮೈಸೂರಲ್ಲಿ ಸುಗಮವಾಗಿ ನಡೆದ SSಐಅ ಪರೀಕ್ಷೆ: 37,339 ವಿದ್ಯಾರ್ಥಿಗಳು ಹಾಜರಿ

July 20, 2021

ಮೈಸೂರು, ಜು.19(ಎಂಟಿವೈ)- ಹಲವು ಸವಾಲು, ವಿರೋಧ ಜೊತೆಗೆ ಆತಂಕದ ನಡುವೆಯೂ ಸೋಮವಾರ ಪ್ರಸಕ್ತ ಸಾಲಿನ ಎಸ್‍ಎಸ್‍ಎಲ್‍ಸಿ ಮೊದಲ ದಿನದ ಪರೀಕ್ಷೆ ಸುಸೂತ್ರವಾಗಿ ನಡೆಯಿತು. ಮೈಸೂರು ಜಿಲ್ಲೆ ಯಲ್ಲಿ 237 ಕೇಂದ್ರಗಳಲ್ಲಿ 37339 ವಿದ್ಯಾರ್ಥಿ ಗಳು ಪರೀಕ್ಷೆಗೆ ಹಾಜರಾದರೆ, ವಿವಿಧ ಕಾರಣದಿಂದ 197 ಮಂದಿ ಗೈರಾದರು. ಕೋವಿಡ್ 2ನೇ ಅಲೆಯ ಆತಂಕÀದಿಂದ ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಸಾರ್ವಜನಿಕ ವಲಯದಿಂದ ವ್ಯಾಪಕ ವಿರೋಧ ವ್ಯಕ್ತವಾ ಗಿತ್ತು. ಆದರೆ ಸರ್ಕಾರ ಅಗತ್ಯ ಸುರಕ್ಷತಾ ಕ್ರಮದೊಂದಿಗೆ ಪರೀಕ್ಷೆ ನಡೆಸಲು ನಿರ್ಧ ರಿಸಿತ್ತು. ಇತಿಹಾಸದಲ್ಲೇ ಇದೇ…

ಓಡಿಪಿಯಿಂದ ಜಿಲ್ಲಾಡಳಿತಕ್ಕೆ  ವಿವಿಧ ಪರಿಕರಗಳ ಕೊಡುಗೆ
ಮೈಸೂರು

ಓಡಿಪಿಯಿಂದ ಜಿಲ್ಲಾಡಳಿತಕ್ಕೆ ವಿವಿಧ ಪರಿಕರಗಳ ಕೊಡುಗೆ

July 19, 2021

ಮೈಸೂರು, ಜು.18(ಎಂಟಿವೈ)-ಮೈಸೂರಿನ ಓಡಿಪಿ ಸಂಸ್ಥೆಯು ಜಿಲ್ಲಾಡಳಿತಕ್ಕೆ 10 ಆಕ್ಸಿಜನ್ ಕಾನ್ಸಂಟ್ರೇಟರ್ ಸೇರಿದಂತೆ ಇನ್ನಿತರ ಪರಿಕರವನ್ನು ಕೊಡುಗೆಯಾಗಿ ನೀಡಿದೆ. ನವದೆಹಲಿಯ ಕ್ಯಾರಿಟಾಸ್ ಇಂಡಿಯಾ, ಕ್ಯಾಥೋ ಲಿಕ್ ಬಿಷಪ್ಸ್ ಕಾನ್ಫರೆನ್ಸ್ ಆಫ್ ಇಂಡಿಯಾ ಸಂಸ್ಥೆಯ ಸಾಮಾಜಿಕ ಕಾರ್ಯಕ್ರಮದ ಅಂಗ ವಾಗಿ ಓಡಿಪಿ ಸಂಸ್ಥೆ ಜಿಲ್ಲೆಯ ವಿವಿಧ ಸರ್ಕಾರಿ ಆಸ್ಪತ್ರೆಗಳಿಗೆ ವಿತರಿಸಲು 10 ಆಕ್ಸಿಜನ್ ಕಾನ್ಸಂ ಟ್ರೇಟರ್ ಅನ್ನು ಇತ್ತೀಚೆಗೆ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಅವರಿಗೆ ಹಸ್ತಾಂತರಿಸಿದೆ. ಈ ಆಕ್ಸಿಜನ್ ಕಾನ್ಸಂಟ್ರೇಟರ್‍ಗಳನ್ನು ವಿವಿ ಪುರಂನಲ್ಲಿರುವ ಹೆರಿಗೆ ಆಸ್ಪತ್ರೆ, ಜಯನಗರ ದಲ್ಲಿರುವ…

ಅವಿಶ್ವಾಸ ನೋಟಿಸ್ ಹಿಂಪಡೆದ ಸದಸ್ಯರು
ಮೈಸೂರು

ಅವಿಶ್ವಾಸ ನೋಟಿಸ್ ಹಿಂಪಡೆದ ಸದಸ್ಯರು

July 19, 2021

ತಿ.ನರಸೀಪುರ, ಜು.18(ಎಸ್‍ಕೆ)- ಪಟ್ಟಣದ ಪುರಸಭಾ ಅಧ್ಯಕ್ಷ-ಉಪಾಧ್ಯಕ್ಷರನ್ನು ಪದಚ್ಯುತಗೊಳಿಸಲು ಸಭೆ ಕರೆಯುವಂತೆ ಅಧ್ಯಕ್ಷರಿಗೆ ನೀಡಿದ್ದ ನೋಟಿಸ್ ಅನ್ನು ಕಾಲಾವಧಿ ಮೀರಿದ ಹಿನ್ನೆಲೆಯಲ್ಲಿ ಸದಸ್ಯರು ಹಿಂಪಡೆದಿದ್ದಾರೆ. ಪಟ್ಟಣದ ಪುರಸಭೆ ಅಧ್ಯಕ್ಷ ಎನ್.ಸೋಮು ಹಾಗೂ ಉಪಾಧ್ಯಕ್ಷೆ ಪ್ರೇಮಾ ಮರಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸಲು 18 ಮಂದಿ ಸದಸ್ಯರ ಸಹಿ ಇರುವ ನೋಟಿಸ್ ಅನ್ನು ಅಧ್ಯಕ್ಷರಿಗೆ ನೀಡಿ ಅವಿಶ್ವಾಸ ಮಂಡನೆ ಸಭೆ ಕರೆಯುವಂತೆ ಒತ್ತಾಯಿಸಿದ್ದರು. ಇದಕ್ಕೆ ಅಧ್ಯಕ್ಷ ಸೋಮು ಕೋವಿಡ್ ಹಿನ್ನೆಲೆಯಲ್ಲಿ ಸಭೆ ಕರೆಯಲು ಸಾಧ್ಯವಿಲ್ಲ ಎಂದು ಸದಸ್ಯರಿಗೆ ನೋಟಿಸ್ ಮೂಲಕವೇ ತಿಳಿಸಿದ್ದರು….

1 205 206 207 208 209 1,611
Translate »