ಪಿರಿಯಾಪಟ್ಟಣ, ಜು.17(ವೀರೇಶ್) ರಾಜ ಕೀಯ ನಿಂತ ನೀರಲ್ಲ. ಶಾಸಕ ಕೆ.ಮಹದೇವ್ ತಾಲೂಕಿನಾದ್ಯಂತ ಪಕ್ಷಭೇದ ಮರೆತು ಸಂಸದ ಪ್ರತಾಪ್ ಸಿಂಹ ಜೊತೆಗೂಡಿ ಜೋಡೆತ್ತಿನ ರೀತಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದರು. ರಾಜೀವ್ ಗಾಂಧಿ ವಸತಿ ನಿಗಮದ ವತಿ ಯಿಂದ ಪಟ್ಟಣದಲ್ಲಿ ನಡೆದ 2020-21ನೇ ಸಾಲಿನ ದೇವರಾಜ ಅರಸು ವಸತಿ ಯೋಜನೆ ಯಡಿ ವಿಧವೆಯರು ಮತ್ತು ಅಂಗವಿಕಲರಿಗೆ ಮನೆ ಮಂಜೂರಾತಿ ಆದೇಶ ಪತ್ರ ವಿತರಿಸಿ ಮಾತನಾಡಿದ ಅವರು, ಅರ್ಹತೆ ಇದ್ದರೂ ಕೆಲವರು ಸರ್ಕಾರಿ ಸವಲತ್ತಿನಿಂದ…
ಮೈಸೂರಲ್ಲಿ ನೀರು ಪೋಲಾಗುವುದನ್ನು ತಪ್ಪಿಸಲು ಪ್ರತೀ ಮನೆಗೂ `ಮೀಟರ್’ ಅಳವಡಿಸುವ ಅಭಿಯಾನ
July 17, 2021ಮೈಸೂರು, ಜು.16(ಆರ್‍ಕೆಬಿ)- ಕುಡಿಯುವ ನೀರನ್ನು ಯಥೇಚ್ಛವಾಗಿ ಪೋಲು ಮಾಡಲಾಗುತ್ತಿರುವುದನ್ನು ತಪ್ಪಿಸುವ ಸಲುವಾಗಿ ಮೈಸೂರಿನಲ್ಲಿ ಪ್ರತೀ ಮನೆಗೂ ಕುಡಿಯುವ ನೀರಿನ ಮೀಟರ್ ಅಳವಡಿಸುವುದರ ಬಗ್ಗೆ ವಿಶೇಷ ಕಾಳಜಿ ವಹಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು ತಿಳಿಸಿದರು. ಮೈಸೂರು ನಗರ ವ್ಯಾಪ್ತಿಯಲ್ಲಿ ಕುಡಿಯುವ ನೀರು ಮತ್ತು ಒಳಚರಂಡಿ ಸಮU್ರÀ ಯೋಜನೆ ರೂಪಿಸುವ ಸಂಬಂಧ ಹಾಗೂ ಪ್ರಸ್ತುತ ಪ್ರಗತಿಯಲ್ಲಿರುವ ಯೋಜನೆ ಗಳ ಕುರಿತಂತೆ ಪಾಲಿಕೆ ಸಭಾಂಗಣದಲ್ಲಿ ಜಿಲ್ಲಾ ಉಸ್ತು ವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರೊಂದಿಗೆ ನಡೆಸಿದ ಪ್ರಗತಿ…
ದೇವರಾಜ ಮಾರುಕಟ್ಟೆ, ಲ್ಯಾನ್ಸ್‍ಡೌನ್ ಬಿಲ್ಡಿಂಗ್ ಪಾರಂಪರಿಕ ಶೈಲಿಯಲ್ಲೇ ಪುನರ್ ನಿರ್ಮಾಣ
July 17, 2021ಮೈಸೂರು, ಜು.16(ಆರ್‍ಕೆ)- ಶಿಥಿಲಾವಸ್ಥೆಯಲ್ಲಿ ರುವ ಪಾರಂಪರಿಕ ಕಟ್ಟಡಗಳಾದ ಮೈಸೂರಿನ ದೇವರಾಜ ಮಾರುಕಟ್ಟೆ ಮತ್ತು ಲ್ಯಾನ್ಸ್‍ಡೌನ್ ಬಿಲ್ಡಿಂಗ್ ಗಳನ್ನು ನೆಲಸಮಗೊಳಿಸಿ, ಮೂಲ ಸ್ಥಿತಿಯಂತೆ ಪಾರಂಪರಿಕ ಶೈಲಿಯಲ್ಲೇ ಪುನರ್ ನಿರ್ಮಾಣ ಮಾಡಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಇಂದಿಲ್ಲಿ ಪ್ರಕಟಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮ ಶೇಖರ್, ಶಾಸಕ ಎಲ್. ನಾಗೇಂದ್ರ, ಪ್ರಭಾರ ಮೇಯರ್ ಅನ್ವರ್ ಬೇಗ್‍ರೊಂದಿಗೆ ಇಂದು ಬೆಳಗ್ಗೆ ದೇವರಾಜ ಮಾರುಕಟ್ಟೆ ಮತ್ತು ಲ್ಯಾನ್ಸ್ ಡೌನ್ ಕಟ್ಟಡಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದ ಸಚಿವರು, ಅಲ್ಲಿನ…
ಶಾಲೆ ಉಳಿಸಿ ಹೋರಾಟಗಾರರಿಂದ ಸಚಿವ ಎಸ್.ಟಿ.ಸೋಮಶೇಖರ್‍ಗೆ ಘೇರಾವ್
July 17, 2021ಮೈಸೂರು, ಜು.16(ಆರ್‍ಕೆಬಿ)- ಎನ್‍ಟಿಎಂ ಶಾಲೆ ಉಳಿಸಿ ಹೋರಾಟ ಒಕ್ಕೂಟದ ಕಾರ್ಯಕರ್ತರು ಶುಕ್ರವಾರ ಮೈಸೂರು ಮಹಾನಗರಪಾಲಿಕೆ ಆವ ರಣದಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಿಗೆ ಘೇರಾವ್ ಮಾಡಿ, ಎನ್‍ಟಿಎಂ ಶಾಲೆ ಕುರಿತಂತೆ ತಮ್ಮ ನಿಲುವು ಪ್ರಕಟಿಸುವಂತೆ ಆಗ್ರಹಿಸಿದರು. ಬೆಳಿಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡು ವಾಗ ತಮಗೆ ಎನ್‍ಟಿಎಂ ಶಾಲೆ ಹೋರಾಟದ ಬಗ್ಗೆ ಮಾಹಿತಿ ಇಲ್ಲ. ಇದು ತಮ್ಮ ಗಮನಕ್ಕೆ ಬಂದಿಲ್ಲ ಎಂದು ಹೇಳಿದ್ದಾರೆಂಬ ಬಗ್ಗೆ ಆಕ್ರೋಶಗೊಂಡಿದ್ದ ಪ್ರತಿಭಟನಾಕಾರರು ಎನ್‍ಟಿಎಂ ಶಾಲೆ ಬಳಿಯಿಂದ ನಗರಪಾಲಿಕೆ ಆವರಣಕ್ಕೆ ಧಾವಿಸಿದರು. ಅಲ್ಲಿ ಸಚಿವರು…
ಪುರಭವನದ ಮಲ್ಟಿಲೆವೆಲ್ ಪಾರ್ಕಿಂಗ್ ಲಾಟ್‍ನಲ್ಲಿ ಶೀಘ್ರ ವಾಹನ ನಿಲುಗಡೆ
July 17, 2021ಮೈಸೂರು, ಜು. 16(ಆರ್‍ಕೆ)- ಪುರಭವನದ ಆವರಣದಲ್ಲಿ ನಿರ್ಮಿ ಸಿರುವ ಮಲ್ಟಿಲೆವೆಲ್ ಪಾರ್ಕಿಂಗ್ ಲಾಟ್‍ನಲ್ಲಿ ವಾಹನಗಳ ನಿಲುಗಡೆಗೆ ಶೀಘ್ರ ವ್ಯವಸ್ಥೆ ಮಾಡಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ತಿಳಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್, ಶಾಸಕ ಎಲ್. ನಾಗೇಂದ್ರರೊಂದಿಗೆ ಇಂದು ಪಾರ್ಕಿಂಗ್ ಲಾಟ್‍ಗೆ ತೆರಳಿ ಪರಿಶೀಲಿಸಿದ ಸಚಿವರು, ಬೇಸ್‍ಮೆಂಟ್‍ನಲ್ಲಿ ಶೇಖರಣೆಯಾಗಿರುವ ನೀರನ್ನು ತೆರವುಗೊಳಿಸಿ, ಬಾಕಿ ಇರುವ ಕೆಲಸ ಪೂರ್ಣಗೊಳಿಸುವಂತೆ ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ನಂತರ ಸುದ್ದಿಗಾರರಿಗೆ ಮಾಹಿತಿ ನೀಡಿದ ಭೈರತಿ ಬಸವರಾಜ್, 600 ವಾಹನಗಳ…
ಸಂಸದ ಪ್ರತಾಪ್‍ಸಿಂಹ `ಅಮೃತ್’ ಫಲ: ಮೈಸೂರು ಜನತೆಗೆ ಹೆಚ್ಚುವರಿ ಜಲ
July 17, 2021ಮೈಸೂರು, ಜು. 16- ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರ ವಿಶೇಷ ಕಾಳಜಿ, ಪ್ರಯತ್ನ ಫಲಿಸಿದೆ. ಅರ್ಥಾತ್ ಮೈಸೂರಿನ ವಿಜಯನಗರ 2ನೇ ಹಂತದಲ್ಲಿ ಶುಕ್ರವಾರ ಬೃಹತ್ ನೀರಿನ ಟ್ಯಾಂಕ್ ಲೋಕಾರ್ಪಣೆಗೊಳ್ಳುವುದ ರೊಂದಿಗೆ ಮೈಸೂರು ನಗರದ ಲಕ್ಷಾಂತರ ಜನರಲ್ಲಿದ್ದ ನೀರಿನ ಆತಂಕ ನೀಗಿದೆ. ವಿಜಯನಗರ ಎರಡನೇ ಹಂತದ ನೀರಿನ ಟ್ಯಾಂಕ್ 2015ರವರೆಗೆ ಒಂದು ರೀತಿ ಬಯಲು ಕೊಳವಿದ್ದಂತಿತ್ತು. ಶಿಥಿಲಾ ವಸ್ಥೆಯಲ್ಲಿದ್ದ ಮೇಲ್ಛಾವಣಿ ಕೆಲವೆಡೆ ಕುಸಿದಿತ್ತು. ಕಸ ಕಡ್ಡಿ ಬಿದ್ದು ಕೊಳೆಯುವಂತಿತ್ತು. ಹಕ್ಕಿಗಳು ಹಾಗೂ ಇತರ ಪ್ರಾಣಿ-ಪಕ್ಷಿಗಳು ಬಿದ್ದು, ಕೊಳೆತು,…
ಶ್ರೀ ಚಾಮರಾಜೇಶ್ವರಸ್ವಾಮಿ ದರ್ಶನ ಪಡೆದ ಸಚಿವ
July 17, 2021ಚಾಮರಾಜನಗರ, ಜು.16(ಎಸ್‍ಎಸ್)- ಧಾರ್ಮಿಕ ದತ್ತಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶ್ರೀ ಚಾಮರಾಜೇಶ್ವರ ದೇವಾಲಯಕ್ಕೆ ಭೇಟಿ ನೀಡಿ, ಚಾಮ ರಾಜೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಕೆಂಪನಂಜಾಂಬ ಮತ್ತು ಚಾಮುಂಡೇಶ್ವರಿದೇವಿಯ ದರ್ಶನ ಪಡೆ ದರು. ದೇವಸ್ಥಾನದ ಒಳಾವರಣದಲ್ಲಿ ಪ್ರದಕ್ಷಿಣೆ ಹಾಕುವ ಮೂಲಕ ದೇವಸ್ಥಾನ ಪರಿಶೀಲಿಸಿದರು. ಈ ವೇಳೆ ಸುದ್ದಿಗಾರರೊಂ ದಿಗೆ ಮಾತನಾಡಿದ ಸಚಿವರು, ಈ ಪುರಾ ತನ ದೇವಸ್ಥಾನದ ಅಭಿವೃದ್ಧಿಗೆ ಕೈಗೊಳ್ಳ ಬಹುದಾದ ಕ್ರಮಗಳ ಕುರಿತು ಸಂಬಂಧ ಪಟ್ಟ ಅಧಿಕಾರಿಗಳ ಜೊತೆ ಚರ್ಚಿಸ ಲಾಗುವುದು. ಇದಲ್ಲದೆ…
ಸ್ವಚ್ಛತೆಗೆ ಆದ್ಯತೆ ನೀಡದಿದ್ದರೆ ಸೂಕ್ತ ಕ್ರಮದ ಎಚ್ಚರಿಕೆ
July 17, 2021ಭೇರ್ಯ, ಜು.16- ಸ್ವಚ್ಛತೆ ಹಾಗೂ ನೈರ್ಮಲ್ಯಕ್ಕೆ ಹೆಚ್ಚು ಆದ್ಯತೆ ನೀಡದಿದ್ದರೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ತಾಪಂ ಇಓ ಹೆಚ್.ಕೆ.ಸತೀಶ್ ಭೇರ್ಯ ಗ್ರಾಪಂ ಪಿಡಿಓ ಹಾಗೂ ಸಿಬ್ಬಂದಿಗೆ ಎಚ್ಚರಿಕೆ ನೀಡಿದರು. ಭೇರ್ಯ ಗ್ರಾಪಂಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು ಗ್ರಾಪಂ ಅಧ್ಯಕ್ಷರು ಹಾಗೂ ಸಿಬ್ಬಂದಿ ಜೊತೆ ಚರ್ಚಿಸಿದರು. ಬಳಿಕ ಮಾತನಾಡಿದ ಅವರು, ಗ್ರಾಪಂ ವ್ಯಾಪ್ತಿಯ ಬಡವರನ್ನು ನಿತ್ಯ ಪಂಚಾ ಯತಿಗೆ ಅಲೆಸಬೇಡಿ, ಅವರಿಂದ ಪಡೆದ ಅರ್ಜಿಗಳನ್ನು ಮುತುವರ್ಜಿ ವಹಿಸಿ ಶೀಘ್ರ ವಿಲೇವಾರಿ ಮಾಡಿ. ಇಲ್ಲದಿದ್ದಲ್ಲಿ…
ಕೆರೆ ಕಟ್ಟೆಗಳ ಅಭಿವೃದ್ಧಿಗೆ ನರೇಗಾ ಸದ್ಬಳಕೆ ಶ್ಲಾಘನೀಯ
July 17, 2021ಹುಣಸೂರು, ಜು.16(ಕೆಕೆ)- ತಾಲೂಕಿನ ಕರ್ಣಕುಪ್ಪೆ ಗ್ರಾಪಂ ವ್ಯಾಪ್ತಿಯ 13 ಕೆರೆಗಳ ಅಭಿವೃದ್ಧಿಗೆ ನರೇಗಾ ಯೋಜನೆ ಸದ್ಬಳಕೆ ಮಾಡಿಕೊಂಡಿರುವುದು ಶ್ಲಾಘನೀಯ ಎಂದು ಶಾಸಕ ಹೆಚ್.ಪಿ.ಮಂಜುನಾಥ್ ತಿಳಿಸಿದರು. ಗ್ರಾಪಂ ವ್ಯಾಪ್ತಿಯಲ್ಲಿ ಅಭಿವೃದ್ಧಿ ಹೊಂದುತ್ತಿರುವ ಕರಿಯಯ್ಯನಕೆರೆ, ಹಳೆಕೆರೆ, ಕಣಗಾಲಮ್ಮನ ಕೆರೆಗಳ ಅಭಿವೃದ್ಧಿ ಪರಿಶೀಲಿಸಿ ಮಾತನಾಡಿದ ಅವರು, ಇದೇ ರೀತಿ ನರೇಗಾ ಯೋಜನೆಯಡಿ ಪಂಚಾಯಿತಿ ವ್ಯಾಪ್ತಿಯ ಕೆರೆಕಟ್ಟೆಗಳನ್ನು ಸದ್ಬಳಕೆ ಮಾಡಿಕೊಳ್ಳಿ ಎಂದರು. ಕರ್ಣಕುಪ್ಪೆ ಗ್ರಾಪಂ ವ್ಯಾಪ್ತಿಯಲ್ಲಿ 28 ಕೆರೆಗಳಿದ್ದು, ಎಲ್ಲಾ ಕೆರೆಗಳ ಅಭಿವೃದ್ಧಿಗೆ ಪಂಚಾಯಿತಿ ವತಿಯಿಂದ ಯೋಜನೆ ರೂಪಿಸಲಾಗಿದೆ. ಕೆರೆಗಳ ಅಭಿವೃದ್ಧಿಗೆ 5…
ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ
July 17, 2021ಪಿರಿಯಾಪಟ್ಟಣ, ಜು.16 (ವೀರೇಶ್)- ಶಾಸಕನಾಗಿ ಆಯ್ಕೆಯಾದಾಗಿನಿಂದ ಸಾರ್ವ ಜನಿಕ ಜೀವನದಲ್ಲಿ ಬದ್ಧತೆ ಇಟ್ಟುಕೊಂಡು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತಿ ರುವುದಾಗಿ ಶಾಸಕ ಕೆ.ಮಹದೇವ್ ತಿಳಿಸಿದರು. ತಾಲೂಕಿನ ವಿವಿಧ ಗ್ರಾಮಗಳಲ್ಲಿ 1.5 ಕೋಟಿ ರೂ. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಅವರು, ತಾಲೂಕಿನ ದೊಡ್ಡಹರವೆ ಗ್ರಾಮದಲ್ಲಿ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು. ಹಳ್ಳಿಗಳ ಸ್ಥಳೀಯ ಸಮಸ್ಯೆಗಳನ್ನು ಬಗೆ ಹರಿಸಲು ಶಾಸಕನಾದ ನನ್ನೊಬ್ಬನಿಂದ ಸಾಧ್ಯವಿಲ್ಲ. ಇದಕ್ಕೆ ಸ್ಥಳೀಯ ಜನಪ್ರತಿನಿಧಿ ಗಳೂ ಸಹಕಾರ ನೀಡಬೇಕು. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ತಾಲೂಕಿನ ಅಭಿ…










