ಮೈಸೂರು, ಜು.16(ವೈಡಿಎಸ್)- ಲಾಕ್‍ಡೌನ್ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟದಲ್ಲಿರುವ ಕಲಾವಿದರ ಹಿತದೃಷ್ಟಿಯಿಂದ ರೋಟರಿ ಮೈಸೂರು ಹೆರಿಟೇಜ್, ಮೈಸೂರು ಆರ್ಟಿಸ್ಟ್ ಅಸೋಸಿಯೇಷನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಕಲಾಮಂದಿರದಲ್ಲಿ 3 ದಿನಗಳ ಕಾಲ ಆಯೋಜಿಸಿರುವ `ಕಲಾಸಮರ್ಪಣೆ’ ಸಂಗೀತ ಕಾರ್ಯಕ್ರಮಕ್ಕೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಶುಕ್ರವಾರ ಚಾಲನೆ ನೀಡಿದರು. ಬಳಿಕ ಸಚಿವ ಎಸ್.ಟಿ.ಸೋಮಶೇಖರ್ ಮಾತನಾಡಿ, ಕಲಾವಿದರನ್ನು ರಕ್ಷಿಸಿದರೆ ಮಾತ್ರ ಕಲೆ ಉಳಿಯುತ್ತದೆ, ಲಾಕ್‍ಡೌನ್‍ನಿಂದಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳಿಲ್ಲದೆ ಸಾಕಷ್ಟು ಕಲಾವಿದರ ಕುಟುಂಬಗಳು ತೊಂದರೆಗೆ ಸಿಲುಕಿವೆ. ಮುಖ್ಯಮಂತ್ರಿಗಳ ಕೋವಿಡ್ ಪರಿಹಾರ…
ಕೇರಳದಿಂದ ಬರುವವರ ಮೇಲೆ ನಿಗಾ ವಹಿಸಲು ಸೂಚನೆ
July 15, 2021ಹೆಚ್.ಡಿ.ಕೋಟೆ, ಜು.14(ಮಂಜು)-ಕೇರಳ ಗಡಿ ಭಾಗವಾದ ತಾಲೂಕಿನ ಬಾವಲಿ ಚೆಕ್‍ಪೆÇಸ್ಟ್‍ಗೆ ಇಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಹೆಚ್. ಪ್ರಸಾದ್ ಭೇಟಿ ನೀಡಿ, ಪರಿಶೀಲಿಸಿದರು. ಈ ವೇಳೆ ಚೆಕ್‍ಪೋಸ್ಟ್‍ನಲ್ಲಿದ್ದ ಸಿಬ್ಬಂದಿ ಯಿಂದ ಕೋವಿಡ್ ಕಟ್ಟೆಚ್ಚರದ ಬಗ್ಗೆ ಮಾಹಿತಿ ಪಡೆದರಲ್ಲದೆ, ಕೇರಳ ಹಾಗೂ ರಾಜ್ಯದ ಬಸ್ ಸಂಚಾರ ಆರಂಭಗೊಂಡಿದ್ದು, 72 ಗಂಟೆಯೊಳಗಿನ ಕೋವಿಟ್ ಟೆಸ್ಟ್ ನೆಗೆಟಿವ್ ವರದಿ ಇರುವ ಪ್ರಯಾಣಿಕರಿಗೆ ಮಾತ್ರ ಜಿಲ್ಲೆ ಪ್ರವೇಶಿಸಲು ಅವಕಾಶ ನೀಡಲು ತಿಳಿಸಿದರು. ಪ್ರತಿ ವಾಹನಗಳ ಮೇಲೂ ನಿಗಾ ಇಡುವಂತೆ ಹಾಗೂ ಪ್ರಯಾಣಿಕರಿಗೆ…
ಬೋಗಾದಿ ಕೋವಿಡ್ ಕೇರ್ ಸೆಂಟರ್ ಸದ್ಯವೇ ಚಿಕಿತ್ಸಾ ಕಾರ್ಯದಿಂದ ಮುಕ್ತ
July 15, 2021ಮೈಸೂರು, ಜು.14(ಎಂಕೆ)- ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬೋಗಾದಿ 2ನೇ ಹಂತದಲ್ಲಿ ಕಾರ್ಯ ನಿರ್ವಹಿಸುತ್ತಿರುವ `ಪುರುಷ-ಮಹಿಳೆಯರ ಪ್ರತ್ಯೇಕ ಕೋವಿಡ್ ಕೇರ್ ಸೆಂಟರ್’ನಲ್ಲಿ ಸೋಂಕಿತರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದೆ. ಅದು, ಸದ್ಯದಲ್ಲಿಯೇ ಸೋಂಕಿತರ ಶುಶ್ರೂಷೆ ಹೊಣೆಯಿಂದ ಮುಕ್ತವಾಗಲಿದೆ. ಇಲ್ಲಿನ ಸರ್ಕಾರಿ ವೈದ್ಯಕೀಯ ಮತ್ತು ತಾಂತ್ರಿಕ ಕಾಲೇಜು ಬಾಲಕಿಯರ ಮತ್ತು ಬಾಲಕರ ವಿದ್ಯಾರ್ಥಿ ನಿಲಯಗಳಲ್ಲಿ ಮೈಸೂರು ಮಹಾನಗರ ಪಾಲಿಕೆ ಸಹಕಾರದಲ್ಲಿ ತೆರೆದಿರುವ ಕೋವಿಡ್ ಕೇರ್ ಸೆಂಟರ್‍ಗೆ ಈವರೆಗೆ 362 ಸೋಂಕಿತರು ದಾಖಲಾಗಿದ್ದು, 348 ಮಂದಿ ಗುಣ ಕಂಡಿದ್ದಾರೆ. ಸದ್ಯ 2…
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸದ್ಬಳಕೆಗೆ ಸಲಹೆ
July 15, 2021ಗುಂಡ್ಲುಪೇಟೆ, ಜು.14(ಸೋಮ್.ಜಿ)- ತಾಲೂಕಿನ ತೆರಕಣಾಂಬಿ ಗ್ರಾಮದ ನಾಯಕರ ಸಮುದಾಯ ಭವನದಲ್ಲಿ ನಡೆದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್(ರಿ), ಗುಂಡ್ಲುಪೇಟೆ ಸ್ವ-ಸಹಾಯ ಮತ್ತು ಪ್ರಗತಿ ಬಂಧು ಸಂಘಗಳ ಉಳಿತಾ ಯಕ್ಕೆ ಬಡ್ಡಿ ರೂಪದಲ್ಲಿ ಲಾಭಾಂಶ ವಿತರಣಾ ಕಾರ್ಯಕ್ರಮವನ್ನು ಗ್ರಾಮದ ಮುಖಂಡ ರಾದ ರವಿಬುದ್ದಿ, ಶಾಂತಮಲ್ಲಪ್ಪ ಉದ್ಘಾಟಿಸಿದರು. ಜಿಲ್ಲಾ ನಿರ್ದೇಶಕಿ ಲೀಲಾವತಿ ಮಾತ ನಾಡಿ, ಯೋಜನೆಯಿಂದ ದೊರೆಯುವ ಸೌಲಭ್ಯಗಳನ್ನು ತಳಮಟ್ಟದ ವರ್ಗವು ಪಡೆಯ ಬೇಕು. ಸಮಾಜದ ಪ್ರತಿಯೊಂದು ರಂಗ ದಲ್ಲೂ ನಮ್ಮ ಸಂಘದ ಸದಸ್ಯರು ಗುರುತಿಸಿ ಕೊಂಡು ಸರ್ವತೋಮುಖ…
ಲಸಿಕಾ ಅಭಿಯಾನ ಗೊಂದಲಕ್ಕೆ `ಕೋವಿನ್-ಕಾರ್’ ಹೊಸ ಆ್ಯಪ್ ಪರಿಹಾರ
July 15, 2021ಮೈಸೂರು, ಜು.14(ಎಂಟಿವೈ)- ಲಸಿಕೆ ಪಡೆಯಲು ನೋಂದಣಿ ಪ್ರಕ್ರಿಯೆಯಲ್ಲಾಗುತ್ತಿರುವ ಗೊಂದಲ ಹಾಗೂ ಸಂಭವನೀಯ ಕೊರೊನಾ 3ನೇ ಅಲೆಗೂ ಮುನ್ನವೇ ಹೆಚ್ಚಿನ ಜನರಿಗೆ ಲಸಿಕೆ ನೀಡಬೇಕೆಂಬ ಉದ್ದೇಶದಿಂದ ರಾಜ್ಯ ಸರ್ಕಾರ ಲಸಿಕೆ ಪಡೆಯುವವರ ನೋಂದಣಿಗಾಗಿ ಹೊಸದಾಗಿ `ಕೋವಿನ್-ಕಾರ್’ ಆ್ಯಪ್‍ವೊಂದನ್ನು ಅಭಿವೃದ್ಧಿ ಪಡಿಸಿದ್ದು, ಪ್ರಾಯೋಗಿಕವಾಗಿ ಮೈಸೂರು ನಗರಕ್ಕೆ ಸೀಮಿತಗೊಂಡಂತೆ ಪೈಲಟ್ ಪ್ರಾಜೆಕ್ಟ್ ಅಡಿಯಲ್ಲಿ ಹೊಸ ಆ್ಯಪ್ ಮೂಲಕ ನೋಂದಣಿ ಅಭಿಯಾನ ಆರಂಭಿಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಪ್ರಸ್ತುತ ದೇಶದಾದ್ಯಂತ ಕೋವಿನ್ ಅಪ್ಲಿಕೇಷನ್ ಮೂಲಕ ಕೋವಿಡ್ ಲಸಿಕೆ ಪಡೆಯಲು ಹೆಸರು ನೋಂದಾಯಿಸಿಕೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ….
ಸುತ್ತೂರು ಶ್ರೀಗಳ ಆಶೀರ್ವಾದ ಪಡೆದ ವಿವಿಧ ನಾಯಕರು
July 15, 2021ಮೈಸೂರು,ಜು.14(ಎಂಟಿವೈ)- ರಾಜ್ಯ ರಾಜಕೀಯದಲ್ಲಿ ನಾಯಕತ್ವ ಬದಲಾವಣೆ ವಿಚಾರ ಮುನ್ನೆಲೆಗೆ ಬಂದ ನಂತರ ಮೈಸೂರಿನ ಸುತ್ತೂರು ಮಠಕ್ಕೆ ಭೇಟಿ ನೀಡುತ್ತಿರುವ ರಾಜಕೀಯ ಧುರೀಣರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಬುಧವಾರವೂ ಹಲವು ನಾಯಕರು ಮಠಕ್ಕೆ ಭೇಟಿ ನೀಡಿ, ಸುತ್ತೂರು ಶ್ರೀಗಳ ಆಶೀರ್ವಾದ ಪಡೆದರು. ಮೈಸೂರಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಹಲವು ನಾಯಕರು ಸುತ್ತೂರು ಮಠಕ್ಕೆ ತೆರಳಿ ಸುತ್ತೂರು ಕ್ಷೇತ್ರದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳಲ್ಲಿ ಆಶೀರ್ವಾದ ಪಡೆದರು. ಕೆಆರ್‍ಎಸ್ ಸುತ್ತಮುತ್ತ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ವಿರುದ್ಧ ಧ್ವನಿ…
ಇನ್ನಿತರೆಡೆಗೆ ಪೊಲೀಸ್ ಪಬ್ಲಿಕ್ ಶಾಲೆ ವಿಸ್ತರಣೆಗೆ ಚಿಂತನೆ; ಗೃಹ ಸಚಿವ ಬಸವರಾಜ ಬೊಮ್ಮಾಯಿ
July 15, 2021ಮೈಸೂರು,ಜು.14(ಪಿಎಂ)-ಮೈಸೂರು ಸೇರಿದಂತೆ ರಾಜ್ಯದ 6 ಕಡೆಗಳಲ್ಲಿ ಪೊಲೀಸ್ ಪಬ್ಲಿಕ್ ಶಾಲೆಗಳು ಪ್ರಸ್ತುತ ನಡೆಯುತ್ತಿದ್ದು, ಇನ್ನು ಕೆಲವೆಡೆಗೆ ವಿಸ್ತರಿಸುವ ಚಿಂತನೆ ಇದೆ ಎಂದು ತಿಳಿಸಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಮೈಸೂರಿನ ಪೊಲೀಸ್ ಪಬ್ಲಿಕ್ ಶಾಲೆಯನ್ನು ಮಾದರಿಯಾ ಗಿಸುವ ನಿಟ್ಟಿನಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳಿಗೆ ಹಂತ ಹಂತವಾಗಿ ಚಾಲನೆ ನೀಡಲಾಗುವುದು ಎಂದು ತಿಳಿಸಿದರು. ಮೈಸೂರಿನ ಪೊಲೀಸ್ ಪಬ್ಲಿಕ್ ಶಾಲೆಯ ನೂತನ ಕಟ್ಟಡದ ಸಭಾಂಗಣದಲ್ಲಿ ಶಾಲೆಯ ಮಕ್ಕಳ ಪೋಷಕರೊಂದಿಗೆ ಬುಧವಾರ ಸಂವಾದ ನಡೆಸಿ ಬಳಿಕ ಅವರು ಮಾತನಾಡಿದರು. ಶಾಲೆಯ ಅಭಿವೃದ್ಧಿಗೆ…
ಮಾನವ ಕಾವಲು ರೈಲ್ವೆ ಗೇಟ್ ನಿರ್ಮಾಣಕ್ಕೆ ಸೂಚಿಸುವೆ : ಶಾಸಕ ಹರ್ಷವರ್ಧನ್
July 15, 2021ನಂಜನಗೂಡು, ಜು. 14(ರವಿ)- ತಾಲೂಕಿನ ಕೋಡಿನರಸೀಪುರ ಗ್ರಾಮದ ಮುಖ್ಯರಸ್ತೆ ಮಧ್ಯೆ ಹಾದುಹೋಗಿರುವ ಮೈಸೂರು-ಚಾಮರಾಜನಗರ ರೈಲ್ವೆ ಮಾರ್ಗದಲ್ಲಿ ಗ್ರಾಮಸ್ಥರ ಕೋರಿಕೆ ಮೇರೆಗೆ ಮಾನವ ಕಾವಲು ಗೇಟ್ ನಿರ್ಮಾಣ ಮಾಡಲು ರೈಲ್ವೆ ಇಲಾಖೆಗೆ ಸೂಚನೆ ನೀಡುವುದಾಗಿ ಶಾಸಕ ಬಿ.ಹರ್ಷವರ್ಧನ್ ತಿಳಿಸಿದರು. ಗ್ರಾಮದ ಮುಖ್ಯರಸ್ತೆಯನ್ನು ಮಂಗಳ ವಾರ ಪರಿಶೀಲಿಸಿದ ಬಳಿಕ ಮಾತನಾ ಡಿದ ಅವರು, ರೈಲ್ವೆ ಅಧಿಕಾರಿಗಳು ಕೆಳ ಸೇತುವೆ ನಿರ್ಮಾಣ ಮಾಡುವುದಾಗಿ ಸಂಸದ ವಿ.ಶ್ರೀನಿವಾಸಪ್ರಸಾದ್ ಹಾಗೂ ನನ್ನನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ತಿಳಿಸಿದ್ದಾರೆ. ಸ್ಥಳ ಪರಿಶೀಲನೆ ನಡೆಸಿ ವಾಸ್ತವ ಸ್ಥಿತಿಗತಿಯನ್ನು…
ಭಯ ಬಿಟ್ಟು ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿ: ಶಾಸಕ ಕೆ.ಮಹದೇವ್
July 15, 2021ಪಿರಿಯಾಪಟ್ಟಣ, ಜು.14 (ವೀರೇಶ್)- ಕೊರೊನಾ ನಡುವೆಯೂ ಸರ್ಕಾರ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆಸುತ್ತಿರು ವುದು ಒಳ್ಳೆಯ ಬೆಳವಣಿಗೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಭಯ ಬಿಟ್ಟು ಆತ್ಮವಿಶ್ವಾಸ ದಿಂದ ಪರೀಕ್ಷೆ ಎದುರಿಸಿ ಭವಿಷ್ಯ ರೂಪಿಸಿ ಕೊಳ್ಳಬೇಕು ಎಂದು ಶಾಸಕ ಕೆ.ಮಹದೇವ್ ಸಲಹೆ ನೀಡಿದರು. ಪಟ್ಟಣದ ತಾಪಂ ಸಭಾಂಗಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ವತಿಯಿಂದ ವಿದ್ಯಾ ರ್ಥಿಗಳಿಗೆ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಸಿದ್ಧತೆ ಬಗ್ಗೆ ಆತ್ಮವಿಶ್ವಾಸ ತುಂಬುವ ಹಾಗೂ ವಿಷಯ ವಾರು ಸಂದೇಹ ನಿವಾರಿಸಲು ಏರ್ಪ ಡಿಸಿದ್ದ ವಿದ್ಯಾರ್ಥಿಗಳ…
ಸಂಘಟನೆಗಳಿಂದ ಕಪಿಲಾ ನದಿ ಸ್ವಚ್ಛತೆ
July 15, 2021ಸರಗೂರು, ಜು. 14(ನಾಗೇಶ್)- ಪಟ್ಟಣದ ಸಮೀಪ ಹರಿಯುವ ಕಪಿಲಾ ನದಿಯಲ್ಲಿ ಬೆಳೆದಿದ್ದ ಗಿಡ-ಗಂಟಿಗಳನ್ನು ಪಂಚಾಯಿತಿ ಸದಸ್ಯರು, ಭಜರಂಗ ದಳ ಹಾಗೂ ವಿಶ್ವ ಹಿಂದೂ ಪರಿಷತ್‍ನ ಕಾರ್ಯಕರ್ತರು ಹಾಗೂ ಪಟ್ಟಣ ಪಂಚಾ ಯಿತಿ ಸದಸ್ಯ ಶ್ರೀನಿವಾಸ್ ಮತ್ತಿತರರು ಸೇರಿ ಸ್ವಚ್ಛತಾ ಕಾರ್ಯ ನಡೆಸಿದರು. ಕಪಿಲಾ ನದಿಯ ಸುತ್ತಮುತ್ತ ಗಿಡ-ಗಂಟಿ ಬೆಳೆದಿದ್ದು, ನದಿಗೆ ಹೋಗಲು ಸಾರ್ವಜನಿಕರಿಗೆ ತುಂಬಾ ಅನಾನುಕೂಲ ವಾಗಿತ್ತು. ಬಟ್ಟೆ ಸ್ವಚ್ಛತೆ ಹಾಗೂ ದೇವತಾ ಕಾರ್ಯಗಳನ್ನು ಮಾಡಲು ನದಿಗೆ ತೆರ ಳಲು ಪ್ರಯಾಸಪಡುವಂತಾಗಿತ್ತು. ಇದನ್ನು ಮನಗಂಡ ಪಟ್ಟಣ ಪಂಚಾಯಿತಿ…










