ಮೈಸೂರು, ಏ.18(ಎಂಟಿವೈ)- ಹೆಲಿ ಟೂರಿಸಂ ಹೆಲಿಪ್ಯಾಡ್ ನಿರ್ಮಾಣಕ್ಕಾಗಿ ಮೈಸೂರಿನ ಲಲಿತಮಹಲ್ ಪ್ಯಾಲೆಸ್ ಮೈದಾನದಲ್ಲಿ ಮರಕಡಿಯಲು ಉದ್ದೇಶಿ ಸಿರುವ ಕ್ರಮ ಖಂಡಿಸಿ ಭಾನುವಾರ ಲಲಿತಮಹಲ್ ಪ್ಯಾಲೆಸ್ ಮೈದಾನದಲ್ಲಿ ಪರಿಸರ ಬಳಗದ ನೇತೃತ್ವದಲ್ಲಿ ಪರಿಸರ ಪ್ರೇಮಿಗಳು ಪರಿಸರ ಗೀತೆ ಗಾಯನ ಮಾಡಿ ವಿನೂತನವಾಗಿ ಪ್ರತಿಭಟಿಸಿದರು. ಲಲಿತಮಹಲ್ ಮೈದಾನದಲ್ಲಿ ಇಂದು ಬೆಳಿಗ್ಗೆ ಹಲವು ಮಂದಿ ಪರಿಸರ ಪ್ರೇಮಿ ಗಳು ಮರ ಕಡಿಯಲು ಉದ್ದೇಶಿಸಿರುವ ಕ್ರಮದಿಂದ ಹಿಂದೆ ಸರಿಯುವಂತೆ ಆಗ್ರಹಿಸಿ. ಪರಿಸರದ ಮಹತ್ವ ಸಂದೇಶ ಸಾರುವ ಫಲಕ ಪ್ರದರ್ಶಿಸಿ ಜಾಗೃತಿ ಮೂಡಿಸಿದರು. ಇದೇ…
ತೂಗುದೀಪ ಶ್ರೀನಿವಾಸ್ ಭಾವಚಿತ್ರಕ್ಕೆ ಪುಷ್ಪ ನಮನ ವೃತ್ತದಲ್ಲಿ ಪ್ರತಿಮೆ ನಿರ್ಮಾಣಕ್ಕೆ ಒತ್ತಾಯ
April 19, 2021ಮೈಸೂರು, ಏ.18(ಆರ್‍ಕೆಬಿ)- ಕನ್ನಡ ಚಿತ್ರರಂಗದ ಹಿರಿಯ ನಟ, ದಿವಂಗತ ತೂಗುದೀಪ ಶ್ರೀನಿವಾಸ್ ಅವರ 81ನೇ ಜನ್ಮ ದಿನಾಚರಣೆ ಅಂಗವಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿ ಬಳಗದ ಕಾರ್ಯಕರ್ತರು ಲಲಿತಮಹಲ್ ರಸ್ತೆ ಯಲ್ಲಿರುವ ತೂಗುದೀಪ್ ಶ್ರೀನಿವಾಸ್ ವೃತ್ತದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಸಾರ್ವಜನಿಕರಿಗೆ ಸಿಹಿ ವಿತರಿಸಿದರು. ಪರಿಸರ ಜಾಗೃತಿ ಸಮಿತಿ ಅಧ್ಯಕ್ಷ ಮಹೇಂದ್ರಸಿಂಗ್ ಕಾಳಪ್ಪ ಮಾತನಾಡಿ, ಕನ್ನಡ ಚಿತ್ರರಂಗ ದಲ್ಲಿ ಖಳನಟರಿಗೂ ಬೇರೆಯದ್ದೇ ಗತ್ತು, ಗಾಂಭೀರ್ಯ ಇದೆ ಎಂಬುದನ್ನು ತೂಗುದೀಪ ಶ್ರೀನಿವಾಸ್ ಅಭಿನಯದ ಮೂಲಕ ತೋರಿಸಿಕೊಟ್ಟಿದ್ದಾರೆ….
ದೇಶದ ಏಕತೆಗೆ ಭಂಗ ತರುವ ಕೆಲಸ ಆಗಬಾರದು
April 19, 2021ಮೈಸೂರು, ಏ.18(ಆರ್‍ಕೆಬಿ)- ಇತಿ ಹಾಸ ನೋಡಿದರೆ ಜಗತ್ತಿಗೆ ಮುಂದಾಳತ್ವ ವಹಿಸಿದ್ದ ನಮ್ಮ ದೇಶದಲ್ಲಿ 136 ಕೋಟಿ ಜನರಿದ್ದು, ಜಾತಿ, ಭಾಷೆ ಬೇರೆ ಬೇರೆ ಇದ್ದರೂ ಒಗ್ಗಟ್ಟಿನ ಬಲಾಢ್ಯ ದೇಶವಾಗಿರ ಬೇಕು. ದೇಶದ ಏಕತೆಗೆ ಭಂಗ ತರುವ ಕೆಲಸ ಆಗಬಾರದು ಎಂದು ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿ ಅಶೋಕ್ ಜಿ.ನಿಜಗಣ್ಣನವರ್ ಅಭಿಪ್ರಾಯಪಟ್ಟರು. ಮೈಸೂರಿನ ರಾಮಕೃಷ್ಣನಗರದ ನೃಪತುಂಗ ಕನ್ನಡ ಶಾಲಾವರಣದಲ್ಲಿರುವ ರಮಾಗೋವಿಂದ ರಂಗಮಂದಿರದಲ್ಲಿ ಅಲ್ಲಮ ರಿಸರ್ಚ್ ಅಂಡ್ ಕಲ್ಚರಲ್ ಫೌಂಡೇಷನ್ ಸಂಸ್ಥೆಯ ಉದ್ಘಾಟನೆ ಹಾಗೂ ವಿಚಾರ ಸಂಕಿರಣಕ್ಕೆ ಚಾಲನೆ ನೀಡಿ, `ಪ್ರಜಾಪ್ರಭುತ್ವ…
ಸತ್ವ ಇದ್ದರೆ ಮಾತ್ರ ಯಾವುದೇ ಧರ್ಮ ಉನ್ನತ ಸ್ಥಾನ ಅಲಂಕರಿಸಿ ಜನತೆ ಆವರಿಸಲಿದೆ
April 19, 2021ಮೈಸೂರು,ಏ.18(ಪಿಎಂ)- ಯಾವುದೇ ಧರ್ಮ ಅದರ ಪ್ರಾಚೀನತೆಯಿಂದ ದೊಡ್ಡ ಸ್ಥಾನ ಅಲಂಕರಿಸುವುದಿಲ್ಲ. ಅದರಲ್ಲಿ ಸತ್ವ ಇದ್ದರೆ ಮಾತ್ರ ಅದು ಉನ್ನತ ಸ್ಥಾನ ಅಲಂಕರಿಸಲು ಸಾಧ್ಯ ಎಂದು ಕುಂದೂರು ಮಠದ ಡಾ.ಶ್ರೀ ಶರತ್‍ಚಂದ್ರ ಸ್ವಾಮೀಜಿ ಅಭಿಪ್ರಾಯಪಟ್ಟರು. ಮೈಸೂರಿನ ಹೊಸಮಠದ ಶ್ರೀ ನಟ ರಾಜ ಸಭಾಂಗಣದಲ್ಲಿ ಜಾಗತಿಕ ಲಿಂಗಾ ಯತ ಮಹಾಸಭಾ ಮೈಸೂರು ಜಿಲ್ಲಾ ಘಟಕದ ವತಿಯಿಂದ ಭಾನುವಾರ ಹಮ್ಮಿ ಕೊಂಡಿದ್ದ ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಸಂಬಂಧಿಸಿದಂತೆ ಹೊರತಂದಿರುವ ನಾಲ್ಕು ಕೃತಿಗಳ ಬಿಡುಗಡೆ ಸಮಾರಂಭದಲ್ಲಿ ಬಿಡು ಗಡೆಗೊಂಡ `ವೀರಶೈವ ಧರ್ಮವು 12ನೇ…
ಹಣ ಪಡೆದು ಮತ ನೀಡುವ ಕಾಲ ಹೋಯಿತು
April 18, 2021ಮೈಸೂರು,ಏ.17(ಪಿಎಂ)-ಹಣ ಪಡೆದು ಮತ ನೀಡುವ ಕಾಲ ಹೋಗಿದ್ದು, ಕಾಂಗ್ರೆಸ್‍ನವರು ಹೀಗೆ ವಿನಾಕಾರಣ ಆರೋಪ ಮಾಡಬಾರದು ಎಂದು ವಸತಿ ಸಚಿವ ವಿ.ಸೋಮಣ್ಣ ಕಿಡಿಕಾರಿದರು. ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಶನಿವಾರ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದು ಬಳಿಕ ಬೆಳಗಾವಿ ಲೋಕ ಸಭಾ ಕ್ಷೇತ್ರ, ರಾಯಚೂರಿನ ಮಸ್ಕಿ ಹಾಗೂ ಬೀದರ್‍ನ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಸಂಬಂಧ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್‍ನವರು ವಿನಾಕಾರಣ ಬಿಜೆಪಿ ವಿರುದ್ಧ ಹಣ ಹಂಚುವ ಆರೋಪ ಮಾಡುತ್ತಿದ್ದಾರೆ. ಹಣ ಪಡೆದು ಮತ ನೀಡುವ ಕಾಲ ಈಗ…
ಒಕ್ಕಲಿಗರ ಯುವ ವೇದಿಕೆ ವತಿಯಿಂದ ಹೇಮಂತ್‍ಕುಮಾರ್‍ಗೌಡರಿಗೆ ಅಭಿನಂದನೆ
April 18, 2021ಮೈಸೂರು, ಏ.17(ಆರ್‍ಕೆ)- ಮೈಸೂ ರಿನ ದಿ ಇನ್‍ಸ್ಟಿಟ್ಯೂಷನ್ ಆಫ್ ಇಂಜಿನಿ ಯರ್ಸ್ ಸಭಾಂಗಣದಲ್ಲಿ ಇಂದು ಏರ್ಪ ಡಿಸಿದ್ದ ಸಮಾರಂಭದಲ್ಲಿ ಜಿಲ್ಲಾ ಒಕ್ಕಲಿಗರ ಯುವ ವೇದಿಕೆಯಿಂದ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಎ. ಹೇಮಂತಕುಮಾರ್‍ಗೌಡ ಅವರನ್ನು ಆತ್ಮೀಯವಾಗಿ ಅಭಿನಂದಿಸಲಾಯಿತು. ಆದಿಚುಂಚನಗಿರಿ ಮಹಾಸಂಸ್ಥಾನ ಮೈಸೂರು ಶಾಖಾ ಮಠದ ಮುಖ್ಯಸ್ಥ ರಾದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ಅವರು ಸಾನಿಧ್ಯ ವಹಿಸಿದ್ದ ಸಮಾರಂಭ ದಲ್ಲಿ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಟಿ.ರವಿಕುಮಾರ್, ಹೇಮಂತಕುಮಾರ್ ಅವರನ್ನು ಆತ್ಮೀಯ ವಾಗಿ ಅಭಿನಂದಿಸಿದರು. ಕಾರ್ಯಕ್ರಮ…
ಲಾಕ್‍ಡೌನ್ ಸರಿ-ತಪ್ಪು; ಮೈಸೂರಿಗರ ವಿಶ್ಲೇಷಣೆ
April 18, 2021ಮೈಸೂರು,ಏ.17(ವೈಡಿಎಸ್)-`ರಾಜ್ಯದಲ್ಲಿ ಕೊರೊನಾ ಹಾವಳಿ ಹೆಚ್ಚಾಗುತ್ತಿದ್ದು, ಜನರ ಆರೋಗ್ಯದ ದೃಷ್ಟಿಯಿಂದ ಲಾಕ್‍ಡೌನ್ ಒಳ್ಳೆಯದೆ. ಆದರೆ, ಕೊರೊನಾ ಹೆಚ್ಚಾ ಗುತ್ತಿದ್ದರೂ ರಾಜಕಾರಣಿಗಳು ಮೈಮರೆತಿದ್ದಾರೆ. ಗುಂಪು ಕಟ್ಟಿಕೊಂಡು ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ. ಇವರಿಗಿಲ್ಲದ ನಿರ್ಬಂಧ ಸಾರ್ವಜನಿಕರಿಗೇಕೆ? ಮೊದಲು ರಾಜಕಾರಣಿಗಳು ಕೊರೊನಾ ಮಾರ್ಗಸೂಚಿ ಸರಿ ಯಾಗಿ ಅನುಸರಿಸಿದರೆ ಕೊರೊನಾ ಹೆಚ್ಚಾಗುತ್ತಿರಲಿಲ್ಲ. ಲಾಕ್‍ಡೌನ್ ಮಾಡಬೇಕಾದ ಪ್ರಮೇಯವೇ ಇರು ತ್ತಿರಲಿಲ್ಲ. ಮೊದಲು ರಾಜಕಾರಣಿಗಳು ಕೋವಿಡ್-19 ಮಾರ್ಗಸೂಚಿ ಅನುಸರಿಸಲಿ’… ಇವು ಮೈಸೂರಿನ ವಿವಿಧ ಅಂಗಡಿ ಮಾಲೀಕರು, ಸಾರ್ವಜನಿಕರ ಆಕ್ರೋಶದ ನುಡಿಗಳು. ಈಗಾಗಲೇ ಲಾಕ್‍ಡೌನ್‍ನಿಂದ ಸಂಕಷ್ಟ ಎದುರಾಗಿ ಭವಿಷ್ಯದ…
ಮೈಸೂರು ಉದಯಗಿರಿ ಮಹಾಜನ ಸಭಾದ ಶ್ರೀರಾಮಧಾಮದಲ್ಲಿ ಏ.21, 22ರಂದು ಶ್ರೀರಾಮನವಮಿ ಉತ್ಸವ ಶ್ರೀ ರಾಮನವಮಿ ವಿಶೇಷ ಸೇವೆಗಳಿಗೂ ಅವಕಾಶ
April 18, 2021ಮೈಸೂರು,ಏ.17(ಪಿಎಂ)-ಮೈಸೂರಿನ ಉದಯಗಿರಿ ಮಹಾ ಜನ ಸಭಾದ ಶ್ರೀರಾಮ ಧಾಮದಲ್ಲಿ ಶ್ರೀಪ್ಲವ ನಾಮ ಸಂವತ್ಸರದ 36ನೇ ವರ್ಷದ ಪ್ರಯುಕ್ತ ಏ.21 ಮತ್ತು 22ರಂದು ಶ್ರೀರಾಮ ನವಮಿ ಉತ್ಸವ ಏರ್ಪ ಡಿಸಲಾಗಿದ್ದು, ಶ್ರೀರಾಮ ನವಮಿ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಲಿವೆ. ಏ.21ರಂದು ಪುಣ್ಯಾಹ, ನಾಂದಿ, ಕಳಶ ಪ್ರತಿಷ್ಠಾಪನೆ ಮಹಾಸಂಕಲ್ಪ, ಶ್ರೀರಾಮತಾರಕ ಹೋಮ, ಪೂರ್ಣಾಹುತಿ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಕಾರ್ಯ ಕ್ರಮಗಳು ನಡೆಯಲಿವೆ. ಏ.22ರಂದು ಬೆಳಗ್ಗೆ 8ಕ್ಕೆ ಶ್ರೀ ಸೀತಾರಾಮ ಕಲ್ಯಾಣ ನಡೆಯ ಲಿದೆ. ಬಳಿಕ ಗಣಪತಿ ಪೂಜೆ, ಪುಣ್ಯಾಹ,…
ಅಂಬೇಡ್ಕರ್‍ಗೆ ಅವಹೇಳನ ಆರೋಪ: ದಸಂಸ ಪ್ರತಿಭಟನೆ
April 18, 2021ಮೈಸೂರು,ಏ.17(ವೈಡಿಎಸ್)-ಡಾ. ಬಿ.ಆರ್.ಅಂಬೇಡ್ಕರ್ ಕುರಿತು ಅವಹೇಳನ ಕಾರಿ ಹೇಳಿಕೆ ನೀಡಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ವತಿಯಿಂದ ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಯಿತು. ಇತ್ತೀಚೆಗೆ ಸಕಲೇಶಪುರ ತಾಲೂಕಿನ ಕುಂಬರಹಳ್ಳಿಯ ಅರುಣ್‍ಗೌಡ ಎಂಬಾತ ದಲಿತರು ಮತ್ತು ಅಂಬೇಡ್ಕರ್ ಕುರಿತು ಅವಹೇಳನಕಾರಿಯಾಗಿ ಮಾತನಾಡಿ ರುವುದು ಖಂಡನೀಯ. ಈಗಾಗಲೇ ಸಕ ಲೇಶಪುರ ಪೆÇಲೀಸ್ ಠಾಣೆಯಲ್ಲಿ ಪ್ರಕ ರಣ ದಾಖಲಾಗಿದ್ದರೂ ಅರುಣ್ ಗೌಡ ನನ್ನು ಬಂಧಿಸಲು ಪೊಲೀಸರು ಮೀನಾ -ಮೇಷ ಎಣಿಸುತ್ತಿದ್ದಾರೆ. ಸಕಲೇಶಪುರ ಪಟ್ಟಣವನ್ನು ಬಂದ್…
ಶಿಥಿಲಗೊಂಡ 66 ಶಾಲಾ ಕೊಠಡಿಗಳ ದುರಸ್ತಿ ಕಾಮಗಾರಿಗೆ `ಗ್ರಹಣ’!
April 18, 2021ಮೈಸೂರು, ಏ.17(ಎಂಟಿವೈ)- ಮೈಸೂರು ಜಿಲ್ಲೆಯಲ್ಲಿ ಶಿಥಿಲಾವಸ್ಥೆಯಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆ ಕಟ್ಟಡಗಳ ದುರಸ್ತಿಗೆ ವಿಳಂಬ ಧೋರಣೆ ಅನುಸರಿಸುತ್ತಿರುವ ಅಧಿಕಾರಿಗಳನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪರಿಮಳಾ ಶನಿವಾರ ತರಾಟೆಗೆ ತೆಗೆದು ಕೊಂಡರು. ದುರಸ್ತಿ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಜಿಪಂ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯ ನೇತೃತ್ವ ವಹಿಸಿದ್ದ ಅಧ್ಯಕ್ಷೆ, ಪಂಚಾ ಯತ್ ರಾಜ್ ಇಂಜಿನಿಯರಿಂಗ್ ವಿಭಾ ಗದ ಅಧಿಕಾರಿಗಳ ಬೇಜವಾಬ್ದಾರಿತನದ ವಿರುದ್ಧ ಕಿಡಿಕಾರಿದರು. ಯಾರ ಮೇಲಾ ದರೂ ಕಟ್ಟಡ ಬೀಳಬೇಕೆ? ಅನಾಹುತ ಸಂಭವಿಸುವವರೆಗೂ ಕೆಲಸ…










