ಮೈಸೂರು

ಏ.10ರಂದು ಡಾ.ವಿ.ರಂಗನಾಥ್  ಅವರ ಅಭಿನಂದನಾ ಗ್ರಂಥ ಬಿಡುಗಡೆ
ಮೈಸೂರು

ಏ.10ರಂದು ಡಾ.ವಿ.ರಂಗನಾಥ್ ಅವರ ಅಭಿನಂದನಾ ಗ್ರಂಥ ಬಿಡುಗಡೆ

April 8, 2021

ಮೈಸೂರು,ಏ.7-ಮೈಸೂರಿನ ಸಂಸ್ಕøತಿ ಪ್ರಕಾಶನ, ವಿಜಯ್ ಫೌಂಡೇಷನ್ ಹಾಗೂ ಅಖಿಲ ಭಾರತೀಯ ಸಾಹಿತ್ಯ ಪರಿಷತ್, ಮೈಸೂರು ಸಂಯುಕ್ತ ಆಶ್ರಯದಲ್ಲಿ ಡಾ.ವಿ. ರಂಗನಾಥ್ ಅವರ ಅಭಿನಂದನಾ ಗ್ರಂಥ ಹಾಗೂ ಪುಸ್ತಕಗಳ ಬಿಡುಗಡೆ ಸಮಾರಂಭವನ್ನು ಏ.10ರಂದು ಬೆಳಿಗ್ಗೆ 10.30 ಗಂಟೆಗೆ ಕೃಷ್ಣಮೂರ್ತಿಪುರಂನಲ್ಲಿರುವ ಶಾರದಾ ವಿಲಾಸ ಕಾಲೇಜು ಶತಮಾನೋತ್ಸವ ಭವನದಲ್ಲಿ ಏರ್ಪಡಿಸಲಾಗಿದೆ. ಅಂದು ಬೆಳಿಗ್ಗೆ 10.30ಕ್ಕೆ ನಡೆಯುವ ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಹಿರಿಯ ವಿದ್ವಾಂಸರಾದ ಡಾ.ಎನ್.ಎಸ್. ತಾರಾನಾಥ್ ವಹಿಸುವರು. ಮುಖ್ಯ ಅತಿಥಿಗಳಾಗಿ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಟಿ.ರವಿಕುಮಾರ್ ಭಾಗವಹಿಸುವರು. ಮಾನಸಗಂಗೋತ್ರಿ…

ವಿಶ್ವ ಆರೋಗ್ಯ ದಿನದ ಪ್ರಯುಕ್ತ ಅರಿವಿನ ಜಾಥಾ
ಮೈಸೂರು

ವಿಶ್ವ ಆರೋಗ್ಯ ದಿನದ ಪ್ರಯುಕ್ತ ಅರಿವಿನ ಜಾಥಾ

April 8, 2021

ಮೈಸೂರು,ಏ.7(ಪಿಎಂ)-ವಿಶ್ವ ಆರೋಗ್ಯ ದಿನಾಚರಣೆ ಅಂಗವಾಗಿ ಸುಯೋಗ್ ಆಸ್ಪತ್ರೆ ವತಿಯಿಂದ `ಸುಂದರ, ಆರೋಗ್ಯಕರ ಪ್ರಪಂಚ ನಿರ್ಮಿಸೋಣ’ ಘೋಷ ವಾಕ್ಯದಡಿ ಬುಧವಾರ ಜಾಥಾ ನಡೆಸಲಾಯಿತು. ಮೈಸೂರಿನ ನಿವೇದಿತಾನಗರ ಉದ್ಯಾನ ವನದ (ಎಸ್.ಆರ್.ಸುಬ್ಬರಾವ್ ಉದ್ಯಾನ ವನ) ಎದುರು ಮಹಾನಗರ ಪಾಲಿಕೆ ಸದಸ್ಯೆ ನಿರ್ಮಲಾ ಹರೀಶ್ ಅವರ ಪತಿ ಹರೀಶ್ ಜಾಥಾಗೆ ಚಾಲನೆ ನೀಡಿದರು. ಇದೇ ವೇಳೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸುಯೋಗ್ ಆಸ್ಪತ್ರೆ ಅಧ್ಯಕ್ಷ ಡಾ.ಎಸ್.ಪಿ.ಯೋಗಣ್ಣ, ಏ.7 ವಿಶ್ವ ಆರೋಗ್ಯ ಸಂಸ್ಥೆ ಸ್ಥಾಪನೆಯಾದ ದಿನ. ಹೀಗಾಗಿ ಈ ದಿನವನ್ನು ಪ್ರತಿವರ್ಷ…

ಅಲೆಮಾರಿ, ಅರೆ ಅಲೆಮಾರಿ ಜನಾಂಗಕ್ಕೆ ಪ್ರತ್ಯೇಕ  ಬಡಾವಣೆ, ರುದ್ರಭೂಮಿ ಕಲ್ಪಿಸುವ ಚಿಂತನೆ
ಮೈಸೂರು

ಅಲೆಮಾರಿ, ಅರೆ ಅಲೆಮಾರಿ ಜನಾಂಗಕ್ಕೆ ಪ್ರತ್ಯೇಕ ಬಡಾವಣೆ, ರುದ್ರಭೂಮಿ ಕಲ್ಪಿಸುವ ಚಿಂತನೆ

April 8, 2021

ಮೈಸೂರು,ಏ.7(ಪಿಎಂ)- ಅಲೆಮಾರಿ ಹಾಗೂ ಅರೆ ಅಲೆಮಾರಿ ಜನಾಂಗ ಹೆಚ್ಚಿ ರುವ ಜಿಲ್ಲೆಗಳಲ್ಲಿ ಈ ಸಮುದಾಯಕ್ಕೆ ನಿರ್ದಿಷ್ಟ ಸ್ಥಳದಲ್ಲಿ ಪ್ರತ್ಯೇಕ ಬಡಾವಣೆ ನಿರ್ಮಿಸು ವುದು ಹಾಗೂ ರುದ್ರಭೂಮಿ ಕಲ್ಪಿಸುವ ಉದ್ದೇಶ ಹೊಂದಿರುವುದಾಗಿ ತಿಳಿಸಿದ ಕರ್ನಾ ಟಕ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ರವೀಂದ್ರ ಶೆಟ್ಟಿ, ರಾಜ್ಯ ಬಜೆಟ್‍ನಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಿರಿಸಿರುವ 500 ಕೋಟಿ ರೂ. ಅನು ದಾನದಲ್ಲಿ ನಿಗಮಕ್ಕೆ 250 ಕೋಟಿ ರೂ. ಅನುದಾನ ನೀಡುವಂತೆ ಮುಖ್ಯಮಂತ್ರಿ ಗಳಲ್ಲಿ ಮನವಿ ಮಾಡಿರುವುದಾಗಿ ಹೇಳಿದರು….

‘ಭ್ರಷ್ಟಾಚಾರದಿಂದ ಬೋಧನಾ ಕ್ಷೇತ್ರ ದೂರ’
ಮೈಸೂರು

‘ಭ್ರಷ್ಟಾಚಾರದಿಂದ ಬೋಧನಾ ಕ್ಷೇತ್ರ ದೂರ’

April 8, 2021

ಮೈಸೂರು,ಏ.7(ಎಸ್‍ಪಿಎನ್)- ಪ್ರಸ್ತುತ ಎಲ್ಲಾ ಕ್ಷೇತ್ರದಲ್ಲೂ ಭ್ರಷ್ಟಾಚಾರ ವ್ಯಾಪಿಸಿದೆ. ಆದರೆ, ಬೋಧನಾ ಕ್ಷೇತ್ರ ಭ್ರಷ್ಟಾಚಾರ ವ್ಯಾಪ್ತಿ ಯಿಂದ ದೂರವಿದೆ ಎಂದು ರಾಜ್ಯ ಸಹಕಾರ ಮಾರುಕಟ್ಟೆ ನಿಗಮದ ನಿರ್ದೇಶಕ ವೈ.ಎನ್. ಶಂಕರೇಗೌಡ ಅಭಿಪ್ರಾಯಪಟ್ಟರು. ಮೈಸೂರಿನ ಜೆಎಲ್‍ಬಿ ರಸ್ತೆಯ ಜ್ಞಾನ ಬುತ್ತಿ ಸಂಸ್ಥೆಯಲ್ಲಿ ನಡೆದ ಯುಜಿಸಿ-ಎನ್‍ಇಟಿ ಮತ್ತು ಕೆ.ಸೆಟ್ ಪರೀಕ್ಷೆಯ ತರ ಬೇತಿ ಸಮಾರೋಪದಲ್ಲಿ ಅವರು ಮಾತ ನಾಡಿ, ಬೋಧನಾ ಕ್ಷೇತ್ರ ಇಂದಿಗೂ ಸಮಾಜ ಮುಖಿಯಾಗಿಯೇ ಉಳಿದಿದೆ ಎಂದರು. ಹಿರಿಯ ರಂಗಕರ್ಮಿ ಪ್ರೊ.ಎಚ್.ಎಸ್. ಉಮೇಶ್ ಮಾತನಾಡಿ, ನಾವು ಎಷ್ಟು ಸಮಯ ಓದುತ್ತೇವೆ…

ರಾಜ್ಯ ಸಾರಿಗೆ ಸಂಸ್ಥೆ ನೌಕರರ ಹೋರಾಟಕ್ಕೆ ಕೋಡಿಹಳ್ಳಿ ನೇತೃತ್ವ: ಕುರುಬೂರು ಆತಂಕ
ಮೈಸೂರು

ರಾಜ್ಯ ಸಾರಿಗೆ ಸಂಸ್ಥೆ ನೌಕರರ ಹೋರಾಟಕ್ಕೆ ಕೋಡಿಹಳ್ಳಿ ನೇತೃತ್ವ: ಕುರುಬೂರು ಆತಂಕ

April 8, 2021

ಮೈಸೂರು, ಏ.7(ಎಸ್‍ಪಿಎನ್)- ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಕೆಎಸ್‍ಆರ್‍ಟಿಸಿ ನೌಕರರು ನಡೆಸುತ್ತಿರುವ ಹೋರಾಟ ಮುಂದಿನ ದಿನಗಳಲ್ಲಿ ಅವರಿಗೆ ಮಾರಕವಾಗುವ ಲಕ್ಷಣ ಗೋಚರಿಸುತ್ತಿದೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಆತಂಕ ವ್ಯಕ್ತಪಡಿಸಿದರು. ಮೈಸೂರಿನ ಗನ್‍ಹೌಸ್ ಬಳಿಯ ವಿಶ್ವಮಾನವ ಕುವೆಂಪು ಪಾರ್ಕ್ ನಲ್ಲಿ ಬುಧವಾರ ಮೈಸೂರು ತಾಲೂಕು ರೈತ ಕಬ್ಬು ಬೆಳೆಗಾರರ ಸಭೆ ಯಲ್ಲಿ ಮಾತನಾಡಿದ ಅವರು, ಕೋಡಿಹಳ್ಳಿ ಈವರೆಗೂ ರೈತ ಹೋರಾಟಗಳಲ್ಲಿದ್ದವರು. ಈಗ ಕೆಎಸ್‍ಆರ್‍ಟಿಸಿ ನೌಕರರ ಪರವಾಗಿ ಹೋರಾಟ ಆರಂಭಿಸಿದ್ದು, ಮುಂದಿನ ದಿನಗಳಲ್ಲಿ ರೈತರು,…

‘ರೋಟರಿ ಸಿಲಿಕಾನ್ ಪತ್ರಿಕೋದ್ಯಮ’ ಪ್ರಶಸ್ತಿ ಪ್ರದಾನ
ಮೈಸೂರು

‘ರೋಟರಿ ಸಿಲಿಕಾನ್ ಪತ್ರಿಕೋದ್ಯಮ’ ಪ್ರಶಸ್ತಿ ಪ್ರದಾನ

April 8, 2021

ಮೈಸೂರು, ಏ.7(ಎಸ್‍ಪಿಎನ್)- ಮಾಧ್ಯಮ ಕ್ಷೇತ್ರದ ಮೂವರು ಸಾಧಕ ರಿಗೆ ಈ ಸಾಲಿನ `ರೋಟರಿ ಸಿಲಿಕಾನ್ ಪತ್ರಿಕೋದ್ಯಮ’ ಪ್ರಶಸ್ತಿಯನ್ನು ವಿಜಯ ವಿಠ್ಹಲ ವಿದ್ಯಾಸಂಸ್ಥೆ ಗೌರವ ಕಾರ್ಯ ದರ್ಶಿ ರೋ. ಆರ್.ವಾಸುದೇವ ಭಟ್ ಮೈಸೂರಿನ ಜೆಎಲ್‍ಬಿ ರಸ್ತೆಯ ಐಡಿ ಯಲ್ ಜಾವಾ ರೋಟರಿ ಸಭಾಂಗಣ ದಲ್ಲಿ ಬುಧವಾರ ಪ್ರದಾನ ಮಾಡಿದರು. `ಸುಧರ್ಮ’ ಸಂಸ್ಕøತ ಪತ್ರಿಕೆ ಸಂಪಾದಕ, ಪದ್ಮಶ್ರೀ ಪುರಸ್ಕøತ ಕೆ.ವಿ.ಸಂಪತ್‍ಕುಮಾರ್ ಮತ್ತು ಕೆ.ಎಸ್.ಜಯಲಕ್ಷ್ಮಿ ದಂಪತಿ ಹಾಗೂ ಹಿರಿಯ ಛಾಯಾಗ್ರಾಹಕ ಪ್ರಗತಿ ಗೋಪಾಲ ಕೃಷ್ಣ ಅವರಿಗೆ `ಸಿಲಿಕಾನ್ ಪತ್ರಿಕೋದ್ಯಮ ಪ್ರಶಸ್ತಿ’ ಪ್ರದಾನ…

5.44 ಕೋಟಿ ರೂ. ಕೊರತೆ ಬಜೆಟ್ ಮಂಡಿಸಿದ ಮೈಸೂರು ವಿವಿ
ಮೈಸೂರು

5.44 ಕೋಟಿ ರೂ. ಕೊರತೆ ಬಜೆಟ್ ಮಂಡಿಸಿದ ಮೈಸೂರು ವಿವಿ

April 8, 2021

ಮೈಸೂರು, ಏ.7(ಆರ್‍ಕೆಬಿ/ಪಿಎಂ)- ಮೈಸೂರು ವಿಶ್ವವಿದ್ಯಾನಿಲಯ 2021-22ನೇ ಸಾಲಿಗೆ 5.44 ಕೋಟಿ ರೂ. ಕೊರತೆ ಬಜೆಟ್ ಮಂಡಿಸಿದೆ. 310.29 ಕೋಟಿ ರೂ. ಆದಾಯ ಅಂದಾಜಿಸಿ ಹಾಗೂ 315.73 ಕೋಟಿ ರೂ. ವೆಚ್ಚಕ್ಕೆ ಬಜೆಟ್ ಸಿದ್ಧಪಡಿಸಿದ್ದು, ಇದರಲ್ಲಿ ಸದರಿ ಕೊರತೆ ಮೊತ್ತ ತೋರಿಸಲಾಗಿದೆ. ಮೈಸೂರಿನ ಮಾನಸಗಂಗೋತ್ರಿ ವಿವಿಯ ವಿಜ್ಞಾನ ಭವನದ ಸಭಾಂಗಣದಲ್ಲಿ ಕುಲಪತಿ ಪ್ರೊ.ಜಿ.ಹೇಮಂತಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಶಿಕ್ಷಣ ಮಂಡಳಿಯ 3ನೇ ಸಾಮಾನ್ಯ ಸಭೆಯಲ್ಲಿ ಹಣಕಾಸು ಅಧಿಕಾರಿ ಡಾ.ಟಿ.ಎಸ್. ದೇವರಾಜ ಒಟ್ಟು 5.44 ಕೋಟಿ ರೂ. ಕೊರತೆ ಬಜೆಟ್ ಮಂಡಿಸಿದರು….

ಮೈಸೂರಲ್ಲಿ ಸೋಮವಾರ 165 ಮಂದಿಗೆ ಸೋಂಕು
ಮೈಸೂರು

ಮೈಸೂರಲ್ಲಿ ಸೋಮವಾರ 165 ಮಂದಿಗೆ ಸೋಂಕು

April 6, 2021

ಮೈಸೂರು, ಏ.5(ಎಸ್‍ಬಿಡಿ)- ಎಲ್ಲೆಡೆ ಕೊರೊನಾ 2ನೇ ಅಲೆ ಅಬ್ಬರಿಸುತ್ತಿದ್ದು, ಮೈಸೂರು ಜಿಲ್ಲೆಯಲ್ಲೂ ಸೋಮವಾರ 165 ಜನರಿಗೆ ಸೋಂಕು ದೃಢಪಟ್ಟಿದೆ. ಅಲ್ಲದೆ ಮತ್ತೆ ಮೂವರು ಕೊರೊನಾದಿಂದ ಮೃತಪಟ್ಟಿದ್ದಾರೆ. ಹೊಸ ಪ್ರಕರಣಗಳು ಸೇರಿದಂತೆ ಜಿಲ್ಲೆಯಲ್ಲಿ ಈವರೆಗೆ 56,689 ಜನರಿಗೆ ಕೊರೊನಾ ಬಾಧಿಸಿ ದಂತಾಗಿದೆ. ಭಾನುವಾರ ಖಾಸಗಿ ಆಸ್ಪತ್ರೆಗೆ ದಾಖ ಲಾಗಿದ್ದ 33 ವರ್ಷದ ಸೋಂಕಿತ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಅಂದೇ ಮೃತಪಟ್ಟಿದ್ದಾರೆ. ಕೆಲ ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 63 ಹಾಗೂ 69 ವರ್ಷದ ವ್ಯಕ್ತಿಗಳಿಬ್ಬರು ಭಾನುವಾರ ಮೃತಪಟ್ಟಿದ್ದಾರೆ. ಈ…

ಮೈಸೂರಲ್ಲಿ ಆತಂಕ ಹೆಚ್ಚಿಸುತ್ತಿರುವ ಕೊರೊನಾ ಕ್ರೌರ್ಯ
ಮೈಸೂರು

ಮೈಸೂರಲ್ಲಿ ಆತಂಕ ಹೆಚ್ಚಿಸುತ್ತಿರುವ ಕೊರೊನಾ ಕ್ರೌರ್ಯ

April 6, 2021

ಮೈಸೂರು, ಏ.5(ಎಸ್‍ಬಿಡಿ)- ಸಾರ್ವ ಜನಿಕರ ನಿರ್ಲಕ್ಷ್ಯದಿಂದ ಮೈಸೂರಲ್ಲಿ ಕೊರೊನಾ ಸೋಂಕು ತೀವ್ರವಾಗಿ ಆವರಿಸುವ ಭೀತಿ ಎದುರಾಗಿದೆ. ದೇಶದೆಲ್ಲೆಡೆ ಕೊರೊನಾದ 2ನೇ ಅಲೆ ಎದ್ದಿದೆ. ಮೈಸೂರು ಜಿಲ್ಲೆಯಲ್ಲೂ ಏಳೆಂಟು ದಿನಗಳಿಂದ ನಿರಂತರವಾಗಿ ನೂರಕ್ಕೂ ಹೆಚ್ಚು ಪ್ರಕರಣ ವರದಿಯಾಗುತ್ತಿವೆ. ಮತ್ತೆ ಸಾವಿನ ಸರಣಿಯೂ ಆರಂಭವಾಗಿದೆ. ಅದರಲ್ಲೂ ಯುವ ಸಮುದಾಯದಲ್ಲಿ ಸೋಂಕು ಹೆಚ್ಚು ಹರಡುತ್ತಿರುವ ಬಗ್ಗೆ ಜಿಲ್ಲಾಧಿ ಕಾರಿಗಳೇ ಕಳವಳ ವ್ಯಕ್ತಪಡಿಸಿದ್ದಾರೆ. ಆದರೂ ಸಾರ್ವಜನಿಕರು ಮುಂಜಾಗ್ರತಾ ಕ್ರಮ ಗಳನ್ನು ಮರೆತು, ನಿರ್ಲಕ್ಷ್ಯ ತೋರುತ್ತಿರು ವುದು ಆತಂಕಕಾರಿ ಸಂಗತಿಯಾಗಿದೆ. ನೆಪಕ್ಕಷ್ಟೇ ಮಾಸ್ಕ್: ಮೂಗು-ಬಾಯಿ…

ಪ್ಲಾಸ್ಟಿಕ್ ಬ್ಯಾಗ್, ಕವರ್ ನಿಷೇಧದ ಬೆನ್ನ ಹಿಂದೆಯೇ ರಾಜಮಾರ್ಗದಲ್ಲಿ ಹೇಸಿಗೆ ಮೆರೆದವರು!
ಮೈಸೂರು

ಪ್ಲಾಸ್ಟಿಕ್ ಬ್ಯಾಗ್, ಕವರ್ ನಿಷೇಧದ ಬೆನ್ನ ಹಿಂದೆಯೇ ರಾಜಮಾರ್ಗದಲ್ಲಿ ಹೇಸಿಗೆ ಮೆರೆದವರು!

April 6, 2021

ಮೈಸೂರು,ಏ.5-ಮೈಸೂರಿನ ರಾಜಮಾರ್ಗ ಸಯ್ಯಾಜಿ ರಾವ್ ರಸ್ತೆಯಲ್ಲಿ ಸೋಮವಾರ ಕಂಡು ಬಂದ ಪ್ಲಾಸ್ಟಿಕ್ ರಾಶಿ, ಜಿಲ್ಲಾಡಳಿತದ ಆದೇಶವನ್ನು ಅಣಕ ಮಾಡುವಂತಿತ್ತು. ಸ್ವಚ್ಛತೆ, ಪರಿಸರ ಸಂರಕ್ಷಣೆಯ ಸದುದ್ದೇಶದಿಂದ ಜಿಲ್ಲೆಯಾ ದ್ಯಂತ ಪ್ಲಾಸ್ಟಿಕ್ ಬ್ಯಾಗ್, ಕವರ್ ಬಳಕೆಯನ್ನು ಕಡ್ಡಾಯವಾಗಿ ನಿಷೇಧಿಸಿ, ಜಿಲ್ಲಾಡಳಿತ ಆದೇಶಿಸಿದೆ. ಮಹತ್ವದ ಈ ನಿಯಮ ಜಾರಿಯಾಗಿರುವ ದಿನವೇ ಮೈಸೂರು ನಗರದ ಪ್ರಮುಖ ರಸ್ತೆ ಬದಿಯಲ್ಲಿ ಪ್ಲಾಸ್ಟಿಕ್ ರಾಶಿ ಕಾಣಿಸಿದ್ದು ಮಾತ್ರ ವಿಪರ್ಯಾಸ. ಇಲ್ಲಿನ ಬೀದಿಬದಿ ವ್ಯಾಪಾರಿಗಳು, ಮಳಿಗೆದಾರರು ಕವರ್ ಸೇರಿದಂತೆ ಪ್ಲಾಸ್ಟಿಕ್ ತ್ಯಾಜ್ಯವನ್ನು ತಂದು ರಸ್ತೆ ಬದಿಗೆ ಸುರಿದಿ…

1 258 259 260 261 262 1,611
Translate »