ಮೈಸೂರು,ಏ.4(ಆರ್‍ಕೆಬಿ)- ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃ ತ್ವದ ಸರ್ಕಾರ ಶಾಸಕರ ಕ್ಷೇತ್ರಗಳಿಗೆ ಹಣ ವನ್ನೇ ನೀಡುತ್ತಿಲ್ಲ. ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗು ತ್ತಿಲ್ಲ ಇದು ಬಿಜೆಪಿ ಸರ್ಕಾರವಲ್ಲ. ಬಿಎಸ್‍ವೈ ಕುಟುಂಬದ ಸರ್ಕಾರವಾಗಿದೆ. ರಾಜ್ಯದ ಜನರ ತೆರಿಗೆ ಹಣವನ್ನು ಸ್ವಕುಟುಂಬದ ಹಿತಕ್ಕೆ ಬಳಸುತ್ತಿದ್ದಾರೆ ಎಂದು ಮೈಸೂರು ಜಿಲ್ಲೆಯ ಕೆಲ ಕಾಂಗ್ರೆಸ್ ಶಾಸಕರು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಹುಣಸೂರು ಶಾಸಕ ಹೆಚ್.ಪಿ.ಮಂಜು ನಾಥ್, ವರುಣಾ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಮೈಸೂರು ಪತ್ರಕರ್ತರ ಭವನದಲ್ಲಿ ಜಂಟಿ…
ಲೇಖಕ ಆತ್ಮಮುಖಿಯಾದರೆ ಸಾಲದು ಸಮಾಜಮುಖಿಯಾಗಿಯೂ ಇರಬೇಕು ಹಿರಿಯ ಸಾಹಿತಿ ಡಾ.ಸಿಪಿಕೆ ಅಭಿಮತ
April 5, 2021ಮೈಸೂರು,ಏ.4(ಪಿಎಂ)- ಒಳ್ಳೆಯ ಸಾಹಿತಿಗಳು ಬೆಳೆದಷ್ಟು ಸಮಾಜವೂ ಸಮೃದ್ಧಿಯಾಗುತ್ತದೆ. `ಸಾಹಿತ್ಯ’ ಕೇವಲ ಸಂತಸ ನೀಡುವುದಕ್ಕೆ ಸೀಮಿತವಾಗಬಾರದು. ಇದರ ಜೊತೆಗೆ ಸಮಾ ಜದ ಸಂಪೋಷಣೆಯನ್ನೂ ಅದು ಮಾಡಬೇಕು ಎಂದು ಹಿರಿಯ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ (ಸಿಪಿಕೆ) ಅಭಿಪ್ರಾಯಪಟ್ಟರು. ಮೈಸೂರಿನ ಕುವೆಂಪುನಗರದ ವೀಣೆ ಶೇಷಣ್ಣ ಭವನದಲ್ಲಿ ಎಂ.ಬಿ.ಸಂತೋಷ್ ಅಭಿಮಾನಿಗಳ ಬಳಗದ ವತಿಯಿಂದ `ಸಂತೋಷ್ ಷಷ್ಠಿಪೂರ್ತಿ ಸಂಭ್ರಮ-60’ ಶೀರ್ಷಿಕೆಯಡಿ ಭಾನುವಾರ ಹಮ್ಮಿ ಕೊಂಡಿದ್ದ ಸಾಹಿತಿ ಎಂ.ಬಿ.ಸಂತೋಷ್ ಅವರ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ನಾವಿಂದು ಬದಲಾದ ಕಾಲಘಟ್ಟದಲ್ಲಿದ್ದೇವೆ. ಇಂದು ಒಬ್ಬ ಲೇಖಕ ಆತ್ಮಮುಖಿಯಾದರೆ…
ಪಾಲಿಕೆ ತಂಡ ದಾಳಿ; ಸಂತೆಪೇಟೆಯಲ್ಲಿ 450 ಕೆಜಿ ನಿಷೇಧಿತ ಪ್ಲಾಸ್ಟಿಕ್ ಕವರ್ ವಶ
April 3, 2021ಮೈಸೂರು,ಏ.2(ಎಂಟಿವೈ)- ಮೈಸೂ ರಲ್ಲಿ ಏ.5ರಿಂದ ಪ್ಲಾಸ್ಟಿಕ್ ಕವರ್, ಕ್ಯಾರಿ ಬ್ಯಾಗ್ ನಿಷೇಧಿಸಲು ಜಿಲ್ಲಾಡಳಿತ ನಿರ್ಧರಿ ಸಿದ ಬೆನ್ನಲ್ಲೇ ಮೈಸೂರು ಮಹಾನಗರ ಪಾಲಿಕೆ ಸಿಬ್ಬಂದಿ ಶುಕ್ರವಾರ ಸಂತೆಪೇಟೆ ಅಂಗಡಿ ಮೇಲೆ ದಾಳಿ ನಡೆಸಿ ಪರಿಸರಕ್ಕೆ ಮಾರಕವಾದ 450 ಕೆ.ಜಿ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ವಶಪಡಿಸಿಕೊಂಡರು. ದೇವರಾಜ ಮಾರುಕಟ್ಟೆ, ಸಂತೆಪೇಟೆ, ಚಿಕ್ಕ ಗಡಿಯಾರ, ಸಯ್ಯಾಜಿರಾವ್ ರಸ್ತೆಯ ಅಂಗಡಿಗಳು, ತಳ್ಳುಗಾಡಿ ವ್ಯಾಪಾರಿಗಳು ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್ ಕವರ್, ಕ್ಯಾರಿಬ್ಯಾಗ್ ಬಳಸುತ್ತಿರುವ ಬಗ್ಗೆ ಸಾರ್ವ ಜನಿಕರಿಂದ ವ್ಯಾಪಕ ದೂರುಗಳು ಬಂದಿ ದ್ದವು. ಪರಿಣಾಮ…
ಪ್ರಧಾನಿ ಮೋದಿಯಿಂದ ಜನರ ಬದಲು ಉದ್ಯಮಿಗಳ ಹಿತ ಸಾಧನೆ
April 3, 2021ಮೈಸೂರು,ಏ.2(ಎಂಟಿವೈ)-ಪ್ರಧಾನಿ ನರೇಂದ್ರ ಮೋದಿ, ದೇಶದ ಜನರನ್ನು ಕಡೆಗಣಿಸಿ ಉದ್ಯಮಿಗಳ ಹಿತ ಕಾಯಲು ಮುಂದಾಗಿದ್ದು, ರಿಸರ್ವ್ ಬ್ಯಾಂಕ್ ಇಂಡಿಯಾ ವನ್ನು ಶೀಘ್ರದಲ್ಲಿಯೇ ರಿಲಯನ್ಸ್ ಬ್ಯಾಂಕ್ ಇಂಡಿಯಾ ಮಾಡಲು ಮುಂದಾಗಿದ್ದಾರೆ ಎಂದು ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಆರೋಪಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಪಂಚದ ಹಲವು ರಾಷ್ಟ್ರವನ್ನು ಕಾಡಿದ ಕೊರೊನಾ, ಜಾಗತಿಕ ಆರ್ಥಿಕತೆಯ ಮೇಲೆ ಭಾರೀ ಪರಿಣಾಮ ಬೀರಿತ್ತು. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರ ಕೃಪಾಕಟಾಕ್ಷ ದಿಂದ ಕೊರೊನಾ ಕಾಲಘಟ್ಟದಲ್ಲೂ ಜಗತ್ತಿನ ಶ್ರೀಮಂ…
ಭಗವಾನ್ ಬುದ್ಧನ ಸಂದೇಶ ಯುವಪೀಳಿಗೆಗೆ ಪ್ರಸ್ತುತ
April 3, 2021ಮೈಸೂರು, ಏ.2(ಎಸ್‍ಪಿಎನ್)-`ಆಸೆಯೇ ದುಃಖಕ್ಕೆ ಕಾರಣ’ ಎಂಬ ಭಗವಾನ್ ಬುದ್ಧರ ಸಂದೇಶ ಯುವ ಪೀಳಿಗೆಗೆ ಪ್ರಸ್ತುತ. ಈ ಸಂದೇಶವನ್ನು ಪ್ರತಿ ಭಾರತೀಯರೂ ಬದುಕಿನಲ್ಲಿ ಅಳವಡಿಸಿಕೊಳ್ಳ ಬೇಕು ಎಂದು ಶಾಸಕ ಎಲ್.ನಾಗೇಂದ್ರ ತಿಳಿಸಿದರು. ಮೈಸೂರಿನ ಸರಸ್ವತಿಪುರಂನಲ್ಲಿರುವ ಮಹಾ ಬೋಧಿ ವಿದ್ಯಾಸಂಸ್ಥೆ ಆವರಣದಲ್ಲಿ ಆಚಾರ್ಯ ಬುದ್ಧ ರಕ್ಖಿತ್ ಬಂತೇಜಿ ಜನ್ಮಶತಮಾನೋತ್ಸವ ಮತ್ತು ಮಹಾಬೋಧಿ ವಿದ್ಯಾಸಂಸ್ಥೆಯ ಮೈಸೂರು ಘಟಕದ ಸುವರ್ಣ ಮಹೋತ್ಸವದಲ್ಲಿ ಅವರು ಮಾತನಾಡಿದರು. ವಿದ್ಯಾಸಂಸ್ಥೆಯಲ್ಲಿ ಲಡಾಖ್ ಸೇರಿದಂತೆ 15ಕ್ಕೂ ಹೆಚ್ಚು ರಾಜ್ಯಗಳ ವಿದ್ಯಾರ್ಥಿ ಗಳಿದ್ದು, ಉತ್ತಮ ಶಿಕ್ಷಣ ನೀಡುತ್ತಿರುವುದು ಪ್ರಶಂ ಸಾರ್ಹ….
20 ವರ್ಷದಲ್ಲಿ ವಿಶ್ವವನ್ನೇ ಆಳಲಿರುವ ಭಾರತದ ಉತ್ಪಾದನಾ ವಲಯ
April 3, 2021ಮೈಸೂರು,ಏ.2(ವೈಡಿಎಸ್)- ‘ಪ್ರಸ್ತುತ ಭಾರತ ಬದಲಾಗುತ್ತಿದ್ದು, ಮುಂದಿನ 20 ವರ್ಷಗಳಲ್ಲಿ ಪ್ರಪಂಚವನ್ನೇ ಆಳುವ ಮಟ್ಟಿಗೆ ದೇಶದ ಉತ್ಪಾ ದನಾ ವಲಯ ಬೆಳವಣಿಗೆ ಹೊಂದಲಿದೆ ಎಂದು ಟೊಯೋಟ ಇಂಡಸ್ಟ್ರೀಸ್ ಎಂಜಿನ್ ಇಂಡಿಯಾ ಪ್ರೈ.ಲಿ ಉಪ ವ್ಯವಸ್ಥಾಪಕ ನಿರ್ದೇಶಕ ಟಿ.ಆರ್. ಪರಶುರಾಮನ್ ಅಭಿಪ್ರಾಯಪಟ್ಟರು. ಚಾಮುಂಡಿಬೆಟ್ಟದ ತಪ್ಪಲಿನ ಶ್ರೀ ಧರ್ಮಸ್ಥಳ ಮಂಜನಾಥೇಶ್ವರ ಇನ್‍ಸ್ಟಿಟ್ಯೂಟ್ ಫಾರ್ ಮ್ಯಾನೇಜ್ ಮೆಂಟ್ ಡೆವಲೆಪ್‍ಮೆಂಟ್ (ಎಸ್‍ಡಿಎಂಐ ಎಂಡಿ) ಕಾಲೇಜಿನಲ್ಲಿ ಶುಕ್ರವಾರ 26ನೇ ಘಟಿಕೋತ್ಸವ ದಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರ ಮೇಕ್ ಇನ್ ಇಂಡಿಯಾ, ಆತ್ಮ ನಿರ್ಭರ್…
ನಾಗರಿಕರ ನಡುವೆ ಸೇತುವೆಯಾಗಿ, ಗೋಡೆ ಕಟ್ಟದಿರಿ
April 3, 2021ಮೈಸೂರು, ಏ.2(ಆರ್‍ಕೆ)- ನಾಗರಿಕರ ನಡುವೆ ಸೇತುವೆಯಾಗಿ ಕೆಲಸ ಮಾಡಿ. ಆದರೆ ಗೋಡೆ ಕಟ್ಟಬೇಡಿ ಎಂದು ನಿವೃತ್ತ ಡಿಐಜಿಪಿ ಪಿ.ಪಿ. ರಾಜೇಂದ್ರಪ್ರಸಾದ್ ಅವರು ಪೊಲೀಸ್ ಸಮುದಾಯಕ್ಕೆ ಇಂದಿಲ್ಲಿ ಕಿವಿಮಾತು ಹೇಳಿದ್ದಾರೆ. ಮೈಸೂರು ನಗರ ಪೊಲೀಸ್, ಅಶ್ವಾ ರೋಹಿ ದಳ, ಕರ್ನಾಟಕ ಪೊಲೀಸ್ ಅಕಾಡೆಮಿ, ಜಿಲ್ಲಾ ಪೊಲೀಸ್, ಕೆಎಸ್ ಆರ್‍ಪಿ, ಪೊಲೀಸ್ ತರಬೇತಿ ಶಾಲೆ, ರಾಜ್ಯ ಗುಪ್ತವಾರ್ತೆ, ಡಿಸಿಆರ್‍ಇ, ಕರ್ನಾ ಟಕ ಲೋಕಾಯುಕ್ತ ಎಸಿಬಿ, ಚೆಸ್ಕಾಂ ಹಾಗೂ ಐಎಸ್‍ಡಿ ಘಟಕಗಳ ಸಂಯುಕ್ತಾ ಶ್ರಯದಲ್ಲಿ ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸಿಎಆರ್…
ಆಸ್ತಿ ತೆರಿಗೆ ಹೆಚ್ಚಳ ಖಂಡಿಸಿ ವಿಜಯನಗರದಲ್ಲಿ ಪ್ರತಿಭಟನೆ
April 3, 2021ಮೈಸೂರು, ಏ.2- ಮೈಸೂರು ಮಹಾನಗರ ಪಾಲಿಕೆ ಪ್ರಸಕ್ತ ಹಣಕಾಸು ವರ್ಷದಿಂದ ಆಸ್ತಿ ತೆರಿಗೆ ಹೆಚ್ಚಿಸಿರುವುದನ್ನು ಖಂಡಿಸಿ ವಿಜಯನಗರ 1 ಮತ್ತು 2ನೇ ಹಂತದ ನಿವಾಸಿಗಳು ಆರ್‍ಕೆ ಕಾರ್ನರ್ ಬಳಿ ಶುಕ್ರವಾರ ಪ್ರತಿಭಟನೆ ನಡೆಸಿದರು. ಮೈವಿವಿ ಸಿಂಡಿಕೇಟ್ ಮಾಜಿ ಸದಸ್ಯ ಪೆÇ್ರ.ಗೋಪಾಲ್ ಮಾತನಾಡಿ, ಕೊರೊನಾದಿಂದಾಗಿ ಕೆಲಸ ಇಲ್ಲದೆ ಜನರು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಇಂಥ ವೇಳೆ ತೆರಿಗೆ ಏರಿಸಿರುವುದು ಅಸಮಂಜಸ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಜಯನಗರ ಬಡಾವಣೆ ನಿವಾಸಿಗಳು ಪ್ರತಿವರ್ಷ ತೆರಿಗೆ ಪಾವತಿಸುತ್ತಿದ್ದರೂ ಪಾಲಿಕೆ ಮಾತ್ರ ಇಲ್ಲಿನ ರಸ್ತೆ, ಚರಂಡಿಗಳನ್ನು…
ಪಾಲಿಕೆಯಿಂದ ಆಸ್ತಿ ತೆರಿಗೆ ಏರಿಕೆ ವಿರೋಧಿಸಿ ಪ್ರತಿಭಟನೆ
April 1, 2021ಮೈಸೂರು,ಮಾ.31(ಆರ್‍ಕೆಬಿ)- ಮೈಸೂರು ಮಹಾನಗರಪಾಲಿಕೆಯಿಂದ ಆಸ್ತಿ ತೆರಿಗೆ ಏರಿಕೆಯನ್ನು ಮೈಸೂರು ಕನ್ನಡ ವೇದಿಕೆ ಖಂಡಿಸಿದೆ. ಕಳೆದ ವರ್ಷದ ಕೊರೊನಾ ಆಘಾತದಿಂದ ಜನತೆ ಇನ್ನೂ ಚೇತರಿಸಿಕೊಳ್ಳದೆ ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದು, ಇದು ಸರ್ಕಾರಕ್ಕೆ ತಿಳಿಯದ ವಿಷಯವೇನಲ್ಲ. ಹೀಗಿದ್ದೂ ಮಹಾ ನಗರಪಾಲಿಕೆ ಏಕಾಏಕಿ ಆಸ್ತಿ ತೆರಿಗೆ ಏರಿಕೆ ಮಾಡಿರುವುದು ಜನವಿರೋಧಿ ಕ್ರಮವಾಗಿದೆ ಎಂದು ವೇದಿಕೆ ಕಾರ್ಯ ಕರ್ತರು ಮೈಸೂರು ನಗರಪಾಲಿಕೆ ಎದುರು ಸಾಂಕೇತಿಕ ಪ್ರತಿಭಟನೆ ನಡೆಸಿದರು. ನಗರದ ರಸ್ತೆಗಳು ಹದಗೆಟ್ಟಿವೆ. ನಗರಪಾಲಿಕೆಯ ಹಿಂಭಾಗದ ದಳವಾಯಿ ವಿದ್ಯಾಸಂಸ್ಥೆಯ ರಸ್ತೆ ಹಳ್ಳಕೊಳ್ಳಗಳಿಂದ ಕೂಡಿದೆ. ಇಂತಹ…
ಇ-ಜನ್ಮ ಮೂಲಕ ಜನನ, ಮರಣ ಪ್ರಮಾಣ ಪತ್ರ ವಿತರಣೆ
April 1, 2021ಮೈಸೂರು,ಮಾ.31-ನಾಗರಿಕ ನೋಂದಣಿ ಪದ್ಧತಿಯಡಿ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆ ಅಪರ ಜಿಲ್ಲಾಧಿಕಾರಿ ಬಿ.ಎಸ್.ಮಂಜುನಾಥಸ್ವಾಮಿ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಈ ಹಿಂದೆ ಬರಹದ ಮೂಲಕ ಜನನ ಮತ್ತು ಮರಣ ಪ್ರಮಾಣ ಪತ್ರಗಳನ್ನು ವಿತರಿಸಲಾಗುತ್ತಿತ್ತು. ಆದರೆ ಪ್ರಸ್ತುತ ಆನ್‍ಲೈನ್ ಇ-ಜನ್ಮದ ಮೂಲಕ ಜನನ ಮತ್ತು ಮರಣ ಪ್ರಮಾಣ ಪತ್ರವನ್ನು ವಿತರಿಸಲಾಗುತ್ತಿದ್ದು, ಮೊದಲು ದೃಢೀಕರಣ ಪ್ರಮಾಣ ಪತ್ರವನ್ನು ಉಚಿತವಾಗಿ ನಂತರದ ಪ್ರತಿಗಳಿಗೆ ಶುಲ್ಕ ವಿಧಿಸಿ ವಿತರಿಸಲಾಗುವುದು ಎಂದು ಎಡಿಸಿ ಮಂಜುನಾಥಸ್ವಾಮಿ ಅಧಿಕಾರಿಗಳು ತಿಳಿಸಿದರು. ಸುಸ್ಥಿರ ಅಭಿವೃದ್ಧಿ ಗುರಿ-16ರ ಸೂಚಕ 16.9.1ರ…










