ಮೈಸೂರು,ಏ.5(ಎಂಟಿವೈ)- ಸಾಂಸ್ಕøತಿಕ ನಗರಿ ಮೈಸೂರನ್ನು ಮತ್ತಷ್ಟು ಸುಂದರಗೊಳಿಸುವುದರೊಂದಿಗೆ ಪರಿಸರ ಮಾಲಿನ್ಯ ತಡೆ ಗಟ್ಟುವ ನಿಟ್ಟಿನಲ್ಲಿ ಮೈಸೂರು ನಗರ ಸೇರಿದಂತೆ ಜಿಲ್ಲೆ ಯಾದ್ಯಂತ ಪ್ಲಾಸ್ಟಿಕ್ ಬ್ಯಾಗ್, ಕವರ್ ಬಳಕೆ ನಿಷೇ ಧಿಸಲಾಗಿದ್ದು, ನಿಯಮ ಉಲ್ಲಂಘಿಸಿ ಪ್ಲಾಸ್ಟಿಕ್ ಸೇರಿ ದಂತೆ ಪರಿಸರಕ್ಕೆ ಮಾರಕ ವಾದ ಪ್ಲಾಸ್ಟಿಕ್ ವಸ್ತುಗಳ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಳ್ಳುತ್ತಿದೆ. ಮೈಸೂರು ನಗರ ಪಾಲಿಕೆ ವ್ಯಾಪ್ತಿ ಸೇರಿದಂತೆ ಜಿಲ್ಲೆಯಾದ್ಯಂತ ಏ.5ರಿಂದ ಪ್ಲಾಸ್ಟಿಕ್ ಬ್ಯಾಗ್, ಕವರ್ ಬಳಕೆ ನಿಷೇಧಿಸಿ, ಜಿಲ್ಲಾಡಳಿತ ಆದೇಶ…
ಮಹಿಳಾ ಸ್ವಸಹಾಯ ಸಂಘಗಳು ಬ್ಯಾಂಕ್ ಸಾಲ ಸೌಲಭ್ಯ ಸದ್ಬಳಕೆ ಮಾಡಿಕೊಳ್ಳಲಿ
April 6, 2021ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷರೂ ಆದ ರಾಜ್ಯ ಅಪೆಕ್ಸ್ ಬ್ಯಾಂಕ್ ಉಪಾಧ್ಯಕ್ಷ ಜಿ.ಡಿ. ಹರೀಶ್‍ಗೌಡ ಕರೆ ಮಹಿಳಾ ಸ್ವಸಹಾಯ ಸಂಘಗಳಿಗೆ ಸಾಲ ಸೌಲಭ್ಯದ ಚೆಕ್ ವಿತರಣೆ ಮೈಸೂರು,ಏ.5(ಪಿಎಂ)- ಮಹಿಳಾ ಸ್ವಸಹಾಯ ಸಂಘಗಳು ಬ್ಯಾಂಕಿನಿಂದ ಪಡೆದ ಸಾಲಸೌಲಭ್ಯವನ್ನು ಸದ್ಬಳಕೆ ಮಾಡಿ ಕೊಳ್ಳಬೇಕೆಂದು ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷರೂ ಆದ ರಾಜ್ಯ ಅಪೆಕ್ಸ್ ಬ್ಯಾಂಕ್‍ನ ಉಪಾಧ್ಯಕ್ಷ ಜಿ.ಡಿ.ಹರೀಶ್‍ಗೌಡ ಕರೆ ನೀಡಿ ದರು. ಮೈಸೂರಿನ ನೆಹರು ವೃತ್ತದಲ್ಲಿರುವ ಎಂಸಿಡಿಸಿಸಿ ಬ್ಯಾಂಕ್‍ನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಬ್ಯಾಂಕ್‍ನ ಜನತಾನಗರ ಶಾಖೆ ವತಿಯಿಂದ ಕಾಯಕ ಯೋಜನೆಯಡಿ ಮಹಿಳಾ ಸ್ವಸಹಾಯ…
ಮೈಸೂರಲ್ಲಿ 15 ದಿನದೊಳಗಾಗಿ 3 ಲಕ್ಷ ಮಂದಿಗೆ ಲಸಿಕೆ ನೀಡುವ ಗುರಿ: ಡಿಸಿ ರೋಹಿಣಿ ಸಿಂಧೂರಿ
April 6, 2021ಮೈಸೂರು, ಏ.5- ಮೈಸೂರು ಜಿಲ್ಲೆ ಹಾಗೂ ನಗರದಲ್ಲಿ ಕೋವಿಡ್-19 2ನೇ ಅಲೆ ಶುರುವಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ಮಹಾನ್ ಸಂಸ್ಥೆಯ ಖಾಸಗಿ ಆಸ್ಪತ್ರೆಯ ವತಿಯಿಂದ ಮೈಸೂರು ನಗರದಲ್ಲಿ 15 ದಿನದೊಳಗಾಗಿ 3 ಲಕ್ಷ ಮಂದಿಗೆ ಲಸಿಕೆ ನೀಡಬೇಕೆಂಬ ಗುರಿ ಇದೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ತಿಳಿಸಿದರು. ಮೈಸೂರಿನ ಹೆಬ್ಬಾಳ್‍ನÀಲ್ಲಿರುವ ಆಶಾಕಿರಣ ಆಸ್ಪತ್ರೆಗೆ ಸೋಮವಾರ ಭೇಟಿ ನೀಡಿ ಮಾತನಾಡಿದ ಅವರು, ನಗರದ 65 ವಾರ್ಡ್‍ಗಳಲ್ಲಿ ಮಹಾನ್ ಗ್ರೂಪ್ ಖಾಸಗಿ ಆಸ್ಪತ್ರೆಯವರು ನಮ್ಮ ಕೇಂದ್ರಗಳಲ್ಲಿ ಉಚಿತವಾಗಿ ಲಸಿಕೆ…
‘ಯುವರತ್ನ’ ಚಿತ್ರ ವೀಕ್ಷಣೆ: ಅಗಲಿದ ಮಗನ ಆಸೆ ಈಡೇರಿಸಿದ ಪೋಷಕರು
April 6, 2021ಮೈಸೂರು, ಏ.5(ಎಂಟಿವೈ)- ಅಕಾಲಿಕ ಮರಣಕ್ಕೀಡಾದ ಪುತ್ರನ ಫೋಟೊಗೂ ಟಿಕೆಟ್ ಖರೀದಿಸಿ `ಯುವರತ್ನ’ ಸಿನಿಮಾ ವೀಕ್ಷಣೆ ಮಾಡುವ ಮೂಲಕ ಪೋಷಕರು ಅಗಲಿದ ಮಗನ ಆಸೆ ನೆರವೇರಿಸಿದ್ದಾರೆ. ಮೈಸೂರಿನ ಕುವೆಂಪುನಗರದ ನಿವಾಸಿ ಮುರಳೀಧರ್ ಅವರ ಪುತ್ರ ಹರಿಕೃಷ್ಣನ್ ಕಳೆದ 4 ತಿಂಗಳ ಹಿಂದೆ ಸ್ನೇಹಿತರೊಂದಿಗೆ ವರುಣಾ ನಾಲೆಗೆ ಈಜಲು ಹೋಗಿದ್ದಾಗ, ನೀರಲ್ಲಿ ಮುಳುಗಿ ಮೃತಪಟ್ಟಿದ್ದ. ಪುನೀತ್‍ರಾಜ್ ಕುಮಾರ್ ಅಪ್ಪಟ ಅಭಿಮಾನಿಯಾಗಿದ್ದ ಹರಿ ಕೃಷ್ಣನ್ ಯುವರತ್ನ ಸಿನಿಮಾ ನೋಡುವ ಹಂಬಲ ವ್ಯಕ್ತಪಡಿಸಿದ್ದ ಎನ್ನಲಾಗಿದೆ. ಆದರೆ, ಈ ಸಿನಿಮಾ ಬಿಡುಗಡೆಯಾಗುವ ಮುನ್ನವೇ ಆತ…
ಕೊರೊನಾ ಎರಡನೇ ಅಲೆ ಆರ್ಭಟ ಜಾತ್ರೆ, ಮೆರವಣಿಗೆ, ಧರಣಿ, ಹಬ್ಬಕ್ಕೆ ಬ್ರೇಕ್
April 6, 2021ಮೈಸೂರು, ಏ.5(ಎಂಕೆ)- ರಾಜ್ಯದಲ್ಲಿ ಕೋವಿಡ್-19 2ನೇ ಅಲೆ ಗಣನೀಯವಾಗಿ ಹೆಚ್ಚುತ್ತಿರುವ ಹಿನ್ನೆಲೆ ಈಗಾಗಲೇ ರಾಜ್ಯ ಸರ್ಕಾರ ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಜಾತ್ರೆ, ಮೆರವಣಿಗೆ, ಧರಣಿ, ಹಬ್ಬಗಳ ಆಚರಣೆ ಮಾಡದಂತೆ ಆದೇಶ ಹೊರಡಿಸಿದೆ. ಈ ಕುರಿತು ಮೈಸೂರು ನಗರದಲ್ಲಿ ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಹಲವು ಅತ್ಯಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಡಿಸಿಪಿ ಪ್ರಕಾಶ್‍ಗೌಡ ತಿಳಿಸಿದ್ದಾರೆ. ನಗರದ ಎಲ್ಲಾ ಪೊಲೀಸ್ ಠಾಣೆಗಳ ವತಿಯಿಂದ ನಿರಂತರ ವಾಗಿ ಕೊರೊನಾ ಜಾಗೃತಿ ಜಾಥಾ, ಉಚಿತ ಮಾಸ್ಕ್ ವಿತರಣೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಜೊತೆಗೆ…
ಮಹಾರಾಣಿ ಪಿಯು ಕಾಲೇಜಿನ ಹೆಚ್ಚುವರಿ ಕೊಠಡಿ ನಿರ್ಮಾಣ ಕಾಮಗಾರಿಗೆ ಚಾಲನೆ
April 6, 2021ಮೈಸೂರು,ಏ.5(ಪಿಎಂ)- ಮೈಸೂರಿನ ನಾರಾಯಣಶಾಸ್ತ್ರಿ ರಸ್ತೆಯ ಮಹಾರಾಣಿ ಪದವಿಪೂರ್ವ ಕಾಲೇಜಿನ ಹೆಚ್ಚುವರಿ ಕೊಠಡಿಗಳ ನಿರ್ಮಾಣದ 1 ಕೋಟಿ ರೂ. ವೆಚ್ಚದ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಸೋಮ ವಾರ ಚಾಲನೆ ನೀಡಿದರು. ಚಾಮರಾಜ ಕ್ಷೇತ್ರದ ವ್ಯಾಪ್ತಿಯ ಮಹಾ ರಾಣಿ ಪದವಿಪೂರ್ವ ಕಾಲೇಜಿನ ಆವರಣ ದಲ್ಲಿ ಜಿಲ್ಲಾ ಪಂಚಾಯತ್ ಇಂಜಿನಿಯ ರಿಂಗ್ ವಿಭಾಗದ ಅನುದಾನದಲ್ಲಿ ಕೈಗೆತ್ತಿ ಕೊಂಡಿರುವ ಹೆಚ್ಚುವರಿ ಕೊಠಡಿ ನಿರ್ಮಾಣ ಕಾಮಗಾರಿಗೆ ಕ್ಷೇತ್ರದ ಶಾಸಕ ಎಲ್. ನಾಗೇಂದ್ರ ಅವರ ಉಪಸ್ಥಿತಿಯಲ್ಲಿ ಸಚಿ ವರು ಭೂಮಿ ಪೂಜೆ ನೆರವೇರಿಸಿದರು….
ಮೈಸೂರಲ್ಲಿ ಹೆಚ್ಚಿದ ಕೊರೊನಾ ಸೋಂಕು ಒಂದೇ ದಿನ 260 ಪ್ರಕರಣ ದೃಢ
April 5, 2021ಮೈಸೂರು, ಏ.4(ಎಸ್‍ಬಿಡಿ)- ಮೈಸೂರು ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದ್ದು, ಭಾನುವಾರ 260 ಜನರಿಗೆ ಸೋಂಕು ದೃಢಪಟ್ಟಿದೆ. ಕಳೆದ ಐದಾರು ತಿಂಗಳಲ್ಲಿ ಇದು ದಾಖಲೆ ಪ್ರಮಾಣದ ಏರಿಕೆಯಾಗಿದೆ. 2020ರ ಮಾರ್ಚ್ ಅಂತ್ಯದಲ್ಲಿ ವಕ್ಕರಿಸಿದ ಕೊರೊನಾ, ದಿನಕಳೆ ದಂತೆ ಎಲ್ಲೆಡೆ ಆವರಿಸಿಬಿಟ್ಟಿತು. ನಂತರ ಸೆಪ್ಟೆಂಬರ್ ಮಾಹೆ ಯಿಂದ ಸೋಂಕಿತರ ಸಂಖ್ಯೆ ಕಡಿಮೆಯಾಗಿ, ಇತ್ತೀಚೆಗೆ ಎರಡಂಕಿಗೆ ಇಳಿದಿತ್ತು. ಆದರೆ ಕೊರೊನಾ ದಾಳಿಯಿಂದ ಚೇತರಿಸಿಕೊಳ್ಳುವ ಹೊತ್ತಿಗೆ ಇದೀಗ 2ನೇ ಅಲೆ ಅಬ್ಬರಿಸುತ್ತಿದೆ. ಅಂತೆಯೇ ಮೈಸೂರಿನಲ್ಲೂ ಸೋಂಕಿ ತರ ಸಂಖ್ಯೆ…
ಯುವ ಬ್ರಿಗೇಡ್‍ನಿಂದ ಎಲ್ಲೆಂದರಲ್ಲಿ ಬಿದ್ದಿದ್ದ ದೇವರ ಫೋಟೋ ಸಂಗ್ರಹ
April 5, 2021ಮೈಸೂರು,ಏ.4(ಎಂಟಿವೈ)-ರಸ್ತೆಬದಿ ಎಲ್ಲೆಂದರಲ್ಲಿ ಬಿಸಾಡಿದ್ದ ದೇವರ ಛಾಯಾಚಿತ್ರಗಳನ್ನು ಭಾನುವಾರ ಯುವ ಬ್ರಿಗೇಡ್ ಕಾರ್ಯಕರ್ತರು ಸಂಗ್ರಹಿಸುವ ಅಭಿಯಾನ ನಡೆಸಿ, ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ತರದಂತೆ ಜನ ಜಾಗೃತಿ ಮೂಡಿಸಿದರು. ಯುವ ಬ್ರಿಗೇಡ್ ರಾಜ್ಯದಾದ್ಯಂತ ರಸ್ತೆ ಬದಿಯಲ್ಲಿ ಬಿದ್ದಿರುವ ಹಿಂದೂ ದೇವರ ಛಾಯಾಚಿತ್ರ ಸಂಗ್ರಹಿಸುವ ಅಭಿಯಾನವನ್ನು ಭಾನುವಾರ ನಡೆಸಿದ್ದು, ಮೈಸೂರು ನಗರ ಸೇರಿದಂತೆ ಜಿಲ್ಲೆಯಲ್ಲಿ 150ಕ್ಕೂ ಹೆಚ್ಚು ಕಾರ್ಯಕರ್ತರು ವಿವಿಧೆಡೆ ಬಿದ್ದಿದ್ದ 3 ಸಾವಿರಕ್ಕೂ ಹೆಚ್ಚು ದೇವರ ಫೋಟೊ ಸಂಗ್ರಹಿಸಿ ಗೌರವಯುತವಾಗಿ ವಿಲೇವಾರಿ ಮಾಡುವ ಮೂಲಕ ಧಾರ್ಮಿಕ ಭಾವನೆಗೆ ಧಕ್ಕೆ…
ಹೆಲಿಟೂರಿಸಂಗಾಗಿ ಮರ ಹನನ ನಿರ್ಧಾರ ಖಂಡಿಸಿ ಪ್ರತಿಭಟನೆ
April 5, 2021ಮೈಸೂರು,ಏ.4(ವೈಡಿಎಸ್)- `ಹೆಲಿಟೂರಿಸಂ’ಗಾಗಿ ಮೈಸೂರಿನ ಲಲಿತ ಮಹಲ್ ಬಳಿ ಮರ ಕಡಿಯಲು ಮುಂದಾಗಿರುವುದನ್ನು ಖಂಡಿಸಿ `ಪರಿಸರ ಸಂರಕ್ಷಣಾ ಸಮಿತಿ’ ಪದಾಧಿಕಾರಿಗಳು ಮತ್ತು ಸ್ಥಳೀಯರು ಭಾನುವಾರ ಪ್ರತಿಭಟನೆ ನಡೆಸಿದರು. ಮರ ಕಡಿ ಯಲು ಗುರುತಿಸಿ ನಂಬರ್ ಹಾಕಿರುವ ಜಾಗಕ್ಕೆ ಕಪ್ಪುಬಣ್ಣ ಬಳಿದು ಆಕ್ರೋಶ ವ್ಯಕ್ತಪಡಿಸಿದರು. `ಹೆಲಿಟೂರಿಸಂ’ಗಾಗಿ ಸರ್ಕಾರ ಮರ ಕಡಿ ಯಲು ನಿಗದಿಪಡಿಸಿರುವ ಪ್ರದೇಶ ಜೀವ ವೈವಿಧ್ಯ ದಿಂದ ಕೂಡಿದೆ. ಅಲ್ಲಿ ಚಿಟ್ಟೆ, ಪಕ್ಷಿಗಳು, ನವಿಲು ಮತ್ತಿತರೆ ಪ್ರಾಣಿ-ಪಕ್ಷಿ ಸಂಕುಲ ವಾಸಿಸುತ್ತಿವೆ. ಅಲ್ಲಿಗೆ ದೂರದಿಂದ ಪಕ್ಷಿಗಳೂ ವಲಸೆ ಬರುತ್ತವೆ. ಮರ…
ಇಂದಿನಿಂದ ಪಾಲಿಕೆ ಸಿಬ್ಬಂದಿಗೆ ಸಾಮೂಹಿಕ ಆರ್‍ಟಿ-ಪಿಸಿಆರ್ ಪರೀಕ್ಷೆ ಆರಂಭ
April 5, 2021ಮೈಸೂರು, ಏ.4(ಎಂಟಿವೈ)-ಕೊರೊನಾ ಎರಡನೇ ಹಂತದ ಅಲೆಯಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿ ರುವ ಹಿನ್ನೆಲೆಯಲ್ಲಿ ಹಾಗೂ ಕಾರ್ಪೊರೇಟರ್ ಸೇರಿದಂತೆ ಪಾಲಿಕೆಯ ಕೆಲವು ಸಿಬ್ಬಂದಿಗಳಿಗೆ ಕೊರೊನಾ ಸೋಂಕು ಕಾಣಿಸಿ ಕೊಂಡಿರುವುದರಿಂದ ಪಾಲಿಕೆಯ ಎಲ್ಲಾ ಸಿಬ್ಬಂದಿಗಳಿಗೆ ಸೋಮವಾರ ದಿಂದ ಆರ್‍ಟಿ-ಪಿಸಿಆರ್ ಟೆಸ್ಟ್ ಮಾಡಿಸಲು ಕ್ರಮ ಕೈಗೊಳ್ಳ ಲಾಗಿದೆ ಎಂದು ಪಾಲಿಕೆಯ ಆಯುಕ್ತೆ ಶಿಲ್ಪಾ ನಾಗ್ ತಿಳಿಸಿದ್ದಾರೆ. ಕೊರೊನಾ ಎರಡನೇ ಅಲೆಯಿಂದಾಗಿ ಕರ್ತವ್ಯ ನಿರತ ಕೊರೊನಾ ವಾರಿಯರ್ಸ್‍ಗಳಾದ ಪಾಲಿಕೆಯ 8-10 ಮಂದಿ ಸಿಬ್ಬಂದಿಗಳಿಗೆ ಹಾಗೂ ಇಬ್ಬರು ಕಾರ್ಪೊರೇಟರ್‍ಗಳಿಗೆ ಕೊರೊನಾ ಸೋಂಕು…










