ಮೈಸೂರು,ಡಿ.21(ಆರ್‍ಕೆ)- ಮೈಸೂ ರಿನ ಕುಂಬಾರಕೊಪ್ಪಲಿನ ಪ್ರವೇಶದಲ್ಲೇ ನಿರ್ಮಿಸಲುದ್ದೇಶಿಸಿರುವ ಹೈಟೆಕ್ ಬಸ್ ನಿಲ್ದಾಣಕ್ಕೆ ಶಾಸಕ ಎಲ್.ನಾಗೇಂದ್ರ, ಇಂದು ಗುದ್ದಲಿ ಪೂಜೆ ನೆರವೇರಿಸಿದರು. ಮೈಸೂರು ಮಹಾನಗರ ಪಾಲಿಕೆಯ ರಾಜ್ಯ ಹಣಕಾಸು ಆಯೋಗ(ಎಸ್‍ಎಫ್‍ಸಿ)ದ 35 ಲಕ್ಷ ರೂ. ಅನುದಾನದಲ್ಲಿ ನಿರ್ಮಿಸಲುದ್ದೇಶಿಸಿ ರುವ ಹೈಟೆಕ್ ಬಸ್ ನಿಲ್ದಾಣದಲ್ಲಿ ಎರಡು ವಾಣಿಜ್ಯ ಮಳಿಗೆಗಳು, ಕೆಎಸ್‍ಆರ್‍ಟಿಸಿ ಅಧಿ ಕಾರಿಗಳಿಗೆ ಸುಸಜ್ಜಿತ ಕಚೇರಿ ಕೊಠಡಿ, ಬಸ್ ನಿಲುಗಡೆಗೆ ಅವಕಾಶ ಹಾಗೂ ಮೊದಲ ಮಹಡಿಯಲ್ಲಿ ವಿಶಾಲ ಸಭಾಂಗಣ ನಿರ್ಮಿಸಲಿದ್ದು, ಆ ಜಾಗವನ್ನು ಯಾವ ಉದ್ದೇಶಕ್ಕೆ ಬಳಸಿಕೊಳ್ಳಬೇಕೆಂಬುದನ್ನು ಮುಂದೆ ನಿರ್ಧರಿಸಲಾಗುವುದು….
ಗೆದ್ದ ಬಳಿಕ ತಿರುಗಿ ನೋಡದ ಗ್ರಾಪಂ ಸದಸ್ಯರು; ಹಳೇಬೀಡು ಗ್ರಾಮದ ಮಹಿಳೆಯರ ಆಕ್ರೋಶ
December 22, 2020ಮೈಸೂರು,ಡಿ.21(ವೈಡಿಎಸ್)-ನಿತ್ಯ ಕೂಲಿ ಕೆಲಸ ಮಾಡಿ ಜೀವನ ಸಾಗಿಸುವ ಬಡವರ ಮನೆಗಳು ಮುರಿದು ಬೀಳು ತ್ತಿವೆ… ಕುಡಿಯುವ ನೀರಿಗೂ ಹಾಹಾಕಾರವಿದೆ… ಗೆದ್ದ ಅಭ್ಯರ್ಥಿಗಳು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸದೇ ಸ್ವಂತ ಸಮಸ್ಯೆಗಳನ್ನಷ್ಟೇ ಪರಿಹರಿಸಿಕೊಳ್ಳುತ್ತಾರೆ. ಇದಕ್ಕಾಗಿ ನಾವೇಕೆ ಮತ ನೀಡಬೇಕು? ಇದು ಹಳೇಬೀಡು ಗ್ರಾಮದ ಮಹಿಳೆಯರ ಪ್ರಶ್ನೆ. ಹಳೆಬೀಡಿನಲ್ಲಿ ತುಂಬಾ ಜನರ ಮನೆಗಳು ಕುಸಿದು ಬೀಳುವಂತಿವೆ. ಮಳೆಗಾಲದಲ್ಲಿ ನೀರೆಲ್ಲಾ ಮನೆಯೊಳಗೆ ಸುರಿ ಯುತ್ತದೆ. ಮಳೆ ನಿಂತ ನಂತರ ಕುಟುಂಬದವರೆಲ್ಲಾ ನೀರು ಹೊರಹಾಕುತ್ತಾರೆ. ಗೆದ್ದ ಅಭ್ಯರ್ಥಿಗಳು ಮನೆ ಇಲ್ಲದವರು, ಮುರುಕು ಮನೆಗಳಲ್ಲಿ ಇರುವವರಿಗೆ…
46 ಸಾವಿರ ಆಸ್ತಿ ಸಂಬಂಧ ಕ್ರಮಬದ್ಧ ನೋಂದಣಿ ಆಗದ ದಾಖಲೆ ಸಲ್ಲಿಕೆ
December 22, 2020ಮೈಸೂರು, ಡಿ.21 ಮೈಸೂರು ನಗರದಲ್ಲಿ ಪ್ರಾಯೋಗಿಕವಾಗಿ 2010ರಲ್ಲಿ ಜಾರಿ ಗೊಂಡ ಕಂದಾಯ ಇಲಾಖೆ ಮಹತ್ವಾ ಕಾಂಕ್ಷೆಯ `ನಗರ ಆಸ್ತಿ ಮಾಲೀಕತ್ವ ದಾಖಲೆ (ಯುಪಿಓಆರ್) ಯೋಜನೆ’ ಅಡಿ 3,23, 616 ಆಸ್ತಿಗಳ ಸರ್ವೇ (ಅಳತೆ) ಪ್ರಕ್ರಿಯೆ ನಡೆಸಲಾಗಿದೆ. ಈ ಪೈಕಿ 2,18,900 ಆಸ್ತಿ ಗಳಿಗೆ ದಾಖಲೆಗಳನ್ನು ಸಂಗ್ರಹ ಮಾಡಿದ್ದು, ಇದರಲ್ಲಿ 46 ಸಾವಿರ ಆಸ್ತಿಗಳು ಕ್ರಮಬದ್ಧ ವಾಗಿ ನೋಂದಣಿ ಆಗದಿರುವುದು ಕಂಡು ಬಂದಿದೆ. ಮೈಸೂರು ನಗರ ಸೇರಿದಂತೆ ಮೈಸೂರಿನ ಸುತ್ತಮುತ್ತಲ 42 ಗ್ರಾಮಗಳನ್ನು ಒಳ ಗೊಂಡಂತೆ (42 ಗ್ರಾಮಗಳು…
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾಗಿ ಕೆ.ಬಿ. ಸೋಮೇಗೌಡ ಅವಿರೋಧ ಆಯ್ಕೆ
December 22, 2020ಮೈಸೂರು,ಡಿ.21(ಎಸ್‍ಪಿಎನ್)- ಮೈಸೂರು ದಕ್ಷಿಣ ವಲಯದ ಕನಕಗಿರಿ ಶಾಲೆಯ ಶಿಕ್ಷಕ ಕೆ.ಬಿ.ಸೋಮೇಗೌಡ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮೈಸೂರು ಜಿಲ್ಲಾಧ್ಯಕ್ಷರಾಗಿ ಅವಿರೋಧ ವಾಗಿ ಆಯ್ಕೆಯಾಗಿದ್ದಾರೆ. ಜೊತೆಗೆ ಮೈಸೂರು ತಾಲೂಕಿನ ಎಂಸಿ ಹುಂಡಿ ಶಾಲೆಯ ಸುಬ್ರಮಣ್ಯ, ಗೆಜ್ಜಗಳ್ಳಿ ಶಾಲೆಯ ಸಿ.ಎಸ್. ಮಮತಾ ಉಪಾಧ್ಯಕ್ಷರಾಗಿ ಆಯ್ಕೆಯಾಗಿ ದ್ದಾರೆ ಎಂದು ಜಿಲ್ಲಾ ಚುನಾವಣಾ ಧಿಕಾರಿ ಘೋಷಿಸಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ನಂಜನ ಗೂಡಿನ ಮುದ್ದಹಳ್ಳಿ ಶಾಲೆಯ ಎಚ್.ಎಸ್. ಮಹೇಶ್, ಖಜಾಂಚಿಯಾಗಿ ಮಹಾದೇವ, ಸಂಘಟನಾ ಕಾರ್ಯದರ್ಶಿಯಾಗಿ ಗುಂಗ್ರಾಲ್ ಛತ್ರ ಶಾಲೆಯ ಪಿ.ಶಾಂತರಾಜು, ಕೆ.ಆರ್.ನಗರದ…
ಖ್ಯಾತ ಸರೋದ್ ವಾದಕ ಪಂಡಿತ್ ರಾಜೀವ್ ತಾರಾನಾಥ್ ಅವರಿಗೆ ‘ಎಸ್.ವಿ.ನಾರಾಯಣರಾವ್ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ’ ಪ್ರದಾನ
December 22, 2020ಮೈಸೂರು, ಡಿ.21(ಎಂಕೆ)- ಖ್ಯಾತ ಸರೋದ್ ವಾದಕ ಪಂಡಿತ್ ರಾಜೀವ್ ತಾರಾನಾಥ್ ಅವರಿಗೆ ಇಂದು ಶ್ರೀ ರಾಮ ಸೇವಾ ಮಂಡಲಿ ಟ್ರಸ್ಟ್ ವತಿಯಿಂದ ‘ಎಸ್.ವಿ. ನಾರಾಯಣ ರಾವ್ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ನಗರದ ಸರಸ್ವತಿಪುರಂನಲ್ಲಿರುವ ಅವರ ನಿವಾಸದ ಆವರಣದಲ್ಲಿ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ನಿವೃತ್ತ ಐಪಿಎಸ್ ಅಧಿಕಾರಿ ಹಾಗೂ ರಾಜ್ಯಸಭಾ ಸದಸ್ಯ ಕೆ.ಸಿ. ರಾಮಮೂರ್ತಿ, ಹಿಂದೂಸ್ಥಾನಿ ಸಂಗೀತ ವಿದ್ವಾಂಸ ಡಾ.ಇಂದೂಧರ ನಿರೋಧಿ, ಖ್ಯಾತ ವಯೋಲಿನ್ ವಾದಕ ಮೈಸೂರು ಮಂಜುನಾಥ್ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿ…
ಮೈಸೂರಲ್ಲಿ ಸೋಮವಾರ 40 ಮಂದಿಗೆ ಸೋಂಕು; 53 ಮಂದಿ ಗುಣಮುಖ
December 22, 2020ರಾಜ್ಯದಲ್ಲೂ ಸೋಂಕು ಇಳಿಮುಖ ಮತ್ತೊಂದೆಡೆ ಎರಡನೇ ಅಲೆ ಭೀತಿ ಮೈಸೂರು, ಡಿ.21(ಎಸ್‍ಬಿಡಿ)- ಮೈಸೂರು ಜಿಲ್ಲೆಯಲ್ಲಿ ಸೋಮವಾರ ಕೊರೊನಾ ದೃಢಪಟ್ಟವರ ಸಂಖ್ಯೆಗಿಂತ ಹೆಚ್ಚು ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಸೋಮವಾರ 40 ಮಂದಿಗೆ ಸೋಂಕು ದೃಢಪಟ್ಟಿದ್ದು, 53 ಮಂದಿ ಸೋಂಕು ಮುಕ್ತರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಈ ಮೂಲಕ ಒಟ್ಟು ಸೋಂಕು ಬಾಧಿತರಲ್ಲಿ (51,847) 50,426 ಮಂದಿ ಗುಣಮುಖರಾದಂತಾಗಿದೆ. ಸದ್ಯ 6 ದಿನಗಳಿಂದ ಸೋಂಕಿತರ ಸಾವು ಸಂಭವಿಸಿಲ್ಲ. ಗುಣಮುಖವಾಗಿ ಡಿಸ್ಚಾರ್ಜ್ ಆದವರು ಹಾಗೂ ಒಟ್ಟು ಸಾವಿನ ಸಂಖ್ಯೆ(1,006) ಹೊರತುಪಡಿಸಿ ಜಿಲ್ಲೆಯಲ್ಲಿನ್ನು…
ಇಂದು 263 ನಾಗರಿಕ ಸೌಕರ್ಯ ನಿವೇಶನ ಹಂಚಿಕೆ ಕುರಿತು ಸಂವಾದ
December 22, 2020ಮೈಸೂರು, ಡಿ.21-ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ 263 ನಾಗರಿಕ ಸೌಕರ್ಯ ನಿವೇಶನಗಳನ್ನು ಹಂಚಿಕೆ ಮಾಡುವ ಸಂಬಂಧ ವಿವಿಧ ಸಂಘ ಸಂಸ್ಥೆಗಳ ಜೊತೆ ಡಿ.22ರಂದು ಬೆಳಗ್ಗೆ 11ಗಂಟೆಗೆ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಸಂವಾದ ಕಾರ್ಯಕ್ರಮ ಆಯೋಜಿಸಿದೆ. ಮುಡಾ ವತಿಯಿಂದ 262 ನಾಗರಿಕ ಸೌಕರ್ಯ ನಿವೇಶನಗಳನ್ನು ಹಂಚಿಕೆ ಮಾಡುವ ಸಂಬಂಧ ಪ್ರಕಟಣೆ ಹೊರಡಿಸಲು ಉದ್ದೇಶಿಸ ಲಾಗಿದೆ. ಸಿ.ಎ ನಿವೇಶನ ಪಡೆಯಲು ಉದ್ದೇಶಿಸಿರುವ ನೋಂದಾಯಿತ ವಿದ್ಯಾಸಂಸ್ಥೆಗಳು, ಆರೋಗ್ಯ ಸಂಸ್ಥೆಗಳು, ಸ್ಪೋಟ್ರ್ಸ್ ಕ್ಲಬ್‍ಗಳು, ಸಹಕಾರಿ ಕಾಯ್ದೆ 1959-60ರಡಿಯಲ್ಲಿ ನೋಂದಾಯಿತ ಸಂಘ ಸಂಸ್ಥೆಗಳು, ಟ್ರಸ್ಟ್‍ಗಳು,…
ರೈತರ ಹೋರಾಟಕ್ಕೆ ‘ಸುಪ್ರೀಂ’ ಸಹಮತ ಸ್ವಾಗತಾರ್ಹ
December 22, 2020ಮೈಸೂರು,ಡಿ.21- ರೈತರ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡಬಾರ ದೆಂದು ಸುಪ್ರಿಂಕೋರ್ಟ್ ಅಭಿಪ್ರಾಯಿಸಿರುವುದು ಸ್ವಾಗತಾರ್ಹ ಎಂದು ಕರ್ನಾಟಕ ಪ್ರಜಾ ಪಾರ್ಟಿ(ರೈತಪರ್ವ) ಸಂಸ್ಥಾಪಕ ರಾಜ್ಯಾಧ್ಯಕ್ಷ ಬಿ.ಶಿವಣ್ಣ ಹೇಳಿದ್ದಾರೆ. ರೈತ ವಿರೋಧಿ ಕಾಯ್ದೆಗಳನ್ನು ವಾಪಸ್ ಪಡೆಯುವಂತೆ ಸುಮಾರು 22 ದಿನಗಳಿಂದ ದೆಹಲಿಯಲ್ಲಿ ಅಹೋರಾತ್ರಿ ಮುಷ್ಕರ ನಡೆಸಲಾಗುತ್ತಿದೆ. ಅನ್ನದಾತರ ಹಕ್ಕನ್ನು ಕೇಂದ್ರ ಸರ್ಕಾರ ಮಾನ್ಯ ಮಾಡ ಬೇಕು. ಜನವಿರೋಧಿ, ರೈತ ವಿರೋಧಿ ಕಾಯ್ದೆಗಳನ್ನು ವಿರೋಧಿಸುವ ಸಂವಿಧಾನಬದ್ಧವಾದ ಹಕ್ಕು ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರಿಗೂ ಇದೆ. ಈ ನಿಟ್ಟಿನಲ್ಲಿ ಯಾವುದೇ ಕಾರಣಕ್ಕೂ ರೈತರ ಹೋರಾಟವನ್ನು ಮೊಟಕುಗೊಳಿಸುವ…
ವಿದ್ಯುತ್ ಟ್ರಾನ್ಸ್‍ಫಾರ್ಮರ್ ಕೆಳಗೆ ಕಸದ ರಾಶಿ
December 22, 2020ಮೈಸೂರು, ಡಿ.21(ಎಸ್‍ಪಿಎನ್)- ಮೈಸೂರು ನಗರದ ವಿವಿಧ ರಸ್ತೆಗಳಲ್ಲಿರುವ ವಿದ್ಯುತ್ ಟ್ರಾನ್ಸ್‍ಫಾರ್ಮರ್ ಕೆಳಗೆ ಕಸ ಹಾಕುವ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ವಿಫಲರಾಗಿರುವ ಸಿಬ್ಬಂದಿ ಮೇಲೆ ಕ್ರಮ ಕೈಗೊಳ್ಳುವಂತೆ ಮೈಸೂರು ನಗರ ಪಾಲಿಕೆ ಆಯುಕ್ತರನ್ನು ಸಾಮಾಜಿಕ ಹೋರಾಟ ಗಾರರು ಒತ್ತಾಯಿಸಿದ್ದಾರೆ. ಮೈಸೂರು ಟಿ.ಕೆ.ಬಡಾವಣೆ ಸಮೀಪದ ಬಿಎಸ್‍ಎನ್‍ಎಲ್ ಕಚೇರಿ ಮುಂಭಾಗ ಟ್ರಾನ್ಸ್ ಫಾರ್ಮರ್ ಕೆಳಗೆ ಯಾರೋ ಗ್ಲಾಸ್‍ಪೀಸ್, ಪ್ಲಾಸ್ಟಿಕ್ ತ್ಯಾಜ್ಯ, ಅನುಪಯುಕ್ತ ಗೃಹೋಪ ಯೋಗಿ ವಸ್ತುಗಳ ಕಸದ ರಾಶಿ ಹಾಕಿದ್ದು, ಈ ಸಮಸ್ಯೆ ನಗರದ ಬಹುತೇಕ ಟ್ರಾನ್ಸ್ ಫಾರ್ಮರ್…
ಜಿಗುಪ್ಸೆ: ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ
December 22, 2020ಮೈಸೂರು,ಡಿ.21(ಆರ್‍ಕೆ)- ಜೀವನ ದಲ್ಲಿ ಜಿಗುಪ್ಸೆಗೊಂಡು ವ್ಯಕ್ತಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿ ಕೊಂಡಿರುವ ಘಟನೆ ಮೈಸೂರಿನ ಸಾತಗಳ್ಳಿ ಬಡಾವಣೆಯಲ್ಲಿ ಭಾನು ವಾರ ರಾತ್ರಿ ಸಂಭವಿಸಿದೆ. ಮೂಲತಃ ಕೊಡಗು ಜಿಲ್ಲೆ, ಕುಶಾಲ ನಗರ ನಿವಾಸಿ ಎಂ.ಎಂ.ಖಾದರ್ ಅವರ ಮಗ ಮೊಹಮದ್ ಶಂಶೀರ್ (32) ನೇಣಿಗೆ ಶರಣಾದವರು. ಮೊಬೈಲ್ ರಿಪೇರಿ ವೃತ್ತಿ ಮಾಡಿ ಕೊಂಡು ಮೈಸೂರಿನ ಸಾತಗಳ್ಳಿ ಮೊದಲನೇ ಹಂತದಲ್ಲಿ ವಾಸವಾಗಿದ್ದ ಶಂಶೀರ್, ಭಾನುವಾರ ರಾತ್ರಿ ಮನೆಯ ಕೊಠಡಿಯಲ್ಲಿ ಫ್ಯಾನಿಗೆ ನೇಣು ಹಾಕಿ ಕೊಂಡು ಸಾವಿಗೀಡಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ…










