ಮೈಸೂರು

ಇಬ್ಬರು ಸರಗಳ್ಳರ ಸೆರೆ: 4 ಪ್ರಕರಣಗಳಲ್ಲಿ ಭಾಗಿ
ಮೈಸೂರು

ಇಬ್ಬರು ಸರಗಳ್ಳರ ಸೆರೆ: 4 ಪ್ರಕರಣಗಳಲ್ಲಿ ಭಾಗಿ

July 15, 2020

ಮೈಸೂರು, ಜು. 14 (ಆರ್‍ಕೆ)- ಇಬ್ಬರು ಕುಖ್ಯಾತ ಸರಗಳ್ಳರನ್ನು ಬಂಧಿಸಿ ರುವ ಮೈಸೂರಿನ ಕುವೆಂಪುನಗರ ಠಾಣೆ ಪೊಲೀಸರು 8.35 ಲಕ್ಷ ರೂ. ಮೌಲ್ಯದ 185 ಗ್ರಾಂ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ್ದ ಮೂರು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಮಂಡ್ಯ ಜಿಲ್ಲೆ, ಶ್ರೀರಂಗಪಟ್ಟಣ ತಾಲೂಕು, ಹನುಮಂತನಗರ ನಿವಾಸಿ ದೇವರಾಜು ಅವರ ಮಗ ಹೆಚ್.ಡಿ. ಶಶಿಧರ (24) ಹಾಗೂ ಕಿರಂಗೂರಿನ ಲೇಟ್ ಕುಮಾರ್ ಅವರ ಮಗ ಕೆ. ಗುರು ಅಲಿಯಾಸ್ ಫ್ಲವರ್ (24) ಬಂಧಿತ ಸರಗಳ್ಳರು. ಕೃಷ್ಣರಾಜ ಉಪ ವಿಭಾಗದ…

ಯಾದವಗಿರಿ ರಸ್ತೆಯಲ್ಲಿವೆ ಅಪಾಯದ ಗುಂಡಿಗಳು
ಮೈಸೂರು

ಯಾದವಗಿರಿ ರಸ್ತೆಯಲ್ಲಿವೆ ಅಪಾಯದ ಗುಂಡಿಗಳು

July 15, 2020

ಮೈಸೂರು,ಜು.14 (ಆರ್‍ಕೆ)-ಮೈಸೂ ರಿನ ಯಾದವಗಿರಿ ಜಾಯ್ ಐಸ್ ಕ್ರೀಂ ಫ್ಯಾಕ್ಟರಿ ರಸ್ತೆ ಮತ್ತು ಸಂಕಲ್ಪ ಸೆಂಟ್ರಲ್ ಪಾರ್ಕ್ ಅಪಾರ್ಟ್‍ಮೆಂಟ್ ಜಂಕ್ಷನ್‍ನಲ್ಲಿ ಉಂಟಾಗಿ ರುವ ಗುಂಡಿಯು ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಶ್ರೀರಾಮಕೃಷ್ಣ ವಿದ್ಯಾಶಾಲಾ ಕಡೆಯಿಂದ ಬರುವವರು ಹಾಗೂ ಸಂಕಲ್ಪ ಸೆಂಟ್ರಲ್ ಪಾರ್ಕ್ ಅಪಾರ್ಟ್‍ಮೆಂಟ್ ರಸ್ತೆ ಯಿಂದ ಬಂದು ತಿರುಗುತ್ತಿದ್ದಂತೆಯೇ ದ್ವಿಚಕ್ರ ವಾಹನ ಸವಾರರಿಗೆ ಜಾಯ್ ಐಸ್ ಕ್ರೀಂ ಫ್ಯಾಕ್ಟರಿ ರಸ್ತೆಯ ಮಧ್ಯೆ ಇರುವ ಈ ಗುಂಡಿ ಯಿಂದ ತಪ್ಪಿಸಿಕೊಂಡು ಹೋಗಲು ಸಾಧ್ಯವೇ ಇಲ್ಲವೇನೋ ಎಂಬ ಅಪಾಯವಿದೆ. ಈಗಾಗಲೇ ಹಲವು…

ಎಂಎಂಕೆ-ಎಸ್‍ಡಿಎಂ ವಿದ್ಯಾರ್ಥಿಗಳಿಗೆ ಚಿನ್ನದ ಪದಕ, ನಗದು ಪುರಸ್ಕಾರ
ಮೈಸೂರು

ಎಂಎಂಕೆ-ಎಸ್‍ಡಿಎಂ ವಿದ್ಯಾರ್ಥಿಗಳಿಗೆ ಚಿನ್ನದ ಪದಕ, ನಗದು ಪುರಸ್ಕಾರ

July 15, 2020

ಮೈಸೂರು, ಜು. 14- ಮೈಸೂರಿನ ಎಂಎಂಕೆ ಮತ್ತು ಎಸ್‍ಡಿಎಂ ಮಹಿಳಾ ಮಹಾ ವಿದ್ಯಾಲಯದ ವಿದ್ಯಾರ್ಥಿಗಳು ಮೈಸೂರು ವಿಶ್ವವಿದ್ಯಾನಿಲಯದ ಪದವಿ ಪರೀಕ್ಷೆಯಲ್ಲಿ ಚಿನ್ನದ ಪದಕ ಮತ್ತು ನಗದು ಪುರಸ್ಕಾರ ಪಡೆದುಕೊಂಡಿದ್ದಾರೆ. ಕುಮಾರಿ ಮೃದುಲಾ ಘೋರೆ ಬಿ.ಎಸ್ಸಿ ಪದವಿ ವಿಭಾಗದಲ್ಲಿ 2 ಚಿನ್ನದ ಪದಕ, 2 ನಗದು ಪರಸ್ಕಾರ, ಶ್ರೀ ಮುಮ್ಮಡಿ ಕೃಷ್ಣರಾಜ ಒಡೆಯರ್ ಚಿನ್ನದ ಪದಕ, ಎಚ್.ರಾಮಾ ನುಜ ಅಯ್ಯಂಗಾರ್ ಚಿನ್ನದ ಪದಕ ಹಾಗೂ ದಿ.ಲೇಡಿ ಮಿಜ್ರಾಪ್ರೈಜ್ ನಗದು ಬಹುಮಾನ, ಪೆÇ್ರ.ಜೆ ಶಶಿಧರಪ್ರಸಾದ್ ಅಭಿನಂದನಾ ಸಮಿತಿ ನಗದು ಬಹುಮಾನ…

`ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ರೈತರು ಅಂಗೀಕರಿಸುವುದಿಲ್ಲ’
ಮೈಸೂರು

`ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ರೈತರು ಅಂಗೀಕರಿಸುವುದಿಲ್ಲ’

July 15, 2020

ಮೈಸೂರು, ಜು.14- ಭೂ ಸುಧಾರಣಾ ತಿದ್ದುಪಡಿ ಕಾಯ್ದೆಯ ಸುಗ್ರೀವಾಜ್ಞೆಗೆ ರಾಜ್ಯಪಾಲ ವಜುಬಾಯಿ ರೂಡಾಬಾಯಿ ವಾಲಾ ಅವರು ಅಂಗೀಕಾರ ಮುದ್ರೆ ಒತ್ತಿರಬಹುದು. ಆದರೆ, ಈ ಜನವಿರೋಧಿ ತಿದ್ದುಪಡಿ ಕಾಯ್ದೆಯನ್ನು ರೈತರು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘ-ಹಸಿರು ಸೇನೆಯ ಅಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದ್ದಾರೆ. ಬಿ.ಎಸ್.ಯಡಿಯೂರಪ್ಪ ಅವರ ಸರ್ಕಾರ ಈ ತಿದ್ದುಪಡಿ ಕಾಯ್ದೆ ಜಾರಿಗೊಳಿಸುವ ಮೂಲಕ ರೈತರ ಕೊರಳಿಗೆ ನೇಣು ಕುಣಿಕೆ ಹಾಕಿದೆ. ಮುಂದೆ ಈ ಕುಣಿಕೆ ಯಡಿಯೂರಪ್ಪನವರ ಸಿಎಂ ಕುರ್ಚಿಯ ಕಾಲಿಗೇ ತಗುಲಿ…

ಸಮಾಜ ಚಿಂತಕ ಮರಿದಂಡಯ್ಯ ಬುದ್ಧ ನಿಧನಕ್ಕೆ ವಿಚಾರವಾದಿ ಹೊರೆಯಾಲ ಸಂತಾಪ
ಮೈಸೂರು

ಸಮಾಜ ಚಿಂತಕ ಮರಿದಂಡಯ್ಯ ಬುದ್ಧ ನಿಧನಕ್ಕೆ ವಿಚಾರವಾದಿ ಹೊರೆಯಾಲ ಸಂತಾಪ

July 15, 2020

ಮೈಸೂರು, ಜು.14- ಸಾಮಾಜಿಕ ಚಿಂತಕ, ಹೋರಾಟಗಾರ ಮರಿದಂಡಯ್ಯ ಬುದ್ಧ ಅವರ ನಿಧನಕ್ಕೆ ವಿಚಾರವಾದಿ ಹೊರೆಯಾಲ ದೊರೆಸ್ವಾಮಿ ಸಂತಾಪ ಸೂಚಿಸಿದ್ದಾರೆ. ಪ್ರಗತಿಪರ ಚಿಂತಕರಾಗಿದ್ದ ಮರಿದಂಡಯ್ಯ ಮೈಸೂರಿನಲ್ಲಿ ಮಾತ್ರವಲ್ಲ, ಸುತ್ತಮುತ್ತಲಲ್ಲಿ ಎಲ್ಲೇ ಅನ್ಯಾಯದ ವಿರುದ್ಧ ಪ್ರತಿ ಭಟನೆ ನಡೆದರೂ ಅಲ್ಲಿ ಕಡ್ಡಾಯವಾಗಿ ಹಾಜರಿರುತ್ತಿದ್ದರು. ಜಾತಿ ಮತ ಭೇದವಿಲ್ಲದೆ ಎಲ್ಲಾ ಬಡವರ ಸಂಕಷ್ಟಗಳಿಗೆ ಸ್ಪಂದಿಸು ತ್ತಿದ್ದ ಮಾನವೀಯ ಹೃದಯವುಳ್ಳವರಾಗಿದ್ದರು. ಮೈಸೂರು ನಗರದ ಒಳಹೊರಗುಗಳನ್ನು ಚೆನ್ನಾಗಿ ತಿಳಿದುಕೊಂಡಿದ್ದ ಬುದ್ಧ ಸದಾ ಪುರೋಗಾಮಿಯಾಗಿ ಚಿಂತಿಸುತ್ತಿದ್ದರು. ಸಮಾಜದ ಒಳಿತಿಗೆ ಹಾರೈಸುತ್ತಿದ್ದರು. ಮೈಸೂರಿನ ಚಳುವಳಿಯ ಇತಿಹಾಸದಲ್ಲಿ ಅವರಿಗೊಂದು…

ಮೈಸೂರಿನ ಸಬರ್ಬನ್ ಸೇರಿ ಜಿಲ್ಲೆಯೆಲ್ಲೆಡೆ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣಗಳ ಅಂಗಡಿ, ಹೋಟೆಲ್‍ಗಳ ಬಂದ್
ಮೈಸೂರು

ಮೈಸೂರಿನ ಸಬರ್ಬನ್ ಸೇರಿ ಜಿಲ್ಲೆಯೆಲ್ಲೆಡೆ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣಗಳ ಅಂಗಡಿ, ಹೋಟೆಲ್‍ಗಳ ಬಂದ್

July 14, 2020

ಮೈಸೂರು, ಜು. 13(ಆರ್‍ಕೆ)- ವ್ಯಾಪಕವಾಗಿ ಹರ ಡುತ್ತಿರುವ ಕೊರೊನಾ ಜಾಡ್ಯದಿಂದ ಆತಂಕಗೊಂಡು ಪ್ರಯಾಣಿಕರ ಕೊರತೆಯಿಂದಾಗಿ ಶೇ.20ರಷ್ಟು ಕನಿಷ್ಠ ಬಾಡಿಗೆಯನ್ನು ಕಟ್ಟಿ ವ್ಯಾಪಾರ ವಹಿವಾಟು ಮಾಡಲು ಸಾಧ್ಯವಾಗದೇ ಮೈಸೂರು ನಗರದ ಸಬರ್ಬನ್ ಬಸ್ ಸ್ಟ್ಯಾಂಡ್ ಸೇರಿದಂತೆ ಜಿಲ್ಲೆಯ ಎಲ್ಲಾ ಕೆಎಸ್‍ಆರ್‍ಟಿಸಿ ಬಸ್ ಸ್ಟ್ಯಾಂಡ್‍ಗಳ ಅಂಗಡಿ-ಮುಂಗಟ್ಟು ಮತ್ತು ಹೋಟೆಲ್‍ಗಳನ್ನು ಇಂದಿನಿಂದ ಬಂದ್ ಮಾಡಲಾಗಿದೆ. ಕೋವಿಡ್-19 ಸಂಕಷ್ಟ ಪರಿಸ್ಥಿತಿಯಿಂದಾಗಿ ಪ್ರಯಾ ಣಿಕರ ಕೊರತೆ ಉಂಟಾಗಿರುವುದರಿಂದ ಕೇವಲ ಶೇ. 20ರಷ್ಟು ಬಾಡಿಗೆಯನ್ನು ಪಾವತಿಸುವಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಬಸ್ ನಿಲ್ದಾಣಗಳ…

ಸಿಎಂ ಪರಿಹಾರ ನಿಧಿಗೆ ಜೆಎಸ್‍ಎಸ್ ಪ್ರಸಾದ ನಿಲಯಗಳ ಹಿರಿಯ ವಿದ್ಯಾರ್ಥಿಗಳಿಂದ 2.50 ಲಕ್ಷ ರೂ.ಗಳ ದೇಣಿಗೆ
ಮೈಸೂರು

ಸಿಎಂ ಪರಿಹಾರ ನಿಧಿಗೆ ಜೆಎಸ್‍ಎಸ್ ಪ್ರಸಾದ ನಿಲಯಗಳ ಹಿರಿಯ ವಿದ್ಯಾರ್ಥಿಗಳಿಂದ 2.50 ಲಕ್ಷ ರೂ.ಗಳ ದೇಣಿಗೆ

July 14, 2020

ಮೈಸೂರು, ಜು. 13- ಮುಖ್ಯಮಂತ್ರಿ ಗಳ ಪರಿಹಾರ ನಿಧಿಗೆ ಜೆಎಸ್‍ಎಸ್ ಪ್ರಸಾದ ನಿಲಯಗಳ ಹಿರಿಯ ವಿದ್ಯಾರ್ಥಿಗಳ ಗೃಹ ನಿರ್ಮಾಣ ಸಹಕಾರ ಸಂಘದಿಂದ 2.50 ಲಕ್ಷ ರೂ.ಗಳ ದೇಣಿಗೆ ನೀಡಲಾಯಿತು. ಕೋವಿಡ್-19 ಸೋಂಕು ದೇಶ ಹಾಗೂ ರಾಜ್ಯದಲ್ಲಿ ವ್ಯಾಪಕವಾಗಿ ಹರಡುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮರೋ ಪಾದಿಯಲ್ಲಿ ಈ ರೋಗವನ್ನು ನಿಯಂತ್ರಿ ಸಲು ಎಲ್ಲಾ ರೀತಿಯ ತುರ್ತು ಕಾರ್ಯ ಗಳನ್ನು ಕೈಗೊಳ್ಳುತ್ತಿವೆ. ರಾಜ್ಯದ ಜನರ ಆರೋಗ್ಯ ರಕ್ಷಣೆ ಹಾಗೂ ಇತರ ಎಲ್ಲ ಕಾರ್ಯಗಳಿಗೆ ಅನುಕೂಲವಾಗಲೆಂದು ಜೆಎಸ್‍ಎಸ್ ಪ್ರಸಾದ…

ಹಲವರಿಂದ ಮೃಗಾಲಯದ ಪ್ರಾಣಿ, ಪಕ್ಷಿ ದತ್ತು ಸ್ವೀಕಾರ
ಮೈಸೂರು

ಹಲವರಿಂದ ಮೃಗಾಲಯದ ಪ್ರಾಣಿ, ಪಕ್ಷಿ ದತ್ತು ಸ್ವೀಕಾರ

July 14, 2020

ಮೈಸೂರು, ಜು.13- ಮೈಸೂರು ಮೃಗಾಲಯದ ಪ್ರಾಣಿಗಳ ದತ್ತು ಸ್ವೀಕಾರ ಯೋಜನೆ ಅಡಿಯಲ್ಲಿ ಅನೇಕ ಗಣ್ಯರು, ಸಾರ್ವ ಜನಿಕರು ಪ್ರಾಣಿ, ಪಕ್ಷಿಗಳಿಗೆ ನಿಗದಿ ಪಡಿಸಿರುವ ಶುಲ್ಕ ಪಾವತಿಸಿ ವರ್ಷದ ಅವಧಿಗೆ ದತ್ತು ಸ್ವೀಕಾರ ಮಾಡಿರುವ ಬಗ್ಗೆ ಚಾಮರಾಜೇಂದ್ರ ಮೃಗಾಲಯದ ಕಾರ್ಯನಿರ್ವಾ ಹಕ ನಿರ್ದೇಶಕರು ತಿಳಿಸಿದ್ದಾರೆ. ಬೆಂಗಳೂರಿನ ಡಾ.ನರೇಂದ್ರ ವಿ. ಎಂಬುವವರು 35 ಸಾವಿರ ರೂ. ಪಾವತಿಸಿ ಕಪ್ಪು ಚಿರತೆÀ, ಡಾ. ಮಾರ್ಜೋರಿ 20 ಸಾವಿರ ರೂ. ಪಾವತಿಸಿ ಇಂಡಿಯನ್ ಗೇ ವುಲ್ಫ್, ವಿಶ್ವನಾಥ್ ಎಸ್. 5 ಸಾವಿರ ರೂ….

ಕೋವಿಡ್ ನಡುವೆಯೂ ಪಾಲಿಕೆಗೆ 41 ಕೋಟಿ ರೂ. ಆಸ್ತಿ ತೆರಿಗೆ ಸಂದಾಯ
ಮೈಸೂರು

ಕೋವಿಡ್ ನಡುವೆಯೂ ಪಾಲಿಕೆಗೆ 41 ಕೋಟಿ ರೂ. ಆಸ್ತಿ ತೆರಿಗೆ ಸಂದಾಯ

July 14, 2020

ಮೈಸೂರು, ಜು. 13(ಆರ್‍ಕೆ)- ಕೋವಿಡ್-19 ಸಂಕಷ್ಟ ಪರಿಸ್ಥಿತಿಯಲ್ಲೂ ಮೈಸೂರು ಮಹಾನಗರ ಪಾಲಿಕೆಗೆ 41 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹವಾಗಿದೆ. ಕುಡಿಯುವ ನೀರು, ಸ್ವಚ್ಛತೆ, ಬೀದಿ ದೀಪ, ರಸ್ತೆ, ಚರಂಡಿ ನಿರ್ವಹಣೆಯಂತಹ ಮೂಲ ಸೌಕರ್ಯ ಒದಗಿಸಿ, ಮೈಸೂರು ನಗರ ನಿರ್ವಹಿಸಲು ಪಾಲಿಕೆಗೆ ಆಸ್ತಿ ತೆರಿಗೆ, ಉದ್ದಿಮೆ ರಹದಾರಿ ಶುಲ್ಕ, ನೀರಿನ ತೆರಿಗೆಯೇ ಪ್ರಮುಖ ಆರ್ಥಿಕ ಸಂಪ ನ್ಮೂಲವಾಗಿರುವುದರಿಂದ ಆದಾಯ ಕ್ರೋಢೀಕರಣವು ಪ್ರಮುಖ ಕರ್ತವ್ಯ ವಾಗಿದೆ. ಮೈಸೂರು ನಗರದಲ್ಲಿ 26,000 ಕಂದಾಯ ಆಸ್ತಿಗಳು ಸೇರಿ ಒಟ್ಟು 1,83,000 ಸ್ಥಿರಾಸ್ತಿಗಳಿದ್ದು,…

ಮೈಸೂರಲ್ಲಿ ಅಂಗನವಾಡಿ ನೌಕರರ ಪ್ರತಿಭಟನೆ
ಮೈಸೂರು

ಮೈಸೂರಲ್ಲಿ ಅಂಗನವಾಡಿ ನೌಕರರ ಪ್ರತಿಭಟನೆ

July 14, 2020

ಮೈಸೂರು, ಜು.13(ಆರ್‍ಕೆಬಿ)- ಜಿಲ್ಲೆ ಯಲ್ಲಿ ಕೋವಿಡ್-19 ವಾರಿಯರ್ಸ್‍ಗಳಾಗಿ ಕೆಲಸಮಾಡಿ ಒತ್ತಡಕ್ಕೆ ಒಳಗಾಗಿ ಮರಣ ಹೊಂದಿದ ನಂಜನಗೂಡು ತಾಲೂಕಿನ ಅಂಗನವಾಡಿ ಕಾರ್ಯಕರ್ತೆಯರಾದ ಕೆಂಪ ದೇವಮ್ಮ, ಚಾಂದು, ಪಿರಿಯಾಪಟ್ಟಣದ ಸರಸ್ವತಿ ಅವರಿಗೆ ಹೆಚ್ಚಿನ ಪರಿಹಾರ ನೀಡ ಬೇಕು. ನಿವೃತ್ತಿ ಸೌಲಭ್ಯದ ಪೂರ್ಣ ಹಣ ಕೊಡಿಸಬೇಕು. ಅನುಕಂಪದ ಆಧಾರದಲ್ಲಿ ಕುಟುಂಬದ ಸದಸ್ಯರಿಗೆ ಕೆಲಸ ಕೊಡ ಬೇಕು ಎಂಬಿತ್ಯಾದಿ ಬೇಡಿಕೆಗಳ ಈಡೇರಿ ಕೆಗೆ ಆಗ್ರಹಿಸಿ ಅಂಗನವಾಡಿ ನೌಕರರು ಸೋಮವಾರ ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ಮನವಿ…

1 489 490 491 492 493 1,611
Translate »