ಮೈಸೂರು

ಪರಿವಾರ, ತಳವಾರ ಸಮುದಾಯಕ್ಕೆ ಇನ್ನೂ ಸಿಗದ ಪರಿಶಿಷ್ಟ ವರ್ಗದ ಸ್ಥಾನಮಾನ
ಮೈಸೂರು

ಪರಿವಾರ, ತಳವಾರ ಸಮುದಾಯಕ್ಕೆ ಇನ್ನೂ ಸಿಗದ ಪರಿಶಿಷ್ಟ ವರ್ಗದ ಸ್ಥಾನಮಾನ

July 14, 2020

ಮೈಸೂರು, ಜು.13(ಪಿಎಂ)- ಪರಿವಾರ ಮತ್ತು ತಳವಾರ ಪದಗಳನ್ನು ಪರಿಶಿಷ್ಟ ವರ್ಗದ ಪಟ್ಟಿಗೆ ಸೇರಿಸಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿ ದ್ದರೂ ರಾಜ್ಯದಲ್ಲಿ ಅಧಿಕಾರಿಗಳು ತಡೆಯೊಡ್ಡುವ ಮೂಲಕ ಗೊಂದಲ ಸೃಷ್ಟಿಸಿದ್ದು, ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಪ್ರಯತ್ನ ನಡೆಯುತ್ತಿರುವ ಅನುಮಾನವಿದೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮ ವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿವಾರ ಮತ್ತು ತಳವಾರ ಸಮುದಾಯಗಳನ್ನು ಪರಿ ಶಿಷ್ಟ ವರ್ಗಕ್ಕೆ ಸೇರ್ಪಡೆಗೊಳಿಸಿ ಅವರಿಗೆ ನ್ಯಾಯ ದೊರಕಿಸಿಕೊಡುವುದು ಮುಖ್ಯಮಂತ್ರಿ ಬಿ.ಎಸ್.ಯಡಿ…

ಕೋವಿಡ್ ನಿಭಾಯಿಸುವಲ್ಲಿ ಸರ್ಕಾರ ವಿಫಲ; ಜನರಲ್ಲಿ ಆತಂಕ, ಗೊಂದಲ: ಡಿಕೆಶಿ
ಮೈಸೂರು

ಕೋವಿಡ್ ನಿಭಾಯಿಸುವಲ್ಲಿ ಸರ್ಕಾರ ವಿಫಲ; ಜನರಲ್ಲಿ ಆತಂಕ, ಗೊಂದಲ: ಡಿಕೆಶಿ

July 14, 2020

ಬೆಂಗಳೂರು, ಜು.13 (ಕೆಎಂಶಿ)- ಸರ್ಕಾರ ಕೋವಿಡ್ ಪರಿಸ್ಥಿತಿ ನಿಭಾಯಿ ಸಲು ವಿಫಲವಾಗಿರುವುದರಿಂದ ಜನರಲ್ಲಿ ಆತಂಕ ಹಾಗೂ ಗೊಂದಲ ಹೆಚ್ಚಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವ ಕುಮಾರ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆತಂಕದಿಂದ ಜನರು ಬೆಂಗಳೂರು ತೊರೆದು ಹಳ್ಳಿಗಳತ್ತ ಸಾಗುತ್ತಿದ್ದಾರೆ. ಸರ್ಕಾರ ಮತ್ತೆ ಲಾಕ್‍ಡೌನ್ ಮಾಡುತ್ತಿರುವ ವಿಚಾರದ ಬಗ್ಗೆ ನಾವು ಮಾತನಾಡುವುದಿಲ್ಲ. ಅವರ ಆಡಳಿತ ಕಾರ್ಯದಲ್ಲಿ ನಾವು ಹಸ್ತಕ್ಷೇಪ ಮಾಡುವುದಿಲ್ಲ. ಈ ಕೋವಿಡ್ ಪಿಡುಗನ್ನು ಪಕ್ಷಾತೀತವಾಗಿ ಎದುರಿಸಬೇಕು ಎಂದು ನಾವು ಹೇಳುತ್ತಲೇ ಬಂದಿದ್ದೇವೆ. ಆದರೆ ಬಿಜೆಪಿ ಈ…

ಬಳಸಿದ ಪಿಪಿಇ ಕಿಟ್ ಪಿಕೆಟಿಬಿ ಆಸ್ಪತ್ರೆ ಬಳಿ ಪತ್ತೆ ಸಾರ್ವಜನಿಕರಲ್ಲಿ ಆತಂಕ
ಮೈಸೂರು

ಬಳಸಿದ ಪಿಪಿಇ ಕಿಟ್ ಪಿಕೆಟಿಬಿ ಆಸ್ಪತ್ರೆ ಬಳಿ ಪತ್ತೆ ಸಾರ್ವಜನಿಕರಲ್ಲಿ ಆತಂಕ

July 14, 2020

ಮೈಸೂರು, ಜು. 13(ಆರ್‍ಕೆ)- ಬಳಸಿದ ಪಿಪಿಇ (ಪರ್ಸನಲ್ ಪ್ರೊಟೆಕ್ಷನ್ ಇಕ್ವಿಪ್‍ಮೆಂಟ್) ಕಿಟ್‍ಗಳನ್ನು ಮೈಸೂರಿನ ಪಿಕೆಟಿಬಿ ಆಸ್ಪತ್ರೆ ಕಾಂಪೌಂಡ್ ಮುಂದೆ ಕೆಆರ್‍ಎಸ್ ರಸ್ತೆ ಬದಿ ಸೋಮವಾರ ಮಧ್ಯಾಹ್ನ ಬಿಸಾಡಲಾಗಿತ್ತು. ಇಎಸ್‍ಐ ಆಸ್ಪತ್ರೆ ಮತ್ತು ಪಿಕೆ ಸ್ಯಾನಿಟೋರಿಯಂ ಸರ್ಕಲ್ ನಡುವೆ ಕೆಆರ್‍ಎಸ್ ರಸ್ತೆಬದಿ ಬಳಸಿ ಬಿದ್ದಿದ್ದ ಈ ಒಂದು ಜೊತೆ ಪಿಪಿಇ ಕಿಟ್‍ಗಳ ಕಂಡು ಸಾರ್ವಜನಿಕರು ಆತಂಕಗೊಂಡಿದ್ದರು. ಸಂಜೆಯಾದರೂ ಆ ಬಗ್ಗೆ ಯಾರೂ ಗಮನಹರಿಸದಿದ್ದಾಗ ಬೃಂದಾವನ ಬಡಾವಣೆ ನಿವಾಸಿ ಬಿ.ಕೆ. ನಾಗೇಂದ್ರ, ಪಾಲಿಕೆ ವಲಯ ಕಚೇರಿ 4ರ ವಲಯಾಧಿಕಾರಿ ಪ್ರಿಯದರ್ಶಿನಿ…

ಮೈಸೂರಿನ 6 ಕೇಂದ್ರಗಳಲ್ಲಿ ಎಸ್‍ಎಸ್‍ಎಲ್‍ಸಿ ಪತ್ರಿಕೆ ಮೌಲ್ಯಮಾಪನ ಕಾರ್ಯ ಆರಂಭ
ಮೈಸೂರು

ಮೈಸೂರಿನ 6 ಕೇಂದ್ರಗಳಲ್ಲಿ ಎಸ್‍ಎಸ್‍ಎಲ್‍ಸಿ ಪತ್ರಿಕೆ ಮೌಲ್ಯಮಾಪನ ಕಾರ್ಯ ಆರಂಭ

July 14, 2020

ಮೈಸೂರು, ಜು.13(ಪಿಎಂ)- ಮೈಸೂರು ನಗರದ 6 ಕೇಂದ್ರಗಳಲ್ಲಿ ಎಸ್‍ಎಸ್ ಎಲ್‍ಸಿ ಪರೀಕ್ಷಾ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ಸೋಮವಾರ ಆರಂಭವಾಗಿದ್ದು, ಮೊದಲ ದಿನವಾದ ಸೋಮವಾರ ಶೇ.90ರಷ್ಟು ಮೌಲ್ಯಮಾಪ ಕರು ಕರ್ತವ್ಯ ನಿರ್ವಹಿಸಿದರು. ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಶೇ.10ರಷ್ಟು ಮೌಲ್ಯಮಾಪಕರು ಮೊದಲ ದಿನ ಮೌಲ್ಯಮಾಪನದಿಂದ ದೂರ ಉಳಿ ದರು. ಕೆಮ್ಮು, ನೆಗಡಿ, ಜ್ವರ ಸೇರಿದಂತೆ ಇನ್ನಿತರ ಅನಾರೋಗ್ಯ ಲಕ್ಷಣ ಹೊಂದಿ ರುವವರು ಸ್ವಯಂ ಪ್ರೇರಿತವಾಗಿ ಮೌಲ್ಯ ಮಾಪನ ಕಾರ್ಯದಿಂದ ದೂರ ಉಳಿ ಯಲು ಅವಕಾಶ ಕೋರಿದ ಹಿನ್ನೆಲೆಯಲ್ಲಿ ಅವರಿಗೆ…

ಮೈಸೂರಲ್ಲಿ ಭಾನುವಾರದ 2ನೇ ಲಾಕ್‍ಡೌನ್ ಪೂರ್ಣ ಯಶಸ್ವಿ
ಮೈಸೂರು

ಮೈಸೂರಲ್ಲಿ ಭಾನುವಾರದ 2ನೇ ಲಾಕ್‍ಡೌನ್ ಪೂರ್ಣ ಯಶಸ್ವಿ

July 13, 2020

ಮೈಸೂರು, ಜು.12 (ಆರ್‍ಕೆಬಿ)- ಭಾನುವಾರದ ಲಾಕ್ ಡೌನ್ ಮೈಸೂರಿನಲ್ಲಿ ಯಶಸ್ವಿಯಾಗಿದ್ದು, ಜನರು ಮನೆಯಿಂದ ಹೊರ ಬರದೆ ಸ್ವಯಂ ಪ್ರೇರಿತರಾಗಿ ಲಾಕ್‍ಡೌನ್ ಅಳವಡಿಸಿ ಕೊಂಡು, ಜಿಲ್ಲಾಡಳಿತಕ್ಕೆ ಸಹಕಾರ ನೀಡಿದರು. ಅಲ್ಲೊಂದು ಇಲ್ಲೊಂದು ವಾಹನಗಳು ಓಡಾಡುತ್ತಿದ್ದುದು ಬಿಟ್ಟರೆ ಮೈಸೂ ರಿನ ಎಲ್ಲಾ ರಸ್ತೆಗಳು ಖಾಲಿ ಇದ್ದವು. ರಾಜ್ಯದಲ್ಲಿ ನಿಯಂತ್ರಣಕ್ಕೆ ಸಿಗದಂತಾಗಿರುವ ಕೊರೊನಾ ಸೋಂಕು ಮತ್ತು ಸಾವುಗಳ ಸಂಖ್ಯೆ ಯಿಂದ ಸರ್ಕಾರ ನಗರಗಳಲ್ಲಿ ಭಾನುವಾರದ ಪೂರ್ಣ ಪ್ರಮಾಣದ ಲಾಕ್‍ಡೌನ್ ಘೋಷಿಸಿದೆ. ಮೈಸೂರಿನಲ್ಲಿ ಲಾಕ್‍ಡೌನ್‍ನ 2ನೇ ಭಾನುವಾರ ವಾಗಿದ್ದು, ವ್ಯಾಪಾರ ವಹಿವಾಟು ಪೂರ್ಣ…

ಭಾನುವಾರ ಮೈಸೂರಲ್ಲಿ ಮೂವರು, ಹಾಸನ, ಕೊಡಗಲ್ಲಿ ಇಬ್ಬರು, ಚಾ.ನಗರದಲ್ಲಿ ಒಬ್ಬರು ಕೊರೊನಾ ಸೋಂಕಿನಿಂದ ಸಾವು ಮೈಸೂರಲ್ಲಿ 42 ಪ್ರಕರಣ ಪತ್ತೆ
ಮೈಸೂರು

ಭಾನುವಾರ ಮೈಸೂರಲ್ಲಿ ಮೂವರು, ಹಾಸನ, ಕೊಡಗಲ್ಲಿ ಇಬ್ಬರು, ಚಾ.ನಗರದಲ್ಲಿ ಒಬ್ಬರು ಕೊರೊನಾ ಸೋಂಕಿನಿಂದ ಸಾವು ಮೈಸೂರಲ್ಲಿ 42 ಪ್ರಕರಣ ಪತ್ತೆ

July 13, 2020

ಮೈಸೂರು, ಜು. 12- ಕೊರೊನಾ ಸಾವಿನ ಸಂಖ್ಯೆ ಭಾನುವಾರವೂ ಮುಂದುವರೆದಿದ್ದು, ಇಂದು ಮೈಸೂರಿನಲ್ಲಿ ಮೂವರು, ಹಾಸನ ಮತ್ತು ಕೊಡಗಲ್ಲಿ ತಲಾ ಇಬ್ಬರು ಹಾಗೂ ಚಾಮರಾಜನಗರ ಜಿಲ್ಲೆಯ ಕೊಳ್ಳೇ ಗಾಲದ ಓರ್ವರು ಮೃತಪಟ್ಟಿದ್ದಾರೆ. ಮೈಸೂರಿನಲ್ಲಿ ಭಾನುವಾರ 42 ಮಂದಿಗೆ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ 815ಕ್ಕೆ ಏರಿಕೆಯಾಗಿದೆ. 43 ಮಂದಿ ಗುಣಮುಖರಾಗಿದ್ದು, ಈವರೆಗೆ 428 ಮಂದಿ ಗುಣಮುಖ ರಾದಂತಾಗಿದೆ. ಇಂದು 68 ವರ್ಷ ವಯಸ್ಸಿನ ಉದಯಗಿರಿ ನಿವಾಸಿ, ಮೈಸೂರಿನ ಆಸ್ಪತ್ರೆಗೆ ದಾಖಲಾಗಿದ್ದ ಮಂಡ್ಯ ಜಿಲ್ಲೆ ಕಿರುಗಾವಲು ಗ್ರಾಮದ 69…

ಭಾನುವಾರ ರಾಜ್ಯದಲ್ಲಿ 2,627 ಮಂದಿಗೆ ಕೊರೊನಾ, ಸೋಂಕಿತರ ಸಂಖ್ಯೆ 38,843
ಮೈಸೂರು

ಭಾನುವಾರ ರಾಜ್ಯದಲ್ಲಿ 2,627 ಮಂದಿಗೆ ಕೊರೊನಾ, ಸೋಂಕಿತರ ಸಂಖ್ಯೆ 38,843

July 13, 2020

ಬೆಂಗಳೂರು, ಜು.12-ರಾಜ್ಯದಲ್ಲಿ ಭಾನುವಾರ 2627 ಕೊರೊನಾ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಇದರೊಂದಿಗೆ 38,843 ಮಂದಿಗೆ ಸೋಂಕು ತಗು ಲಿದಂತಾಗಿದೆ. ಇಂದು ಸೋಂಕಿನಿಂದ 71 ಮಂದಿ ಮೃತಪಟ್ಟಿದ್ದು, ಮೃತರ ಸಂಖ್ಯೆ 648ಕ್ಕೆ ಏರಿಕೆ ಯಾಗಿದೆ. ರಾಜ್ಯದಲ್ಲಿ ಇಂದು 693 ಮಂದಿ ಗುಣಮುಖರಾಗಿದ್ದು, ಈವರೆಗೆ 15,409 ಮಂದಿ ಗುಣಮುಖರಾದಂತಾಗಿದೆ. 22,746 ಸಕ್ರಿಯ ಸೋಂಕಿತರ ಪೈಕಿ 532 ಮಂದಿ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಅವರೆಲ್ಲರನ್ನೂ ತುರ್ತು ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಬೆಂಗಳೂರಿನಲ್ಲಿ 1,525 ಮಂದಿಗೆ ಭಾನುವಾರ ಸೋಂಕು ತಗುಲಿದ್ದು, ರಾಜಧಾನಿಯಲ್ಲಿ…

ಇಂದಿನಿಂದ ಆಶಾ ಕಾರ್ಯಕರ್ತೆಯರ ಹೋರಾಟ `ತೀವ್ರ’
ಮೈಸೂರು

ಇಂದಿನಿಂದ ಆಶಾ ಕಾರ್ಯಕರ್ತೆಯರ ಹೋರಾಟ `ತೀವ್ರ’

July 13, 2020

ಮೈಸೂರು, ಜು.12(ಪಿಎಂ)- ಮಾಸಿಕ ಕನಿಷ್ಠ 12 ಸಾವಿರ ರೂ. ಗೌರವಧನ ಹೆಚ್ಚಳಕ್ಕೆ ಹಾಗೂ ಸಮರ್ಪಕ ಆರೋಗ್ಯ ರಕ್ಷಣಾ ಸಾಮಗ್ರಿ ನೀಡಲು ಆಗ್ರಹಿಸಿ ಆಶಾ ಕಾರ್ಯಕರ್ತೆಯರು ನಡೆಸಿರುವ ಹೋರಾಟವನ್ನು ನಾಳೆಯಿಂದ (ಜು.13) ಮತ್ತಷ್ಟು ತೀವ್ರಗೊಳಿಸಲು ನಿರ್ಧರಿಸಿದ್ದಾರೆ. ಜು.10ರಿಂದ ರಾಜ್ಯಾದ್ಯಂತ ಸೇವೆ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿವರೆಗೆ ಆಶಾ ಕಾರ್ಯಕರ್ತೆಯರು ಮುಷ್ಕರ ನಡೆಸುತ್ತಿದ್ದಾರೆ. ಜು.13ರಿಂದ 17ರವರೆಗೆ ವಿವಿಧ ರೀತಿಯಲ್ಲಿ ಹೋರಾಟ ನಡೆಸಲು ಕರ್ನಾ ಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ (ಎಐಯುಟಿಯುಸಿ) ಮುಂದಾ ಗಿದೆ. ಈ ಸಂಬಂಧ ಪ್ರಕಟಣೆ ಹೊರಡಿಸಿರುವ ಸಂಘ,…

ರಷ್ಯಾದಲ್ಲಿ ಕೋವಿಡ್-19 ಲಸಿಕೆ ಸಿದ್ಧ, ಕ್ಲಿನಿಕಲ್ ಪ್ರಯೋಗ ಪೂರ್ಣ ಯಶಸ್ವಿ
ಮೈಸೂರು

ರಷ್ಯಾದಲ್ಲಿ ಕೋವಿಡ್-19 ಲಸಿಕೆ ಸಿದ್ಧ, ಕ್ಲಿನಿಕಲ್ ಪ್ರಯೋಗ ಪೂರ್ಣ ಯಶಸ್ವಿ

July 13, 2020

ಮಾಸ್ಕೋ, ಜು.12-ಜಗತ್ತಿನ ಹಲವು ರಾಷ್ಟ್ರಗಳು ಮಾರಕ ಕೋವಿಡ್-19 ಸೋಂಕಿನ ವಿರುದ್ಧ ಹೋರಾಡುವ ಲಸಿಕೆ ಕಂಡುಹಿಡಿಯುತ್ತಿವೆ. ಕ್ಲಿನಿಕಲ್ ಪ್ರಯೋಗ ವನ್ನೂ ಹಂತಹಂತವಾಗಿ ನಡೆಸುತ್ತಿವೆ. ಈಗಾಗಲೇ ಕೆಲವು ದೇಶಗಳು ತಾವು ಕೊರೊನಾಕ್ಕೆ ಲಸಿಕೆ ಕಂಡುಹಿಡಿದಿದ್ದು, ಅದು ಪ್ರಯೋಗದ ಹಂತದಲ್ಲಿದೆ ಎಂದು ಹೇಳಿಕೊಂಡಿವೆ. ಇದೀಗ ರಷ್ಯಾ ಒಂದು ಹೇಳಿಕೆ ಬಿಡುಗಡೆ ಮಾಡಿದ್ದು, ನಾವು ಲಸಿಕೆ ಸಂಶೋಧನೆ ಮಾಡಿದ್ದೇವೆ. ಅದರ ಕ್ಲಿನಿಕಲ್ ಪ್ರಯೋಗದ ಎಲ್ಲ ಹಂತಗಳೂ ಪೂರ್ಣಗೊಂಡಿವೆ ಎಂದು ತಿಳಿಸಿದೆ. ಜಗತ್ತಿನ ಮೊದಲ ಕೋವಿಡ್-19 ಲಸಿಕೆ ಯನ್ನು ರಷ್ಯಾದ ಗಮಾಲಿ ಇನ್ಸ್ಟಿಟ್ಯೂಟ್ ಆಫ್…

ಮೈಸೂರಿನ ಆರು ಕೇಂದ್ರಗಳಲ್ಲಿ ಇಂದಿನಿಂದ ಎಸ್‍ಎಸ್‍ಎಲ್‍ಸಿ ಉತ್ತರ ಪತ್ರಿಕೆ ಮೌಲ್ಯಮಾಪನ
ಮೈಸೂರು

ಮೈಸೂರಿನ ಆರು ಕೇಂದ್ರಗಳಲ್ಲಿ ಇಂದಿನಿಂದ ಎಸ್‍ಎಸ್‍ಎಲ್‍ಸಿ ಉತ್ತರ ಪತ್ರಿಕೆ ಮೌಲ್ಯಮಾಪನ

July 13, 2020

ಮೈಸೂರು, ಜು.12(ಪಿಎಂ)- ಎಸ್‍ಎಸ್‍ಎಲ್‍ಸಿ ಪರೀಕ್ಷೆ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ಮೈಸೂರು ನಗರದ 6 ಕೇಂದ್ರ ಗಳಲ್ಲಿ ಜು.13ರ ಸೋಮವಾರ ಬೆಳಗ್ಗೆ 9.30ಕ್ಕೆ ಆರಂಭವಾಗಲಿದೆ. ಕುವೆಂಪುನಗರದ ಜ್ಞಾನಗಂಗಾ ಪ್ರೌಢಶಾಲೆ, ಜಯಲಕ್ಷ್ಮೀಪುರಂನ ಚಿನ್ಮಯ ಪ್ರೌಢಶಾಲೆ, ನಾರಾಯಣಶಾಸ್ತ್ರಿ ರಸ್ತೆಯ ಸದ್ವಿದ್ಯಾ ಪ್ರೌಢಶಾಲೆ, ಸರಸ್ವತಿಪುರಂನ ವಿಜಯವಿಠ್ಠಲ ಪ್ರೌಢಶಾಲೆ, ವಿವಿ ಮೊಹಲ್ಲಾ ನಿರ್ಮಲ ಪ್ರೌಢಶಾಲೆ, ಎನ್‍ಆರ್ ಮೊಹಲ್ಲಾದ ಸೇಂಟ್ ಫಿಲೋಮಿನಾ ಪ್ರೌಢ ಶಾಲೆಯಲ್ಲಿ ಮೌಲ್ಯಮಾಪನ ನಡೆಯಲಿದೆ. ಕನ್ನಡ, ಇಂಗ್ಲಿಷ್, ಹಿಂದಿ ಭಾಷೆ ಮತ್ತು ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ವಿಷಯಗಳ ಉತ್ತರ ಪತ್ರಿಕೆಗಳ…

1 490 491 492 493 494 1,611
Translate »