ಮೈಸೂರು

ಗಗನಚುಂಬಿಯಲ್ಲಿ ಕಗ್ಗತ್ತಲು…!
ಮೈಸೂರು

ಗಗನಚುಂಬಿಯಲ್ಲಿ ಕಗ್ಗತ್ತಲು…!

June 11, 2020

ಮೈಸೂರು, ಜೂ.10(ಎಂಕೆ)- ಕಗ್ಗತ್ತಲಲ್ಲಿ ಗಗನಚುಂಬಿ… ತಿರುಗಾಡಲು ಭಯಪಡು ತ್ತಿರುವ ಸ್ಥಳೀಯ ನಿವಾಸಿಗಳು… ವಾರಗಳೇ ಕಳೆ ದರು ಬೆಳಗದ ಬೀದಿ ದೀಪಗಳು… ಮೈಸೂರಿನ ಕುವೆಂಪುನಗರದ ಗಗನಚುಂಬಿ ಜೋಡಿ ರಸ್ತೆಯಲ್ಲಿ ಕಗ್ಗತ್ತಲು ಆವರಿಸಿದ್ದು, ರಾತ್ರಿವೇಳೆ ವಾಹನ ಸವಾ ರರು, ಪಾದಚಾರಿಗಳು ತಿರುಗಾಡುವುದೇ ಕಷ್ಟವಾಗಿದೆ. ಸಂಪೂರ್ಣ ರಸ್ತೆಯಲ್ಲಿ ಕತ್ತಲು ಆವರಿಸಿದ್ದು, ಭಯದ ವಾತಾವರಣ ನಿರ್ಮಾಣವಾಗಿದೆ. ನಗರದ ಪ್ರಮುಖ ಬಡಾವಣೆಯಲ್ಲಿಯೇ ಕತ್ತಲು ಆವರಿಸಿದ್ದು, ಇತರೆ ಬಡಾವಣೆಗಳ ಸ್ಥಿತಿಯೇನು? ಗಗನಚುಂಬಿ ಜೋಡಿರಸ್ತೆ ಬದಿಯಲ್ಲಿ ಸ್ಟ್ರೀಟ್ ಲೈಟ್‍ಗಳನ್ನು ಅಳವಡಿ ಸಿದ್ದರೂ ಆನ್ ಮಾಡದೆ ನಗರಪಾಲಿಕೆ ಸಿಬ್ಬಂದಿ…

ನಾಲ್ವಡಿ ಜಯಂತಿ: 10 ಸಾಧಕರಿಗೆ ಪ್ರಶಸ್ತಿ ನೀಡಲು ಜಿಲ್ಲಾಡಳಿತ ನಿರ್ಧಾರ
ಮೈಸೂರು

ನಾಲ್ವಡಿ ಜಯಂತಿ: 10 ಸಾಧಕರಿಗೆ ಪ್ರಶಸ್ತಿ ನೀಡಲು ಜಿಲ್ಲಾಡಳಿತ ನಿರ್ಧಾರ

June 11, 2020

ಮೈಸೂರು, ಜೂ.10(ಎಸ್‍ಪಿಎನ್)-ರಾಜರ್ಷಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜನ್ಮದಿನದಂದು ಪ್ರತಿ ವರ್ಷ ವಿವಿಧ ಕ್ಷೇತ್ರದ 10 ಮಂದಿ ಸಾಧಕರನ್ನು ಗುರು ತಿಸಿ ಪ್ರಶಸ್ತಿ ನೀಡುವುದಾಗಿ ಮೈಸೂರು ಜಿಲ್ಲಾಡಳಿತ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಸಾಧಕರನ್ನು ಗುರುತಿಸಲು ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಈ ಸಮಿತಿಯಲ್ಲಿ ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್, ಕರ್ನಾಟಕ ಜನಪದ ಅಕಾಡೆಮಿ ಮಾಜಿ ಅಧ್ಯಕ್ಷ ಹಿ.ಶಿ.ರಾಮಚಂದ್ರೇಗೌಡ, ಹಿರಿಯ ಸಾಹಿತಿಗಳಾದ ಪ್ರೊ.ಸಿ.ನಾಗಣ್ಣ, ಎನ್.ಎಸ್.ತಾರಾನಾಥ್ ಅವರನ್ನು ಆಯ್ಕೆ ಸಮಿತಿಗೆ ನೇಮಕ ಮಾಡಲಾಗಿದೆ. ಕನ್ನಡ…

ಚಲಿಸುತ್ತಿದ್ದ ಕಾರಿಗೆ ಬೆಂಕಿ; ಸ್ವಲ್ಪದರಲ್ಲೇ ಪಾರಾದ ಕುಟುಂಬ
ಮೈಸೂರು

ಚಲಿಸುತ್ತಿದ್ದ ಕಾರಿಗೆ ಬೆಂಕಿ; ಸ್ವಲ್ಪದರಲ್ಲೇ ಪಾರಾದ ಕುಟುಂಬ

June 11, 2020

ಮೈಸೂರು,ಜೂ.10(ವೈಡಿಎಸ್)- ಚಲಿಸುತ್ತಿದ್ದ ಕಾರಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಕರಕಲಾಗಿರುವ ಘಟನೆ ಮೈಸೂರು-ತಿ.ನರಸೀಪುರ ರಸ್ತೆಯ ಚಿಕ್ಕಹಳ್ಳಿ ಬಳಿ ಬುಧವಾರ ಸಂಜೆ ನಡೆದಿದೆ. ಮೈಸೂರಿನ ಪೊಲೀಸ್ ಬಡಾವಣೆ ನಿವಾಸಿ ಬಸಪ್ಪ ಎಂಬವರು ಕುಟುಂಬದೊಂದಿಗೆ ಮಾರುತಿ ಝೆನ್ (ಕೆಎ03ಎಂಜಿ8772) ಕಾರಿ ನಲ್ಲಿ ಚಾಮರಾಜನಗರಕ್ಕೆ ಹೋಗಿ ವಾಪಸ್ ಬರುತ್ತಿದ್ದಾಗ ಬುಧವಾರ ಸಂಜೆ 7.30ರ ವೇಳೆ ಚಿಕ್ಕಹಳ್ಳಿ ಬಳಿ ಇಂಜಿನ್‍ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದರಿಂದ ಎಚ್ಚೆತ್ತ ಬಸಪ್ಪ ಕಾರನ್ನು ತಕ್ಷಣ ನಿಲ್ಲಿಸಿ ಕುಟುಂಬದವರು ಕಾರಿನಿಂದ ಇಳಿಸಿದ್ದಾರೆ. ಬಳಿಕ ಬೆಂಕಿ ಹೊತ್ತಿಕೊಂಡು ಕಾರನ್ನು…

ನಕಲಿ ಅಂಕಪಟ್ಟಿ ಸಲ್ಲಿಸಿ ಉದ್ಯೋಗ: 11 ನೌಕರರ ವಜಾಗೊಳಿಸಿದ ಹೈಕೋರ್ಟ್
ಮೈಸೂರು

ನಕಲಿ ಅಂಕಪಟ್ಟಿ ಸಲ್ಲಿಸಿ ಉದ್ಯೋಗ: 11 ನೌಕರರ ವಜಾಗೊಳಿಸಿದ ಹೈಕೋರ್ಟ್

June 11, 2020

ಬೆಂಗಳೂರು: ನಕಲಿ ಅಂಕಪಟ್ಟಿ ಸಲ್ಲಿಸಿ ಬೀದರ್ ನ್ಯಾಯಾಲಯದಲ್ಲಿ ಉದ್ಯೋಗ ಪಡೆದಿದ್ದ 11 ಡಿ ಗ್ರೂಪ್ ನೌಕರರನ್ನು ವಜಾಗೊಳಿಸಿದ್ದ ಜಿಲ್ಲಾ ಪ್ರಧಾನ ನ್ಯಾಯಾ ಧೀಶರ ಆದೇಶವನ್ನು ಹೈಕೋರ್ಟ್ ಬುಧವಾರ ಎತ್ತಿಹಿಡಿದಿದೆ. ವಜಾಗೊಂಡ ನೌಕರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಿ.ನರೇಂದರ್ ಹಾಗೂ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ. ಈ ನೌಕರರು 7ನೇ ತರಗತಿಯ ನಕಲಿ ಅಂಕಪಟ್ಟಿ ನೀಡಿ ಕೆಲಸಕ್ಕೆ ಸೇರಿರುವುದು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಂಕಪಟ್ಟಿ ಪರಿಶೀಲನೆ ವೇಳೆ ದೃಢಪಟ್ಟಿತ್ತು….

ಕಂಡ ಕಂಡಲ್ಲಿ ತ್ಯಾಜ್ಯ ವಿಲೇವಾರಿ ಪಿಡಬ್ಲ್ಯೂಡಿ ಗುತ್ತಿಗೆದಾರನಿಗೆ 10 ಸಾವಿರ ದಂಡ
ಮೈಸೂರು

ಕಂಡ ಕಂಡಲ್ಲಿ ತ್ಯಾಜ್ಯ ವಿಲೇವಾರಿ ಪಿಡಬ್ಲ್ಯೂಡಿ ಗುತ್ತಿಗೆದಾರನಿಗೆ 10 ಸಾವಿರ ದಂಡ

June 9, 2020

ಮೈಸೂರು, ಜೂ.8(ಎಸ್‍ಬಿಡಿ)- ಸರ್ಕಾರಿ ಜಾಗದಲ್ಲಿ ಕಟ್ಟಡ ತ್ಯಾಜ್ಯ ಹಾಕಿದ ಪಿಡಬ್ಲ್ಯೂಡಿ ಗುತ್ತಿಗೆದಾರನಿಗೆ ಮೈಸೂರು ನಗರ ಪಾಲಿಕೆ 10 ಸಾವಿರ ರೂ. ದಂಡ ವಿಧಿಸಿದೆ. ಪಾಲಿಕೆ ವಲಯ ಕಚೇರಿ 2ರ ವ್ಯಾಪ್ತಿಯಲ್ಲಿರುವ ಚಿಕ್ಕಹರದನಹಳ್ಳಿಯ ಚಂದಶೇಖರ್, ಎಲ್ಲೆಂದರಲ್ಲಿ ಕಟ್ಟಡ ತ್ಯಾಜ್ಯ ಹಾಕಿದ ತಪ್ಪಿಗೆ ದಂಡ ತೆತ್ತಿದ್ದಾರೆ. ಇವರು ತಮ್ಮ ಹಳೇ ಮನೆಯನ್ನು ಕೆಡವಿ, ತ್ಯಾಜ್ಯ ವನ್ನು ಸರ್ಕಾರಿ ಪಾಳು ಜಾಗದಲ್ಲಿ ಸುರಿಸಿದ್ದರು. ಅದಾಗಲೇ ಏಳೆಂಟು ಟಾಕ್ಟರ್ ತ್ಯಾಜ್ಯ ಸುರಿಯಲಾಗಿತ್ತು. ಮತ್ತೊಂದು ಲೋಡ್ ತಂದು ಸುರಿಯುವ ಸಂದರ್ಭದಲ್ಲಿ ಪರಿಸರ ವಿಜ್ಞಾನಿ ಸ್ಫೂರ್ತಿ,…

ಮೈಸೂರು ಮೃಗಾಲಯಕ್ಕೆ ಮತ್ತೆ ಪ್ರವೇಶಾವಕಾಶ
ಮೈಸೂರು

ಮೈಸೂರು ಮೃಗಾಲಯಕ್ಕೆ ಮತ್ತೆ ಪ್ರವೇಶಾವಕಾಶ

June 9, 2020

ಮೈಸೂರು, ಜೂ. 8(ಎಂಟಿವೈ)- ಲಾಕ್ ಡೌನ್‍ನಿಂದಾಗಿ ಕಳೆದ 86 ದಿನಗಳಿಂದ ಬಂದ್ ಆಗಿದ್ದ ಮೈಸೂರು ಮೃಗಾಲಯಕ್ಕೆ ಸಾರ್ವಜನಿಕರಿಗೆ ಇಂದಿನಿಂದ ಪ್ರವೇಶ ಕಲ್ಪಿಸ ಲಾಯಿತು. ಸಂಸದೆ ಸುಮಲತಾ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಸೋಮವಾರ ಬೆಳಗ್ಗೆ ಉಪಸ್ಥಿತರಿದ್ದು, ಅಗತ್ಯ ಮುನ್ನೆಚ್ಚರಿಕಾ ಕ್ರಮಗಳ ಪರಿಶೀಲಿಸಿ, ಜನರ ಪ್ರವೇಶಾವಕಾಶಕ್ಕೆ ಚಾಲನೆ ನೀಡಿದರು. ಹಕ್ಕಿಜ್ವರದ ಪರಿಣಾಮ ಮಾ.14ರಿಂದ ಬಂದ್ ಆಗಿದ್ದ ಮೃಗಾಲಯವನ್ನು, ಲಾಕ್ ಡೌನ್ ಅವಧಿಯಲ್ಲೂ ಬಂದ್ ಮಾಡ ಲಾಗಿತ್ತು. ಸೋಮವಾರ ಬೆಳಗ್ಗೆ ಮೃಗಾ ಲಯದಲ್ಲಿ ತಾಯಿ ಚಾಮುಂಡೇಶ್ವರಿ ವಿಗ್ರಹಕ್ಕೆ ಪೂಜೆ…

ಸಫಾರಿ ಆರಂಭವಾದರೂಕಾಡಿದ ಪ್ರವಾಸಿಗರ ಕೊರತೆ
ಮೈಸೂರು

ಸಫಾರಿ ಆರಂಭವಾದರೂಕಾಡಿದ ಪ್ರವಾಸಿಗರ ಕೊರತೆ

June 9, 2020

ಹುಣಸೂರು, ಜೂ.8(ಕೆಕೆ)-ಹಕ್ಕಿ ಜ್ವರ ಭೀತಿ ಹಾಗೂ ಕೊರೊನಾ ಲಾಕ್‍ಡೌನ್ ನಿಂದಾಗಿ ನಾಗರಹೊಳೆ ಉದ್ಯಾನದಲ್ಲಿ ಮಾ.19ರಿಂದ ಸ್ಥಗಿತಗೊಂಡಿದ್ದ ಸಫಾರಿ ಸರ್ಕಾರದ ಮಾರ್ಗಸೂಚಿಯಂತೆ ಸೋಮವಾರದಿಂದ ಆರಂಭವಾದರೂ ಪ್ರವಾಸಿಗರಿಂದ ನೀರಸ ಪ್ರತಿಕಿಯೆ ವ್ಯಕ್ತವಾಯಿತು. ಸರ್ಕಾರ ಪ್ರವಾಸೋದ್ಯಮ ದೃಷ್ಟಿಯಿಂದ ಹಲವು ಷರತ್ತು ವಿಧಿಸಿ ಸಫಾರಿಗೆ ಇಂದಿನಿಂದ ಅವಕಾಶ ನೀಡಿದ್ದ ಹಿನ್ನೆಲೆಯಲ್ಲಿ ಭಾನುವಾರವೇ ವೀರನಹೊಸಹಳ್ಳಿಯ ಕಚೇರಿ ಆವರಣದಲ್ಲಿ ನಾಗರಹೊಳೆ ಉದ್ಯಾನ ವನದ ಹುಲಿ ಯೋಜನೆ ನಿರ್ದೇಶಕ ಮಹೇಶ್‍ಕುಮಾರ್ ಉದ್ಯಾನವನದ ವಲಯಗಳ ಅಧಿಕಾರಿಗಳು ಹಾಗೂ ಸಫಾರಿ ಸಿಬ್ಬಂದಿಯೊಂದಿಗೆ ಸಭೆ ನಡೆಸಿ, ಸಲಹೆ ಸೂಚನೆ ನೀಡಿದ್ದರು. ಅದರಂತೆ…

ರಸ್ತೆಗಿಳಿದ ನೂರಾರು ಸರ್ಕಾರಿ ಬಸ್‍ಗಳು ಗ್ರಾಮಾಂತರ ಪ್ರದೇಶಕ್ಕೂ ಸಂಚಾರ
ಮೈಸೂರು

ರಸ್ತೆಗಿಳಿದ ನೂರಾರು ಸರ್ಕಾರಿ ಬಸ್‍ಗಳು ಗ್ರಾಮಾಂತರ ಪ್ರದೇಶಕ್ಕೂ ಸಂಚಾರ

June 9, 2020

ಮೈಸೂರು, ಜೂ.8(ಎಸ್‍ಬಿಡಿ)- ದಿನ ಕಳೆದಂತೆ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಸೋಮವಾರ ದಿಂದ ಹೆಚ್ಚು ಬಸ್‍ಗಳನ್ನು ರಸ್ತೆಗಿಳಿಸಲಾ ಗಿದೆ. ಸೋಮವಾರ ಮೈಸೂರು ಗ್ರಾಮಾಂ ತರ ಸಾರಿಗೆ ವಿಭಾಗದಿಂದ 260 ಹಾಗೂ ನಗರ ಸಾರಿಗೆ ವಿಭಾಗದಿಂದ 202 ಬಸ್ ಗಳನ್ನು ಓಡಿಸಲಾಗಿದ್ದು, ಹಲವು ಗ್ರಾಮ ಗಳಿಗೂ ಸಂಚಾರ ಆರಂಭಿಸಲಾಗಿದೆ. `ಸಂಚಾರ ಪುನಾರಂಭಗೊಂಡಾಗಿನಿಂದ ದಿನದಲ್ಲಿ 170ರಿಂದ 180 ಬಸ್‍ಗಳನ್ನು ಓಡಿಸಲಾಗುತ್ತಿತ್ತು. ಪ್ರಯಾಣಿಕರ ಸಂಖ್ಯೆ ಹೆಚ್ಚಿರುವ ಹಿನ್ನೆಲೆಯಲ್ಲಿ ಸೋಮವಾರ 260 ಬಸ್‍ಗಳನ್ನು ಓಡಿಸಲಾಗಿದೆ. ಈಗಾಗಲೇ ಕೆ.ಆರ್.ನಗರ, ಹುಣಸೂರು, ಪಿರಿಯಾಪಟ್ಟಣ ಹಾಗೂ…

ಮೋದಿ ಸಾಧನೆಯ ಕರಪತ್ರ ಬರೀ ಸುಳ್ಳಿನ ಕಂತೆ
ಮೈಸೂರು

ಮೋದಿ ಸಾಧನೆಯ ಕರಪತ್ರ ಬರೀ ಸುಳ್ಳಿನ ಕಂತೆ

June 9, 2020

ಮೈಸೂರು, ಜೂ.8(ಆರ್‍ಕೆಬಿ)- ಮೋದಿ ಸರ್ಕಾರದ ಎರಡನೇ ಅವಧಿಯ ಮೊದಲ ವರ್ಷದ ಸಾಧನೆಯನ್ನು ಬಿಜೆಪಿ ಶಾಸ ಕರು ಮನೆ ಮನೆಗೆ ಹಂಚುತ್ತಿದ್ದು, ಇದು ಬರೀ ಸುಳ್ಳಿನ ಕಂತೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಇಂದಿಲ್ಲಿ ತಿಳಿಸಿದರು. ಮೈಸೂರು ರೈಲ್ವೆ ನಿಲ್ದಾಣದ ಬಳಿಯ ಇಂದಿರಾಗಾಂಧಿ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಳ್ಳು ಸಾಧನೆಗಳ ಕರಪತ್ರ ಹಂಚುತ್ತಿದ್ದು, ಬಿಜೆಪಿಯವರಿಗೆ ನಾಚಿಕೆಯಾಗಬೇಕು. ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ 16.5 ಕೋಟಿ ರೈತರು ಉಪಯೋಗ ಪಡೆದಿರು ವುದಾಗಿ ತಿಳಿಸಿದ್ದಾರೆ. ಆದರೆ ಭಾಷಣ ದಲ್ಲಿ…

ರಾಜ್ಯಸಭೆಗೆ ದೇವೇಗೌಡರ ಸ್ಪರ್ಧೆ: ಸ್ವಾಗತ, ಸಂತಸ
ಮೈಸೂರು

ರಾಜ್ಯಸಭೆಗೆ ದೇವೇಗೌಡರ ಸ್ಪರ್ಧೆ: ಸ್ವಾಗತ, ಸಂತಸ

June 9, 2020

ಮೈಸೂರು, ಜೂ. 8- ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆಯಲಿರುವ ಚುನಾ ವಣೆಯಲ್ಲಿ ಜೆಡಿಎಸ್ ವರಿಷ್ಠ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಸ್ಪರ್ಧಿಸಲು ನಿರ್ಧರಿಸಿರುವುದನ್ನು ಮೈಸೂರು ನಗರದ ಜೆಡಿಎಸ್ ಕಾರ್ಯಕರ್ತರು ಮತ್ತು ಮುಸ್ಲಿಂ ಮುಖಂಡರು ಸ್ವಾಗತಿಸಿ, ಸಂತಸ ವ್ಯಕ್ತಪಡಿಸಿದ್ದಾರೆ. ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಅಬ್ದುಲ್ ಅಜೀಜ್ (ಅಬ್ದುಲ್ಲಾ) ನಿವಾಸದಲ್ಲಿ ಸಭೆ ಸೇರಿದ್ದ ಮುಖಂಡರು ಹಾಗೂ ಕಾರ್ಯಕರ್ತರು ಹಿರಿಯ ಮುತ್ಸದ್ಧಿ ರಾಜಕಾರಣಿಯಾದ ಮಾಜಿ ಪ್ರಧಾನಿ ದೇವೇಗೌಡರ ಅವಶ್ಯಕತೆ ದೇಶದ ಅಭಿವೃದ್ಧಿಗಾಗಿ ಬೇಕಾಗಿದೆ. ಈ ನಿಟ್ಟಿನಲ್ಲಿ ರಾಜ್ಯಸಭೆ ಚುನಾವಣೆಯಲ್ಲಿ…

1 539 540 541 542 543 1,611
Translate »