ಬೆಂಗಳೂರು, ಮೇ ೨೬- ಎಲ್ಲವೂ ಸುಸೂತ್ರವಾಗಿ ನಡೆದರೆ ಕರ್ನಾಟಕದಲ್ಲಿ ದುಬಾರಿ ಬೆಲೆಯ ಮದ್ಯದ ಬೆಲೆ ಅಗ್ಗವಾಗಲಿದೆ. ರಾಜ್ಯ ಅಬಕಾರಿ ಇಲಾಖೆಯು ಇತರ ರಾಜ್ಯಗಳಲ್ಲಿನ ಮದ್ಯದ ದರದ ಮಾದರಿಯನ್ನು ಅಧ್ಯಯನ ಮಾಡಿದ ನಂತರ ದುಬಾರಿ ಮದ್ಯದ ಬೆಲೆಯನ್ನು ಕಡಿಮೆ ಮಾಡಲು ಯೋಚಿಸುತ್ತಿದೆ. ಇದರಿಂದ ಮದ್ಯ ಮಾರಾಟ ಹೆಚ್ಚಳವಾಗುವ ನಿರೀಕ್ಷೆ ಯೊಂದಿಗೆ ರಾಜ್ಯ ಸರ್ಕಾರ ಹೆಚ್ಚುವರಿ ಆದಾಯದ ಮೇಲೆ ಕಣ ್ಣಟ್ಟಿದೆ. ೨೦೨೧-೨೨ರಲ್ಲಿ ಮದ್ಯದಿಂದ ೨೪,೫೮೦ ಕೋಟಿ ರೂ. ಆದಾಯ ಸಂಗ್ರಹ ಗುರಿ ನೀಡಲಾಗಿತ್ತು. ಆದರೆ ಗುರಿ ಮೀರಿ ೨೬,೨೭೬.೮೩…
ರೈತರ ಉಚಿತ ವಿದ್ಯುತ್‌ಗೂ ಕುತ್ತು?
May 26, 2022ಮೀಟರ್ ಅಳವಡಿಸಲು ನಿರ್ಧಾರ ಸಮರ್ಪಕ ವಿದ್ಯುತ್ ಪೂರೈಕೆ ನೆಪದಲ್ಲಿ ಸದ್ಯದಲ್ಲೇ ಅನ್ನದಾತರಿಗೆ ಶಾಕ್ ಬೆಂಗಳೂರು, ಮೇ ೨೫(ಕೆಎಂಶಿ) -ರಾಜ್ಯದ ಕೃಷಿ ಪಂಪ್‌ಸೆಟ್‌ಗಳಿಗೆ ಒದಗಿಸುತ್ತಿರುವ ಉಚಿತ ವಿದ್ಯುತ್ ಬಂದ್ ಮಾಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಆದರೆ ರೈತರ ಕೋರಿಕೆಯಂತೆ ಕೃಷಿ ಪಂಪ್ ಸೆಟ್‌ಗಳಿಗೆ ಹಗಲು ವೇಳೆ ಮೂರು ಪೇಸ್ ವಿದ್ಯುತ್ ಪೂರೈಕೆ ಮಾಡುವ ತೀರ್ಮಾನಕ್ಕೆ ಬರಲಾಗಿದೆ. ಉಚಿತ ವಿದ್ಯುತ್ ಬಂದ್ ಮಾಡುವ ಮುನ್ನ ಸಮರ್ಪಕ ವಿದ್ಯುತ್ ಸರಬರಾಜಿಗೆ ಅಗತ್ಯವಿರುವ ಟ್ರಾನ್ಸಫಾರ್ಮರ್ ಸೇರಿದಂತೆ ಮೂಲ ಸೌಲಭ್ಯ ಕಲ್ಪಿಸಲಾಗುತ್ತದೆ. ಬಳಿಕ…
ರಾಜ್ಯಸಭೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಇಂದು ಫೈನಲ್
May 26, 2022ಬೆಂಗಳೂರು,ಮೇ ೨೫-ರಾಜ್ಯಸಭೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ನಾಳೆ (ಮೇ ೨೬) ಬಹುತೇಕ ಅಂತಿಮಗೊಳ್ಳುವ ನಿರೀಕ್ಷೆ ಇದೆ. ಈ ಸಂಬAಧ ನವದೆಹಲಿಯಲ್ಲಿ ಗುರುವಾರ ಬಿಜೆಪಿ ವರಿಷ್ಠರ ಮಹತ್ವದ ಸಮಾಲೋಚನಾ ಸಭೆ ನಡೆಯಲಿದೆ. ಕರ್ನಾಟಕದ ೪ ಸ್ಥಾನಗಳ ಪೈಕಿ ಎರಡು ಸ್ಥಾನಗಳನ್ನು ಬಿಜೆಪಿ ಸುಲಭವಾಗಿ ಗೆಲ್ಲಬಹುದಾಗಿದ್ದು, ಕಣಕ್ಕಿಳಿಯುವ ಇಬ್ಬರು ಅಭ್ಯರ್ಥಿಗಳ ಆಯ್ಕೆ ನಡೆಯಬೇಕಿದೆ. ಹಾಲಿ ಸದಸ್ಯೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾ ರಾಮನ್ ಸೇರಿದಂತೆ ಡಜನ್ ಆಕಾಂಕ್ಷಿಗಳ ಪಟ್ಟಿಯನ್ನು ರಾಜ್ಯ ಬಿಜೆಪಿ ಕೋರ್ ಕಮಿಟಿ ವರಿಷ್ಠರಿಗೆ ರವಾನಿಸಿದೆ. ಮತ್ತೋರ್ವ…
ಮತ್ತೊಮ್ಮೆ ಪ್ರಾದೇಶಿಕ ಪಕ್ಷಗಳ ಒಗ್ಗೂಡಿಕೆ ಯತ್ನ ತೆಲಂಗಾಣ ಸಿಎಂ ಚಂದ್ರಶೇಖರರಾವ್ ದೇವೇಗೌಡರೊಂದಿಗೆ ಇಂದು ಮಾತುಕತೆ
May 26, 2022ಬೆಂಗಳೂರು,ಮೇ ೨೫(ಕೆಎಂಶಿ) -ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಪರ್ಯಾಯ ವಾಗಿ ಪ್ರಾದೇಶಿಕ ಪಕ್ಷಗಳನ್ನು ಒಗ್ಗೂಡಿಸಲು ತೆಲಂಗಾಣ ಮುಖ್ಯಮಂತ್ರಿ ಕೆ.ಸಿ.ಚಂದ್ರಶೇಖರ ರಾವ್ ನಾಳೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಜತೆ ಮಾತುಕತೆ ನಡೆಸಲಿದ್ದಾರೆ. ಕೆ.ಸಿ.ಚಂದ್ರಶೇಖರರಾವ್ ನಾಳೆ ಮಧ್ಯಾಹ್ನ ಪದ್ಮನಾಭನಗರದ ದೇವೇಗೌಡರ ನಿವಾಸಕ್ಕೆ ಆಗಮಿಸಿ, ಮಾತುಕತೆ ನಡೆಸಲಿದ್ದಾರೆ. ಪ್ರಸಕ್ತ ರಾಜ ಕಾರಣ, ಕರ್ನಾಟಕದಲ್ಲಿ ಮುಂಬರುವ ವಿಧಾನಸಭಾ ಚುನಾವಣೆ ಬಗ್ಗೆಯೂ ಚರ್ಚೆ ನಡೆಸಲಿದ್ದಾರೆ. ದಕ್ಷಿಣ ಭಾರತದಲ್ಲಿ ಪ್ರಾದೇಶಿಕ ಪಕ್ಷಗಳ ಒಗ್ಗೂಡಿಸಲು ಕೆ.ಸಿ.ಚಂದ್ರಶೇಖರರಾವ್, ಡಿಎಂಕೆ, ಎಎಪಿ, ತೃಣಮೂಲ, ಸಮಾಜವಾದಿ, ಆರ್‌ಜೆಡಿ ಸೇರಿದಂತೆ ಸಮಾನಮನಸ್ಕ ಪಕ್ಷಗಳ ಮುಖಂಡರು,…
ಉಗ್ರರಿಗೆ ಆರ್ಥಿಕ ನೆರವು ಯಾಸಿನ್ ಮಲಿಕ್‌ಗೆ ಜೀವಾವಧಿ ಶಿಕ್ಷೆ
May 26, 2022ನವದೆಹಲಿ: ಭಯೋತ್ಪಾದನೆಗೆ ಆರ್ಥಿಕ ನೆರವು ನೀಡಿದ ಪ್ರಕ ರಣದಲ್ಲಿ ಕಾಶ್ಮೀರಿ ಪ್ರತ್ಯೇ ಕತಾವಾದಿ ನಾಯಕ ಯಾಸಿನ್ ಮಲಿಕ್‌ಗೆ ಎನ್‌ಐಎ ಕೋರ್ಟ್ ಜೀವಾವಧಿ ಶಿಕ್ಷೆ ಹಾಗೂ ೧೦ ಲಕ್ಷ ರೂ. ದಂಡ ವಿಧಿಸಿ ಬುಧವಾರ ತೀರ್ಪು ನೀಡಿದೆ. ಪ್ರಕರಣದ ವಿಚಾರಣೆ ನಡೆಸಿದ ದೆಹಲಿಯ ಎನ್‌ಐಎ ಕೋರ್ಟ್ಮೇ ೧೯ರಂದು ಯಾಸಿನ್ ಮಲಿಕ್ ತಪ್ಪಿತಸ್ಥ ಎಂದು ತೀರ್ಪು ನೀಡಿತ್ತು. ಆದರೆ ಶಿಕ್ಷೆಯ ಪ್ರಮಾಣವನ್ನು ಇಂದಿಗೆ ಕಾಯ್ದಿರಿಸಿತ್ತು. ಇಂದು ತೀರ್ಪು ಪ್ರಕಟಿಸಿದ ಕೋರ್ಟ್ ಉಗ್ರರಿಗೆ ಆರ್ಥಿಕ ನೆರವು ನೀಡಿದ ಯಾಸಿನ್ ಮಲಿಕ್‌ಗೆ ಜೀವಾವಧಿ…
ಮಿತಿ ಮೀರಿದ ಸಂಚಾರ ನಿಯಮ ಉಲ್ಲಂಘನೆ ಮೈಸೂರಲ್ಲಿ ಸಂಚಾರ ಪೊಲೀಸರಿಂದ ತೀವ್ರ ತಪಾಸಣೆ
May 26, 2022ತ್ರಿಬಲ್ ರೈಡಿಂಗ್, ಹೆಲ್ಮೆಟ್, ಸೀಟ್ ಬೆಲ್ಟ್ ಧರಿಸದೆ ವಾಹನ ಚಾಲನೆ, ಡ್ರೆöÊವಿಂಗ್ ವೇಳೆ ಮೊಬೈಲ್ ಬಳಕೆ ವಿರುದ್ಧ ಕಾರ್ಯಾಚರಣೆ ಮೈಸೂರು, ಮೇ ೨೫(ಆರ್‌ಕೆ)- ಮೈಸೂರು ನಗರದಾ ದ್ಯಂತ ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ಪೊಲೀಸರು ವಿಶೇಷ ತಪಾಸಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ತ್ರಿಬಲ್ ರೈಡಿಂಗ್, ಹೆಲ್ಮೆಟ್, ಸೀಟ್ ಬೆಲ್ಟ್ ಧರಿಸದೇ ಇರುವುದು, ವಾಹನ ಚಾಲನೆ ಚಾಲನೆ ವೇಳೆ ಮೊಬೈಲ್ ಬಳಸುವುದೂ ಸೇರಿದಂತೆ ಸಂಚಾರ ನಿಯಮ ಉಲ್ಲಂಘಿಸುವುದು ಮಿತಿ ಮೀರಿರುವ ಹಿನ್ನೆಲೆ ಯಲ್ಲಿ ಮೈಸೂರಿನ ಎಲ್ಲಾ ಸಂಚಾರ ಠಾಣೆಗಳ ಪೊಲೀ…
ಕ್ಲಿಷ್ಟಕರ ಅಯೋರ್ಟಾ ಸಮಸ್ಯೆಗೆ ಯಶಸ್ವಿ ಶಸ್ತçಚಿಕಿತ್ಸೆ; ಇಬ್ಬರು ರೋಗಿಗಳ ಜೀವ ರಕ್ಷಣೆ
May 26, 2022ಮೈಸೂರಿನ ಮಣ ಪಾಲ್ ಆಸ್ಪತ್ರೆ ವೈದ್ಯರ ಹೇಳಿಕೆ ಮೈಸೂರು, ಮೇ ೨೫(ಆರ್‌ಕೆಬಿ)- ಮೈಸೂರು-ಬೆಂಗಳೂರು ರಿಂಗ್ ರಸ್ತೆ ಜಂಕ್ಷನ್‌ನ ಬಳಿಯಿರುವ ತಮ್ಮ ಮಣ ಪಾಲ್ ಆಸ್ಪತ್ರೆಯಲ್ಲಿ ಇಬ್ಬರು ರೋಗಿಗಳಿಗೆ ಯಶಸ್ವಿಯಾಗಿ ಆಯೋರ್ಟಾ ಸಮಸ್ಯೆಗೆ ಶಸ್ತçಚಿಕಿತ್ಸೆ ನಡೆಸಿ ಅವರ ಜೀವ ಉಳಿಸಲಾಗಿದೆ ಎಂದು ಆಸ್ಪತ್ರೆಯ ಹೃದ್ರೋಗ ತಜ್ಞ ಡಾ.ಉಪೇಂದ್ರ ಶೆಣೈ ತಿಳಿಸಿದರು. ಪತ್ರಕರ್ತರ ಭವನದಲ್ಲಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ೨೫ ವರ್ಷಗಳಿಗೂ ಮೀರಿದ ಅನುಭವವುಳ್ಳ ಇಡೀ ತಂಡದ ಪ್ರಯತ್ನದಿಂದ ೩೮ರಿಂದ ೭೭ ವರ್ಷದವರೆಗಿನ ವಿವಿಧ ವಯೋಮಾನದವರಿಗೆ ಅತ್ಯಂತ ಕ್ಲಿಷ್ಟಕರವಾಗಿದ್ದರೂ ಯಶಸ್ವಿ…
ಭೂ ಪರಿವರ್ತನೆ ಇನ್ನು ಬಲು ಸುಲಭ ಕೇವಲ ೭೨ ಗಂಟೆಯಲ್ಲಿ ಅನುಮತಿ
May 25, 2022ವಾರದಲ್ಲಿ ಸರ್ಕಾರಿ ಆದೇಶ ಗ್ರಾಮೀಣ ಪ್ರದೇಶದಲ್ಲಿ ಹಾಲಿ ಶುಲ್ಕ ಪಾಲಿಕೆ, ನಗರ ಪ್ರದೇಶದಲ್ಲಿ ಎರಡ್ಮೂರು ಪಟ್ಟು ಹೆಚ್ಚಳ ತಪ್ಪು ಮಾಹಿತಿ ನೀಡಿದರೆ ಭೂ ಪರಿವರ್ತನೆ ರದ್ದು, ಶುಲ್ಕವೂ ಮುಟ್ಟುಗೋಲು ಜಿಲ್ಲಾಧಿಕಾರಿ ಕಚೇರಿ ಏಕಗವಾಕ್ಷಿಗೆ ಅರ್ಜಿ, ಶುಲ್ಕ, ಪ್ರಮಾಣಪತ್ರ ಸಲ್ಲಿಸಿದರೆ ಕೆಲಸ ಆಯ್ತು ಬೆಂಗಳೂರು, ಮೇ೨೪(ಕೆಎಂಶಿ)-ಭೂ ಪರಿವರ್ತ ನೆಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದವರಿಗೆ ೭೨ ಗಂಟೆ ಗಳಲ್ಲಿ ಅನುಮತಿ ನೀಡಲು ಸರ್ಕಾರ ನಿರ್ಧರಿಸಿದೆ. ಸುದ್ದಿಗಾರರೊಂದಿಗೆ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್, ಈ ವಿಷಯ ತಿಳಿಸಿದ್ದಲ್ಲದೆ, ಭೂ ಪರಿವರ್ತನೆಗೆ…
ವಿಧಾನಸಭೆಯಿಂದ ವಿಧಾನಪರಿಷತ್‌ಗೆ ಚುನಾವಣೆ ಬಿಜೆಪಿಯ ಸವದಿ, ಕೇಶವಪ್ರಸಾದ್, ಹೇಮಲತಾ ನಾಯಕ್, ಛಲವಾದಿ ನಾರಾಯಣಸ್ವಾಮಿ, ಕಾಂಗ್ರೆಸ್‌ನ ನಾಗರಾಜ ಯಾದವ್, ಅಬ್ದುಲ್ ಜಬ್ಬಾರ್, ಜೆಡಿಎಸ್‌ನ ಶರವಣ ಅವಿರೋಧ ಆಯ್ಕೆ ಖಚಿತ
May 25, 2022ಕಡೇ ದಿನ ಮೂರು ಪಕ್ಷಗಳಿಂದ ಅಭ್ಯರ್ಥಿಗಳು ಕಣಕ್ಕೆ ಅಧಿಕೃತ ಘೋಷಣೆಯಷ್ಟೇ ಬಾಕಿ ಬೆಂಗಳೂರು, ಮೇ೨೪(ಕೆಎಂಶಿ)- ಮಾಜಿ ಉಪಮುಖ್ಯಮಂತ್ರಿ ಲಕ್ಷö್ಮಣ ಸವದಿ ಸೇರಿದಂತೆ ಏಳು ಮಂದಿ ವಿಧಾನಪರಿಷತ್ತಿಗೆ ಅವಿರೋಧ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ವಿಧಾನಸಭೆಯಿಂದ ವಿಧಾನಪರಿಷತ್ತಿನ ಏಳು ಸ್ಥಾನಗಳಿಗೆ ನಡೆಯುತ್ತಿರುವ ದ್ವೆöÊವಾರ್ಷಿಕ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಕಡೆಯ ದಿನವಾದ ಮಂಗಳವಾರ ಎಲ್ಲಾ ಪ್ರಮುಖ ರಾಜಕೀಯ ಪಕ್ಷ ಗಳು ವಿಧಾನಸಭೆಯಲ್ಲಿನ ತಮ್ಮ ಸದಸ್ಯ ಸಂಖ್ಯಾಬಲಕ್ಕೆ ತಕ್ಕಂತೆ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮೂಲಕ ಎಲ್ಲರ ಅವಿರೋಧ ಆಯ್ಕೆಗೆ ದಾರಿ ಮಾಡಿದೆ. ವಿಧಾನಸಭೆಯ ಬಲಾಬಲದ…
ಲಾರಿಯಲ್ಲಿ ಸೋರುತ್ತಿತ್ತು ಚಿಲ್ಲಿ ಸಾಸ್ ಮಾರ್ಗದುದ್ದಕ್ಕೂ ಮಕ್ಕಳಾದಿ ಸುಸ್ತು!
May 25, 2022ಬಸ್‌ನಲ್ಲಿದ್ದವರಿಗೂ ನಾನಾ ಕಿರಿಕಿರಿ ಬಸ್ ನಿಂತ ಕೂಡಲೇ ದಿಕ್ಕಾಪಾಲಾಗಿ ಓಡಿದರು ಮಾಕುಟ್ಟ ಚೆಕ್‌ಪೋಸ್ಟ್ನಲ್ಲಿ ಲಾರಿ ತಡೆ, ಅಧಿಕಾರಿಗಳಿಂದ ಪರಿಶೀಲನೆ, ಮಾದರಿ ಪರೀಕ್ಷೆಗೆ ಬೆಂಗಳೂರಿAದ ಎರ್ನಾಕುಲಂಗೆ ಲಾರಿ ತೆರಳುತ್ತಿತ್ತು ಮಡಿಕೇರಿ/ವಿರಾಜಪೇಟೆ, ಮೇ ೨೪- ಬೆಂಗಳೂರಿನಿAದ ಕುಶಾಲನಗರ-ವಿರಾಜಪೇಟೆ ಮಾರ್ಗವಾಗಿ ಕೇರಳದ ಎರ್ನಾಕುಲಂಗೆ ಲಾರಿಯಲ್ಲಿ ಸಾಗಿಸುತ್ತಿದ್ದ ಬ್ಯಾಡಗಿ ಮೆಣಸಿನ ಕಾಯಿ (ಚಿಲ್ಲಿ) ಸಾಸ್ ರಸ್ತೆಯಲ್ಲಿ ಸೋರಿಕೆಯಾಗಿ ಕೊಡಗಿನ ವಿವಿಧೆಡೆ ಕೆಲಕಾಲ ಆತಂಕ ಸೃಷ್ಟಿಯಾಯಿತು. ಪ್ರಾರಂಭದಲ್ಲಿ ವಿಷಯುಕ್ತ ದ್ರಾವಣ ಸೋರಿಕೆಯಾಗಿದೆ ಎಂದು ಶಂಕಿಸ ಲಾಗಿತ್ತಾದರೂ, ಮಾಕುಟ್ಟ ಬಳಿ ಲಾರಿಯನ್ನು ತಡೆದು ಪರಿಶೀಲನೆ ನಡೆಸಿದ…










