ಮೈಸೂರು, ಮಾ.4(ಆರ್‍ಕೆ)-ಇನ್ನು ಮುಂದೆ ಕಟ್ಟಡ ನಿರ್ಮಾಣಕ್ಕೆ ನಕ್ಷೆ ಅನು ಮೋದನೆ ಪಡೆಯಲು ಲಿಖಿತ ರೂಪದ ಅರ್ಜಿ ನಮೂನೆ ಸಲ್ಲಿಸುವ ಅಗತ್ಯವಿಲ್ಲ. ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿ ಯಲ್ಲಿ ಕಟ್ಟಡ ನಕ್ಷೆ ಅನುಮೋದನೆ ಪಡೆ ಯುವ ಪ್ರಕ್ರಿಯೆಯನ್ನು ಆನ್‍ಲೈನ್ ವ್ಯವಸ್ಥೆಗೆ ಒಳಪಡಿಸಿದ್ದು, ಸಾರ್ವಜನಿಕರು ತಾವಿರುವೆ ಡೆಯೇ ದಾಖಲಾತಿಗಳನ್ನು ಸ್ಕ್ಯಾನ್ ಮಾಡಿ ವೆಬ್‍ಸೈಟ್ ಮೂಲಕ ಅರ್ಜಿ ಸಲ್ಲಿಸಿ ಆನ್ ಲೈನ್‍ನಲ್ಲೇ ನಕ್ಷೆಗೆ ಅನುಮೋದನೆ ಪಡೆಯುವ ವಿನೂತನ ಯೋಜನೆ ಇದೇ ಪ್ರಥಮ ಬಾರಿ ಮೈಸೂರಿನಲ್ಲಿ ಜಾರಿಗೆ ಬಂದಿದೆ. ಸಯ್ಯಾಜಿರಾವ್ ರಸ್ತೆಯಲ್ಲಿರುವ ಮೈಸೂರು…
ದುಬಾರೆ ಬಳಿ ಕಾವೇರಿಯಲ್ಲಿ ಮುಳುಗಿ ವಿದ್ಯಾರ್ಥಿಗಳ ಸಾವು
March 5, 2020ಕುಶಾಲನಗರ,ಮಾ.4-ಕೊಡಗು ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ವಾದ ದುಬಾರೆ ಬಳಿ ಕಾವೇರಿ ನದಿಯಲ್ಲಿ ಆಟವಾಡಲು ಹೋಗಿದ್ದ ಇಬ್ಬರು ವಿದ್ಯಾರ್ಥಿಗಳು ಆಕಸ್ಮಿಕವಾಗಿ ನದಿ ನೀರಿನಲ್ಲಿ ಮುಳುಗಿ ದುರಂತ ಸಾವನ್ನಪ್ಪಿರುವ ಘಟನೆ ಬುಧವಾರ ಸಂಭವಿಸಿದೆ. ವಿರಾಜಪೇಟೆ ತಾಲೂಕಿನ ಗೋಣಿಕೊಪ್ಪ ಬಳಿಯ ಕಳ ತ್ಮಾಡು ಲಯನ್ಸ್ ಶಾಲೆಯ ವಿದ್ಯಾರ್ಥಿಗಳಾದ ಕಾನೂರಿನ ಕೋದೆಂಗಡ ಶ್ರೇಯಸ್ ಚಂಗಪ್ಪ (14), ಹೈಸೊಡ್ಲೂರಿನ ಮಾದಿರ ಲೆನಿನ್ ಬೋಪಣ್ಣ (15) ಮೃತಪಟ್ಟ ವಿದ್ಯಾರ್ಥಿಗಳು. ಕಳತ್ಮಾಡು ಲಯನ್ಸ್ ಶಾಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ತಂಡದ 39 ವಿದ್ಯಾರ್ಥಿಗಳನ್ನು ಸ್ಕೌಟ್ಸ್ ಶಿಕ್ಷಕರು…
ದುಡಿದು ಬದುಕುವವರಿಗೆ ಈಗ ಬೆಲೆಯೇ ಇಲ್ಲ…
March 5, 2020ಬೆಂಗಳೂರು, ಮಾ.4(ಕೆಎಂಶಿ)- ಯಥಾ ರಾಜಾ, ತಥಾ ಪ್ರಜಾ ಎಂಬ ಕಾಲವೊಂ ದಿತ್ತು. ಆದರೆ ಈಗ ಯಥಾ ಪ್ರಜಾ, ತಥಾ ರಾಜಾ ಎಂಬ ಮಟ್ಟಕ್ಕೆ ಬಂದಿದೆ. ಮತ್ತೆ ಯಥಾ ರಾಜಾ, ತಥಾ ಪ್ರಜಾ ಕಾಲಕ್ಕೆ ಬರಬೇಕಾ ದರೆ ಇನ್ನು ಎಷ್ಟು ವರ್ಷ ಬೇಕೋ? ಅಂತಹ ಪ್ರಯತ್ನಗಳು ಯಾರಿಂದ ಆರಂಭವಾಗುತ್ತದೆ ಎಂದು ಕಾನೂನು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧು ಸ್ವಾಮಿ ಅಸಹಾಯಕತೆ ವ್ಯಕ್ತಪಡಿಸಿದರು. ವಿಧಾನಸಭೆಯ ಅಧಿವೇಶನದಲ್ಲಿಂದು ಸಂವಿ ಧಾನದ ಮೇಲೆ ನಡೆದ ಚರ್ಚೆಯಲ್ಲಿ ಮಾತನಾ ಡಿದ ಅವರು, ಸಂವಿಧಾನ…
ದ್ವಿತೀಯ ಪಿಯು ಪರೀಕ್ಷೆ ಆರಂಭ: ಮೊದಲ ದಿನ ಸುಸೂತ್ರ
March 5, 2020ಮೈಸೂರು,ಮಾ.4(ಎಂಟಿವೈ)- ಪ್ರಸಕ್ತ ಸಾಲಿನ ದ್ವಿತೀಯ ಪಿಯು ಪರೀಕ್ಷೆಯು ಮೊದಲ ದಿನ ವಾದ ಬುಧವಾರ ಮೈಸೂರು ನಗರದ 26 ಕೇಂದ್ರಗಳು ಸೇರಿದಂತೆ ಜಿಲ್ಲೆಯ 50 ಕೇಂದ್ರ ಗಳಲ್ಲಿ ಬಲು ಸುಸೂತ್ರವಾಗಿ ನಡೆಯಿತು. ವಿದ್ಯಾರ್ಥಿಗಳು ಇತಿಹಾಸ, ಬೇಸಿಕ್ ಮ್ಯಾಥ್ಸ್ (ಮೂಲ ಗಣಿತ) ಮತ್ತು ಭೌತಶಾಸ್ತ್ರದ ಪರೀ ಕ್ಷೆಗೆ ಸರಾಗವಾಗಿಯೇ ಉತ್ತರಿಸಿದರು. ಬುಧವಾರ ಬೆಳಿಗ್ಗೆ 10.15ರಿಂದ ಮಧ್ಯಾಹ್ನ 1.30 ರವರೆಗೆ ಬಿಗಿಭದ್ರತೆಯಲ್ಲಿ ಪರೀಕ್ಷೆ ನಡೆಯಿತು. ಮಾ.23ರವರೆಗೂ ಪರೀಕ್ಷೆ ನಡೆಯಲಿದೆ. ಅಕ್ರಮ ತಡೆಗಾಗಿ ಪರೀಕ್ಷಾ ಕೇಂದ್ರದ ಸುತ್ತ ಬಿಗಿ ಭದ್ರತೆ, ಪರೀಕ್ಷಾ ಕೊಠಡಿಗಳಲ್ಲಿ…
ಕುಕ್ಕರಹಳ್ಳಿ ಕೆರೆಯಲ್ಲಿ ಕಲುಷಿತ ನೀರೆತ್ತುತ್ತಿರುವ ಸಕ್ಕಿಂಗ್ ಯಂತ್ರ
March 5, 2020ಕೆರೆ ಸಂರಕ್ಷಣೆ, ವಾತಾವರಣ ಸುಧಾರಿಸುವ ಕಾರ್ಯ ಪಾಲಿಕೆಯಿಂದ ಪ್ರಾರಂಭ ಮೈಸೂರು,ಮಾ.4(ಎಂಟಿವೈ)- ಮೈಸೂರಿನ ಕುಕ್ಕರಹಳ್ಳಿ ಕೆರೆಗೆ ಪಡುವಾರ ಹಳ್ಳಿ ಸೇರಿದಂತೆ ವಿವಿಧೆಡೆಯಿಂದ ಹರಿದು ಬರುತ್ತಿದ್ದ ಕಲುಷಿತ ನೀರು ತಡೆಯಲು ಹಾಗೂ ಹಲವಾರು ವರ್ಷಗಳಿಂದ ಸಂಗ್ರಹ ವಾಗಿರುವ ಕಲುಷಿತ ನೀರಿನ ಕೆಸರನ್ನು ಸಕ್ಕಿಂಗ್ ಯಂತ್ರದ ಮೂಲಕ ಮೇಲೆತ್ತಿ, ಕೆರೆ ಪರಿಸರ ಶುಚಿಗೊಳಿಸುವ ಕಾರ್ಯಾಚರಣೆ ಕಡೆಗೂ ಬುಧವಾರ ಆರಂಭಗೊಂಡಿತು. ಪಡುವಾರಹಳ್ಳಿ ಮತ್ತಿತರ ಬಡಾವಣೆ ಗಳಿಂದ ಮಿತಿಮೀರಿದ ಪ್ರಮಾಣದಲ್ಲಿ ಕಲುಷಿತ ನೀರು ಮೈಸೂರು-ಹುಣಸೂರು ಮುಖ್ಯರಸ್ತೆಗೆ ಅಡ್ಡಲಾಗಿ ಕಟ್ಟಿರುವ ಮ್ಯಾಜಿಕ್ ಬಾಕ್ಸ್ ಮೂಲಕ ಕುಕ್ಕರಹಳ್ಳಿ…
ಏ.1ರಿಂದ ಬ್ಯಾಂಕ್ ವಿಲೀನ ಜಾರಿ ಸಿಂಡಿಕೇಟ್, ಕಾಪೆರ್Çರೇಷನ್ ಬ್ಯಾಂಕ್ ಇನ್ನು ನೆನಪು ಮಾತ್ರ!
March 5, 2020ಹೊಸದಿಲ್ಲಿ: ಸಾರ್ವಜನಿಕ ಸ್ವಾಮ್ಯದ 10 ಬ್ಯಾಂಕ್‍ಗಳನ್ನು 4 ಬೃಹತ್ ಬ್ಯಾಂಕ್ ಗಳಾಗಿ ರೂಪಿಸುವ ವಿಲೀನ ಪ್ರಕ್ರಿಯೆಗೆ ಸಂಪುಟ ಸಭೆ ಬುಧವಾರ ಅಸ್ತು ಎಂದಿದೆ. ಏ.1ರಿಂದ ವಿಲೀನವು ಜಾರಿಗೆ ಬರ ಲಿದೆ. ಈ ನಿಟ್ಟಿನಲ್ಲಿ ಬ್ಯಾಂಕ್‍ಗಳ ಜೊತೆ ಸರಕಾರವು ಸಂಪರ್ಕದಲ್ಲಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ವಿಲೀನ ಪ್ರಕ್ರಿಯೆ ಸಂಬಂಧ ಯಾವುದೇ ತೊಡಕುಗಳಿಲ್ಲ ಎಂದೂ ಸಚಿವೆ ಹೇಳಿ ದ್ದಾರೆ. ಏ.1ರಿಂದ ಗ್ರಾಹಕರಿಗೆ ಬ್ಯಾಂಕ್ ವಿಲೀನವು ಅನುಭವಕ್ಕೆ ಬರಲಿದೆ. ಜಾಗತಿಕ ಬ್ಯಾಂಕ್‍ಗಳ ಗಾತ್ರಕ್ಕೆ ಹೊಂದು ವಂಥ ಬೃಹತ್…
ಮುಂದಿನ ವರ್ಷ ಇಸ್ರೋದಿಂದ ಚಂದ್ರಯಾನ-3
March 5, 2020ನವದೆಹಲಿ: 2021ರಲ್ಲಿ ಮೊದಲ 6 ತಿಂಗಳಲ್ಲಿಯೇ ಇಸ್ರೋ ಚಂದ್ರ ಯಾನ-3 ಉಡಾ ವಣೆ ಆಗಲಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಸುಳಿವು ನೀಡಿದ್ದಾರೆ. ಚಂದ್ರಯಾನ-2 ಕೊನೆ ಕ್ಷಣದಲ್ಲಿ ಸಂಪರ್ಕ ಕಳೆದುಕೊಂಡಿದ್ದ ರಿಂದ ಚಂದ್ರಯಾನ-3ಕ್ಕೆ ಇಸ್ರೋ ಸಿದ್ಧತೆ ನಡೆಸಿಕೊಂಡಿದೆ. ಚಂದ್ರಯಾನ-2ರಿಂದ ಕಲಿತ ಪಾಠದಿಂದ ಚಂದ್ರಯಾನ-3ನ್ನು ಸಿದ್ಧಗೊಳಿಸಲಾಗುತ್ತಿದೆ. 2021ರ ಮೊದಲ 6 ತಿಂಗಳಲ್ಲಿ ಚಂದ್ರಯಾನ-3 ನಭಕ್ಕೆ ಚಿಮ್ಮುವ ಸಾಧ್ಯತೆಗಳಿವೆ. ಚಂದ್ರಯಾನ-2 ಅಸಫ ಲತೆಯಲ್ಲಿ ಕಲಿತ ಹಲವು ಪಾಠಗಳಿಂದ ಚಂದ್ರಯಾನ-3ಡಿಸೈನ್ ಮಾಡಲಾಗುತ್ತಿದೆ. ಕ್ಷಮತೆ, ತಂತ್ರಜ್ಞಾನ, ಸಂಪರ್ಕ ಸಾಧಕ ಸೇರಿದಂತೆ ಸುಧಾ…
ವಿಮಾನ ನಿಲ್ದಾಣ, ರೈಲ್ವೇ ಸ್ಟೇಷನ್, ಪ್ರವಾಸಿ ಕೇಂದ್ರಗಳಲ್ಲಿ ಕಟ್ಟೆಚ್ಚರ
March 5, 2020ಮೈಸೂರು, ಮಾ.4(ಆರ್‍ಕೆ)- ಕೊರೊನಾ ವೈರಸ್ ಭೀತಿ ಹರಡಿರುವ ಹಿನ್ನೆಲೆಯಲ್ಲಿ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣ, ರೈಲ್ವೇ ಸ್ಟೇಷನ್ ಸೇರಿದಂತೆ ಎಲ್ಲಾ ಪ್ರವಾಸಿ ತಾಣಗಳಲ್ಲಿ ಮುನ್ನೆಚ್ಚರಿಕಾ ಕ್ರಮ ವಹಿಸಲಾಗಿದೆ. ಮೈಸೂರಿನಿಂದ ಗೋವಾ, ಹೈದರಾ ಬಾದ್, ಬೆಂಗಳೂರು, ಚೆನ್ನೈ, ಬೆಳಗಾವಿ ನಗರಗಳಿಗೆ ಹೋಗಿ ಬರುತ್ತಿರುವ ವಿಮಾನ ಗಳ ಪ್ರಯಾಣಿಕರಿಂದ ಕೊರೊನಾ ವೈರಸ್ ಹರಡಬಹುದೆಂಬ ಶಂಕೆ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದಲ್ಲೇ ಆರೋಗ್ಯ ತಪಾ ಸಣೆ ಮಾಡಲಾಗುತ್ತಿದೆ. ಒಂದು ವೇಳೆ ಜ್ವರ, ಶೀತ, ಕೆಮ್ಮಿನ ಲಕ್ಷಣ ಕಂಡು ಬಂದಲ್ಲಿ ಅಂತಹವರನ್ನು ಕೆ.ಆರ್.ಆಸ್ಪತ್ರೆಗಳಲ್ಲಿ ತಪಾ…
ಕೊರೊನಾ ವೈರಸ್: ಹೆಚ್.ಡಿ.ಕೋಟೆ ಗಡಿ ಭಾಗದಲ್ಲಿ ಕಟ್ಟೆಚ್ಚರ
March 5, 2020ಮೈಸೂರು, ಮಾ. 4(ಆರ್‍ಕೆ)- ಎಲ್ಲೆಡೆ ಕೊರೊನಾ ವೈರಸ್ ಭೀತಿ ಹರಡಿರುವ ಬೆನ್ನಲ್ಲೇ ಕೇರಳದ ಮಾನಂದವಾಡಿ ಮತ್ತು ವೈನಾಡ್‍ನಲ್ಲಿ ಎರಡು ಮಂಗನ ಕಾಯಿಲೆ (ಏಈಆ) ಪ್ರಕರಣಗಳು ಪತ್ತೆಯಾಗಿವೆ. ಮಂಗನ ಕಾಯಿಲೆಯ ಹಿನ್ನೆಲೆಯಲ್ಲಿ ಕೇರಳ-ಕರ್ನಾಟಕ ಗಡಿಭಾಗದ ಮೈಸೂರು ಜಿಲ್ಲೆ, ಹೆಚ್.ಡಿ.ಕೋಟೆ ತಾಲೂಕಿನ ಬಾವಲಿ ಚೆಕ್‍ಪೋಸ್ಟ್ ಹಾಗೂ ಹಾಡಿಗಳಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ. ರವಿಕುಮಾರ್ ನೇತೃತ್ವದ ಸಿಬ್ಬಂದಿ ಆರೋಗ್ಯ ತಪಾಸಣೆ ನಡೆಸುತ್ತಿದ್ದಾರೆ. ಬುಡಕಟ್ಟು ಜನಾಂಗ, ಅರಣ್ಯದಂಚಿನ ನಿವಾಸಿಗಳು ಹಾಗೂ ಅರಣ್ಯದೊಳಗೆ ಕೆಲಸ ಮಾಡುವ ಅರಣ್ಯ ಸಿಬ್ಬಂದಿಗಳಿಗೆ ಮಂಗನ ಕಾಯಿಲೆ ವಿರುದ್ಧ ವ್ಯಾಕ್ಸಿನೇಷನ್…
ಗಾಂಧಿ ಚಿಂತನೆಯತ್ತ ಮುಖ ಮಾಡಿದ ಜಗತ್ತು
March 5, 2020ಮೈಸೂರು,ಮಾ.4(ಪಿಎಂ)- ಶಾಂತಿ, ಸಹನೆ, ಪ್ರೀತಿ, ಸಹಬಾಳ್ವೆ ಸೇರಿದಂತೆ ಗಾಂಧಿ ಚಿಂತನೆಗಳು ಇಂದಿಗೂ ಪ್ರಸ್ತುತ. ಇಡೀ ಜಗತ್ತೇ ಈಗ ಇಂತಹ ಉದಾತ್ತ ಚಿಂತನೆ ಗಳತ್ತ ಮುಖ ಮಾಡುತ್ತಿದೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲ ಸಚಿವ ಪ್ರೊ. ಆರ್.ಶಿವಪ್ಪ ಹೇಳಿದರು. ಮೈಸೂರಿನ ಬಾಸುದೇವ ಸೋಮಾನಿ ಕಾಲೇಜು ವತಿಯಿಂದ ಕಾಲೇಜು ಸಭಾಂ ಗಣದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಟಿ.ರಮೇಶ್ ಹಾಗೂ ಹೆಚ್.ಪಿ.ಭವ್ಯ ಅವರ ಸಂಪಾದಕತ್ವದ `ಗಾಂಧಿ ಚಿಂತನೆಗಳ ಪ್ರಸ್ತು ತತೆ’ ಕೃತಿ ಬಿಡುಗಡೆಗೊಳಿಸಿ ಮಾತನಾಡಿ, ಗಾಂಧಿಯನ್ನು ಕೇವಲ ಅಧ್ಯಯನ ದೃಷ್ಟಿ ಯಿಂದ ಅಥವಾ…










