ದುಬಾರೆ ಬಳಿ ಕಾವೇರಿಯಲ್ಲಿ ಮುಳುಗಿ ವಿದ್ಯಾರ್ಥಿಗಳ ಸಾವು
ಮೈಸೂರು

ದುಬಾರೆ ಬಳಿ ಕಾವೇರಿಯಲ್ಲಿ ಮುಳುಗಿ ವಿದ್ಯಾರ್ಥಿಗಳ ಸಾವು

March 5, 2020

ಕುಶಾಲನಗರ,ಮಾ.4-ಕೊಡಗು ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ವಾದ ದುಬಾರೆ ಬಳಿ ಕಾವೇರಿ ನದಿಯಲ್ಲಿ ಆಟವಾಡಲು ಹೋಗಿದ್ದ ಇಬ್ಬರು ವಿದ್ಯಾರ್ಥಿಗಳು  ಆಕಸ್ಮಿಕವಾಗಿ ನದಿ ನೀರಿನಲ್ಲಿ ಮುಳುಗಿ ದುರಂತ ಸಾವನ್ನಪ್ಪಿರುವ  ಘಟನೆ ಬುಧವಾರ ಸಂಭವಿಸಿದೆ.

ವಿರಾಜಪೇಟೆ ತಾಲೂಕಿನ ಗೋಣಿಕೊಪ್ಪ ಬಳಿಯ ಕಳ ತ್ಮಾಡು ಲಯನ್ಸ್ ಶಾಲೆಯ ವಿದ್ಯಾರ್ಥಿಗಳಾದ ಕಾನೂರಿನ ಕೋದೆಂಗಡ ಶ್ರೇಯಸ್ ಚಂಗಪ್ಪ (14), ಹೈಸೊಡ್ಲೂರಿನ ಮಾದಿರ ಲೆನಿನ್ ಬೋಪಣ್ಣ (15) ಮೃತಪಟ್ಟ ವಿದ್ಯಾರ್ಥಿಗಳು.

ಕಳತ್ಮಾಡು ಲಯನ್ಸ್ ಶಾಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ತಂಡದ 39 ವಿದ್ಯಾರ್ಥಿಗಳನ್ನು ಸ್ಕೌಟ್ಸ್ ಶಿಕ್ಷಕರು ಪ್ರವಾಸಕ್ಕೆಂದು ದುಬಾರೆಗೆ ಕರೆದುಕೊಂಡು ಬಂದಿದ್ದರು. ಈ ವೇಳೆ ಜಂಗಲ್ ಲಾಡ್ಜ್ ಸಮೀಪ ಈಜಲು ತೆರಳಿದಾಗ ಈ ದುರ್ಘ ಟನೆ ನಡೆದಿದ್ದು, ಪರೀಕ್ಷಾ ಸಮಯಲ್ಲಿ ವಿದ್ಯಾರ್ಥಿಗಳನ್ನು ಪಿಕ್‍ನಿಕ್‍ಗೆ ಕರೆದುಕೊಂಡು ಬಂದಿರುವ ಶಿಕ್ಷಕರ ನಡೆಯನ್ನು ಸಾರ್ವಜನಿಕರು ಖಂಡಿಸಿದ್ದಾರೆ. ಪೆÇೀಷಕರು ಕೂಡ ಸಂಸ್ಥೆ ಹಾಗೂ ಶಿಕ್ಷಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಕುಶಾಲನಗರ ಗ್ರಾಮಾಂತರ ಪೆÇಲೀಸ್ ಠಾಣಾಧಿಕಾರಿ ನಂದೀಶ್‍ಕುಮಾರ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯರ ಸಹಕಾರದಿಂದ ನದಿ ಯಿಂದ ಮೃತದೇಹಗಳನ್ನು ಹೊರ ತೆಗೆಯಲಾಗಿದೆ. ಈ ಕುರಿತು ಸಿದ್ಧಾ ಪುರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. 9ನೇ ತರಗತಿಯ ಶ್ರೇಯಸ್ ಹಾಗೂ 10ನೇ ತರಗತಿಯ ನಳಿನ್ ಮೃತಪಟ್ಟಿದ್ದು, ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗಲು ಇಲಾಖಾಧಿಕಾರಿಗಳ ಅನುಮತಿ ಪಡೆಯಲಾಗಿದೆ ಎಂಬ ಬಗ್ಗೆ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಜಿಲ್ಲಾದ್ಯಂತ ಎಲ್ಲ ಶಾಲೆ ಗಳಿಗೂ ಡಿಸೆಂಬರ್ ಅಂತ್ಯದಲ್ಲಿ ಪ್ರವಾಸ ಕಾರ್ಯಕ್ರಮಗಳನ್ನು ಪೂರ್ಣಗೊಳಿಸುವಂತೆ ಆದೇಶಿಸಲಾಗಿತ್ತು. ಸ್ಕೌಟ್ಸ್ ಮತ್ತು ಗೈಡ್ಸ್ ಶಿಕ್ಷಕರು ಇಲಾಖೆಯಿಂದ ಯಾವುದೇ ಅನು ಮತಿ ಪಡೆದಿಲ್ಲ. ಪರೀಕ್ಷಾ ಸಮಯದಲ್ಲಿ ಪ್ರವಾಸಕ್ಕೆ ಕರೆದುಕೊಂಡು ಹೋಗಿರುವುದು ಕಾನೂನು ಬಾಹಿರ. ಶಿಕ್ಷಕರು ಹಾಗೂ  ಸಂಸ್ಥೆ ವಿರುದ್ಧ  ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಡಿಡಿಪಿಐ ಮಚಾಡೋ ತಿಳಿಸಿದ್ದಾರೆ.

 

 

Translate »