ಮೈಸೂರು ಪಾಲಿಕೆಯಲ್ಲಿ ಆನ್‍ಲೈನ್ ಮೂಲಕ ಕಟ್ಟಡ ರಹದಾರಿ ವ್ಯವಸ್ಥೆ
ಮೈಸೂರು

ಮೈಸೂರು ಪಾಲಿಕೆಯಲ್ಲಿ ಆನ್‍ಲೈನ್ ಮೂಲಕ ಕಟ್ಟಡ ರಹದಾರಿ ವ್ಯವಸ್ಥೆ

March 5, 2020

ಮೈಸೂರು, ಮಾ.4(ಆರ್‍ಕೆ)-ಇನ್ನು ಮುಂದೆ ಕಟ್ಟಡ ನಿರ್ಮಾಣಕ್ಕೆ ನಕ್ಷೆ ಅನು ಮೋದನೆ ಪಡೆಯಲು ಲಿಖಿತ ರೂಪದ ಅರ್ಜಿ ನಮೂನೆ ಸಲ್ಲಿಸುವ ಅಗತ್ಯವಿಲ್ಲ.

ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿ ಯಲ್ಲಿ ಕಟ್ಟಡ ನಕ್ಷೆ ಅನುಮೋದನೆ ಪಡೆ ಯುವ ಪ್ರಕ್ರಿಯೆಯನ್ನು ಆನ್‍ಲೈನ್ ವ್ಯವಸ್ಥೆಗೆ ಒಳಪಡಿಸಿದ್ದು, ಸಾರ್ವಜನಿಕರು ತಾವಿರುವೆ ಡೆಯೇ ದಾಖಲಾತಿಗಳನ್ನು ಸ್ಕ್ಯಾನ್ ಮಾಡಿ ವೆಬ್‍ಸೈಟ್ ಮೂಲಕ ಅರ್ಜಿ ಸಲ್ಲಿಸಿ ಆನ್ ಲೈನ್‍ನಲ್ಲೇ ನಕ್ಷೆಗೆ ಅನುಮೋದನೆ ಪಡೆಯುವ ವಿನೂತನ ಯೋಜನೆ ಇದೇ ಪ್ರಥಮ ಬಾರಿ ಮೈಸೂರಿನಲ್ಲಿ ಜಾರಿಗೆ ಬಂದಿದೆ.

ಸಯ್ಯಾಜಿರಾವ್ ರಸ್ತೆಯಲ್ಲಿರುವ ಮೈಸೂರು ಮಹಾನಗರ ಪಾಲಿಕೆ ಪ್ರಧಾನ ಕಚೇರಿ ಸಭಾಂ ಗಣದಲ್ಲಿ ಬುಧವಾರ ಏರ್ಪಡಿಸಿದ್ದ ಸರಳ ಸಮಾ ರಂಭದಲ್ಲಿ ಮೇಯರ್ ತಸ್ನೀಂ ಅವರು ಕಟ್ಟಡಗಳಿಗೆ ಆನ್‍ಲೈನ್‍ನಲ್ಲಿ ನಕ್ಷೆ ಅನು ಮೋದನೆ ನೀಡುವ ವೆಬ್‍ಸೈಟ್ www. mrc.gov.in ಅನ್ನು ಉದ್ಘಾಟಿಸಿ ಹೊಸ ವ್ಯವಸ್ಥೆಗೆ ಚಾಲನೆ ನೀಡಿದರು.

ನಗರಾಭಿವೃದ್ಧಿ ಇಲಾಖೆ ಮತ್ತು ಪೌರಾ ಡಳಿತ ನಿರ್ದೇಶನಾಲಯದ ಆದೇಶದಂತೆ ಸಾರ್ವಜನಿಕರು ಪಾಲಿಕೆಯಲ್ಲಿ ನೋಂದಾ ಯಿಸಿಕೊಂಡಿರುವ ಆರ್ಕಿಟೆಕ್ಟ್, ಇಂಜಿನಿಯರ್, ಪ್ಲಾನರ್‍ಗಳಿಂದ ಓIಖಒಂಓ-2 ಐಚಿಟಿಜ ಚಿಟಿಜNIRMAN-2 Land and Building Plan Approval System(LBPAS) ತಂತ್ರಾಂಶದ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಮೇಯರ್ ತಿಳಿಸಿದರು.

ಇಂದಿನಿಂದ ಕೈಬರಹದ ಮೂಲಕ ನೀಡ ಲಾಗುವ ಅರ್ಜಿಗಳನ್ನು ಸ್ವೀಕರಿಸುವುದಿಲ್ಲ. . www.mrc.gov.in ವೆಬ್‍ಸೈಟ್ ಓಪನ್ ಮಾಡಿ ಅದರಲ್ಲಿ è Karnataka Municipal Data Society, Citizen Online Services, Nirman-2 LBPAS (Citi zen Portol) ಅಥವಾ 164.164.10.21/LBPAS PORTALಗೆ
ಹೋದರೆ ನಕ್ಷೆ ಅನುಮೋದನೆಗೆ ಅಗತ್ಯವಿರುವ ಮಾಹಿತಿಯನ್ನು ವೆಬ್‍ಸೈಟ್ ಕೇಳುತ್ತದೆ. ಕೇಳಿದ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಸಲ್ಲಿಸಬೇಕು ಎಂದು ತಸ್ನೀಂ ತಿಳಿಸಿದರು.

ಪಾರಂಪರಿಕ ವ್ಯಾಪ್ತಿಯಲ್ಲಿ ನಿರ್ಮಿಸಲುದ್ದೇಶಿಸಿರುವ ವಸತಿ, ವಾಣಿಜ್ಯ ಕಟ್ಟಡಗಳಿಗೆ ವಿಶೇಷ ಪಾರಂಪರಿಕ ಸಮಿತಿ ಅನುಮತಿ ಬೇಕಾಗಿರುವುದರಿಂದ ಹೆಚ್ಚಿನ ಕಾಲಾವಕಾಶದ ಅಗತ್ಯವಿದ್ದು, ಅಂತಹ ಅರ್ಜಿಗಳನ್ನು ಮಾತ್ರ ಮ್ಯಾನ್ಯುಯಲ್ ಆಗಿ ಸಲ್ಲಿಸಬೇಕು. ಖಾಲಿ ನಿವೇಶನಗಳಲ್ಲಿ ಧಾರ್ಮಿಕ ಮತ್ತು ಶೈಕ್ಷಣಿಕ ಉದ್ದೇಶದ ಹೊಸ ಕಟ್ಟಡಗಳಿಗೆ ಪಾಲಿಕೆ ಕೌನ್ಸಿಲ್ ಸಭೆಯ ಅನುಮತಿ ಪಡೆಯುವುದು ಅಗತ್ಯವಾಗಿರುವುದರಿಂದ ಅಂತಹ ಅರ್ಜಿಗಳನ್ನು ನೇರವಾಗಿ ಪಾಲಿಕೆ ಕಚೇರಿಗೆ ಸಲ್ಲಿಸಬೇಕು ಎಂದು ಪಾಲಿಕೆ ಕಮೀಷ್ನರ್ ಗುರುದತ್ ಹೆಗ್ಡೆ ತಿಳಿಸಿದ್ದಾರೆ. ನಿರ್ಮಾಣ್-2 ರಡಿ ಸಲ್ಲಿಸುವ ಸಾಮಾನ್ಯ ಪ್ರಕರಣಗಳ ಅರ್ಜಿಗಳನ್ನು ಪರಿಶೀಲಿಸಿ 30 ದಿನದೊಳಗೆ ಕಟ್ಟಿ ನಕ್ಷೆಗೆ ಅನುಮೋದನೆ ನೀಡಲಾಗಿದೆ. ನಗರ ಪಾಲಿಕೆಯಲ್ಲಿ ಡಿಸೈನರ್ ಲೈಸನ್ಸ್ ಪಡೆದಿರುವ ಆರ್ಕಿಟೆಕ್ಟ್ ಇಂಜಿನಿಯರ್, ಪ್ಲಾನರ್‍ಗಳಿಂದ ತಯಾರಿಸಿದ ನಕ್ಷೆಯೊಂದಿಗೆ ಆಧಾರ್ ಸಂಖ್ಯೆ, ಭಾವಚಿತ್ರದೊಂದಿಗೆ ಅರ್ಜಿ ಸಲ್ಲಿಸಬೇಕೆಂದು ತಿಳಿಸಿದರು.

ಉಪಮೇಯರ್ ಸಿ.ಶ್ರೀಧರ್, ವಕ್ರ್ಸ್ ಕಮಿಟಿ ಅಧ್ಯಕ್ಷ ಸೈಯ್ಯದ್ ಅಸರತ ಉಲ್ಲಾ, ಆಡಿಷನಲ್ ಕಮೀಷ್ನರ್‍ಗಳಾದ ಶಶಿಕುಮಾರ್, ಶಿವಾನಂದ ಮೂರ್ತಿ, ಕಾರ್ಪೊರೇಟರ್‍ಗಳಾದ ಪ್ರೇಮಾ ಶಂಕರೇಗೌಡ, ಎಂ.ಯು. ಸುಬ್ಬಯ್ಯ, ನಗರ ಯೋಜನೆ ಜಂಟಿ ನಿರ್ದೇಶಕ ಜಯಸಿಂಹ, ಅಸಿಸ್ಟೆಂಟ್ ಎಕ್ಸ್‍ಕ್ಯೂಟಿವ್ ಇಂಜಿನಿಯರ್ ಸುನಿಲ್, ಅಭಿವೃದ್ಧಿ ಅಧಿಕಾರಿ ನಾಗರಾಜು ಸೇರಿದಂತೆ ಹಲವು ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Translate »