ಸಾಲಿಗ್ರಾಮ, ಡಿ.14(ಮಹೇಶ್/ ಜ್ಯೋತಿಸೇನ)-ಸಾಲಿಗ್ರಾಮ ಗುಂಪು ಘರ್ಷಣೆ, ಕಲ್ಲು ತೂರಾಟ ಪ್ರಕರಣಕ್ಕೆ ಪೊಲೀಸರ ವೈಫÀಲ್ಯವೇ ಕಾರಣವಾಗಿದ್ದು, ಮುನ್ನೆಚ್ಚರಿಕೆ ವಹಿಸದ ಪೊಲೀಸರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು. ಆ ನಿಟ್ಟಿನಲ್ಲಿ ಸರ್ಕಾರದಿಂದ ಸೂಕ್ತ ತನಿಖೆ ನಡೆಸಿ ಗೃಹಮಂತ್ರಿಗಳಿಗೆ ಘಟನೆ ಕುರಿತು ಸಂಪೂರ್ಣ ವರದಿ ನೀಡುವುದಾಗಿ ರಾಜ್ಯ ಪರಿಶಿಷ್ಟ ಜಾತಿ, ಪಂಗಡ ಸಮಿತಿಯ ಸದಸ್ಯರೂ ಆದ ಶಾಸಕ ಎನ್.ಮಹೇಶ್ ತಿಳಿಸಿದರು. ಸಾಲಿಗ್ರಾಮದ ಅಂಬೇಡ್ಕರ್ ನಗರಕ್ಕೆ ಭೇಟಿ ನೀಡಿ ಘಟನೆಯಿಂದ ಹಾನೀಗಿಡಾದ ಕುಟುಂಬಗಳಿಗೆ ಸಾಂತ್ವನ ಹೇಳಿದ ಅವರು, ಸಾಲಿಗ್ರಾಮದಲ್ಲಿ ಒಂದು ವೃತ್ತದ ವಿಚಾರವಾಗಿ ಕಳೆದ…
ನಿಖರ ಕೃಷಿ ಯೋಜನೆ ಜಾರಿಗೆ ಸಿದ್ಧತೆ
December 15, 2019ಮೈಸೂರು, ಡಿ.14- ರೈತರ ಅನುಕೂಲಕ್ಕಾಗಿ ರಾಜ್ಯದಲ್ಲಿ `ನಿಖರ ಕೃಷಿ ಯೋಜನೆ’ ಜಾರಿಗೆ ಸಿದ್ಧತೆ ನಡೆದಿದೆ ಎಂದು ಸಿಎಸ್‍ಐಆರ್ ಪ್ರಧಾನ ನಿರ್ದೇಶಕ ಶೇಖರ್ ಸಿ. ಮಂಡೆ ತಿಳಿಸಿದರು. ಮೈಸೂರಿನ ಸಿಎಫ್‍ಟಿಆರ್‍ಐನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರಿಗೆ ಕೃಷಿ ಚಟುವಟಿಕೆಗೆ ಸಂಬಂಧಿಸಿದ ನಿಖರ ಮಾಹಿತಿಯನ್ನು ಒದಗಿಸುವ ಉದ್ದೇಶದಿಂದ ಸಿಎಸ್‍ಐಆರ್ ವತಿಯಿಂದ `ನಿಖರ ಕೃಷಿ ಯೋಜನೆ’ ಜಾರಿಗೆ ತರಲು ಸಿದ್ಧತೆ ನಡೆದಿದ್ದು, ರೈತರು ನೋಂದಣಿ ಮಾಡಿಕೊಂಡು ಯೋಜನೆಯ ಉಪಯೋಗ ಪಡೆಯಬಹುದು. 2020ರ ಏಪ್ರಿಲ್‍ನೊಳಗೆ ಸಿಎಸ್‍ಐಆರ್‍ನಡಿ 4 ಸಂಸ್ಥೆಗಳು ಕಾರ್ಯನಿರ್ವಹಿಸುವ ಸಾಧ್ಯತೆ…
2020ರ ಜ. 4ರಿಂದ ಮೈಸೂರಲ್ಲಿ ಸ್ವಚ್ಛ ಸರ್ವೇಕ್ಷಣೆ
December 14, 2019ಮೈಸೂರು,ಡಿ.13(ಆರ್‍ಕೆ)-2019ನೇ ಸಾಲಿನ ಸ್ವಚ್ಛ ಸರ್ವೇಕ್ಷಣಾ ಸಮೀಕ್ಷಾ ಕಾರ್ಯವು 2020ರ ಜನವರಿ 4ರಿಂದ ಮೈಸೂರು ನಗರದಲ್ಲಿ ನಡೆಯಲಿದೆ. ಮತ್ತೊಮ್ಮೆ ಮೈಸೂರು ನಗರ ಸ್ವಚ್ಛತೆ ಯಲ್ಲಿ ಪ್ರಥಮ ಸ್ಥಾನ ಪಡೆಯಲು ಮೈಸೂರು ಮಹಾನಗರ ಪಾಲಿಕೆ ಆರೋಗ್ಯ ವಿಭಾ ಗದ ಅಧಿಕಾರಿಗಳು ಪ್ರಯತ್ನಿಸುತ್ತಿದ್ದು, ಅದಕ್ಕಾಗಿ ಸಕಲ ತಯಾರಿ ನಡೆಸುತ್ತಿದ್ದಾರೆ. ಕೇಂದ್ರದ ನಗರಾಭಿವೃದ್ಧಿ ಇಲಾಖೆಯು ದೇಶದಾದ್ಯಂತ ಸ್ವಚ್ಛ ಸರ್ವೇಕ್ಷಣಾ ಸಮೀಕ್ಷೆ ನಡೆಸುತ್ತಿದ್ದು, ಅಧಿಕಾರಿಗಳ ತಂಡವು 2020ರ ಜನವರಿ 4ರಿಂದ ಮೈಸೂರು ನಗರದಲ್ಲಿ ಸ್ವಚ್ಛತಾ ಸಮೀಕ್ಷೆ ನಡೆಸಲಿದೆ. ಸ್ವಚ್ಛ ಸರ್ವೇಕ್ಷಣಾ ಸ್ಪರ್ಧೆಯ ಮೌಲ್ಯ ಮಾಪನ…
ವಿಜಯನಗರ ಆಧಾರ್ ಕೇಂದ್ರದ ಬಳಿ ಶೌಚಾಲಯ, ವಾಹನ ಪಾರ್ಕಿಂಗ್ ಸಮಸ್ಯೆ
December 14, 2019ಮೈಸೂರು,ಡಿ. 13(ಆರ್‍ಕೆ)- ಆಧಾರ್ ನೋಂದಣಿ, ಅಪ್‍ಡೇಟ್ ಮಾಡಿಸಲು ಮೈಸೂರು ನಗರದಿಂದಷ್ಟೇ ಅಲ್ಲದೇ ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ಜನರು ಬರುತ್ತಿರುವು ದರಿಂದ ಮೈಸೂರಿನ ವಿಜಯನಗರ 1ನೇ ಹಂತದಲ್ಲಿರುವ ಆಧಾರ್ ಸೇವಾ ಕೇಂದ್ರದ ಬಳಿ ನೂಕುನುಗ್ಗಲು ಉಂಟಾಗಿ ಪಾರ್ಕಿಂಗ್, ಶೌಚಾಲಯದ ಸಮಸ್ಯೆ ಉಂಟಾಗಿದೆ. ಪಡಿತರ ಚೀಟಿಗೆ ಕುಟುಂಬ ಸದಸ್ಯರೆ ಲ್ಲರ ಬಯೋಮೆಟ್ರಿಕ್ ಮತ್ತು ಆಧಾರ್ ಲಿಂಕ್ ಮಾಡಿಸಲು 2020ರ ಜನವರಿ 10 ಕಡೇ ದಿನ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಗಡುವು ನೀಡಿರುವು ದರಿಂದ ಅತೀ ಹೆಚ್ಚು…
ಇಂದು ಆಸ್ಪತ್ರೆಯಿಂದ ಸಿದ್ದರಾಮಯ್ಯ ಬಿಡುಗಡೆ
December 14, 2019ಬೆಂಗಳೂರು,ಡಿ 13(ಕೆಎಂಶಿ)- ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರ ಆರೋಗ್ಯ ಸುಧಾರಿಸಿದ್ದು ನಾಳೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಲಿ ದ್ದಾರೆ. ಕಳೆದ ಎರಡು ದಿನಗಳ ಹಿಂದೆ ಹೃದಯ ಬೇನೆಗೆ ಒಳಗಾದ ಅವರಿಗೆ ತುರ್ತಾಗಿ ಸ್ಟಂಟ್ ಅಳವಡಿಸಲಾಗಿತ್ತು, ನಂತರ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ಮಾಜಿ ಮುಖ್ಯ ಮಂತ್ರಿ ಅವರನ್ನು ಇಂದು ಭೇಟಿಯಾದ ಸುತ್ತೂರು ಶ್ರೀಗಳು ಹಾಗೂ ಹಿರೇಕೆರೂರು ಶಾಸಕ ಬಿ.ಸಿ.ಪಾಟೀಲ್ ಮತ್ತು ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಆರೋಗ್ಯ ವಿಚಾರಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ಸಿ.ಪಾಟೀಲ್, ನಾವು…
ಪೌರತ್ವ ಮಸೂದೆ ವಿರುದ್ಧ ಎಸ್‍ಡಿಪಿಐ ಪ್ರತಿಭಟನೆ
December 14, 2019ಮೈಸೂರು, ಡಿ.13(ಎಂಕೆ)- ಪೌರತ್ವ (ತಿದ್ದು ಪಡಿ) ಮಸೂದೆಯನ್ನು ಕೇಂದ್ರ ಸಚಿವ ಸಂಪುಟ ಮತ್ತು ಸಂಸತ್ತಿನ ಉಭಯ ಸದನ ಗಳಲ್ಲಿ ಅಂಗೀಕರಿಸಿರುವುದನ್ನು ವಿರೋ ಧಿಸಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್‍ಡಿಪಿಐ) ಮೈಸೂರು ನಗರ ಮತ್ತು ಜಿಲ್ಲಾ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ನಗರದ ಅಶೋಕ ರಸ್ತೆಯಲ್ಲಿರುವ ಮೀಲಾದ್ ಪಾರ್ಕ್ ಎದುರು ಜಮಾಯಿ ಸಿದ ನೂರಾರು ಎಸ್‍ಡಿಪಿಐ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರ ಸಂವಿಧಾನ ಮತ್ತು ದೇಶದ ಮೂಲ…
ಹುಣಸೂರು ಉಪ ಚುನಾವಣೆಯಲ್ಲಿ ಜಿಟಿಡಿ ಕಾಂಗ್ರೆಸ್ ಪರ ಕೆಲಸ ಮಾಡಿದ್ದಾರೆ
December 14, 2019ಮೈಸೂರು,ಡಿ.13(ಪಿಎಂ)-ಶಾಸಕ ಜಿ.ಟಿ.ದೇವೇಗೌಡರು ಸಮಯ ಸಾಧಕ ರಾಜಕಾರಣ ಮಾಡುತ್ತಿದ್ದು, ಹುಣಸೂರು ಉಪಚುನಾವಣೆಯಲ್ಲಿ ತಮ್ಮ ಜೆಡಿಎಸ್ ಪಕ್ಷಕ್ಕೂ ಕೆಲಸ ಮಾಡದೇ ಕಾಂಗ್ರೆಸ್ ಪರ ವಾಗಿ ಕೆಲಸ ಮಾಡಿದ್ದಾರೆ ಎಂದು ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಹೇಮಂತ್‍ಕುಮಾರ್ ಗೌಡ ಆರೋಪಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಶುಕ್ರವಾರ ಚಾಮುಂಡೇಶ್ವರಿ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ಹುಣ ಸೂರಿನಲ್ಲಿ ಕಾಂಗ್ರೆಸ್ ಪರವಾಗಿ ಕೆಲಸ ಮಾಡಿದ ಜಿ.ಟಿ. ದೇವೇಗೌಡರು, ಇದೀಗ ಬಿಜೆಪಿ ಅಭ್ಯರ್ಥಿ ಸೋಲಿಗೆ…
ಕಲ್ಯಾಣಗಿರಿ ಶ್ರೀ ಕಲ್ಯಾಣ ವೆಂಕಟರಮಣಸ್ವಾಮಿ ದೇವಸ್ಥಾನದಲ್ಲಿ ಲಕ್ಷ ದೀಪೋತ್ಸವ
December 14, 2019ಮೈಸೂರು,ಡಿ.13(ಎಂಕೆ)-ಮೈಸೂರಿನ ಕಲ್ಯಾಣಗಿರಿನಗರದಲ್ಲಿ ಶ್ರೀ ಕಲ್ಯಾಣ ಲಕ್ಷ್ಮಿ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ಲಕ್ಷದೀಪೋತ್ಸವ ವಿಜೃಂಭಣೆಯಿಂದ ನೆರವೇರಿತು. ಶ್ರೀ ಕಲ್ಯಾಣ ಲಕ್ಷ್ಮಿವೆಂಕಟರಮಣ ಸ್ವಾಮಿ ದೇವಸ್ಥಾನದ ಸಮಿತಿ ವತಿಯಿಂದ ವಿಷ್ಣು ದೀಪೋತ್ಸವದ ಪ್ರಯುಕ್ತ ಆಯೋಜಿಸಿದ್ದ ಲಕ್ಷ ದೀಪೋತ್ಸವ ಭಕ್ತಿ-ಭಾವದೊಂದಿಗೆ ಜರುಗಿತು. ದೇವರಿಗೆ ಪೂಜೆ ಸಲ್ಲಿಸಿ, ದೀಪ ಬೆಳಗಿಸುವ ಮೂಲಕ ಲಕ್ಷ ದೀಪೋತ್ಸವಕ್ಕೆ ಚಾಲನೆ ನೀಡಲಾಯಿತು. ಬಳಿಕ ಬಣ್ಣ ಬಣ್ಣ ಉಡುಗೆ-ತೊಡುಗೆ ತೊಟ್ಟು ಕಂಗೊಳಿಸುತ್ತಿದ್ದ ಭಕ್ತ ಸಮೂಹ ದೇವಸ್ಥಾನದ ಆವರಣ ಮತ್ತು ರಸ್ತೆಯ ಎರಡು ಬದಿಯಲ್ಲಿ ಜೋಡಿಸ ಲಾಗಿದ್ದ ಸಾವಿರಾರು ದೀಪಗಳನ್ನು ಬೆಳಗಿಸಿ…
ಸ್ವಾತಂತ್ರ್ಯ ಬಂದು 7 ದಶಕವಾದರೂ ಬಗೆಹರಿಯದ ವಸತಿ ಸಮಸ್ಯೆ
December 14, 2019ಮೈಸೂರು,ಡಿ.13(ಎಂಟಿವೈ)- ಕಟ್ಟಡ ಸಾಮಗ್ರಿಗಳ ಮೇಲಿನ ತೆರಿಗೆ ಹೆಚ್ಚಳದಿಂ ದಾಗಿ ಬಡ ಹಾಗೂ ಮಧ್ಯಮ ವರ್ಗದ ಜನರು ಮನೆ ನಿರ್ಮಿಸಿಕೊಳ್ಳಲು ಸಾಧ್ಯ ವಾಗದೇ ಸಂಕಷ್ಟಕ್ಕೆ ತುತ್ತಾಗಿದ್ದಾರೆ ಎಂದು ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ರಾಷ್ಟ್ರೀಯ ಉಪಾಧ್ಯಕ್ಷ ಕೆ. ಶ್ರೀರಾಮ್ ವಿಷಾದಿಸಿದ್ದಾರೆ. ಮೈಸೂರು ವಿಶ್ವೇಶ್ವರ ನಗರದ ಬಿಲ್ಡರ್ಸ್ ಚಾರಿಟಬಲ್ ಟ್ರಸ್ಟ್ ಸಭಾಂಗಣದಲ್ಲಿ ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಮೈಸೂರು ಘಟಕ `ಎಲ್ಲರಿಗೂ ಸೂರು’ ಶೀರ್ಷಿಕೆಯಡಿ ಆಯೋಜಿಸಿದ್ದ ಎರಡು ದಿನಗಳ ವಿಚಾರ ಸಂಕಿರಣ `ಬಿಲ್ಡ್‍ಟೆಕ್-2019’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಸ್ವಾತಂತ್ರ್ಯ…
ಖದೀಮನ ಸೆರೆ: 12.65 ಲಕ್ಷ ರೂ. ಮೌಲ್ಯದ 16 ದ್ವಿಚಕ್ರ ವಾಹನಗಳ ವಶ
December 14, 2019ಮೈಸೂರು,ಡಿ.13(ಆರ್‍ಕೆ)-ಕಳ್ಳ ನೋರ್ವನನ್ನು ಬಂಧಿಸಿರುವ ಮೇಟಗಳ್ಳಿ ಠಾಣೆ ಪೊಲೀಸರು, 12.65 ಲಕ್ಷ ರೂ. ಮೌಲ್ಯದ 16 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಪಿರಿಯಾಪಟ್ಟಣ ತಾಲೂಕು, ಉತ್ತೇನ ಹಳ್ಳಿ ಗ್ರಾಮದ ಲೇಟ್ ಸುಂದರಮೂರ್ತಿ ಅವರ ಮಗ ಕೀರ್ತಿಕುಮಾರ್ ಅಲಿ ಯಾಸ್ ಕುಮಾರ್(24) ಬಂಧಿತ ಆರೋಪಿ. ಆತನಿಂದ 12.65 ಲಕ್ಷ ರೂ. ಬೆಲೆ ಬಾಳುವ ಒಟ್ಟು 16 ದ್ವಿಚಕ್ರ ವಾಹನ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಮೈಸೂರು ನಗರ, ಜಿಲ್ಲಾ ಗ್ರಾಮಾಂತರ ಹಾಗೂ ಬೆಂಗಳೂರು ನಗರಗಳಲ್ಲಿ ಕಳೆದ ಒಂದು ವರ್ಷದಿಂದ ಆತ ದ್ವಿಚಕ್ರ ವಾಹನಗಳನ್ನು ಕಳವು…










